ಮುರುಡೇಶ್ವರ ಸಮುದ್ರದಲ್ಲಿ ಮುಳುಗಿ ಇಬ್ಬರು ಯುವಕರ ದುರಂತ ಸಾವು

By Ravi Janekal  |  First Published May 5, 2024, 11:08 PM IST

ಈಜಾಡಲು ಹೋಗಿದ್ದ ಯುವಕರ ಪೈಕಿ ಇಬ್ಬರು ಸಮುದ್ರದಲ್ಲಿ ಮುಳುಗಿ ಮೃತಪಟ್ಟ ದುರ್ಘಟನೆ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ಸಮುದ್ರದಲ್ಲಿ ನಡೆದಿದೆ.  ಮೌಲ್ವಿ ಇಸ್ಮಾಯಿಲ್  ಬರ್ಮಾವರ್ (22), ಶಿವಮೊಗ್ಗ ಶಿರಾಳಕೊಪ್ಪದ ಇನ್ನೋರ್ವ ಯುವಕ ಮೃತರು.


ಕಾರವಾರ, ಉತ್ತರಕನ್ನಡ (ಮೇ.5): ಈಜಾಡಲು ಹೋಗಿದ್ದ ಯುವಕರ ಪೈಕಿ ಇಬ್ಬರು ಸಮುದ್ರದಲ್ಲಿ ಮುಳುಗಿ ಮೃತಪಟ್ಟ ದುರ್ಘಟನೆ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ಸಮುದ್ರದಲ್ಲಿ ನಡೆದಿದೆ. 

ಮೌಲ್ವಿ ಇಸ್ಮಾಯಿಲ್  ಬರ್ಮಾವರ್ (22), ಶಿವಮೊಗ್ಗ ಶಿರಾಳಕೊಪ್ಪದ ಇನ್ನೋರ್ವ ಯುವಕ ಮೃತರು. ಭಾನುವಾರ ಸಂಜೆ ಮುರುಡೇಶ್ವರ ಸಮುದ್ರದಲ್ಲಿ ಈಜಾಡಲು ನಾಲ್ವರು ಯುವಕರು ತೆರಳಿದ್ದರು. ಸಮುದ್ರಕ್ಕೆ ಇಳಿದ ಬಳಿಕ ಅಲೆಗಳ ರಭಸಕ್ಕೆ ನಾಲ್ವರು ಸಮುದ್ರದಲ್ಲಿ ಸಿಕ್ಕಿಹಾಕಿದ್ದರು. ಇದನ್ನ ಗಮನಿಸಿದ ಲೈಫ್‌ಗಾರ್ಡ್ಸ್ ದೋಣಿಯ ಸಹಾಯದಿಂದ ಇಬ್ಬರನ್ನು ರಕ್ಷಿಸಿ ದಡಕ್ಕೆ ತರುವಲ್ಲಿ ಯಶಸ್ವಿಯಾದರು.  ಆದರೆ ಇನ್ನಿಬ್ಬರು ಅಲೆ ಹೊಡೆತಕ್ಕೆ ಸಮುದ್ರದಲ್ಲಿ ಪ್ರಜ್ಞೆ ಕಳೆದುಕೊಂಡಿದ್ದರು. ತಕ್ಷಣ ಯುವಕರನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

Tap to resize

Latest Videos

undefined

ಕೃಷಿ ಹೊಂಡದಲ್ಲಿ ಅಣ್ಣ ಮುಳುಗುತ್ತಿದ್ದರೂ ಮೊಬೈಲ್‌ನಲ್ಲಿ ವಿಡಿಯೋ ಮಾಡುತ್ತಾ ನಿಂತ ತಂಗಿ!

ಘಟನೆ ಸಂಬಂಧ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಳೆಗಾಳಿ, ಬೃಹತ್ ಅಲೆಗಳು ಏಳುತ್ತಿವೆ ಸಮುದ್ರಕ್ಕೆ ಇಳಿಯದಂತೆ ಎಷ್ಟೇ ಜಾಗೃತಿ ಮೂಡಿಸಿದರೂ ಯುವಕರು ಅದ್ಯಾವುದನ್ನು ಲೆಕ್ಕಿಸದೇ ಮೋಜು ಮಸ್ತಿಗೆ ಸಮುದ್ರಕ್ಕೆ ಇಳಿದು ಪ್ರಾಣ ಕಳೆದುಕೊಳ್ಳುತ್ತಿರುವ ಘಟನೆಗಳು ಪದೇಪದೆ ನಡೆಯುತ್ತಿರುವುದು ದುರಂತವೇ ಸರಿ

click me!