ಬೆಂಗಳೂರು: ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯಾ ಪ್ರಕರಣ ಸಂಬಂಧ ರಚಿಸಲಾಗಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ನೂತನ ಮುಖ್ಯಸ್ಥ ಹಾಗೂ ಸದಸ್ಯರನ್ನು ನೇಮಿಸಿ ರಾಜ್ಯ ಸರ್ಕಾರ ಗುರುವಾರ ಆದೇಶಿಸಿದೆ. ಎಸ್ಐಟಿ ಮುಖ್ಯಸ್ಥರಾಗಿದ್ದ ಐಜಿಪಿ ಶಶಿಕುಮಾರ್ ಅವರ ನಿರ್ಗಮನದಿಂದ ತೆರವಾಗಿದ್ದ ಸ್ಥಾನಕ್ಕೆ ಸಿಐಡಿ ಐಜಿಪಿ ಚೇತನ್ ಸಿಂಗ್ ರಾಥೋಡ್ ನೇಮಕವಾಗಿದ್ದಾರೆ. ಅದೇ ರೀತಿ ಎಎಸ್ಪಿ ವೆಂಕಟೇಶ್ ಪ್ರಸನ್ನ ಅವರಿಂದ ಖಾಲಿಯಾಗಿದ್ದ ಸದಸ್ಯ ಸ್ಥಾನಕ್ಕೆ ಹಾಸನ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿಧಿ ಅವರನ್ನು ಸರ್ಕಾರ ನಿಯೋಜಿಸಿದೆ.
ಕೆಲ ದಿನಗಳ ಹಿಂದೆ ವೈಯಕ್ತಿಕ ಕಾರಣ ನೀಡಿ ಎಸ್‌ಐಟಿಯಿಂದ ಐಜಿಪಿ ಶಶಿಕುಮಾರ್ ಹಾಗೂ ಎಎಸ್ಪಿ ವೆಂಕಟೇಶ್ ಪ್ರಸನ್ನ ಹೊರ ಬಂದಿದ್ದರು. ಈ ಇಬ್ಬರು ಅಧಿಕಾರಿಗಳ ಕೋರಿಕೆಯನ್ನು ಸ್ವೀಕರಿಸಿದ ರಾಜ್ಯ ಸರ್ಕಾರವು ಎಸ್‌ಐಟಿಯನ್ನು ಪುನರ್ ರಚಿಸಿ ಆದೇಶಿಸಿದೆ.
10:25 PM (IST) Oct 31
09:04 PM (IST) Oct 31
08:15 PM (IST) Oct 31
ಸಮಾಜ ಸೇವೆ ವಿಭಾಗದಲ್ಲಿ ಕಾಗೋಡು ತಿಮ್ಮಪ್ಪ ಅವರಿಗೆ 2026ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ಸರ್ಕಾರ ಘೋಷಣೆ ಮಾಡಿದೆ. ಹಿರಿಯ ನಾಯಕನಿಗೆ ರಾಜ್ಯದ ಅತ್ಯುನ್ನತ ಪ್ರಶಸ್ತಿ ಘೋಷಣೆ ಬೆನ್ನಲ್ಲೇ ಸಚಿವ ಮಧು ಬಂಗಾರಪ್ಪ ಅವರು ಇವತ್ತು ಕಾಗೋಡು ಮನೆಗೆ ತೆರಳಿ ಗೌರವಿಸಿದ್ದಾರೆ. ಈ ವೇಳೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿಡಿಯೋ ಕಾಲ್ ಮಾಡಿ ಕಾಗೋಡು ಜೊತೆ ಮಾತನ್ನಾಡಿದರು.
07:55 PM (IST) Oct 31
ಆರೋಗ್ಯ ಕಾಪಾಡಿಕೊಳ್ಳಲು ದುಬಾರಿ ಆಹಾರ ಅಥವಾ ಕಠಿಣ ವ್ಯಾಯಾಮದ ಅಗತ್ಯವಿಲ್ಲ. ಪ್ರತಿದಿನ ಬೆಳಗ್ಗೆ ಸ್ವಲ್ಪ ಸಮಯವನ್ನು ಸರಿಯಾದ ಅಭ್ಯಾಸಗಳಿಗೆ ಮೀಸಲಿಡುವುದು ಮುಖ್ಯ. ಈ ಸಣ್ಣ ಬದಲಾವಣೆಗಳನ್ನು ನಿರಂತರವಾಗಿ ಪಾಲಿಸುವುದರಿಂದ ಆರೋಗ್ಯಕರ ಜೀವನಶೈಲಿಯತ್ತ ಹೆಜ್ಜೆ ಇಡಬಹುದು. ಏನದು ನೋಡಿ..
07:43 PM (IST) Oct 31
ಬೆಂಗಳೂರಿನಿಂದ ಚೆನ್ನೈ ಪ್ರಯಾಣ ದರ ಕೇವಲ 165 ರೂಪಾಯಿ ಮಾತ್ರ. ಜೊತೆಗೆ ಆರಾಮದಾಯಕ ಪ್ರಯಾಣ, ಈ ಕುರಿತು ಮಹಿಳೆಯೊಬ್ಬರು ವಿಡಿಯೋ ಮಾಡಿದ ಮಹಿಳೆಯೊಬ್ಬರು ಪ್ರಯಾಣದ ಅನುಭವ ಹಂಚಿಕೊಂಡಿದ್ದಾರೆ.
07:15 PM (IST) Oct 31
07:13 PM (IST) Oct 31
ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಮುಕ್ತಿ ನೀಡಲು ಬೆಂಗಳೂರು ಉಪನಗರ ರೈಲು ಯೋಜನೆ ವೇಗ ಪಡೆದುಕೊಂಡಿದೆ. ಇದೀಗ ಫ್ಲೈಓವರ್ ಸೇರಿದಂತೆ ಯೋಜನೆ ಪ್ರಮುಖ ಗುತ್ತಿಯನ್ನು ಅದಾನಿ ಗ್ರೂಪ್ ಬರೋಬ್ಬರಿ 666 ಕೋಟಿ ರೂಪಾಯಿಗೆ ಪಡೆದುಕೊಂಡಿದೆ.
05:11 PM (IST) Oct 31
ಕನ್ನಡದ ಹಿಟ್ ಚಿತ್ರಗಳಲ್ಲಿ ನಟಿಸಿದ್ದ ಮಾನ್ಯ ನಾಯ್ಡು ಅವರ ನಿಜ ಜೀವನದ ಕಥೆ ಅತ್ಯಂತ ಸ್ಫೂರ್ತಿದಾಯಕವಾಗಿದೆ. ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡು ಬಣ್ಣದ ಲೋಕಕ್ಕೆ ಕಾಲಿಟ್ಟ ಇವರು, ನಂತರ ಉನ್ನತ ವ್ಯಾಸಂಗಕ್ಕಾಗಿ ಸಿನಿಮಾ ರಂಗವನ್ನು ತೊರೆದರು.
04:45 PM (IST) Oct 31
ಒಂದು ಕಾಲದಲ್ಲಿ ತೆಲುಗು ಚಿತ್ರರಂಗದಲ್ಲಿ ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದ ಇವರ ಬದುಕು ಹಲವು ಪ್ರಶ್ನೆಗಳನ್ನು ಮೂಡಿಸುತ್ತದೆ. ಖ್ಯಾತಿ, ಅವಕಾಶ ಮತ್ತು ಯಶಸ್ಸು ಇದ್ದರೂ ವೈಯಕ್ತಿಕ ಸಂಕಷ್ಟಗಳು, ತಪ್ಪು ನಿರ್ಧಾರಗಳು ಹೇಗೆ ಬದುಕಿನ ದಿಕ್ಕನ್ನೇ ಬದಲಿಸುತ್ತವೆ ಎಂಬುದಕ್ಕೆ ಉದಾಹರಣೆ ಆಗಿಬಿಟ್ಟರು!
04:26 PM (IST) Oct 31
ಎಡಿಆರ್ ಸಂಸ್ಥೆಯ ನೂತನ ವರದಿಯ ಪ್ರಕಾರ, ಕರ್ನಾಟಕದ 7 ಹಾಲಿ ಶಾಸಕರು ಮಹಿಳೆಯರ ಮೇಲಿನ ಅಪರಾಧ ಹಾಗೂ ಕಿರುಕುಳದ ಗಂಭೀರ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಇಂತಹ ಪ್ರಕರಣಗಳನ್ನು ಹೊಂದಿರುವ ಜನಪ್ರತಿನಿಧಿಗಳ ಪಟ್ಟಿಯಲ್ಲಿ ಕರ್ನಾಟಕವು ದೇಶದಲ್ಲೇ 6ನೇ ಸ್ಥಾನದಲ್ಲಿದೆ.
04:07 PM (IST) Oct 31
ರಿಷಬ್ ಶೆಟ್ಟಿ ಛತ್ರಪತಿ ಶಿವಾಜಿ ಮಹಾರಾಜರ ಬಯೋಪಿಕ್ 'ದಿ ಪ್ರೈಡ್ ಆಫ್ ಭಾರತ್' ಚಿತ್ರದಲ್ಲಿ ನಾಯಕನಾಗಿ ನಟಿಸುವುದರ ಜೊತೆಗೆ ಸಹ-ನಿರ್ಮಾಪಕರಾಗಿಯೂ ಕೆಲಸ ಮಾಡಲಿದ್ದಾರೆ. ಎರಡು ಭಾಗಗಳಲ್ಲಿ ಮೂಡಿಬರಲಿದೆ.
03:38 PM (IST) Oct 31
ಸಮರ್ಜಿತ್ ಲಂಕೇಶ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 'ಗೌರಿ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅವರು, ಇದೀಗ 'ಗುಡ್ಡದ ಭೂತ' ಚಿತ್ರದ ನಿರೀಕ್ಷೆಯಲ್ಲಿದ್ದಾರೆ. ಅವರ ಸಿನಿಮಾ ಜರ್ನಿ ಬಗ್ಗೆ ತಿಳಿಯಿರಿ.
03:18 PM (IST) Oct 31
03:18 PM (IST) Oct 31
ಪುನೀತ್ ರಾಜ್‌ಕುಮಾರ್ ಮೇಲಿನ ಅಭಿಮಾನದಿಂದ ಶೀರ್ಷಿಕೆ ಪಡೆದಿರುವ ಅಪ್ಪು ಗ್ಯಾರೇಜ್ ಸಿನಿಮಾ ಪ್ರೀತಿ, ಸ್ನೇಹ, ಆ್ಯಕ್ಷನ್ ಹಾಗೂ ಹಾಸ್ಯದ ಕಥೆಯನ್ನು ಹೊಂದಿದೆ. ವಿಷ್ಣುತೇಜ, ಜೀವನ್, ರಾಧಿಕಾ ರಾಮ್ ಮತ್ತು ರಕ್ಷಾ ಗೌಡ ಅಭಿನಯದ ಈ ಸಿನಿಮಾ ಹೇಗಿದೆ?
03:04 PM (IST) Oct 31
ಕೀರ್ತಿ ಸುರೇಶ್ ತಮ್ಮ ಪತಿ ಆಂಟೋನಿ ಥಟ್ಟಿಲ್ ಜೊತೆ ಮಿಲನ್‌ನಿಂದ ಭಾರತಕ್ಕೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ, ವಿಮಾನದಲ್ಲಿದ್ದ ವ್ಯಕ್ತಿಯೊಬ್ಬ ಕೀರ್ತಿ ಬಳಿ ಬಂದು ಸೆಲ್ಫಿ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾನೆ. ಆದರೆ ಆ ವ್ಯಕ್ತಿ ಮದ್ಯಪಾನ ಮಾಡಿದ್ದನಂತೆ. ಮುಂದೇನಾಯ್ತು? ನೋಡಿ..
02:46 PM (IST) Oct 31
ಕನ್ನಡ ರಾಜ್ಯೋತ್ಸವದ ದಿನವೇ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ಛಲವಾದಿ ನಾರಾಯಣಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷವು ವಿದೇಶಿ ಶಕ್ತಿಗಳೊಂದಿಗೆ ಸೇರಿ ದೇಶದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
02:43 PM (IST) Oct 31
02:42 PM (IST) Oct 31
02:23 PM (IST) Oct 31
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (KSRTC) ನವೆಂಬರ್ 6 ರಿಂದ ನವೆಂಬರ್ 8 ರವರೆಗೆ 2,600 ಹೆಚ್ಚುವರಿ ವಿಶೇಷ ಬಸ್‌ಗಳ ವ್ಯವಸ್ಥೆಯನ್ನು ಮಾಡಿದೆ. ಚೆನ್ನೈ, ಕೊಯಮತ್ತೂರ್, ಮಧುರೈ, ತ್ರಿಶೂರ್, ಪಾಲಕ್ಕಾಡ್, ಕೋಯಿಕೋಡ್ ಹಾಗೂ ಎರ್ನಾಕುಲಂ ಮುಂತಾದ ಸ್ಥಳಗಳಿಗೆ ಶಾಂತಿನಗರ ಬಸ್ ನಿಲ್ದಾಣದಿಂದ ಪ್ರತಿಷ್ಠಿತ ಸಾರಿಗೆ ಬಸ್‌ಗಳ ಸೇವೆ ಲಭ್ಯವಿರಲಿದೆ.
01:28 PM (IST) Oct 31
ರಾಜ್ಯದಲ್ಲಿ ನಂದಿನಿ ಹಾಲಿನ ಬೆಲೆಯನ್ನು 8 ರಿಂದ 12 ರೂಪಾಯಿವರೆಗೆ ಏರಿಕೆ ಮಾಡಲಾಗಿದ್ದು, ರೈತರ ಹೆಸರಿನಲ್ಲಿ KMF ಗ್ರಾಹಕರಿಗೆ ಬರೆ ಎಳೆಯುತ್ತಿದೆ. ತಮಿಳುನಾಡು ಸರ್ಕಾರವು ರೈತರಿಗೆ ಹೆಚ್ಚಿನ ಹಣ ನೀಡಿ ಕಡಿಮೆ ಬೆಲೆಗೆ ಹಾಲು ಮಾರಾಟ ಮಾಡುತ್ತಿದ್ದರೆ, ಕರ್ನಾಟಕ ಸರ್ಕಾರ ಮಾತ್ರ ಹೊರೆ ಹಾಕುತ್ತಿದೆ.
12:45 PM (IST) Oct 31
ನಟಿ ಮೃಣಾಲ್ ಠಾಕೂರ್ ಬೆಂಗಳೂರಿನಲ್ಲಿ ನಡೆದ 'ಜ್ಯುವೆಲ್ಸ್ ಆಫ್ ಇಂಡಿಯಾ' ಮೇಳವನ್ನು ಉದ್ಘಾಟಿಸಿದರು. ಈ ವೇಳೆ ಅವರು ಸ್ಪಷ್ಟವಾಗಿ ಕನ್ನಡದಲ್ಲಿ ಮಾತನಾಡಿ, 'ಜೈ ಕರ್ನಾಟಕ' ಎನ್ನುವ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ. 'ಸೀತಾ ರಾಮಂ' ನಟಿಯ ಸರಳತೆ ಹಾಗೂ ಸೌಂದರ್ಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.
12:35 PM (IST) Oct 31
12:33 PM (IST) Oct 31
ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ನಮ್ಮ ಮೆಟ್ರೋದ ಬ್ಲೂ ಲೈನ್ ಕಾಮಗಾರಿ ತೀವ್ರ ವಿಳಂಬವಾಗುತ್ತಿದೆ. ಮೂಲಸೌಕರ್ಯ ಸವಾಲುಗಳು, ಭೂಸ್ವಾಧೀನ ಸಮಸ್ಯೆಗಳು ಮತ್ತು ವೆಚ್ಚ ಹೆಚ್ಚಳವೇ ಈ ವಿಳಂಬಕ್ಕೆ ಪ್ರಮುಖ ಕಾರಣಗಳಾಗಿವೆ. 2027-28ರ ವೇಳೆಗೆ ಈ ಮಾರ್ಗ ಸಾರ್ವಜನಿಕರಿಗೆ ಮುಕ್ತವಾಗುವ ನಿರೀಕ್ಷೆಯಿದೆ. ತಮಿಳುನಾಡಿನ ಆ ಒಂದು ನಿರ್ಧಾರ ಬಿಟ್ಟು ಏನೆಲ್ಲಾ ಸವಾಲಿದೆ ಇಲ್ಲಿದೆ ಸಂಪೂರ್ಣ ವಿವರ.
12:02 PM (IST) Oct 31
ಮಂಗಳೂರಿನ ಕೊಟ್ಟಾರದಲ್ಲಿರುವ 2.75 ಎಕರೆ ವಿಸ್ತೀರ್ಣದ ಮಾಜಿ ಇನ್ಫೋಸಿಸ್ ಕ್ಯಾಂಪಸ್ ಅನ್ನು 'ಮುಕುಂದ್ ಎಂಜಿಎಂ ರಿಯಾಲ್ಟಿ' ಸಂಸ್ಥೆ ಖರೀದಿಸಿದೆ. ಸ್ಥಳೀಯವಾಗಿ ಉದ್ಯೋಗಾವಕಾಶ ಸೃಷ್ಟಿಸಲು ಈ ಜಾಗದಲ್ಲಿ ಜಾಗತಿಕ ಮಟ್ಟದ ಮೂಲಸೌಕರ್ಯ ಅಭಿವೃದ್ಧಿಪಡಿಸುವುದು ಸಂಸ್ಥೆಯ ಉದ್ದೇಶವಾಗಿದೆ.
11:32 AM (IST) Oct 31
ಮಂಗಳೂರು-ಮಡಗಾಂವ್ ವಂದೇ ಭಾರತ್ ರೈಲನ್ನು ಯಶವಂತಪುರದವರೆಗೆ ವಿಸ್ತರಿಸಲು ರೈಲ್ವೆ ಮಂಡಳಿ ಅನುಮೋದನೆ ನೀಡಿದೆ. ಇದರಿಂದ ಬೆಂಗಳೂರು ಮತ್ತು ಕರಾವಳಿ ಜಿಲ್ಲೆಗಳ ನಡುವಿನ ಹಗಲು ಹೊತ್ತಿನ ಪ್ರಯಾಣದ ಸಮಯ ಭಾರೀ ಉಳಿತಾಯವಾಗಲಿದೆ. ನವೆಂಬರ್ ಮೂರನೇ ವಾರದೊಳಗೆ ಈ ನೂತನ ರೈಲು ಸೇವೆಗೆ ಚಾಲನೆ ದೊರೆಯುವ ನಿರೀಕ್ಷೆಯಿದೆ.
11:22 AM (IST) Oct 31
ಮಲೆನಾಡಿನಲ್ಲಿ ಅಡಕೆ ರೋಗದಿಂದ ಕಂಗೆಟ್ಟ ರೈತರಿಗೆ ಡ್ರಾಗನ್ ಫ್ರೂಟ್ ಕೃಷಿ ಹೊಸ ಭರವಸೆ ಮೂಡಿಸಿದೆ. ನರಸಿಂಹರಾಜಪುರದ ಯಡಗೆರೆ ರೈತ ಶ್ರೀನಿವಾಸ್ ಒಣ ಭೂಮಿಯಲ್ಲಿ ಈ ಬೆಳೆ ಬೆಳೆದು ಎಕರೆಗೆ ₹10 ಲಕ್ಷದವರೆಗೆ ಆದಾಯ ಗಳಿಸುತ್ತಿದ್ದಾರೆ.
10:49 AM (IST) Oct 31
ಕರ್ನಾಟಕವು ಕದಂಬರು, ಗಂಗರು, ಚಾಲುಕ್ಯರು ಮತ್ತು ವಿಜಯನಗರ ಸಾಮ್ರಾಜ್ಯದಂತಹ ರಾಜವಂಶಗಳು ನಿರ್ಮಿಸಿದ ಭವ್ಯ ವಾಸ್ತುಶಿಲ್ಪ ಮತ್ತು ಇತಿಹಾಸಕ್ಕೆ ಹೆಸರುವಾಸಿಯಾಗಿದೆ. ಹಂಪಿ, ಮೈಸೂರು ಅರಮನೆ, ಬೇಲೂರು ಸೇರಿದಂತೆ ಟಾಪ್-10 ಐತಿಹಾಸಿಕ ತಾಣಗಳ ವಿವರಗಳನ್ನು ಇಲ್ಲಿ ನೀಡಲಾಗಿದೆ.
10:48 AM (IST) Oct 31
ದರ್ಶನ್ ಪುತ್ರ ವಿನೀಶ್ 18ನೇ ಹುಟ್ಟುಹಬ್ಬ ಆಚರಿಸಿಕೊಳ್ದಳುತ್ತಿದ್ದಾರೆ. ದರ್ಶನ್ ಪುತ್ರ ವಿನೀಶ್ ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ಹೊಂದಿದ್ದರೂ, ಆಗಾಗ್ಗೆ ಮಾತ್ರ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಾರೆ. ಮಗನ ಹುಟ್ಟುಹಬ್ಬದಂದು ಅಮ್ಮ ವಿಜಯಲಕ್ಷ್ಮೀ ಸ್ಪೆಷಲ್ ವಿಶ್ ಹಂಚಿಕೊಂಡಿದ್ದಾರೆ.
10:42 AM (IST) Oct 31
ಬಿಡದಿ ಟೌನ್‌ಶಿಪ್ ಯೋಜನೆಗೆ ರೈತರ ತೀವ್ರ ವಿರೋಧದ ನಡುವೆಯೂ ಸರ್ಕಾರವು 2 ಗ್ರಾಮಗಳ 1,883 ಎಕರೆ ಭೂ ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಿದೆ. ಇದರಿಂದ 3,271 ರೈತರು ಭೂಮಿ ಕಳೆದುಕೊಳ್ಳುವ ಭೀತಿಯಲ್ಲಿದ್ದು, ಸರ್ಕಾರದ ಈ ನಡೆಯಿಂದ ರೈತರ ಹೋರಾಟ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ.
10:31 AM (IST) Oct 31
ವೈದ್ಯರ ನಿರ್ಲಕ್ಷ್ಯದಿಂದಾಗಿ ಒಂದು ವರ್ಷದ ಮಗು ಕೋಮಾಗೆ ಹೋದ ದುರಂತ ಘಟನೆ ಬೆಂಗಳೂರಿನ ಕ್ಲೌಡ್‌ನೈನ್ ಆಸ್ಪತ್ರೆಯಲ್ಲಿ ನಡೆದಿದ್ದು, ನ್ಯಾಯಕ್ಕಾಗಿ ಮಗುವಿನ ಕುಟುಂಬಸ್ಥರು ರಾತ್ರಿಯಿಡೀ ಆಸ್ಪತ್ರೆಯಲ್ಲೇ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪ.
10:22 AM (IST) Oct 31
09:54 AM (IST) Oct 31
ಫೋರ್ಟಿಸ್ ಹೆಲ್ತ್‌ಕೇರ್ ಲಿಮಿಟೆಡ್ ಬೆಂಗಳೂರಿನ ರಾಜಾಜಿನಗರದಲ್ಲಿರುವ ಸುಗುಣ ಆಸ್ಪತ್ರೆಯನ್ನು ಸಂಪೂರ್ಣವಾಗಿ ಖರೀದಿಸಿದೆ. ಈ ಒಪ್ಪಂದದ ಮೂಲಕ ವಾಯುವ್ಯ ಬೆಂಗಳೂರಿನಲ್ಲಿ ಫೋರ್ಟಿಸ್ 500 ಬೆಡ್‌ಗಳ ಸಾಮರ್ಥ್ಯ ಹೊಂದಿದ್ದು, ನಗರದಲ್ಲಿ ಒಟ್ಟು 1,000 ಬೆಡ್‌ಗಳ ಮೈಲಿಗಲ್ಲು ತಲುಪಿದೆ.
09:51 AM (IST) Oct 31
09:45 AM (IST) Oct 31
09:42 AM (IST) Oct 31
ಚಳ್ಳಕೆರೆ ತಾಲೂಕಿನ ಗೋಪನಹಳ್ಳಿಯ ಪಾಳುಬಿದ್ದ ಮನೆಯೊಂದರಲ್ಲಿ ಆಟವಾಡುತ್ತಿದ್ದ ಮಕ್ಕಳಿಗೆ ಪುರಾತನ ಕಾಲದ ಅಪರೂಪದ ಬೆಳ್ಳಿ ಮತ್ತು ತಾಮ್ರದ ನಾಣ್ಯಗಳು ಪತ್ತೆಯಾಗಿವೆ. ಈಸ್ಟ್ ಇಂಡಿಯಾ ಕಂಪನಿ ಹಾಗೂ ಟಿಪ್ಪು ಸುಲ್ತಾನ್ ಕಾಲದ ಈ ನಾಣ್ಯಗಳನ್ನು ಪುರಾತತ್ವ ಇಲಾಖೆಗೆ ಹಸ್ತಾಂತರಿಸಲಾಗಿದೆ.
08:54 AM (IST) Oct 31
08:41 AM (IST) Oct 31
ಕೊಪ್ಪಳ ವಿಶ್ವವಿದ್ಯಾಲಯ ಮಟ್ಟದ 10 ಕಿಮೀ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಒಂದು ವರ್ಷದ ಮಗುವಿನ ತಾಯಿ ನಾಗವೇಣಿ ಪ್ರಥಮ ಸ್ಥಾನ ಪಡೆದಿದ್ದಾರೆ. ವಿವಾಹವಾಗಿ ಮೂರು ವರ್ಷವಾದರೂ ಓದು ಮತ್ತು ಕ್ರೀಡೆಯ ಮೇಲಿನ ಆಸಕ್ತಿಯಿಂದ ಅವರು ಈ ಸಾಧನೆ ಮಾಡಿದ್ದಾರೆ.
08:27 AM (IST) Oct 31
ಫೋಟೋಗ್ರಾಫರ್ ಕುಮಾರ ಹಾಳಕೇರಿ ಅವರು ಕೊರೋನಾ ಸಮಯದಲ್ಲಿ ಹೈನುಗಾರಿಕೆ ಆರಂಭಿಸಿ ಯಶಸ್ಸು ಕಂಡಿದ್ದಾರೆ. ಒಂದು ಆಕಳಿಂದ ಶುರುವಾದ ಇವರ ಕೃಷಿ ಇದೀಗ ತಿಂಗಳಿಗೆ ಲಕ್ಷಾಂತರ ರೂಪಾಯಿ ಆದಾಯ ತರುತ್ತಿದೆ. ಇದರ ಜೊತೆಗೆ ಇವರು ಗಾಯಗೊಂಡ ಬಿಡಾಡಿ ದನಗಳಿಗೂ ಉಚಿತವಾಗಿ ಚಿಕಿತ್ಸೆ ನೀಡಿ ಆರೈಕೆ ಮಾಡುತ್ತಿದ್ದಾರೆ.
08:14 AM (IST) Oct 31
07:55 AM (IST) Oct 31