LIVE NOW
Published : Mar 07, 2026, 06:39 AM ISTUpdated : Mar 07, 2026, 11:05 PM IST

Karnataka News Live: ರೈತ, ದುಡಿಯುವ ವರ್ಗ ಆಧುನಿಕ ಯುಗದ ಕುಬೇರರು - ಸಂಸದ ಬಸವರಾಜ ಬೊಮ್ಮಾಯಿ

ಸಾರಾಂಶ

ಹುಬ್ಬಳ್ಳಿ: ಯಾವುದೇ ಕೋಚಿಂಗ್‌ ಇಲ್ಲದೇ ಮನೆಯಲ್ಲೇ ತಯಾರಿ ನಡೆಸಿ, ಯುಪಿಎಸ್‌ಸಿ ಪರೀಕ್ಷೆಗೆ 5 ಪ್ರಯತ್ನಗಳ ಪೈಕಿ ನಾಲ್ಕರಲ್ಲಿ ಯಶಸ್ವಿಯಾದವರುಹುಬ್ಬಳ್ಳಿಯ ಕೃಪಾ ಜೈನ್. ಈಗಿನದು 5ನೇ ಬಾರಿಯಾಗಿದ್ದು, 190ನೇ ರ್‍ಯಾಂಕ್‌ ಪಡೆದಿದ್ದಾರೆ.

ಕೃಪಾ ಈವರೆಗೆ ಐದು ಬಾರಿ ಯುಪಿಎಸ್‌ಸಿ ಪರೀಕ್ಷೆ ಬರೆದಿದ್ದು, ಮೊದಲ ಸಲವಷ್ಟೇ ವಿಫಲವಾಗಿದ್ದರು. ಉಳಿದ ನಾಲ್ಕು ಸಲವೂ ಯಶಸ್ವಿಯಾಗಿದ್ದಾರೆ. ಆದರೆ, ಐಪಿಎಸ್‌ ಅಧಿಕಾರಿಯಾಗಬೇಕೆಂಬುದು ಇವರ ಕನಸು. 2 ಮತ್ತು 4ನೇ ಪ್ರಯತ್ನದಲ್ಲಿ ಐಆರ್‌ಎಂಎಸ್‌ ದೊರೆತರೆ, 3ನೇ ಪ್ರಯತ್ನದಲ್ಲಿ ಐಎಫ್‌ಎಸ್‌ ಕ್ಲಿಯರ್‌ ಆಗಿದೆ. ಐಆರ್‌ಎಂಎಸ್‌ ಇಷ್ಟ ಆಗದ ಕಾರಣ ಅದಕ್ಕೆ ಸೇರ್ಪಡೆಗೊಳ್ಳದೇ ಮತ್ತೆ ಪ್ರಯತ್ನಿಸಿದ್ದರು.

ಐಎಫ್‌ಎಸ್‌ನಲ್ಲಿ 18ನೇ ರ್‍ಯಾಂಕ್‌ ಬಂದಿದ್ದು, ಡೆಹ್ರಾಡೂನ್‌ನಲ್ಲಿ ಐಎಫ್‌ಎಸ್‌ ಅಧಿಕಾರಿ ತರಬೇತಿ ಪಡೆಯುತ್ತಿದ್ದಾರೆ. ಆದರೂ, ಐಪಿಎಸ್‌ ಅಧಿಕಾರಿಯಾಗಬೇಕೆಂದು ಮತ್ತೆ 5ನೇ ಪ್ರಯತ್ನ ನಡೆಸಿದ್ದು, ಈ ಬಾರಿ 190ನೇ ರ್‍ಯಾಂಕ್‌ ಪಡೆದಿದ್ದಾರೆ. ಇದೀಗ ತಾವು ಅಂದುಕೊಂಡಿದ್ದನ್ನು ಸಾಧಿಸಿದ ಖುಷಿ ಅವರ ಮೊಗದಲ್ಲಿ ಎದ್ದು ಕಾಣುತ್ತಿದೆ.

11:05 PM (IST) Mar 07

ರೈತ, ದುಡಿಯುವ ವರ್ಗ ಆಧುನಿಕ ಯುಗದ ಕುಬೇರರು - ಸಂಸದ ಬಸವರಾಜ ಬೊಮ್ಮಾಯಿ

ಅನುದಾನ ಮಂಜೂರು ಮಾಡುವುದರಿಂದ ದೇಶದ ಆರ್ಥಿಕತೆ ಹೆಚ್ಚಾಗುವುದಿಲ್ಲ, ದುಡಿಯುವ ವರ್ಗ ಮಾಡುವ ಕೆಲಸ ಹಾಗೂ ಉತ್ಪಾದನೆಯಿಂದ ಸರ್ಕಾರಕ್ಕೆ ಆದಾಯ ಬರುತ್ತದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

Read Full Story

09:57 PM (IST) Mar 07

ನಾಗಾರ್ಜುನ-ತ್ರಿವಿಕ್ರಮ್ ಕಾಂಬೋದಲ್ಲಿ ಬರಬೇಕಿದ್ದ ಆ ಸಿನಿಮಾ ಯಾವುದು? ಆದ್ರೂ ಮಿಸ್ ಆಗಿದ್ದೇಕೆ?

ಕಿಂಗ್ ನಾಗಾರ್ಜುನ ಮತ್ತು ಖ್ಯಾತ ನಿರ್ದೇಶಕ ತ್ರಿವಿಕ್ರಮ್ ಕಾಂಬಿನೇಷನ್‌ನಲ್ಲಿ ಒಂದು ಸಿನಿಮಾ ಬರಬೇಕಿತ್ತು. ಆದರೆ, ಇನ್ನೊಬ್ಬ ಸ್ಟಾರ್ ಡೈರೆಕ್ಟರ್‌ನಿಂದಾಗಿ ಆ ಪ್ರಾಜೆಕ್ಟ್ ಕೈತಪ್ಪಿ ಹೋಯ್ತು. ಹಾಗಾದರೆ ಆ ಸಿನಿಮಾ ಯಾವುದು? ಆ ನಿರ್ದೇಶಕ ಯಾರು?

Read Full Story

09:01 PM (IST) Mar 07

ಒಳ ಮೀಸಲಾತಿ ಜಾರಿ ಆಗದಿದ್ದರೆ ಹೋರಾಟ - ಸಂಸದ ಬಸವರಾಜ ಬೊಮ್ಮಾಯಿ ಎಚ್ಚರಿಕೆ

ಸಾಲದ ಶೂಲಕ್ಕೆ ರಾಜ್ಯವನ್ನು ತೆಗೆದುಕೊಂಡು ಹೋಗುವ ಬಜೆಟ್ ಇದಾಗಿದೆ. ಇದರಿಂದ ರಾಜ್ಯದ ಹಣಕಾಸಿನ ಮೇಲೆ ದೂರಗಾಮಿ ಬಹಳ ದೊಡ್ಡ ಪರಿಣಾಮ ಬೀರಲಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

Read Full Story

07:48 PM (IST) Mar 07

ಕೇಂದ್ರ ಸರ್ಕಾರ ಹಣ ನೀಡದಿದ್ದರೂ ಭದ್ರಾ ಮೇಲ್ದಂಡೆ ಕಾಮಗಾರಿ - ಸಿಎಂ ಸಿದ್ದರಾಮಯ್ಯ

ಕೃಷ್ಣಾ, ಕಾವೇರಿ, ಗೋದಾವರಿ ಸೇರಿದಂತೆ ರಾಜ್ಯದ ನೀರಾವರಿ ಕ್ಷೇತ್ರದಲ್ಲಿನ ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸುವುದರ ಜತೆಗೆ ಹೊಸ ಕಾಮಗಾರಿಗಳ ಅನುಷ್ಠಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಒತ್ತು ನೀಡಿದ್ದಾರೆ.

Read Full Story

07:37 PM (IST) Mar 07

ಜಿಬಿಎ ವ್ಯಾಪ್ತಿಯಲ್ಲಿ ಬಿಲ್ ಬಾಕಿ ಇಲ್ಲ, ಪಾವತಿಯಲ್ಲೂ ಯಾವುದೇ ಸಮಸ್ಯೆ ಉಂಟಾಗುತ್ತಿಲ್ಲ - ಡಿಕೆಶಿ

ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಕಾಮಗಾರಿಗಳ ಬಿಲ್ ಪಾವತಿಯಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಗುತ್ತಿಗೆದಾರರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ತಿಳಿಸಿದ್ದಾರೆ.

Read Full Story

07:27 PM (IST) Mar 07

Krishna Rukku ಸೀರಿಯಲ್​ ಆಟೋದ ಮೇಲೆ ದರ್ಶನ್​ ಫೋಟೋ ಏಕಿಲ್ಲ? ಫ್ಯಾನ್ಸ್​ ಪ್ರಶ್ನೆಗೆ ರುಕ್ಕು ಹೇಳಿದ್ದೇನು?

'ಕೃಷ್ಣ ರುಕ್ಕು' ಎಂಬ ಹೊಸ ಸೀರಿಯಲ್ ಆರಂಭವಾಗಲಿದೆ. ಅಣ್ಣನ ಸಾವಿನ ನಂತರ ಕುಟುಂಬದ ಜವಾಬ್ದಾರಿ ಹೊರುವ ರುಕ್ಕು ಮತ್ತು ಹಾದಿ ತಪ್ಪಿದ ಕೃಷ್ಣನ ಕಥೆಯಿದು. ಧಾರಾವಾಹಿಯ ಆಟೋದಲ್ಲಿ ದರ್ಶನ್ ಫೋಟೋ ಇಲ್ಲದಿರುವ ವಿವಾದಕ್ಕೆ ನಾಯಕಿ ಮೌನ ಗುಡ್ಡೇಮನೆ ಸ್ಪಷ್ಟನೆ ನೀಡಿದ್ದಾರೆ.

Read Full Story

07:24 PM (IST) Mar 07

ಅಂತರ್ಜಲ ವೃದ್ಧಿಯೇ ಎಚ್‌.ಎನ್ ವ್ಯಾಲಿ ಯೋಜನೆಯ ಉದ್ದೇಶ - ಸಚಿವ ಡಾ.ಎಂ.ಸಿ.ಸುಧಾಕರ್

ಅಂತರ್ಜಲ ವೃದ್ಧಿಗಾಗಿ ಮಾತ್ರವೇ ಎಚ್.ಎನ್. ವ್ಯಾಲಿ ಮತ್ತು ಕೆ.ಸಿ. ವ್ಯಾಲಿಯನ್ನು ಜಾರಿಗೊಳಿಸಲಾಗಿದೆ. ನೀರಾವರಿ ಅಥವಾ ಕೃಷಿ ಚಟುವಟಿಕೆಗಳಿಗಾಗಿ ಅಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.

Read Full Story

07:12 PM (IST) Mar 07

ಕನ್ನಡಿಗರ ಹಿತ ಕಾಯುವ ನಮ್ಮ ಬದ್ಧತೆಯಲ್ಲಿ ಯಾವುದೇ ರಾಜಿ ಇಲ್ಲ - ಸಚಿವ ಪ್ರಿಯಾಂಕ್ ಖರ್ಗೆ

ಸಿಎಂ ಸಿದ್ಧರಾಮಯ್ಯನವರು ಮಂಡಿಸಿದ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿರುವ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ನಮ್ಮ ಬದ್ದತೆಯಲ್ಲಿ ಯಾವುದೇ ರಾಜಿ ಇಲ್ಲ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Read Full Story

07:00 PM (IST) Mar 07

ಕಾಂಗ್ರೆಸ್ ಸರ್ಕಾರ ಗಂಜಿ ಕೇಂದ್ರವಾಗಿದೆ - ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಟೀಕೆ

ಸಾಲ ಮಾಡಿ ಕಾಂಗ್ರೆಸ್‌ ನಾಯಕರನ್ನು ಸಾಕುತ್ತಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರವು ಈ ಕಾಂಗ್ರೆಸಿಗರಿಗೆ ಗಂಜಿ ಕೇಂದ್ರವಾಗಿದೆ ಎಂದು ಕೇಂದ್ರ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್‌.ಡಿ.ಕುಮಾರಸ್ವಾಮಿ ಕಟುವಾಗಿ ಟೀಕಿಸಿದ್ದಾರೆ.

Read Full Story

05:54 PM (IST) Mar 07

ಅಹಂಕಾರ ಬಿಟ್ಟು ಕೇಂದ್ರದ ಜೊತೆ ಕೆಲಸ ಮಾಡಿ - ಸಿಎಂ ಸಿದ್ದರಾಮಯ್ಯಗೆ ಸೋಮಣ್ಣ ಕಿವಿಮಾತು

ಅಹಂಕಾರ ಬಿಟ್ಟು ಕೇಂದ್ರ ಸರ್ಕಾರದ ಜೊತೆ ಕೈಜೋಡಿಸಿ ಎಂದು ಕೇಂದ್ರ ರೇಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಿವಿಮಾತು ಹೇಳಿದ್ದಾರೆ.

Read Full Story

05:46 PM (IST) Mar 07

ಮಂಡ್ಯ ನಾಲೆಯಲ್ಲಿ ಅರ್ಚಕನ ಶವ ಪತ್ತೆ; ಚಪ್ಪಲಿ ಮೇಲೆ ರಕ್ತದ ಕಲೆ ಕಂಡ ಪೊಲೀಸರಿಗೆ ಕೊಲೆ ಶಂಕೆ!

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ನಾಲೆಯೊಂದರಲ್ಲಿ ಅರ್ಚಕ ಸಿದ್ದಲಿಂಗಪ್ಪ ಅವರ ಶವ ಪತ್ತೆಯಾಗಿದೆ. ಅವರ ಚಪ್ಪಲಿಯ ಮೇಲೆ ರಕ್ತದ ಕಲೆಗಳು ಕಂಡುಬಂದಿರುವುದರಿಂದ, ಇದು ಕೊಲೆಯಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Read Full Story

05:39 PM (IST) Mar 07

ಮೌನ ಮುರಿದ Rakshit Shetty ಹೀಗೊಂದು ಮನವಿ - FB ​ ಫೋಟೋ ಚೇಂಜ್​ ಆಗುತ್ತಲೇ, ಈ ವಿಡಿಯೋ ವೈರಲ್​

ರಶ್ಮಿಕಾ ಮಂದಣ್ಣ ಮದುವೆ ಬೆನ್ನಲ್ಲೇ, ನಟ ರಕ್ಷಿತ್ ಶೆಟ್ಟಿ ತಮ್ಮ ಫೇಸ್‌ಬುಕ್ ಕವರ್ ಫೋಟೋ ಬದಲಿಸಿದ್ದಾರೆ. ಇದನ್ನು ರಶ್ಮಿಕಾಗೆ ನೀಡಿದ ಟಾಂಗ್ ಎಂದು ಅಭಿಮಾನಿಗಳು ಭಾವಿಸುತ್ತಿರುವಾಗಲೇ, ರಶ್ಮಿಕಾ ಬಗ್ಗೆ ಕೆಟ್ಟದಾಗಿ ಮಾತನಾಡದಂತೆ ರಕ್ಷಿತ್ ಮನವಿ ಮಾಡಿದ್ದ ಹಳೆಯ ವಿಡಿಯೋವೊಂದು ಇದೀಗ ವೈರಲ್ ಆಗಿದೆ.

Read Full Story

05:09 PM (IST) Mar 07

Radhika Pandit ಹುಟ್ಟುಹಬ್ಬ - ಯಶ್​ ವಿಶೇಷ ಗಿಫ್ಟ್! ನಟಿಗೆ ಈಗ ಎಷ್ಟು ವರ್ಷ? ಸಿನಿಮಾಕ್ಕೆ ಮರಳ್ತಾರಾ?

ನಟಿ ರಾಧಿಕಾ ಪಂಡಿತ್ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಂಡಿದ್ದಾರೆ. ಈ ವಿಶೇಷ ದಿನದಂದು, ಅವರ ವಯಸ್ಸು, ಪತಿ ಯಶ್ ನೀಡಿದ ಉಡುಗೊರೆ ಮತ್ತು ಸಿನಿಮಾಗೆ ಮರಳುವ ಬಗ್ಗೆ ಅಭಿಮಾನಿಗಳ ಹಾರೈಕೆಯ ಕುರಿತು ಮಾಹಿತಿ ಇಲ್ಲಿದೆ. 

Read Full Story

04:42 PM (IST) Mar 07

ಫ್ರಿಡ್ಜ್‌ಲ್ಲಿ ಇಟ್ಟು ತೆಗೆದು 3 ದಿನ ಒಂದೇ ಸಾರು, ಗಂಡನ ಬೈಗುಳಕ್ಕೆ ದುರಂತ ಅಂತ್ಯಕಂಡ ಬೆಂಗಳೂರು ಮಹಿಳೆ

ಫ್ರಿಡ್ಜ್‌ಲ್ಲಿ ಇಟ್ಟು ತೆಗೆದು 3 ದಿನ ಒಂದೇ ಸಾರು, ಗಂಡನ ಬೈಗುಳಕ್ಕೆ ದುರಂತ ಅಂತ್ಯಕಂಡ ಬೆಂಗಳೂರು ಮಹಿಳೆ, ಗಂಡನ ಆಕ್ರೋಶ, ಜಗಳಕ್ಕೆ ಇದೀಗ 4 ವರ್ಷದ ಮಗು ತಾಯಿಯನ್ನು ಕಳೆದುಕೊಂಡಿದೆ.

Read Full Story

04:30 PM (IST) Mar 07

ಸ್ಯಾಂಡಲ್​ವುಡ್​ ಚೆಲುವೆ ಪ್ರೇಮಾ ಮದುವೆ? ಹಿಂಟ್ಸ್​ ಕೊಟ್ಟ ನಟಿ ತಾರಾ ಅನುರಾಧ- ಯಾರೀ ಚೆಲುವ?

ಆಭರಣ ಮಳಿಗೆಯೊಂದರ ಜಾಹೀರಾತಿನಲ್ಲಿ ನಟಿ ತಾರಾ ಆಡಿದ ಮಾತಿನಿಂದ, ನಟಿ ಪ್ರೇಮಾ ಅವರ ಎರಡನೇ ಮದುವೆಯ ಬಗ್ಗೆ ಚರ್ಚೆ ಶುರುವಾಗಿದೆ. ಈ ಹಿಂದೆ ತಮ್ಮ ವಿಚ್ಛೇದನ, ಮದುವೆಯ ಬಗೆಗಿನ ಅಭಿಪ್ರಾಯ ಮತ್ತು ಒಂಟಿ ಜೀವನದ ಬಗ್ಗೆ ಮಾತನಾಡಿದ್ದ ಪ್ರೇಮಾ, ಈಗ ನಿಜವಾಗಿಯೂ ಮರುಮದುವೆ ಆಗುತ್ತಿದ್ದಾರೆಯೇ ಎಂಬ ಕುತೂಹಲ ಮೂಡಿದೆ.
Read Full Story

02:35 PM (IST) Mar 07

ಬನಾರಸಿ, ರೇಷ್ಮೆಯಂಥ ಹೆವಿ ಸೀರೆಗಳನ್ನು ಡ್ರೈ ಕ್ಲೀನ್‌ಗೆ ಕೊಡದೇ ಮನೆಯಲ್ಲೇ ತೊಳೆಯುವ ವಿಧಾನ

ದುಬಾರಿ ಹಾಗೂ ಹೆವಿ ಎಂಬ್ರಾಯಿಡರಿ ಸೀರೆಗಳನ್ನು ಡ್ರೈ ಕ್ಲೀನ್‌ಗೆ ಕಳುಹಿಸುವ ಬದಲು ಮನೆಯಲ್ಲೇ ಸುರಕ್ಷಿತವಾಗಿ ತೊಳೆಯಬಹುದು. ಮೈಲ್ಡ್ ಡಿಟರ್ಜೆಂಟ್ ಬಳಸಿ, ನಿಧಾನವಾಗಿ ಒಗೆದು, ನೆರಳಿನಲ್ಲಿ ಒಣಗಿಸುವಂತಹ ಸರಳ ವಿಧಾನಗಳಿಂದ ಸೀರೆಗಳ ಹೊಳಪನ್ನು ಕಾಪಾಡಿಕೊಳ್ಳಬಹುದು.
Read Full Story

01:14 PM (IST) Mar 07

ಕಲಬುರಗಿ - ಮಠದಲ್ಲಿದ್ದ ಮಾನಸಿಕ ಅಸ್ವಸ್ಥ ಮಹಿಳೆಯನ್ನ ಹೊಲಕ್ಕೆ ಕರೆದೊಯ್ದು ಬಲತ್ಕಾರ, ಕಾಮುಕನ ವಿರುದ್ದ FIR

ಕಲಬುರಗಿಯ ಜೇವರ್ಗಿ ತಾಲೂಕಿನ ಮಠವೊಂದರಲ್ಲಿ ವಾಸವಿದ್ದ ಮಾನಸಿಕ ಅಸ್ವಸ್ಥ ಮಹಿಳೆಯ ಮೇಲೆ ಮಸ್ತಾಕ್ ಹುಸೇನ್ ಎಂಬಾತ ಲೈ೦ಗಿಕ ದೌರ್ಜನ್ಯ ಎಸಗಿದ್ದಾನೆ. ಈ ಕೃತ್ಯವನ್ನು ಸ್ಥಳೀಯ ಯುವಕರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಆರೋಪಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

Read Full Story

12:54 PM (IST) Mar 07

ಸಿನಿಮಾ ಪ್ರಚಾರಕ್ಕೆ ಇಷ್ಟೊಂದು ಚೀಪ್ ಗಿಮಿಕ್ ಬೇಕಾ, ಏನಾಗಿದೆ ಈ ಚತ್ರರಂಗಕ್ಕೆ? ನಟ ಶರತ್ ಪ್ರಕಾಶ್ ಮೇಲೆ FIR!

'ಸ್ಟಾರ್' ಸಿನಿಮಾದ ಪ್ರಚಾರಕ್ಕಾಗಿ ನಾಯಕ ನಟ ಶರತ್ ಪ್ರಕಾಶ್ ಸಾರ್ವಜನಿಕವಾಗಿ ಮಚ್ಚು ಹಿಡಿದು ಪೋಸ್ ನೀಡಿದ್ದಾರೆ. ಈ ಕೃತ್ಯಕ್ಕಾಗಿ ನಟ ಹಾಗೂ ಚಿತ್ರಮಂದಿರದ ಮಾಲೀಕರ ವಿರುದ್ಧ ಆರ್ಮ್ಸ್ ಆಕ್ಟ್ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.

Read Full Story

11:52 AM (IST) Mar 07

State Budget 2026 - ಹವ್ಯಕ ಭಾಷಾ ಅಕಾಡೆಮಿ ಘೋಷಣೆ ಸ್ವಾಗತಿಸಿದ ರಾಮಚಂದ್ರಾಪುರ ಮಠ

ಹವಿಗನ್ನಡದ ಸಂರಕ್ಷಣೆ ಮತ್ತು ಸಂವರ್ಧನೆಗಾಗಿ 'ಹವ್ಯಕ ಭಾಷಾ ಅಕಾಡೆಮಿ' ಸ್ಥಾಪಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಸರ್ಕಾರದ ಈ ಐತಿಹಾಸಿಕ ತೀರ್ಮಾನವನ್ನು ರಾಮಚಂದ್ರಾಪುರ ಮಠ ಮತ್ತು ಹವ್ಯಕ ಮಹಾಸಭೆ ಸ್ವಾಗತಿಸಿದ್ದು, ಇದು ಭಾಷೆಯ ಉಳಿವು ಹಾಗೂ ಅಧ್ಯಯನಕ್ಕೆ ಉತ್ತೇಜನ ನೀಡಲಿದೆ ಎಂದು ಆಶಯ ವ್ಯಕ್ತಪಡಿಸಿವೆ

Read Full Story

11:16 AM (IST) Mar 07

Karnataka Budget 2026 - ಅಲ್ಪಸಂಖ್ಯಾತರಿಗೆ ಬಂಪರ್ ಗಿಫ್ಟ್, ಬಡಮಕ್ಕಳಿಗೆ ಲ್ಯಾಪ್‌ಟಾಪ್, ಶಿಕ್ಷಣ, ಉದ್ಯೋಗ, ಮಹಿಳೆಯರಿಗೆ ಹಲವು ಯೋಜನೆಗಳು!

ಕರ್ನಾಟಕ ಬಜೆಟ್ 2026ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಹಲವು ಯೋಜನೆ ಘೋಷಿಸಿದ್ದಾರೆ. ಇದರಲ್ಲಿ ಶಾಲೆಗಳ ಉನ್ನತೀಕರಣ, ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್, ಹುಬ್ಬಳ್ಳಿ-ಕಲಬುರಗಿಯಲ್ಲಿ ಹಜ್ ಭವನ ನಿರ್ಮಾಣ, ಮತ್ತು ಮಹಿಳಾ ಕೋ-ಆಪರೇಟಿವ್ ಸೊಸೈಟಿ ಸ್ಥಾಪನೆ ಪ್ರಮುಖವಾಗಿವೆ.

Read Full Story

10:42 AM (IST) Mar 07

ರಾಜ್ಯದಲ್ಲಿ ಇದೇ ಮೊದಲು, ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ನಿವಾಸ ಮ್ಯೂಸಿಯಂ ಆಗಲಿದೆ; ಯಾರು ಖ್ಯಾತ ನಿರ್ದೇಶಕ?

ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್‌ ಅವರ ಮೈಸೂರು ಜಿಲ್ಲೆಯ ಕಣಗಾಲ್‌ ಗ್ರಾಮದಲ್ಲಿರುವ ನಿವಾಸವನ್ನು ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.  ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ಮನೆಯನ್ನು ಮ್ಯೂಸಿಯಂ ಆಗಿ ಪರಿವರ್ತಿಸುತ್ತಿರುವುದು ಇದೇ ಮೊದಲು.

Read Full Story

10:13 AM (IST) Mar 07

'ಮೋದಿ ಸಾಲ ಮಾಡಿಲ್ವಾ?' ಸಾಲರಾಮಯ್ಯ ಎಂದ ಬಿಜೆಪಿ ನಾಯಕರಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು,

ರಾಜ್ಯ ಬಜೆಟ್ ಅಭಿವೃದ್ಧಿ ಶೂನ್ಯ ಮತ್ತು ಸಾಲದ ಸುಳಿಗೆ ಸಿಲುಕಿಸಲಿದೆ ಎಂಬ ಬಿಜೆಪಿ ಆರೋಪಕ್ಕೆ ಸಚಿವ ಪ್ರಿಯಾಂಕ್ ಖರ್ಗೆ, ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ 80 ಸಾವಿರ ಕೋಟಿ ಪಾಲು ಬಾರದ ಕಾರಣ ಸಾಲ ಮಾಡಬೇಕಾಗಿದೆ ಎಂದ ಅವರು, ಪ್ರಧಾನಿ ಮೋದಿ ಮಾಡಿದ 200 ಲಕ್ಷ ಕೋಟಿ ಸಾಲದ ಬಗ್ಗೆಯೂ ಪ್ರಶ್ನಿಸಿದ್ದಾರೆ. 

Read Full Story

09:54 AM (IST) Mar 07

ಪಲ್ಯ, ಸಾಂಬರ್‌ ಹೆಚ್ಚು ಖಾರವಾಯ್ತಾ? ಚಿಂತೆ ಮಾಡದೇ ಅಮ್ಮನ ಐದು ಟಿಪ್ಸ್ ಫಾಲೋ ಮಾಡಿ

Reduce spiciness in food ಅಡುಗೆಯಲ್ಲಿ ಖಾರ ಅಥವಾ ಉಪ್ಪು ಹೆಚ್ಚಾಯಿತೇ? ಟೊಮೆಟೋ, ತುಪ್ಪ, ಆಲೂಗಡ್ಡೆಯಂತಹ ಪದಾರ್ಥಗಳಿಂದ ಸರಿಪಡಿಸುವ ಸುಲಭ ಟಿಪ್ಸ್ ತಿಳಿಯಿರಿ. ನಿಮ್ಮ ಅಡುಗೆಯನ್ನು ಎಸೆಯದೆ ರುಚಿಕರವಾಗಿಸಿ!

Read Full Story

09:25 AM (IST) Mar 07

ಬೆಣ್ಣೆಯಂತೆ ಹದವಾಗಿ ಮಟನ್ ಬೇಯಿಸೋದು ಹೇಗೆ? ಟೇಸ್ಟಿ ಅಡುಗೆಗೆ ಈ ಸ್ಟೆಪ್‌ಗಳೆಲ್ಲಾ ಅನಿವಾರ್ಯ

ಮಟನ್ ಕಲ್ಲಿನಂತೆ ಗಟ್ಟಿಯಾಗುತ್ತಿದೆಯೇ? ಚಿಂತೆ ಬಿಡಿ. ಮಟನ್ ಅನ್ನು ಬೆಣ್ಣೆಯಂತೆ ಮೃದುವಾಗಿ ಬೇಯಿಸುವ ರಹಸ್ಯ ವಿಧಾನಗಳನ್ನು ತಿಳಿಯಿರಿ. ಈ ಸುಲಭ ಸಲಹೆಗಳಿಂದ ನಿಮ್ಮ ಬಾಡೂಟದ ರುಚಿ ಹೆಚ್ಚಿಸಿ.

Read Full Story

09:08 AM (IST) Mar 07

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ; ಬಜೆಟ್‌ನಲ್ಲಿ ₹100 ಕೋಟಿ ಅನುದಾನ ಘೋಷಣೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ, ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯನ್ನು ಗುರಿಯಾಗಿಸಿಕೊಂಡು ₹100 ಕೋಟಿ ಅನುದಾನ ಘೋಷಿಸಲಾಗಿದೆ. ಜಿಲ್ಲೆಯ ಬಹುಕಾಲದ ಬೇಡಿಕೆಗಳನ್ನು ಕಡೆಗಣಿಸಿರುವುದು ಜನರಲ್ಲಿ ತೀವ್ರ ನಿರಾಸೆ ಮೂಡಿಸಿದೆ.

Read Full Story

09:04 AM (IST) Mar 07

ಗಂಡಸ್ತನ ಸಾಬೀತುಪಡಿಸೋ ಕಥೆ, ಈ ಅಡಲ್ಟ್ ಕಾಮಿಡಿ ನೋಡಲು ಮುಗಿಬಿದ್ದ ವೀಕ್ಷಕರು!

Mansion House Mallesh Movie Review: ಶ್ರೀನಾಥ್ ಮಾಗಂಟಿ ಮತ್ತು ಗಾಯತ್ರಿ ರಮಣ ಜೋಡಿಯಾಗಿ ನಟಿಸಿರುವ 'ಮ್ಯಾನ್ಷನ್ ಹೌಸ್ ಮಲ್ಲೇಶ್' ಸಿನಿಮಾ ಈ ಶುಕ್ರವಾರ ಪ್ರೇಕ್ಷಕರ ಮುಂದೆ ಬಂದಿದೆ. ಶ್ರೀನಾಥ್ ಸೋಲೋ ಹೀರೋ ಆಗಿ ನಟಿಸಿರುವ ಈ ಚಿತ್ರ ಹೇಗಿದೆ?

 

Read Full Story

08:43 AM (IST) Mar 07

Karnataka Budget 2026 - ಇದಪ್ಪಾ ಬಜೆಟ್ ಅಂದ್ರೆ, 38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ!

ಈ ಬಾರಿಯ ಬಜೆಟ್‌ನಲ್ಲಿ ಸರ್ಕಾರವು ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 30 ಸಾವಿರ ಕೋಟಿ ರೂ. ಕೃಷಿ ಸಾಲ ಮತ್ತು ಮೆಕ್ಕೆಜೋಳ ಬೆಳೆಗಾರರಿಗೆ 100 ಕೋಟಿ ರೂ. ನೆರವು ಘೋಷಿಸಿದೆ. ಇದರೊಂದಿಗೆ, ಸಹಕಾರ ಸಂಘಗಳ ಗಣಕೀಕರಣ ಮತ್ತು ಎಪಿಎಂಸಿಗಳ ಡಿಜಿಟಲೀಕರಣಕ್ಕೆ ಒತ್ತು ನೀಡಲಾಗಿದೆ.

Read Full Story

07:49 AM (IST) Mar 07

Karnataka Budget 2026 - ಪೊಲೀಸ್ ಇಲಖೆಗೆ ಸೇರಲು ಸಿದ್ಧತೆ ನಡೆಸ್ತಿರೋರಿಗೆ ಗುಡ್‌ನ್ಯೂಸ್ ಕೊಟ್ಟ ಸಿಎಂ!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‌ನಲ್ಲಿ 'ಡ್ರಗ್ಸ್ ಮುಕ್ತ ಕರ್ನಾಟಕ' ಗುರಿಯೊಂದಿಗೆ ಪೊಲೀಸ್ ಇಲಾಖೆಗೆ ವಿಶೇಷ ಅನುದಾನ ಘೋಷಿಸಿದ್ದಾರೆ.  12 ಹೊಸ ಪೊಲೀಸ್ ಠಾಣೆಗಳ ಸ್ಥಾಪನೆ, 8 ಸಾವಿರ ಸಿಬ್ಬಂದಿ ನೇಮಕಾತಿ ಹಾಗೂ ಇಲಾಖೆಯ ಆಧುನೀಕರಣಕ್ಕೆ ಸರ್ಕಾರ ಹಸಿರು ನಿಶಾನೆ ತೋರಿದೆ.

Read Full Story

07:25 AM (IST) Mar 07

ಕರ್ನಾಟಕ ಬಜೆಟ್ - ವಸತಿ ಯೋಜನೆಯಲ್ಲಿ ಮನೆ ಬೇಕಾ? 'ನಮ್ಮ ಮನೆ' ಸ್ಕೀಂ ಬಗ್ಗೆ ತಿಳ್ಕೊಳ್ಳಿ

ಕರ್ನಾಟಕ ಗೃಹ ಮಂಡಳಿಯು ಆನೇಕಲ್‌ನಲ್ಲಿ 80,000 ಆಸನ ಸಾಮರ್ಥ್ಯದ 'ಸೂರ್ಯ ಕ್ರೀಡಾ ಗ್ರಾಮ' ನಿರ್ಮಿಸಲಿದೆ. 'ನಮ್ಮ ಮನೆ' ಯೋಜನೆಯಡಿ 50,000 ನಿವೇಶನಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲಾಗುವುದು ಹಾಗೂ ವಿವಿಧ ವಸತಿ ಯೋಜನೆಗಳಡಿ ಫಲಾನುಭವಿಗಳಿಗೆ ನೀಡುವ ಸಹಾಯಧನವನ್ನು ಹೆಚ್ಚಿಸಲಾಗಿದೆ.
Read Full Story

07:17 AM (IST) Mar 07

ಶ್ರೀಲಂಕಾ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಿಂದ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ; ನೋಟಿಸ್‌ ಜಾರಿ

ಶ್ರೀಲಂಕಾ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಎಎಚ್‌ಎಂ ದಿಲೀಪ್‌ ನವಾಜ್‌ ಅವರು ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ಸಂಬಂಧ ಹೈಕೋರ್ಟ್‌, ಗೂಗಲ್‌ ಇಂಡಿಯಾ ಮತ್ತು ಗೂಗಲ್‌ ಇಂಕ್‌ಗೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆಯನ್ನು ಮುಂದೂಡಿದೆ.

Read Full Story

07:07 AM (IST) Mar 07

ಯುಪಿಎಸ್‌ಸಿ ಪರೀಕ್ಷೆಯಲ್ಲಿ 389ನೇ ‌Rank ಪಡೆದ ಸಕಲೇಶಪುರ ತಾಲೂಕಿನ ರೈತನ ಮಗ ಮನೋಜ್‌

ಹಾಸನ ಜಿಲ್ಲೆಯ ಸಕಲೇಶಪುರದ ರೈತ ಕುಟುಂಬದ ಜಿ.ಎಸ್. ಮನೋಜ್, ಯುಪಿಎಸ್‌ಸಿ ಪರೀಕ್ಷೆಯಲ್ಲಿ 389ನೇ ರ್ಯಾಂಕ್ ಪಡೆದಿದ್ದಾರೆ. ಯಾವುದೇ ಕೋಚಿಂಗ್ ಇಲ್ಲದೆ, ಸ್ವಯಂ ಅಧ್ಯಯನದ ಮೂಲಕ ಈ ಸಾಧನೆ ಮಾಡಿರುವುದು ಅವರ ದೃಢ ಸಂಕಲ್ಪಕ್ಕೆ ಸಾಕ್ಷಿಯಾಗಿದೆ. ಅವರ ಈ ಯಶಸ್ಸು ಗ್ರಾಮೀಣ ಯುವಕರಿಗೆ ಸ್ಫೂರ್ತಿಯ ಸೆಲೆಯಾಗಿದೆ.
Read Full Story

07:04 AM (IST) Mar 07

ಕರ್ನಾಟಕ ಬಜೆಟ್‌ನಲ್ಲಿ ಶಿಕ್ಷಣ ಇಲಾಖೆಗೆ ಸಿಕ್ಕಿದ್ದೇನು? ವಿದ್ಯಾರ್ಥಿಗಳು, ಶಿಕ್ಷಕರು ತಪ್ಪದೇ ಈ ಮಾಹಿತಿ ತಿಳಿದುಕೊಳ್ಳಿ!

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಿಕ್ಷಣ ಕ್ಷೇತ್ರಕ್ಕೆ ಹಲವು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. 15,000 ಶಿಕ್ಷಕರ ನೇಮಕಾತಿ, ಪಿಯು ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ, 'ರೋಹಿತ್ ವೇಮುಲ ಕಾಯ್ದೆ' ಜಾರಿ ಹಾಗೂ 800 ಕರ್ನಾಟಕ ಪಬ್ಲಿಕ್ ಶಾಲೆಗಳ ಉನ್ನತೀಕರಣದಂತಹ ಪ್ರಮುಖ ನಿರ್ಧಾರ

Read Full Story

More Trending News