ಬೆಂಗಳೂರು: ರಾಜ್ಯದಲ್ಲಿ ದ್ವೇಷ ಭಾಷಣ ಹಾಗೂ ದ್ವೇಷದ ಅಪರಾಧ ತಡೆಗೆ ಪ್ರತ್ಯೇಕ ಕಾಯಿದೆ ಜಾರಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ 'ದ್ವೇಷ ಅಪರಾಧಗಳು ಮತ್ತು ದ್ವೇಷ(ಹೋರಾಟ, ತಡೆಯುವಿಕೆ) ವಿಧೇಯಕ 2025'ಕ್ಕೆ ಅನುಮೋದನೆ ಪಡೆಯುವ ಸಾಧ್ಯತೆಯಿದೆ. ಜೂನ್‌ನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಪ್ರಾಥಮಿಕವಾಗಿ ಕರಡು ವಿಧೇಯಕ ಪ್ರಸ್ತಾಪಿಸಲಾಗಿದ್ದು, ಅಂತಿಮ ವಿಧೇಯಕವು ಗುರುವಾರ ಅಂದರೆ ಇಂದು ಮಂಡನೆಯಾಗಲಿದೆ. ಅನುಮೋದನೆ ನೀಡಿದ ಬಳಿಕ ಬೆಳಗಾವಿ ಅಧಿವೇಶನದಲ್ಲಿ ಉಭಯ ಸದನಗಳಲ್ಲಿ ಮಂಡಿಸುವ ಸಾಧ್ಯತೆಯಿದೆ. ಈ ಕಾಯ್ದೆಯಡಿ ಧಾರ್ಮಿಕ, ಜನಾಂಗೀಯ, ಜಾತಿ ಅಥ ವಾ ಸಮುದಾಯ, ಲಿಂಗ, ಲೈಂಗಿಕ ದೃಷ್ಟಿಕೋನ, ಜನ್ಮಸ್ಥಳ, ಭಾಷೆ, ನಿವಾಸ, ಅಂಗವೈಕಲ್ಯ, ಬುಡ ಕಟ್ಟು ಕುರಿತು ಯಾವುದೇ ವ್ಯಕ್ತಿಗೆ ಹಾನಿ ಮಾಡುವ ಅಥವಾ ದ್ವೇಷವನ್ನು ಉತ್ತೇಜಿಸುವ ಅಥವಾ ಪ್ರಚಾರ ಮಾಡುವ ವ್ಯಕ್ತಿ ಅಥವಾ ಗುಂಪಿಗೆ ಮೂರು ವರ್ಷಗಳ ಕಾಲ ಶಿಕ್ಷೆ ವಿಧಿಸಬಹುದು ಅಥವಾ 5 ಸಾವಿರ ರು. ದಂಡದ ಜತೆಗೆ ಶಿಕ್ಷೆ ವಿಧಿಸಬಹುದು ಎಂದು ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ.

11:24 PM (IST) Dec 04
ಬಾಲಯ್ಯ ನಟನೆಯ ಅಖಂಡ 2 ಚಿತ್ರದ ಬಗ್ಗೆ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಈ ಚಿತ್ರದ ಪ್ರೀಮಿಯರ್ ಶೋಗಳನ್ನು ರದ್ದುಗೊಳಿಸಲಾಗಿದೆ ಎಂದು ನಿರ್ಮಾಪಕರು ಪ್ರಕಟಿಸಿದ್ದಾರೆ. ಅಖಂಡ 2 ಪ್ರೀಮಿಯರ್ ಶೋಗಳು ಯಾಕೆ ದಿಢೀರ್ ರದ್ದಾದವು ಎಂಬ ವಿವರ ಇಲ್ಲಿದೆ.
11:02 PM (IST) Dec 04
ಒಂದಾನೊಂದು ಕಾಲದ ಸ್ಟಾರ್ ನಟಿ ಸೌಂದರ್ಯ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದ ವಿಷಯ ಎಲ್ಲರಿಗೂ ಗೊತ್ತೇ ಇದೆ. ಆದರೆ ಮೋಹನ್ ಬಾಬು ಮಾಡಿದ ತಪ್ಪಿನಿಂದಲೇ ಸೌಂದರ್ಯ ನಮ್ಮ ಜೊತೆಗಿಲ್ಲ ಎಂದು ನಿರ್ದೇಶಕರೊಬ್ಬರು ಆಘಾತಕಾರಿ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ.
11:00 PM (IST) Dec 04
ಚಿತ್ರರಂಗದಲ್ಲಿ ಸ್ಟಾರ್ ನಟಿಯರಾಗಿ ಮೆರೆದ ಹಲವಾರು ನಟಿಯರು ವಿಚ್ಛೇದಿತ ಪುರುಷರನ್ನು ಮದುವೆಯಾಗಿ ಸುದ್ದಿಯಲ್ಲಿದ್ದಾರೆ. ಕರೀನಾ ಕಪೂರ್ ನಿಂದ ಹಿಡಿದು, ಸಮಂತಾ ರುತ್ ಪ್ರಭುವರೆಗೂ ಹಲವಾರು ನಟಿಯರು ಈಗಾಗಲೇ ಮದುವೆಯಾಗಿರುವ ಪುರುಷರನ್ನು ಮದುವೆಯಾಗಿ ಹ್ಯಾಪಿಯಾಗಿದ್ದಾರೆ.
10:24 PM (IST) Dec 04
ಭಾರತೀಯ ನೌಕಾ ದಿನಾಚರಣೆಯ ಪ್ರಯುಕ್ತ ಕಾರವಾರದ ಐ.ಎನ್.ಎಸ್ ಕದಂಬ ನೌಕಾನೆಲೆಯ ನೌಕಾದಳ ಭವನದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಗವಹಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
09:51 PM (IST) Dec 04
ಡಿಸೆಂಬರ್ 4ರಂದು ರೇಣು ದೇಸಾಯಿ ತಮ್ಮ 44ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ರೇಣು ದೇಸಾಯಿ ಅವರ ವೃತ್ತಿಜೀವನ, ಮೊದಲ ಚಿತ್ರ 'ಬದ್ರಿ' ಬಗ್ಗೆ ವಿಶೇಷ ಸಂಗತಿಗಳು ವೈರಲ್ ಆಗುತ್ತಿವೆ. ಆ ವಿವರಗಳನ್ನು ಈ ಲೇಖನದಲ್ಲಿ ತಿಳಿಯೋಣ.
09:32 PM (IST) Dec 04
ರಾಜ್ಯ ಸರ್ಕಾರ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಿ, ಕಂದಾಯ ಸೇರಿದಂತೆ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ, ದತ್ತಪೀಠದ ವಿಚಾರದಲ್ಲಿ ನ್ಯಾಯ ನೀಡಲು ಹೆಜ್ಜೆ ಇಡಬೇಕು ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಆಗ್ರಹಿಸಿದರು.
09:23 PM (IST) Dec 04
ಬಿಲ್ಲವ ಸಮುದಾಯಕ್ಕೆ ಸೇರಿದ ಕೇರಳದ ಶಿವಗಿರಿ ಮಠದ ಶಾಖಾ ಮಠಕ್ಕೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 5 ಎಕರೆ ಜಾಗ ನೀಡಲು ಬದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
09:12 PM (IST) Dec 04
ಕಳೆದ ಎರಡು ವರ್ಷಗಳಿಂದ ಹದಗೆಟ್ಟ ಕಾಂಗ್ರೆಸ್ ಸರ್ಕಾರದ ಆಡಳಿತ ನೋಡಿ ಜನತೆ ಬೇಸತ್ತಿದ್ದಾರೆ. ಇದು ರಾಜ್ಯದಲ್ಲೇ ಕಾಂಗ್ರೆಸ್ ಪಕ್ಷದ ಕೊನೆಯ ಸರ್ಕಾರ. ರಾಜ್ಯದಲ್ಲಿ ಇನ್ನು ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು.
09:05 PM (IST) Dec 04
ಪಕ್ಷದ ಅಭಿಮಾನಿಗಳ ನೇತೃತ್ವದಲ್ಲಿ ಮಹಾಲಕ್ಷ್ಮೀ ವೃತ್ತದಲ್ಲಿ ನೂರಾರು ಟ್ರ್ಯಾಕ್ಟರ್ ಮೂಲಕ ಡಿ. 6ರಂದು ಮುಂಜಾನೆ 10.30ಕ್ಕೆ ಹೆದ್ದಾರಿ ಬಂದ್ ಮಾಡುವ ಮೂಲಕ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
08:53 PM (IST) Dec 04
ಇಂಡಿಯನ್ 3 ಮುಗಿದ ನಂತರ 2026ರಲ್ಲಿ ಶಂಕರ್ ನಿರ್ದೇಶನದ ಹೊಸ ಚಿತ್ರದ ಶೂಟಿಂಗ್ ಶುರುವಾಗಲಿದೆ. ಈ ಚಿತ್ರದಲ್ಲಿ ಬಾಲಿವುಡ್‌ನ ಪ್ರಮುಖ ನಟರೊಬ್ಬರು ನಟಿಸಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
08:46 PM (IST) Dec 04
08:40 PM (IST) Dec 04
ಗೂಗಲ್ 2025ರ ಭಾರತೀಯರ ಅತಿ ಹೆಚ್ಚು ಹುಡುಕಿದ ಸ್ಥಳಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಧಾರ್ಮಿಕ ಸ್ಥಳ ಮೊದಲ ಸ್ಥಾನದಲ್ಲಿದೆ. ಇದರೊಂದಿಗೆ, ಬೀಚ್‌ಗಳು ಮತ್ತು ದ್ವೀಪಗಳೂ ಸಹ ಪ್ರಯಾಣಿಕರ ಆಯ್ಕೆಯಲ್ಲಿ ಪ್ರಾಬಲ್ಯ ಸಾಧಿಸಿವೆ.
08:35 PM (IST) Dec 04
ವನ್ಯಜೀವಿಗಳ ಸಂಖ್ಯೆಯಲ್ಲಿ ಹೆಚ್ಚಳ ಆಗುತ್ತಿರುವುದು ಮಾನವ-ವನ್ಯಜೀವಿ ಸಂಘರ್ಷಕ್ಕೆ ಕಾರಣವಾಗಿದೆ. ಅತ್ಯಾಧುನಿಕ ತಂತ್ರಜ್ಞಾನದ ಬಳಕೆ ಹಾಗೂ ಸಹಬಾಳ್ವೆಯಿಂದ ಮಾತ್ರ ಇದರ ನಿಯಂತ್ರಣ ಸಾಧ್ಯ ಎಂದು ಸಚಿವ ಈಶ್ವರ್ ಖಂಡ್ರೆ ಅಭಿಪ್ರಾಯ ಪಟ್ಟಿದ್ದಾರೆ.
08:26 PM (IST) Dec 04
ಬೆಂಗಳೂರಿನ ಎಂಜಿನಿಯರ್ ಅಮರ್ ಸುಬ್ರಹ್ಮಣ್ಯ ಅವರನ್ನು ಆಪಲ್ ತನ್ನ ಕೃತಕ ಬುದ್ಧಿಮತ್ತೆ (AI) ವಿಭಾಗದ ಉಪಾಧ್ಯಕ್ಷರನ್ನಾಗಿ ನೇಮಿಸಿದೆ. ಈ ಹಿಂದೆ ಗೂಗಲ್ ಮತ್ತು ಮೈಕ್ರೋಸಾಫ್ಟ್‌ನಂತಹ ದೈತ್ಯ ಕಂಪನಿಗಳಲ್ಲಿ ಸೇವೆ ಸಲ್ಲಿಸಿದ್ದ ಅಮರ್, ಈಗ ಆಪಲ್‌ನ AI ಮಾಡೆಲ್ ಸಂಶೋಧನೆಯನ್ನು ಮುನ್ನಡೆಸಲಿದ್ದಾರೆ.
08:25 PM (IST) Dec 04
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಕ್ಷಯ ರೋಗ ಪರೀಕ್ಷಾ ಯಂತ್ರಕ್ಕೆ (CBNAAT) ಚಾಲನೆ ನೀಡಿದರು. 90 ನಿಮಿಷಗಳಲ್ಲಿ ನಿಖರವಾಗಿ ಕ್ಷಯ ರೋಗವನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚುವ ಸಾಮರ್ಥ್ಯ ಹೊಂದಿವೆ.
08:24 PM (IST) Dec 04
ಮೋದಿ 10 ಲಕ್ಷ ರೂ ಕೋಟ್ ಹಾಕ್ತಾರೆ, ಕಾಂಗ್ರೆಸಿಗರ ಕೈ ಬದಲು, ಬಿಜೆಪಿಗರ ನೋಡಿ ಎಂದ ಸಂತೋಷ್ ಲಾಡ್, ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ದುಬಾರಿ ವಾಚ್ ಕಟ್ಟಿರುವ ಕುರಿತು ರಾಜ್ಯದಲ್ಲಿ ಭಾರಿ ಚರ್ಚೆಯಾಗಿದೆ. ಇದರ ಬೆನ್ನಲ್ಲೇ ಸಂತೋಷ್ ಲಾಡ್ ಪ್ರತಿಕ್ರಿಯಿಸಿದ್ದಾರೆ.
08:16 PM (IST) Dec 04
'ಕಾಂತಾರ' ಚಿತ್ರದ ಅಭೂತಪೂರ್ವ ಯಶಸ್ಸಿನ ಹಿನ್ನೆಲೆಯಲ್ಲಿ, ನಟ-ನಿರ್ದೇಶಕ ರಿಷಬ್ ಶೆಟ್ಟಿ ಮತ್ತು ಹೊಂಬಾಳೆ ಫಿಲ್ಮ್ಸ್ ತಂಡವು ಮಂಗಳೂರಿನ ದೈವಸ್ಥಾನದಲ್ಲಿ ಹರಕೆ ನೇಮೋತ್ಸವವನ್ನು ನೆರವೇರಿಸಿದರು. ಈ ಹಿಂದೆ ದೈವವು ನೀಡಿದ್ದ ಸೂಚನೆಯಂತೆ ದೈವದ ಆಶೀರ್ವಾದವನ್ನು ಪಡೆದುಕೊಂಡಿದೆ.
08:09 PM (IST) Dec 04
ಕಾಂಗ್ರೆಸ್‌ನಲ್ಲಿ ಆಂತರಿಕ ಕಚ್ಚಾಟದಿಂದ ರಾಜ್ಯದ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ. ಈ ನಾಡಿನ ರೈತರ ಬಗ್ಗೆ ಸರ್ಕಾರ ಅಸೆಡ್ಡೆ ತೋರುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.
08:01 PM (IST) Dec 04
ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಕೋಲಾರ ಜಿಲ್ಲೆ ಮುಖಂಡರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ. ಯಾವುದೇ ಅಧಿಕೃತ ಪಕ್ಷದ ಹುದ್ದೆ ಇಲ್ಲದಿದ್ದರೂ ಈ ಸೇರ್ಪಡೆ ಕಾರ್ಯಕ್ರಮ ನಡೆಸಿದ್ದಾರೆ. ಇದು ಮುಂದಿನ ಕೆಪಿಸಿಸಿ ಅಧ್ಯಕ್ಷರಾಗುವ ಸಾಧ್ಯತೆ ಬಗ್ಗೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿದೆ.
07:50 PM (IST) Dec 04
ಲಾಕ್‌ಡೌನ್ ಎಂಬ ಪದ ಕೇಳಿದ ತಕ್ಷಣ ಜನರಲ್ಲಿ ಒಂದು ರೀತಿಯ ಆತಂಕ ಉಂಟಾಗುತ್ತದೆ. ಡಿ.5ರಿಂದ ಲಾಕ್‌ಡೌನ್ ಎಂದು ಈಗಾಗಲೇ ಘೋಷಿಸಲಾಗಿತ್ತು, ಆದರೆ ಇನ್ನು ಕೆಲವೇ ದಿನಗಳಿರುವಾಗ, ಅದನ್ನು ಬೇರೆ ದಿನಾಂಕಕ್ಕೆ ಮುಂದೂಡಲಾಗಿದೆ.
07:49 PM (IST) Dec 04
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ ನಡೆಯಲಿದೆ. ಕೆ ಎನ್ ಶಾಂತಕುಮಾರ್ ನಾಮಪತ್ರ ಸಿಂಧು ಆದೇಶ ಪ್ರಶ್ನಿಸಿದ್ದ ಸಲ್ಲಿಸಿದ್ದ ಅರ್ಜಿ ವಜಾಗೊಳ್ಳುವ ಮೂಲಕ ಚುನಾವಣೆಗೆ ಎದುರಾಗಿದ್ದ ಮತ್ತೊಂದು ತಡೆ ನಿವಾರಣೆಯಾಗಿದೆ.
07:49 PM (IST) Dec 04
07:23 PM (IST) Dec 04
ಬಿಗ್ಬಾಸ್ ಮನೆಯಿಂದ ಹೊರಬಂದಿರುವ ಆ್ಯಂಕರ್ ಜಾಹ್ನವಿ, ತಾವು ಫೈನಲಿಸ್ಟ್ ಆಗುವ ನಿರೀಕ್ಷೆಯಲ್ಲಿದ್ದುದಾಗಿ ಹೇಳಿಕೊಂಡಿದ್ದಾರೆ. ಸ್ಪಂದನಾ ಸೋಮಣ್ಣ ಹಾಗೂ ವಾಹಿನಿಯ ಬಗ್ಗೆ ನೀಡಿದ್ದ ವಿವಾದಿತ ಹೇಳಿಕೆ ಕುರಿತು ಇದೀಗ ಸಂದರ್ಶನವೊಂದರಲ್ಲಿ ಸ್ಪಷ್ಟನೆ ನೀಡಿದ್ದಾರೆ.
07:21 PM (IST) Dec 04
ಜನಕನ ಅಳಿಯ ಶ್ರೀರಾಮ ಅಂತಾ ಬಹಳಷ್ಟು ಮಂದಿ ನಂಬಿದ್ದಾರೆ, ಆದರೆ ಈ ಲೇಖನವು ರಾಮಾಯಣದ ಒಂದು ಅಡಗಿದ ಸತ್ಯವನ್ನು ತಿಳಿಸುತ್ತದೆ. ರಾಮಾಯಣದ ಕಥೆ ಕೇಳಿದ್ರೆನೇ ಖುಷಿಯಾಗುತ್ತೆ, ಅದರ ಬಗ್ಗೆ ಗೊತ್ತಿಲ್ಲದ ವಿಷಯ ತಿಳಿದರೆ ಇನ್ನೂ ಹೆಚ್ಚು ಸಂತೋಷ ಸಿಗುತ್ತೆ.
07:00 PM (IST) Dec 04
ರಾಜ್ಯ ಸರ್ಕಾರ ಕನಿಷ್ಠ 12ರಿಂದ ಗರಿಷ್ಠ 20 ಕ್ವಿಂಟಲ್ ಮೆಕ್ಕೆಜೋಳವನ್ನು ಬೆಂಬಲ ಬೆಲೆಯಡಿ ಪ್ರತಿ ಕ್ವಿಂಟಲ್‌ಗೆ ₹2400ರಂತೆ ಖರೀದಿಸಲಾಗುವುದು ಎಂದು ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.
06:47 PM (IST) Dec 04
'ನಾ ನಿನ್ನ ಬಿಡಲಾರೆ' ಧಾರಾವಾಹಿಯಲ್ಲಿ ಅಂಬಿಕಾಳ ಆತ್ಮದ ಗುಟ್ಟು ಮಾಳವಿಕಾಗೆ ತಿಳಿದಿದೆ. ಇದರ ನಡುವೆ ನಟಿ ನೀತಾ ಅಶೋಕ್ ಬೇರೊಂದು ಮಗುವಿನೊಂದಿಗೆ ಕಾಣಿಸಿಕೊಂಡಿದ್ದು, ಹಿತಾ ಪಾತ್ರ ಬದಲಾಯಿತೇ ಎಂಬ ಗೊಂದಲಕ್ಕೆ ಕಾರಣವಾಗಿದೆ. ಈ ಲೇಖನವು ಈ ಕುರಿತ ಸತ್ಯಾಂಶ ಇಲ್ಲಿದೆ.
06:33 PM (IST) Dec 04
'ಬಿಗ್ ಬಾಸ್' ಸ್ಪರ್ಧಿ ಜಾಹ್ನವಿ, ತಮ್ಮ ವೈಯಕ್ತಿಕ ಜೀವನದ ನೋವನ್ನು ಹಂಚಿಕೊಂಡಿದ್ದಾರೆ. ಪತಿ ಮತ್ತು ಕುಟುಂಬಕ್ಕಾಗಿ 'ವಾರಸ್ಧಾರ' ಧಾರಾವಾಹಿಯಂತಹ ದೊಡ್ಡ ಅವಕಾಶವನ್ನು ತ್ಯಾಗ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.
06:20 PM (IST) Dec 04
ಇಂಡಿಗೋ ವಿಮಾನ ಪ್ರಯಾಣ ರದ್ದು, ವಿಳಂಬವಾದರೆ ಟಿಕೆಟ್ ಹಣ ರೀಫಂಡ್ ಹೇಗೆ? ಬೆಂಗಳೂರು ಸೇರಿದಂತೆ ದೇಶಾದ್ಯಂತ 300ಕ್ಕೂ ಹೆಚ್ಚು ಇಂಡಿಗೋ ವಿಮಾನ ಹಾರಾಟ ರದ್ದಾಗಿದೆ. ಹಲವು ಪ್ರಯಾಣ ವಿಳಂಬವಾಗಿದೆ. ಹೀಗಾದಲ್ಲಿ ಟಿಕೆಟ್ ರೀಫಂಡ್ ಮಾಡುವುದು ಹೇಗೆ?
06:06 PM (IST) Dec 04
ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ರುತ್ ಪ್ರಭು ಸಮಂತಾ ಅವರ ಎರಡನೇ ಮದುವೆಯ ಸುದ್ದಿ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದ್ದಾಗ, ಈಗ ಶೋಭಿತಾ ಧುಲಿಪಾಲ ಹಂಚಿಕೊಂಡ ಗುಡ್ ನ್ಯೂಸ್ ಅದನ್ನು ಹಿಂದಿಕ್ಕಿದೆ.
06:01 PM (IST) Dec 04
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ, ಅಂತಿಮ ವರದಿ ಸಲ್ಲಿಸಲು ಪ್ರಾಸಿಕ್ಯೂಷನ್‌ಗೆ ಹೆಚ್ಚಿನ ಸಮಯ ನೀಡಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಿರಾಕರಿಸಿದೆ. ಡಿಸೆಂಬರ್ 18ರೊಳಗೆ ವರದಿ ಸಲ್ಲಿಸಲು ಖಡಕ್ ಗಡುವು ನೀಡಿದೆ.
05:38 PM (IST) Dec 04
ಮುಖ್ಯಮಂತ್ರಿ ಬದಲಾವಣೆ ಚರ್ಚೆಯ ನಡುವೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ದೆಹಲಿಗೆ ತೆರಳಿರುವ ಕುರಿತು ಮಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ‘ಡಿಕೆಶಿ ದೆಹಲಿಗೆ ಹೋದರೆ ಹೋಗಲಿ. ಬೇಡ ಅಂದವರು ಯಾರು’ ಎಂದಿದ್ದಾರೆ.
05:29 PM (IST) Dec 04
Dhurandhar Review: ನಟ ರಣವೀರ್ ಸಿಂಗ್ ಅವರ ಮುಂಬರುವ ಚಿತ್ರವು ಬಿಡುಗಡೆಗೆ ತಿಂಗಳುಗಳ ಮೊದಲೇ ರಾಷ್ಟ್ರದ ಗಮನ ಸೆಳೆದಿದೆ. ಡಿಸೆಂಬರ್ 5 ರಂದು ಚಿತ್ರದ ಭವ್ಯವಾದ ಥಿಯೇಟ್ರಿಕಲ್ ಬಿಡುಗಡೆಗೆ ಪ್ರೇಕ್ಷಕರು ಸಜ್ಜಾಗುತ್ತಿದ್ದಂತೆ, ಸಿನಿಮಾ ಆನ್‌ಲೈನ್‌ನಲ್ಲಿ ಭಾರಿ ಸಂಚಲನ ಸೃಷ್ಟಿಸುತ್ತಿದೆ.
05:24 PM (IST) Dec 04
ರಾಜ್ಯದಲ್ಲಿ ಆಡಳಿತವಿರುವ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಬಡವರ ಕಣ್ಣೀರೊರೆಸುವ ಕೆಲಸ ಮಾಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
05:24 PM (IST) Dec 04
05:15 PM (IST) Dec 04
ಝೈದ್ ಖಾನ್, ರಚಿತಾ ರಾಮ್ ಹಾಗೂ ಮಲೈಕಾ ವಸುಪಾಲ್ ನಟನೆಯ ‘ಕಲ್ಟ್’ ಚಿತ್ರದ ಬ್ರೇಕಪ್ ಸಾಂಗ್ ‘ನಿನ್ನಲ್ಲೇ ನಾನಿರೇ’ ಜನಮೆಚ್ಚುಗೆ ಗಳಿಸಿದೆ. ಅನಿಲ್ ಕುಮಾರ್‌ನಿರ್ದೇಶನದ ‘ಕಲ್ಟ್’ ಸಿನಿಮಾ ಜ.23ರಂದು ಬಿಡುಗಡೆಯಾಗಲಿದೆ.
05:11 PM (IST) Dec 04
ಧರ್ಮಸ್ಥಳ ಕೇಸ್‌ನಲ್ಲಿ ಚಿನ್ನಯ್ಯನ ಜಾಮೀನಿಗೆ ಶ್ಯೂರಿಟಿ ನೀಡಲು ಆಗುತ್ತಿಲ್ಲ, ಕಾರಣ ಹೇಳಿದ ಮಟ್ಟಣ್ಣನವರ್, ಚಿನ್ನಯ್ಯನಿಗೆ ಜಾಮೀನು ಸಿಕ್ಕರೂ ಶ್ಯೂರಿಟಿ ನೀಡಲು ಯಾರೂ ಮುಂದೆ ಬಂದಿಲ್ಲ. ಈ ಕುರಿತು ಗಿರೀಶ್ ಮಟ್ಟಣ್ಣನವರ್ ಪ್ರತಿಕ್ರಿಯಿಸಿದ್ದಾರೆ.
04:51 PM (IST) Dec 04
ರವಿಚಂದ್ರನ್ ಪುತ್ರ ಮನೋರಂಜನ್ ಮೊದಲ ಬಾರಿ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಿ.ಕೆ.ಚಂದ್ರಹಾಸ ನಿರ್ದೇಶನದ ‘ಕೌಂತೇಯ’ ಎಂಬ ಮರ್ಡರ್ ಮಿಸ್ಟ್ರಿಯಲ್ಲಿ ವಿಶಿಷ್ಟ ಪಾತ್ರದಲ್ಲಿ ನಟಿಸುತ್ತಿದ್ದಾರೆ.
04:50 PM (IST) Dec 04
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್‌ಗೆ ಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ. ಸಾಕ್ಷಿಗಳ ವಿಚಾರಣೆ ಕುರಿತು ದರ್ಶನ್ ಪರ ವಕೀಲರ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದ್ದು, ರೇಣುಕಾಸ್ವಾಮಿ ಪೋಷಕರಿಗೆ ಸಮನ್ಸ್ ಜಾರಿ ಮಾಡಿದೆ.
04:38 PM (IST) Dec 04
Kannada Tv TRP Rating: ಕನ್ನಡ ಕಿರುತೆರೆಯ ಟಿಆರ್‌ಪಿ ರಿಲೀಸ್ ಆಗಿದೆ. ಈ ವಾರ ಟಿಆರ್‌ಪಿ ಸೂಪರ್ ಆಗಿ ಬಂದಿರುವ ಹಾಗೆ ಕಾಣ್ತಿದೆ. ಸೀರಿಯಲ್, ರಿಯಾಲಿಟಿ ಶೋಗಳ ಮಧ್ಯೆ ಭಾರೀ ಪೈಪೋಟಿ ನಡೆದಿದ್ದು, ಟಿಆರ್‌ಪಿ ಕೂಡ ಚೆನ್ನಾಗಿ ಬಂದಿದೆ. ಹಾಗಾದರೆ ಯಾರಿಗೆ ಎಷ್ಟು ಬಂತು?
04:34 PM (IST) Dec 04
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಅಕ್ಕಿಆಲೂರು ಸರ್ಕಾರಿ ಕಾಲೇಜಿನಲ್ಲಿ ಹಿಜಾಬ್-ಕೇಸರಿ ಶಾಲು ವಿವಾದ ಮತ್ತೆ ಭುಗಿಲೆದ್ದಿದೆ. ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿದ್ದಕ್ಕೆ ಪ್ರತಿಯಾಗಿ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ತರಗತಿಗಳಿಗೆ ಹಾಜರಾಗಿದ್ದಾರೆ.