ರಾಜ್ಯದಲ್ಲಿ ಐತಿಹಾಸಿಕ ಬರ ಆವರಿಸಿದೆ. 177 ತಾಲೂಕುಗಳಲ್ಲಿ ಬರಗಾಲ ಘೋಷಣೆಯಾಗಿದ್ದು, ಇನ್ನೂ 50 ತಾಲೂಕುಗಳಲ್ಲಿ ಸದ್ಯದಲ್ಲೇ ಘೋಷಣೆಯಾಗಲಿದೆ. ಬರಪೀಡಿತ ಪ್ರದೇಶಗಳ ರೈತರಿಗೆ ನೆರವಾಗಲು ಪ್ರತಿ ಕುಟುಂಬಕ್ಕೆ 2,500 ರು. ಇನ್‌ಪುಟ್ ಸಬ್ಸಿಡಿ ನೀಡಲು ನಿರ್ಧರಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಘೋಷಿಸಿದರು.
ಎನ್‌ಡಿಆರ್‌ಎಫ್ ಅನುದಾನ ನಿರೀಕ್ಷಿಸಿ 45-50 ಲಕ್ಷ ರೈತರಿಗೆ ಇನ್‌ಪುಟ್ ಸಬ್ಸಿಡಿ ನೀಡಲು ತೀರ್ಮಾನಿಸಲಾಗಿದೆ. ಇದರಿಂದ ಸರ್ಕಾರಕ್ಕೆ 1,250 ಕೋಟಿ ರು. ಹೊರೆ ಆಗುತ್ತದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪರವಾಗಿ ಘೋಷಣೆ ಮಾಡುತ್ತಿದ್ದೇನೆ ಎಂದು ಹೇಳಿದರು.
ರಾಜ್ಯದಲ್ಲಿನ ಬರದಿಂದ ರೈತರು ತತ್ತರಿಸಿದ್ದು ಆರ್ಥಿಕ ಸಂಕಷ್ಟ ಸೃಷ್ಟಿಯಾಗಿದೆ. ಹೀಗಾಗಿ ರೈತರ ಕೃಷಿ, ಕೃಷಿ ಸಂಬಂಧಿತ ಸಾಲಕ್ಕೆ 12 ತಿಂಗಳ ಕಾಲ ಮೊರಟೋರಿಯಂ (ಮರುಪಾವತಿಗೆ ತಾತ್ಕಾಲಿಕ ತಡೆ) ನೀಡಲು ತೀರ್ಮಾನಿಸಲಾಗಿದೆ.
11:29 PM (IST) Sep 25
ಶಿವಮೊಗ್ಗದಲ್ಲಿ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆಯು ಅದ್ದೂರಿಯಾಗಿ ಜರುಗಿತು. ಈ ವೇಳೆ ಹೊಸ ಪದ್ದತಿಗೆ ನಾಂದಿ ಹಾಡಲಾಗಿದೆ. ಏನದು? ಸ್ಟೋರಿ ಓದಿ..
10:43 PM (IST) Sep 25
ಬೆಂಗಳೂರಿನ ಅಗ್ರಹಾರ ಲೇಔಟ್ನಲ್ಲಿ ಪತ್ತೆಯಾದ ಮಹಿಳೆಯ ಕೊಳೆತ ಶವದ ರಹಸ್ಯವನ್ನು ಪೊಲೀಸರು ಭೇದಿಸಿದ್ದಾರೆ. ಮೃತದೇಹದ ಮೇಲಿದ್ದ ಬಟ್ಟೆಯ ಟ್ಯಾಗ್ ಆಧಾರದ ಮೇಲೆ ತನಿಖೆ ನಡೆಸಿದಾಗ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಅಷ್ಟಕ್ಕೂ ಆಗಿದ್ದೇನು? ಸ್ಟೋರಿ ಓದಿ..
09:14 PM (IST) Sep 25
ಮಕ್ಕಳು ಗೋಡೆಯ ಮೇಲೆ ಪೆನ್ಸಿಲ್ನಿಂದ ಗೀಚುವುದು ಸಾಮಾನ್ಯ. ಗೋಡೆ ಮೇಲಿನ ಕಲೆಯನ್ನು ಹೇಗೆ ರಿಮೂವ್ ಮಾಡಬಹುದು. ಅದು ಹೇಗೆ? ಸ್ಟೋರಿ ಓದಿ.
07:31 PM (IST) Sep 25
07:21 PM (IST) Sep 25
ದೇಹವನ್ನು ಆರೋಗ್ಯವಾಗಿಡಲು ರೋಗ ನಿರೋಧಕ ಶಕ್ತಿ ಬಹಳ ಮುಖ್ಯ. ನಮ್ಮ ಇಮ್ಯೂನಿಟಿ ಹೆಚ್ಚಿಸಲು ಸಹಾಯ ಮಾಡುವ 5 ಅದ್ಭುತ ಆಯುರ್ವೇದ ಗಿಡಮೂಲಿಕೆಗಳ ಬಗ್ಗೆ ಇಲ್ಲಿದೆ ಮಾಹಿತಿ. ಇವುಗಳನ್ನು ಬಳಸಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ.
07:10 PM (IST) Sep 25
ಉತ್ತರ ಕನ್ನಡ ಜಿಲ್ಲೆಯ 40 ಊರುಗಳಲ್ಲಿ ಜನರೇ ಇಲ್ಲವಂತೆ.. ಹಾಗಿದ್ದರೆ ಅವರೆಲ್ಲ ಎಲ್ಲಿಗೆ ಹೋದರು? ಏನಾಗಿ ಹೋದರು? ಸ್ಟೋರಿ ಓದಿ..
06:41 PM (IST) Sep 25
ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ ಅವರು ಬೆಂಗಳೂರಿನ ಐಐಎಸ್ಸಿಯಲ್ಲಿ ದಕ್ಷಿಣ ವಲಯದ 'ಸೇವಾ ಫಸ್ಟ್ ಇನ್ನೋವೇಶನ್ ಚಾಲೆಂಜ್'ಗೆ ಚಾಲನೆ ನೀಡಿದರು. ನಾವೀನ್ಯತೆಯೊಂದಿಗೆ ನೈಜ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಮೂಲಕ 2047ರ ವಿಕಸಿತ ಭಾರತದ ಕನಸನ್ನು ನನಸಾಗಿಸಲು ಅವರು ಕರೆ ನೀಡಿದ್ದಾರೆ.
06:10 PM (IST) Sep 25
05:58 PM (IST) Sep 25
ಮಧುಮೇಹವು ಕಿಡ್ನಿಯನ್ನು ಹಾಳುಮಾಡುವ ಪ್ರಮುಖ ಕಾಯಿಲೆಗಳಲ್ಲಿ ಒಂದಾಗಿದೆ. ಶುಗರ್ ಲೆವೆಲ್ ಹೆಚ್ಚಾದಂತೆ ಕಿಡ್ನಿ ವೈಫಲ್ಯದ ಅಪಾಯವೂ ಹೆಚ್ಚಾಗುತ್ತದೆ. ಹಾಗಾಗಿ ಮಧುಮೇಹಿಗಳು ತಮ್ಮ ದೈನಂದಿನ ಡಯಟ್ನಲ್ಲಿ ಈ ಪ್ರಮುಖ ಬದಲಾವಣೆಗಳನ್ನು ಮಾಡಿಕೊಳ್ಳಲೇಬೇಕು.
05:53 PM (IST) Sep 25
05:40 PM (IST) Sep 25
05:18 PM (IST) Sep 25
05:01 PM (IST) Sep 25
05:00 PM (IST) Sep 25
‘ಮ್ಯಾಂಗೋ ಪಚ್ಚ’ ಸಿನಿಮಾ ಇದೀಗ ಒಟಿಟಿಗೆ ಎಂಟ್ರಿ ಕೊಟ್ಟಿದೆ. ಕಿಚ್ಚ ಸುದೀಪ್ ಅವರ ಸೋದರಳಿಯ ಸಂಚಿತ್ ಸಂಜೀವ್ ನಾಯಕನಾಗಿ ನಟಿಸಿರುವ ಈ ಸಿನಿಮಾ ಜಿಯೋಹಾಟ್ಸ್ಟಾರ್ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ.
04:41 PM (IST) Sep 25
ಸಾಯಿಪ್ರಕಾಶ್ ನಿರ್ದೇಶನದ, ಗೌರಿಶಂಕರ್ ಎಸ್ಆರ್ಜಿ ನಾಯಕನಾಗಿ ನಟಿಸಿರುವ ‘ಕಾಮನ್ ಮ್ಯಾನ್’ ಸಿನಿಮಾ ಇಂದು ಬಿಡುಗಡೆಯಾಗಿದೆ. ಈ ಚಿತ್ರದ ಕಥೆ ಬರೆದಿರುವ ಡಾ. ಎನ್. ನರಸಿಂಹಮೂರ್ತಿ ನಿರ್ಮಾಪಕರಾಗಿದ್ದು, ಪ್ರಮುಖ ಮುಖ್ಯಮಂತ್ರಿ ಪಾತ್ರವನ್ನೂ ನಿರ್ವಹಿಸಿದ್ದಾರೆ.
04:17 PM (IST) Sep 25
ನಿರ್ದೇಶಕ ಎಎಸ್ಜಿ (ಶಶಿಕುಮಾರ್) ತಮ್ಮ ‘ಬಾರ್ಡರ್ ಡೈರೀಸ್’ ಚಿತ್ರದ ಕಥೆ ಮತ್ತು ಹಿನ್ನೆಲೆಯ ಕುರಿತು ಮಾತನಾಡಿದ್ದಾರೆ. ಅತ್ತಿಬೆಲೆಯ ಆಚೆಗಿನ ಗಡಿ ಭಾಗಗಳಲ್ಲಿ ಕಂಡುಬರುವ ವಿಶಿಷ್ಟ ಜೀವನಶೈಲಿ ಹಾಗೂ ನೈಜ ಪಾತ್ರಗಳ ಅನುಭವದಿಂದ ಕಥೆ ರೂಪುಗೊಂಡಿದೆ.
03:46 PM (IST) Sep 25
ನಟ ನೆನಪಿರಲಿ ಪ್ರೇಮ್ ‘ಸ್ಪಾರ್ಕ್’ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪೊಲೀಸ್ ಪಾತ್ರದ ಪ್ರತಿನಾಯಕನಾಗಿ ನಟಿಸಿರುವ ಅವರು, ತಮ್ಮ ಲವರ್ ಬಾಯ್ ಇಮೇಜ್ ಮೀರಿ ಬೇರೆ ಬೇರೆ ರೀತಿಯ ಪಾತ್ರಗಳನ್ನು ಮಾಡಬೇಕೆಂಬ ಆಸೆಯನ್ನು ಹಂಚಿಕೊಂಡಿದ್ದಾರೆ.
03:30 PM (IST) Sep 25
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ ಬಳಿಕ ಹಿರಿಯ ನಟ ಅನಂತ್ ನಾಗ್ ತಮ್ಮ ಸಿನಿಪಯಣ, ಕನ್ನಡ ಚಿತ್ರರಂಗದ ಸುವರ್ಣಯುಗ, ಸೋಶಿಯಲ್ ಮೀಡಿಯಾ ಸಂಸ್ಕೃತಿ ಹಾಗೂ ನಟನೆಗೆ ಮರಳುವ ಸಾಧ್ಯತೆ ಕುರಿತು ಮಾತನಾಡಿದ್ದಾರೆ.
03:09 PM (IST) Sep 25
ಬುಕ್ ಮಾಡಿದ ಕೆಲ ಹೊತ್ತಲ್ಲಿ ಬೈಕ್ ಟ್ಯಾಕ್ಸಿ ಬಂದಿತ್ತು. ಹೆಲ್ಮೆಟ್ ಕೊಟ್ಟ ಪಿನ್ ಕೇಳಿದ್ದ. ಯುವತಿ ಪಿನ್ ಹೇಳಿದ ತಕ್ಷಣವೇ ಬೈಕ್ ಸ್ಟಾರ್ಟ್ ಮಾಡಿ ಹೊರಟೇ ಬಿಟ್ಟಿದ್ದಾನೆ. ಯುವತಿ ಮಾತ್ರ ನಿಂತ ಜಾಗದಲ್ಲೇ ನಿಂತರೆ, ಬೈಕ್ ಮಾತ್ರ ಡಿಸ್ಟಿನೇಶನ್ ಕಡೆ ಸಾಗಿದ ಘಟನೆಯನ್ನು ಬೆಂಗಳೂರು ಯುವತಿ ಬಿಚ್ಚಿಟ್ಟಿದ್ದಾಳೆ.
03:08 PM (IST) Sep 25
ಭೂಮಿಯ ಮೇಲೆ ಮೊದಲು ಬಂದಿದ್ದು ಕೋಳಿನಾ ಅಥವಾ ಮೊಟ್ಟೆನಾ ಅನ್ನೋ ನೂರಾರು ವರ್ಷಗಳ ಹಳೆಯ ಪ್ರಶ್ನೆಗೆ ಕೊನೆಗೂ ವೈಜ್ಞಾನಿಕ ಉತ್ತರ ಸಿಕ್ಕಿದೆ. ಮೊಟ್ಟೆಯ ಸಿಪ್ಪೆ ಹೇಗೆ ತಯಾರಾಗುತ್ತೆ ಅನ್ನೋದರ ಬಗ್ಗೆ ವಿಜ್ಞಾನಿಗಳು ಮಾಡಿರೋ ರಿಸರ್ಚ್ ಏನು ಹೇಳುತ್ತೆ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.
02:38 PM (IST) Sep 25
10 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗಿದೆ. ಆದರೆ ಸಂಪರ್ಕ ರಸ್ತೆಗೆ ಒಬ್ಬ ವ್ಯಕ್ತಿ ಜಮೀನು ನೀಡದ ಕಾರಣ ಕಾಮಗಾರಿ ಅರ್ಧಕ್ಕೆ ನಿಂತಿದೆ. ಇದರಿಂದಾಗಿ ಗ್ರಾಮಸ್ಥರು ಇಂದಿಗೂ ದೋಣಿಯಲ್ಲೇ ಅಪಾಯಕಾರಿ ಪ್ರಯಾಣ ಮಾಡುತ್ತಿದ್ದಾರೆ.
02:32 PM (IST) Sep 25
ಧರ್ಮಸ್ಥಳದ ಸೌಜನ್ಯ ಅ**ಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ದಳದ ಬಗ್ಗೆ ಸೌಜನ್ಯಳ ತಾಯಿ ಕುಸುಮಾವತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಹಿಂದೆ ಕೆಲಸ ಮಾಡಿದ್ದ ಅಧಿಕಾರಿಗಳನ್ನು ತಂಡದಲ್ಲಿ ನೇಮಿಸಿರುವುದೇ ಅವರ ಆಕ್ಷೇಪಕ್ಕೆ ಮುಖ್ಯ ಕಾರಣ.
02:30 PM (IST) Sep 25
ಎಷ್ಟೇ ಕಟ್ಟುನಿಟ್ಟಾಗಿ ಡಯಟ್ ಮಾಡಿದ್ರೂ ತೂಕ ಮಾತ್ರ ಕಮ್ಮಿ ಆಗ್ತಿಲ್ಲ ಅಂತಾ ಬೇಜಾರ್ ಮಾಡ್ಕೊಳ್ತಿದ್ದೀರಾ? ಇದಕ್ಕೆ ಕಾರಣ ಏನು ಅಂತಾ ನಮಗೆ ಗೊತ್ತೇ ಇರಲ್ಲ. ನಾವು ದಿನನಿತ್ಯ ಮಾಡೋ ಸಣ್ಣಪುಟ್ಟ ತಪ್ಪುಗಳೇ ನಮ್ಮ ತೂಕ ಇಳಿಕೆಗೆ ಅಡ್ಡಿಯಾಗ್ತಿವೆ. ಏನದು ನೋಡಿ..
01:59 PM (IST) Sep 25
ಮೈಸೂರಿನ ಕೋಟೆಹುಂಡಿ ಸರ್ಕಾರಿ ಶಾಲೆಯನ್ನು ರಮ್ಯಾ ಜಗತ್ ಅವರು ದತ್ತು ಪಡೆದು 32 ಲಕ್ಷ ರೂ. ಸ್ವಂತ ಖರ್ಚಿನಲ್ಲಿ ಹೈಟೆಕ್ ಶಾಲೆಯಾಗಿ ಅಭಿವೃದ್ಧಿಪಡಿಸಿದ್ದಾರೆ. ತಮ್ಮ ಮಗನನ್ನೂ ಇದೇ ಶಾಲೆಗೆ ಸೇರಿಸಿರುವ ಇವರು, ಶಾಲೆಗೆ 8ನೇ ತರಗತಿ ತರಲು ಹೋದಾಗ ಸ್ಥಳೀಯರು ಪ್ರಶ್ನಿಸಿದ ವಿಡಿಯೋ ಪ್ರಸ್ತುತ ವೈರಲ್ ಆಗಿದೆ.
01:20 PM (IST) Sep 25
ಖ್ಯಾತ ಟ್ಯಾಟೂ ಆರ್ಟಿಸ್ಟ್ ಘೋಸ್ಟ್ ಅರ್ಜುನ್ ವಿರುದ್ಧ ಮಹಿಳೆಯೊಬ್ಬರು ಖಾಸಗಿ ಫೋಟೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ 9 ಲಕ್ಷ ರೂ. ಸುಲಿಗೆ ಮಾಡಿರುವ ಆರೋಪ ಕೇಳಿಬಂದಿದೆ. ಮದುವೆಯಾಗುವುದಾಗಿ ನಂಬಿಸಿ ವಂಚಿಸಿದಲ್ಲದೆ, ಹಣ ನೀಡದಿದ್ದಾಗ ಹಲ್ಲೆ ನಡೆಸಿದ್ದಾನೆ ಎಂದು ಬ್ಯಾಡರಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಹಿಂದೆ ಅರ್ಜುನ್ ಕೂಡ ಮಹಿಳೆ ವಿರುದ್ಧ ಪ್ರತಿದೂರು ನೀಡಿದ್ದaನು.
01:01 PM (IST) Sep 25
ನಕಲಿ ದಾಖಲೆ ಸೃಷ್ಟಿಸಿ 5 ಕೋಟಿ ರೂ. ಮೌಲ್ಯದ 7 ಎಕರೆ ಜಮೀನನ್ನು ಅಕ್ರಮವಾಗಿ ಮಾರಾಟ ಮಾಡಲಾಗಿದೆ. ಬೆಂಗಳೂರಿನಲ್ಲಿದ್ದ ಮಾಲೀಕರಿಗೆ ಈ ವಂಚನೆ ತಿಳಿದು, ಅವರು ಸಬ್ ರಿಜಿಸ್ಟ್ರಾರ್ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ದೂರು ದಾಖಲಿಸಲು ನಿರ್ಧರಿಸಲಾಗಿದೆ.
12:41 PM (IST) Sep 25
ಮೈಸೂರಿನ ಕೋಟೆಹುಂಡಿ ಸರ್ಕಾರಿ ಶಾಲೆಯನ್ನು ₹31.72 ಲಕ್ಷ ಖರ್ಚು ಮಾಡಿ ಹೈಟೆಕ್ ಮಾಡಿದ ಟೆಕ್ಕಿ ರಮ್ಯಾ ಜಗತ್ ಅವರಿಗೆ, 8ನೇ ತರಗತಿ ಆರಂಭಿಸಲು ಅನುಮತಿ ಕೇಳಿದಾಗ ಅಧಿಕಾರಿಗಳು 'ನೀವ್ಯಾರು? ಶಾಲೆಯ ಮೇಲೆ ನಿಮಗೇನು ಹಕ್ಕಿದೆ?' ಎಂದು ಪ್ರಶ್ನಿಸಿ ಅವಮಾನಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ, ಹೀಗೆ ಪ್ರಶ್ನೆ ಮಾಡಿದ್ಯಾರು? ತಿಳಿಯಿರಿ.
11:46 AM (IST) Sep 25
11:44 AM (IST) Sep 25
11:42 AM (IST) Sep 25
10:57 AM (IST) Sep 25
ಇಬ್ಬರು ಪುಟ್ಟ ಮಕ್ಕಳು ತಾವು ಕೂಡಿಟ್ಟ ಹಣದಿಂದ ಫ್ಯಾನ್ಸಿ ಸ್ಟೋರ್‌ಗೆ ಹೋಗಿ ತಮ್ಮ ದೊಡ್ಡಮ್ಮನಿಗೆ ವಿಶೇಷವಾದ ಉಡುಗೊರೆಯನ್ನು ಖರೀದಿಸಿದ್ದಾರೆ. ಸೈಕಲ್ ಕೊಡಿಸಿದ ದೊಡ್ಡಮ್ಮನಿಗೆ ರಿಟರ್ನ್ ಗಿಫ್ಟ್ ಕೊಡುವ ಈ ಕ್ಯೂಟ್ ವಿಡಿಯೋ ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ.
09:33 AM (IST) Sep 25
09:17 AM (IST) Sep 25
ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದೆ ಎಂಬ ವಿಚಾರ ಚರ್ಚೆಯಲ್ಲಿರುವಾಗಲೇ ಮಂಡ್ಯದ ಕೆ.ಆರ್.ಪೇಟೆ ಪುರಸಭೆ ನೀಡಿದ್ದ ಚೆಕ್ ಬೌನ್ಸ್ ಆಗಿದೆ. ಜಾಹೀರಾತು ವೆಚ್ಚಕ್ಕಾಗಿ ನೀಡಿದ್ದ 18,093 ರೂ. ಚೆಕ್ ಖಾತೆಯಲ್ಲಿ ಹಣವಿಲ್ಲದೆ ವಾಪಸ್ ಬಂದಿದೆ. ಸರ್ಕಾರ ದಿವಾಳಿಯಾಗಿದೆಯೇ ಎಂದು ಜನರು ಪ್ರಶ್ನಿಸುತ್ತಿದ್ದಾರೆ.
08:58 AM (IST) Sep 25
ಅಪ್ಪ ನಂಗೆ ಚಿಪ್ಸ್, ಮಮ್ಮಿ ನಂಗೆ ಲೇಸ್, ಅಜ್ಜಿ ನಂಗೆ ಜ್ಯೂಸ್.. ಸ್ಕೂಲ್‌ಗೆ ಹೋಗುವ ಕೆಲವು ಮಕ್ಕಳ ಸಾಮಾನ್ಯ ಡೈಲಾಗ್ ಇದು. ಶಾಲೆಗೆ ಹೋಗ್ತ, ಬರ್ತಾ ತಿನ್ನೋದನ್ನೇ ಅಭ್ಯಾಸವಾಗಿ ಮಾಡ್ಕೊಂಡಿರ್ತಾರೆ. ಇದು ಮುಂದೊಂದು ದಿನ ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಕೊನೆಗೂ ನಮ್ಮ ಅಧಿಕಾರಿಗಳು ಎಚ್ಚೆತ್ತುಕೊಂಡಂತೆ ಇದೆ.
08:58 AM (IST) Sep 25
ಇಟಗಿ ಗ್ರಾಮದ ಕಮಲನಾರಾಯಣ ದೇವಾಲಯದಲ್ಲಿ ಗೋವಾ ಕದಂಬರ ಕಾಲದ ಪ್ರಾಚೀನ ಶಿಲಾಶಾಸನವೊಂದು ಪತ್ತೆಯಾಗಿದೆ. ಇತಿಹಾಸ ಸಂಶೋಧಕ ಡಾ.ಬಾಹುಬಲಿ ಹಂದೂರ ಅವರು ಇದನ್ನು ಪರಿಶೀಲಿಸಿದ್ದು, ಇದು ಕ್ರಿ.ಶ. 1062ರ ದೊರೆ ಜಯಕೇಶಿಯ ಕಾಲದ ಹಳಗನ್ನಡ ಶಾಸನವಾಗಿದೆ. ಕದಂಬರ ಇತಿಹಾಸ ತಿಳಿಸುವ ಈ ಶಾಸನ ತೀವ್ರ ಕುತೂಹಲ ಮೂಡಿಸಿದೆ.
08:48 AM (IST) Sep 25
ಲಾಲ್‌ಬಾಗ್ ಪಶ್ಚಿಮ ದ್ವಾರದ ಮುಂಭಾಗದಲ್ಲಿ ಅಕ್ರಮವಾಗಿ ನಿರ್ಮಿಸಿರುವ ಕೆಎಂಎಫ್ ನಂದಿನಿ ಮಳಿಗೆಯನ್ನು ತೆರವುಗೊಳಿಸುವಂತೆ ಮಾಜಿ ಕಾರ್ಪೊರೇಟರ್ ಎನ್.ಆರ್.ರಮೇಶ್ ಆಗ್ರಹಿಸಿದ್ದಾರೆ. ತೋಟಗಾರಿಕೆ ಇಲಾಖೆಯ ವಿರೋಧದ ನಡುವೆಯೂ ರಾಜಕೀಯ ಪ್ರಭಾವದಿಂದ ಈ ಮಳಿಗೆ ಸ್ಥಾಪನೆಯಾಗಿದ್ದು, ಇದರ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.
08:43 AM (IST) Sep 25
08:16 AM (IST) Sep 25
ಹೂವಿನಹಡಗಲಿಯಲ್ಲಿ ನಡೆದ ದಸರಾ ಸಿಎಂ ಕಪ್ ಕ್ರೀಡಾಕೂಟವು ತೀವ್ರ ಅವ್ಯವಸ್ಥೆಗಳಿಂದ ಕೂಡಿತ್ತು. ಕ್ರೀಡಾಪಟುಗಳಿಗೆ ಸರಿಯಾದ ಊಟ, ಶುದ್ಧ ಕುಡಿಯುವ ನೀರು ಮತ್ತು ಶೌಚಾಲಯದ ವ್ಯವಸ್ಥೆ ಇರಲಿಲ್ಲ. ಪ್ರಚಾರದ ಕೊರತೆಯಿಂದಾಗಿ ಮಹಿಳಾ ಖೋಖೋ ಪಂದ್ಯಾವಳಿಗೆ ಬಂದಿದ್ದು ಕೇವಲ ಒಂದು ತಂಡ ಮಾತ್ರ!