Published : Apr 25, 2025, 07:23 AM ISTUpdated : Apr 25, 2025, 11:53 PM IST

Karnataka News Live: ಈ ಬೀಜಗಳು ಕೋಳಿ, ಕುರಿ ಮಾಂಸಕ್ಕಿಂತ 10 ಪಟ್ಟು ಹೆಚ್ಚು ಶಕ್ತಿಶಾಲಿ!

ಸಾರಾಂಶ

ಮಾಜಿ ಸಚಿವ ವಿನಯ್ ಕುಲಕರ್ಣಿ ಮನೆ ಮೇಲೆ ಇಡಿ ದಾಳಿ ನಡೆಸಿ ರಾತ್ರಿಯಿಡಿ ಪರಿಶೀಲನೆ ನಡೆಸಿದ್ದಾರೆ. 16 ಅಧಿಕಾರಿಗಳ ಇಡಿ ತಂಡ ವಿನಯ್ ಕುಲಕರ್ಣಿ ಮನೆ ಮೇಲೆ ದಾಳಿ ನಡೆಸಿದ್ದಾರೆ. ರಾತ್ರಿ 9 ಗಂಟೆ ಸುಮಾರಿಗೆ ವಿನಯ್ ಕುಲಕರ್ಣಿ ಹಾಗೂ ತಂಡ ನಿದ್ದೆಗೆ ಜಾರಿದ್ದರೆ, ಇಡಿ ಅಧಿಕಾರಿಗಳು ಮಾತ್ರ ಮನೆ ಸಂಪೂರ್ಣ ತಡಕಾಡಿ ದಾಖಲೆ ಪರಿಶೀಲಿಸಿದ್ದಾರೆ. ಡಾಲರ್ಸ್ ಕಾಲೋನಿಯಲ್ಲಿರುವ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಐಶ್ವರ್ಯ ವಂಚನೆ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಅನುಮಾನದ ಮೇಲೆ ಈ ದಾಳಿ ನಡೆದಿದೆ. ಇತ್ತ ಮಹದೇಶ್ವರ ಬೆಟ್ಟದಲ್ಲಿ ವಾಸ್ತವ್ಯ ಹೂಡಿರುವ ಸಿಎಂ ಸಿದ್ದರಾಮಯ್ಯ ಇಂದು ಚಾಮರಾಜನಗರ ಜಿಲ್ಲಾ ಪ್ರವಾಸ ಮಾಡಲಿದ್ದಾರೆ. ಎಪ್ರಿಲ್ 25ರ ಪ್ರಮುಖ ಸುದ್ದಿ ಅಪ್‌ಡೇಟ್ ಇಲ್ಲಿವೆ.

Karnataka News Live: ಈ ಬೀಜಗಳು ಕೋಳಿ, ಕುರಿ ಮಾಂಸಕ್ಕಿಂತ 10 ಪಟ್ಟು ಹೆಚ್ಚು ಶಕ್ತಿಶಾಲಿ!

11:53 PM (IST) Apr 25

ಈ ಬೀಜಗಳು ಕೋಳಿ, ಕುರಿ ಮಾಂಸಕ್ಕಿಂತ 10 ಪಟ್ಟು ಹೆಚ್ಚು ಶಕ್ತಿಶಾಲಿ!

ಪೈನ್ ಬೀಜಗಳು ಹೃದಯದ ಆರೋಗ್ಯ, ಮಧುಮೇಹ ನಿಯಂತ್ರಣ, ರೋಗನಿರೋಧಕ ಶಕ್ತಿ ವರ್ಧನೆ, ಚರ್ಮ ಮತ್ತು ಕೂದಲಿನ ಆರೋಗ್ಯ ಮತ್ತು ತೂಕ ನಿಯಂತ್ರಣಕ್ಕೆ ಪ್ರಯೋಜನಕಾರಿ. ಒಮೆಗಾ-3 ಕೊಬ್ಬಿನಾಮ್ಲಗಳು, ಉತ್ಕರ್ಷಣ ನಿರೋಧಕಗಳು ಮತ್ತು ಇತರ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಈ ಸೂಪರ್‌ಫುಡ್ ಅನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ.

ಪೂರ್ತಿ ಓದಿ

11:23 PM (IST) Apr 25

Viral Video: ಪಾಕ್‌ ಸೇನೆ ಬೆಂಗಾವಲು ಪಡೆ ಮೇಲೆ ಬಲೂಚ್‌ ಆರ್ಮಿ ದಾಳಿ, ಕನಿಷ್ಠ 10 ಸೈನಿಕರ ಸಾವು!

ಜಮ್ಮು ಕಾಶ್ಮೀರದಲ್ಲಿ ನಡೆದ ಹತ್ಯಾಕಾಂಡದ ನಂತರ ಪಾಕಿಸ್ತಾನ ಭಾರತದ ಪ್ರತೀಕಾರಕ್ಕೆ ಭಯಭೀತವಾಗಿದೆ. ಬಲೂಚಿಸ್ತಾನ ಲಿಬರೇಷನ್ ಆರ್ಮಿ ಕೂಡ ಪಾಕಿಸ್ತಾನಿ ಸೇನೆಯ ಮೇಲೆ ದಾಳಿ ನಡೆಸುತ್ತಿದ್ದು, ಪಾಕಿಸ್ತಾನದ ಆತಂಕವನ್ನು ಹೆಚ್ಚಿಸಿದೆ.

ಪೂರ್ತಿ ಓದಿ

10:42 PM (IST) Apr 25

ಪಹಲ್ಗಾಮ್‌ ಪೈಶಾಚಿಕ ಕೃತ್ಯ: PSL ಪಂದ್ಯಗಳ ಸ್ಕೋರ್‌ಕಾರ್ಡ್‌ ನಿಲ್ಲಿಸಿದ ಕ್ರಿಕ್‌ಇನ್ಫೋ, ಕ್ರಿಕ್‌ಬಜ್‌, ಡ್ರೀಮ್‌ 11

ಪಹಲ್ಗಾಮ್ ದಾಳಿಯ ನಂತರ, ಭಾರತದ ಕ್ರೀಡಾ ವೇದಿಕೆಗಳು ಪಾಕಿಸ್ತಾನ ಸೂಪರ್ ಲೀಗ್‌ನಿಂದ ದೂರ ಸರಿದಿವೆ. ಡ್ರೀಮ್11, ಇಎಸ್‌ಪಿಎನ್‌ ಕ್ರಿಕ್‌ಇನ್ಫೋ ಮತ್ತು ಕ್ರಿಕ್‌ಬಜ್‌ ಪಿಎಸ್‌ಎಲ್‌ ಸ್ಕೋರ್‌ಗಳನ್ನು ತೋರಿಸುವುದನ್ನು ನಿಲ್ಲಿಸಿವೆ. ಈ ಕ್ರಮವು ಭಾರತ ಮತ್ತು ಪಾಕಿಸ್ತಾನದ ನಡುವಿನ ಕ್ರೀಡಾ ಸಂಬಂಧಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ಪೂರ್ತಿ ಓದಿ

10:38 PM (IST) Apr 25

ಕಾಶ್ಮೀರದಲ್ಲಿ ನೀರವ ಮೌನ ಪ್ರವಾಸಿ ತಾಣಗಳು ಬಿಕೋ 5 ಉಗ್ರರು, 3 ಸ್ಥಳ, 10 ನಿಮಿಷದ ದಾಳಿ

ಕಾಶ್ಮೀರದಲ್ಲಿ ನಡೆದ ಉಗ್ರದಾಳಿಯಿಂದಾಗಿ ಪ್ರವಾಸಿ ತಾಣಗಳು ಖಾಲಿಯಾಗಿವೆ. ಪಹಲ್ಗಾಂನಲ್ಲಿ ಸ್ಮಶಾನ ಮೌನ ಆವರಿಸಿದ್ದು, ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಉಗ್ರರು ಹೇಗೆ ದಾಳಿ ನಡೆಸಿದರು ಎಂಬ ಚಿತ್ರಣ ಬಯಲಾಗಿದೆ.

ಪೂರ್ತಿ ಓದಿ

10:14 PM (IST) Apr 25

ಜಾಬ್‌ ಬದಲಿಸಿದ್ರೆ ಇನ್ನು ಪಿಎಫ್‌ ಅಕೌಂಟ್‌ ವರ್ಗಾವಣೆ ಕೂಡ ಸುಲಭ ಮಾಡಿದ EPFO

ಇಪಿಎಫ್‌ಒ ಉದ್ಯೋಗ ಬದಲಾವಣೆಯಲ್ಲಿ ಪಿಎಫ್ ಖಾತೆ ವರ್ಗಾವಣೆ ಪ್ರಕ್ರಿಯೆ ಸರಳಗೊಳಿಸಿದೆ. ಉದ್ಯೋಗದಾತರ ಅನುಮೋದನೆ ಅಗತ್ಯವಿಲ್ಲ. ಪರಿಷ್ಕೃತ ಫಾರ್ಮ್ 13 ಸಾಫ್ಟ್‌ವೇರ್ ಮೂಲಕ ಗಮ್ಯಸ್ಥಾನ ಕಚೇರಿಯ ಅನುಮೋದನೆ ರದ್ದುಗೊಂಡಿದೆ.

 

ಪೂರ್ತಿ ಓದಿ

10:07 PM (IST) Apr 25

ಪಹಲ್ಗಾಮ್ ದಾಳಿ ಪ್ರಶ್ನಿಸಿದ ಪಾಕ್‌ ಪತ್ರಕರ್ತನನ್ನು ದೂರವಿಟ್ಟ ಅಮೆರಿಕ ವಿದೇಶಾಂಗ ವಕ್ತಾರೆ

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಅಮೆರಿಕ ಖಂಡಿಸಿದೆ ಮತ್ತು ಭಾರತಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಅಮೆರಿಕದ ಅಧಿಕಾರಿಗಳು ಭಾರತದೊಂದಿಗೆ ಒಗ್ಗಟ್ಟಿನಿಂದ ನಿಂತಿದ್ದಾರೆ ಮತ್ತು ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಬೆಂಬಲ ನೀಡುವುದಾಗಿ ಹೇಳಿದ್ದಾರೆ.

ಪೂರ್ತಿ ಓದಿ

09:58 PM (IST) Apr 25

ಭಾರತ ಗಡಿ ಮುಚ್ಚಿದ್ರೆ ಪಾಕಿಸ್ತಾನದ ತಲೆನೋವಿಗೆ ಪ್ಯಾರಸಿಟಮಾಲ್ ಕೂಡ ಸಿಗೋಲ್ಲ!

ಪಹಲ್ಗಾಮ್ ದಾಳಿಯ ನಂತರ ಭಾರತವು ಅಟ್ಟಾರಿ ಗಡಿಯನ್ನು ಮುಚ್ಚಿದ್ದು, ಪಾಕಿಸ್ತಾನದೊಂದಿಗಿನ ವ್ಯಾಪಾರ ಸ್ಥಗಿತಗೊಂಡಿದೆ. ಇದರಿಂದ ಪಾಕಿಸ್ತಾನವು ಮೂರನೇ ದೇಶಗಳ ಮೂಲಕ ಭಾರತೀಯ ಸರಕುಗಳನ್ನು ಆಮದು ಮಾಡಿಕೊಳ್ಳಬೇಕಾಗುತ್ತದೆ, ಇದು ಬೆಲೆ ಏರಿಕೆಗೆ ಕಾರಣವಾಗಬಹುದು.

ಪೂರ್ತಿ ಓದಿ

09:44 PM (IST) Apr 25

ಒಂದು ಹನಿ ನೀರೂ ಪಾಕಿಸ್ತಾನಕ್ಕಿಲ್ಲ..ಸಿಂಧೂ ನದಿ ನೀರು ತಡೆಯಲು ಮೋದಿ ಸರ್ಕಾರದ 3 ಪ್ಲ್ಯಾನ್‌!

ಪಾಕಿಸ್ತಾನದೊಂದಿಗಿನ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಲು ಭಾರತ ನಿರ್ಧರಿಸಿದೆ. ಈ ಕ್ರಮವನ್ನು ಮೂರು ಹಂತಗಳಲ್ಲಿ ಕಾರ್ಯಗತಗೊಳಿಸಲು ಯೋಜಿಸಲಾಗಿದೆ. ಒಮರ್ ಅಬ್ದುಲ್ಲಾ ಈ ಒಪ್ಪಂದವು ಜಮ್ಮು ಮತ್ತು ಕಾಶ್ಮೀರಕ್ಕೆ ಹಾನಿಕಾರಕ ಎಂದು ಹೇಳಿದ್ದಾರೆ.

ಪೂರ್ತಿ ಓದಿ

09:28 PM (IST) Apr 25

ತಾಳಿ ಕಟ್ಟೋದಕ್ಕೂ ಬಿಡದೇ ಮದುಮಗಳನ್ನೇ ಅಪಹರಿಸಿದ ವರನ ಸ್ನೇಹಿತರು!

ನಾನು ಪ್ರೀತಿಸಿ ಮದುವೆ ಆಗುತ್ತಿರುವ ಹುಡುಗಿ ಅವಳು. ತಾಳಿ ಕಟ್ಟಬೇಕು, ಮದುವೆ ಮಾಡಿಕೊಳ್ಳಬೇಕು ಬಿಟ್ಟುಬಿಡ್ರೋ ಎಂದರೂ ಬಿಡದೇ ವರನ ಸ್ನೇಹಿತರೇ ಸೇರಿಕೊಂಡು ವಧುವನ್ನು ಕಿಡ್ನಾಪ್ ಮಾಡಿದ ಘಟನೆ ನಡೆದಿದೆ. ಇದಕ್ಕೆ ಮದುವೆ ಸೇರಿದ್ದ ಜನರೂ ಕೂಡ ಸಾಥ್ ನೀಡಿದ್ದಾರೆ.

ಪೂರ್ತಿ ಓದಿ

09:03 PM (IST) Apr 25

ಪಾಕಿಸ್ತಾನ ಹೆಡೆಮುರಿ ಕಟ್ಟಬಹುದು, ದೇಶದ್ರೋಹಿ ಕೈ ನಾಯಕರ ಹರಕು ಬಾಯಿ ಮುಚ್ಚಿಸಲಾಗಲ್ಲ; ಆರ್.ಅಶೋಕ

ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯ ಬಗ್ಗೆ ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನು ಖಂಡಿಸಿ, ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಕಿಡಿಕಾರಿದ್ದಾರೆ. ಉಗ್ರರ ಕೃತ್ಯವನ್ನು ಸಮರ್ಥಿಸುವಂತೆ ಮಾತನಾಡುವ ಕಾಂಗ್ರೆಸ್ ನಾಯಕರನ್ನು ಪಕ್ಷದಿಂದ ಉಚ್ಚಾಟಿಸಬೇಕೆಂದು ಒತ್ತಾಯಿಸಿದ್ದಾರೆ.

ಪೂರ್ತಿ ಓದಿ

08:50 PM (IST) Apr 25

Supreme Court: ರಾಹುಲ್‌ ಗಾಂಧಿಗೆ ಇತಿಹಾಸ, ಭೂಗೋಳ ಏನಾದ್ರೂ ಗೊತ್ತಿದ್ಯಾ? ಈ ರೀತಿಯೇ ಆದ್ರೆ ಸುಮೊಟೋ ಕೇಸ್‌ ಹಾಕ್ತೇವೆ

ಬ್ರಿಟಿಷರ ಜೊತೆ ವೀರ ಸಾವರ್ಕರ್ ಕೆಲಸ ಮಾಡಿದ್ದರು ಮತ್ತು ಪಿಂಚಣಿ ಪಡೆದಿದ್ದರು ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಸುಪ್ರೀಂ ಕೋರ್ಟ್ ತೀವ್ರ ಛೀಮಾರಿ ಹಾಕಿದೆ. ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಇಂತಹ ಹೇಳಿಕೆಗಳನ್ನು ಮುಂದುವರಿಸಿದರೆ ಸ್ವಯಂಪ್ರೇರಿತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.

ಪೂರ್ತಿ ಓದಿ

08:48 PM (IST) Apr 25

ಮೈಸೂರಿನಿಂದ ಕಲಬುರಗಿಗೆ ಆಗಮಿಸಿದ ಡಿಕೆಶಿ ಫ್ಲೈಟ್ ಲ್ಯಾಂಡಿಂಗ್ ಆಗದೇ ಆಗಸದಲ್ಲೇ ಎರಡು ಸುತ್ತು ಹಾಕಿ ವಾಪಸ್!

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮೈಸೂರಿನಿಂದ ಕಲ್ಬುರ್ಗಿಗೆ ವಿಶೇಷ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಹವಾಮಾನ ವೈಪರಿತ್ಯದಿಂದಾಗಿ ವಿಮಾನವು ಕಲ್ಬುರ್ಗಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗದೆ ಬೆಂಗಳೂರಿಗೆ ವಾಪಸ್ ಆಗಿದೆ. ಈ ಕಾರಣದಿಂದಾಗಿ ಕಲ್ಬುರ್ಗಿಯಲ್ಲಿ ನಡೆಯಬೇಕಿದ್ದ ಕಾರ್ಯಕ್ರಮದಲ್ಲಿ ಡಿಕೆಶಿ ಭಾಗವಹಿಸಲು ಸಾಧ್ಯವಾಗಲಿಲ್ಲ.

ಪೂರ್ತಿ ಓದಿ

08:16 PM (IST) Apr 25

ಪ್ರವಾಸಿ ಮಹಿಳೆ ಕೊಟ್ಟ ಸುಳಿವು, ಹೇಸರಗತ್ತೆ ಮಾಲೀಕ, ಶಂಕಿತ ಉಗ್ರನ ಬಂಧನ! ಸಿಕ್ಕಿಬಿದ್ದಿದ್ದು ಹೇಗೆ?

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಶಂಕಿತನೊಬ್ಬನನ್ನು ಬಂಧಿಸಲಾಗಿದೆ. ಪ್ರವಾಸಿಗರೊಬ್ಬರು ಹಂಚಿಕೊಂಡ ವೈರಲ್ ವೀಡಿಯೊ ಮತ್ತು ಫೋಟೋ ಆಧಾರದ ಮೇಲೆ ತನಿಖೆ ನಡೆಸಿ ಬಂಧನ ಮಾಡಲಾಗಿದೆ. ಶಂಕಿತನು ಕೋಡ್ ಭಾಷೆಯಲ್ಲಿ ಮಾತನಾಡುತ್ತಿದ್ದ ಮತ್ತು ಬಂದೂಕುಗಳು ಮತ್ತು ಹಿಂದೂ ಧರ್ಮದ ಬಗ್ಗೆ ಉಲ್ಲೇಖಿಸಿದ್ದ ಎಂದು ಪ್ರವಾಸಿ ತಿಳಿಸಿದ್ದಾರೆ.

ಪೂರ್ತಿ ಓದಿ

08:09 PM (IST) Apr 25

ರಾಜ್ಯದ 223 ಗ್ರಾಮ ಪಂಚಾಯಿತಿಗಳಿಗೆ ಉಪಚುನಾವಣೆ : ಮೇ 25 ರಂದು ಮತದಾನ

ರಾಜ್ಯದ 223 ಗ್ರಾಮ ಪಂಚಾಯಿತಿಗಳ 265 ಸ್ಥಾನಗಳಿಗೆ ಮೇ 25 ರಂದು ಉಪಚುನಾವಣೆ ನಡೆಯಲಿದೆ. ಮತ ಎಣಿಕೆ ಮೇ 28 ರಂದು ನಡೆಯಲಿದ್ದು, ಚುನಾವಣಾ ಆಯೋಗವು ಈಗಾಗಲೇ ಸಿದ್ಧತೆಗಳನ್ನು ಆರಂಭಿಸಿದೆ. ನೀತಿ ಸಂಹಿತೆ ಜಾರಿಯಲ್ಲಿದ್ದು, ಪ್ರಾಮಾಣಿಕ ಚುನಾವಣೆ ನಡೆಸಲು ಸೂಚನೆ ನೀಡಲಾಗಿದೆ.

ಪೂರ್ತಿ ಓದಿ

07:48 PM (IST) Apr 25

'ಪುತ್ರ ಶೋಕಂ ನಿರಂತರಂ..' ಗಂಗಾನದಿಯಲ್ಲಿ ಮಗನ ಅಸ್ಥಿ ವಿಸರ್ಜಿಸಿ ರೋಧಿಸಿದ ಲೆಫ್ಟಿನೆಂಟ್‌ ವಿನಯ್‌ ನರ್ವಾಲ್‌ ಅಪ್ಪ!

ಪಹಲ್ಗಾಮ್ ದಾಳಿಯಲ್ಲಿ ಹುತಾತ್ಮರಾದ ನೌಕಾಧಿಕಾರಿ ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರ ಅಸ್ಥಿಯನ್ನು ಹರ್ ಕಿ ಪೌರಿಯಲ್ಲಿ ಗಂಗಾ ನದಿಯಲ್ಲಿ ವಿಸರ್ಜಿಸಲಾಯಿತು. ಭಾವನಾತ್ಮಕ ವಿದಾಯದಲ್ಲಿ ಕುಟುಂಬಸ್ಥರು ಮತ್ತು ನೂರಾರು ಜನರು ಭಾಗವಹಿಸಿದ್ದರು.

ಪೂರ್ತಿ ಓದಿ

07:42 PM (IST) Apr 25

ದೇಶದ ಪ್ರಶ್ನೆ ಬಂದಾಗ ರಾಜಕೀಯ ಬದಿಗಿಟ್ಟು ಕೇಂದ್ರದ ಜೊತೆ ನಿಲ್ಲಬೇಕು: ಯುಟಿ ಖಾದರ್

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಶಿವಮೊಗ್ಗದ ಉದ್ಯಮಿ ಮಂಜುನಾಥ್ ರಾವ್ ಅವರ ಕುಟುಂಬಕ್ಕೆ ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಭೇಟಿ ನೀಡಿ ಸಾಂತ್ವನ ಹೇಳಿದರು. ಸರ್ಕಾರದ ಪರಿಹಾರ ಕಡಿಮೆ ಇದ್ದಲ್ಲಿ ಮುಖ್ಯಮಂತ್ರಿಗಳ ಜೊತೆ ಚರ್ಚಿಸುವುದಾಗಿ ತಿಳಿಸಿದರು. ಸ್ಥಳೀಯರ ಸಹಾಯವನ್ನು ಶ್ಲಾಘಿಸಿದರು.

ಪೂರ್ತಿ ಓದಿ

07:36 PM (IST) Apr 25

ಕಾಶ್ಮೀರ ಪುರವಾಸಿನಿಯ ಉಗ್ರರೂಪ: ದೇಶದ್ರೋಹಿಗಳ ಭವಿಷ್ಯ ನುಡಿದ ಬ್ರಹ್ಮಾಂಡ ಗುರೂಜಿ...

ಕಾಶ್ಮೀರದ ಪಹಲ್​ಗಾಮ್​ನಲ್ಲಿ ನಡೆದಿರುವ ಉಗ್ರರ ದಾಳಿಯ ಕುರಿತು ಬ್ರಹ್ಮಾಂಡ ಗುರೂಜಿ ಹೇಳಿದ್ದೇನು? ದೇಶದ್ರೋಹಿಗಳ ಬಗ್ಗೆ ಅವರು ನುಡಿದ ಭವಿಷ್ಯವೇನು? 
 

ಪೂರ್ತಿ ಓದಿ

07:31 PM (IST) Apr 25

ನೆಲಮಂಗಲ ಬಳಿ ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ರೈತರ ವಿರೋಧ!

ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ನೆಲಮಂಗಲ ಸುತ್ತಮುತ್ತ ಗುರುತಿಸಲಾದ ಸ್ಥಳಗಳಿಗೆ ಕೇಂದ್ರ ತಂಡ ಭೇಟಿ ನೀಡಿದ ಬೆನ್ನಲ್ಲೇ ಸ್ಥಳೀಯ ರೈತರಿಂದ ವಿರೋಧ ವ್ಯಕ್ತವಾಗಿದೆ. ನೂರಾರು ರೈತರು ಸಭೆ ಸೇರಿ, ತಮ್ಮ ಮನೆ, ಜಮೀನುಗಳನ್ನು ಉಳಿಸಿಕೊಳ್ಳಲು ಹೋರಾಟ ರೂಪಿಸಲು ತೀರ್ಮಾನಿಸಿದ್ದಾರೆ.

ಪೂರ್ತಿ ಓದಿ

06:47 PM (IST) Apr 25

ಆಗಸದಲ್ಲಿ ಹಾರುವಾಗ IAF ಯುದ್ಧವಿಮಾನದಿಂದ ಬಿದ್ದ ಭಾರೀ ನಿಗೂಢ ವಸ್ತು, ಮನೆ ಪುಡಿಪುಡಿ!

ಶಿವಪುರಿಯಲ್ಲಿ ವಾಯುಪಡೆಯ ವಿಮಾನದಿಂದ ಲೋಹದ ವಸ್ತುವೊಂದು ಬಿದ್ದು ಮನೆಗೆ ಹಾನಿಯಾಗಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ, ಐಎಎಫ್ ತನಿಖೆ ಆರಂಭಿಸಿದೆ.

ಪೂರ್ತಿ ಓದಿ

06:35 PM (IST) Apr 25

ಮದರಸಾ ಶಿಕ್ಷಣ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ! ಇನ್ಮುಂದೆ ಹಿಂದಿನಂತಿರೋಲ್ಲ! ಯೋಗಿ ಸರ್ಕಾರದ ನಿರ್ಧಾರವೇನು?

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮದರಸಾ ಶಿಕ್ಷಣದಲ್ಲಿ ವ್ಯಾಪಕ ಸುಧಾರಣೆಗಳನ್ನು ಒತ್ತಿ ಹೇಳಿದ್ದಾರೆ. ಆಧುನಿಕ ಶಿಕ್ಷಣದ ಜೊತೆಗೆ ಉದ್ಯೋಗಾಧಾರಿತ ಶಿಕ್ಷಣ ನೀಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ.

ಪೂರ್ತಿ ಓದಿ

06:13 PM (IST) Apr 25

ಸಾವರ್ಕರ್ ಬ್ರಿಟಿಷರ ಸೇವಕ ಎಂದ ರಾಹುಲ್ ಗಾಂಧಿಗೆ ಸುಪ್ರೀಂ ಕೋರ್ಟ್ ಚಾಟಿ!

ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾವರ್ಕರ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಪುನರಾವರ್ತನೆಯಾದರೆ ಸ್ವಯಂಪ್ರೇರಿತ ಕ್ರಮ ಕೈಗೊಳ್ಳುವುದಾಗಿ ನ್ಯಾಯಾಲಯ ಎಚ್ಚರಿಸಿದೆ.

ಪೂರ್ತಿ ಓದಿ

06:08 PM (IST) Apr 25

3 ವರ್ಷಗಳ ಕಾಯುವಿಕೆಯ ನಂತರ ಭಾರತೀಯಳಾದ ಖುಷಿ: ರಷ್ಯನ್ ಮಹಿಳೆಯ ಸಂಭ್ರಮ ಸಖತ್ ವೈರಲ್

ರಷ್ಯಾ ಮೂಲದ ಮರೀನಾ ಖರ್ಬನಿ ಎಂಬುವವರು ಭಾರತದ ಪೌರತ್ವ ಪಡೆದ ಖುಷಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮೂರುವರೆ ವರ್ಷಗಳ ಕಾಯುವಿಕೆಯ ನಂತರ ಭಾರತದ OCI ಪಾಸ್‌ಪೋರ್ಟ್ ಪಡೆದ ಖುಷಿಯಲ್ಲಿ ಅವರು ಕುಣಿದಾಡಿದ್ದಾರೆ. ಭಾರತದಲ್ಲಿ ವಾಸಿಸುವ ಬಗ್ಗೆ ಅವರ ಉತ್ಸಾಹವು ಕೆಲವು ಭಾರತೀಯರಲ್ಲಿ ಅಚ್ಚರಿ ಮೂಡಿಸಿದೆ.

ಪೂರ್ತಿ ಓದಿ

06:06 PM (IST) Apr 25

ಮಧ್ಯರಾತ್ರಿ 2.30ಕ್ಕೆ ಮಹಿಳೆ ಮನೆಯೊಳಗೆ ನುಗ್ಗಿದ ಶಿಕ್ಷಕ; ಬಟ್ಟೆ ಬಿಚ್ಚುವಾಗಲೇ ಗ್ರಾಮಸ್ಥರಿಗೆ ಲಾಕ್!

ಮಧ್ಯರಾತ್ರಿ 2.30ರ ವೇಳೆಗೆ ಮಹಿಳೆಯ ಮನೆಗೆ ನುಗ್ಗಿದ ಶಿಕ್ಷಕನೊಬ್ಬ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದಿದೆ. ಮಹಿಳೆ ಕೂಗಾಡಿದ್ದರಿಂದ ಎಚ್ಚರಗೊಂಡ ಗ್ರಾಮಸ್ಥರು ಆತನನ್ನು ಹಿಡಿದು ಥಳಿಸಿದ್ದಾರೆ.

ಪೂರ್ತಿ ಓದಿ

06:01 PM (IST) Apr 25

ಡೀಸೆಲ್‌, ಜೆಟ್‌ ಫ್ಯುಯೆಲ್‌ ಸ್ಟಾಕ್‌ ಇರಿಸಿಕೊಳ್ಳಿ, ರಿಫೈನರಿಗಳಿಗೆ ಸೂಚಿಸಿದ ಪಾಕಿಸ್ತಾನ ಸರ್ಕಾರ!

ಪಹಲ್ಗಾಮ್ ದಾಳಿಯ ನಂತರ ಭಾರತದಿಂದ ಪ್ರತಿದಾಳಿ ಭೀತಿಯಲ್ಲಿ ಪಾಕಿಸ್ತಾನ. ಹೈಸ್ಪೀಡ್ ಡೀಸೆಲ್ ಮತ್ತು ಜೆಟ್ ಇಂಧನ ಸಂಗ್ರಹಕ್ಕೆ ಸರ್ಕಾರದಿಂದ ತೈಲ ಕಂಪನಿಗಳಿಗೆ ಸೂಚನೆ.

ಪೂರ್ತಿ ಓದಿ

05:55 PM (IST) Apr 25

ಆರ್‌ಸಿಬಿ ಎದುರು ಸೋಲಿನ ಬೆನ್ನಲ್ಲೇ ತಲೆಕೆಡಿಸಿಕೊಂಡು ಬಾರ್ ಕಡೆ ಹೋದ ರಾಯಲ್ಸ್ ಓನರ್! ವಿಡಿಯೋ ವೈರಲ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಸೋಲಿನ ನಂತರ ರಾಜಸ್ಥಾನ ರಾಯಲ್ಸ್‌ನ ಸಿಇಒ ಜೇಕ್ ಲಷ್ ಮೆಕ್ರಮ್ ಬೆಂಗಳೂರಿನ ಮದ್ಯದಂಗಡಿಗೆ ಭೇಟಿ ನೀಡಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ಹಾಸ್ಯ ಮತ್ತು ಊಹಾಪೋಹಗಳಿಗೆ ಕಾರಣವಾಗಿದೆ.

ಪೂರ್ತಿ ಓದಿ

05:43 PM (IST) Apr 25

Indus Waters Treaty suspended: ಮೂರು ನದಿಗಳ ನೀರು ರಾತ್ರೋರಾತ್ರಿ ನಿಲ್ಲಿಸಬಹುದೇ? ಎಷ್ಟು ಸಮಯ ತೆಗೆದುಕೊಳ್ಳುತ್ತೆ?

ಪಹಲ್ಗಾಮ್ ದಾಳಿಯ ನಂತರ, ಭಾರತ ಸಿಂಧೂ ನದಿ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ತೆಗೆದುಕೊಂಡಿದೆ. ಪಾಕಿಸ್ತಾನದ ಕೃಷಿ ಭೂಮಿ ಮತ್ತು ವಿದ್ಯುತ್ ಯೋಜನೆಗಳು ಈ ನೀರಿನ ಮೇಲೆ ಅವಲಂಬಿತವಾಗಿವೆ. ಆದರೆ ಭಾರತಕ್ಕೆ ಈ ನೀರನ್ನು ಸಂಪೂರ್ಣವಾಗಿ ನಿಲ್ಲಿಸಲು ಸಾಕಷ್ಟು ಮೂಲಸೌಕರ್ಯಗಳಿಲ್ಲ.

ಪೂರ್ತಿ ಓದಿ

05:41 PM (IST) Apr 25

48 ಗಂಟೆ ಡೆಡ್‌ಲೈನ್‌: ತುಮಕೂರು, ಮಂಗಳೂರು, ಮೈಸೂರಿನಲ್ಲಿರುವ ಪಾಕಿಗಳಿಗೆ ಶುರು ಆತಂಕ!

ಜಮ್ಮು ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯ ನಂತರ, ಭಾರತ ಸರ್ಕಾರವು ಪಾಕಿಸ್ತಾನಿ ಪ್ರಜೆಗಳಿಗೆ ನೀಡಲಾದ ಹಲವು ರೀತಿಯ ವೀಸಾಗಳನ್ನು ರದ್ದುಗೊಳಿಸಿದೆ. ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆಗಳನ್ನು ಗಡಿಪಾರು ಮಾಡುವ ಸಾಧ್ಯತೆ ಇದೆ.

ಪೂರ್ತಿ ಓದಿ

05:30 PM (IST) Apr 25

ಐಪಿಎಲ್‌ನಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಯುತ್ತಿದೆ ಎಂದು ಬೊಬ್ಬೆ ಹಾಕಿದ ಪಾಕ್ ಮಾಜಿ ಕ್ರಿಕೆಟಿಗ!

ಇಶಾನ್ ಕಿಶನ್ ಅವರ ವಿವಾದಾತ್ಮಕ ತೀರ್ಪನ್ನು ಉಲ್ಲೇಖಿಸಿ, 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂದು ಪಾಕಿಸ್ತಾನದ ಮಾಜಿ ವೇಗಿ ಜುನೈದ್ ಖಾನ್ ಆರೋಪಿಸಿದ್ದಾರೆ. ರಾಜಸ್ಥಾನ ರಾಯಲ್ಸ್ ವಿರುದ್ಧವೂ ಈ ಹಿಂದೆ ಇದೇ ರೀತಿಯ ಆರೋಪ ಕೇಳಿಬಂದಿತ್ತು, ಆದರೆ ಫ್ರಾಂಚೈಸಿ ಇದನ್ನು ನಿರಾಕರಿಸಿದೆ.

ಪೂರ್ತಿ ಓದಿ

05:20 PM (IST) Apr 25

ಬಳ್ಳಾರಿ, ಸಂಡೂರು, ಚಿತ್ರದುರ್ಗದಿಂದ ಭಾರತದ ಶೇ.15 ಉಕ್ಕು ಉತ್ಪಾದನೆ!

ಉಕ್ಕು ವಲಯದಲ್ಲಿನ ಲಾಜಿಸ್ಟಿಕ್ಸ್ ವೆಚ್ಚವನ್ನು ಶೇ.14ರಿಂದ ಶೇ.8ಕ್ಕೆ ಇಳಿಸುವ ಅಗತ್ಯವಿದ್ದು, ಕರ್ನಾಟಕ ಸರ್ಕಾರವು ಕ್ಲಸ್ಟರ್ ಆಧಾರಿತ ಕೈಗಾರಿಕಾ ಬೆಳವಣಿಗೆ, ಉತ್ತಮ ಲಾಜಿಸ್ಟಿಕ್ಸ್ ಮೂಲಸೌಕರ್ಯ ಮತ್ತು ಕೈಗಾರಿಕಾ ಕಾರಿಡಾರುಗಳ ಅಭಿವೃದ್ಧಿಗೆ ಕ್ರಮ ಕೈಗೊಂಡಿದೆ.

ಪೂರ್ತಿ ಓದಿ

05:00 PM (IST) Apr 25

ಭಾರತದ ಕ್ರಮದಿಂದ ಪಾಕಿಸ್ತಾನ ಭಯಭೀತ; ಸೇನೆ ಮುಖ್ಯಸ್ಥ ಅಸಿಮ್ ಮುನೀರ್ ಕುಟುಂಬ ವಿದೇಶಕ್ಕೆ ಪಲಾಯನ!

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತದ ಕಠಿಣ ಕ್ರಮಕ್ಕೆ ಪಾಕಿಸ್ತಾನ ಸೇನೆ ಭಯಭೀತವಾಗಿದೆ. ಸೇನಾ ಮುಖ್ಯಸ್ಥರು ಸೇರಿದಂತೆ ಅನೇಕ ಅಧಿಕಾರಿಗಳು ತಮ್ಮ ಕುಟುಂಬಗಳನ್ನು ವಿದೇಶಕ್ಕೆ ಕಳುಹಿಸಿದ್ದಾರೆ. ಭಾರತ ಯುದ್ಧನೌಕೆ ಮತ್ತು ವಿಮಾನವಾಹಕ ನೌಕೆಗಳನ್ನು ನಿಯೋಜಿಸಿ ಪಾಕಿಸ್ತಾನಕ್ಕೆ ಬಲವಾದ ಸಂದೇಶ ರವಾನಿಸಿದೆ.

ಪೂರ್ತಿ ಓದಿ

04:59 PM (IST) Apr 25

ಅಮೆರಿಕಾ, ಪಶ್ಚಿಮದ ದೇಶಗಳಿಗಾಗಿ... ಭಯೋತ್ಪಾದನೆಗೆ ಬೆಂಬಲ : ಪಾಕ್ ರಕ್ಷಣಾ ಸಚಿವ ಹೇಳಿದ್ದೇನು?

ಕಾಶ್ಮೀರದಲ್ಲಿ ಉಗ್ರ ಚಟುಚಟಿಕೆ ನಡೆಸುವವರಿಗೆ ಸದಾ ಬೆನ್ನುಲುಬಾಗಿ ನಿಂತಿರುವ ಪಾಕಿಸ್ತಾನ ಇಷ್ಟು ದಿನಗಳ ಕಾಲವೂ ರಂಗೋಲಿ ಕೆಳಗೆ ತೂರುವ ಕೆಲಸ ಮಾಡುತ್ತಿತ್ತು. ಆದರೆ ಈಗ ಪಾಕಿಸ್ತಾನದ ರಕ್ಷಣಾ ಸಚಿವರೇ ಭಯೋತ್ಪಾದನೆಗೆ ಹಣಕಾಸು ನೆರವು ನೀಡುತ್ತಿರುವ ವಿಚಾರದ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳ ಮುಂದೆ ಒಪ್ಪಿಕೊಂಡಿದ್ದಾರೆ. ಅವರು ಏನು ಹೇಳಿದ್ದಾರೆ ನೋಡಿ..

ಪೂರ್ತಿ ಓದಿ

04:31 PM (IST) Apr 25

Pahalgam Attack: 'ಧರ್ಮ ಕೇಳಿ ಕೊಲ್ಲಲಾಗಿದೆ..' ಹುರಿಯತ್‌ ಒಪ್ಪಿಕೊಂಡರೂ, ನಮ್ಮವರು ಒಪ್ಪಿಕೊಳ್ಳೋದಿಲ್ಲ!

ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಪ್ರವಾಸಿಗರ ಧರ್ಮ ಕೇಳಿ ಗುಂಡು ಹಾರಿಸಲಾಗಿದೆಯೇ ಎಂಬ ಬಗ್ಗೆ ವಿವಾದ ಭುಗಿಲೆದ್ದಿದೆ. ಕೆಲವು ರಾಜಕೀಯ ನಾಯಕರು ಇದನ್ನು ಬಿಜೆಪಿ ಸೃಷ್ಟಿಸಿದ ಕಟ್ಟುಕಥೆ ಎಂದು ಹೇಳಿದರೆ, ಮಿರ್ವೈಜ್ ಉಮರ್ ಫಾರೂಕ್ ದಾಳಿಕೋರರು ಧರ್ಮ ಕೇಳಿ ಗುಂಡು ಹಾರಿಸಿದ್ದಾರೆ ಎಂದು ಖಚಿತಪಡಿಸಿದ್ದಾರೆ.

ಪೂರ್ತಿ ಓದಿ

04:29 PM (IST) Apr 25

ಎಂಥಾ ಕಾಲ ಬಂತು ನೋಡಿ; ಸ್ನೇಹಿತೆ ಸೈಕಲ್ ಕೊಡದ್ದಕ್ಕೆ ಬಾಲಕಿ ಆತ್ಮಹತ್ಯೆ!

ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಪಕ್ಕದ ಮನೆ ಬಾಲಕಿ ಸೈಕಲ್ ಕೊಡಲು ನಿರಾಕರಿಸಿದ್ದಕ್ಕೆ 11 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸ್ಪಂದನ ಎಂಬ ಬಾಲಕಿ ಮನನೊಂದು ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಪೂರ್ತಿ ಓದಿ

03:50 PM (IST) Apr 25

ಪಹಲ್ಗಾಮ್‌ನಲ್ಲಿ ಭದ್ರತಾ ಪಡೆ ಏಕೆ ಇರಲಿಲ್ಲ: ವಿರೋಧ ಪಕ್ಷದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ

26 ಪ್ರವಾಸಿಗರ ಬಲಿ ಪಡೆದ ಪಹಲ್ಗಾಮ್ ದಾಳಿಯ ನಂತರ ಆ ಪ್ರದೇಶದಲ್ಲಿ ಏಕೆ ಯೋಧರು ಇರಲಿಲ್ಲ, ಭದ್ರತಾ ಪಡೆ ಏಕೆ ನಿಯೋಜಿಸಿರಲಿಲ್ಲ ಎಂಬುದು ಅನೇಕರ ಪ್ರಶ್ನೆಯಾಗಿತ್ತು. ಈ ಪ್ರಶ್ನೆಗೆ ಕೇಂದ್ರ ಸರ್ಕಾರ ಉತ್ತರ ನೀಡಿದೆ. ಕೇಂದ್ರ ಸರ್ಕಾರ ಏನು ಹೇಳಿದೆ ಎಂಬ ಮಾಹಿತಿ ಇಲ್ಲಿದೆ. 

ಪೂರ್ತಿ ಓದಿ

03:46 PM (IST) Apr 25

'ಶಾಸಕಾಂಗದ ಅಧಿಕಾರದ ಮಾನ್ಯ, ಕಾನೂನುಬದ್ಧ ಬಳಕೆ..' ವಕ್ಫ್‌ ಕಾಯ್ದೆಯ ಕುರಿತು ಸುಪ್ರೀಂ ಕೋರ್ಟ್‌ಗೆ ಕೇಂದ್ರದ ಉತ್ತರ

ಕೇಂದ್ರ ಸರ್ಕಾರವು ವಕ್ಫ್ (ತಿದ್ದುಪಡಿ) ಕಾಯ್ದೆ, 2025 ಅನ್ನು ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥಿಸಿಕೊಂಡಿದೆ. ಈ ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ವಜಾಗೊಳಿಸುವಂತೆ ಕೋರಿದೆ. ಕೇಂದ್ರವು ಈ ಕಾಯ್ದೆಯನ್ನು ಮಾನ್ಯ ಮತ್ತು ಕಾನೂನುಬದ್ಧ ಎಂದು ವಾದಿಸಿದೆ.

ಪೂರ್ತಿ ಓದಿ

03:41 PM (IST) Apr 25

ವಿಶ್ವದ ಸುಂದರ ನಗರ ಬಿಟ್ಟು ಭಾರತಕ್ಕೆ ಬಂದು 'ಬದುಕು ಬದಲಿಸಿದ ದೇಶ'ಎಂದ ಡ್ಯಾನಿಶ್ ಯುವತಿ!

ಡೆನ್ಮಾರ್ಕ್ ಯುವತಿ ಆಸ್ಟ್ರಿಡ್ 10 ತಿಂಗಳು ಭಾರತದಲ್ಲಿ ಪ್ರವಾಸ ಮಾಡಿ, ತನ್ನ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಭಾರತದ ವೈವಿಧ್ಯಮಯ ಸಂಸ್ಕೃತಿ, ಪ್ರಕೃತಿ ಮತ್ತು ಜನರ ಆತಿಥ್ಯ ಅವರನ್ನು ಬೆರಗುಗೊಳಿಸಿದೆ. ಈ ಪ್ರವಾಸ ತಮ್ಮ ಜೀವನವನ್ನೇ ಬದಲಾಯಿಸಿದೆ ಎಂದು ಅವರು ಹೇಳಿದ್ದಾರೆ.

ಪೂರ್ತಿ ಓದಿ

03:35 PM (IST) Apr 25

ಪೆಹಲ್ಗಾಂ ದಾಳಿ ಸಮರ್ಥಿಸಿದ ಪಾಕ್, ಸ್ವಾತಂತ್ರ್ಯ ಹೋರಾಟ ಎಂದ ಉಪ ಪ್ರಧಾನಿ ಇಶ್ಕ್ ದಾರ್

ಪೆಹಲ್ಗಾಂ ಉಗ್ರ ದಾಳಿಯನ್ನು ಪಾಕಿಸ್ತಾನ ಸಮರ್ಥಿಸುವ ಮೂಲಕ ತನ್ನ ಅಸಲಿ ಮುಖ ಬಯಲು ಮಾಡಿದೆ. ದಾಳಿ ಮಾಡಿದವರು ಉಗ್ರರಲ್ಲ, ಅವರೆಲ್ಲಾ ಸ್ವಾತಂತ್ರ್ಯ ಹೋರಾಟಗಾರರು ಎಂದು ಪಾಕಿಸ್ತಾನ ಉಪ ಪ್ರಧಾನಿ ಹೇಳಿದ್ದಾರೆ.
 

ಪೂರ್ತಿ ಓದಿ

02:59 PM (IST) Apr 25

ದೇಶದಲ್ಲಿರುವ ಎಲ್ಲಾ ಪಾಕಿಸ್ತಾನಿಯರ ಗುರುತಿಸಿ ವಾಪಸ್ ಕಳಿಸಿ: ರಾಜ್ಯಗಳಿಗೆ ಅಮಿತ್ ಷಾ ಸೂಚನೆ

ಪಹಲ್ಗಾಮ್ ದಾಳಿಯ ನಂತರ ಭಾರತದಲ್ಲಿರುವ ಪಾಕಿಸ್ತಾನದ ಎಲ್ಲಾ ನಾಗರಿಕರು 48 ಗಂಟೆಯೊಳಗೆ ದೇಶ ತೊರೆಯಬೇಕೆಂದು ಆದೇಶಿಸಲಾಗಿದೆ. ಈ ಆದೇಶವನ್ನು ಜಾರಿಗೊಳಿಸಲು ರಾಜ್ಯಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಸೂಚಿಸಿದ್ದಾರೆ.

ಪೂರ್ತಿ ಓದಿ

02:56 PM (IST) Apr 25

ಆರ್ಟಿಕಲ್ 370 ರದ್ದತಿ-ಪಹಲ್ಗಾಮ್ ಉಗ್ರರ ದಾಳಿ ಕುರಿತ ಹೇಳಿಕೆ: ಬೇಷರತ್ ಕ್ಷಮೆಯಾಚಿಸಿದ ಕಾಂಗ್ರೆಸ್ ಶಾಸಕ!

ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಗೆ 370ನೇ ವಿಧಿ ರದ್ದತಿಯೇ ಕಾರಣ ಎಂಬ ಹೇಳಿಕೆ ನೀಡಿದ್ದ ಶಾಸಕ ರಮೇಶ್ ಬಂಡಿಸಿದ್ದೇಗೌಡ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಿದ್ದಾರೆ. ದೇಶದ ಒಗ್ಗಟ್ಟಿಗೆ ಧಕ್ಕೆ ತರುವ ಹೇಳಿಕೆ ನೀಡಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ.

ಪೂರ್ತಿ ಓದಿ

02:41 PM (IST) Apr 25

ಇಸ್ರೋ ಮಾಜಿ ಅಧ್ಯಕ್ಷ ಕೆ ಕಸ್ತೂರಿರಂಗನ್ ಬೆಂಗಳೂರಿನಲ್ಲಿ ನಿಧನ, ಗಣ್ಯರ ಸಂತಾಪ

ಇಸ್ರೋ ಮಾಜಿ ಅಧ್ಯಕ್ಷ , ದೇಶದ ಹೆಮ್ಮೆಯ ವಿಜ್ಞಾನಿ ಕೆ ಕಸ್ತೂರಿರಂಗನ್ ನಿಧನರಾಗಿದ್ದಾರೆ. ಇಂದು ಬೆಂಗಳೂರಿನ ಸ್ವಗ್ರಹದಲ್ಲಿ ಕಸ್ತೂರಿರಂಗನ್ ನಿಧನರಾಗಿದ್ದಾರೆ. ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಪೂರ್ತಿ ಓದಿ

More Trending News