Published : Jul 30, 2026, 06:57 AM ISTUpdated : Jul 30, 2026, 11:41 PM IST

Karnataka News Live: ಸಂಭಾವನೆ ಕಡಿಮೆ ಮಾಡಲು ಸಿದ್ಧ ಎಂದ ಪ್ರಜ್ವಲ್ ದೇವರಾಜ್ - ಆದರೆ ಈ ಷರತ್ತು ಅನಿವಾರ್ಯ!

ಸಾರಾಂಶ

ಬೆಳಗಾವಿ: ಜಿಲ್ಲೆಯ ವಿವಿಧೆಡೆ ಹಾಗೂ ನೆರೆಯ ಮಹಾರಾಷ್ಟ್ರದ ಜಲಾನಯನ ಪ್ರದೇಶಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಕೃಷ್ಣಾ, ವೇದಗಂಗಾ ಹಾಗೂ ದೂಧಗಂಗಾ ನದಿಗಳ ನೀರಿನ ಮಟ್ಟ ಏರಿಕೆಯಾಗಿದ್ದು, ಬೆಳಗಾವಿ ಜಿಲ್ಲೆಯ ಕೆಲವೆಡೆ ನೆರೆ ಭೀತಿ ಎದುರಾಗಿದೆ. ಮಹಾರಾಷ್ಟ್ರದ ಜಲಾಶಯಗಳಿಂದ ಕೃಷ್ಣಾ ನದಿಗೆ ಸುಮಾರು 80 ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿದೆ. ಇದರಿಂದಾಗಿ ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕು ವ್ಯಾಪ್ತಿಯ ಕೆಳಹಂತದ ಐದು ಸೇತುವೆಗಳು ಜಲಾವೃತವಾಗಿವೆ.

ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದಾಗಿ ನಿಪ್ಪಾಣಿ ನಗರ ವ್ಯಾಪ್ತಿಯಲ್ಲಿ ಹಾದು ಹೋಗುವ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಕುಸಿದಿದ್ದು, ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರು ಪರದಾಡುವಂತಾಗಿದೆ. ಕೇಂದ್ರ ಸರ್ಕಾರ ಇದನ್ನು 6 ಪಥದ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಿದ್ದು, ಕಳೆದೆರಡು ವರ್ಷಗಳಿಂದ ಕಾಮಗಾರಿ ಭರದಿಂದ ಸಾಗಿದೆ. ಕೋಟ್ಯಂತರ ರುಪಾಯಿ ವೆಚ್ಚದಲ್ಲಿ ನಡೆಯುತ್ತಿರುವ ಕಾಮಗಾರಿ ಇನ್ನೂ ಪೂರ್ಣಗೊಳ್ಳುವ ಮುನ್ನವೇ ಹೆದ್ದಾರಿ ಕುಸಿದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

11:41 PM (IST) Jul 30

ಸಂಭಾವನೆ ಕಡಿಮೆ ಮಾಡಲು ಸಿದ್ಧ ಎಂದ ಪ್ರಜ್ವಲ್ ದೇವರಾಜ್ - ಆದರೆ ಈ ಷರತ್ತು ಅನಿವಾರ್ಯ!

Save Sandalwood: ಕತೆ ಅಥವಾ ಸ್ಕ್ರಿಫ್ಟ್‌ಗಿಂತ ಹೀರೋ ದೊಡ್ಡವರಲ್ಲ. ಒಬ್ಬ ಕಲಾವಿದ ಅಥವಾ ಕಲಾವಿದೆಗೆ ಬೇರೆ ಬೇರೆ ರೀತಿಯ ಪಾತ್ರಗಳು, ಸನ್ನಿವೇಶಗಳನ್ನು ಬರೆಯುವ ರೈಟರ್‌ಗಳು ಬರಬೇಕು ಎಂದರು ಪ್ರಜ್ವಲ್ ದೇವರಾಜ್.

Read Full Story

11:00 PM (IST) Jul 30

ಕ್ರಿಕೆಟ್ ಅಂಗಳದ ಆಪ್ತ ಮಿತ್ರನಿಗೆ ಕೊಹ್ಲಿಯ ಕಣ್ಣೀರಿನ ವಿದಾಯ! ರಹಾನೆ ನಂಟನ್ನು ನೆನೆದು ಭಾವುಕರಾದ ಕಿಂಗ್!

ಟೀಮ್ ಇಂಡಿಯಾದ ಅನುಭವಿ ಕ್ರಿಕೆಟಿಗ ಅಜಿಂಕ್ಯ ರಹಾನೆ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಅವರ ನಿವೃತ್ತಿಯ ನಂತರ, ವಿರಾಟ್ ಕೊಹ್ಲಿ,  ರಹಾನೆ ಅವರ ವೃತ್ತಿಜೀವನವನ್ನು ಶ್ಲಾಘಿಸಿ, ಆ ದಿನಗಳನ್ನು ಮೆಲುಕು ಹಾಕಿ ಭಾವನಾತ್ಮಕ ಮಾತುಗಳನ್ನು ಆಡಿದ್ದಾರೆ.

Read Full Story

10:49 PM (IST) Jul 30

ರಾವಣನಾಗಿ ಯಶ್ ಅವರನ್ನು ನೋಡಿ ಬೆರಗಾದೆ - ರಾಮಾಯಣ ಟ್ರೇಲರ್‌ ನೋಡಿ ರಿಷಬ್ ಶೆಟ್ಟಿ ಹೇಳಿದ್ದೇನು?

Rishab Shetty: 'ರಾಮಾಯಣ' ಸಿನಿಮಾದ ಟ್ರೇಲರ್‌ ನೋಡಿ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಂಬಿಕೆ ಬರುವಂತಹ ಅದ್ಭುತ ಜಗತ್ತನ್ನು ಸೃಷ್ಟಿಸಿದ್ದಕ್ಕೆ ಇಡೀ ತಂಡವನ್ನು ಕೊಂಡಾಡಿದ್ದಾರೆ.

Read Full Story

10:39 PM (IST) Jul 30

ಜೈಲಲ್ಲಿ ದರ್ಶನ್-ಧನ್ವೀರ್ ದಿಢೀರ್ ಭೇಟಿ ಸೀಕ್ರೇಟ್ ಕೊನೆಗೂ ಹೊರಬಿತ್ತಾ? 'ಝಣ ಝಣ ಕಾಂಚಾಣ'ದ ವ್ಯವಹಾರ!?

ಧನ್ವೀರ್​ ಹಾಗು ವಿಜಯಲಕ್ಷ್ಮೀ ಇಬ್ಬರೂ ದರ್ಶನ್​​ಅವರನ್ನ ನೋಡೋಕೆ ಪರಪ್ಪನ ಅಗ್ರಹಾರ ಜೈಲಿಗೆ ಒಟ್ಟಿಗೆ ಹೋಗುತ್ತಿದ್ರು. ದೇವಸ್ಥಾನಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ರು. ಆದ್ರೆ ಇದಕ್ಕೆಲ್ಲಾ ಬ್ರೇಕ್ ಬಿದ್ದಿದೆ. ವಿಜಯಲಕ್ಷ್ಮೀ ಒಂಬೊಂಟಿಯಾಗಿ ಎಲ್ಲಾ ಕಡೆ ಓಡಾಡುತ್ತಿದ್ದಾರೆ. ಈಗ ಈ ಮುನಿಸಿಗೆ ಕಾರಣ ಬಹಿರಂಗವಾಗಿದೆ..!

Read Full Story

09:35 PM (IST) Jul 30

ಹೂವಲ್ಲ, ಚಿನ್ನವಲ್ಲ... ರಾಧಿಕಾಗೆ 'ಲಂಕಾಧಿಪತಿ ರಾವಣ' ಯಶ್ ಕೊಟ್ಟ ಮೊದಲ ಗಿಫ್ಟ್ ಏನು ಗೊತ್ತಾ?

Yash First Gift: ಮೊದಲು ಸ್ನೇಹ, ನಂತರ ಪ್ರೀತಿ, ಆ ಬಳಿಕ ದಾಂಪತ್ಯ... ಕನ್ನಡ ಚಿತ್ರರಂಗದ ಆದರ್ಶ ಜೋಡಿಗಳಲ್ಲಿ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಹೆಸರು ಸದಾ ಮುಂಚೂಣಿಯಲ್ಲಿರುತ್ತದೆ.

Read Full Story

08:51 PM (IST) Jul 30

ಸಿಕ್ಕಾಪಟ್ಟೆ ಹಣ ಕಳೆದುಕೊಂಡ ಸ್ಟಾರ್ ನಟಿ, OTP ಹೇಳಿಲ್ಲ, ಲಿಂಕ್ ಕ್ಲಿಕ್ ಮಾಡಿಲ್ಲ.. ಆದ್ರೂ ಹೀಗೆ ಆಗಿದ್ದು ಹೇಗೆ?!

ಈ ಘಟನೆಯಿಂದ ನಾವೆಲ್ಲರೂ ಕಲಿಯಬೇಕಾದ ದೊಡ್ಡ ಪಾಠವಿದೆ. ಫ್ರೀ ಸಿಗುತ್ತದೆ ಎಂದು ರೈಲ್ವೆ ಸ್ಟೇಷನ್, ವಿಮಾನ ನಿಲ್ದಾಣ ಅಥವಾ ಕೆಫೆಗಳಲ್ಲಿ 'ಪಬ್ಲಿಕ್ ವೈ-ಫೈ' (Public Wi-Fi) ಬಳಸಿ ಹಣದ ವ್ಯವಹಾರ ಮಾಡಬೇಡಿ. ನಿಮ್ಮ ಕ್ರೆಡಿಟ್ ಕಾರ್ಡ್‌ನಲ್ಲಿ ಇಂಟರ್‌ನ್ಯಾಷನಲ್ ಟ್ರಾನ್ಸಾಕ್ಷನ್ ಲಿಮಿಟ್ ಅನ್ನು ಆಫ್ ಮಾಡಿ ಇಡಿ..

Read Full Story

08:45 PM (IST) Jul 30

ಯಶ್ 'ಜಾನು' ಸಿನಿಮಾಗೆ ನಾಯಕನಾದ ಕಥೆ ಬಿಚ್ಚಿಟ್ಟ ನಿರ್ಮಾಪಕ ಜಯಣ್ಣ - ರಾಕಿ ಭಾಯ್ ಆಯ್ಕೆಯ ಹಿಂದಿತ್ತು ಈ ಕಾರಣ!

ರಾಕಿಂಗ್ ಸ್ಟಾರ್ ಯಶ್ ಹಾಗೂ ಖ್ಯಾತ ನಿರ್ಮಾಪಕ ಜಯಣ್ಣ ಅವರ ಕಾಂಬಿನೇಷನ್ ಕನ್ನಡ ಚಿತ್ರರಂಗದ ಯಶಸ್ವಿ ಜೋಡಿಗಳಲ್ಲಿ ಒಂದು. ಈ ಜೋಡಿಯ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿದೆ.

Read Full Story

08:22 PM (IST) Jul 30

ಬೆಂಗಳೂರು - ಮಗಳನ್ನು ಪ್ರೊಫೆಸರ್‌ ಓದಿಸಿ; ಮದುವೆಗೆ ಮುನ್ನ 40 ಲಕ್ಷ ಜತೆ ತಿಂಗಳ ಸ್ಯಾಲರಿ ಕೇಳಿದ ಅಪ್ಪ! ಒಪ್ಪದ ಪುತ್ರಿಗೆ ಚಾಕು!

ಬೆಂಗಳೂರಿನಲ್ಲಿ, ಪ್ರೊಫೆಸರ್ ಆಗಿರುವ ಮಗಳ ಮದುವೆಗೆ 40 ಲಕ್ಷ ಹಾಗೂ ತಿಂಗಳ ಸಂಬಳ ಕೇಳಿದ ತಂದೆ, ಮಗಳು ಒಪ್ಪದಿದ್ದಕ್ಕೆ ಕಾಲೇಜಿನಲ್ಲಿಯೇ ಆಕೆಯ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಈ ಕುರಿತು ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

Read Full Story

08:13 PM (IST) Jul 30

ಪಂಡರಿಬಾಯಿ ಜೊತೆಗಿನ ಹಳೆಯ ನೆನಪು ಬಿಚ್ಚಿಟ್ಟ ಶ್ರೀನಾಥ್ - ಫೋಟೋ ನೋಡಿ ಫ್ಯಾನ್ಸ್ ಫಿದಾ

Pranaya Raja Srinath: 1968ರ ಕಾಲಘಟ್ಟದ ಈ ಅಪರೂಪದ ಚಿತ್ರದಲ್ಲಿ ಶ್ರೀನಾಥ್ ಅವರೊಂದಿಗೆ ಕನ್ನಡ ಚಿತ್ರರಂಗದ ಹಿರಿಯ ನಟಿ ಪಂಡರಿಬಾಯಿ ಹಾಗೂ ನಿರ್ದೇಶಕ ಎಸ್.ಕೆ.ಎ. ಚಾರಿ ಕಾಣಿಸಿಕೊಂಡಿದ್ದಾರೆ.

Read Full Story

06:31 PM (IST) Jul 30

Minister List - ಮಂತ್ರಿಗಿರಿ 2ನೇ ಹಂತದ ಸಂಭಾವ್ಯ ಪಟ್ಟಿ ಔಟ್! ದಕ್ಷಿಣದಲ್ಲಿ ಬೆಂಗಳೂರು, ಉತ್ತರದಲ್ಲಿ ಬೆಳಗಾವಿಗೆ ಜಾಕ್‌ಪಾಟ್! ಯಾರಿಗುಂಟು, ಯಾರಿಗಿಲ್ಲ!

ರಾಜ್ಯ ಸಚಿವ ಸಂಪುಟದ ಎರಡನೇ ಹಂತದ ವಿಸ್ತರಣೆಯ ಸಂಭಾವ್ಯ ಪಟ್ಟಿಯೊಂದು ಲಭ್ಯವಾಗಿದ್ದು, ಇದರಲ್ಲಿ ಪ್ರಾದೇಶಿಕ ಸಮತೋಲನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈ ವಿಸ್ತರಣೆಯಲ್ಲಿ ದಕ್ಷಿಣದ ಬೆಂಗಳೂರು ಹಾಗೂ ಉತ್ತರದ ಬೆಳಗಾವಿ ಜಿಲ್ಲೆಗಳಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಗುವ ಸಾಧ್ಯತೆಗಳಿವೆ.

Read Full Story

06:06 PM (IST) Jul 30

ಚಿನ್ನದ ಕಿರೀಟ, ರಾಜವೈಭವ, ರೌದ್ರ ರೂಪ - ಇಲ್ಲಿದೆ ರಾಜಾಧಿರಾಜ ಯಶ್ ರಾವಣ ಪಾತ್ರದ 5 ವಿಶೇಷತೆಗಳು

ಬಹುನಿರೀಕ್ಷಿತ 'ರಾಮಾಯಣ' ಸಿನಿಮಾದಲ್ಲಿ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅವರ ಹೊಸ ಲುಕ್‌ಗಳು ಬಿಡುಗಡೆಯಾಗಿದ್ದು, ಸಿನಿರಸಿಕರಲ್ಲಿ ಭಾರಿ ಸಂಚಲನ ಸೃಷ್ಟಿಸಿವೆ.

Read Full Story

05:39 PM (IST) Jul 30

AI ಫೋಟೋದಲ್ಲಿ ಕಂಡ ಅಮ್ಮ - ಭಾವುಕರಾಗಿ ಜೀವನದ ದೊಡ್ಡ ಪಶ್ಚಾತ್ತಾಪ ಹಂಚಿಕೊಂಡ ಜಗ್ಗೇಶ್

Jaggesh AI Photo: 'ನವರಸ ನಾಯಕ' ಜಗ್ಗೇಶ್ ಅವರಿಗೆ ಅಮ್ಮ ಎಂದರೆ ಅಪಾರ ಪ್ರೀತಿ. ತಮ್ಮ ಜೀವನದ ಪ್ರತಿಯೊಂದು ಮಹತ್ವದ ಘಟ್ಟದಲ್ಲೂ ತಾಯಿಯನ್ನು ನೆನಪಿಸಿಕೊಳ್ಳುವ ಅವರು, ಈ ಬಾರಿ ಹಂಚಿಕೊಂಡಿದ್ದಾರೆ.

Read Full Story

05:29 PM (IST) Jul 30

Cauvery River Water Dispute - ಕಾವೇರಿ ನೀರು ಹಂಚಿಕೆ ವಿವಾದ - 'ಫಿಲಂ ಚೇಂಬರ್‌'ನಲ್ಲಿ ಸಭೆ- ಯಾರೆಲ್ಲಾ ಮಾತನಾಡಿದ್ದಾರೆ? ತೆಗೆದುಕೊಂಡ ನಿರ್ಣಯವೇನು?

'ತಮಿಳುನಾಡು ಸಿಎಂ ವಿಜಯ್ ಅವರಿಗೆ ಕರ್ನಾಟಕದ ಬಗ್ಗೆ ಪ್ರೀತಿ ಇದೆ. ಅವರು ಕೂಡ ನಮ್ಮ ಪರವಾಗಿ ಇರಲಿ ಅಂತ ದೇವರಲ್ಲಿ ಕೇಳುತ್ತೇನೆ. ಸಿಎಂ ವಿಜಯ್ ಸಿನಿಮಾರಂಗದವರು. ಅವರು ಕರ್ನಾಟಕಕ್ಕೆ ಬಂದು ಹೋದ ಮೇಲೆ ನಾವು ಹೋಗಿ ಭೇಟಿ ಮಾಡೋ ಪ್ರಯತ್ನ ಮಾಡುತ್ತೇವೆ' ಎಂದಿದ್ದಾರೆ

Read Full Story

05:26 PM (IST) Jul 30

Ajinkya Rehane - ಕಾಡಿದ್ದು ವಯಸ್ಸಲ್ಲ, ಬಿಸಿಸಿಐ ಒತ್ತಡವೂ ಅಲ್ಲ; ಕ್ರಿಕೆಟ್‌ಗೆ ರಹಾನೆ ಗುಡ್‌ಬೈ ಹಿಂದಿದೆ ಬೇರೆಯದೇ ಟ್ವಿಸ್ಟ್!

ಕ್ರಿಕೆಟ್‌ಗೆ ವಿದಾಯ ಹೇಳಿರುವ ಅಜಿಂಕ್ಯ ರಹಾನೆ ಅವರ ಈ ನಿರ್ಧಾರದ ಹಿಂದೆ ಬಿಸಿಸಿಐ ಅಥವಾ ವಯಸ್ಸಿನ ಕಾರಣಕ್ಕಿಂತ, ಕೆಕೆಆರ್ ಫ್ರಾಂಚೈಸಿಯ ನಿರ್ಧಾರ ಪ್ರಮುಖ ಪಾತ್ರ ವಹಿಸಿದೆ. ಮುಂಬರುವ ಐಪಿಎಲ್‌ನಲ್ಲಿ ಕಡೆಗಣನೆಗೆ ಒಳಗಾಗುವ ಬದಲು, ಗೌರವಯುತವಾಗಿ ನಿವೃತ್ತಿ ಹೊಂದುವ ಹಾದಿಯನ್ನು ಅವರು ಆಯ್ದುಕೊಂಡಿದ್ದಾರೆ.

Read Full Story

05:14 PM (IST) Jul 30

ನೈಸ್‌ ರೋಡ್‌ ಪ್ರಾಜೆಕ್ಟ್‌ ಕರ್ನಾಟಕದ ಅತಿದೊಡ್ಡ ಹಗರಣ, ಸ್ವತಂತ್ರ್ಯ ತನಿಖೆ ಅಗತ್ಯ ಎಂದ ಹೈಕೋರ್ಟ್‌!

ಬೆಂಗಳೂರು-ಮೈಸೂರು ನೈಸ್ ಯೋಜನೆಯು ರಾಜ್ಯದ ಅತಿದೊಡ್ಡ ಹಗರಣಗಳಲ್ಲಿ ಒಂದಾಗಿದ್ದು, ಇದರಲ್ಲಿ ಸರ್ಕಾರವೇ ಶಾಮೀಲಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಗಂಭೀರ ಆಕ್ಷೇಪ ವ್ಯಕ್ತಪಡಿಸಿದೆ.

Read Full Story

05:09 PM (IST) Jul 30

ರಾವಣನಾಗಿ ಯಶ್ ರೌದ್ರಾವತಾರ - 'ರಾಮಾಯಣ' ಟ್ರೇಲರ್‌ನಲ್ಲಿ ಎಲ್ಲರ ಗಮನ ಸೆಳೆದ ಆ 5 ದೃಶ್ಯಗಳು ಯಾವುವು?

ಸಿನಿಪ್ರಿಯರು ಕಾತರದಿಂದ ಕಾಯುತ್ತಿದ್ದ 'ರಾಮಾಯಣ: ಪಾರ್ಟ್ 1' ಚಿತ್ರದ ಟ್ರೇಲರ್ ಕೊನೆಗೂ ಬಿಡುಗಡೆಯಾಗಿದೆ. ಯಶ್ ರಾವಣನಾಗಿ, ರಣಬೀರ್ ಕಪೂರ್ ಶ್ರೀರಾಮನಾಗಿ ಹಾಗೂ ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಂಡಿದ್ದಾರೆ.

Read Full Story

04:55 PM (IST) Jul 30

ಇಂಟರ್​ನೆಟ್​ ಇಲ್ದೇ ಕಥೆನೂ ಹೇಳತ್ತೆ, 760 ರೂ.ಗೆ ಹೇಳಿದ್ದೆಲ್ಲಾ ಕೇಳತ್ತೆ - 8 ವರ್ಷದ ಪೋರನ ಅದ್ಭುತ ಸಂಶೋಧನೆ

8 ವರ್ಷದ ಬಾಲಕ ಲಕ್ಷ್, ಕೇವಲ 760 ರೂಪಾಯಿಗಳ ಚಿಪ್ ಬಳಸಿ, ಇಂಟರ್ನೆಟ್ ಇಲ್ಲದೆ ಕಾರ್ಯನಿರ್ವಹಿಸುವ AI ಕಥೆ ಹೇಳುವ ಸಾಧನವನ್ನು ರಚಿಸಿದ್ದಾನೆ. ಈ ಸಾಧನವು ಧ್ವನಿ ಆದೇಶದ ಮೂಲಕ ಹೊಸ ಕಥೆಗಳನ್ನು ರಚಿಸಿ, ಗಟ್ಟಿಯಾಗಿ ಓದುತ್ತದೆ. ಈ ಪುಟಾಣಿಯ ಸಾಧನೆಯು ತಂತ್ರಜ್ಞಾನ ಜಗತ್ತಿನಲ್ಲಿ ಅಚ್ಚರಿ ಮೂಡಿಸಿದೆ.
Read Full Story

04:34 PM (IST) Jul 30

ಡಾಲಿ ಧನಂಜಯ ಅಭಿಮಾನಿಗಳಿಗೆ ಡಬಲ್ ಖುಷಿ - 'ಅಣ್ಣ ಫ್ರಂ ಮೆಕ್ಸಿಕೋ' ರಿಲೀಸ್ ಡೇಟ್ ಫಿಕ್ಸ್

‘ಅಣ್ಣ ಫ್ರಂ ಮೆಕ್ಸಿಕೋ ಭಾವನೆಗಳನ್ನು ಸಂಭ್ರಮಿಸುವ, ಸ್ನೇಹವನ್ನು ಸಂಭ್ರಮಿಸುವ ಸಿನಿಮಾ. ಕೌಟುಂಬಿಕ ಪ್ರೇಕ್ಷಕರನ್ನು ಸಿಂಗಲ್‌ ಸ್ಕ್ರೀನ್‌ಗೆ ಕರೆತರಬಲ್ಲ ಶಕ್ತಿ ಇರುವ ಸಿನಿಮಾ’ ಹೀಗೆ ಹೇಳಿದ್ದು ಡಾಲಿ ಧನಂಜಯ.

Read Full Story

04:18 PM (IST) Jul 30

ಕನ್ನಡ ಸಿನಿಮಾ ಗೆಲ್ಲಬೇಕಾದರೆ ಮೊದಲು ಇದು ಬದಲಾಗಬೇಕು - ನಿರ್ದೇಶಕ ಎಂ.ಡಿ.ಶ್ರೀಧರ್‌

ಈಗ ಕನ್ನಡದಲ್ಲಿ ದೊಡ್ಡ ತಾರೆಗಳು ಎನಿಸಿಕೊಂಡವರು ಎಷ್ಟು ಮಂದಿ ಇದ್ದಾರೆ, ಅವರ ಪೈಕಿ ಎಷ್ಟು ಮಂದಿ ಕನ್ನಡ ಚಿತ್ರಗಳ ನಿರ್ಮಾಪಕರ ಕೈಗೆಟುಕುತ್ತಾರೆ ಎಂಬುದನ್ನೂ ಕೂಡ ನೋಡಬೇಕಿದೆ ಎಂದರು ನಿರ್ದೇಶಕ ಎಂ.ಡಿ.ಶ್ರೀಧರ್‌.

Read Full Story

04:12 PM (IST) Jul 30

Ajinkya Rehane - ಆಟೋಗೆ ದುಡ್ಡಿಲ್ಲದೆ 8 ಕಿ.ಮೀ ಕಿಟ್‌ ಹೊತ್ತು ನಡೆದ ಕರುಣಾಮಯಿ; ರೆಹಾನಿ ಸಾಥ್‌ ನೀಡಿದ್ದು ಇದೇ ಜೀವ!

ಭಾರತೀಯ ಕ್ರಿಕೆಟಿಗ ಅಜಿಂಕ್ಯ ರೆಹಾನೆ ತಮ್ಮ ಯಶಸ್ಸಿನ ಸಂಪೂರ್ಣ ಶ್ರೇಯಸ್ಸನ್ನು ಅವರಿಗೆ ನೀಡಿದ್ದಾರೆ. ಕ್ರಿಕೆಟ್ ತರಬೇತಿಗಾಗಿ, ಆರ್ಥಿಕ ಸಂಕಷ್ಟದ ನಡುವೆಯೂ ಪ್ರತಿದಿನ ಎಂಟು ಕಿಲೋಮೀಟರ್ ನಡೆದು ಕರೆದೊಯ್ಯುತ್ತಿದ್ದ  ತ್ಯಾಗ ಮತ್ತು ಆ ಬೆಂಬಲವನ್ನು ಅವರು ಭಾವನಾತ್ಮಕವಾಗಿ ನೆನೆಪಿಸಿಕೊಂಡಿದ್ದಾರೆ.

Read Full Story

04:11 PM (IST) Jul 30

ಬರ್ತ್‌ಡೇ, ಪ್ರಿವೆಡ್ಡಿಂಗ್‌ ಶೂಟ್‌ಗೆ ಇನ್ಮುಂದೆ ಬಾಡಿಗೆಗೆ ಸಿಗುತ್ತೆ ಡಬಲ್‌ ಡೆಕ್ಕರ್‌ ಅಂಬಾರಿ ಬಸ್‌, ದಿನದ ಬಾಡಿಗೆ ಎಷ್ಟು?

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (KSTDC) 'ಅಂಬಾರಿ' ಡಬಲ್ ಡೆಕ್ಕರ್ ಬಸ್ ಅನ್ನು ಈಗ ಬೆಂಗಳೂರಿನಲ್ಲಿ ಖಾಸಗಿ ಸಮಾರಂಭಗಳು, ಕಾರ್ಪೊರೇಟ್ ಈವೆಂಟ್‌ಗಳು ಮತ್ತು ಪ್ರೀ-ವೆಡ್ಡಿಂಗ್ ಫೋಟೋಶೂಟ್‌ಗಳಿಗಾಗಿ ಬುಕ್ ಮಾಡಬಹುದು.

Read Full Story

01:14 PM (IST) Jul 30

ಸಿಂಚನಾ ಹುಲಿಯ ಕೋರೆ ಹಲ್ಲಿಗೆ ರೂಟ್ ಕೆನಾಲ್! ಬನ್ನೇರುಘಟ್ಟದಲ್ಲಿ ಶಸ್ತ್ರಚಿಕಿತ್ಸೆ,

ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ 'ಸಿಂಚನಾ' ಎಂಬ ಹುಲಿಯ ಹಾನಿಗೊಳಗಾದ ಕೋರೆ ಹಲ್ಲಿಗೆ ಯಶಸ್ವಿ ರೂಟ್ ಕೆನಾಲ್ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಸೋಂಕಿನಿಂದ ಬಳಲುತ್ತಿದ್ದ ಹುಲಿಯು ಇದೀಗ ಚೇತರಿಸಿಕೊಳ್ಳುತ್ತಿದ್ದು, ವೈದ್ಯರ ತಂಡದ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Read Full Story

12:57 PM (IST) Jul 30

ವಿಜಯನಗರ - ದೇವಾಲಯಗಳಲ್ಲಿ ಪ್ರತಿ ತಿಂಗಳು ಹುಂಡಿ ಎಣಿಕೆ ಕಡ್ಡಾಯ, ಚಿನ್ನ ಬೆಳ್ಳಿ ಕಾಣಿಕೆ ಬಗ್ಗೆ ಡಿಸಿ ಸೂಚನೆ ಏನು?

ಹೊಸಪೇಟೆ ಜಿಲ್ಲೆಯ ಪ್ರಮುಖ ದೇವಾಲಯಗಳಲ್ಲಿ ಪಾರದರ್ಶಕತೆ ತರಲು ಜಿಲ್ಲಾಧಿಕಾರಿಗಳು ಹೊಸ ಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಹುಂಡಿ ಎಣಿಕೆಗೆ ಫೇಸ್ ರೆಕಗ್ನಿಷನ್, ಸಿಸಿಟಿವಿ ಕಣ್ಗಾವಲು ಹಾಗೂ ಭಕ್ತರಿಗೆ ಡಿಜಿಟಲ್ ಪಾವತಿ ವ್ಯವಸ್ಥೆ ಅಳವಡಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
Read Full Story

12:34 PM (IST) Jul 30

ರಾಯಚೂರು - ಪಂಪ್‌ಸೆಟ್ ಆನ್ ಮಾಡಲು ಹೋಗಿದ್ದ ಯುವಕ ಕರೆಂಟ್ ಶಾಕ್ ಹೊಡೆದು ದಾರುಣ ಸಾವು!

ಬೋರ್‌ವೆಲ್ ಪಂಪ್‌ಸೆಟ್ ಆನ್‌ ಮಾಡಲು ಜಮೀನಿಗೆ ಹೋಗಿದ್ದ ವೇಳೆ ಕರೆಂಟ್ ಶಾಕ್ ಹೊಡೆದು ಯುವಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ನಡೆದಿದೆ.

Read Full Story

11:48 AM (IST) Jul 30

ಗೊರಗುಂಟೆಪಾಳ್ಯ ಟ್ರಾಫಿಕ್‌ ನಿಯಂತ್ರಣಕ್ಕೆ ಮಾಸ್ಟರ್‌ ಪ್ಲಾನ್‌ - ಮೂರು ಸ್ಥಳಗಳು ಶಿಫ್ಟ್?

ಬೆಂಗಳೂರಿನ ಗೊರಗುಂಟೆಪಾಳ್ಯ ಜಂಕ್ಷನ್‌ನಲ್ಲಿನ ಟ್ರಾಫಿಕ್ ದಟ್ಟಣೆ ನಿವಾರಿಸಲು, ರಸ್ತೆ ವಿಸ್ತರಣೆ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಮೂರು ಸ್ಥಳಾಂತರಗಳ ಸಾಧ್ಯತೆಗಳಿದ್ದು, ಗೋದ್ರೇಜ್ ಪ್ರಾಪರ್ಟೀಸ್ ಮತ್ತು ತಾಜ್ ಹೋಟೆಲ್ ನೀಡಿದ ಭೂಮಿಯನ್ನು ಬಳಸಿ ಹೆಚ್ಚುವರಿ ಲೇನ್‌ಗಳನ್ನು ನಿರ್ಮಿಸಲು ಪಾಲಿಕೆ ಮುಂದಾಗಿದೆ.

Read Full Story

10:25 AM (IST) Jul 30

BWSSB water restrictions - ಕುಡಿಯುವ ನೀರಲ್ಲಿ ಬೈಕ್, ಕಾರು ತೊಳೆದರೆ ಬೀಳುತ್ತೆ ₹5000 ದಂಡ! ಜಲಮಂಡಳಿ ಕಠಿಣ ಆದೇಶ!

ಮುಂಗಾರು ಕೈಕೊಟ್ಟಿದ್ದರಿಂದ ಬೆಂಗಳೂರಿನಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸಲು ಜಲಮಂಡಳಿ ಕಠಿಣ ಕ್ರಮ ಕೈಗೊಂಡಿದೆ. ವಾಹನ ತೊಳೆಯಲು, ಈಜು ಕೊಳಗಳಿಗೆ ಕುಡಿಯುವ ನೀರು ಬಳಸುವುದನ್ನು ನಿಷೇಧಿಸಿದ್ದು, ನಿಯಮ ಉಲ್ಲಂಘಿಸಿದವರಿಗೆ 5,000 ರೂ. ದಂಡ ವಿಧಿಸುವುದಾಗಿ ಎಚ್ಚರಿಸಿದೆ.
Read Full Story

10:16 AM (IST) Jul 30

Ramayana Trailer - 'ರಾಮಾಯಣ' ಟ್ರೇಲರ್ ರಿಲೀಸ್ ಬಳಿಕ ಜಗತ್ತಿನ ರೆಸ್ಪಾನ್ಸ್ ಹೇಗಿದೆ? ನೆಟ್ಟಿಗರು ಹೇಳ್ತಿರೋದೇನು? ಇಲ್ಲಿ ನೋಡಿ..

ರಾಮಾಯಣ ಚಿತ್ರದ ಬಗ್ಗೆ ಅಂತರ್ಜಾಲದಲ್ಲಿ ಸಿಕ್ಕಾಪಟ್ಟೆ ಚರ್ಚೆ ಶುರುವಾಗಿದೆ. ಅದಕ್ಕೆ ಕಾರಣ ಹಲವು. ರಾಮಾಯಣ ಚಿತ್ರ ಬರುತ್ತೆ ಅಂದಾಗ, ಅದರಲ್ಲಿ ರಾಮನ ಪಾತ್ರವನ್ನು ರಣಬೀರ್ ಕಪೂರ್, ರಾವಣನಾಗಿ ಯಶ್ ಹಾಗೂ ಸೀತೆಯಾಗಿ ಸಾಯಿ ಪಲ್ಲವಿ ನಟಿಸುತ್ತಾರೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ, ಹಲವರು ಪ್ರಶ್ನೆ ಎತ್ತಿದ್ದರು.

Read Full Story

08:57 AM (IST) Jul 30

KPSC Scam - ಕೆಪಿಎಸ್‌ಸಿ ನೇಮಕಾತಿ ಹಗರಣ - ಸಿಬಿಐಗೆ ವಹಿಸಲು ಹೈಕೋರ್ಟ್‌ ಇಂಗಿತ, ಹೇಳಿದ್ದೇನು?

ಬೃಹತ್ ಪ್ರಮಾಣದಲ್ಲಿ ಅಕ್ರಮ ಹಾಗೂ ಭ್ರಷ್ಟಾಚಾರ ನಡೆದಿರುವ ಹಿನ್ನೆಲೆಯಲ್ಲಿ ಪಶು ವೈದ್ಯಾಧಿಕಾರಿ (ಗ್ರೂಪ್-ಬಿ) ಹುದ್ದೆಗಳ ನೇಮಕಾತಿ ಪ್ರಕ್ರಿಯೆ ತನಿಖೆಯನ್ನು ಸಿಐಡಿಗೆ ಸರ್ಕಾರ ವಹಿಸಿದ ಮರುದಿನವೇ, ಪ್ರಕರಣವನ್ನು ಕೇಂದ್ರ ತನಿಖಾ ಸಂಸ್ಥೆಯ (ಸಿಬಿಐ) ತನಿಖೆಗೆ ವಹಿಸಲು ಹೈಕೋರ್ಟ್ ಇಂಗಿತ ವ್ಯಕ್ತಪಡಿಸಿದೆ.

Read Full Story

08:37 AM (IST) Jul 30

Cabinet Expansion - ರಾಯಚೂರು ಸಚಿವ ಸ್ಥಾನಕ್ಕಾಗಿ ಬೋಸರಾಜು-ಹಂಪನಗೌಡ ಬಾದರ್ಲಿ ನಡುವೆ ತೀವ್ರ ಪೈಪೋಟಿ

ಹೊಸ ಸಚಿವ ಸಂಪುಟದಲ್ಲಿ ರಾಯಚೂರು ಜಿಲ್ಲೆಗೆ ಸ್ಥಾನ ಪಡೆಯಲು ತೀವ್ರ ಪೈಪೋಟಿ ನಡೆದಿದೆ. ಮಾಜಿ ಸಚಿವ ಎನ್‌.ಎಸ್‌.ಭೋಸರಾಜು ಮತ್ತು ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ನಡುವೆ ಸಚಿವ ಸ್ಥಾನಕ್ಕಾಗಿ ಸ್ಪರ್ಧೆ ಏರ್ಪಟ್ಟಿದ್ದು, ಹೈಕಮಾಂಡ್ ಯಾರನ್ನು ಆಯ್ಕೆ ಮಾಡಲಿದೆ ಎಂಬ ಕುತೂಹಲ ಹೆಚ್ಚಾಗಿದೆ.
Read Full Story

08:05 AM (IST) Jul 30

KPSC Scam - ಈ ಎರಡು ಜಿಲ್ಲೆಗಳಲ್ಲಿ 120 ಎಕರೆ ಭೂ ಖರೀದಿ! ಕೆಪಿಎಸ್‌ಸಿ ಸಾಹುಕಾರನ ವಿರುದ್ಧ ಮತ್ತೊಂದ ದೂರು!

ಅಮಾನತುಗೊಂಡಿರುವ ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ ವಿರುದ್ಧ ರಾಜ್ಯಪಾಲರಿಗೆ ಹೊಸ ದೂರು ಸಲ್ಲಿಕೆಯಾಗಿದೆ. ಸಾಹುಕಾರ್ ಕುಟುಂಬವು ಆದಾಯ ಮೀರಿ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ 120 ಎಕರೆ ಭೂಮಿ ಖರೀದಿಸಿದೆ ಎಂದು ಆರೋಪಿಸಿ, ತನಿಖೆಗೆ ಆಗ್ರಹಿಸಲಾಗಿದೆ.
Read Full Story

07:26 AM (IST) Jul 30

UT Khader - ಅಮೆರಿಕದ ಸಂಸತ್‌ ಇತಿಹಾಸದಲ್ಲಿ ಸಚಿವ ಯು.ಟಿ. ಖಾದರ್‌ ಹೆಸರು ದಾಖಲು

ಕರ್ನಾಟಕದ ಆರೋಗ್ಯ ಸಚಿವ ಯು. ಟಿ. ಖಾದರ್ ಅವರ ಸಾರ್ವಜನಿಕ ಸೇವೆ ಮತ್ತು ನಾಯಕತ್ವವನ್ನು ಗುರುತಿಸಿ ಅಮೆರಿಕದ ಸಂಸತ್ ಗೌರವಿಸಿದೆ. ಈ ಗೌರವ 'ಫಾರ್ ದಿ ಕಾಂಗ್ರೆಸ್ಸಿನಲ್ ರೆಕಾರ್ಡ್' ಆಗಿ ಅಧಿಕೃತವಾಗಿ ದಾಖಲಾಗಿದ್ದು, ಅವರಿಗೆ ಕಾಂಗ್ರೆಸ್ಸಿನಲ್ ಚಾಲೆಂಜ್ ಮೆಡಲಿಯನ್ನು ಸಹ ಪ್ರದಾನ ಮಾಡಲಾಗಿದೆ.
Read Full Story

07:26 AM (IST) Jul 30

Harangi Reservoir - ಹಾರಂಗಿ ಜಲಾಶಯದಿಂದ ತಮಿಳುನಾಡಿಗೆ ಕದ್ದು ನೀರು ಬಿಡುಗಡೆ? ಆರ್ ಅಶೋಕ್ ಗಂಭೀರ ಆರೋಪ

ವಿಪಕ್ಷ ನಾಯಕ ಆರ್. ಅಶೋಕ ಅವರು, ಹಾರಂಗಿ ಜಲಾಶಯದಿಂದ ತಮಿಳುನಾಡಿಗೆ ಸರ್ಕಾರ ಕದ್ದುಮುಚ್ಚಿ ನೀರು ಬಿಡುತ್ತಿದೆ ಎಂದು ಆರೋಪಿಸಿದ್ದಾರೆ. ಇದರಿಂದ ಬೆಂಗಳೂರು, ಮೈಸೂರು, ಮಂಡ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಲಿದೆ ಎಂದು ಎಚ್ಚರಿಸಿದ್ದು, ಬಿಜೆಪಿ ಕೆಆರ್‌ಎಸ್‌ ಡ್ಯಾಂ ಬಳಿ ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.
Read Full Story

More Trending News