ಬೆಂಗಳೂರು: ಸಚಿವ ಕೆ.ಎನ್. ರಾಜಣ್ಣ ರಾಜಕೀಯ ಬೆಳವ ಣಿಗೆ ಆಗಬಹುದು ಎಂದು ಹೇಳಿದ್ದಾರೆಯೇ ಹೊರತು ಹೀಗೆಯೇ ಆಗುತ್ತದೆ ಎಂದು ಹೇಳಿಲ್ಲ. ನೀವು ಊಹೆ ಮಾಡಿಕೊಂಡು ಏನೇನೋ ಸುದ್ದಿ ಮಾಡಿದರೆ ಹೇಗೆ? ರಾಜಣ್ಣ ಅವರ ಹೇಳಿಕೆಯನ್ನು ನಿರ್ಲಕ್ಷ್ಯ ಮಾಡು ವುದು ಉತ್ತಮ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಮೊದಲ ಅವಧಿಯಲ್ಲಿ (2013-2018) ಇದ್ದಂತೆ ಈಗ (ಎರಡನೇ ಅವಧಿಯಲ್ಲಿ) ಇಲ್ಲ ಎಂದು ನೀವು (ಮಾಧ್ಯಮಗಳು) ಹೇಳಬಹುದು. ಬಹುತೇಕ ಜನರ ಅಭಿಪ್ರಾಯ ಕೂಡ ಇದೇ ಆಗಿದೆ. ಇದಕ್ಕೆ ಪಕ್ಷದಲ್ಲಿ ಹಲವು ಪವರ್ ಸೆಂಟರ್‌ಗಳಿರುವುದೇ ಕಾರಣ ಎಂದು ಕೆಎನ್ ರಾಜಣ್ಣ ಹೇಳಿದ್ದರು.
11:01 PM (IST) Jun 29
ಕುಣಿಗಲ್ ಬೈಪಾಸ್ ಬಳಿ ಭೀಕರ ಅಪಘಾತ ಸಂಭವಿಸಿದೆ. ಕಾರು ಹಾಗೂ ಕ್ಯಾಂಟರ್ ನಡುವಿನ ಅಪಘಾತದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
09:17 PM (IST) Jun 29
ಸೈಬರ್ ಫ್ರಾಡ್ ದೇಶಾದ್ಯಂತ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಇದೀಗ ಸೈಬರ್ ಫ್ರಾಡ್ ವರದಿ ಬಹಿರಂಗವಾಗಿದೆ. ಐಟಿ ಸಿಟಿ ಹೊಂದಿರುವ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಕೋಟಿ ಕೋಟಿ ರೂಪಾಯಿ ಸೈಬರ್ ವಂಚಕರ ಪಾಲಾಗಿದೆ. ಕರ್ನಾಟಕದ ಅಮಾಯಕರು ಸೈಬರ್ ಫ್ರಾಡ್‌ನಿಂದ ಕಳೆದುಕೊಂಡಿದ್ದು ಎಷ್ಟು ಕೊಟಿ ಗೊತ್ತಾ?
09:09 PM (IST) Jun 29
ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ಸೂಚನೆಯ ಮೇರೆಗೆ ಬೆಂಗಳೂರು ನಗರ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಬನ್ನೇರುಘಟ್ಟ ರಸ್ತೆಯಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ.
08:37 PM (IST) Jun 29
ಪೆಹಲ್ಗಾಂ ದಾಳಿ ಬಳಿಕ ಐತಿಹಾಸಿಕ ಸಿಂದೂ ನಧಿ ಒಪ್ಪಂದ ಸೇರಿದಂತೆ ಪಾಕಿಸ್ತಾನ ಜೊತೆಗಿನ ಎಲ್ಲಾ ಒಪ್ಪಂದ, ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ. ಆದರೆ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗಲಿದೆ ಎಂದು ಮೂಲಗಳು ಹೇಳುತ್ತಿದೆ.
08:03 PM (IST) Jun 29
ಗ್ರಾಮ ದೇವತೆಯರ ಜಾತ್ರೆ ಐತಿಹಾಸಿಕ ಜಾತ್ರೆಯಾಗಿದೆ. ಲಕ್ಷಾಂತರ ಜನ ಜಾತ್ರೆಯಲ್ಲಿ ಪಾಲ್ಗೊಳ್ಳಲಿದ್ದು, ಜಾತ್ರಾ ಸಮಯದಲ್ಲಿ ಕಳೆದ ಬಾರಿಯಾದ ಸಮಸ್ಯೆಗಳು ಮರುಕಳಿಸದಂತೆ ನಿಗಾವಹಿಸುವುದು ಅತ್ಯವಶ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
07:49 PM (IST) Jun 29
ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ವಯಸ್ಸು 30. ಆದರೆ ಅನಂತ್ ಅಂಬಾನಿ ರಿಲಯನ್ಸ್‌ನಿಂದ ಪಡೆಯುತ್ತಿರುವ ವಾರ್ಷಿಕ ಸ್ಯಾಲರಿ ಎಷ್ಟು?
07:35 PM (IST) Jun 29
ಕೊಪ್ಪಳದ ಸೂಪರ್ ಮಾರ್ಕೆಟ್ ವಿಎ ಬಜಾರ್‌ನಲ್ಲಿ ಇಬ್ಬರು ಬುರ್ಖಾಧಾರಿ ಮಹಿಳೆಯರು ₹20,000 ಮೌಲ್ಯದ ವಸ್ತುಗಳನ್ನು ಕದ್ದ ಘಟನೆ ನಡೆದಿದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಳ್ಳತನ ಸ್ಪಷ್ಟವಾಗಿ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
07:13 PM (IST) Jun 29
ಬೆಂಗಳೂರಿನ ಬಿಬಿಎಂಪಿ ಕಸದ ಲಾರಿಯಲ್ಲಿ ಪತ್ತೆಯಾದ ಮಹಿಳೆಯ ಒಳ ಉಡುಪಿಲ್ಲದ ಶವದ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ಇತ್ತೀಚೆಗೆ ಮುಸ್ಲಿಂ ವ್ಯಕ್ತಿಯನ್ನು ಲವ್ ಮ್ಯಾರೇಜ್ ಮಾಡಿಕೊಂಡು ಹುಳಿಮಾವು ಏರಿಯಾದಲ್ಲಿ ವಾಸವಾಗಿದ್ದ ಹಿಂದೂ ಮಹಿಳೆ ಪುಷ್ಪಾ ಎಂದು ಗುರುತಿಸಲಾಗಿದೆ. ಗಂಡನೇ ಕೊಲೆ ಮಾಡಿದ ಶಂಕೆಯಿದೆ.
06:53 PM (IST) Jun 29
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಸಂವಿಧಾನ ಬದಲಾವಣೆ ತಂದಿದೆ. ದೇಶದ ಸಂವಿಧಾನ ಮೂಲಕ್ಕೆ ವಿರುದ್ಧವಾಗಿ ತುರ್ತು ಪರಿಸ್ಥಿತಿ ಹೇರಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
06:49 PM (IST) Jun 29
06:45 PM (IST) Jun 29
ಸಿದ್ದರಾಮಯ್ಯ ಅವರನ್ನು ಮೊದಲಿನಿಂದ ನೋಡಿದ್ದೇನೆ, ಆದರೆ ಅವರು ಇಷ್ಟು ಅಸಹಾಯಕರಾಗಿ ಇರೋದನ್ನು ನೋಡೇ ಇರಲಿಲ್ಲ ಎಂದು ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
06:42 PM (IST) Jun 29
ಮಾರಿಷಸ್ ಏರ್‌ಪೋರ್ಟ್‌ನಲ್ಲಿ 6 ವರ್ಷದ ಬಾಲಕನೂ ಸೇರಿದಂತೆ ಒಟ್ಟು 7ಜನರನ್ನು ಏರ್‌ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಅವರಿಂದ 18.8 ಕೋಟಿ ರೂ. ಮೌಲ್ಯದ 161 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
06:35 PM (IST) Jun 29
ಟ್ರಾಫಿಕ್ ಪದ ಕೇಳಿದರೆ ಸಾಕು ಅದು ಬೆಂಗಳೂರು ಎಂದು ಕಣ್ಮುಚ್ಚಿ ಹೇಳುತ್ತೇವೆ. ಆದರೆ ಬೆಂಗಳೂರಿಗಿಂತ ದೇಶದ ಇತರ ನಗರಗಳ ಟ್ರಾಫಿಕ್ ತೀರಾ ಹದಗೆಡುತ್ತಿದೆ. ಇದೀಗ ಮಧ್ಯಪ್ರದೇಶದ ಇಂದೋರ್‌ನಲ್ಲಿ 32 ಗಂಟೆ ಟ್ರಾಫಿಕ್ ಜಾಮ್ ಸಂಭವಿಸಿ ಮೂವರು ಮೃತಪಟ್ಟಿದ್ದಾರೆ.
06:06 PM (IST) Jun 29
ಟಾಲಿವುಡ್‌ನಲ್ಲಿ ಯುವ ನಟಿಯಾಗಿ ವೇಗವಾಗಿ ಹೆಸರು ಮಾಡುತ್ತಿರುವ ಶ್ರೀಲೀಲಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಶ್ರೀಲೀಲಾ ತಮ್ಮ ಸಂಭಾವನೆ ವಿಚಾರದಲ್ಲಿ ಸುದ್ದಿಯಲ್ಲಿದ್ದಾರೆ.
06:01 PM (IST) Jun 29
ನಿವೃತ್ತ ಸೇನಾ ಲೇಡಿ ಅಧಿಕಾರಿಯೊಬ್ಬರು ತಮ್ಮ 79ನೇ ವಯಸ್ಸಿನಲ್ಲಿ ಆಹಾರ ತಯಾರಿಸಿ ಜನರಿಗೆ ನೀಡುತ್ತಿದ್ದಾರೆ. ಶಿಸ್ತುಬದ್ಧ ಜೀವನದ ಜೊತೆ ಅವಿವಾಹಿತೆಯಾಗಿರುವ ಇವರು, ಮದುವೆಯಾಗದ ಕಾರಣವನ್ನೂ ನೀಡಿದ್ದಾರೆ. ಇದು ಹಲವು ಮಹಿಳೆಯರ ಶ್ಲಾಘನೆಗೆ ಕಾರಣವಾಗಿದೆ. ಏನಿವರ ಕಥೆ?
06:00 PM (IST) Jun 29
05:56 PM (IST) Jun 29
05:55 PM (IST) Jun 29
05:54 PM (IST) Jun 29
ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಬರಬೇಕಾದ 16 ನೇ ಹಣಕಾಸು ಯೋಜನೆಯ ಅನುದಾನ ಮಿತಿ ಕಡಿಮೆ ಮಾಡದಂತೆ ಬಿಡುಗಡೆ ಮಾಡಬೇಕು ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.
05:44 PM (IST) Jun 29
ಕುರುಡ ಮತ್ತು ಮೂಕ ಮಕ್ಕಳು ತಮ್ಮ ಭಾವನೆಗಳನ್ನು ಅಭಿವ್ಯಕ್ತಪಡಿಸಲಾಗದೆ ಮಾನಸಿಕ ಒತ್ತಡಕ್ಕೆ ಒಳಗಾಗಿರುತ್ತಾರೆ. ಇದನ್ನು ಅರಿತು ರೋಟರಿ ಸಂಸ್ಥೆ ಒಳ್ಳೆಯ ಕೆಲಸ ಮಾಡುತ್ತಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
05:42 PM (IST) Jun 29
ಬೆಂಗಳೂರಿನಲ್ಲಿ ಮನೆ ಹುಡುಕುತ್ತಿರುವ ಕೆನಡಾ ಪ್ರಜೆ ಬಾಡಿಗೆ ನೋಡಿ ದಂಗಾಗಿದ್ದಾನೆ. ಮಿಜೋರಾಂನಿಂದ ಬೆಂಗಳೂರಿಗೆ ಸ್ಥಳಾಂತರಗೊಳ್ಳುತ್ತಿರುವ ಈತ ಬೆಂಗಳೂರು ಬಾಡಿಗೆ ಹಣದಲ್ಲಿ ಮಹೀಂದ್ರ ಥಾರ್ ಕಾರು ಖರೀದಿಸಬಹುದು ಎಂದಿದ್ದಾನೆ.
05:33 PM (IST) Jun 29
ಭಾರತದ ಪ್ರಮುಖ ಇವಿ ತಯಾರಕರಾದ ಟಾಟಾ, ಮಹೀಂದ್ರ ಸೇರಿದಂತೆ ಹಲವು ಕಂಪನಿಗಳಿಗೆ ಇದೀಗ ತಲೆನೋವು ಹೆಚ್ಚಾಗಿದೆ. ಕಾರಣ ವಿಯೆಟ್ನಾಂ ಮೂಲದ ವಿನ್‌ಫಾಸ್ಟ್ ಎಲೆಕ್ಟ್ರಿಕ್ ಕಾರು ಭಾರತಕ್ಕೆ ಕಾಲಿಟ್ಟಿದೆ. ಇದೀಗ ಬೆಂಗಳೂರಿನಲ್ಲಿ ವಿನ್‌ಫಾಸ್ಟ್ ಕಾರಿನ ಪ್ರದರ್ಶನ ನಡೆಯುತ್ತಿದೆ.
05:25 PM (IST) Jun 29
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ನಮ್ಮ ನಡುವೆ ಸಂಧಾನ ಸಭೆ ನಡೆಯಿತು ಎಂಬುದು ಮಾಧ್ಯಮಗಳ ಸೃಷ್ಟಿ. ಆದರೆ ಯಾವುದೇ ಸಂಧಾನ ಸಭೆ, ಮತ್ತೊಂದು ಸಭೆ ಆಗಿಲ್ಲ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.
05:17 PM (IST) Jun 29
ರಾಜಕಾರಣವೇ ಆಗಲಿ, ಸಾಮಾನ್ಯ ಜೀವನವೇ ಆಗಲಿ ಯಾರಾದರೂ ಅನ್ಯಾಯ ಮಾಡಿದರೆ ಕ್ಷಮಿಸಬಹುದು. ಆದರೆ ದೇಶಕ್ಕೆ ಮಾಡಿದ ಘನಘೋರ ಅನ್ಯಾಯವನ್ನು ಯಾರೂ ಮರೆಯಬಾರದು ಎಂದು ಸಂಸದ ಡಾ.ಕೆ.ಸುಧಾಕರ್ ಹೇಳಿದರು.
05:11 PM (IST) Jun 29
ಬೆಂಗಳೂರಿನ ಸಾಫ್ಟ್‌ವೇರ್ ಎಂಜಿನಿಯರ್‌ಗಳಿಗೆ ಜಾಗತಿಕವಾಗಿ ಅತ್ಯಂತ ಕಡಿಮೆ ವೇತನ ನೀಡಲಾಗುತ್ತಿದೆ ಎಂದು ಹೊಸ ಅಧ್ಯಯನ ಬಹಿರಂಗಪಡಿಸಿದೆ. ಸಿಲಿಕಾನ್ ವ್ಯಾಲಿಗಿಂತ 10 ಪಟ್ಟು ಕಡಿಮೆ ಮತ್ತು ಜಾಗತಿಕ ಸರಾಸರಿಗಿಂತ ನಾಲ್ಕು ಪಟ್ಟು ಕಡಿಮೆ ವೇತನ ಪಡೆಯುತ್ತಿದ್ದಾರೆ.
05:03 PM (IST) Jun 29
ಬಿಜೆಪಿಗರಿಂದ ದೇಶದಲ್ಲಿ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ತುರ್ತು ಪರಿಸ್ಥಿತಿಯ ಜಾರಿ ಆಗಿದೆ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ವಾಗ್ದಾಳಿ ನಡೆಸಿದ್ದಾರೆ.
04:59 PM (IST) Jun 29
ಪಾಕಿಸ್ತಾನದಲ್ಲಿ ಇಂದು ಮೂರು ಬಾರಿ ಭೂಮಿ ಕಂಪಿಸಿದ್ದು, ಜನರಲ್ಲಿ ಆತಂಕ ಮನೆಮಾಡಿದೆ. ರಿಕ್ಟರ್ ಮಾಪಕದಲ್ಲಿ ಕ್ರಮವಾಗಿ 5.2, 4.5 ಮತ್ತು 3.8 ರಷ್ಟು ತೀವ್ರತೆ ದಾಖಲಾಗಿದೆ.
04:58 PM (IST) Jun 29
ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ವಿದೇಶಿ ಸಂಗ್ರಹದಿಂದ 100.32 ಮೆಟ್ರಿಕ್ ಟನ್ ಚಿನ್ನವನ್ನು ಭಾರತಕ್ಕೆ ಮರಳಿ ತಂದಿದೆ. ಇದಕ್ಕೆ ಕಾರಣವೇನು? ಇದರಿಂದ ಭಾರತದಲ್ಲಿ ಚಿನ್ನದ ದರ ಕುಸಿತ ಕಾಣಲಿದ್ಯಾ? ಇಲ್ಲಿದೆ ವಿವರ...
04:57 PM (IST) Jun 29
ತುರ್ತು ಪರಿಸ್ಥಿತಿ ಹೇರಿದ್ದ ಕಾಂಗ್ರೆಸ್ ನಾಯಕರಿಗೆ ಸಂವಿಧಾನದ ಬಗ್ಗೆ ಗೌರವ ಇದ್ದರೆ ಜನರ ಮುಂದೆ ಕ್ಷಮೆ ಕೇಳಬೇಕು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಆಗ್ರಹಿಸಿದರು.
04:57 PM (IST) Jun 29
04:49 PM (IST) Jun 29
ಡಿ.ಕೆ.ಶಿವಕುಮಾರ್ ಅವರನ್ನು ಬಿಟ್ಟರೆ ಕಾಂಗ್ರೆಸ್‌ನಲ್ಲಿ ನಾನೇ ಒಕ್ಕಲಿಗರ ಪರಮೋಚ್ಚ ನಾಯಕ ಎಂದು ವರ್ತಿಸುತ್ತಿರುವ ಚಲುವರಾಯಸ್ವಾಮಿ ಜಿಲ್ಲೆಯಲ್ಲಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಕಿಡಿಕಾರಿದರು.
04:42 PM (IST) Jun 29
ರೈತರು ತಾವು ಪಡೆದ ಸಾಲವನ್ನು ಒಮ್ಮೆಲೇ ಪಾವತಿ (ಒನ್ ಟೈಮ್ ಸೆಟಲ್ ಮೆಂಟ್) ಮಾಡುವ ಸಂದರ್ಭದಲ್ಲಿ ಬ್ಯಾಂಕ್‌ಗಳು ಸೂಕ್ತ ಮಾರ್ಗದರ್ಶನ ಮಾಡಬೇಕು ಹಾಗೂ ಪುನಃ ಸಾಲ ನೀಡಬೇಕು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಬ್ಯಾಂಕ್‌ಗಳಿಗೆ ಸೂಚಿಸಿದರು.
04:34 PM (IST) Jun 29
ಕ್ರಾಂತಿ ಎಂದ ಕೂಡಲೇ ಬರೀ ಕಾಂಗ್ರೆಸ್‌ನಲ್ಲಿ ಮಾತ್ರ ಕ್ರಾಂತಿ ಆಗುತ್ತದೆ ಅಂದುಕೊಳ್ಳಬಾರದು ಎಂದು ಸಹಕಾರಿ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.
04:26 PM (IST) Jun 29
ಪಂಜಾಬ್‌ನಲ್ಲಿ ನಡೆದ ಕ್ರಿಕೆಟ್ ಪಂದ್ಯದ ವೇಳೆ ಯುವ ಕ್ರಿಕೆಟಿಗನೊಬ್ಬ ಆಟದ ಮಧ್ಯೆಯೇ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಸಿಕ್ಸರ್ ಹೊಡೆದ ಕೆಲವೇ ಕ್ಷಣಗಳಲ್ಲಿ ಆತ ಮೃತಪಟ್ಟಿದ್ದು, ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
04:24 PM (IST) Jun 29
ಸಣ್ಣ ಕೈಗಾರಿಕೆಗಳು ನಮ್ಮ ಆರ್ಥಿಕತೆಯ ಬೆನ್ನೆಲುಬು. ನನಗೆ ಅವುಗಳ ಶಕ್ತಿ ಮತ್ತು ಸವಾಲುಗಳ ಬಗ್ಗೆ ಸಂಪೂರ್ಣ ಅರಿವಿದೆ. ಯಾವುದೇ ಕ್ಷೇತ್ರದಲ್ಲಿ ಸ್ಪರ್ಧೆ ಇದ್ದಾಗ ಮಾತ್ರ ಗುಣಮಟ್ಟ ಹೆಚ್ಚಾಗುತ್ತದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
04:15 PM (IST) Jun 29
ಭಾರತ-ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಬುಮ್ರಾ ಆಡುವ ಸಾಧ್ಯತೆ ಕಡಿಮೆ. ಬುಮ್ರಾ ಇಲ್ಲದೆ ಭಾರತ ಗೆಲ್ಲೋಕೆ ಆಗುತ್ತಾ? ಡೇಟಾ ಏನ್ ಹೇಳುತ್ತೆ ಅಂತ ನೋಡೋಣ.
04:01 PM (IST) Jun 29
ಚನ್ನಮ್ಮನಕೆರೆಯ ಸ್ಕೇಟಿಂಗ್ ಗ್ರೌಂಡ್ ಬಳಿ ಒಳ ಉಡುಪಿಲ್ಲದೆ ಮಹಿಳೆಯ ಶವ ಪತ್ತೆ. ಕಸದ ಲಾರಿಯಲ್ಲಿ ಶವ ಬಿಸಾಡಿರುವುದು ಕಂಡುಬಂದಿದ್ದು, ಅತ್ಯಾಚಾ*ರ ಮತ್ತು ಕೊಲೆಯ ಶಂಕೆ ವ್ಯಕ್ತವಾಗಿದೆ. ಸಿಸಿಟಿವಿಯಲ್ಲಿ ಆಟೋದಲ್ಲಿ ಶವ ತಂದ ದೃಶ್ಯ ಸೆರೆಯಾಗಿದೆ.
03:49 PM (IST) Jun 29
ಮದುವೆಗಾಗಿ ಅಮೆರಿಕಕ್ಕೆ ಬಂದಿದ್ದ 24 ವರ್ಷದ ಭಾರತೀಯ ಯುವತಿ ನ್ಯೂಜೆರ್ಸಿಯಲ್ಲಿ ನಾಪತ್ತೆಯಾಗಿದ್ದಾರೆ. ವಿಮಾನ ನಿಲ್ದಾಣದಲ್ಲಿ ಇಳಿದ ನಂತರ ಕಾಣೆಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
03:33 PM (IST) Jun 29
ಬಾಂಗ್ಲಾದೇಶದ ಕುಮಿಲ್ಲಾದಲ್ಲಿ 25 ವರ್ಷದ ಹಿಂದೂ ಮಹಿಳೆಯ ಮೇಲೆ ಅತ್ಯಾ*ಚಾರ ನಡೆದಿದ್ದು, ಆರೋಪಿ ಫಜ್ರ್ ಅಲಿಯನ್ನು ಬಂಧಿಸಲಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿಡಿಯೋ ಹಂಚಿಕೊಂಡ ನಾಲ್ವರನ್ನು ಸಹ ಬಂಧಿಸಲಾಗಿದೆ.
03:18 PM (IST) Jun 29
ವಿಂಡೋಸ್ ಆಪರೇಟಿಂಗ್ ಲ್ಯಾಪ್‌ಟಾಪ್ ಅಥವಾ ಸಿಸ್ಟಮ್ ಬಳಕೆ ಮಾಡುವವರು ವಿಂಡೋಸ್ ಬ್ಲೂ ಸ್ಕ್ರೀನ್ ನೋಡಿರುತ್ತೀರಿ. ಆದರೆ ಈ ವಿನ್ಯಾಸವನ್ನು ಮೈಕ್ರೋಸಾಫ್ಟ್ ಬದಲಾಯಿಸುತ್ತಿದೆ. ಅಷ್ಟಕ್ಕೂ ಈ ಐಕಾನಿಕ್ ಡಿಸೈನ್ ಬದಲಾವಣೆ ಯಾಕೆ?