LIVE NOW
Published : Jul 26, 2026, 07:00 AM ISTUpdated : Jul 26, 2026, 11:28 PM IST

Karnataka News Live: ರಾಜ್ಯ ಗೃಹ ಸಚಿವರಿಗೆ ಅನಾಮಧೇಯ ಪತ್ರ, ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ ಪೊಲೀಸ್ ಲೆಟರ್

ಸಾರಾಂಶ

ಚಿಕ್ಕಮಗಳೂರು: ಮುಸ್ಲಿಂ ಸಮುದಾಯ ವಿರುದ್ಧ ಅವಹೇಳನಕಾರಿ ಹಾಗೂ ಪ್ರಚೋದನಕಾರಿ ಪದಗಳನ್ನು ಬಳಸಿದ ಆರೋಪದ ಮೇಲೆ ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ವಿರುದ್ಧ ಚಿಕ್ಕಮಗಳೂರಿನಲ್ಲಿ ನಗರ ಜಾಮಿಯಾ ಮಸೀದಿ ಅಧ್ಯಕ್ಷ ಮುದಾಸೀರ್ ಪಾಷಾ ನೇತೃತ್ವದಲ್ಲಿ ಮುಸ್ಲಿಂ ಮುಖಂಡರು ಕೇಸ್‌ ದಾಖಲಿಸಿದ್ದಾರೆ. ಕಳೆದ ಗುರುವಾರ ಯೂತ್ ಫಾರ್ ನೇಷನ್ ಸಂಘಟನೆ ವತಿಯಿಂದ ಸಂಸತ್ ಭವನದ ಬಳಿ ನಡೆದ ಪ್ರತಿಭಟನೆ ಖಂಡಿಸಿ ನಗರದ ಅಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನಾ ಸಭೆ ಆಯೋಜಿಸಲಾಗಿತ್ತು. ಈ ವೇಳೆ ಸಿ.ಟಿ.ರವಿ ಅವರು ಮುಸ್ಲಿಂ ಸಮುದಾಯದ ವಿರುದ್ಧ ಅವಹೇಳನಕಾರಿ ಮತ್ತು ಪ್ರಚೋದನಕಾರಿಯಾಗಿ ಮಾತನಾಡಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

Bengaluru Police Issues Sparks Widespread Discussion

11:28 PM (IST) Jul 26

ರಾಜ್ಯ ಗೃಹ ಸಚಿವರಿಗೆ ಅನಾಮಧೇಯ ಪತ್ರ, ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ ಪೊಲೀಸ್ ಲೆಟರ್

10 ವರ್ಷ ಸೇವೆ ಸಲ್ಲಿಸಿದ ಪೊಲೀಸ್ ಪೇದೆಗಳಿಗೆ ಅನ್ಯಾಯ ಆಗಿದೆ ಎಂದು ಅನಾಮಧೇಯ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪೊಲೀಸರ ಹೆಸರಿನಲ್ಲಿ ಹರಿದಾಡುತ್ತಿರುವ ಪತ್ರದಲ್ಲಿ ಏನಿದೆ? ಈ ಕುರಿತು ಏಷ್ಯಾನೆಟ್ ಸುವರ್ಣನ್ಯೂಸ್ ಕ್ರೈಂ ರಿಪೋರ್ಟ್ ಚೇತನ್ ವರದಿ ಇಲ್ಲಿದೆ.

Read Full Story

11:28 PM (IST) Jul 26

ಎಲ್ಲಾ ಹೀರೋಗಳು ಯಶ್ ಆಗಲು ಹೋಗಬಾರದು - ನಿರ್ಮಾಪಕ ಉದಯ್ ಕೆ. ಮೆಹ್ತಾ ಹೇಳಿದ್ದೇನು?

ಕೇವಲ ಐದಾರು ಪ್ಯಾನ್‌ ಇಂಡಿಯಾ ಚಿತ್ರಗಳಿಂದಲೇ ಕನ್ನಡ ಚಿತ್ರರಂಗವೊಂದೇ ರೂ. 350 ರಿಂದ 400 ಕೋಟಿ ಕಳೆದುಕೊಂಡಿದೆ. ಹೀಗೆ ಕಳೆದುಕೊಂಡ ಸಿನಿಮಾಗಳಲ್ಲಿ ನನ್ನದೂ ಇದೆ ಎಂದರು ನಿರ್ಮಾಪಕ ಉದಯ್ ಕೆ. ಮೆಹ್ತಾ.

Read Full Story

09:58 PM (IST) Jul 26

Vaibhav Sooryavanshi - 149 ವರ್ಷಗಳ ಇತಿಹಾಸದಲ್ಲೇ ಮೊದಲು! ಇಡೀ ಜಗತ್ತೇ ತಿರುಗಿ ನೋಡುವಂತೆ ಮಾಡಿದ ವೈಭವ್ ಸೂರ್ಯವಂಶಿ ಐತಿಹಾಸಿಕ ರೆಕಾರ್ಡ್!

15 ವರ್ಷದ ಭಾರತೀಯ ಕ್ರಿಕೆಟಿಗ ವೈಭವ್ ಸೂರ್ಯವಂಶಿ, ಅಂತರರಾಷ್ಟ್ರೀಯ T20I ಕ್ರಿಕೆಟ್‌ನಲ್ಲಿ ವಿಶಿಷ್ಟ ದಾಖಲೆ ನಿರ್ಮಿಸಿದ್ದಾರೆ. ಹರಾರೆಯಲ್ಲಿ ನಡೆದ ಸರಣಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಅವರು ಐತಿಹಾಸಿಕ ರೆಕಾರ್ಡ್‌ಗೆ ಸಾಕ್ಷಿಯಾಗಿದ್ದಾರೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

Read Full Story

09:44 PM (IST) Jul 26

ರಾಮಾಯಣ ಸೆಟ್‌ನಲ್ಲಿ ನಾನು ವಾತಾವರಣವನ್ನೇ ಹಾಳು ಮಾಡ್ತಿದ್ದೆ ಎಂದ ಯಶ್ - ಕಾರಣ ಇದೇ!

ಸ್ಯಾನ್ ಡಿಯಾಗೋ ಕಾಮಿಕ್-ಕಾನ್‌ನಲ್ಲಿ ನಿತೇಶ್ ತಿವಾರಿ ಅವರ 'ರಾಮಾಯಣ' ಚಿತ್ರದ ಬಗ್ಗೆ ಮಾತನಾಡಿದ ಯಶ್, ರಾವಣನ ಪಾತ್ರಕ್ಕಾಗಿ ಸೆಟ್‌ನಲ್ಲಿ ತಾನು ವಾತಾವರಣವನ್ನೇ ಹಾಳು ಮಾಡುತ್ತಿದ್ದೆ ಎಂದು ತಮಾಷೆಯಾಗಿ ಹೇಳಿಕೊಂಡಿದ್ದಾರೆ. ಇದರ ಹಿಂದಿನ ಸೀಕ್ರೆಟ್ ಏನು? ಇಲ್ಲಿದೆ ಮಾಹಿತಿ.

Read Full Story

09:07 PM (IST) Jul 26

ಸದ್ಯದಲ್ಲೇ ಸಿನಿಮಾ ಆಗಲಿದೆ ರಜನಿಕಾಂತ್ ಬಯೋಪಿಕ್.. ಈ ಸೂಪರ್ ಸ್ಟಾರ್ ಪಾತ್ರ ಮಾಡೋ ನಟ ಯಾರು?

ಕೇವಲ ಪುಸ್ತಕ ಮಾತ್ರವಲ್ಲದೆ, ಈ ಆತ್ಮಕಥೆಯನ್ನೇ ಆಧರಿಸಿ ಒಂದು ಭರ್ಜರಿ ಬಯೋಪಿಕ್ ಸಿನಿಮಾ ಮಾಡುವ ಬಗ್ಗೆ ರಜನಿಕಾಂತ್ ತಮ್ಮ ಆಪ್ತ ವಲಯದಲ್ಲಿ ಸಮಾಲೋಚನೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಅವರ ಪುತ್ರಿ ಸೌಂದರ್ಯ ರಜನಿಕಾಂತ್ ಕೂಡ ಈ ಬಗ್ಗೆ ಸುಳಿವು ನೀಡಿದ್ದು, ಭಾರೀ ಸಂಚಲನ ಸೃಷ್ಟಿಸಿದೆ.

Read Full Story

08:31 PM (IST) Jul 26

ಅಪ್ಪು ಸರ್ ಹೇಳಿದ ಆ ಒಂದು ಮಾತು ಇಂದಿಗೂ ನೆನಪಿದೆ - ನಟ ರಾವ್ ರಮೇಶ್ ಭಾವುಕ ಕಥೆಯೇನು?

ಬಹುಭಾಷಾ ನಟ ರಾವ್ ರಮೇಶ್ ಅವರು ನಟ ಪುನೀತ್ ರಾಜ್‌ಕುಮಾರ್ ಅವರೊಂದಿಗಿನ ತಮ್ಮ ಅಪರೂಪದ ಭೇಟಿಯೊಂದನ್ನು ನೆನೆದು ಭಾವುಕರಾಗಿದ್ದಾರೆ. ಸರಳತೆ ಮತ್ತು ಸ್ನೇಹಪರ ವ್ಯಕ್ತಿತ್ವದಿಂದ ಎಲ್ಲರ ಮನಗೆದ್ದಿದ್ದ ಅಪ್ಪು.

Read Full Story

08:00 PM (IST) Jul 26

ರಾಯಚೂರಿನಲ್ಲಿ ರೈಲ್ವೇ ಟ್ರಾಕ್ ಕಾಮಗಾರಿ ಗುಂಡಿಗೆ ಬಿದ್ದು ಬಾಲಕ ಸಾವು, ಪೋಷಕರ ನರಳಾಟ

ರಾಯಚೂರಿನಲ್ಲಿ ರೈಲ್ವೇ ಟ್ರಾಕ್ ಕಾಮಗಾರಿಗಾಗಿ ಗುಂಡಿ ಅಗೆಯಲಾಗಿತ್ತು. ಹಾಗೇ ಬಿಟ್ಟು ನಿರ್ಲಕ್ಷ್ಯ ಮಾಡಿದ ಪರಿಮಾಮ 8 ವರ್ಷದ ಬಾಲಕ ಈ ಗುಂಡಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಮಗನ ಕಳೆದುಕೊಂಡ ಪೋಷಕರು ಕಂಗಾಲಾಗಿದ್ದಾರೆ.

Read Full Story

07:45 PM (IST) Jul 26

Dharwad Rural - ಧಾರವಾಡ ಗ್ರಾಮೀಣದಲ್ಲಿ ಬಿಗ್‌ ಫೈಟ್! ಕುಲಕರ್ಣಿಗೆ ಪರ್ಯಾಯ ಇಲ್ವಾ? ಬಿಜೆಪಿ ಆ ತಪ್ಪು ಮಾಡಿದ್ರೆ 'ಕೈ'ಗೆ ಅಧಿಕಾರ ಫಿಕ್ಸ್‌!

ಶಾಸಕ ವಿನಯ್ ಕುಲಕರ್ಣಿ ಅವರ ಅನರ್ಹತೆಯಿಂದಾಗಿ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಉಪಚುನಾವಣೆಯ ಕಾವು ಏರಿದೆ. ಕಾಂಗ್ರೆಸ್‌ನಲ್ಲಿ ಕುಲಕರ್ಣಿ ಕುಟುಂಬಕ್ಕೆ ಟಿಕೆಟ್ ನೀಡಬೇಕೇ ಅಥವಾ ಪರ್ಯಾಯ ನಾಯಕತ್ವಕ್ಕೆ ಮಣೆ ಹಾಕಬೇಕೇ ಎಂಬ ಚರ್ಚೆ ನಡೆದರೆ, ಬಿಜೆಪಿಯಲ್ಲಿ ಆಕಾಂಕ್ಷಿಗಳ ನಡುವಿನ ಬಣ ರಾಜಕೀಯವೇ ದೊಡ್ಡ ಸವಾಲಾಗಿದೆ.

Read Full Story

07:40 PM (IST) Jul 26

3ನೇ ಬಾರಿ ದಿಢೀರ್​ ಲೈವ್​ನಲ್ಲಿ ಕಾಣಿಸಿಕೊಂಡು ಇನ್ನೊಂದು ದೊಡ್ಡ ಘೋಷಣೆ ಮಾಡಿದ ಪ್ರಧಾನಿ ಮೋದಿ

ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ಪರೀಕ್ಷಾ ವ್ಯವಸ್ಥೆಯನ್ನು ಸುಧಾರಿಸಲು ಮಹತ್ವದ ಕ್ರಮ ಕೈಗೊಂಡಿದ್ದಾರೆ. ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಕಾರ್ಯಪಡೆಯನ್ನು ರಚಿಸುವುದಾಗಿ ಅವರು ಘೋಷಿಸಿದ್ದು, ಈ ಸಮಿತಿಯು ಪರೀಕ್ಷೆಗಳ ವಿಶ್ವಾಸಾರ್ಹತೆ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸಲು ವರದಿ ನೀಡಲಿದೆ.
Read Full Story

07:34 PM (IST) Jul 26

ಡಿಂಪಲ್ ಕ್ವೀನ್ ರಚಿತಾ ರಾಮ್ ಇಷ್ಟೊಂದು ಫೇಮಸ್ ಆಗಿರೋದ್ಯಾಕೆ? ಕೊನೆಗೂ ಆ ಗುಟ್ಟು ಬಹಿರಂಗ ಆಯ್ತು!

ಬಹಳಷ್ಟು ಸಿನಿಮಾಗಳಲ್ಲಿ ನಟಿಸಿ ಸ್ಟಾರ್ ನಟಿ ಆಗಿರುವ ರಚಿತಾ ರಾಮ್, ಸತೀಶ್ ನೀನಾಸಂ ಜೋಡಿಯಾಗಿ ನಟಿಸಿರುವ 'ಅಯೋಗ್ಯ 2' ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲಿ ಇದ್ದಾರೆ. 7 ಆಗಸ್ಟ್ 2026ರಂದು ಅಯೋಗ್ಯ 2 ಸಿನಿಮಾ ಬಿಡುಗಡೆ ಆಗಲಿದೆ. ರಚಿತಾ ಸ್ಟಾರ್ ನಟಿ ಆಗಿರುವ ಹಿಂದಿನ ರಹಸ್ಯ ಇಲ್ಲಿದೆ ನೋಡಿ..

Read Full Story

07:24 PM (IST) Jul 26

ಕಿಚ್ಚ ಸುದೀಪ್ ಫ್ಯಾನ್ಸ್‌ಗೆ ಗುಡ್ ನ್ಯೂಸ್ - 'ಬಿಲ್ಲ ರಂಗ ಭಾಷಾ' ಶೂಟಿಂಗ್ ಬಗ್ಗೆ ಸಿಕ್ತು ಹೊಸ ಮಾಹಿತಿ

Billa Ranga Baashaa: ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ 'ಬಿಲ್ಲ ರಂಗ ಭಾಷಾ' ಚಿತ್ರದ ಚಿತ್ರೀಕರಣ ಮತ್ತೆ ವೇಗ ಪಡೆದುಕೊಂಡಿದೆ. ಮೊದಲ ಶೆಡ್ಯೂಲ್ ಬಳಿಕ ಕೆಲ ತಿಂಗಳ ವಿರಾಮ ತೆಗೆದುಕೊಂಡಿದ್ದ ಚಿತ್ರತಂಡ.

Read Full Story

07:23 PM (IST) Jul 26

ಕೊಡಗಿನಲ್ಲಿ ಮೃತಪಟ್ಟ ತಾಯಿ ಆನೆ ಎಬ್ಬಿಸಲು ಮರಿ ಆನೆ ಪರದಾಟ, ಮೂಕರೋಧನೆಗೆ ಭಾವುಕರಾದ ಜನ

ಆಹಾರ ಹುಡುಕುತ್ತ ಗ್ರಾಮದ ತೋಟಗಳಿಗೆ ನುಗ್ಗಿದ ತಾಯಿ ಆನೆ ಅನುಮಾನಸ್ಪದ ರೀತಿಯಲ್ಲಿ ಮೃತಪಟ್ಟಿದೆ. ಇತ್ತ ತಾಯಿ ಕಳೆದುಕೊಂಡ ಮರಿ ಆನೆಯ ಮೋಕರೋಧನೆ ಹಲವರ ಕಣ್ಣಾಲಿ ತೇವಗೊಳಿಸಿದೆ.  ತಾಯಿ ಆನೆಯ ಎಬ್ಬಿಸಲು ಮರಿ ಆನೆ ಇನ್ನಿಲ್ಲದ ಪ್ರಯತ್ನ ಮಾಡಿದೆ.

Read Full Story

06:51 PM (IST) Jul 26

ಬಾಕ್ಸ್ ಆಫೀಸ್‌ನಲ್ಲಿ ವಿಜಯ್ ಅಬ್ಬರ, ಮೂರು ದಿನದಲ್ಲಿ ನೂರು ಕೋಟಿ ಕ್ಲಬ್‌ನತ್ತ ಜನ ನಾಯಗನ್

ದಳಪತಿ ವಿಜಯ್ ನಟನೆಯ ಬಹುನಿರೀಕ್ಷಿತ ಸಿನಿಮಾ 'ಜನ ನಾಯಗನ್'.ಬಾಕ್ಸ್ ಆಫೀಸ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಜುಲೈ 23 ರಂದು ತೆರೆಕಂಡ ಈ ಚಿತ್ರವು ಎರಡನೇ ದಿನ ಗಳಿಕೆಯಲ್ಲಿ ಶೇ. 50 ರಷ್ಟು ಕುಸಿತ ಕಂಡಿತ್ತು. ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿದೆ. ಆದರೆ ಮೂರನೇ ದಿನದಂದು (ಶನಿವಾರ) ಭಾರಿ ಚೇತರಿಕೆ ಕಂಡುಕೊಂಡಿದೆ.

Read Full Story

06:38 PM (IST) Jul 26

KPSC - ಪಶು ವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮಕ್ಕೆ ಬಿಗ್ ಟ್ವಿಸ್ಟ್! ಕಾಂತಕುಮಾರ್ ನಡೆಸಿದ ಹೋರಾಟಕ್ಕೆ ಕೊನೆಗೂ ಸಿಕ್ತಾ ಗೆಲುವು?

ಕೆಪಿಎಸ್‍ಸಿ ಪಶು ವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮದ ಆರೋಪದ ಹಿನ್ನೆಲೆಯಲ್ಲಿ, ಸಾಮಾಜಿಕ ಕಾರ್ಯಕರ್ತ ಕಾಂತಕುಮಾರ್ ಅವರ ದೂರಿನ ಮೇರೆಗೆ ಆಯೋಗವು ಅಂತಿಮ ಆಯ್ಕೆ ಪಟ್ಟಿಗೆ ತಡೆ ನೀಡಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

Read Full Story

04:36 PM (IST) Jul 26

ವೈಭವ್‌ಗೆ ಸೀನಿಯರ್ ಪ್ಲೇಯರ್ಸ್‌ಯಿಂದ ವಾರ್ನಿಂಗ್; ಡ್ರೆಸ್ಸಿಂಗ್ ರೂಂನಲ್ಲಿ ಬಿಗ್‌ ಫೈಟ್‌! ಆಗಿದ್ದೇನು?

ಜಿಂಬಾಬ್ವೆ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಅಲ್ಪ ಮೊತ್ತಕ್ಕೆ ಔಟಾದ ಯುವ ಆಟಗಾರ ವೈಭವ್‌ಗೆ ಡ್ರೆಸ್ಸಿಂಗ್ ರೂಂನಲ್ಲಿ ಹಿರಿಯ ಆಟಗಾರರು ಗಂಭೀರ ಎಚ್ಚರಿಕೆ ನೀಡಿದ್ದಾರೆ. ಆ ಮೂವರು ವೈಭವ್‌ಗೆ ಕೊಟ್ಟ ವಾರ್ನಿಂಗ್‌ ಏನು? ಡ್ರೆಸ್ಸಿಂಗ್ ರೂಂನಲ್ಲಿ ಆಗಿಯೇ ಹೋಯ್ತಾ ಜಗಳ? ಎನ್ನುವುದನ್ನು ನೋಡೋಣ ಬನ್ನಿ!

Read Full Story

04:09 PM (IST) Jul 26

ಕಲುಷಿತಗೊಂಡ ರಾಜಕಾರಣ, 2028ರ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿದ ಸಿದ್ದರಾಮಯ್ಯ ಮನದ ಮಾತು

ಸಿದ್ದರಾಮಯ್ಯ ತಾವು 2028ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದಿದ್ದಾರೆ. ಈ ನಿರ್ಧಾರಕ್ಕೆ ಕಾರಣವನ್ನೂ ಹೇಳಿದ್ದಾರೆ. ಚುನಾವಣೆಯಿಂದ ದೂರ ಉಳಿದ ಸಿದ್ದರಾಮಯ್ಯ ರಾಜಕೀಯ ನಿವೃತ್ತಿಯಾಗುತ್ತಾರಾ?

Read Full Story

02:38 PM (IST) Jul 26

ಗ್ರೇಟ್ ಓಪನಿಂಗ್, ಸ್ಕ್ರೀನ್‌ ಸಂಖ್ಯೆಯಲ್ಲೂ ಹೆಚ್ಚಳ.. 'ಕರಾವಳಿ' ಫಸ್ಟ್ ಡೇ ಕಲೆಕ್ಷನ್ ಎಷ್ಟಾಯ್ತು ಗೊತ್ತಾ?

ಕರಾವಳಿ ಸಿನಿಮಾವನ್ನು ಸದ್ಯ ಕರ್ನಾಟಕದಲ್ಲಿ ಮಾತ್ರ ರಿಲೀಸ್ ಮಾಡಲಾಗಿದೆ. ಸಿನಿಮಾ ಸಿಕ್ತಿರುವ ಪ್ರತಿಕ್ರಿಯೆ ನೋಡಿ ಪರಭಾಷೆಯಲ್ಲೂ ಬೇಡಿಕೆ ಹೆಚ್ಚಾಗಿದೆ ಎನ್ನುವ ಮಾತು ಕೇಳಿಬಂದಿದೆ. ಮುಂದಿನ ವಾರ ಪಕ್ಕದ ಮಲಯಾಳಂ, ತೆಲುಗು ಹಾಗೂ ತಮಿಳಿನಲ್ಲೂ ರಿಲೀಸ್ ಮಾಡುವ ಸಾಧ್ಯತೆ ಹೆಚ್ಚಾಗಿದೆ

Read Full Story

01:57 PM (IST) Jul 26

ಖಾಲಿ ಕೊಡ ಹಿಡಿದು ತಮಿಳುನಾಡಿಗೆ ಎಚ್ಚರಿಕೆ ಕೊಟ್ಟ ಕನ್ನಡಿಗರು..! ಯಾಕೆ?

ತಮಿಳುನಾಡು ಸರ್ಕಾರದ ವಿರುದ್ಧ ಖಾಲಿ ಕೊಡ ಹಿಡಿದು ಕನ್ನಡ ಪರ ಹೋರಾಟಗಾರರ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಹೆದ್ದಾರಿ ತಡೆಯಲು ಮುಂದಾದ ನೂರಾರು ಮಂದಿ ಪೊಲೀಸರ ವಶಕ್ಕೆ ಪಡೆಯಲಾಗಿದೆ. ಅಷ್ಟಕ್ಕೂ ತಮಿಳುನಾಡು ಸರ್ಕಾರದ ವಿರುದ್ಧ ಯಾಕೆ ಪ್ರತಿಭಟನೆ ನಡೆಯಿತು ಅನ್ನೋ ವಿವರ ಇಲ್ಲಿದೆ.

Read Full Story

12:58 PM (IST) Jul 26

ಜೀಪಿಗೆ ಬೆಂಕಿ ಹಚ್ಚಿದ ಮುಲ್ಲಾನಿಗೂ ನನ್ನ ಮೇಲೆ ಕೇಸ್‌ ಕೊಟ್ಟವನಿಗೂ ಏನು ಸಂಬಂಧ? ಪೊಲೀಸರು ತನಿಖೆ ಮಾಡಲಿ - ಸಿಟಿ ರವಿ

ನೀಟ್ ಪೇಪರ್ ಲೀಕ್ ಪ್ರತಿಭಟನೆ ಕುರಿತು ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ. ರವಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಅವರು, ತಮ್ಮ ಹೇಳಿಕೆಗೆ ಬದ್ಧರಾಗಿದ್ದು, ತಾವು ದೇಶ ವಿರೋಧಿ ಕೃತ್ಯಗಳಲ್ಲಿ ತೊಡಗಿದವರ ಬಗ್ಗೆ ಮಾತನಾಡಿದ್ದಾಗಿ ಸಮರ್ಥಿಸಿಕೊಂಡಿದ್ದಾರೆ.

Read Full Story

12:49 PM (IST) Jul 26

60 ಆಕಾಂಕ್ಷಿಗಳು, 20 ಕುರ್ಚಿ; ದೆಹಲಿ ತಲುಪಿದ ಸಂಪುಟ ಕಸರತ್ತು! ಸಿದ್ದು-ಡಿಕೆಶಿ ಪಟ್ಟಿಯಲ್ಲಿ ಯಾರಿಗೆ ಚಾನ್ಸ್?

ಕೊನೆಗೂ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಕೂಡಿಬಂದಂತೆ ಕಾಣ್ತಿದೆ. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ತಲೆದಂಡ ಆಗ್ತಿದ್ದಂತೆ, ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕದತ್ತ ಚಿತ್ತ ಹರಿಸಿದೆ. ಎಲ್ಲವೂ ಅಂದುಕೊಂಡಂತೆ ಆದ್ರೆ ಬುಧವಾರವೇ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ತಂಡದ ಬಲ ಹೆಚ್ಚಾಗಲಿದೆ.

Read Full Story

12:10 PM (IST) Jul 26

ಕರುಣೆ ಇಲ್ಲದ ಅಮ್ಮ.. ಏಳು ತಿಂಗಳ ಹಸುಗೂಸಿನ ಎದುರೇ ಪ್ರಾಣಬಿಟ್ಟಳು..!

ಬೆಂಗಳೂರಿನಲ್ಲಿ ಪತಿಯ ಅಕ್ರಮ ಸಂಬಂಧ ಮತ್ತು ಮಾನಸಿಕ ಹಿಂಸೆಯಿಂದ ನೊಂದ 24 ವರ್ಷದ ತಾಯಿಯೊಬ್ಬಳು ತನ್ನ ಏಳು ತಿಂಗಳ ಹಸುಗೂಸನ್ನು ಬಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪತಿ ನೋಡುತ್ತಿದ್ದಂತೆಯೇ ವಿಡಿಯೋ ಕಾಲ್‌ನಲ್ಲೇ ಬದುಕು ಅಂತ್ಯ.

Read Full Story

11:55 AM (IST) Jul 26

ದಳಪತಿ ವಿಜಯ್‌ ಪತ್ನಿ ಸಂಗೀತಾ ಥಿಯೇಟರ್‌ಗೆ ಹೋಗಿ ʻಜನನಾಯಗನ್‌ʼ ಫಸ್ಟ್‌ ಡೇ ಫಸ್ಟ್‌ ಶೋ ನೋಡಿದ್ರಾ?

1999ರಲ್ಲಿ ದಳಪತಿ ವಿಜಯ್ ಮತ್ತು ಲಂಡನ್ ಮೂಲದ ಉದ್ಯಮಿಯ ಪುತ್ರಿ ಸಂಗೀತಾ ಅವರ ವಿವಾಹ ನಡೆದಿತ್ತು. ಈ ದಂಪತಿಗೆ ಜೇಸನ್ ಸಂಜಯ್ ಹಾಗೂ ದಿವ್ಯಾ ಸಾಶಾ ಎಂಬ ಇಬ್ಬರು ಮಕ್ಕಳಿದ್ದಾರೆ. ಸುಮಾರು 27 ವರ್ಷಗಳ ಕಾಲ ಅನ್ಯೋನ್ಯವಾಗಿದ್ದ ಈ ಜೋಡಿಯ ನಡುವೆ ಇತ್ತೀಚೆಗೆ ಭಿನ್ನಾಭಿಪ್ರಾಯ ಮೂಡಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ.

Read Full Story

11:41 AM (IST) Jul 26

ಏಷ್ಯಾದ ಮೊದಲ ಜಲವಿದ್ಯುತ್ ಸ್ಥಾವರ ಶಿವನಸಮುದ್ರದಲ್ಲಿ ಉತ್ಪಾದನೆ ಸ್ಥಗಿತ.. ರಾಜ್ಯಕ್ಕೆ ಕರೆಂಟ್ ಶಾಕ್!

ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳ ಸನಿಹದಲ್ಲೇ ಇರುವ ಈ ಸ್ಥಾವರವು ಐತಿಹಾಸಿಕ ಮತ್ತು ತಾಂತ್ರಿಕ ಮಹತ್ವದ ಪ್ರವಾಸಿ ತಾಣವಾಗಿಯೂ ಗುರುತಿಸಿಕೊಂಡಿದೆ. ನೂರು ವರ್ಷಗಳಿಗೂ ಹೆಚ್ಚು ಇತಿಹಾಸವಿರುವ ಈ ಮಹತ್ವದ ಸ್ಥಾವರವು ಇಂದು ಮಳೆಯಿಲ್ಲದೆ ಸ್ತಬ್ದವಾಗಿರುವುದು ಆತಂಕಕಾರಿ ಸಂಗತಿಯಾಗಿದೆ.

Read Full Story

11:01 AM (IST) Jul 26

ಗಲ್ಲಿಗಲ್ಲಿಯಲ್ಲಿ ರಚಿತಾ ರಾಮ್ ಸುದ್ದಿ.. 'ಲೇಡಿ ಬಾಸ್' ನೋಡಿ ಮಂಡ್ಯದ ಹಳ್ಳಿಯ ಹೆಣ್ಣುಮಕ್ಕಳು ಹೇಳಿದ್ದೇನು? ಆ ಗುಟ್ಟು ರಟ್ಟು!

ಸತೀಶ್ ನೀನಾಸಂ ಮತ್ತು ರಚಿತಾ ರಾಮ್ ಜೋಡಿಯ 'ಅಯೋಗ್ಯ' ಸಿನಿಮಾ ಎಷ್ಟು ದೊಡ್ಡ ಹಿಟ್ ಆಗಿತ್ತು ಅನ್ನೋದು ಎಲ್ಲರಿಗೂ ಗೊತ್ತು. ಈಗ ಅದರ ಮುಂದುವರಿದ ಭಾಗ 'ಅಯೋಗ್ಯ-2' ಸಿದ್ಧವಾಗಿದೆ. ಇತ್ತೀಚೆಗೆ ಮಂಡ್ಯದ ಸುತ್ತಮುತ್ತ ಈ ಚಿತ್ರದ ಹಾಡೊಂದರ ಚಿತ್ರೀಕರಣ ನಡೆಯುತ್ತಿತ್ತು. ಅಲ್ಲೇನಾಯ್ತು ನೋಡಿ..

Read Full Story

10:22 AM (IST) Jul 26

ಮೈಸೂರಿನಲ್ಲಿ ಇದೆ ಮಹಾನ್ ಚೇತನದ ಹೆಜ್ಜೆ ಗುರುತು.. ಈ ಬಾರಿ ಮೋದಿ ಭೇಟಿ ನೀಡ್ತಿರುವ ಈ ಸ್ಥಳದ ಮಹತ್ವವೇನು?

ಪ್ರಧಾನಿ ನರೇಂದ್ರ ಮೋದಿಯವರು ಮೈಸೂರಿನಲ್ಲಿ ನೂತನ 'ವಿವೇಕ ಸ್ಮಾರಕ'ವನ್ನು ಲೋಕಾರ್ಪಣೆ ಮಾಡಲಿದ್ದಾರೆ. 1892ರಲ್ಲಿ ಸ್ವಾಮಿ ವಿವೇಕಾನಂದರು ಮೈಸೂರಿಗೆ ಭೇಟಿ ನೀಡಿದ್ದ ಐತಿಹಾಸಿಕ ಸ್ಥಳದಲ್ಲಿ ಈ ಸ್ಮಾರಕ ನಿರ್ಮಾಣವಾಗಿದ್ದು, ಇದು ಯುವ ಸಬಲೀಕರಣ ಕೇಂದ್ರವಾಗಿಯೂ ಕಾರ್ಯನಿರ್ವಹಿಸಲಿದೆ.

Read Full Story

09:29 AM (IST) Jul 26

ಆಗಸ್ಟ್ 1ಕ್ಕೆ ಮೈಸೂರಿಗೆ ಪ್ರಧಾನಿ ಮೋದಿ ಭೇಟಿ.. ಐತಿಹಾಸಿಕ ಕ್ಷಣಕ್ಕೆ ಸಾಕ್ಷಿ ಆಗಲಿದೆ ಸಾಂಸ್ಕೃತಿಕ ನಗರಿ..!

ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 1 ರಂದು ಸಾಂಸ್ಕೃತಿಕ ನಗರಿ ಮೈಸೂರಿಗೆ ಭೇಟಿ ನೀಡಲಿದ್ದು, ರಾಮಕೃಷ್ಣ ಆಶ್ರಮದಲ್ಲಿ ನಿರ್ಮಿಸಲಾದ ಬಹುನಿರೀಕ್ಷಿತ 'ವಿವೇಕ ಸ್ಮಾರಕ'ವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಈ ಲೇಖನವು ಅವರ ಮೈಸೂರು ಪ್ರವಾಸದ ಸಂಪೂರ್ಣ ನಿಮಿಷ-ನಿಮಿಷದ ವೇಳಾಪಟ್ಟಿಯನ್ನು ವಿವರಿಸುತ್ತದೆ.
Read Full Story

09:08 AM (IST) Jul 26

ಪತ್ರಕರ್ತರ ಸೋಗಿನಲ್ಲಿ ಸುಲಿಗೆ; ಬೆಳಗಾವಿಯಲ್ಲಿ ನಾಲ್ವರು ಯೂಟ್ಯೂಬರ್‌ಗಳು ಅರೆಸ್ಟ್!

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕೊಟಬಾಗಿ ಗ್ರಾಮದಲ್ಲಿ ಈ ಸಿನಿಮಾ ಮಾದರಿಯ ಸುಲಿಗೆ ನಡೆದಿದೆ. ಪತ್ರಕರ್ತರೆಂದು ಹೇಳಿಕೊಂಡು ಜನರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಖತರ್ನಾಕ್ ಯೂಟ್ಯೂಬರ್ಸ್ ಗ್ಯಾಂಗ್‌ಗೆ ಬೆಳಗಾವಿ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

Read Full Story

08:54 AM (IST) Jul 26

2026 Commonwealth Games - ದುರಂತವನ್ನೇ ಸೋಲಿಸಿದ ಶಿಲ್ಪಾ; ಕಾಮನ್‌ವೆಲ್ತ್ ಕನಸು ನನಸು, ರಾಜ್ಯದಿಂದ ಆಯ್ಕೆಯಾದ ಏಕೈಕ ಅಥ್ಲೀಟ್

ನಾಲ್ಕನೇ ವಯಸ್ಸಿನಲ್ಲಿ ಅಪಘಾತದಲ್ಲಿ ಕಾಲು ಕಳೆದುಕೊಂಡ ಮೈಸೂರಿನ ಕೆ.ಎಸ್. ಶಿಲ್ಪಾ, ಎಲ್ಲಾ ಅಡೆತಡೆಗಳನ್ನು ಮೀರಿ ರಾಷ್ಟ್ರಮಟ್ಟದ ಪ್ಯಾರಾ ಅಥ್ಲೀಟ್ ಆಗಿ ಹೊರಹೊಮ್ಮಿದ್ದಾರೆ.  ಇವರು, ಇದೀಗ 2026ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಪ್ರತಿನಿಧಿಸುತ್ತಿದ್ದಾರೆ.

Read Full Story

08:12 AM (IST) Jul 26

Indian Oilನಿಂದ 5-10 ಕೆಜಿ ಸಿಲಿಂಡರ್‌ ವಿತರಣೆ; ಬುಕ್ಕಿಂಗ್ ವಾಟ್ಸಪ್ ನಂಬರ್ ಇಲ್ಲಿದೆ

ಇಂಡಿಯನ್‌ ಆಯಿಲ್‌ 'ಎಕ್ಸಟ್ರಾ ಲೈಟ್‌ ನೌ' ಹೆಸರಿನಲ್ಲಿ 10 ಮತ್ತು 5 ಕೆಜಿ ಎಲ್‌ಪಿಜಿ ಸಿಲಿಂಡರ್‌ಗಳ ಎಕ್ಸ್‌ಪ್ರೆಸ್‌ ಸೇವೆಯನ್ನು ಆರಂಭಿಸಿದೆ. ಈ ಸೇವೆಯು ನಗರವಾಸಿಗಳು ಮತ್ತು ಸಣ್ಣ ಕುಟುಂಬಗಳಿಗೆ ಅನುಕೂಲಕರವಾಗಿದ್ದು, ಬುಕ್ಕಿಂಗ್ ಮಾಡಿದ ನಾಲ್ಕು ಗಂಟೆಗಳೊಳಗೆ ಹಗುರವಾದ, ಪಾರದರ್ಶಕ ಸಿಲಿಂಡರ್‌ಗಳನ್ನು ವಿತರಿಸುತ್ತದೆ.
Read Full Story

07:51 AM (IST) Jul 26

Bengaluru - ರಾಮೋಹಳ್ಳಿ ಗೇಟ್‌ನಲ್ಲಿ ನಿರ್ಮಿಸಿದ ರಸ್ತೆ ಕೆಳಸೇತುವೆ ಓಡಾಟಕ್ಕೆ ಮುಕ್ತ

ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರು ರಾಮೋಹಳ್ಳಿ ರೈಲ್ವೆ ಗೇಟ್‌ನಲ್ಲಿ 8.84 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾದ ಹೊಸ ರಸ್ತೆ ಕೆಳಸೇತುವೆಯನ್ನು ಉದ್ಘಾಟಿಸಿದರು. ಈ ಯೋಜನೆಯು ಲೆವೆಲ್ ಕ್ರಾಸಿಂಗ್‌ನಿಂದ ಉಂಟಾಗುತ್ತಿದ್ದ ಸಂಚಾರ ದಟ್ಟಣೆಯನ್ನು ನಿವಾರಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಿದೆ. ರೈಲ್ವೆ ಇಲಾಖೆಯೇ ಸಂಪೂರ್ಣ ವೆಚ್ಚ ಭರಿಸಿ ಈ ಕಾಮಗಾರಿಯನ್ನು ಪೂರ್ಣಗೊಳಿಸಿದೆ.
Read Full Story

07:48 AM (IST) Jul 26

ತೀರ್ಥಹಳ್ಳಿ ಹಾಸ್ಟೆಲ್‌ನಲ್ಲಿ ಕಲುಷಿತ ಆಹಾರ ಸೇವಿಸಿ 60+ ಮಕ್ಕಳು ಅಸ್ವಸ್ಥ!

ಕಲುಷಿತ ಆಹಾರ ಸೇವಿಸಿ ಸುಮಾರು 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಕೋಣಂದೂರಿನ ನ್ಯಾಷನಲ್ ರೆಸಿಡೆನ್ಸಿ ವಸತಿ ಶಾಲೆಯಲ್ಲಿ ನಡೆದಿದೆ.

Read Full Story

07:42 AM (IST) Jul 26

BDA - ಸುಪ್ರೀಂ ತೀರ್ಪಿನ ವಿರುದ್ಧವಾಗಿ ಬಡಾವಣೆ ಅನುಮೋದಿತ ನಕ್ಷೆಯನ್ನೇ ಬದಲಿಸಿದ ಬಿಡಿಎ

ವಿಶ್ವೇಶ್ವರಯ್ಯ ಬಡಾವಣೆಯಲ್ಲಿ, ಅನುಮೋದಿತ ನಕ್ಷೆಯನ್ನು ಬದಲಿಸಿ ನಿವೇಶನ ಹರಾಜು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಹರಾಜಿನಲ್ಲಿ ಮಾರಾಟವಾದ ಮೂಲೆ ನಿವೇಶನದ ಅಳತೆ ತಪ್ಪಾಗಿದ್ದು, ಇದನ್ನು ಸರಿಪಡಿಸಲು ಎಂಜಿನಿಯರ್‌ಗಳು ಪಕ್ಕದ ನಿವೇಶನದಾರರಿಗೆ ಕಿರುಕುಳ ನೀಡುತ್ತಿದ್ದಾರೆ. ಈ ಅಕ್ರಮದ ಕುರಿತು ಶಾಸಕ ಎಸ್.ಟಿ. ಸೋಮಶೇಖರ್ ಅವರು ಬಿಡಿಎ ಆಯುಕ್ತರಿಗೆ ದೂರು ನೀಡಿದ್ದಾರೆ.

Read Full Story

07:29 AM (IST) Jul 26

ಐಟಿ ಕಂಪನಿಗಳಿರೋ ರಸ್ತೆ ಅಭಿವೃದ್ಧಿಗೆ 450 ಕೋಟಿ ರೂ ಅನುದಾನ - ಸಚಿವ ಕೃಷ್ಣ ಬೈರೇಗೌಡ

ಹೊರವರ್ತುಲ ರಸ್ತೆಯನ್ನು (ಒಆರ್‌ಆರ್) ₹450 ಕೋಟಿ ವೆಚ್ಚದಲ್ಲಿ ಸಮಗ್ರವಾಗಿ ಮೇಲ್ದರ್ಜೆಗೇರಿಸಲು ಸರ್ಕಾರ ನಿರ್ಧರಿಸಿದೆ. ಮೆಟ್ರೋ ಕಾಮಗಾರಿ ಮುಗಿದ ನಂತರ, ಜಂಕ್ಷನ್‌ಗಳು, ಸರ್ವಿಸ್ ರಸ್ತೆಗಳು, ಮತ್ತು ಪಾದಚಾರಿ ಮಾರ್ಗಗಳ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

Read Full Story

More Trending News