Published : Jul 24, 2025, 07:38 AM ISTUpdated : Jul 24, 2025, 11:54 PM IST

Karnatata Latest News Live: ರಂಬುಟಾನ್ ಹಣ್ಣು ತಿಂದು ಒಂದು ವರ್ಷದ ಮಗು ಸಾವು, ಪೋಷಕರ ಆಕ್ರಂದನ

ಸಾರಾಂಶ

ಬೆಂಗಳೂರು (ಜು.24): ರಾಜ್ಯ ಸರ್ಕಾರ ಜಿಎಸ್‌ಟಿ ನೋಟಿಸ್‌ ಪಡೆದ ಸಣ್ಣ ವರ್ತಕರಿಗೆ ರಿಲೀಫ್‌ ನೀಡಲು ತೀರ್ಮಾನ ಮಾಡಿದೆ. ತೆರಿಗೆ ಮನ್ನಾ ಮಾಡುವುದಾಗಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಈ ಹಿಂದಿನ ನೋಟಿಸ್‌ ಬಗ್ಗೆ ಯಾವುದೇ ಕ್ರಮವಿಲ್ಲ ಎಂದು ವರ್ತಕರು, ಅಧಿಕಾರಿಗಳ ಸಭೆಯಲ್ಲಿ ಸಿಎಂ ನಿರ್ಧಾರ ಮಾಡಿದ್ದಾರೆ. ವರ್ತಕರಲ್ಲಿ ತೆರಿಗೆ ಬಗ್ಗೆ ಜಾಗೃತಿ ಮೂಡಿಸುವುದು ಕಡ್ಡಾಯವಾಗಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಜಿಎಸ್‌ಟಿ ನೋಂದಣಿ ಮಾಡಿಸುವುದು ಕಡ್ಡಾಯ ಎಂದು ಸಿಎಂ ತಿಳಿಸಿದ್ದಾರೆ. ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್‌ಲೈವ್‌ ಬ್ಲಾಗ್‌

 

11:54 PM (IST) Jul 24

ರಂಬುಟಾನ್ ಹಣ್ಣು ತಿಂದು ಒಂದು ವರ್ಷದ ಮಗು ಸಾವು, ಪೋಷಕರ ಆಕ್ರಂದನ

ಒಂದು ವರ್ಷ ಮಗು ರಂಬುಟಾನ್ ಹಣ್ಣು ತಿಂದು ಮೃತಪಟ್ಟ ಘಟನೆ ನಡೆದಿದೆ. ಹಣ್ಣು ಗಂಟಲಿನಲ್ಲಿ ಸಿಲುಕಿದ ಮಗವನ್ನು ತಕ್ಷಣ ಆಸ್ಪತ್ರೆ ದಾಖಲಿಸಿದರೂ ಪ್ರಯೋಜನವಾಗಿಲ್ಲ.

Read Full Story

11:37 PM (IST) Jul 24

ಕಲಬುರಗಿ - 2.15 ಕೋಟಿ ಚಿನ್ನ ದರೋಡೆ - ಪಾವ್‌ಭಜಿ ಆರ್ಡರ್ ಮಾಡಿ ಸಿಕ್ಕಿಬಿದ್ದ ಖದೀಮರು!

ಕಲಬುರಗಿಯಲ್ಲಿ ೨.೧೫ ಕೋಟಿ ರೂ. ಮೌಲ್ಯದ ಚಿನ್ನ ದರೋಡೆ ಮಾಡಿದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. PhonePe ಮೂಲಕ ಪಾವ್‌ಭಜಿ ತಿಂದಿದ್ದು ಸಿಕ್ಕಿಬೀಳಲು ಕಾರಣವಾಯಿತು. ನಾಲ್ಕನೇ ಆರೋಪಿಗಾಗಿ ಶೋಧ ಮುಂದುವರೆದಿದೆ.
Read Full Story

10:55 PM (IST) Jul 24

ಕಾರವಾರ - ಪರೀಕ್ಷೆಯಲ್ಲಿ ಫೇಲ್‌ ಆಗಿದ್ದಕ್ಕೆ ವೈದ್ಯಾಧಿಕಾರಿ ಪುತ್ರಿ ನೇಣಿಗೆ ಶರಣು, ಫೈನಾನ್ಸ್ ಕಿರುಕುಳ, ಕೋಲಾರ ಹಮಾಲಿ ಸಂಘದ ಅಧ್ಯಕ್ಷ ನೇಣು

ಕಾರವಾರದಲ್ಲಿ ವಿದ್ಯಾರ್ಥಿನಿ ಪರೀಕ್ಷಾ ಒತ್ತಡದಿಂದ  ಮಾಡಿಕೊಂಡರೆ, ಕೋಲಾರದಲ್ಲಿ ಫೈನಾನ್ಸ್ ಕಿರುಕುಳದಿಂದ ಹಮಾಲಿ ಸಂಘದ ಅಧ್ಯಕ್ಷರು ನೇಣಿಗೆ ಶರಣಾಗಿದ್ದಾರೆ.

Read Full Story

10:47 PM (IST) Jul 24

SSLC ಪರೀಕ್ಷೆಯಲ್ಲಿ ಇನ್ಮುಂದೆ 35 ಅಲ್ಲ 30 ಅಂಕ ಪಡೆದರೆ ಪಾಸ್, ಸರ್ಕಾರದ ನಿರ್ಧಾರ

ಎಸ್‌ಎಸ್ಎಲ್‌ಸಿ ಪರೀಕ್ಷೆಯಲ್ಲಿ ಇದುವಗೆ ಪಾಸ್ ಆಗಲು ಪ್ರತಿ ವಿಷಯದಲ್ಲಿ ಕನಿಷ್ಠ 35 ಅಂಕ ಪಡೆಯಬೇಕಿತ್ತು. ಆದರೆ ಇದೀಗ ರಾಜ್ಯ ಸರ್ಕಾರ ಕೇವಲ 30 ಅಂಕ ಪಡೆದರೆ ಪಾಸ್ ಎಂದಿದೆ. ಸರ್ಕಾರ ಉತ್ತೀರ್ಣ ಅಂಕ ಕಡಿತಗೊಳಿಸಿದೆ.

Read Full Story

10:08 PM (IST) Jul 24

ಹೃದಯಾಘಾತಕ್ಕೆ WWE ದಿಗ್ಗಜ ರಸ್ಲರ್ ಹಲ್ಕ್ ಹೋಗಾನ್ ನಿಧನ, ಗಣ್ಯರ ಸಂತಾಪ

WWE ಫಾಲೋ ಮಾಡುವ ಎಲ್ಲರಿಗೂ ಹಲ್ಕ್ ಹೋಗಾನ್ ಗೊತ್ತೇ ಇದೆ. ಅತ್ಯಂತ ಜನಪ್ರಿಯ ರಸ್ಲರ್ ಹಲ್ಕ್ ಹೋಗಾನ್ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.

Read Full Story

09:29 PM (IST) Jul 24

ಅಮೆಜಾನ್ ಉದ್ಯೋಗಿಗಳ ಸ್ಯಾಲರಿ ಬಹಿರಂಗ,ಎಂಜಿನೀಯರ್ಸ್ ವೇತನ 2.3 ಕೋಟಿ ರೂ

ಅಮೆಜಾನ್ H1B ಉದ್ಯೋಗಿಗಳ ಸ್ಯಾಲರಿ ಬಹಿರಂಗವಾಗಿದೆ. ಇ ಕಾಮರ್ಸ್ ಕಂಪನಿಯಲ್ಲಿ ನೌಕರಿ ಗಿಟ್ಟಿಸಿಕೊಂಡ ಪ್ರತಿಯೊಬ್ಬ ಉದ್ಯೋಗಿೂ ಕೈ ತುಂಬ ಸಂಬಳ. ಸಾಫ್ಟ್‌ವೇರ್ ಎಂಜಿನೀಯರ್ಸ್‌ಗೆ 2.3 ಕೋಟಿ ರೂಪಾಯಿ ವೇತನ ನೀಡಲಾಗುತ್ತಿದೆ. ಅಮೆಜಾನ್ ಉದ್ಯೋಗಿಗಳ ಸ್ಯಾಲರಿ ಪಟ್ಟಿ ಇಲ್ಲಿದೆ.

Read Full Story

09:28 PM (IST) Jul 24

ಬೆಂಗಳೂರು - ಹಾಡಹಗಲೇ ಮಹಿಳೆಯನ್ನ ಹಿಂಬಾಲಿಸಿ ಬಲವಂತವಾಗಿ ತುಟಿ ಕಚ್ಚಿದ ಕಾಮುಕ ಅರೆಸ್ಟ್

ಬೆಂಗಳೂರಿನಲ್ಲಿ ಹಾಡುಹಗಲೇ ಯುವತಿಯೊಬ್ಬಳ ಮೇಲೆ ಕಾಮುಕನೋರ್ವ ಅಸಭ್ಯವಾಗಿ ವರ್ತಿಸಿ, ಬಲವಂತವಾಗಿ ತಬ್ಬಿಕೊಂಡು ತುಟಿಗೆ ಕಚ್ಚಿದ ಘಟನೆ ನಡೆದಿದೆ. ಗೋವಿಂದಪುರದಲ್ಲಿ ನಡೆದ ಈ ಘಟನೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಮಹಿಳೆಯರ ಸುರಕ್ಷತೆಯ ಬಗ್ಗೆ ಮತ್ತೆ ಚರ್ಚೆ ಹುಟ್ಟಿಕೊಂಡಿದೆ.
Read Full Story

08:48 PM (IST) Jul 24

ರಾಜ್ಯದ ಹಲವೆಡೆ ಭಾರಿ ಮಳೆ ಅಲರ್ಟ್, ನಾಳೆ 2 ಜಿಲ್ಲೆಯ ಶಾಲಾ ಕಾಲೇಜಿಗೆ ರಜೆ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ನಾಳೆ ಕೆಲ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಇದರ ಪರಿಣಾಮ ಎರಡು ಜಿಲ್ಲೆಯ ಶಾಲಾ ಕಾಲೇಜಿಗೆ ನಾಳೆ ರಜೆ ಘೋಷಿಸಲಾಗಿದೆ.

Read Full Story

08:44 PM (IST) Jul 24

UPI Scam in Nelamangala - ಫೋನ್‌ಪೇ ಗೂಗಲ್ ಪೇ ಬಳಸುವ ಅಂಗಡಿ ಮಾಲಿಕರೇ ಎಚ್ಚರ! ಗ್ರಾಹಕರಂತೆ ಬಂದು ಹೇಗೆ ವಂಚಿಸ್ತಾರೆ ನೋಡಿ!

ನೆಲಮಂಗಲದಲ್ಲಿ ಡಿಜಿಟಲ್ ಪಾವತಿಯ ಮೂಲಕ ವಂಚನೆ ನಡೆದ ಘಟನೆ ಬೆಳಕಿಗೆ ಬಂದಿದೆ. UPI ಸ್ಕ್ಯಾನರ್ ಬಳಸುವ ಅಂಗಡಿ ಮಾಲೀಕರನ್ನು ಗುರಿಯಾಗಿಸಿಕೊಂಡು ಕಳ್ಳರು ಹೊಸ ತಂತ್ರ ರೂಪಿಸಿದ್ದಾರೆ. 75,000 ರೂ. ವಂಚಿಸಿದ ಘಟನೆ ನಡೆದಿದ್ದು, ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ.
Read Full Story

08:17 PM (IST) Jul 24

ಮೈಸೂರು ದಸರಾ, ಆನೆ ಶಿಬಿರಗಳಿಂದ ಗಜ ಪಯಣಕ್ಕೆ ದಿನಾಂಕ ಘೋಷಿಸಿದ ಜಲ್ಲಾಡಳಿತ

ಮೈಸೂರಿನತ್ತ ದಸರಾ ಆನೆಗಳ ಪಯಣಕ್ಕೆ ಜಿಲ್ಲಾಡಳಿತ ದಿನಾಂಕ ಘೋಷಿಸಿದೆ. ಮೊದಲ ತಂಡದಲ್ಲಿ 9 ಆನೆಗಳು ಮೈಸೂರಿಗೆ ಆಗಮಿಸುತ್ತಿದೆ.

Read Full Story

08:08 PM (IST) Jul 24

ಬೆಂಗಳೂರಲ್ಲಿ ಜುಲೈ 26-27ರಂದು ಕುಂದಾಪ್ರ ಕನ್ನಡ ಹಬ್ಬ, ಕಾರ್ಯಕ್ರಮದ ಸಂಪೂರ್ಣ ವಿವರ ಇಲ್ಲಿದೆ

ಜುಲೈ 26 ಮತ್ತು 27 ರಂದು ಬೆಂಗಳೂರಿನ ನಂದಿ ಲಿಂಕ್ ಗ್ರೌಂಡ್‌ನಲ್ಲಿ ಕುಂದಾಪ್ರ ಕನ್ನಡ ಹಬ್ಬವು ಅದ್ದೂರಿಯಾಗಿ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಘಾಟಿಸಲಿದ್ದು, ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ. ಕುಂದಾಪ್ರ ಕನ್ನಡ ಅಧ್ಯಯನ ಪೀಠವನ್ನು ಲೋಕಾರ್ಪಣೆ ಮಾಡಲಾಗುವುದು.
Read Full Story

07:48 PM (IST) Jul 24

ಭೀಮನ ಅಮವಾಸ್ಯೆ - ಪತ್ನಿಯೊಂದಿಗೆ ದೇಗುಲಕ್ಕೆ ಆಗಮನಿಸಿ ಮಂಡ್ಯ ಎಸ್‌ಪಿ ವಿಶೇಷ ಪೂಜೆ

ಮಂಡ್ಯದ ಕಾಳಿಕಾಂಭ ಮತ್ತು ಬಿಸಿಲು ಮಾರಮ್ಮ ದೇವಸ್ಥಾನಗಳಲ್ಲಿ ಭೀಮನ ಅಮವಾಸ್ಯೆ ನಿಮಿತ್ತ ವಿಶೇಷ ಪೂಜೆಗಳು ಜರುಗಿದವು. ಸಾವಿರಾರು ಭಕ್ತರು ದೇವರ ದರ್ಶನ ಪಡೆದು ತಡೆ ಒಡೆದರು. ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಪತ್ನಿಯೊಂದಿಗೆ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
Read Full Story

07:43 PM (IST) Jul 24

ಸಾವಿರ ವರ್ಷದ ಶಿವನ ದೇಗುಲಕ್ಕಾಗಿ ಕಾಂಬೋಡಿಯಾ ಥಾಯ್ಲೆಂಡ್ ಯುದ್ಧ, 11 ಸಾವು

1,100 ವರ್ಷ ಹಳೇ ಹಿಂದೂ ಶಿವನ ದೇಗುಲಕ್ಕಾಗಿ ಇದೀಗ ಥಾಯ್ಲೆಂಡ್ ಹಾಗೂ ಕಾಂಬೋಡಿಯಾ ದೇಶಗಳು ಯುದ್ಧ ಆರಂಭಿಸಿದೆ. ಏಕಾಏಕಿ ಉಭಯ ದೇಶಗಳು ರಾಕೆಟ್, ಮಿಸೈಲ್ ಲಾಂಚ್ ಮಾಡಿದೆ. ಈ ದಾಳಿಯಲ್ಲಿ 11 ಮಂದಿ ಮೃತಪಟ್ಟಿದ್ದಾರೆ.

 

Read Full Story

06:59 PM (IST) Jul 24

ರಾಮೇಶ್ವರಂ ಕೆಫೆ ತಿಂಡಿಯಲ್ಲಿ ಜಿರಳೆಯೇ ಸಿಕ್ಕಿಲ್ಲ; ಊಟದಲ್ಲಿ ಹುಳ ಹಾಕಿ ₹25 ಲಕ್ಷ ಹಣಕ್ಕಾಗಿಬ್ಲ್ಯಾಕ್‌ಮೇಲ್!

ಬೆಂಗಳೂರು ವಿಮಾನ ನಿಲ್ದಾಣದ ರಾಮೇಶ್ವರಂ ಕೆಫೆಯಲ್ಲಿ ಆಹಾರದಲ್ಲಿ ಕೀಟವಿದೆ ಎಂದು ಸುಳ್ಳು ಆರೋಪ ಮಾಡಿ ಹಣ ಸುಲಿಗೆ ಮಾಡಲು ಯತ್ನಿಸಿದ ಗುಂಪಿನ ವಿರುದ್ಧ ಪೊಲೀಸ್ ದೂರು ದಾಖಲು. ₹25 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪ.
Read Full Story

06:25 PM (IST) Jul 24

ಚಿನ್ನಸ್ವಾಮಿ ದುರಂತ - ಶವಪರೀಕ್ಷೆ ನಂತರ ಚಿನ್ನದ ಕಿವಿಯೋಲೆ ಕಳ್ಳತನ, ಮೃತ ದಿವ್ಯಾಂಶಿ ತಾಯಿ ದೂರು

ಆರ್‌ಸಿಬಿ ವಿಜಯೋತ್ಸವದ ಕಾಲ್ತುಳಿತದಲ್ಲಿ ಮೃತಪಟ್ಟ ದಿವ್ಯಾಂಶಿ ಮರಣೋತ್ತರ ಪರೀಕ್ಷೆ ವೇಳೆ ಆಭರಣ ಕಾಣೆಯಾಗಿದೆ ಎಂದು ತಾಯಿ ಆರೋಪಿಸಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಭರವಸೆಯ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಮರ್ಷಿಯಲ್‌ ಸ್ಟ್ರೀಟ್‌ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
Read Full Story

06:18 PM (IST) Jul 24

ವಿಮಾನ ನಿಲ್ದಾಣದಲ್ಲಿ ಸುಗಂಧದ ಸ್ಪರ್ಶ - ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹೊಸ ಅನುಭವ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪ್ರಯಾಣವನ್ನು ಇನ್ನಷ್ಟು ಮಧುರಗೊಳಿಸಲು 'ಡ್ಯಾನ್ಸಿಂಗ್ ಬ್ಯಾಂಬೂ' ಸುಗಂಧವನ್ನು ಪರಿಚಯಿಸಲಾಗಿದೆ. ಈ ಸುಗಂಧವು ಪ್ರಯಾಣಿಕರ ಒತ್ತಡವನ್ನು ಕಡಿಮೆ ಮಾಡಿ, ಶಾಂತ ಅನುಭವ ನೀಡುತ್ತದೆ.
Read Full Story

06:08 PM (IST) Jul 24

ಸಿರಿಧಾನ್ಯ, ಮಾವು,ಮೀನು ಸೇರಿ ಉತ್ಪನ್ನಗಳ ರಫ್ತು, ಭಾರತ-ಯುಕೆ ಫ್ರೀ ಟ್ರೇಡ್‌ ಪ್ರಯೋಜನವೇನು?

ಭಾರತ ಯುಕೆ ಮುಕ್ತ ವ್ಯಾಪಾರ ಒಪ್ಪಂದದಿಂದ ಭಾರತದ ಮಾವು, ಮೀನು, ಸಿರಿಧಾನ್ಯ ಸೇರಿ ಕೃಷಿ ಉತ್ಪನ್ನ ಯಾವುದೇ ಅಡೆ ತಡೆ ಇಲ್ಲದೆ ರೈತರು ಯುಕೆಗೆ ರಫ್ತು ಮಾಡಬಹುದು. ಇನ್ನು ಯುಕೆ ವಿಸ್ಕಿ ಸೇರಿ ಹಲವು ಉತ್ಪನ್ನ ಅತೀ ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದೆ.  

Read Full Story

06:04 PM (IST) Jul 24

Bheemana Amavasye - ನೆನಪಿರಲಿ ಪ್ರೇಮ್​ಗೆ ಪತ್ನಿಯಿಂದ ಪಾದಪೂಜೆ - ಕ್ಯೂಟ್​ ವಿಡಿಯೋ ವೈರಲ್​

ಇಂದು ಭೀಮನ ಅವಮಾಸ್ಯೆ. ಈ ಹಿನ್ನೆಲೆಯಲ್ಲಿ ನೆನಪಿರಲಿ ಪ್ರೇಮ್​ ಅವರ ಪತ್ನಿ ಜ್ಯೋತಿ ಅವರು ಪತಿಗೆ ಪಾದಪೂಜೆ ಮಾಡಿದ್ದಾರೆ. ಅದರ ವಿಡಿಯೋ ಇದೀಗ ವೈರಲ್​ ಆಗಿದೆ.

 

Read Full Story

05:57 PM (IST) Jul 24

ಮಾರುತಿ ಸುಜುಕಿಯಿಂದ ಈಗ 6 ಏರ್‌ಬ್ಯಾಗ್‌ನ XL6 ಕಾರು; ಸುರಕ್ಷತೆಗೆ ಹೆಚ್ಚಿನ ಆದ್ಯತೆ!

ಮಾರುತಿ ಸುಜುಕಿ XL6 ಪ್ರೀಮಿಯಂ 7-ಸೀಟರ್ MPV ಈಗ ಎಲ್ಲಾ ವೇರಿಯಂಟ್‌ಗಳಲ್ಲಿಯೂ ಆರು ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಹೊಂದಿದೆ.

Read Full Story

05:52 PM (IST) Jul 24

ನಾಗಲಕ್ಷ್ಮೀ ಚೌಧರಿ ಭೇಟಿ ನೀಡಿದ ವೇಳೆ ಕೊಳ್ಳೇಗಾಲ ಆಸ್ಪತ್ರೆಯಲ್ಲಿ ಗೌಜು-ಗದ್ದಲ, ಸಕಾಲಕ್ಕೆ ಚಿಕಿತ್ಸೆ ಸಿಗದೇ ಪರದಾಡಿದ ರೋಗಿಗಳು?

ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರ ಭೇಟಿ ವೇಳೆ ಗದ್ದಲ ಉಂಟಾಗಿ ರೋಗಿಗಳಿಗೆ ತೊಂದರೆಯಾಗಿದೆ. ಅಭಿಮಾನಿಗಳ ಒಳನುಗ್ಗುವಿಕೆಯಿಂದ ಆಸ್ಪತ್ರೆಯ ವಾತಾವರಣ ಗದ್ದಲಮಯವಾಗಿತ್ತು.
Read Full Story

05:35 PM (IST) Jul 24

ಮಸ್ಕಿಯಲ್ಲಿ 4000 ವರ್ಷಗಳ ಹಿಂದಿನ ಜನವಸತಿ ಕುರುಹು ಪತ್ತೆ; ಆದಿಮಾನವರ ಚಿತ್ರಗಳೂ ಲಭ್ಯ!

ರಾಯಚೂರಿನ ಮಸ್ಕಿ ಪಟ್ಟಣದ ಬಳಿಯ ಗುಡ್ಡದಲ್ಲಿ 4000 ವರ್ಷಗಳಷ್ಟು ಹಳೆಯದಾದ ಮಾನವ ವಸತಿಯ ಕುರುಹುಗಳು ಪತ್ತೆಯಾಗಿವೆ. ವಿದೇಶಿ ಮತ್ತು ದೇಶಿ ಸಂಶೋಧಕರ ತಂಡವು ಅಶೋಕನ ಶಾಸನ ಸಿಕ್ಕ ಸ್ಥಳದ ಸುತ್ತಮುತ್ತ ಉತ್ಖನನ ನಡೆಸಿ ಈ ಕುರುಹುಗಳನ್ನು ಪತ್ತೆ ಹಚ್ಚಿದೆ.

Read Full Story

05:34 PM (IST) Jul 24

ಗೋಕರ್ಣ ಗುಹೆಯಲ್ಲಿ ಪತ್ತೆಯಾದ ರಷ್ಯನ್ ಮಹಿಳೆ ಮತ್ತು ಮಕ್ಕಳ ಗಡೀಪಾರಿಗೆ ಹೈಕೋರ್ಟ್ ತಾತ್ಕಾಲಿಕ ತಡೆ

ಗೋಕರ್ಣದ ಗುಹೆಯಲ್ಲಿ ಪತ್ತೆಯಾದ ರಷ್ಯಾದ ಮಹಿಳೆ ಮತ್ತು ಆಕೆಯ ಇಬ್ಬರು ಮಕ್ಕಳ ಗಡೀಪಾರು ಪ್ರಕ್ರಿಯೆಯನ್ನು ಕರ್ನಾಟಕ ಹೈಕೋರ್ಟ್ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಮಕ್ಕಳ ಹಿತಾಸಕ್ತಿ ಮತ್ತು UNCRC ತತ್ವಗಳನ್ನು ಪರಿಗಣಿಸಿ ಈ ನಿರ್ಣಯ ಕೈಗೊಳ್ಳಲಾಗಿದೆ. ಮುಂದಿನ ವಿಚಾರಣೆ ಆಗಸ್ಟ್ 18 ರಂದು ನಡೆಯಲಿದೆ.
Read Full Story

05:17 PM (IST) Jul 24

ತುಮಕೂರು - ವರಹ ಚಿನ್ಹೆಯ ಧ್ವಜ ಹಾರಿಸಿದ್ದಕ್ಕೆ ಐವರು ಹಿಂದೂ ಯುವಕರ ವಿರುದ್ಧ FIR!

ತಿಪಟೂರಿನಲ್ಲಿ ವರಹ ಧ್ವಜ ಹಾರಿಸಿದ್ದಕ್ಕೆ ಐವರು ಯುವಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ಘಟನೆಯನ್ನು ಖಂಡಿಸಿ ಬಿಜೆಪಿ ಮತ್ತು ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಕೇಸ್ ವಾಪಸ್ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.
Read Full Story

05:08 PM (IST) Jul 24

ಭಾರತದಲ್ಲಿ ನೇಮಕಾತಿ ಬೇಡ, ಗೂಗಲ್, ಮೈಕ್ರೋಸಾಫ್ಟ್ ಕಂಪನಿಗೆ ಟ್ರಂಪ್ ವಾರ್ನಿಂಗ್

ಭಾರತದಲ್ಲಿ ಟೆಕ್ ನೇಮಕಾತಿ ಮಾಡಬೇಡಿ ಎಂದು ಗೂಗಲ್ , ಮೈಕ್ರೋಸಾಫ್ಟ್ ಸೇರಿದಂತೆ ದಿಗ್ಗಜ ಕಂಪನಿಗಳಿಗೆ ಡೋನಾಲ್ಡ್ ಟ್ರಂಪ್ ಸೂಚಿಸಿದ್ದಾರೆ. ಇಷ್ಟೇ ಅಲ್ಲ ಭಾರತ, ಚೀನಾದಲ್ಲಿ ಫ್ಯಾಕ್ಟರಿ ನಿಲ್ಲಿಸಿ, ಅಮೆರಿಕದಲ್ಲೇ ಮಾಡಿ ಎಂದು ಸೂಚಿಸಿದ್ದಾರೆ.

Read Full Story

04:45 PM (IST) Jul 24

ಮಂಗಳೂರು ಜೈಲಿನಲ್ಲಿ ಹಫ್ತಾ ವಸೂಲಿ - ಜೀವ ಭಯಕ್ಕೆ ಪತ್ನಿ ಮೂಲಕ ಹಣ ಕಳಿಸಿದ ಸಹ ಕೈದಿ!

ಮಂಗಳೂರು ಜೈಲಿನಲ್ಲಿ ಸಹಕೈದಿ ಮೇಲೆ ಹಲ್ಲೆ ನಡೆಸಿ ಹಫ್ತಾ ವಸೂಲಿ ಮಾಡಿದ ಆರೋಪದ ಮೇಲೆ ನಾಲ್ವರು ಆರೋಪಿಗಳ ವಿರುದ್ಧ ಕೋಕಾ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ಜೈಲಿನ ಫೋನ್ ಬೂತ್ ಮೂಲಕ ಸಂತ್ರಸ್ತ ತನ್ನ ಪತ್ನಿಗೆ ಮಾಹಿತಿ ನೀಡಿದ್ದರು. ಪೊಲೀಸ್ ಕಮೀಷನರ್  ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

Read Full Story

04:28 PM (IST) Jul 24

ಹುಬ್ಬಳ್ಳಿ ಗ್ಯಾಸ್ ಸಿಲಿಂಡರ್ ಸೋರಿಗೆ ಬ್ಲಾಸ್ಟ್ ಕೇಸಿಗೆ ಭಾರೀ ಟ್ವಿಸ್ಟ್; ಇದು ಅವಘಡವಲ್ಲ, ಕೊಲೆ ಯತ್ನವಂತೆ!

ಹುಬ್ಬಳ್ಳಿಯಲ್ಲಿ ಶಿಕ್ಷಕ ದಂಪತಿಯ ಮನೆಯಲ್ಲಿ ಗ್ಯಾಸ್ ಸೋರಿಕೆಯಾಗಿ ಬೆಂಕಿ ಅವಘಡ ಸಂಭವಿಸಿ, ನಾಲ್ವರು ಗಾಯಗೊಂಡಿದ್ದಾರೆ. ಗಾಯಾಳು ಮಹಿಳೆಯ ತಂಗಿ, ತಮ್ಮ ಅಕ್ಕನ ಗಂಡನೇ ಕೊಲೆ ಯತ್ನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
Read Full Story

04:22 PM (IST) Jul 24

ಐತಿಹಿಸಾಕ ಭಾರತ-ಯುಕೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ, ಲಾಭವೇನು?

ಭಾರತ ಹಾಗೂ ಯುಕೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದೆ. ಇದು ಐತಿಹಾಸಿಕ ಒಪ್ಪಂದವಾಗಿ ಹೊರಹೊಮ್ಮಿದೆ. ಈ ಒಪ್ಪಂದದಿಂದ ವಹಿವಾಟು 34 ಶತಕೋಟಿ ಡಾಲರ್‌ಗೆ ಏರಿಕೆಯಾಗಲಿದೆ. ಈ ಒಪ್ಪಂದಿಂದ ಜನಸಾಮಾನ್ಯರಿಗೇನು ಪ್ರಯೋಜನ?

 

Read Full Story

04:02 PM (IST) Jul 24

ಅಂಡರ್‌ಟೇಕರ್ 2025 ರಲ್ಲಿ ಮತ್ತೆ ಬಂದ್ರೆ ಯಾರ ಜೊತೆ ಫೈಟ್?

2025 ರಲ್ಲಿ ಅಂಡರ್‌ಟೇಕರ್ ನಿವೃತ್ತಿಯಿಂದ ಹೊರಬಂದರೆ, ಈ ಮೂರು WWE ಸ್ಟಾರ್‌ಗಳು ಅವರಿಗಾಗಿ ಕಾಯುತ್ತಿರಬಹುದು. ಡೆಡ್‌ಮ್ಯಾನ್ ಜೊತೆ ರಿಂಗ್ ಹಂಚಿಕೊಳ್ಳಬಹುದಾದವರು ಇಲ್ಲಿದ್ದಾರೆ.

Read Full Story

03:57 PM (IST) Jul 24

ನಿಮ್ಮ ಮೆಕ್ ಅಲ್ಲ ಇದು ಪಟೇಲ್ ಮಗ, ಮೆಕ್‌ಡೋನಾಲ್ಡ್ ಆಕ್ಷೇಪಕ್ಕೆ ಮೆಕ್‌ಪಟೇಲ್ ಸಮರ್ಥನೆ

ಮೆಕ್‌ಡೋನಾಲ್ಡ್ ಅತ್ಯಂತ ಜನಪ್ರಿಯ ಅಂತಾರಾಷ್ಟ್ರೀಯ ಬ್ರ್ಯಾಂಡ್. ಇದಕ್ಕೆ ಸೆಡ್ಡು ಹೊಡೆಯುವಂತೆ ಭಾರತದ ಮೆಕ್‌ಪೇಟಲ್ ವ್ಯಾಪಾರ ನಡೆಸುತ್ತಿದೆ. ಆದರೆ ಮೆಕ್ ಹೆಸರು ಬಳಕೆ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿರುವ ಮೆಕ್‌ಡೋನಾಲ್ಡ್ ‌ಗೆ ತಿರುಗೇಟು ನೀಡಿದೆ. ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ.

 

Read Full Story

03:31 PM (IST) Jul 24

ಗಂಡನ ಜೊತೆ ಜಗಳ, 5 ವರ್ಷದ ಮಗಳನ್ನ ಕೊಂದ ತಾಯಿ!

ನೆಲಮಂಗಲದಲ್ಲಿ ಗಂಡ ಹೆಂಡತಿ ಜಗಳದಲ್ಲಿ ಮಗು ಬಲಿಯಾಗಿದೆ. ಕುಡಿತದ ದಾಸನಾಗಿದ್ದ ಗಂಡನ ಕಿರುಕುಳಕ್ಕೆ ಬೇಸತ್ತು ಮಗಳನ್ನು ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
Read Full Story

03:21 PM (IST) Jul 24

ಕೇವಲ 73 ಸಾವಿರ ರೂ, ಹೀರೋ ಹೆಎಫ್ ಡಿಲಕ್ಸ್ ಪ್ರೋ ಬೈಕ್ ಬಿಡುಗಡೆ

ಹೀರೋ ಇದೀಗ ಹೊಚ್ಚ ಹೊಸ ಹೀರೋ ಹೆಎಫ್ ಡಿಲಕ್ಸ್ ಪ್ರೋ ಬೈಕ್ ಬಿಡುಗಡೆ ಮಾಡಿದೆ. ಕೈಗೆಟೆಕುವ ದರ ಜೊತೆಗೆ ಹೈಟೆಕ್ ಬೈಕ್ ಇದಾಗಿದೆ. ಈ ಬೈಕ್ ವಿಶೇಷತೆ ಏನು?

Read Full Story

03:14 PM (IST) Jul 24

ಯಶವಂತಪುರ ಎಪಿಎಂಸಿ ಗೇಟ್ ಪಾಸ್‌ಗಳಿಗೆ ಅಧಿಕಾರಿಗಳಿಂದಲೇ ಹಣ ವಸೂಲಿ, ಅಕ್ರಮ ಬೆಳಕಿಗೆ

ಯಶವಂತಪುರ ಎಪಿಎಂಸಿಯಲ್ಲಿ ಗೇಟ್ ಪಾಸ್‌ಗಳಿಗೆ ಹಣ ವಸೂಲಿ ಮಾಡುತ್ತಿದ್ದ ಅಕ್ರಮ ಬೆಳಕಿಗೆ ಬಂದಿದೆ. ಸೆಕ್ಯುರಿಟಿ ಸಿಬ್ಬಂದಿ ಹಣ ವಸೂಲಿ ಮಾಡುತ್ತಿದ್ದರು ಎಂದು ವರದಿಯಾಗಿದೆ. ವರದಿ ಬಳಿಕ ಎಪಿಎಂಸಿ ಅಧಿಕಾರಿಗಳು ದಿಢೀರ್ ಪರಿಶೀಲನೆ ನಡೆಸಿದ್ದಾರೆ.
Read Full Story

03:05 PM (IST) Jul 24

ಗ್ಯಾರಂಟಿ ಹಣ ಕೊಡದೇ ತಲಾದಾಯದಲ್ಲಿ ನಂ.1 ಎಂದು ಹೇಳಲು ನಾಚಿಕೆ ಆಗುವುದಿಲ್ಲವೇ? ಸೀತಾರಾಮ್ ಗುಂಡಪ್ಪ

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿನ ಲೋಪಗಳನ್ನು ಮತ್ತು ಅವುಗಳ ಹಿಂದಿನ ಸುಳ್ಳುಗಳನ್ನು ಎಎಪಿ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಬಯಲು ಮಾಡಿದ್ದಾರೆ. ಚುನಾವಣೆಗಾಗಿ ಮಾತ್ರ ಗ್ಯಾರಂಟಿಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
Read Full Story

02:54 PM (IST) Jul 24

OPPO Reno14 Review - ₹40 ಸಾವಿರಕ್ಕಿಂತ ಕಡಿಮೆ ಬೆಲೆಗೆ ನೀವು ಖರೀದಿಸಬಹುದಾದ ಅತ್ಯುತ್ತಮ ಫ್ಲ್ಯಾಗ್‌ಶಿಪ್ ಫೋನ್‌?

OPPO Reno14 5G ಫೋನಿನ ವಿನ್ಯಾಸ, ಕ್ಯಾಮೆರಾ, ಬ್ಯಾಟರಿ ಮತ್ತು ಕಾರ್ಯಕ್ಷಮತೆಯ ಬಗ್ಗೆ ಒಂದು ಸಮಗ್ರ ವಿಮರ್ಶೆ. ಇದರ ಬಾಳಿಕೆ, ಕ್ಯಾಮೆರಾ ಸಾಮರ್ಥ್ಯ, ಮತ್ತು ಬೆಲೆಯ ಬಗ್ಗೆ ವಿವರವಾದ ಮಾಹಿತಿಯನ್ನು ಒಳಗೊಂಡಿದೆ.
Read Full Story

02:16 PM (IST) Jul 24

Bangalore Traffic - ಕಿರಿಕಿರಿ ತರುವ ಟ್ರಾಫಿಕ್​ ಸಮಸ್ಯೆಗೆ ಶೀಘ್ರ ಮುಕ್ತಿ? ಶುರುವಾಗಿದೆ ಹೊಸ ಪ್ಲ್ಯಾನ್ - ​ ಏನಿದು?

ಬೆಂಗಳೂರು ಎಂದರೆ ಟ್ರಾಫಿಕ್​ ಕಿರಿಕಿರಿ ಎನ್ನುವುದು ಎಲ್ಲರಿಗೂ ತಿಳಿದದ್ದೇ. ಇದರಿಂದ ಮುಕ್ತಿ ಪಡೆಯುವುದಕ್ಕಾಗಿ ಹೊಸ ಯೋಜನೆ ಶೀಘ್ರದಲ್ಲಿ ಶುರುವಾಗಲಿದೆ. ಏನದು? ಫುಲ್​ ಡಿಟೇಲ್ಸ್​ ಇಲ್ಲಿದೆ...

 

Read Full Story

01:58 PM (IST) Jul 24

ಸಾಕ್ಷಾಧಾರಗಳಿದ್ದರೂ ನಿರ್ದೋಷಿಗಳಂತೆ ಜಾಮೀನು ನೀಡಿದ ಹೈಕೋರ್ಟ್?; ಸುಪ್ರೀಂ ಕೋರ್ಟ್ ಆಕ್ಷೇಪ!

ನಟ ದರ್ಶನ್ ಸೇರಿ ಏಳು ಆರೋಪಿಗಳಿಗೆ ಹೈಕೋರ್ಟ್ ನೀಡಿದ್ದ ಜಾಮೀನು ಆದೇಶವನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಸಾಕ್ಷ್ಯಾಧಾರಗಳನ್ನು ಸರಿಯಾಗಿ ಪರಿಗಣಿಸದೆ ಜಾಮೀನು ನೀಡಲಾಗಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಒಂದು ವಾರದೊಳಗೆ ಅಂತಿಮ ತೀರ್ಪು ನಿರೀಕ್ಷಿಸಲಾಗಿದೆ.
Read Full Story

01:47 PM (IST) Jul 24

ಬೆಂಗಳೂರಿನ ಜಯಮಹಲ್‌ ಎಕ್ಸ್‌ಟೆನ್ಶನ್‌ನಲ್ಲಿ 64 ಕೋಟಿಗೆ ಐಷಾರಾಮಿ ಡ್ಯೂಪ್ಲೆಕ್ಸ್ ಮನೆ ಖರೀದಿಸಿದ ಮಣಿಪಾಲ್‌ ಗ್ರೂಪ್‌ನ ಶ್ರುತಿ ಪೈ

ಬೆಂಗಳೂರಿನ ಅತ್ಯಂತ ದುಬಾರಿ ವ್ಯವಹಾರಗಳಲ್ಲಿ ಮಣಿಪಾಲ್ ಗ್ರೂಪ್‌ನ ಶ್ರುತಿ ಪೈ ₹64 ಕೋಟಿ ಮೌಲ್ಯದ ಐಷಾರಾಮಿ ಡ್ಯೂಪ್ಲೆಕ್ಸ್ ಮನೆ ಖರೀದಿಸಿದ್ದಾರೆ.

 

Read Full Story

01:17 PM (IST) Jul 24

ಧರ್ಮಸ್ಥಳ ಶವ ಹೂತಿಟ್ಟ ಕೇಸ್ 1983ರ ಕೇಸ್‌ ಮತ್ತೆ ಮುನ್ನೆಲೆಗೆ!

ಧರ್ಮಸ್ಥಳದಲ್ಲಿ ನಡೆದಿದ್ದ ಶವ ಹೂತಿಡುವಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಸಾಕ್ಷ್ಯಗಳು ಬೆಳಕಿಗೆ ಬಂದಿವೆ. 1983ರಲ್ಲಿ ನೇತ್ರಾವತಿ ನದಿಯಲ್ಲಿ ಮೃತಪಟ್ಟ ಇಬ್ಬರು ವ್ಯಕ್ತಿಗಳ ಶವಗಳನ್ನು ಪೊಲೀಸರೇ ದಫನ್ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆ ಕುರಿತು ವಿಧಾನಸಭೆಯಲ್ಲಿ ಚರ್ಚೆ ಕೂಡ ನಡೆದಿತ್ತು.
Read Full Story

01:06 PM (IST) Jul 24

ತುಂಗಭದ್ರಾ ನದಿಯಲ್ಲಿ ಕಾಲುಜಾರಿ ಬಿದ್ದು, 15 ಕಿ.ಮೀ ಈಜಿಕೊಂಡು ಬದುಕಿ ಬಂದ ವೃದ್ಧ!

ತುಂಗಭದ್ರಾ ನದಿಯಲ್ಲಿ ಕಾಲು ಜಾರಿ ಬಿದ್ದ 60 ವರ್ಷದ ವೃದ್ಧ ಜಯಣ್ಣ, 15 ಕಿ.ಮೀ. ದೂರ ಈಜಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಐರಣಿ ಗ್ರಾಮದ ಬಳಿ ಸ್ಥಳೀಯರು ರಕ್ಷಣೆ ಮಾಡಿದ್ದಾರೆ.

Read Full Story

01:04 PM (IST) Jul 24

ರೇಣುಕಾಸ್ವಾಮಿ ಕೊಲೆ ಪ್ರಕರಣ, ದರ್ಶನ್ ಸೇರಿ 7 ಜನರ ಬೇಲ್ ಆದೇಶ ಕಾಯ್ದಿರಿಸಿದ ಸುಪ್ರೀಂ ಕೋರ್ಟ್

ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಸೇರಿ 7 ಮಂದಿಯ ಜಾಮೀನು ಅರ್ಜಿ ಆದೇಶವನ್ನು ಸುಪ್ರೀಂ ಕೋರ್ಟ್ ಕಾಯ್ದಿರಿಸಿದೆ. ಹೈಕೋರ್ಟ್ ನೀಡಿದ್ದ ಜಾಮೀನು ರದ್ದಾಗುತ್ತಾ ಅಥವಾ ಮುಂದುವರೆಯುತ್ತಾ ಎಂದು ಮುಂದಿನ ವಿಚಾರಣೆಯಲ್ಲಿ ತೀರ್ಮಾನವಾಗಲಿದೆ. ಲಿಖಿತ ವಾದ ಸಲ್ಲಿಸಲು ಸೂಚಿಸಿ ವಿಚಾರಣೆ ಮುಂದೂಡಿಕೆ.
Read Full Story

More Trending News