ಬೆಂಗಳೂರು: ಸಿಎಂ ಏನ್ ಹೇಳಿದ್ದಾರೋ ಅದನ್ನೇ ನಾನು ಹೇಳೋದು. ಎಲ್ಲಾ ನಿವಾರಣೆಯಾಗಿದೆ ಎಂದಷ್ಟೆ ಹೇಳಿದ ರಾಮಲಿಂಗಾರೆಡ್ಡಿ ಅವರು, ರಾಜೀನಾಮೆ ವಾಪಾಸ್ ಮತ್ತು ಜಲಸಂಪನ್ಮೂಲ ಖಾತೆಯಲ್ಲಿ ಮುಂದುವರೆಯುವ ಬಗ್ಗೆ ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ. ಇತ್ತ ಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ನಾನು ಪ್ರೆಸಿಡೆಂಟ್, ಅವರು ವರ್ಕಿಂಗ್ ಪ್ರೆಸಿಡೆಂಡ್. ನಾನು ಚೀಫ್ ಮಿನಿಸ್ಟರ್, ಅವರು ಮಿನಿಸ್ಟರ್, ನಾವು ಪಕ್ಷದಲ್ಲಿ ಬೆಳೆದವರು. ಪಕ್ಷ ಉಳಿಸ್ತಾ ಇರೋರು. ಬೆಂಗಳೂರಿಗೆ ಒಳ್ಳೆದು ಆಗ್ಬೇಕು ಅನ್ನೋವರು. ನಾವೆಲ್ಲ ಕೂತು ಮಾತನಾಡಿದ್ದೇವೆ. ಪರಿಹಾರ ಆಗಿದೆ ಎಂದು ಹೇಳಿದ್ದಾರೆ.

10:32 PM (IST) Jun 06
ಈಜು ಬಾರದಿದ್ದರೂ ಮಲಪ್ರಭಾ ನದಿಗೆ ಇಳಿದ ಬಾಲಕ ಆಳವಾದ ನೀರಲ್ಲಿ ಮುಳುಗಿ ದಾರುಣವಾಗಿ ಮೃತಪಟ್ಟ ಘಟನೆ ಬೆಳಗಾವಿಯ ಬೈಲಹೊಂಗಲ ತಾಲೂಕಿನ ವಕ್ಕುಂದ ಗ್ರಾಮದಲ್ಲಿ ನಡೆದಿದೆ. 15 ವರ್ಷದ ಮಹೇಶ್ ಗಣಾಚಾರಿ ಎಂಬ ಬಾಲಕನ ಸಾವಿಗೆ ಊರಿಗೆ ಊರೇ ಮರುಗಿದೆ.
09:59 PM (IST) Jun 06
ಕರ್ನಾಟಕ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಇಂದು ಸಂಜೆಯಿಂದ ಸುರಿದ ಮಳೆಗೆ ಹಲವು ಮನೆಗಳಿಗೆ ನೀರು ನುಗ್ಗಿದೆ. ಅವಾಂತರಗಳು ಸೃಷ್ಟಿಯಾಗಿದೆ. ರಸ್ತೆಗಳು ಜಲಾವೃತಗೊಂಡಿದೆ. ರಾಜ್ಯದ ಮಳೆಯ ಅಪ್‌ಡೇಟ್ ಇಲ್ಲಿದೆ.
09:47 PM (IST) Jun 06
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಅಭಿವೃದ್ಧಿ ಪರ್ವ ಆರಂಭವಾಗಿದೆ. ಮುಖ್ಯಮಂತ್ರಿ ಸುವೇಂದು ಅಧಿಕಾರಿ, L&T ಅಧ್ಯಕ್ಷ ಎಸ್.ಎನ್. ಸುಬ್ರಹ್ಮಣ್ಯಂ ಜೊತೆ ಕೈಗಾರಿಕಾ ಬೆಳವಣಿಗೆ ಬಗ್ಗೆ ಚರ್ಚಿಸಿದ್ದಾರೆ, ಅತ್ತ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನ ಭೇಟಿ ಮಾಡಿದ್ದಾರೆ.
08:54 PM (IST) Jun 06
ಮೃಗಾಲಯದಲ್ಲೂ ಅಪರೂಪ, ಕಾಡಿನಲ್ಲೂ ಕಾಣಸಿಗುವುದು ವಿರಳ. ಇಂತಹ ಅತ್ಯಂತ ಅಪರೂಪದ ಹಲವು ವನ್ಯಜೀವಿಗಳು,ಸಸ್ತನಿಗಳು ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾಗಿದೆ. ಅರಣ್ಯಾಧಿಕಾರಿಗಳ ದಾಳಿಯಲ್ಲಿ ಪತ್ತೆಯಾಗಿದೆ.
07:34 PM (IST) Jun 06
ನಗರದ ಹೊಸಮನೆ ಬಡಾವಣೆಯಲ್ಲಿ ನಿರ್ಮಾಣ ಕಾಮಗಾರಿ ವೇಳೆ ನಡೆದ ಭೀಕರ ಅಪಘಾತದಲ್ಲಿ ಕಾರ್ಮಿಕನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಮೃತರನ್ನು ದಕ್ಷಿಣ ಕನ್ನಡ ಜಿಲ್ಲೆಯ..
07:19 PM (IST) Jun 06
ಬೆಂಗಳೂರು ಮೈಸೂರು ಎಕ್ಸ್‌ಪ್ರೇಸ್‌ವೇನಲ್ಲಿ ಸರಣಿ ಅಪಘಾತ ಸಂಭವಿಸಿದೆ. 5ಕ್ಕೂ ಹೆಚ್ಚು ವಾಹನಗಳು ಅಪಘಾಕ್ಕೀಡಾಗಿದೆ. ಅಪಘಾತದಲ್ಲಿ ಮಾಜಿ ಶಾಸಕ ಸಂಚರಿಸುತ್ತಿದ್ದ ಕಾರು ಜಖಂ ಗೊಂಡಿದೆ.
06:42 PM (IST) Jun 06
ಜಲಸಂಪನ್ಮೂಲ ಸಚಿವ ರಾಮಲಿಂಗಾ ರೆಡ್ಡಿ ತಮ್ಮ ರಾಜೀನಾಮೆ ವಾಪಸ್ ಪಡೆದಿದ್ದಾರೆ. ಈ ಮೂಲಕ ಕಳೆದೆರಡು ದಿನದಿಂದ ಸೃಷ್ಟಿಯಾಗಿದ್ದ ಗೊಂದಲಕ್ಕೆ ತೆರೆ ಎಳೆದಿದ್ದಾರೆ. ಇದೇ ವೇಳೆ ಮತ್ತೊಂದು ಗೂಗ್ಲಿ ಹಾಕಿದ್ದಾರೆ.
06:12 PM (IST) Jun 06
05:53 PM (IST) Jun 06
ಸಚಿವ ಸಂಪುಟ ಪುನಾರಚನೆ, ಖಾತೆ ಹಂಚಿಕೆ ಹಾಗೂ ಸಚಿವ ಸ್ಥಾನಗಳ ಕುರಿತ ಚರ್ಚೆಗಳು ರಾಜ್ಯ ರಾಜಕೀಯದಲ್ಲಿ ಸದ್ದು ಮಾಡುತ್ತಿರುವ ಬೆನ್ನಲ್ಲೇ, ಕೆಜಿಎಫ್ ಶಾಸಕಿಯಾಗಿರುವ ರೂಪಕಲಾ ಶಶಿಧರ್ ಮಹತ್ವದ ಪ್ರತಿಕ್ರಿಯೆ ನೀಡಿದ್ದಾರೆ.
05:33 PM (IST) Jun 06
ಭಟ್ಕಳದ ನದಿ ದುರಂತದಲ್ಲಿ 11 ಮಂದಿಯನ್ನು ಕಳೆದುಕೊಂಡ ಕುಟುಂಬಕ್ಕೆ ಶಾಸಕ ಮಂಕಾಳ ವೈದ್ಯ ಆಸರೆಯಾಗಿದ್ದಾರೆ. ತಮ್ಮ ಹುಟ್ಟುಹಬ್ಬದ ದಿನದಂದು, ಆ ಕುಟುಂಬದ ಸದಸ್ಯರೊಬ್ಬರಿಗೆ ಸಹಕಾರಿ ಬ್ಯಾಂಕ್‌ನಲ್ಲಿ ಉದ್ಯೋಗ ಕೊಡಿಸುವುದರ ಜೊತೆಗೆ, ಮೃತರ ನೆನಪಿಗಾಗಿ ಸಸಿಗಳನ್ನು ನೆಟ್ಟು ಮಾನವೀಯತೆ ಮೆರೆದಿದ್ದಾರೆ.
05:18 PM (IST) Jun 06
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಲ್ಲಘಟ್ಟದ ಗಂಗಾಧರೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ಮುಖ್ಯಮಂತ್ರಿ ಹುದ್ದೆ ಸ್ವೀಕರಿಸಿದ..
05:05 PM (IST) Jun 06
ಕನ್ನಡ ಚಿತ್ರರಂಗದಲ್ಲಿ ದಶಕಕ್ಕೂ ಹೆಚ್ಚು ಕಾಲದ ಸ್ನೇಹವನ್ನು ಹಂಚಿಕೊಂಡಿರುವ ರಕ್ಷಿತ್ ಮತ್ತು ರಿಷಬ್ ನಡುವಿನ ಸಂಬಂಧದ ಬಗ್ಗೆ ಇತ್ತೀಚೆಗೆ ಹಲವು ಊಹಾಪೋಹಗಳು ಕೇಳಿಬಂದಿದ್ದವು. ಆದರೆ ರಕ್ಷಿತ್ ಹುಟ್ಟುಹಬ್ಬದಂದು..
04:24 PM (IST) Jun 06
ಸಚಿವ ರಾಮಲಿಂಗಾ ರೆಡ್ಡಿ ರಾಜೀನಾಮೆ ಹೈಡ್ರಾಮ ಇದೀಗ ಮಹತ್ವದ ತಿರುವು ಪಡೆದುಕೊಂಡಿದೆ. ರಾಮಲಿಂಗಾ ರೆಡ್ಡಿ ರಾಜೀನಾಮೆ ವಾಪಸ್ ಪಡೆದಿದ್ದು, ಸಚಿವರಾಗಿ ಮುಂದುವರಿಯಲಿದ್ದಾರೆ ಎಂದು ಸುರ್ಜೆವಾಲ ಘೋಷಿಸಿದ್ದಾರೆ.
04:20 PM (IST) Jun 06
Actor thalapathy vijay Jana Nayagan Movie: ತಿಂಗಳುಗಳಿಂದ ನಿರೀಕ್ಷೆಯಲ್ಲಿರುವ 'ಜನ ನಾಯಗನ್' ಚಿತ್ರಕ್ಕೆ ಹೊಸದೊಂದು ಸಂಕಷ್ಟ ಎದುರಾಗಿದೆ. CM ವಿಜಯ್ ನಿಲುವನ್ನು ಕಾರಣವಾಗಿಟ್ಟುಕೊಂಡು ಕೆಲವು ಸಂಘಟನೆಗಳು ಚಿತ್ರದ ಬಿಡುಗಡೆಗೆ ವಿರೋಧ ವ್ಯಕ್ತಪಡಿಸುತ್ತಿವೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
03:47 PM (IST) Jun 06
03:38 PM (IST) Jun 06
ಸೋಶಿಯಲ್ ಮೀಡಿಯಾದಲ್ಲಿಯೂ ಪತಿಯೊಂದಿಗಿನ ಫೋಟೋಗಳನ್ನ ಶುಭಾ ಡಿಲೀಟ್ ಮಾಡಿದ್ದಾರೆ. ಪ್ರೀತಿಸಿ ಮದುವೆಯಾದ ಎಷ್ಟೋ ಜೋಡಿಗಳು ಹೀಗೆ ಅರ್ಧದಲ್ಲೇ ದೂರವಾಗ್ತಾ ಇರೋದು ನಿಜಕ್ಕೂ ವಿಪರ್ಯಾಸ. ಶುಭಾ ಪೂಂಜಾ ಡಿವೋರ್ಸ್ ಹಿಂದಿನ ನಿಖರವಾದ ಕಾರಣವೇನು? ಈ ಸ್ಟೋರಿ ನೋಡಿ…
02:12 PM (IST) Jun 06
"ನನ್ನ ಜೀವನದ ಕರಾಳ ದಿನಗಳಲ್ಲಿ ಅವರು ನನಗೆ ನೀಡಿದ ಬೆಂಬಲ ಮರೆಯಲು ಸಾಧ್ಯವಿಲ್ಲ. ಆದರೆ ಈಗ ಅವರಿಗೆ ನಾನು ನೆನಪಿದ್ದೇನೋ ಇಲ್ಲವೋ ಗೊತ್ತಿಲ್ಲ" ಎಂದು ಸೋನಾ ಕೊಂಚ ಭಾವುಕರಾಗಿಯೇ ನುಡಿದಿದ್ದಾರೆ. ವಿಘ್ನೇಶ್ ವ್ಯಕ್ತಿತ್ವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
01:28 PM (IST) Jun 06
ಸಿಎಂ ಪಟ್ಟವೇರಿರೋ ಡಿಕೆ, ದಳಪತಿ ಜೊತೆ ಫೈಟ್ ಮಾಡಬೇಕಾದ ಸನ್ನಿವೇಶ ನಿರ್ಮಾಣ ಆಗಿದೆ. ಈಗಷ್ಟೇ ಸಿಎಂ ಕುರ್ಚಿ ಏರಿರೋ ಇಬ್ಬರ ನಡುವೆ ಮೇಕೆದಾಟು ಮಹಾಸಮರ ನಡೆಯೋದು ಫಿಕ್ಸ್ ಅಗಿದೆ. ಒಟ್ನಲ್ಲಿ ಮೇಕೆದಾಟು ಯೋಜನೆ, ಕರ್ನಾಟಕ ಮತ್ತು ತಮಿಳುನಾಡು ನಡುವೆ ಮತ್ತೆ ಕಿಡಿ ಹಚ್ಚೋ ರೀತಿ ಕಾಣ್ತಾ ಇದೆ.
12:53 PM (IST) Jun 06
12:34 PM (IST) Jun 06
ಕರ್ಣ ಧಾರಾವಾಹಿ ನಟ ಅಶೋಕ್ ಅವರು “ನನಗೆ ಸೀರಿಯಲ್‌ನಲ್ಲಿ ನಟಿಸಲು ಇಷ್ಟವಿಲ್ಲ. ಬೆಳಿಗ್ಗೆಯಿಂದ ರಾತ್ರಿಯವರೆಗೆ ಅವರು ಹೇಳಿದಂತೆ ನಟಿಸಿ, ಡೈಲಾಗ್ ಹೇಳಬೇಕು, ಅದು ಗುಲಾಮಗಿರಿಯಂತೆ ಕಾಣುತ್ತದೆ ಎಂದಿದ್ದರು. ಇದನ್ನು ಭಾಗ್ಯಲಕ್ಷ್ಮೀ ಧಾರಾವಾಹಿ ನಟಿ ಸುನಿತಾ ಶೆಟ್ಟಿ ಅವರು ವಿರೋಧ ಮಾಡಿದ್ದಾರೆ.
12:21 PM (IST) Jun 06
ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮುಹೂರ್ತವು ಅತ್ಯಂತ ಕೆಟ್ಟದ್ದಾಗಿದೆ ಎಂದು ಜ್ಯೋತಿಷಿಗಳು ಭವಿಷ್ಯ ನುಡಿದಿದ್ದಾರೆ. ಕೆಟ್ಟ ಲಗ್ನದಿಂದಾಗಿ ಕಾಂಗ್ರೆಸ್ ಪಕ್ಷವು 2-3 ಭಾಗಗಳಾಗಿ ಒಡೆಯಲಿದೆ ಎಂದು ಖ್ಯಾತ ಜ್ಯೋತಿಷಿ ಮೀಥಾ ಕ್ರಿಸ್ಟಲ್ ಎಚ್ಚರಿಸಿದ್ದಾರೆ.
12:04 PM (IST) Jun 06
kwatle kitchen show: ‘ಕ್ವಾಟ್ಲೆ ಕಿಚನ್ 2’ ಗ್ಯ್ರಾಂಡ್ ಲಾಂಚ್ ಆಗಲಿದೆ. ಶನಿವಾರ, ಭಾನುವಾರ ರಾತ್ರಿ 9 ಗಂಟೆ ಪ್ರಸಾರ ಆಗಲಿದೆ. ‘ಕ್ವಾಟ್ಲೆ ಕಿಚನ್ 1’ ಶೋನಲ್ಲಿ ನಟಿ ಶ್ರುತಿ ಅವರು ಜಡ್ಜ್ ಆಗಿ, ಅನುಪಮಾ ಗೌಡ ಅವರು ನಿರೂಪಕಿಯಾಗಿ ಕಾಣಿಸಿಕೊಂಡಿದ್ದರು. ಈಗ ಇವರಿಬ್ಬರೂ ಹೊರಗಡೆ ಬಂದಿದ್ದಾರೆ. ಯಾಕೆ?
10:29 AM (IST) Jun 06
ಬಿಡದಿಯಲ್ಲಿ ಎಐ ಸಿಟಿ ಮಾಡಬೇಕು ಎಂದು ಸರ್ಕಾರ ಹೇಳಿದೆ. ಆದರೆ ಬಿಡದಿಯಲ್ಲಿರೋದು ಬರಡು ಭೂಮಿ ಅಲ್ಲ, ಫಲವತ್ತಾದ ಭೂಮಿ ಎಂದು ನಟಿ, ಬಿಗ್ ಬಾಸ್ ಸ್ಪರ್ಧಿ ಜಾನ್ವಿ ಅವರು ವಿಡಿಯೋ ಮಾಡಿ ಅಭಿಪ್ರಾಯವನ್ನು ಹೊರಹಾಕಿದ್ದಾರೆ.
10:16 AM (IST) Jun 06
09:07 AM (IST) Jun 06
07:58 AM (IST) Jun 06
07:44 AM (IST) Jun 06
07:34 AM (IST) Jun 06
07:04 AM (IST) Jun 06
06:50 AM (IST) Jun 06
ಜೂನ್ ತಿಂಗಳ ಪ್ರಯಾಣಿಕರ ದಟ್ಟಣೆ ನಿವಾರಿಸಲು ಭಾರತೀಯ ರೈಲ್ವೆ ಇಲಾಖೆಯು ಹೈದರಾಬಾದ್ ಮತ್ತು ಮಂಗಳೂರು ಸೆಂಟ್ರಲ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸೇವೆಯನ್ನು ಘೋಷಿಸಿದೆ. ಯಲಹಂಕ, ಕೆಆರ್ ಪುರಂ ಸೇರಿದಂತೆ ಹಲವು ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.
06:17 AM (IST) Jun 06
05:58 AM (IST) Jun 06
05:53 AM (IST) Jun 06
05:44 AM (IST) Jun 06
05:23 AM (IST) Jun 06