ರಾಜ್ಯಾದ್ಯಂತ ಈ ಬಾರಿ ನೈರುತ್ಯ ಮುಂಗಾರು ಭರ್ಜರಿ ಮಳೆ

By Kannadaprabha NewsFirst Published Oct 2, 2022, 9:30 AM IST
Highlights
  • 20% ಅಧಿಕ ಮಳೆ ಸುರಿಸಿ ಮುಂಗಾರು ಮಳೆ ಅಂತ್ಯ
  • ಈ ಬಾರಿ ಯಾವುದೇ ಜಿಲ್ಲೆಯಲ್ಲೂ ಮಳೆ ಕೊರತೆ ಇಲ್ಲ
  • ಮಲೆನಾಡು, ಕರಾವಳಿಗಿಂತ ದಕ್ಷಿಣ ಒಳನಾಡಿನಲ್ಲೇ ಅತ್ಯಧಿಕ ಮಳೆ

ವಿಶೇಷ ವರದಿ

ಬೆಂಗಳೂರು( ಅ.2) : ರಾಜ್ಯದಲ್ಲಿ ಈ ಬಾರಿ ನೈಋುತ್ಯ ಮುಂಗಾರು ಭರ್ಜರಿ ಮಳೆ ಸುರಿಸಿದೆ. ಜೂನ್‌ 1ರಿಂದ ಸೆಪ್ಟೆಂಬರ್‌ 30ರವರೆಗೆ ರಾಜ್ಯದಲ್ಲಿ ವಾಡಿಕೆಗಿಂತ ಶೇ.20ರಷ್ಟುಹೆಚ್ಚು ಮಳೆಯಾಗಿದೆ. ರಾಜ್ಯದ ಯಾವುದೇ ಜಿಲ್ಲೆ ಮತ್ತು ತಾಲೂಕಿನಲ್ಲಿ ಮಳೆಯ ಕೊರತೆ ಆಗಿಲ್ಲ. ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗಿದೆ.

Ian Cyclone ಅಬ್ಬರ: ನೀರಿನಲ್ಲಿ ಕೊಚ್ಚಿ ಹೋದ 8 ಕೋಟಿ ಮೊತ್ತದ ಕಾರು

ರಾಜ್ಯದ ವಾಡಿಕೆಯ ಮುಂಗಾರು ಮಳೆಯ ಪ್ರಮಾಣ 85.2 ಸೆಂ.ಮೀ. ಇದೆ. ಆದರೆ ಈ ಬಾರಿ 100.19 ಸೆಂ.ಮೀ. ಮಳೆ ಸುರಿಯುವ ಮೂಲಕ ಸುಮಾರು ಶೇ. 20ರಷ್ಟುಹೆಚ್ಚು ಮಳೆಯಾಗಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಈ ಬಾರಿ 101.02 ಸೆಂ.ಮೀ. ಮಳೆ (ವಾಡಿಕೆ ಮಳೆ 67.84), ಉತ್ತರ ಒಳನಾಡಿನಲ್ಲಿ 65.11 ಸೆಂ.ಮೀ. ಮಳೆ (ವಾಡಿಕೆ ಮಳೆ 48.08) ಹಾಗೂ ಕರಾವಳಿಯಲ್ಲಿ 323.28 ಸೆಂ.ಮೀ. (ವಾಡಿಕೆ ಮಳೆ 307.55) ಮಳೆಯಾಗಿದೆ.

ಸಾಮಾನ್ಯವಾಗಿ ಅತಿ ಹೆಚ್ಚು ಮಳೆಯಾಗುವ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಈ ಬಾರಿ ವಾಡಿಕೆಯಷ್ಟೆಮಳೆ ಆಗಿದೆ. ಆದರೆ ದಕ್ಷಿಣ ಒಳನಾಡಿನಲ್ಲಿ ವಾಡಿಕೆಗಿಂತ ಶೇ. 49ರಷ್ಟುಹೆಚ್ಚು ಮಳೆ ಸುರಿದಿದೆ. ಉತ್ತರ ಒಳನಾಡಿನಲ್ಲಿ ವಾಡಿಕೆಗಿಂತ ಶೇ. 34ರಷ್ಟುಹೆಚ್ಚು ಮಳೆಯಾಗಿದೆ.

8 ಜಿಲ್ಲೆಯಲ್ಲಿ ಅತಿ ಹೆಚ್ಚು (ವಾಡಿಕೆಗಿಂತ ಶೇ. 60ಕ್ಕಿಂತ ಹೆಚ್ಚು), 12 ಜಿಲ್ಲೆಯಲ್ಲಿ ಹೆಚ್ಚು (ವಾಡಿಕೆಗಿಂತ ಶೇ.20ರಿಂದ ಶೇ.59 ಹೆಚ್ಚು), 11 ಜಿಲ್ಲೆಯಲ್ಲಿ (ವಾಡಿಕೆಗಿಂತಶೇ. -19ರಿಂದ ಶೇ. 19) ಮಳೆಯಾಗಿದೆ. ಅತಿ ಹೆಚ್ಚು ಮಳೆ ಪಡೆದ ಎಲ್ಲ ಜಿಲ್ಲೆಗಳು ದಕ್ಷಿಣ ಒಳನಾಡಿನಲ್ಲಿವೆ.

ಮಂಡ್ಯ, ತುಮಕೂರು, ರಾಮನಗರ, ಚಿತ್ರದುರ್ಗ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ ಹಾಗೂ ದಾವಣಗೆರೆ ಜಿಲ್ಲೆಯಲ್ಲಿ ವಾಡಿಕೆಗಿಂತ ಅತಿ ಹೆಚ್ಚು ಮಳೆಯಾಗಿದೆ. ಉಳಿದಂತೆ ಚಾಮರಾಜನಗರ, ಮೈಸೂರು, ಹಾಸನ, ಚಿಕ್ಕಬಳ್ಳಾಪುರ, ವಿಜಯನಗರ, ಬಳ್ಳಾರಿ, ಗದಗ, ರಾಯಚೂರು, ಬಾಗಲಕೋಟೆ, ಬೆಳಗಾವಿ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗಿದೆ.

ಶಿವಮೊಗ್ಗ, ಉತ್ತರಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ವಾಡಿಕೆಗಿಂತ ಕೊಂಚ ಕಡಿಮೆ ಮಳೆಯಾಗಿದ್ದರೆ, ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು, ಹಾವೇರಿ, ಧಾರವಾಡ, ಕೊಪ್ಪಳ, ಬೀದರ್‌ ಮತ್ತು ಕಲಬುರಗಿಯಲ್ಲಿ ವಾಡಿಕೆಯ ಮಳೆಯಾಗಿದೆ. 

Karnataka Rains: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇಂದು, ನಾಳೆ ಮಳೆ

ವಾಡಿಕೆಯ ಹಿಂಗಾರು ಮಳೆ:

ರಾಜ್ಯದಲ್ಲಿ ತಾಂತ್ರಿಕವಾಗಿ ಮುಂಗಾರು ಅವಧಿ ಮುಕ್ತಾಯಗೊಂಡಿದ್ದರೂ, ಭೌತಿಕವಾಗಿ ಅಕ್ಟೋಬರ್‌ 15ರ ತನಕ ಮುಂಗಾರು ಮಾರುತಗಳು ಚಾಲ್ತಿಯಲ್ಲಿರಲಿವೆ. ಅಕ್ಟೋಬರ್‌ 10ರ ಬಳಿಕವೇ ರಾಜ್ಯದಲ್ಲಿ ಮುಂಗಾರು ಮಾರುತಗಳ ಪ್ರಭಾವ ಕಡಿಮೆಯಾಗಲಿದೆ. ಹಾಗೆಯೇ ಅಕ್ಟೋಬರ್‌ನಿಂದ ಡಿಸೆಂಬರ್‌ ತನಕ ಹಿಂಗಾರು ಮಾರುತಗಳು ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು ನಗರ ಮತ್ತು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ ಜಿಲ್ಲೆಗಳಿಗೆ ಮಳೆ ಸುರಿಸಲಿದ್ದು, ಈ ಬಾರಿ ವಾಡಿಕೆಯ ಹಿಂಗಾರು ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಅತಿ ಹೆಚ್ಚು (ವಾಡಿಕೆಗಿಂತ ಶೇ.60+ ಮಳೆ ಪಡೆದ ಜಿಲ್ಲೆಗಳು)

ಜಿಲ್ಲೆ ಪಡೆದ ಮಳೆ (ಸೆಂ.ಮೀ) ವಾಡಿಕೆ ಮಳೆ (ಸೆಂ.ಮೀ) ವ್ಯತ್ಯಾಸ (ಶೇ.)

  • ಮಂಡ್ಯ 73 30.24 131
  • ತುಮಕೂರು 76.9 36.85 115
  • ರಾಮನಗರ 81.4 44.6 87
  • ಚಿತ್ರದುರ್ಗ 63.5 37.49 69
  • ಬೆಂಗಳೂರು ನಗರ 86.56 44.16 68
  • ಬೆಂಗಳೂರು ಗ್ರಾಮಾಂತರ 80.03 42.21 63
  • ಕೋಲಾರ 75.85 39.11 63
  • ದಾವಣಗೆರೆ ಜಿಲ್ಲೆ 63.58 37.49 62

ವಾಡಿಕೆಗಿಂತ ಹೆಚ್ಚು ಮಳೆ ಪಡೆದ ಜಿಲ್ಲೆಗಳು (ಶೇ.20 ರಿಂದ ಶೇ.59)

ಜಿಲ್ಲೆ ಪಡೆದ ಮಳೆ (ಸೆಂ.ಮೀ) ವಾಡಿಕೆ ಮಳೆ (ಸೆಂ.ಮೀ) ವ್ಯತ್ಯಾಸ (ಶೇ.)

  • ಚಾಮರಾಜನಗರ 73.37 34.02 59
  • ಮೈಸೂರು 66.56 36.12 56
  • ಹಾಸನ 106.18 66.74 45
  • ಚಿಕ್ಕಬಳ್ಳಾಪುರ 685 40.64 52
  • ವಿಜಯನಗರ 53.5 - 38
  • ಬಳ್ಳಾರಿ 49.81 35.88 39
  • ಗದಗ 58.86 34.55 57
  • ರಾಯಚೂರು 52.62 40.98 29
  • ಬಾಗಲಕೋಟೆ 49.69 33.66 34
  • ಬೆಳಗಾವಿ 75.07 56.2 32
  • ಯಾದಗಿರಿ 72.15 50.63 33
  • ವಿಜಯಪುರ 52.37 37.88 31

ವಾಡಿಕೆ ಮಳೆ ಪಡೆದ ಜಿಲ್ಲೆಗಳು (ಶೇ. -19 ರಿಂದ ಶೇ. -19)

  • ದಕ್ಷಿಣ ಕನ್ನಡ 345.79 331.23 4
  • ಕೊಡಗು 264.53 223.48 8
  • ಚಿಕ್ಕಮಗಳೂರು 202.54 148.58 17
  • ಹಾವೇರಿ 69 48.38 12
  • ಧಾರವಾಡ 63.71 50.76 11
  • ಕೊಪ್ಪಳ 41.52 37.15 18
  • ಬೀದರ್‌ 82.47 63.68 15
  • ಕಲಬುರಗಿ 67.61 56.56 10
  • ಉಡುಪಿ 378.33 373.68 -1
  • ಉತ್ತರಕನ್ನಡ 293.44 273.28 -2
  • ಶಿವಮೊಗ್ಗ 174.61 161.37 -3
click me!