ಬೆಂಗಳೂರು (ಮೇ.31): ಇಡೀ ಕನ್ನಡ ನಾಡು ಹಾಗೂ ಕನ್ನಡಿಗರ ಅಸ್ಮಿತೆಗೆ ಧಕ್ಕೆ ತರುವಂತ ಹೇಳಿಕೆ ನೀಡಿದ್ದರೂ ತನ್ನ ಹೇಳಿಕೆಯ ಬಗ್ಗೆ ಕ್ಷಮೆ ಕೇಳೋದೇ ಇಲ್ಲ ಎಂದು ಕಮಲ್ ಹಾಸನ್ ಧಿಮಾಕು ತೋರಿಸಿದ್ದಾರೆ. ಕನ್ನಡ ಚಿತ್ರರಂಗದ ಗಡುವಿಗೂ ಡೋಂಟ್‌ಕೇರ್ ಎಂದಿದ್ದಾರೆ. ನಿಷೇಧದಂಥ ಬೆದರಿಕೆ ಹಿಂದೆಯೂ ಎದುರಿಸಿದ್ದೇನೆ ಎಂದು ಹೇಳಿದ್ದಾರೆ. ಇನ್ನೊಂದೆಡೆ ರಾಜ್ಯಾದ್ಯಂತ ಹಿರಿಯ ಕವಿ ಎಚ್‌ಎಸ್ ವೆಂಕಟೇಶ್ ಮೂರ್ತಿ ಅಗಲಿಕೆಗೆ ಅಕ್ಷರ ಶ್ರದ್ಧಾಂಜಲಿ ವ್ಯಕ್ತವಾಗಿದ್ದು, ಹಿರಿಯ ಕವಿಗಳು, ಪತ್ರಕರ್ತರು, ವಿಮರ್ಶಕರು ಸಂತಾಪ ವ್ಯಕ್ತಪಡಿಸಿದ್ದಾರೆ.

12:06 AM (IST) Jun 01
ವಿಶ್ವ ಸುಂದರಿ ಕಿರೀಟ ಗೆದ್ದ ಒಪಾಲ್ ಸುಚಾತಾ ಹೋರಾಟ ಎಲ್ಲರಿಗೂ ಮಾದರಿಯಾಗಿದೆ. 16ನೇ ವಯಸ್ಸಿನಲ್ಲೇ ಕ್ಯಾನ್ಸರ್‌ಗೆ ತುತ್ತಾದ ಈ ಸುಂದರಿ ಚಿಕ್ಕ ವಯಸ್ಸಿನಿಂದಲೇ ಹೋರಾಟ ಆರಂಭಿಸಿದ್ದಾಳೆ. ಈ ಹೋರಾಟ ಇದೀಗ ವಿಶ್ವ ಸುಂದರಿ ಪಟ್ಟ ಗಿಟ್ಟಿಸಿಕೊಳ್ಳುವಲ್ಲಿ ವರೆಗೆ ಬಂದಿದೆ.
11:39 PM (IST) May 31
ಬಿಜೆಪಿ ನಾಯಕಿ ಪುತ್ರನ ಕಾಮಕಾಂಡ ಬಯಲಾಗಿದೆ. ಬರೋಬ್ಬರಿ 130 ಅಶ್ಲೀಲ ವಿಡಿಯೋಗಳು ಇದೀಗ ವೈರಲ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಕೋಲಾಹಲ ಸೃಷ್ಟಿಯಾಗಿದೆ.
11:15 PM (IST) May 31
10:52 PM (IST) May 31
ಹೈದರಾಬಾದ್‌ನಲ್ಲಿ ನಡೆದ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾರತದ ನಂದಿನಿ ಗುಪ್ತಾಗೆ ನಿರಾಸೆಯಾಗಿದೆ. ನಂದಿನಿ ಗುಪ್ತಾ ಹಿಂದಿಕ್ಕಿ ಥೈಲ್ಯಾಂಡ್ ಸುಂದರಿ ಇದೀಗ ವಿಶ್ವ ಸುಂದರಿ ಕಿರೀಟ ಧರಿಸಿದ್ದಾರೆ.
10:25 PM (IST) May 31
ಜನಸಂಖ್ಯೆಯಲ್ಲಿ ಭಾರತ ಚೀನಾವನ್ನು ಹಿಂದಿಕ್ಕಿದೆ. ಭಾರತದ ಜನಸಂಖ್ಯೆಗೆ ಹೆಚ್ಚಿನ ಕೊಡುಗೆ ನೀಡುತ್ತಿರುವ ಮೆಟ್ರೋ ಸಿಟಿ ಯಾವುದು? ಅತೀ ಕಡಿಮೆ ಜನನ ಪ್ರಮಾಣದ ನಗರ ಯಾವುದು?
10:11 PM (IST) May 31
09:41 PM (IST) May 31
ಚಿನ್ನ ದುಬಾರಿ ಎಂದು ಕಷ್ಟಪಟ್ಟು ಚಿನ್ನದ ಮೇಲೆ ಹೂಡಿಕೆ ಪ್ಲಾನ್ ಮಾಡುತ್ತಿದ್ದೀರಾ? ಚಿನ್ನಕ್ಕಿಂತ ಬೆಳ್ಳಿ ಮೇಲಿನ ಹೂಡಿಕೆಯಲ್ಲಿ ಲಾಭ ಹೆಚ್ಚು ಅಂತಾರೆ ತಜ್ಞರು. ಕಡಿಮೆ ಮೊತ್ತ ಹೂಡಿಕೆ ಮಾಡಿ ಹೆಚ್ಚು ಲಾಭಗಳಿಸಲು ಬೆಳ್ಳಿ ಉತ್ತಮವೇ?
09:04 PM (IST) May 31
ರಿಲಯನ್ಸ್ ಜಿಯೋ ನೀಡುತ್ತಿರುವ ಭರ್ಜರಿ ಆಫರ್ ಬೆನ್ನಲ್ಲೇ ಇದೀಗ ಗ್ರಾಹಕರ ಸಂಖ್ಯೆಯೂ ಹೆಚ್ಚಾಗಿದೆ. ಕಳೆದ ತಿಂಗಳು 1.2 ಲಕ್ಷ ಗ್ರಾಹಕರು ಕರ್ನಾಟಕದಲ್ಲಿ ಜಿಯೋಗೆ ಸೇರ್ಪಡೆಗೊಂಡಿದ್ದಾರೆ. ಈ ಮೂಲಕ ದೇಶದಲ್ಲಿ ಜಿಯೋ ಗ್ರಾಹಕರ ಸಂಖ್ಯೆ ಎಷ್ಟಾಗಿದೆ ಗೊತ್ತಾ?
08:19 PM (IST) May 31
ನಂದಮೂರಿ ಬಾಲಕೃಷ್ಣ ಮಾಡಿದ್ದೊಂದು ಕೆಲಸಕ್ಕೆ ಸೆಟ್‌ನಲ್ಲೇ ಒಬ್ಬ ನಟಿ ಬಿಕ್ಕಿ ಬಿಕ್ಕಿ ಅತ್ತರಂತೆ. ಆ ನಟಿಗೆ ಬಾಲಯ್ಯ ಏನಂದ್ರು? ಅತ್ತ ಆ ಸ್ಟಾರ್ ನಟಿ ಯಾರು? ಆಮೇಲೆ ಬಾಲಕೃಷ್ಣ ಏನ್ ಮಾಡಿದ್ರು ಗೊತ್ತಾ?
08:09 PM (IST) May 31
'ಕಲಾವಿದನಾಗಿ ಭಾಷೆ ಬಗ್ಗೆ ಮಾತಾಡಿದಾಗ ಚಪ್ಪಾಳೆ ತಟ್ಟಿದ್ದೆ' ಎಂದು ಕೊನೆಗೂ ಕನ್ನಡ ಅವಮಾನದ ಬಗ್ಹೆ ಮೌನ ಮುರಿದಿದ್ದಾರೆ ನಟ, ಡಾ ರಾಜ್‌ಕುಮಾರ್ ಹಿರಿಯ ಮಗ ಶಿವಣ್ಣ. 'ಕಮಲಹಾಸನ್ ಹೇಳಿಕೆಯನ್ನ ಸಮರ್ಥನೆ ಮಾಡಿಕೊಳ್ಳಲ್ಲ' ಎಂದು ಇದೀಗ ನಟ ಶಿವರಾಜ್‌ಕುಮಾರ್ ಅವರು ಹೇಳಿದ್ದಾರೆ..
07:56 PM (IST) May 31
ಆರ್‌ಸಿಬಿ ಫೈನಲ್ ಪಂದ್ಯಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಈಗಾಗಲೇ ಆರ್‌ಸಿಬಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಸೋಶಿಯಲ್ ಮೀಡಿಯಾದಲ್ಲಿ ಆರ್‌ಸಿಬಿಗೆ ಶುಭ ಹಾರೈಕೆಯ ಸಂದೇಶಗಳು ಹರಿದಾಡಿತ್ತು. ಇದೀಗ ಆರ್‌ಸಿಬಿ ಅಭಿಮಾನಿ ರಚಿಸಿದ ಆರ್‌ಸಿಬಿ ರೂಪಂ, ಶಿವಂ, ಶಿವಂ ಹಾಡು ಭಾರಿ ವೈರಲ್ ಆಗಿದೆ.
07:51 PM (IST) May 31
07:30 PM (IST) May 31
ಐಪಿಎಲ್ 2025ರಲ್ಲಿ ಯಾರು ಜಾಸ್ತಿ ಫೋರ್‌ಗಳು ಹೊಡೆದಿದ್ದಾರೆ? ಟಾಪ್ 5 ಬ್ಯಾಟ್ಸ್‌ಮನ್‌ಗಳ ಪಟ್ಟಿ ಇಲ್ಲಿದೆ. ಸಾಯಿ ಸುದರ್ಶನ್‌ನಿಂದ ಯಶಸ್ವಿ ಜೈಸ್ವಾಲ್‌ವರೆಗೆ, ಯಾರು ಮೇಲುಗೈ ಸಾಧಿಸಿದ್ದಾರೆಂದು ತಿಳಿಯಿರಿ.
06:47 PM (IST) May 31
ಕಮಲ್ ಹಾಸನ್ ಅವರ ಕನ್ನಡ ಭಾಷೆಯ ಹುಟ್ಟಿನ ಕುರಿತ ಹೇಳಿಕೆಯನ್ನು ನಟ ಕಿಶೋರ್ ಸಮರ್ಥಿಸಿಕೊಂಡಿದ್ದಾರೆ. ಭಾಷೆಯನ್ನು ಭಾವುಕವಾಗಿ ನೋಡಬಾರದು ಮತ್ತು ಭಾಷೆಗಳ ಮೇಲು-ಕೀಳು ಎಂಬುದಿಲ್ಲ ಎಂದು ಅವರು ಹೇಳಿದ್ದಾರೆ.
06:47 PM (IST) May 31
06:41 PM (IST) May 31
ಕರ್ನಾಟಕದಲ್ಲಿ ತಂಬಾಕು ನಿಯಮ ಮತ್ತಷ್ಟು ಕಠಿಣಗೊಂಡಿದೆ. ಇದೀಗ ತಂಬಾಕು ಖರೀದಿ ಅಥವಾ ಬಳಸಲು ಕಾನೂನುಬದ್ಧ ವಯಸ್ಸು 18 ಅಲ್ಲ. ಜೊತೆಗೆ ಸಾರ್ವಜನಿಕವಾಗಿ ಧೂಮಪಾನ ಮಾಡಿದರೆ ದಂಡ ದುಪ್ಪಟ್ಟಾಗಿದೆ. ಇಷ್ಟೇ ಅಲ್ಲ ಹುಕ್ಕಾ ಬಾರ್‌ಗೂ ಶಾಕ್ ನೀಡಲಾಗಿದೆ.
06:16 PM (IST) May 31
ಬೆಂಗಳೂರಿನಲ್ಲಿ ಸ್ಕೂಟರ್‌ಗೆ ಆಟೋ ಟಚ್ ಆಯ್ತು ಎಂಬ ಕಾರಣಕ್ಕೆ ಯುವತಿಯೊಬ್ಬಳು ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಘಟನೆ ನಡೆದಿದೆ.
06:09 PM (IST) May 31
ಐಪಿಎಲ್ ಎಲಿಮಿನೇಟರ್‌ನಲ್ಲಿ ಮುಂಬೈ ವಿರುದ್ಧ ಸೋತ ಗುಜರಾತ್ ನಾಯಕ ಶುಭಮನ್ ಗಿಲ್ ತಮ್ಮ ತಂಡದ ಫೀಲ್ಡಿಂಗ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 3 ಸುಲಭ ಕ್ಯಾಚ್‌ಗಳನ್ನು ಕೈಚೆಲ್ಲಿದ್ದು ಸೋಲಿಗೆ ಕಾರಣ ಎಂದಿದ್ದಾರೆ. ರೋಹಿತ್ ಶರ್ಮಾ ಅವರ ಎರಡು ಕ್ಯಾಚ್‌ಗಳನ್ನು ಬಿಟ್ಟಿದ್ದು ಪಂದ್ಯದ ಗತಿಯನ್ನೇ ಬದಲಿಸಿತು.
05:45 PM (IST) May 31
05:37 PM (IST) May 31
ವಾರ್ಷಿಕೋತ್ಸವ ಆಚರಣೆಯು ಮೇ 31 ರಂದು ಪ್ರಾರಂಭವಾಗಿ ಜುಲೈ 6 ರವರೆಗೆ ನಡೆಯುತ್ತದೆ, ಮೊಬೈಲ್ ರಿಟೇಲ್ ವ್ಯಾಪಾರದಲ್ಲಿ ಅತಿ ದೊಡ್ಡ ಆಚರಣೆಯ ಸದುಪಯೋಗವನ್ನು ಪಡೆಯಲು ಒಂದು ತಿಂಗಳಿಗಿಂತ ಸ್ವಲ್ಪ ಹೆಚ್ಚು ಸಮಯ ಗ್ರಾಹಕರಿಗೆ ಸಿಗಲಿದ್ದು, ಇದನ್ನು ತಪ್ಪಿಸಿಕೊಳ್ಳಬೇಡಿ!
05:32 PM (IST) May 31
ಮಧ್ಯಕ್ಷೇತ್ರದ ಪ್ರಾಬಲ್ಯ ಮತ್ತು ಪ್ರಮುಖ ಆಟಗಾರರ ಪ್ರದರ್ಶನದಿಂದ ಪ್ಯಾರಿಸ್ ಸೇಂಟ್-ಜರ್ಮೈನ್‌ನ ಚಾಂಪಿಯನ್ಸ್ ಲೀಗ್ ಅಭಿಯಾನವು ಗಮನಾರ್ಹ ತಿರುವು ಪಡೆದುಕೊಂಡಿದೆ.
05:25 PM (IST) May 31
05:21 PM (IST) May 31
04:40 PM (IST) May 31
03:45 PM (IST) May 31
ಜೂನ್ 1ರಿಂದ ಕೆಲ ಅಪ್‌ಡೇಟ್ ನಿಮಗೆ ಸಮಸ್ಯೆ ತಂದಿಡಬಹುದು. ಈ ಪೈಕಿ ವ್ಯಾಟ್ಸಾಪ್ ಅಪ್‌ಡೇಟ್ ಕೂಡ ಒಂದು. ಜೂನ್ 1 ರಿಂದ ಕೆಲ ಆ್ಯಂಡ್ರಾಯ್ಡ್ ಹಾಗೂ ಐಫೋನ್‌ಗಳಲ್ಲಿ ವ್ಯಾಟ್ಸಾಪ್ ಕಾರ್ಯನಿರ್ವಹಿಸುವುದಿಲ್ಲ. ಯಾವೆಲ್ಲಾ ಫೋನ್‌ಗಳಲ್ಲಿ ವ್ಯಾಟ್ಸಾಪ್ ಕಾರ್ಯನಿರ್ವಹಿಸುವುದಿಲ್ಲ.
03:18 PM (IST) May 31
ನಟ ಜಯಸೂರ್ಯ ಪ್ರಸ್ತುತ ಬಳಸುತ್ತಿರುವ ಮರ್ಸಿಡಿಸ್-ಬೆನ್ಜ್ ಬಿ-ಕ್ಲಾಸ್ ಮತ್ತು ಜಾಗ್ವಾರ್ ಎಕ್ಸ್‌ಎಫ್ ಕಾರುಗಳ ನೋಂದಣಿ ಸಂಖ್ಯೆ 1122. ಈ ನಂಬರ್ ಹಿಂದಿದೆ ಇಂಟ್ರೆಸ್ಟಿಂಗ್ ಕಹಾನಿ.
02:52 PM (IST) May 31
ಬೆಂಗಳೂರು: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಇನ್ನು ಕೇವಲ ಎರಡು ಪಂದ್ಯಗಳು ಬಾಕಿ ಉಳಿದಿವೆ. ಹೀಗಿರುವಾಗಲೇ ಭಾರತದ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್, ಈ ಬಾರಿ ಐಪಿಎಲ್ ಟ್ರೋಫಿ ಗೆಲ್ಲುವ ನೆಚ್ಚಿನ ತಂಡದ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಏನದು ನೀವೇ ನೋಡಿ.
02:28 PM (IST) May 31
01:09 PM (IST) May 31
12:44 PM (IST) May 31
ಆಪರೇಷನ್ ಸಿಂಧೂರ್ ಸಮಯದಲ್ಲಿ, ಬಿಎಸ್‌ಎಫ್ ಸಹಾಯಕ ಕಮಾಂಡೆಂಟ್ ನೇಹಾ ಭಂಡಾರಿ ತಮ್ಮ ಪಡೆಗಳನ್ನು ಮುನ್ನಡೆಸಿ ಶೂನ್ಯ ರೇಖೆಯಾದ್ಯಂತ ಮೂರು ಫಾರ್ವರ್ಡ್ ಶತ್ರು ಪೋಸ್ಟ್‌ಗಳನ್ನು ಧ್ವಂಸ ಮಾಡಿದ್ದರು.
12:17 PM (IST) May 31
12:14 PM (IST) May 31
ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿ 2-3 ಜಿಲ್ಲೆಗಳಲ್ಲಿನ ಎಸಿ, ಡಿಸಿ ಹಾಗೂ ತಹಸೀಲ್ದಾರ್ ನ್ಯಾಯಾಲಯಗಳಲ್ಲಿ 5 ವರ್ಷಕ್ಕಿಂತ ಹಳೆಯ ಪ್ರಕರಣ ಬಾಕಿ ಇರುವುದು ಅಕ್ಷಮ್ಯ.
11:49 AM (IST) May 31
ಮೈಸೂರಿನ ಕೆಆರ್ ವೃತ್ತದಲ್ಲಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆಯ ಮೇಲೆ ಕಿಡಿಗೇಡಿಯೊಬ್ಬ ಏರಿ ಕುಳಿತು ಅವಮಾನ ಮಾಡಿರುವ ಘಟನೆ ನಡೆದಿದೆ. ಪ್ರತಿಮೆಗೆ ಹಾನಿಯಾಗುವುದನ್ನು ಲೆಕ್ಕಿಸದೆ ಪುಂಡಾಟಿಕೆ ಮೆರೆದಿರುವ ವಿಡಿಯೋ ವೈರಲ್ ಆಗಿದೆ.
11:35 AM (IST) May 31
ಬೆಂಗಳೂರು ಯೋಜಿತ ನಗರವಲ್ಲ. ಆದರೂ ನಾವು ಇದನ್ನು ಪ್ರಗತಿಯತ್ತ ಮುನ್ನಡೆಸುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
11:07 AM (IST) May 31
ಭಾರತ ದೇಶೀಯವಾಗಿ ಸೂರ್ಯ ವೆರಿ ಹೈ ಫ್ರೀಕ್ವೆನ್ಸಿ (VHF) ರಾಡಾರ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಈ ರಾಡಾರ್‌ನಿಂದ ಚೀನಾದ ಪ್ರಬಲ ಯುದ್ಧ ವಿಮಾನಗಳೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.
11:04 AM (IST) May 31
11:03 AM (IST) May 31
ಅಧಿಕಾರಿಗಳಿಗೆ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದ್ದು, ಇದೀಗ ಅವರ ವಿರುದ್ಧ ಕ್ರಮಕ್ಕೆ ಮುಖ್ಯಮಂತ್ರಿಗಳಿಗೆ ಶಿಫಾರಸು ಮಾಡಲಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.
10:19 AM (IST) May 31
ಮಳೆಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂಕುಸಿತ ಹಾಗೂ ಗೋಡೆ ಕುಸಿತ ಉಂಟಾಗಿ ಸಾವು ಸಂಭವಿಸಿರುವ ಹಿನ್ನೆಲೆಯಲ್ಲಿ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹಾಗೂ ಜಿಲ್ಲಾಧಿಕಾರಿ ಅವರಿಗೆ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.
10:08 AM (IST) May 31
100ನೇ ಸ್ಕಿಪ್ಸ್ ರಾಷ್ಟ್ರೀಯ ಸ್ಪೆಲ್ಲಿಂಗ್ ಬೀ ಸ್ಪರ್ಧೆಯಲ್ಲಿ ಭಾರತ ಮೂಲದ ಫೈಜಾನ್ ಝಾಕಿ 'eclaircissement' ಪದದ ಸರಿಯಾದ ಸ್ಪೆಲ್ಲಿಂಗ್ ಹೇಳಿ ವಿಜೇತರಾಗಿದ್ದಾರೆ. 42 ಲಕ್ಷ ರೂಪಾಯಿ ನಗದು ಬಹುಮಾನ ಸೇರಿದಂತೆ ಹಲವು ಬಹುಮಾನಗಳನ್ನು ಪಡೆದಿದ್ದಾರೆ.
09:52 AM (IST) May 31
ಎಂಎಸ್‌ಎಂಇ ಕ್ಷೇತ್ರಕ್ಕೆ ಪ್ರತ್ಯೇಕ ಸಚಿವಾಲಯ ನೀಡುವುದಾಗಿ ಮುಖ್ಯಮಂತ್ರಿಗಳು ಈಗಾಗಲೇ ಭರವಸೆಯನ್ನೂ ನೀಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.