LIVE NOW
Published : Jun 29, 2026, 05:16 AM ISTUpdated : Jun 29, 2026, 10:40 PM IST

Karnataka News Live: Instagram Reels Vs Posts - ಇನ್‌ಸ್ಟಾಗ್ರಾಂನಲ್ಲಿ ಯಾವುದು ಹೆಚ್ಚು ರೀಚ್, ಎಂಗೇಜ್‌ಮೆಂಟ್ ತಂದುಕೊಡುತ್ತೆ?

ಸಾರಾಂಶ

ಚಿಕ್ಕಬಳ್ಳಾಪುರ: ನಗರದಲ್ಲಿ ಶನಿವಾರ ನಡೆದ ಕೆಂಪೇಗೌಡ ಜಯಂತಿ ವೇಳೆ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ ಪ್ರಕರಣ, ಮತ್ತು ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ನಡುವೆ ನಡೆದ ಗಲಾಟೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪೊಲೀಸರು ಘಟನೆ ಸಂಬಂಧ ನಾಲ್ವರನ್ನು ಬಂಧಿಸಿದ್ದಾರೆ. 150 ಮಂದಿ ವಿರುದ್ಧ ಸ್ವಯಂಪ್ರೇರಿತ ಕೇಸ್‌ ದಾಖಲಿಸಿದ್ದಾರೆ.

ಚಿಕ್ಕಬಳ್ಳಾಪುರ ಠಾಣೆ ಪಿಎಸ್‌ಐ ಅಮರ್ ಅವರು ಶಾಸಕರ ಮೇಲೆ ಚಪ್ಪಲಿ ಎಸೆದು, ಅವಾಚ್ಯ ಪದಗಳಿಂದ ನಿಂದಿಸಿ, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ 150 ಜನರ ವಿರುದ್ಧ ಸುಮೋಟೋ ಕೇಸ್‌ ದಾಖಲಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರಾದ ಅಖಿಲ್ ರೆಡ್ಡಿ, ಪ್ರಕಾಶ್, ಮೋಹನ್ ರಾಜ್ ಮತ್ತು ಮಹೇಂದ್ರ ಎಂಬುವರನ್ನು ಬಂಧಿಸಲಾಗಿದೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಜಿ.ಪ್ರಭು, ಕೆಂಪೇಗೌಡ ಜಯಂತಿ ಅರ್ಥಪೂರ್ಣವಾಗಿ ನಡೆಯುತ್ತಿತ್ತು. ಆದರೆ ಈ ಘಟನೆ ತೀವ್ರ ಬೇಸರ ಮತ್ತು ನೋವು ತರಿಸಿದೆ. ಈಗಾಗಲೇ ನಾಲ್ವರನ್ನು ಕಸ್ಟಡಿಗೆ ಪಡೆಯಲಾಗಿದೆ ಎಂದರು. ಎಎಸ್ಪಿ ಜಗನ್ನಾಥ ರೈ ಮಾತನಾಡಿ, ಗಲಾಟೆಯಲ್ಲಿ 100-150ಕ್ಕೂ ಹೆಚ್ಚು ಮಂದಿ ಭಾಗಿಯಾಗಿರುವ ಮಾಹಿತಿ ಲಭ್ಯವಾಗಿದೆ. ಸಾಕ್ಷ್ಯಗಳ ಆಧಾರದ ಮೇಲೆ ಎಲ್ಲ ಆರೋಪಿಗಳ ಪತ್ತೆಗೆ ತೀವ್ರ ಶೋಧ ಕಾರ್ಯ ಮುಂದುವರಿದಿದೆ ಎಂದರು.

10:40 PM (IST) Jun 29

Instagram Reels Vs Posts - ಇನ್‌ಸ್ಟಾಗ್ರಾಂನಲ್ಲಿ ಯಾವುದು ಹೆಚ್ಚು ರೀಚ್, ಎಂಗೇಜ್‌ಮೆಂಟ್ ತಂದುಕೊಡುತ್ತೆ?

Instagram Reels Vs Posts: ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್ ಮತ್ತು ಪೋಸ್ಟ್‌ಗಳ ಪೈಕಿ ಯಾವುದಕ್ಕೆ ಹೆಚ್ಚು ರೀಚ್ ಸಿಗುತ್ತೆ ಗೊತ್ತಾ? 2026ರ ಇನ್‌ಸ್ಟಾಗ್ರಾಂ ಲೇಟೆಸ್ಟ್ ಡೇಟಾ ಪ್ರಕಾರ ಯಾವುದು ಬೆಸ್ಟ್ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

Read Full Story

09:41 PM (IST) Jun 29

ರಸ್ತೆ ಅಪಘಾತ ಅತೀ ಹೆಚ್ಚು ಸಂಭವಿಸುತ್ತಿರುವುದರಲ್ಲಿ ಬೆಂಗಳೂರಿಗೆ ದೇಶದಲ್ಲೇ 2ನೇ ಸ್ಥಾನ!

ಕೇಂದ್ರ ರಸ್ತೆ ಸಾರಿಗೆ ಸಚಿವಾಲಯದ 'ಭಾರತದಲ್ಲಿ ರಸ್ತೆ ಅಪಘಾತಗಳು 2024' ವರದಿಯ ಪ್ರಕಾರ, ಬೆಂಗಳೂರು ದೇಶದಲ್ಲೇ ಅತಿ ಹೆಚ್ಚು ರಸ್ತೆ ಅಪಘಾತಗಳನ್ನು ಹೊಂದಿರುವ ಎರಡನೇ ನಗರವಾಗಿದೆ. ಅತಿ ವೇಗದ ಚಾಲನೆಯು ಅಪಘಾತಗಳಿಗೆ ಪ್ರಮುಖ ಕಾರಣವಾಗಿದ್ದು, ದ್ವಿಚಕ್ರ ವಾಹನ ಸವಾರರು ಮತ್ತು ಪಾದಚಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿದ್ದಾರೆ.
Read Full Story

09:35 PM (IST) Jun 29

Garden Safety - ಮಳೆಗಾಲದಲ್ಲಿ ಹಾವುಗಳ ಕಾಟವೇ? ಈ ಗಿಡಗಳು ಮತ್ತು ಪರಿಸ್ಥಿತಿಗಳೇ ಕಾರಣ!

Snake Around Plants: ಮಳೆಗಾಲದಲ್ಲಿ ಮನೆ, ಬಾಲ್ಕನಿ ಅಥವಾ ಗಾರ್ಡನ್‌ನಲ್ಲಿ ಹಾವುಗಳು ಕಾಣಿಸುತ್ತಿವೆಯೇ? ಯಾವ ಗಿಡಗಳು ಮತ್ತು ಪರಿಸ್ಥಿತಿಗಳಿಂದ ಹಾವುಗಳು ಬರುತ್ತವೆ, ಹಾವುಗಳನ್ನು ದೂರವಿಡಲು ಏನು ಮಾಡಬೇಕು.

Read Full Story

08:42 PM (IST) Jun 29

Trisha Krishnan Honey - ತ್ರಿಷಾಗೆ 'ಹನಿ' ಎಂದು ಕರೆಯೋದು ಯಾರು? ಅವರಾ or ಇವರಾ? ನಿಮ್ಮ ಊಹೆ ಸರಿನಾ, ತಪ್ಪಾ?

ಒಂದು ಸಂಗತಿಯನ್ನು ತ್ರಿಷಾ ಮುಚ್ಚುಮರೆ ಇಲ್ಲದೇ ಹೇಳಿಕೊಂಡಿದ್ದಾರೆ. ಅದೇನು ಗೊತ್ತಾ? ಆ ಒಬ್ಬ ವ್ಯಕ್ತಿ, ತ್ರಿಷಾ ಜೀವನದ ಮಹಾನ್ ವ್ಯಕ್ತಿ ಮಾತ್ರ ಅವರನ್ನು 'ಹನಿ' ಎಂದು ಕರೆಯುತ್ತಾರೆ. ಆದರೆ ಈಗ ಬಹಳಷ್ಟು ಜನ, ಅಂದರೆ ತ್ರಿಷಾ ಸ್ನೇಹಿತರ ಬಳಗ ಅವರನ್ನು ಮತ್ತೊಂದು ಹೆಸರಿನಿಂದ ಕರೆಯುತ್ತಾರೆ.

Read Full Story

07:11 PM (IST) Jun 29

ಬರೋಬ್ಬರಿ ₹45 ಲಕ್ಷ ವೇತನ, ತಿಂಗಳ ಕೊನೆಗೆ ದಿವಾಳಿ! ಬೆಂಗಳೂರು ಟೆಕ್ಕಿಯ ವೈರಲ್ ಸ್ಟೋರಿ! ಜೀವನ ವೆಚ್ಚವೋ? ಹಣ ನಿರ್ವಹಣೆ ಲೋಪವೋ?

ವಾರ್ಷಿಕ ₹45 ಲಕ್ಷ ಸಂಬಳವಿದ್ದರೂ ತಿಂಗಳ ಕೊನೆಯಲ್ಲಿ ಉಳಿತಾಯ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಬೆಂಗಳೂರಿನ ಐಟಿ ಉದ್ಯೋಗಿಯೊಬ್ಬರು ಹೇಳಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆಯು ಮೆಟ್ರೋ ನಗರಗಳಲ್ಲಿನ 'ಜೀವನಶೈಲಿ ಹಣದುಬ್ಬರ' ಮತ್ತು ಕಳಪೆ ಹಣಕಾಸು ಯೋಜನೆಯ ಕುರಿತು ದೇಶಾದ್ಯಂತ ಚರ್ಚೆಯನ್ನು ಹುಟ್ಟುಹಾಕಿದೆ.
Read Full Story

06:45 PM (IST) Jun 29

'ಹೇಗಾದರೂ ಮಾತಾಡು ನೀ' - Darshan ನೆನಪಿನಲ್ಲಿ ವಿಜಯಲಕ್ಷ್ಮಿ ಹಂಚಿಕೊಂಡ ಪೋಸ್ಟ್‌ನಲ್ಲಿ ಏನಿದೆ?

Darshan ಪತ್ನಿ ವಿಜಯಲಕ್ಷ್ಮಿ, ಪತಿಯೊಂದಿಗೆ ಇರುವ ಹಳೆಯ ಫೋಟೋವನ್ನು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. 'ತಾರಕ್' ಚಿತ್ರದ 'ಹೇಗಾದರೂ ಮಾತಾಡು ನೀ' ಹಾಡಿನೊಂದಿಗೆ ಹಂಚಿಕೊಂಡಿರುವ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Read Full Story

06:03 PM (IST) Jun 29

ಸಿಎಂ‌ ಡಿಕೆಶಿಯಿಂದ ಗುಡ್ ನ್ಯೂಸ್, ಬೆಂಗಳೂರು ರಸ್ತೆ ಅಭಿವೃದ್ಧಿಗೆ 2000 ಕೋಟಿ ಬಿಡುಗಡೆ, ಯಾವ ಕ್ಷೇತ್ರಕ್ಕೆ ಎಷ್ಟು?

ಡಿ.ಕೆ.ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರವು ಬೆಂಗಳೂರಿನ ರಸ್ತೆ ಮೂಲಸೌಕರ್ಯ ಅಭಿವೃದ್ಧಿಗಾಗಿ ₹2,000 ಕೋಟಿ ಅನುದಾನಕ್ಕೆ ಅನುಮೋದನೆ ನೀಡಿದೆ. ಈ ಬೃಹತ್ ಯೋಜನೆಯಡಿ, ವಿಧಾನಸಭಾ ಕ್ಷೇತ್ರವಾರು ಅನುದಾನ ಹಂಚಿಕೆ ಮಾಡಲಾಗಿದ್ದು, ಆಡಳಿತ ಪಕ್ಷದ ಕ್ಷೇತ್ರಗಳಿಗೆ ಹೆಚ್ಚಿನ ಪಾಲು ದೊರೆತಿದೆ ಎಂಬ ಚರ್ಚೆ ನಡೆಯುತ್ತಿದೆ. ಈ ಯೋಜನೆಯು ನಗರದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಗುರಿ ಹೊಂದಿದೆ.
Read Full Story

05:38 PM (IST) Jun 29

Sharmiela Mandre - 'ಇದು ನನ್ನ ಜೀವನದ ವಿಶೇಷ ಕ್ಷಣ' - ನಿಶ್ಚಿತಾರ್ಥದ ಬಳಿಕ ಶರ್ಮಿಳಾ ಮಾಂಡ್ರೆ ಹೇಳಿದ್ದೇನು?

Sharmiela Mandre ತಮಿಳು ನಿರ್ಮಾಪಕ ಸುಧನ್ ಸುಂದರಂ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಆಪ್ತರ ಸಮ್ಮುಖದಲ್ಲಿ ನಡೆದ ಸಮಾರಂಭದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

Read Full Story

05:03 PM (IST) Jun 29

NS Shankar - ಒಂದು ಸಿನಿಮಾ, ಸಾವಿರ ನೆನಪು... ತೆರೆಗೆ ಸರಿದ ನಗಿಸಿದ ನಿರ್ದೇಶಕ ಎನ್‌.ಎಸ್‌.ಶಂಕರ್‌

NS Shankar: 'ಉಲ್ಟಾ ಪಲ್ಟಾ' ಚಿತ್ರದ ನಿರ್ದೇಶಕ, ಹಿರಿಯ ಪತ್ರಕರ್ತ, ಸಾಹಿತಿ ಹಾಗೂ ಸಾಂಸ್ಕೃತಿಕ ಚಿಂತಕ ಎನ್‌.ಎಸ್‌. ಶಂಕರ್ ನಿಧನರಾಗಿದ್ದಾರೆ. ಅವರ ಅಗಲಿಕೆಗೆ ಚಿತ್ರರಂಗ ಮತ್ತು ಸಾಹಿತ್ಯ ವಲಯದ ಗಣ್ಯರು ಭಾವಪೂರ್ಣ ನಮನ ಸಲ್ಲಿಸಿದ್ದಾರೆ.

Read Full Story

04:50 PM (IST) Jun 29

Priya Sudeep Viral - ಅದ್ಭುತ ಕಥೆ ನಿಮ್ಮಲ್ಲಿ ಇದೆಯೇ? ಕಿಚ್ಚ ಸುದೀಪ್‌ ಪತ್ನಿ ಪ್ರಿಯಾ ಸಂಸ್ಥೆಯಲ್ಲಿ ಚಾನ್ಸ್ ಇದೆ ನೋಡಿ!

ಗಾಂಧಿನಗರದ ಗಲ್ಲಿಗಳಲ್ಲಿ ಅಲೆಯುವ ಬದಲು, ನಿಮ್ಮ ಪ್ರತಿಭೆಯನ್ನು ನೇರವಾಗಿ ಸಾಬೀತುಪಡಿಸಲು ಇದೊಂದು ಸುವರ್ಣಾವಕಾಶ. ನಿಮ್ಮ ಲೇಖನಿ ಬೆಳ್ಳಿತೆರೆಯ ಮೇಲೆ ಮಿನುಗುವ ಕಾಲ ಹತ್ತಿರ ಬಂದಿದೆ. ನಿಮ್ಮಲ್ಲಿ ಗಟ್ಟಿಯಾದ ಕಥೆ ಇದ್ದರೆ ತಡಮಾಡಬೇಡಿ, ಕೂಡಲೇ ಈ ನಂಬರ್‌ಗೆ ಕರೆ ಮಾಡಿ, ಚಾನ್ಸ್ ನಿಮ್ಮದಾಗಿಸಿಕೊಳ್ಳಿ!

Read Full Story

04:46 PM (IST) Jun 29

Nabha Natesh - 'ವಜ್ರಕಾಯ' ಬಳಿಕ ಕನ್ನಡಕ್ಕೆ ಯಾಕೆ ಬರಲಿಲ್ಲ? ನಟಿ ನಭಾ ಕೊಟ್ಟ ಉತ್ತರ ಏನು?

Vajrakaya ಖ್ಯಾತಿಯ ನಭಾ ನಟೇಶ್ ಕೋವಿಡ್ ಬಳಿಕದ ಜೀವನ, ಕನ್ನಡ ಸಿನಿಮಾಗಳಿಗೆ ಕಮ್‌ಬ್ಯಾಕ್, ನಾಗಬಂಧಂ, ಸ್ವಯಂಭೂ ಹಾಗೂ ಶೃಂಗೇರಿಯೊಂದಿಗಿನ ನಂಟಿನ ಬಗ್ಗೆ ವಿಶೇಷ ಸಂದರ್ಶನದಲ್ಲಿ ಮನದಾಳದ ಮಾತು ಹಂಚಿಕೊಂಡಿದ್ದಾರೆ.

Read Full Story

04:42 PM (IST) Jun 29

ಬರೋಬ್ಬರಿ 4 ದಶಕಗಳ ಬೆಂಗಳೂರು ಉಪನಗರ ರೈಲು ಕನಸು ನನಸಾಗೋ ಕಾಲ ಸನ್ನಿಹಿತ, 2028ಕ್ಕೆ ಮೊದಲ ಸೇವೆ ಆರಂಭ!

ಬೆಂಗಳೂರಿನ ಬಹುನಿರೀಕ್ಷಿತ ಉಪನಗರ ರೈಲು ಯೋಜನೆಯ ಕಾಮಗಾರಿ ವೇಗ ಪಡೆದುಕೊಂಡಿದೆ. ಮೆಟ್ರೋಗಿಂತ ಹೆಚ್ಚು ಸವಾಲಿನದಾದ ಈ ಯೋಜನೆಯ ಕಾರಿಡಾರ್ 2 ಮತ್ತು 4ರ ಕೆಲಸಗಳು ಭರದಿಂದ ಸಾಗುತ್ತಿದ್ದು, ಡಿಸೆಂಬರ್ 2028ರ ವೇಳೆಗೆ ಮೊದಲ ರೈಲು ಸಂಚಾರ ಆರಂಭಿಸುವ ಗುರಿಯನ್ನು ಕೆ-ರೈಡ್ ಹೊಂದಿದೆ. ಈ ಯೋಜನೆಯು ನಗರದ ಅಭಿವೃದ್ಧಿಯನ್ನು ಮರುರೂಪಿಸುವ ಸಾಮರ್ಥ್ಯವನ್ನು ಹೊಂದಿದೆ.
Read Full Story

04:21 PM (IST) Jun 29

Shivarajkumar ಮಾನವೀಯತೆ ಬಿಚ್ಚಿಟ್ಟ ಸುನೀಲ್‌ ಕುಮಾರ್‌ ದೇಸಾಯಿ - ಜೇನು ದಾಳಿಯ ಕಥೆ ವೈರಲ್

Shivanna: 'ನಮ್ಮೂರ ಮಂದಾರ ಹೂವೆ' ಶೂಟಿಂಗ್ ವೇಳೆ ಸಾತೊಡ್ಡಿ ಜಲಪಾತದಲ್ಲಿ ನಡೆದ ಜೇನು ದಾಳಿಯ ವೇಳೆ ಶಿವರಾಜ್‌ಕುಮಾರ್‌ ಮಕ್ಕಳನ್ನು ರಕ್ಷಿಸಿದ ಘಟನೆಯನ್ನು ನಿರ್ದೇಶಕ ಸುನೀಲ್‌ ಕುಮಾರ್‌ ದೇಸಾಯಿ ಹಂಚಿಕೊಂಡಿದ್ದಾರೆ.

Read Full Story

04:08 PM (IST) Jun 29

Bigg Boss ಖ್ಯಾತಿಯ ದಿವ್ಯಾ ಸುರೇಶ್‌ಗೆ ಬೆಚ್ಚಿಬೀಳಿಸುವ ಅನುಭವ - ವಿಡಿಯೋ ಹಂಚಿಕೊಂಡು ಪೊಲೀಸರಿಗೆ ಮನವಿ

Divya Suresh: ಬೆಂಗಳೂರಿನಲ್ಲಿ ರಾತ್ರಿ ನಟಿ ಹಾಗೂ ಬಿಗ್‌ಬಾಸ್ ಕನ್ನಡ ಖ್ಯಾತಿಯ ದಿವ್ಯಾ ಸುರೇಶ್‌ಗೆ ಯುವಕನಿಂದ ಕಿರುಕುಳ ಆರೋಪ. ಘಟನೆದ ವಿಡಿಯೋ ಹಂಚಿಕೊಂಡು ಬೆಂಗಳೂರು ಪೊಲೀಸರ ಕ್ರಮಕ್ಕೆ ಮನವಿ ಮಾಡಿದ್ದಾರೆ.

Read Full Story

03:49 PM (IST) Jun 29

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಸಂಚಾರ ಮುಕ್ತ, ಆಂಧ್ರದವರೆಗೆ 100 ಕಿ.ಮೀ ತಡೆರಹಿತ ಸಂಚಾರ!

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇಯ ಬೇತಮಂಗಲ-ಬೈರೆಡ್ಡಿಪಲ್ಲಿ ನಡುವಿನ 25 ಕಿ.ಮೀ ಮಾರ್ಗ ಸಂಚಾರಕ್ಕೆ ಮುಕ್ತವಾಗಿದೆ. ಇದರಿಂದ ಹೊಸಕೋಟೆಯಿಂದ ಬೈರೆಡ್ಡಿಪಲ್ಲಿವರೆಗೆ ಒಟ್ಟು 100 ಕಿ.ಮೀ ನಿರಂತರ ಸಂಚಾರ ಸಾಧ್ಯವಾಗಿದ್ದು, ಚೆನ್ನೈ, ತಿರುಪತಿ ಕಡೆಗಿನ ಪ್ರಯಾಣದ ಸಮಯ ಉಳಿತಾಯವಾಗಲಿದೆ.
Read Full Story

02:30 PM (IST) Jun 29

Graamaayana Movie Trailer - ಮೇಘಾ ಶೆಟ್ಟಿ, ವಿನಯ್‌ ರಾಜ್‌ಕುಮಾರ್‌ 'ಗ್ರಾಮಾಯಣ'ಕ್ಕೆ‌ ದುನಿಯಾ ವಿಜಯ್ ಸಾಥ್

Graamaayana Movie: ಲಹರಿ ಫಿಲಂಸ್ ನಿರ್ಮಾಣದ, ದೇವನೂರು ಚಂದ್ರು ನಿರ್ದೇಶನದ, ವಿನಯ್ ರಾಜಕುಮಾರ್, ಮೇಘಾ ಶೆಟ್ಟಿ ನಾಯಕ - ನಾಯಕಿಯಾಗಿ ಅಭಿನಯಿಸಿರುವ ‘ಗ್ರಾಮಾಯಣ’ ಸಿನಿಮಾದ ಟ್ರೇಲರ್ ಬಿಡುಗಡೆ ಹಾಗೂ ಪ್ರೀ ರಿಲೀಸ್ ಇವೆಂಟ್ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತು. 

 

Read Full Story

02:26 PM (IST) Jun 29

ಚಿಂತಾಜನಕ ಸ್ಥಿತಿಯಲ್ಲಿರೋ ಸರ್ಕಾರಿ ಶಾಲೆಗಳ ಕಪ್ಪು ಬೋರ್ಡ್‌ಗಳಿಗೆ ಬಣ್ಣ ಬಳಿಯುವ ಅಭಿಯಾನ

ಸರ್ಕಾರಿ ಶಾಲೆಗಳಲ್ಲಿ ಹಾಳಾಗಿದ್ದ ಕಪ್ಪು ಬೋರ್ಡ್‌ಗಳಿಗೆ ಶಿಕ್ಷಣ ಇಲಾಖೆಯು 'ನಾವು ಬಣ್ಣ ಬಳಿಯುವ ಅಭಿಯಾನ'ದ ಮೂಲಕ ಹೊಸ ಜೀವ ನೀಡುತ್ತಿದೆ. ಶಾಲಾ ಅನುದಾನ ಬಳಸಿ ಶಿಕ್ಷಕರು ಈ ನವೀಕರಣ ಕಾರ್ಯ ಕೈಗೊಂಡಿದ್ದು, ಮಕ್ಕಳ ಕಲಿಕೆಗೆ ಅನುಕೂಲವಾಗುವಂತೆ ಕಾಯಕಲ್ಪ ನೀಡಲಾಗುತ್ತಿದೆ.

Read Full Story

02:20 PM (IST) Jun 29

"ವಿಜಯೇಂದ್ರನನ್ನು ಒದ್ದು ಬಿಸಾಕಿ" ಸದಾನಂದ ಗೌಡರದ್ದು ಎನ್ನಲಾದ ಆಡಿಯೋ ಲೀಕ್, ನೋ ಕಮೆಂಟ್ಸ್ ಎಂದ ಡಿವಿಎಸ್!!

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರರ ಉಚ್ಚಾಟನೆ ಕುರಿತು ಮಾಜಿ ಸಿಎಂ ಸದಾನಂದಗೌಡರು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದ್ದು, ರಾಜ್ಯ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಿದೆ. ಈ ವಿವಾದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸದಾನಂದಗೌಡರು, ಇದು ತಮ್ಮ ವಿರುದ್ಧದ ಪಿತೂರಿ ಎಂದು ಆರೋಪಿಸಿದ್ದು, ರಾಜ್ಯ ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ತಾರಕಕ್ಕೇರಿದೆ.
Read Full Story

01:37 PM (IST) Jun 29

ಬೆಂಗಳೂರಿನ ಈ ವೈದ್ಯರ ಮಾತ್ರೆ ಚೀಟಿ ಸಿಕ್ಕಾಪಟ್ಟೆ ವೈರಲ್​ - ಕೊನೆಗೂ ಆಸೆ ನೆರವೇರಿತು ಅಂತಿದ್ದಾರೆ ನೆಟ್ಟಿಗರು

ಸಾಮಾನ್ಯವಾಗಿ ವೈದ್ಯರ ಅಸ್ಪಷ್ಟ ಕೈಬರಹದ ಬಗ್ಗೆ ಇರುವ ಅಭಿಪ್ರಾಯಕ್ಕೆ ವ್ಯತಿರಿಕ್ತವಾಗಿ, ಡಾ. ಲೋಕೇಶ್ ಎಂಬುವವರು ಬರೆದ ಸುಂದರ ಅಕ್ಷರಗಳ ಪ್ರಿಸ್ಕ್ರಿಪ್ಷನ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಸ್ಪಷ್ಟವಾದ ಕೈಬರಹಕ್ಕೆ ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ವೈದ್ಯರ ವೃತ್ತಿಪರತೆಯನ್ನು ಶ್ಲಾಘಿಸಲಾಗುತ್ತಿದೆ.
Read Full Story

12:45 PM (IST) Jun 29

ಜನರ ಕಾರು ಓಡಲು ಪ್ರಕೃತಿಯ ಒಡಲು ಹರಿದರು..ಶಿವಮೊಗ್ಗದಲ್ಲಿ ‘ಟ್ರಾಫಿಕ್’ ನೆಪದಲ್ಲಿ ಮರಗಳ ಮಾರಣಹೋಮ!

ಶಿವಮೊಗ್ಗ-ಸವಳಂಗ ರಾಜ್ಯ ಹೆದ್ದಾರಿಯಲ್ಲಿ ಮಳೆ-ಗಾಳಿಯ ಮುನ್ನೆಚ್ಚರಿಕೆ ನೆಪದಲ್ಲಿ ಅರಣ್ಯ ಇಲಾಖೆಯು 139 ಮರಗಳನ್ನು ಕಡಿಯಲು ಆರಂಭಿಸಿದೆ. ಇಲಾಖೆಯು ಇದು ಸುರಕ್ಷತಾ ಕ್ರಮವೆಂದು ಹೇಳಿದರೆ, ಇದು ಅನಗತ್ಯ ಮತ್ತು ನಿಯಮಬಾಹಿರ ಕ್ರಮ ಎಂದು ಪರಿಸರ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Read Full Story

12:10 PM (IST) Jun 29

ಹೆಬ್ಬಾಳ ವೆಟರ್ನರಿ ಕಾಲೇಜಿನಲ್ಲಿ ವಾಕಿಂಗ್‌ಗೆ ಇನ್ಮುಂದೆ ಉಚಿತ ಪ್ರವೇಶವಿಲ್ಲ; ವಾರ್ಷಿಕ ಪಾಸ್ ಕಡ್ಡಾಯ ಮಾಡಿದ ಮಂಡಳಿ!

ಹೆಬ್ಬಾಳ ಪಶುವೈದ್ಯಕೀಯ ಕಾಲೇಜು ಆವರಣದಲ್ಲಿ ವಾಕಿಂಗ್ ಮಾಡುವ ಸಾರ್ವಜನಿಕರಿಗೆ ವಾರ್ಷಿಕ ₹100 ಶುಲ್ಕದ 'ಪೇಯ್ಡ್ ಪಾಸ್' ವ್ಯವಸ್ಥೆ ಜಾರಿಗೆ ತರಲಾಗಿದೆ. ಕ್ಯಾಂಪಸ್ ನಿರ್ವಹಣೆ ಮತ್ತು ಭದ್ರತೆಗಾಗಿ ಈ ಕ್ರಮ ಕೈಗೊಳ್ಳಲಾಗಿದ್ದು, ಸಾರ್ವಜನಿಕರಿಂದ ಈ ನಿರ್ಧಾರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

Read Full Story

11:45 AM (IST) Jun 29

Bengaluru - ಸರ್ಜಾಪುರದಲ್ಲಿ ಪುರವಂಕರ ಭರ್ಜರಿ ಹೂಡಿಕೆ, ₹1,000 ಕೋಟಿ ಮೌಲ್ಯದ ವಸತಿ ಯೋಜನೆಗೆ ಸಹಿ!

ಭಾರತದ ಪ್ರಮುಖ ರಿಯಲ್ ಎಸ್ಟೇಟ್ ಸಂಸ್ಥೆ ಪುರವಂಕರ, ಬೆಂಗಳೂರಿನ ಸರ್ಜಾಪುರದಲ್ಲಿ 6.4 ಎಕರೆ ಭೂಮಿಯಲ್ಲಿ ₹1,000 ಕೋಟಿ ಮೌಲ್ಯದ ಬೃಹತ್ ವಸತಿ ಯೋಜನೆಯನ್ನು ಅಭಿವೃದ್ಧಿಪಡಿಸಲು ಜಂಟಿ ಅಭಿವೃದ್ಧಿ ಒಪ್ಪಂದ ಮಾಡಿಕೊಂಡಿದೆ. ಈ ಯೋಜನೆಯು ಸುಮಾರು 8 ಲಕ್ಷ ಚದರ ಅಡಿ ಮಾರಾಟ ಮಾಡಬಹುದಾದ ವಿಸ್ತೀರ್ಣವನ್ನು ಹೊಂದಿದ್ದು, ಐಟಿ ಕಾರಿಡಾರ್‌ನಲ್ಲಿ ಹೆಚ್ಚುತ್ತಿರುವ ವಸತಿ ಬೇಡಿಕೆಯನ್ನು ಪೂರೈಸುವ ಗುರಿ ಹೊಂದಿದೆ.
Read Full Story

10:55 AM (IST) Jun 29

Bengaluru - ಮದ್ಯದ ಲೆಕ್ಕದಲ್ಲಿ ಗೋಲ್ಮಾಲ್ - ಅಬಕಾರಿ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ಲೋಕಾಯುಕ್ತ ಸರಣಿ ದಾಳಿ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಪ್ತಿ ಮಾಡಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಮದ್ಯದ ಲೆಕ್ಕದಲ್ಲಿ ವ್ಯತ್ಯಾಸ ಎಸಗಿದ ಆರೋಪದ ಮೇಲೆ ಬೆಂಗಳೂರಿನ ಇಬ್ಬರು ಪ್ರಭಾವಿ ಅಬಕಾರಿ ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಈ ದಾಳಿಯು ಅಬಕಾರಿ ಇಲಾಖೆಯಲ್ಲಿನ ಭ್ರಷ್ಟಾಚಾರವನ್ನು ಬಯಲಿಗೆಳೆದಿದ್ದು, ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
Read Full Story

08:45 AM (IST) Jun 29

'ಅಂತ್ಯವಾಯ್ತು' ಎಂದವನ ಬದುಕೇ ಅಂತ್ಯ! ಚಾವಣಿ ಕುಸಿದು ಮೂವರು ವಿದ್ಯಾರ್ಥಿಗಳು ಸಾವು

ರಾಯಚೂರಿನಲ್ಲಿ ಕಟ್ಟಡವೊಂದರ ಚಾವಣಿ ಕುಸಿದು ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಮೃತರಲ್ಲಿ ಒಬ್ಬರಾದ ನಾಗರಾಜ್, 'ಅಂತ್ಯವಾಯ್ತು' ಎಂಬ ಕಿರುಚಿತ್ರವನ್ನು ನಿರ್ಮಿಸಿದ್ದು ವಿಪರ್ಯಾಸವಾಗಿದೆ. ಈ ಘಟನೆಯಲ್ಲಿ ಗಾಯಗೊಂಡಿದ್ದ ಇನ್ನಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Read Full Story

08:30 AM (IST) Jun 29

ಎಲ್‌ ನಿನೋ ಎಫೆಕ್ಟ್, ತುಂಗಭದ್ರಾ ಜಲಾಶಯಕ್ಕೆ ಎಂಟು ದಿನಗಳಿಂದ ಶೂನ್ಯ ನೀರಿನ ಒಳಹರಿವು

ಎಲ್‌ ನಿನೋ ಪರಿಣಾಮದಿಂದ ತುಂಗಭದ್ರಾ ಜಲಾಶಯಕ್ಕೆ ನೀರಿನ ಒಳಹರಿವು ತೀವ್ರವಾಗಿ ಕುಸಿದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 52 ಟಿಎಂಸಿ ನೀರಿನ ಕೊರತೆಯಿದ್ದು, ಕಳೆದ 8 ದಿನಗಳಿಂದ ಒಳಹರಿವು ಶೂನ್ಯಕ್ಕೆ ತಲುಪಿದೆ. ಇದರಿಂದಾಗಿ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಆತಂಕ ಮನೆಮಾಡಿದ್ದು, ಮುಂಗಾರು ಬೆಳೆಗೆ ನೀರು ಸಿಗುವುದು ಅನುಮಾನವಾಗಿದೆ.
Read Full Story

07:38 AM (IST) Jun 29

75 ವರ್ಷದ ಸಿನಿ ನೆನಪುಗಳಿಗೆ ತೆರೆ - ಇತಿಹಾಸದ ಪುಟ ಸೇರಿದ ಅರಸೀಕೆರೆಯ ಸಾಧನ ಚಿತ್ರಮಂದಿರ

ಅರಸೀಕೆರೆಯ 75 ವರ್ಷಗಳ ಇತಿಹಾಸವಿದ್ದ, ಪಂಚಭಾಷಾ ಚಿತ್ರಗಳ ಪ್ರದರ್ಶನಕ್ಕೆ ಹೆಸರಾಗಿದ್ದ ಸಾಧನ ಚಿತ್ರಮಂದಿರ ಇದೀಗ ತೆರವುಗೊಳ್ಳುತ್ತಿದೆ. ಮಲ್ಟಿಪ್ಲೆಕ್ಸ್ ಮತ್ತು ಡಿಜಿಟಲ್ ಮಾಧ್ಯಮಗಳ ಪ್ರಭಾವದಿಂದಾಗಿ, ಒಂದು ಕಾಲದ ಜನಪ್ರಿಯ ಮನರಂಜನಾ ತಾಣವಾಗಿದ್ದ ಈ ಚಿತ್ರಮಂದಿರವು ಇದೀಗ ಇತಿಹಾಸದ ಪುಟ ಸೇರುತ್ತಿದ್ದು, ಅದರ ಸ್ಥಳದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣವಾಗಲಿದೆ.
Read Full Story

06:51 AM (IST) Jun 29

ಕುಡಚಿ-ಬಾಗಲಕೊಟೆ ರೈಲು ಕಾಮಗಾರಿ ವಿಳಂಬಕ್ಕೆ ಕಾರಣ ಏನು? ಸಂಸದರು ಸಿಟ್ಟಾಗಿದ್ದೇಕೆ?

ಕುಡಚಿ-ಬಾಗಲಕೊಟೆ ರೈಲ್ವೆ ಕಾಮಗಾರಿ ವಿಳಂಬಕ್ಕೆ ಸಾರ್ವಜನಿಕರು ಮತ್ತು ರೈತರ ಸಹಕಾರದ ಕೊರತೆಯೇ ಕಾರಣ ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದ್ದಾರೆ. ಜಮೀನು ಮತ್ತು ಮರಗಳಿಗೆ ಹೆಚ್ಚಿನ ಪರಿಹಾರಕ್ಕಾಗಿ ರೈತರು ನ್ಯಾಯಾಲಯದ ಮೊರೆ ಹೋಗಿರುವುದರಿಂದ ಯೋಜನೆಗೆ ಅಡ್ಡಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
Read Full Story

06:17 AM (IST) Jun 29

ಜುಲೈ 2ರವರೆಗೆ ಉತ್ತಮ ಮಳೆ ಸಾಧ್ಯತೆ; ಕರಾವಳಿ, ಮಲೆನಾಡಿನ ಕೆಲ ಪ್ರದೇಶಕ್ಕೆ ಆರೆಂಜ್ ಅಲರ್ಟ್

ರಾಜ್ಯದ ಕರಾವಳಿ ಮತ್ತು ಮಲೆನಾಡಿನ ಕೆಲವು ಜಿಲ್ಲೆಗಳಲ್ಲಿ ಜು.2ರವರೆಗೆ ಉತ್ತಮ ಮಳೆಯಾಗಲಿದ್ದು, ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ನೀಡಿದೆ. ಮತ್ತೊಂದೆಡೆ ರಾಯಚೂರಿನಲ್ಲಿ ಗರಿಷ್ಠ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಇಲಾಖೆ ತಿಳಿಸಿದೆ.

Read Full Story

06:08 AM (IST) Jun 29

Shivamogga - 300 ಕೋಟಿ ವೆಚ್ಚದಲ್ಲಿ 7 ಕಡೆ ರೈಲ್ವೆ ಮೇಲ್ಸೇತುವೆ - ಸಂಸದ ರಾಘವೇಂದ್ರ

ಶಿವಮೊಗ್ಗ ಲೋಕಸಭಾ ಕ್ಷೇತ್ರದಾದ್ಯಂತ ₹300 ಕೋಟಿ ವೆಚ್ಚದಲ್ಲಿ 7 ಹೊಸ ರೈಲ್ವೆ ಮೇಲ್ಸೇತುವೆಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ. ವಿದ್ಯಾನಗರದಲ್ಲಿ ₹3 ಕೋಟಿ ವೆಚ್ಚದ ಅಂಡರ್‌ಪಾಸ್‌ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದ ಅವರು, ಈ ಯೋಜನೆಗಳಿಂದ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂದರು.
Read Full Story

06:01 AM (IST) Jun 29

ಕೊಂಡಗೂಳಿ ಮಾರ್ಗವಾಗಿ ಸಿಂದಗಿ ಪಟ್ಟಣಕ್ಕೆ ನೂತನ ಬಸ್; ಗ್ರಾಮಸ್ಥರ ಕನಸು ನನಸಾಯ್ತು!

ಬಸವನಬಾಗೇವಾಡಿಯಿಂದ ಕೊಂಡಗೂಳಿ ಮಾರ್ಗವಾಗಿ ಸಿಂದಗಿ ಪಟ್ಟಣಕ್ಕೆ ನೂತನ ಬಸ್ ಸಂಚಾರ ಆರಂಭವಾಗಿದ್ದು, ಇದು ಗ್ರಾಮಸ್ಥರ ಬಹುದಿನದ ಬೇಡಿಕೆಯಾಗಿತ್ತು. ಗ್ರಾಮಸ್ಥರು ಹಾರ, ತುರಾಯಿ ಹಾಕಿ ಪೂಜೆ ಸಲ್ಲಿಸುವ ಮೂಲಕ ಬಸ್ಸನ್ನು ಸಂಭ್ರಮದಿಂದ ಸ್ವಾಗತಿಸಿ, ಶಾಸಕರು ಹಾಗೂ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.
Read Full Story

05:54 AM (IST) Jun 29

ಅಮಲಿನ ಅಂಶ ಪತ್ತೆಆದ್ರೆ ಪಾನ್‌ ಮಸಾಲ, ಗುಟ್ಕಾ ನಿಷೇಧ - ಡಿಕೆ ಶಿವಕುಮಾರ್ ಎಚ್ಚರಿಕೆ

ಗುಟ್ಕಾ ಮತ್ತು ಪಾನ್‌ ಮಸಾಲಾಗಳಲ್ಲಿ ನಶೆ ಪದಾರ್ಥಗಳನ್ನು ಬೆರೆಸಲಾಗುತ್ತಿದೆ ಎಂಬ ಶಂಕೆಯ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಯಾರಿಕಾ ಕಂಪನಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಇದು ಸಾಬೀತಾದಲ್ಲಿ, ಸರ್ಕಾರದ ಆದಾಯ ನಷ್ಟವನ್ನು ಪರಿಗಣಿಸದೆ ರಾಜ್ಯದಲ್ಲಿ ಈ ಎಲ್ಲಾ ಉತ್ಪನ್ನಗಳನ್ನು ಸಂಪೂರ್ಣವಾಗಿ ನಿಷೇಧಿಸುವುದಾಗಿ ಅವರು ಘೋಷಿಸಿದ್ದಾರೆ.
Read Full Story

05:48 AM (IST) Jun 29

ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಶುರು; ನಾಳೆಯಿಂದ ಮನೆಮನೆಗೆ ಎಸ್‌ಐಆರ್

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಆರಂಭವಾಗಿದೆ. ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ, ಹೊಸ ಹೆಸರು ಸೇರ್ಪಡೆ, ಅನರ್ಹರ ಹೆಸರು ತೆಗೆದುಹಾಕುವುದು ಮತ್ತು ತಿದ್ದುಪಡಿ ಮಾಡುವ ಮೂಲಕ ಪಟ್ಟಿಯನ್ನು ನವೀಕರಿಸಲಿದ್ದಾರೆ. ಈ ಪ್ರಕ್ರಿಯೆಯು ನಿಗದಿತ ವೇಳಾಪಟ್ಟಿಯಂತೆ ನಡೆಯಲಿದ್ದು, ಅಂತಿಮ ಪಟ್ಟಿಯನ್ನು ಅಕ್ಟೋಬರ್ 7 ರಂದು ಪ್ರಕಟಿಸಲಾಗುತ್ತದೆ.
Read Full Story

More Trending News