ಮಂಡ್ಯ: 2028ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವ ಮೂಲಕ ಕ್ರಾಂತಿ ಎಬ್ಬಿಸುತ್ತದೆ. ಅಲ್ಲಿಯವರೆಗೂ ಯಾವ ಕ್ರಾಂತಿಯೂ ಆಗುವುದಿಲ್ಲ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು. ನವೆಂಬರ್ ಕ್ರಾಂತಿ ಆಗಲಿಲ್ಲ. ಸಂಕ್ರಾಂತಿ ಕ್ರಾಂತಿಯೂ ಇಲ್ಲ, ಯುಗಾದಿಗೂ ಕ್ರಾಂತಿ ಇಲ್ಲ. 2028ಕ್ಕೆ ನಾವೇ ಅಧಿಕಾರಕ್ಕೆ ಬಂದು ಕ್ರಾಂತಿ ಮಾಡುತ್ತೇವೆ. ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ಎಐಸಿಸಿ ವರಿಷ್ಠ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಒಟ್ಟಾಗಿ ಕುಳಿತು ತೀರ್ಮಾನ ಮಾಡುತ್ತಾರೆ. ಯಾರ ಬಳಿಯೂ ಅನಿಸಿಕೆಗಳನ್ನು ಕೇಳುವುದಿಲ್ಲ. ಪಕ್ಷದ ನಿರ್ಧಾರಕ್ಕೆ ನಾವು ಸಂಪೂರ್ಣ ಬದ್ಧರಾಗಿರುತ್ತೇವೆ ಎಂದು ಅವರು ಪುನರುಚ್ಚರಿಸಿದರು.

09:56 AM (IST) Dec 29
ಬಿಗ್‌ಬಾಸ್ ಮನೆಯಿಂದ 13ನೇ ವಾರದಲ್ಲಿ ಸೂರಜ್ ಸಿಂಗ್ ಮತ್ತು ಮಾಳು ನಿಪನಾಳ ಹೊರಬಂದಿದ್ದಾರೆ. ಸ್ಪಂದನಾ ಸೋಮಣ್ಣ ಅವರಿಗಿಂತ ಮಾಳು ಹೆಚ್ಚು ಯೋಗ್ಯರಾಗಿದ್ದರೂ ಅವರನ್ನು ಉಳಿಸಿಕೊಳ್ಳದ ಕಾರಣ, ನೆಟ್ಟಿಗರು ಕಲರ್ಸ್ ಕನ್ನಡ ವಾಹಿನಿಯನ್ನು ಟ್ರೋಲ್ ಮಾಡುತ್ತಿದ್ದಾರೆ.
09:39 AM (IST) Dec 29
ತನ್ನ ಮೂರು ವರ್ಷದ ಮೊಮ್ಮಗನಿಗೆ ಅಜ್ಜನೇ ಸಾರಾಯಿ ಕುಡಿಸಿದ ಘಟನೆ ಬೆಳಗಾವಿ ಜಿಲ್ಲೆ ರಾಯಭಾಗ ಪಟ್ಟಣದ ಬಾರ್ ವೊಂದರಲ್ಲಿ ನಡೆದಿದೆ.
ಮಗುವಿನ ಎದುರು ತಾನೂ ಸಾರಾಯಿ ಕುಡಿದದ್ದಲ್ಲದೆ ಎಳೆ ವಯಸ್ಸಿನ ಮೊಮ್ಮಗನಿಗೂ ಸಾರಾಯಿಯ ರುಚಿ ತೋರಿಸಿದ್ದಕ್ಕೆ ವೃದ್ಧನ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
09:24 AM (IST) Dec 29
ಆಯುರ್ವೇದವು ಸಾವಿರಾರು ವರ್ಷಗಳಿಂದ ಪರೀಕ್ಷಿತ ಪದ್ಧತಿಯಾಗಿದ್ದು, ಔಷಧಿಯೇ ಇಲ್ಲದೇ ರೋಗವನ್ನು ದೂರಮಾಡುವ ಪ್ರಪಂಚದ ಏಕೈಕ ಆರೋಗ್ಯ ಪದ್ಧತಿಯಾಗಿದೆ ಎಂದು ಎರಡನೇ ವಿಶ್ವ ಆಯುರ್ವೇದ ಸಮ್ಮೇಳನದ ರೂವಾರಿ ಡಾ.ಗಿರಿಧರ ಕಜೆ ಅಭಿಪ್ರಾಯಪಟ್ಟರು.
09:22 AM (IST) Dec 29
09:16 AM (IST) Dec 29
ನಗರದ ಕೋಗಿಲು ಬಳಿಯ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆಯು ತೀವ್ರ ಚರ್ಚೆಗೆ ಕಾರಣವಾಗಿರುವ ಬೆನ್ನಲ್ಲೇ ಸಂತ್ರಸ್ತರಿಗೆ ಪುನರ್‌ವಸತಿ ಕಲ್ಪಿಸುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸೋಮವಾರ ಸಭೆ ನಡೆಯಲಿದೆ.
08:53 AM (IST) Dec 29
08:18 AM (IST) Dec 29
‘ರಾಷ್ಟ್ರಪಿತ ಗಾಂಧೀಜಿ ಅವರ ಹೆಸರನ್ನೇ ಅಳಿಸುವ ಪಿತೂರಿಯನ್ನು ಬಿಜೆಪಿ ಮಾಡುತ್ತಿದೆ. ಈ ದ್ವೇಷ ರಾಜಕಾರಣ ಸೋಲಿಸಲು ಜ.5 ರಿಂದ ಗ್ರಾಮ ಪಂಚಾಯ್ತಿಯಿಂದ ರಾಜ್ಯಮಟ್ಟದವರೆಗೆ ಹೋರಾಟ ಹಮ್ಮಿಕೊಂಡಿದ್ದು, ಎಲ್ಲರೂ ಕೈಜೋಡಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.
08:07 AM (IST) Dec 29
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾನುವಾರ ಇಲ್ಲಿಯ ಐಎನ್‌ಎಸ್ ಕದಂಬ ನೌಕಾನೆಲೆಗೆ ಆಗಮಿಸಿ ಐಎನ್ಎಸ್ ವಾಗ್ಶೀರ್ ಸಬ್ ಮರೀನ್‌ನಲ್ಲಿ ಪ್ರಯಾಣಿಸಿದರು. ಆ ಮೂಲಕ ಸಬ್ ಮರೀನ್‌ನಲ್ಲಿ ಪ್ರಯಾಣಿಸಿದ ಎರಡನೇ ಹಾಗೂ ಮೊದಲ ಮಹಿಳಾ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು
08:02 AM (IST) Dec 29
ಇಂದಿನ ರಾಜಕೀಯದಲ್ಲಿ ವೈಯಕ್ತಿಕ ನಿಂದನೆ ಮತ್ತು ದ್ವೇಷ ಭಾಷಣಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರದ ಹೊಸ ದ್ವೇಷ ಭಾಷಣ ವಿರೋಧಿ ಕಾನೂನಿನ ಅಗತ್ಯತೆ, ಉದ್ದೇಶ ಮತ್ತು ಸಾರ್ವಜನಿಕ ಜೀವನದಲ್ಲಿ ಘನತೆಯನ್ನು ಮರುಸ್ಥಾಪಿಸುವ ಅದರ ಪಾತ್ರವನ್ನು ಈ ಲೇಖನ ವಿಮರ್ಶಿಸುತ್ತದೆ.
07:48 AM (IST) Dec 29
ಸರ್ಕಾರವೇ ಎಲ್ಲವನ್ನೂ ಮಾಡುತ್ತದೆ ಎಂದು ಕುಳಿತುಕೊಳ್ಳಲು ಆಗುವುದಿಲ್ಲ, ಸಮಾಜಕ್ಕೆ ಬೇಕಾದ ಆಯುರ್ವೇದ ಪದ್ಧತಿಯನ್ನು ಜಾಗೃತಿಗೊಂಡ ಜನರೇ ಪಸರಿಸಲಿ ಎಂದು ಶ್ರೀ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಸಲಹೆ ನೀಡಿದರು.
07:40 AM (IST) Dec 29
ಗಿಲ್ಲಿ ನಟ ಕ್ಯಾಪ್ಟನ್ ಆದ ಮೊದಲ ದಿನವೇ ಅಶ್ವಿನಿ ಗೌಡ ಅವರೊಂದಿಗೆ ಜಗಳವಾಡಿದ್ದಾರೆ. ರಾತ್ರಿ ಕೆಲಸ ಮಾಡುವಂತೆ ಗಿಲ್ಲಿ ಆದೇಶಿಸಿದ್ದು, ಇದನ್ನು ವಿರೋಧಿಸಿದ ಅಶ್ವಿನಿ ಜೊತೆ ಏಕವಚನದಲ್ಲಿ ಮಾತನಾಡಿ, ನಿದ್ದೆಗೆಡಿಸಲು ಪ್ರಯತ್ನಿಸಿದ್ದಾರೆ. ಈ ನಡವಳಿಕೆಗೆ ವೀಕ್ಷಕರಿಂದ ಟೀಕೆ ವ್ಯಕ್ತವಾಗಿದೆ.
07:18 AM (IST) Dec 29
ಪುಸ್ತಕ ಸಂಸ್ಕೃತಿ ಸಂವೇದನೆಗೆ ಸಂಬಂಧಿಸಿದ್ದರೆ, ಪುಸ್ತಕೋದ್ಯಮ ಸಂಪಾದನೆಗೆ ಸಂಬಂಧಿಸಿದ್ದು. ಸಂವೇದನೆ ಮತ್ತು ಸಂಪಾದನೆಯನ್ನು ಒಂದುಗೂಡಿಸುವ ಚಾಕಚಕ್ಯತೆ ಕೆಲವರಿಗೆ ಮಾತ್ರ ಇರಲು ಸಾಧ್ಯ. ಆ ಚಾತುರ್ಯ ಅಂಕಿತ ಪ್ರಕಾಶನದ ಪ್ರಕಾಶ್ ಕಂಬತ್ತಳ್ಳಿ ದಂಪತಿಗೆ ಇದೆ ಎಂದು ಚಿಂತಕ ಬರಗೂರು ರಾಮಚಂದ್ರ ಹೇಳಿದ್ದಾರೆ.
07:01 AM (IST) Dec 29
ಜಿಬಿಎ ಚುನಾವಣೆ ಆಕಾಂಕ್ಷಿಗಳಿಗೆ ಭಾನುವಾರದಿಂದಲೇ ಅರ್ಜಿ ಬಿಡುಗಡೆ ಮಾಡಲಾಗುತ್ತಿದೆ. ತಡವಾದರೆ ನೀವು ಎಷ್ಟೇ ದೊಡ್ಡ ನಾಯಕರಾದರೂ ನಾನು ಗುರುತಿಸುವುದಿಲ್ಲ. ಬೂತ್ ಮಟ್ಟದಲ್ಲಿ ಕೆಲಸ ಮಾಡಿದವರಿಗೆ ಮಾತ್ರ ಆದ್ಯತೆ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.