ತುಂಗಭದ್ರಾ ಜಲಾಶಯದ ನೂತನ ಕ್ರಸ್ಟ್ ಗೇಟ್‌ಗಳ ಲೋಕಾರ್ಪಣೆ ಇಂದು ನಡೆಯಲಿದೆ. ಕ್ರಸ್ಟ್‌ಗೇಟ್ ನಿರ್ಮಾಣದ ಹಿನ್ನೆಲೆ ಕರ್ನಾಟಕ, ಆಂಧ್ರ ಮತ್ತು ತೆಲಂಗಾಣ ರಾಜ್ಯಗಳ 12 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶಕ್ಕೆ ನೀರು ಸಿಗಲಿದೆ. ಕರ್ನಾಟಕ, ಅಂಧ್ರಪ್ರದೇಶ ಮತ್ತು ತೆಲಂಗಾಣ ಸಿಎಂ ಅವರಿಂದ ಲೋಕಾರ್ಪಣೆ ಮಾಡಲಾಗುತ್ತದೆ. 57.8 ಕೋಟಿ ವೆಚ್ಚದಲ್ಲಿ 33 ಕ್ರಸ್ಟ್‌ಗೇಟ್ ಗಳನ್ನು ಆಧುನೀಕರಿಸಲಾಗಿದೆ. ಕ್ರಸ್ಟ್ ಗೇಟ್ ಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಿಎಂ ಡಿ.ಕೆ.ಶಿವಕುಮಾರ್, ಆಂಧ್ರಪ್ರದೇಶದ ಸಿಎಂ ಎನ್.ಚಂದ್ರಬಾಬು ನಾಯ್ತು ಮತ್ತು ತೆಲಂಗಾಣ ಸಿಎಂ ಎ.ರೇವಂತ್ ರೆಡ್ಡಿ ಅವರು ಒಂದೇ ವೇದಿಕೆಯಲ್ಲಿ ಸೇರುತ್ತಿದ್ದಾರೆ. ಕರ್ನಾಟಕ ರಾಜ್ಯ ರಾಜಕೀಯ ಸೇರಿದಂತೆ ಇಂದಿನ ಕ್ಷಣ ಕ್ಷಣದ ಸುದ್ದಿ ಅಪ್‌ಡೇಟ್ ಇಲ್ಲಿದೆ.

11:35 PM (IST) Jun 25
ಬೆಂಗಳೂರಿನ ಪ್ರಸ್ತಾವಿತ ಸುರಂಗ ರಸ್ತೆ ಯೋಜನೆಗೆ ಅದಾನಿ ಎಂಟರ್‌ಪ್ರೈಸಸ್ ಸಲ್ಲಿಸಿರುವ ಬಿಡ್ ಮೊತ್ತವು ಮೂಲ ಅಂದಾಜಿಗಿಂತ ಶೇ. 96ರಷ್ಟು ಹೆಚ್ಚಾಗಿದೆ ಎಂಬುದು ಬಹಿರಂಗವಾಗಿದೆ. ಈ ಭಾರೀ ವೆಚ್ಚದಿಂದಾಗಿ ಸಾರ್ವಜನಿಕರ ಮೇಲೆ 40 ವರ್ಷಗಳ ಕಾಲ ಟೋಲ್ ಹೊರೆ ಬೀಳುವ ಸಾಧ್ಯತೆಯಿದೆ.
09:46 PM (IST) Jun 25
08:06 PM (IST) Jun 25
ವೈಶಾಖ್ ಸಾವಿನ ಸುದ್ದಿಯಲ್ಲಿ ನಂಟು ಹೊಂದಿರುವ ಕೃಷಿ ತಾಪಂಡ ಕನ್ನಡದ ಯಾವ ಸಿನಿಮಾದಲ್ಲಿ ನಟಿಸಿದ್ದರು ಎಂದು ಕೇಳುವವರ ಸಂಖ್ಯೆ ದೊಡ್ಡದಿದೆ. ಅವರಿಗೂ ಸೇರಿದಂತೆ ನಟಿ ಕೃಷಿ ತಾಪಂಡ ವೃತ್ತಿಜೀವನದ ಆರಂಭ, ನಟಿಸಿರುವ ಸಿನಿಮಾಗಳ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ, ನೋಡಿ..
06:33 PM (IST) Jun 25
ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಕರ್ನಾಟಕ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಕ್ಷಮೆಯಿಂದ ತಪ್ಪನ್ನು ಅಳಿಸಲಾಗದು ಕೋರ್ಟ್ ಹೇಳಿದೆ.
06:14 PM (IST) Jun 25
ಸದ್ಯಕ್ಕೆ ಪೊಲೀಸರು ಮೇಘಾ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದು, ಈ 'ತ್ರಿಕೋನ ಪ್ರೇಮ ಕಥೆ' ಅಥವಾ 'ಕೌಟುಂಬಿಕ ಕಲಹ' ವೈಶಾಕ್ ಅವರನ್ನು ಸಾವಿನ ದವಡೆಗೆ ತಳ್ಳಿತೇ ಎಂಬ ಆಯಾಮದಲ್ಲಿ ತನಿಖೆ ಮುಂದುವರಿಸಿದ್ದಾರೆ. ಮದುವೆಯಾದ 14 ವರ್ಷದ ನಂತರ ವೈಶಾಖ್ ತೆಗೆದುಕೊಂಡ ಈ ನಿರ್ಧಾರ ಇಡೀ ಕುಟುಂಬವನ್ನು ಅನಾಥವಾಗಿಸಿದೆ.
05:47 PM (IST) Jun 25
ನಟಿ ಕೃಷಿ ತಾಪಾಂಡ ಅವರ ಆಪ್ತ ಸ್ನೇಹಿತ ವೈಶಾಕ್ ಉಪಾಧ್ಯಾಯ (45) ಆತ್ಮ*ತ್ಯೆ ಮಾಡಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಪತ್ನಿ ಮೇಘಾ ನೀಡಿದ ದೂರಿನಲ್ಲಿ ನಟಿಯ ಹೆಸರನ್ನು ಉಲ್ಲೇಖಿಸಿದ್ದು, ಅಂತ್ಯಕ್ರಿಯೆ ವೇಳೆ ನಟಿಗೆ ಅಂತಿಮ ದರ್ಶನ ಪಡೆಯಲು ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.
05:33 PM (IST) Jun 25
ಮಂಗಳೂರಿನಲ್ಲಿ ಶಾರುಖ್ ಹವಾ ಜೋರಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಕಿಂಗ್ ಖಾನ್ ಅವರ ಫೋಟೋಗಳು ಮತ್ತು ವಿಡಿಯೋಗಳು ಸಖತ್ ವೈರಲ್ ಆಗುತ್ತಿವೆ. ಕರಾವಳಿ ಜನತೆಗೆ ಇದೊಂದು ಮರೆಯಲಾಗದ 'ಮೆಗಾ' ಸಂಜೆಯಾಗಲಿದೆ ಎನ್ನಲಾಗುತ್ತಿದೆ!
05:27 PM (IST) Jun 25
'2025ರ ಬರ್ಗುಂಡಿ ಪ್ರೈವೇಟ್ ಹುರುನ್ ಇಂಡಿಯಾ 500' ಪಟ್ಟಿಯ ಪ್ರಕಾರ, ಬೆಂಗಳೂರು ಭಾರತದ ಅತ್ಯಂತ ಕಿರಿಯ ಮತ್ತು ಮೌಲ್ಯಯುತ ನವೋದ್ಯಮಗಳ ಕೇಂದ್ರವಾಗಿ ಹೊರಹೊಮ್ಮಿದೆ. ಸರ್ವಂ ಎಐ ಮತ್ತು ಜೆಪ್ಟೋ ಸೇರಿದಂತೆ 7 ಯುವ ಕಂಪನಿಗಳು ಇಲ್ಲಿ ನೆಲೆಸಿದೆ.
04:27 PM (IST) Jun 25
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ಮಿಸಿರುವ 'ಮೇಜರ್ ಆರ್ಟೀರಿಯಲ್ ರಸ್ತೆ' ಜೂನ್ 27ರಂದು ಲೋಕಾರ್ಪಣೆಗೊಳ್ಳಲಿದೆ. 'ಎಸ್.ಎಂ.ಕೃಷ್ಣ ರಸ್ತೆ' ಎಂದು ನಾಮಕರಣಗೊಂಡಿರುವ ಈ ಟೋಲ್-ಮುಕ್ತ ಹೆದ್ದಾರಿಯು, ಮೈಸೂರು ರಸ್ತೆ ಮತ್ತು ಮಾಗಡಿ ರಸ್ತೆಯನ್ನು ಸಂಪರ್ಕಿಸಿ, ಸಂಚಾರ ದಟ್ಟಣೆ ಕಡಿಮೆಗೊಳಿಸುತ್ತದೆ
03:10 PM (IST) Jun 25
02:08 PM (IST) Jun 25
01:20 PM (IST) Jun 25
ಮಾವಿನ ಬೆಲೆ ಕುಸಿತದಿಂದ ಕಂಗಾಲಾಗಿದ್ದ ಕರ್ನಾಟಕದ ರೈತರಿಗೆ ಕೇಂದ್ರ ಸರ್ಕಾರ ನೆರವು ನೀಡಿದೆ. ಸಚಿವ ಪ್ರಹ್ಲಾದ್ ಜೋಶಿ ಮಾಡಿದ್ದ ಮನವಿಗೆ ಸ್ಪಂದಿಸಿದ ಕೇಂದ್ರ ಕೃಷಿ ಸಚಿವರು ಪ್ರತಿ ಕ್ವಿಂಟಾಲ್‌ಗೆ 1,750 ರೂಪಾಯಿ ಸಹಾಯಧನ ಘೋಷಿಸಿದ್ದಾರೆ.
01:19 PM (IST) Jun 25
ಉದ್ಯಮಿ ವೈಶಾಕ್ ಉಪಾಧ್ಯಾಯ, ನಟಿ ಕೃಷಿ ತಾಪಂಡ ಅವರ ಆರ್.ಆರ್. ನಗರದ ಫ್ಲಾಟ್‌ನಲ್ಲಿ ಆತ್ಮ*ತ್ಯೆ ಮಾಡಿಕೊಂಡಿದ್ದಾರೆ. ಸಾವಿಗೂ ಮುನ್ನ 'ಬದುಕಲು ಇಷ್ಟವಿಲ್ಲ' ಎಂದು ವೈಶಾಕ್ ಕೃಷಿಗೆ ಸಂದೇಶ ಕಳುಹಿಸಿದ್ದು, ಕೌಟುಂಬಿಕ ಕಲಹ ಮತ್ತು ಹಿಂದಿನ ಕ್ರಿಮಿನಲ್ ಪ್ರಕರಣದಿಂದ ಅವರು ಖಿನ್ನತೆಗೆ ಒಳಗಾಗಿದ್ದರು ಎಂಬುದು ತಿಳಿದುಬಂದಿದೆ. ಈ ಘಟನೆ ನಡೆದಾಗ ಕೃಷಿ ಅವರು ಕ್ಷೇಮವನದಲ್ಲಿದ್ದರು.
12:38 PM (IST) Jun 25
ವೈಶಾಕ್ ಒಬ್ಬ ಯಶಸ್ವಿ ಉದ್ಯಮಿ. ಕಾರು, ಆಟೋಮೊಬೈಲ್ ಮತ್ತು ಗ್ಯಾರೇಜ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದ ಅವರಿಗೆ ಮದುವೆಯಾಗಿ 15 ವರ್ಷಗಳಾಗಿತ್ತು. ಅಷ್ಟೇ ಅಲ್ಲದೆ, 14 ವರ್ಷದ ಒಬ್ಬ ಮಗನೂ ಇದ್ದಾನೆ. ಎಲ್ಲವೂ ಸರಿಯಾಗಿಯೇ ಇತ್ತು ಎನ್ನುವಾಗಲೇ ಹೀಗೇಕೆ ಆಯ್ತು?
12:32 PM (IST) Jun 25
ವಿಶೇಷ ಕೃಷಿ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಕನ್ನೇರಿಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ವಿರುದ್ಧ ಚಿಕ್ಕಮಗಳೂರಿನಲ್ಲಿ ನಿವೃತ್ತ ಉಪನ್ಯಾಸಕ ಬಾಣೂರು ಚನ್ನಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.
12:30 PM (IST) Jun 25
12:11 PM (IST) Jun 25
11:59 AM (IST) Jun 25
ನಟಿ ಕೃಷಿ ತಾಪಂಡ ಮನೆಯಲ್ಲಿ ಲೀವ್ ಇನ್ ಗೆಳೆಯ ವೈಶಾಖ್ ದುರಂತ ಅಂತ್ಯ ಕಂಡ ಘಟನೆ ಇದೀಗ ನಟಿ ಬದುಕಿಗೆ ಮತ್ತೊಂದು ಶಾಕ್ ಕೊಟ್ಟಿದೆ. ನನ್ನನ್ನು ಬದುಕಲು ಬಿಡಿ ಎಂದು ಕಣ್ಣೀರಿಟ್ಟಿದ್ದ ನಟಿ ಬದುಕಲ್ಲಿ ಏನಾಗುತ್ತಿದೆ?
11:43 AM (IST) Jun 25
ತುಂಗಭದ್ರಾ ಜಲಾಶಯ(TB Dam)ದ 33 ಗೇಟ್‌ಗಳ ಲೋಕಾರ್ಪಣೆ(Inauguration) ಕಾರ್ಯಕ್ರಮ ಇಂದು (ಜೂ.25,ಗುರುವಾರ) ಟಿಬಿ ಡ್ಯಾಂ(TB Dam) ಹಾಗೂ ಸಾರ್ವಜನಿಕ ಸಮಾರಂಭ ಮುನಿರಾಬಾದಿನ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿದ್ದು, ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಭಾಗಿಯಾಗಲಿದ್ದಾರೆ.
11:21 AM (IST) Jun 25
Gold Rate Today ಆಷಾಢ ಮಾಸ ಹತ್ತಿರವಾಗುತ್ತಿರುವ ಹೊತ್ತಿನಲ್ಲೇ ದಿನದಿಂದ ದಿನಕ್ಕೆ ಚಿನ್ನದ ಬೆಲೆಯಲ್ಲಿ ಮಹಾ ಕುಸಿತ ಮುಂದುವರೆದಿದೆ. ಇದೀಗ ಸತತ ಮೂರನೇ ದಿನವೂ ಚಿನ್ನದ ಬೆಲೆಯಲ್ಲಿ ಮಹಾ ಕುಸಿತವಾಗಿದೆ. ಬೆಂಗಳೂರಿನಲ್ಲಿ ಜೂನ್ 25ರಂದು ಚಿನ್ನದ ಬೆಲೆ ಎಷ್ಟಿದೆ ನೋಡೋಣ ಬನ್ನಿ.
11:09 AM (IST) Jun 25
10:10 AM (IST) Jun 25
ದಾವಣೆಗೆರೆಯಲ್ಲಿ ಶಂಕಿತ ಉಗ್ರ ಸುಹೇಲ್ ಬಂಧನ ಜನರಲ್ಲಿ ಆತಂಕ ಹೆಚ್ಚಿಸಿದೆ. ದಾವಣಗೆರೆಯಲ್ಲಿ ಕುಳಿತು ಪಾಕಿಸ್ತಾನ ಉಗ್ರರ ಜೊತೆ ಸಂಪರ್ಕದಲ್ಲಿದ್ದ ಆರೋಪದಡಿ ಸುಹೇಲ್ ಬಂಧನವಾಗಿದೆ. ಇದರ ಬೆನ್ನಲ್ಲೇ ಆತನ ನಂಬರ್ ಪಾಕಿಸ್ತಾನದ ಗ್ರೂಪ್‌ಗಳಲ್ಲಿ ಹೇಗೆ ಬಂತೋ ಗೊತ್ತಿಲ್ಲ ಎಂದ ಸಹೋದರ ಹೇಳಿದ್ದಾನೆ.
08:53 AM (IST) Jun 25
ಶಿವಮೊಗ್ಗದಿಂದ ತಿರುಪತಿಗೆ ಹೊರಡಬೇಕಿದ್ದ ವಿಮಾನ ಆರಂಭದಲ್ಲಿ ವಿಳಂಬ ಎಂದು ಬಳಿಕ ರದ್ದುಗೊಳಿಸಿದ ಘಟನೆ ನಡದಿದೆ. ಪರಿಣಾಮ ತಿರುಪತಿ ದರ್ಶನ ಟಿಕೆಟ್ ಪಡೆದು ಕಾಯುತ್ತಿದ್ದ ಭಕ್ತರು ತೀವ್ರ ಪರದಾಡುವಂತಾಗಿದೆ.
08:31 AM (IST) Jun 25
ಕೆಲಸದ ವೇಳೆ ತೀವ್ರ ಎದೆನೋವು ಹಾಗೂ ಎಡಗೈ ಸೆಳೆತ ಕಾಣಿಸಿಕೊಂಡ ಕಾರಣ ಸ್ಥಳೀಯ ಆಸ್ಪತ್ರೆಗೆ ಕೆರದೊಯ್ಯಲಾಗಿತ್ತು. ಇಂಜೆಕ್ಷನ್‌ಗೆ ಸಿದ್ಧತೆ ನಡೆಸುತ್ತಿದ್ದಂತೆ ಕುಳಿತಿದ್ದ ಪೊಲೀಸ್ ಪೇದೆ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ.
08:19 AM (IST) Jun 25
ಕೇಂದ್ರ ಸರ್ಕಾರ ರಾಜಕೀಯಕ್ಕಾಗಿ ಇಡಿ, ಐಟಿ ಅವರನ್ನು ತಮ್ಮ ವಿರೋಧಿಗಳ ಮೇಲೆ ಛೂ ಬಿಡುವ ಕೆಲಸ ಮಾಡುತ್ತಿದ್ದಾರೆ. ಆರೆಸ್ಸೆಸ್ ಪ್ರಶ್ನಿಸಿದ್ದಕ್ಕೆ ನಾಳೆ ನನ್ನ ಮೇಲೂ ಇಡಿ ದಾಳಿ ಆಗಬಹುದು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ. ಜಾರಕಿಹೊಳಿ ಸಂಬಂಧಿ ಮಲೆ ಇಡಿ ದಾಳಿ ಬಗ್ಗೆ ಖರ್ಗೆ ಹೇಳಿದ್ದೇನು?
08:04 AM (IST) Jun 25
NCERT 6ನೇ ತರಗತಿ ಕನ್ನಡ ಪುಸ್ತಕದ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಪಠ್ಯ ಪುಸ್ತಕಕ್ಕೆ ಕೃಷ್ಣ ಎಂದು ಹೆಸರಿಟ್ಟು, ಪುರಾಣ, ಧಾರ್ಮಿಕ ಕತೆಗಳನ್ನು ಹೇಳಲಾಗುತ್ತಿದೆ ಎಂದು ಶಿಕ್ಷಣ ತಜ್ಞರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಏನಿದು ಗಲಾಟೆ?
07:48 AM (IST) Jun 25
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು, ಆರ್‌ಎಸ್‌ಎಸ್ ಆದಾಯದ ಬಗ್ಗೆ ಪ್ರಶ್ನಿಸಿದ್ದಕ್ಕೆ ಬಿಜೆಪಿ ನಾಯಕರು ವೈಯಕ್ತಿಕ ಟೀಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ತನ್ನನ್ನು 'ಬಲಿತ ದಲಿತ' ಎಂದು ಕರೆದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಸವಾಲು ಹಾಕಿದರು.
07:34 AM (IST) Jun 25
ಬೆಂಗಳೂರಿಗರಿಗೆ ಮಹತ್ವದ ಗುಡ್ ನ್ಯೂಸ್ ಇದೆ. ಬಹುನಿರೀಕ್ಷಿತ ಪಿಂಕ್ ಲೈನ್ ಮೆಟ್ರೋ ಟೆಸ್ಟಿಂಗ್ ಪೂರ್ಣಗೊಂಡಿದೆ. ಆಗಸ್ಟ್ ತಿಂಗಳಿನಿಂದ ಪಿಂಕ್ ಲೈನ್ ಮೆಟ್ರೋ ಕಾರ್ಯಾರಂಭಗೊಳ್ಳುತ್ತಿದೆ. ಎಲ್ಲಿಂದ ಎಲ್ಲಿವರೆಗೆ ಈ ಮೆಟ್ರೋ ಸೇವೆ ನೀಡಲಿದೆ?
07:03 AM (IST) Jun 25
ತುಂಗಭದ್ರಾ ಜಲಾಶದ ಕ್ರಸ್ಟ್ ಗೇಟ್ ಲೋಕಾರ್ಪಣೆ ಹಿನ್ನಲೆಯಲ್ಲಿ ಅಹ್ವಾನಿತರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾದಿದೆ. ಉದ್ಘಾಟಕರನ್ನು ಹೊರತುಪಡಿಸಿದರೆ ಶಾಸಕರು ಹಾಗೂ ಸಂಸದರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಒಂದೇ ಸಲ ನಾಲ್ಕು ಗೇಟ್ ಗಳನ್ನ ಒಪನ್ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಕಾರ್ಯಕ್ರಮಕ್ಕೆ ಹೆಚ್ಚಿನ ಭದ್ರತೆ ನೀಡಲಾಗಿದೆ. 1 ಎಸ್ ಪಿ , 2 ಎಎಸ್ಪಿ, 4 ಡಿವೈಎಸ್ಪಿ 14 ಇನ್ಸ್ಪೆಕ್ಟರ್ , 400 ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.