ಬೆಂಗಳೂರು: ರಾಜ್ಯದಲ್ಲಿ ಅತಿಹೆಚ್ಚು ಅಪರಾಧ ಕೃತ್ಯಗಳನ್ನು ನಡೆಸುತ್ತಿ ರುವುದು ಆರ್‌ಎಸ್‌ಎಸ್ ಸಂಘಟನೆ ಮತ್ತು ಬಜರಂಗದಳ ದವರು ಎಂಬ ವಿವಾದಾತ್ಮಕ ಹೇಳಿಕೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ (42ನೇ ಎಸಿ ಜೆಎಂ ಕೋರ್ಟ್) ನೋಟಿಸ್ ಜಾರಿಗೊಳಿಸಿದೆ. ಅವಹೇಳನಕಾರಿ ಹೇಳಿಕೆ ನೀಡುವ ಮುಖಾಂತರ ಆರ್ ಎಸ್ಎಸ್ ಸಂಘಟನೆ ಗೌರವಕ್ಕೆ ಧಕ್ಕೆ ತಂದು ಮಾನನಷ್ಟ ಉಂಟು ಮಾಡಿದ ಆರೋಪದ ಮೇಲೆ ಬುಧವಾರ ಆರ್ ಎಸ್‌ಎಸ್ಎಸ್ ಕಾರ್ಯಕರ್ತ ಹಾಗೂ ವಕೀಲ ಎನ್.ಕಿರಣ್ ಸಲ್ಲಿಸಿರುವ ಖಾಸಗಿ ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯ, ಮುಖ್ಯಮಂತ್ರಿ ಸಿದ್ದರಾಮಯ್ಯಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಜೂ.26ಕ್ಕೆ ಮುಂದೂಡಿತು.

10:50 PM (IST) Jun 19
ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿಯವರು ChatGPT ಬಳಸಿ ತಮ್ಮ ಉಪನ್ಯಾಸ ತಯಾರಿ ಸಮಯವನ್ನು 30 ಗಂಟೆಯಿಂದ 5 ಗಂಟೆಗೆ ಇಳಿಸಿಕೊಂಡಿದ್ದಾರೆ, AI ಒಂದು ಉದ್ಯೋಗ ಬದಲಿ ಅಲ್ಲ, ಉತ್ಪಾದಕತೆ ಹೆಚ್ಚಿಸುವ ಸಾಧನ ಎಂದು ಅವರು ನೋಡುತ್ತಾರೆ.
10:49 PM (IST) Jun 19
ಮನೋವಿಜ್ಞಾನ ವಿಭಾಗವು ನೀಡುವ ನಾಲ್ಕು ಕ್ರೆಡಿಟ್‌ಗಳ ಈ ಪತ್ರಿಕೆಯನ್ನು 2023 ರಿಂದ ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾಗಿದೆ. ಇದು ಎಲ್ಲಾ ಪದವಿಪೂರ್ವ ವಿದ್ಯಾರ್ಥಿಗಳಿಗೆ, ಅವರ ಶೈಕ್ಷಣಿಕ ವಿಭಾಗವನ್ನು ಲೆಕ್ಕಿಸದೆ ಓಪನ್ ಆಗಿರುತ್ತದೆ.
10:22 PM (IST) Jun 19
ಸ್ವಿಸ್ ನ್ಯಾಷನಲ್ ಬ್ಯಾಂಕ್ ಅಂಕಿಅಂಶಗಳ ಪ್ರಕಾರ, 2024 ರಲ್ಲಿ ಸ್ವಿಸ್ ಬ್ಯಾಂಕ್‌ಗಳಲ್ಲಿ ಭಾರತೀಯ ಹಣ CHF 3.5 ಬಿಲಿಯನ್ (ಸುಮಾರು ರೂ. 37,600 ಕೋಟಿ) ಗೆ ಮೂರು ಪಟ್ಟು ಹೆಚ್ಚಾಗಿದ್ದು, ಸ್ಥಳೀಯ ಶಾಖೆಗಳು ಮತ್ತು ಹಣಕಾಸು ಸಂಸ್ಥೆಗಳ ಹೋಲ್ಡಿಂಗ್‌ಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ.
09:51 PM (IST) Jun 19
ಗುಜರಾತ್ ಗೃಹ ಸಚಿವ ಹರ್ಷ ಸಾಂಘ್ವಿ ಜೂನ್ 15ರಂದು, ದುರಂತ ಸ್ಥಳದಲ್ಲಿ ಸಿಕ್ಕ ವಸ್ತುಗಳನ್ನು ಗುರುತಿಸಿ ಮೃತರ ಹತ್ತಿರದ ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು ಎಂದು ತಿಳಿಸಿದ್ದಾರೆ. ಆದರೆ, ಈ ಕೆಲಸ ಅಷ್ಟು ಸುಲಭವಲ್ಲ.
09:10 PM (IST) Jun 19
ಬೆಂಗಳೂರಿನ 22 ವರ್ಷದ ಯುವಕನೊಬ್ಬ ತನ್ನ ಗೆಳತಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ದಕ್ಷಿಣ ಗೋವಾದಲ್ಲಿ ಬಂಧಿಸಲ್ಪಟ್ಟಿದ್ದಾನೆ. ಇಬ್ಬರೂ ಮದುವೆಯಾಗಲು ಗೋವಾಕ್ಕೆ ಬಂದಿದ್ದರು, ಆದರೆ ಅವರ ನಡುವಿನ ವಿವಾದವು ಅಪರಾಧಕ್ಕೆ ಕಾರಣವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
08:45 PM (IST) Jun 19
08:25 PM (IST) Jun 19
08:11 PM (IST) Jun 19
ತುಂಬು ಗರ್ಭಿಣಿ ಹೆಂಡ್ತಿ ಭೂಮಿಕಾಳನ್ನು ತವರಿಗೆ ಕಳುಹಿಸಿದ ಗೌತಮ್ ದಿವಾನ್, ಈಗ ಹೆಂಡ್ತಿನ ನೋಡೋದಕ್ಕೆ ಮಧ್ಯರಾತ್ರಿ ಭೂಮಿಕಾ ತವರಿಗೆ ಕಳ್ಳನಂತೆ ಎಂಟ್ರಿ ಕೊಟ್ಟಿದ್ದಾನೆ.
07:59 PM (IST) Jun 19
07:49 PM (IST) Jun 19
ಸಿಂಗರ್ ಅಖಿಲಾ ಪಜಿಮಣ್ಣು ದಾಂಪತ್ಯ ಜೀವನ ಮುರಿದು ಬಿದ್ದಿದೆ. ಇವರಿಬ್ಬರ ನಡುವೆ ಏನಾಗುತ್ತಿದೆ ಅನ್ನೋವಷ್ಟರಲ್ಲೇ ಡಿವೋರ್ಸ್ ಅರ್ಜಿ ಸಲ್ಲಿಕೆಯಾಗಿದೆ. ಇದರ ಬೆನ್ನಲ್ಲೇ ಅಖಿಲಾ ಪಜಿಮಣ್ಣು ಪತಿಯ ಫೋಟೋ, ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಿಂದ ಡಿಲೀಟ್ ಮಾಡಿದ್ದಾರೆ.
07:36 PM (IST) Jun 19
07:21 PM (IST) Jun 19
ಏರ್ ಇಂಡಿಯಾ ದುರಂತದ ಕಣ್ಮೀರ ಕತೆಗಳು ಒಂದೆರೆಡಲ್ಲ. ಈ ದುರಂತದಲ್ಲಿ ವಿಮಾನದ ಜೊತೆಗೆ ಹಾಸ್ಟೆಲ್ ವಿದ್ಯಾರ್ಥಿಗಳು, ಅಕ್ಕ ಪಕ್ಕದ ಕಟ್ಟದಲ್ಲಿದ್ದ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ದುರಂತದಲ್ಲಿ ಗಾಯಗೊಂಡ ಅತೀ ಕಿರಿಯ ಗಾಯಾಳುವಾಗಿರುವ 8 ತಿಂಗಳ ಮಗುವಿನ ಪರಿಸ್ಥಿತಿ ಹೇಗಿದೆ?
06:45 PM (IST) Jun 19
06:37 PM (IST) Jun 19
ಕನ್ನಡಿಗರ ಮನಗೆದ್ದ ಗಾಯಕಿ ಅಖಿಲಾ ಪಜಿಮಣ್ಣು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದಾರೆ. ಕನ್ನಡ ಕೋಗಿಲೆ ಮೂಲಕ ಭಾರಿ ಜನಪ್ರಿಯತೆ ಗಳಿಸಿದ ಅಖಿಲಾ ಬಳಿಕ ಹಲವು ವೇದಿಕೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ದಾಂಪತ್ಯ ಜೀವನದಲ್ಲಿನ ಎದುರಾಗಿರುವ ಬಿರುಗಾಳಿಯಿಂದ ಮತ್ತೆ ಸುದ್ದಿಯಲ್ಲಿದ್ದಾರೆ.
06:35 PM (IST) Jun 19
ಇರಾನ್ನಲ್ಲಿ ಭೀಕರ ಯುದ್ಧದ ಮಧ್ಯೆ ಪ್ರಾಣ ಉಳಿಯುವ ವಿಶ್ವಾಸವೇ ಇಲ್ಲದೇ, ನಮ್ಮ ಜೀವ ಉಳಿಸಿ ಭಾರತಕ್ಕೆ ಕರೆತನ್ನಿ ಎಂದು ಗೋಗರೆದಿದ್ದ ವಿದ್ಯಾರ್ಥಿಗಳು, ಇಲ್ಲಿಗೆ ಬಂದ ಮೇಲೆ ಹೇಗೆ ವರಸೆ ಬದಲಿಸಿದ್ರು ನೋಡಿ!
06:33 PM (IST) Jun 19
06:24 PM (IST) Jun 19
06:10 PM (IST) Jun 19
ಹೊಸ ನಿರ್ದೇಶಕರು, ಬರಹಗಾರರು, ಕಲಾವಿದರೊಂದಿಗೆ ಕೆಲಸ ಮಾಡುವುದು ಒಂದು ದೊಡ್ಡ ರಿಸ್ಕ್. ಏಕೆಂದರೆ ಅವರ ಕೆಲಸದ ಶೈಲಿ ಮತ್ತು ಸಾಮರ್ಥ್ಯದ ಬಗ್ಗೆ ನಮಗೆ ಸಂಪೂರ್ಣ ಅರಿವಿರುವುದಿಲ್ಲ. ಆದರೆ, ಆ ರಿಸ್ಕ್ ತೆಗೆದುಕೊಳ್ಳುವುದರಿಂದ ಸಿಗುವ ಸೃಜನಾತ್ಮಕ ತೃಪ್ತಿ ಮತ್ತು ಹೊಸತನಕ್ಕೆ ಬೆಲೆ ಕಟ್ಟಲಾಗದು..
06:06 PM (IST) Jun 19
ಬೆಂಗಳೂರು: ಆರ್‌ಸಿಬಿ ತಂಡವು ಚೊಚ್ಚಲ ಬಾರಿಗೆ ಐಪಿಎಲ್ ಟ್ರೋಫಿ ಜಯಿಸಿದೆ. ಹೀಗಿದ್ದೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂಬರುವ ಐಪಿಎಲ್ ಮಿನಿ ಹರಾಜಿಗೂ ಮೊದಲು ಈ 5 ಆಟಗಾರರಿಗೆ ಗೇಟ್ ಪಾಸ್ ಕೊಡುವ ಸಾಧ್ಯತೆಯಿದೆ. ಅಷ್ಟಕ್ಕೂ ಯಾರು ಆ 5 ಆಟಗಾರರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
06:04 PM (IST) Jun 19
ಆಧಾರ್ ಕಾರ್ಡ್ ಅಪ್ಡೇಟ್ಗೆ ಹೊಸ ಆ್ಯಪ್ ಜಾರಿಗೆ ಬರಲಿದೆ. ಇದು QR ಕೋಡ್ ಮೂಲಕ ಪೂರ್ಣ ಆಧಾರ್ ಅಥವಾ ಮಾಸ್ಕ್ಡ್ ಆಧಾರ್ ಅನ್ನು ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ. ಏನಿದು ಅಪ್ಲಿಕೇಷನ್?
06:01 PM (IST) Jun 19
05:38 PM (IST) Jun 19
ಪ್ರಪಂಚದ ನಾಗರಿಕತೆಯಲ್ಲಿ ನದಿಗಳು ಪ್ರಮುಖ ಪಾತ್ರವಹಿಸುತ್ತವೆ. ವಿಶ್ವದ ಐದು ಅತಿ ಉದ್ದದ ನದಿಗಳು, ಅವುಗಳ ಸ್ಥಳ ಮತ್ತು ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ.
05:37 PM (IST) Jun 19
05:36 PM (IST) Jun 19
ಬಂಟ್ವಾಳ ತಾಲೂಕಿನ ನಾವೂರು ಬಡಗುಂಡಿಯಲ್ಲಿ ಗರ್ಭಿಣಿ ಮಹಿಳೆ ಮತ್ತು ಅವರ ಪತಿಯ ಮೃತದೇಹ ಪತ್ತೆಯಾಗಿದೆ. 15 ವರ್ಷಗಳ ಹಿಂದೆ ವಿವಾಹವಾಗಿದ್ದ ಈ ದಂಪತಿಗಳಿಗೆ ಶೀಘ್ರದಲ್ಲೇ ಸೀಮಂತ ನಡೆಯಬೇಕಿತ್ತು. ಪತ್ನಿಯನ್ನು ಕೊಂದು ಪತಿ ಆತ್ಮ*ಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
05:28 PM (IST) Jun 19
05:07 PM (IST) Jun 19
04:56 PM (IST) Jun 19
ರೈಲು ಪ್ರಯಾಣ ಅತ್ಯಂತ ಸುರಕ್ಷಿತವಾಗಿದ್ದರೂ ಒಂಟಿಯಾಗಿ ಪ್ರಯಾಣಿಸುವ ಸಂದರ್ಭದಲ್ಲಿ ಅದರಲ್ಲಿಯೂ ವಯಸ್ಸಾದವರು ಅಥವಾ ಮಹಿಳೆಯರು ಒಂಟಿಯಾಗಿ ಇದ್ದರೆ ಮೈಯೆಲ್ಲಾ ಕಣ್ಣಾಗಿ ಇರಬೇಕು. ಈ ವೈರಲ್ ವಿಡಿಯೋ ನೋಡಿ!
04:52 PM (IST) Jun 19
ರಾಜ್ಯದ ವಸತಿ ಯೋಜನೆಗಳಲ್ಲಿ ಅಲ್ಪಸಂಖ್ಯಾತರ ಮೀಸಲಾತಿಯನ್ನು ಶೇ.10 ರಿಂದ 15ಕ್ಕೆ ಹೆಚ್ಚಿಸುವ ಸರ್ಕಾರದ ನಿರ್ಧಾರಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಹೆಚ್ಚಳವನ್ನು ಡಿಕೆ ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ.
04:46 PM (IST) Jun 19
ಭಾರತದ ಯುವ ಉದ್ಯಮಿ ಹಾಗೂ ಶ್ರೀಮಂತ ಉದ್ಯಮಿಗಳಾಗಿ ಗುರುತಿಸಿಕೊಂಡಿರುವ ನಿಖಿಲ್ ಕಾಮತ್ ಹಾಗೂ ನಿತಿಮ್ ಕಾಮತ್‌ಗೆ ತಾಯಿ ನೀಡುತ್ತಿದ್ದ ಆಹಾರ ಯಾವುದು? ಈ ಕುರಿತು ಸ್ವತಃ ರೇವತಿ ಕಾಮತ್ ಬಹಿರಂಗಪಡಿಸಿದ್ದಾರೆ.
04:21 PM (IST) Jun 19
ಹನಿಮೂನ್ನಲ್ಲಿ ಪತಿಯ ಹತ್ಯೆ ಮಾಡಿರುವ ಸೋನಂ ರಘುವಂಶಿ ಪ್ರಕರಣ ತಿರುವುಗಳನ್ನು ಪಡೆದುಕೊಳ್ಳುತ್ತಲೇ ಸಾಗಿದೆ. ಆಕೆ ಹನಿಮೂನ್ಗೆ ಹೋಗುವ ಮುನ್ನ ಪತಿಯ ಗೊಂಬೆ ನೇತುಹಾಕಿ ಮಾಟಮಂತ್ರ ಮಾಡಿರುವುದು ಬೆಳಕಿಗೆ ಬಂದಿದೆ!
04:19 PM (IST) Jun 19
ರಾಜ್ಯದಲ್ಲಿ ಅಲ್ಪಸಂಖ್ಯಾತರಲ್ಲಿ ಹೆಚ್ಚಿನ ಸಂಖ್ಯೆಯ ನಿರಾಶ್ರಿತರನ್ನು ಗಮನಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕರ್ನಾಟಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಹೇಳಿದರು.
04:19 PM (IST) Jun 19
04:10 PM (IST) Jun 19
03:53 PM (IST) Jun 19
ವಿಜಯ್ ಪ್ರಕಾಶ್ ಕಾಡುವ ಧ್ವನಿಯಲ್ಲಿರೋ ಈ ಹಾಡಿಗೆ ಸಂಜನ್ ಕಜೆ ಮತ್ತು ನಿಧಿ ಸುಬ್ಬಯ್ಯ ಹೆಜ್ಜೆ ಹಾಕಿದ್ದಾರೆ. ನೀಲಿ ಹಾಡಿನಲ್ಲಿ ಒಂದು ಕ್ಯೂಟ್ ಲವ್ ಸ್ಟೋರಿ ಇದೆ. ಮೋಹದಲ್ಲಿ ತೇಲಿ ತೇಲಿ ನೀಲಿ ಆಗೋ ಕಥೆ ಇದೆ. ಕೇಳೋದಕ್ಕೂ, ನೋಡೋದಕ್ಕೂ ಹಿತವಾಗಿರೋ ಈ ಹಾಡು
03:51 PM (IST) Jun 19
ಮಕ್ಕಳ ನೆಚ್ಚಿನ ಶಿಕ್ಷಕ ಬೈಕ್ ಅಪಘಾತದಲ್ಲಿ ಮೃತಪಟ್ಟ ಘಟನೆ ನಡೆದಿದೆ. ಬೆಳಗ್ಗೆ ಶಾಲೆಗೆ ತರಳುತ್ತಿದ್ದ ವೇಳೆ ಅಫಘಾತ ಸಂಭವಿಸಿದೆ. ಮಾಹಿತಿ ತಿಳಿಯುತ್ತಿದ್ದಂತೆ ಮಕ್ಕಳು ಕಣ್ಣೀರಿಟ್ಟಿದ್ದಾರೆ.
03:50 PM (IST) Jun 19
ಬೆಂಗಳೂರು: ಕ್ರಿಕೆಟ್ ಆಡುವ ಪ್ರತಿಯೊಂದು ದೇಶವು ತನ್ನದೇ ಆದ ಕ್ರಿಕೆಟ್ ಬೋರ್ಡ್ ಹೊಂದಿದೆ. ಈ ಪೈಕಿ ಭಾರತದ ಬಿಸಿಸಿಐ ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಬೋರ್ಡ್ ಎನಿಸಿಕೊಂಡಿದೆ. ಜಗತ್ತಿನ ಟಾಪ್ 10 ಶ್ರೀಮಂತ ಕ್ರಿಕೆಟ್ ಬೋರ್ಡ್ ಯಾವುವು? ಪಾಕಿಸ್ತಾನ, ಶ್ರೀಲಂಕಾ ಎಷ್ಟನೇ ಸ್ಥಾನದಲ್ಲಿವೆ ಎಂದು ನೋಡೋಣ.
03:49 PM (IST) Jun 19
ಇತ್ತೀಚೆಗೆ ನಡೆದ FATF ಸಭೆಯಲ್ಲಿ, ಭಾರತವು ಪಾಕಿಸ್ತಾನದ ಭಯೋತ್ಪಾದಕ ಜಾಲಗಳನ್ನು ಮತ್ತು ಅವುಗಳಿಗೆ ಸರ್ಕಾರದಿಂದ ಸಿಗುತ್ತಿರುವ ಬೆಂಬಲವನ್ನು ಟೀಕಿಸಿತು.
03:28 PM (IST) Jun 19
ಇಸ್ರೇಲ್ ಹಾಗೂ ಇರಾನ್ ಯುದ್ಧ ತೀವ್ರಗೊಳ್ಳುತ್ತಿದ್ದಂತೆ ಎರಡೂ ದೇಶಗಳಿಂದ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವ ಪ್ರಯತ್ನ ನಡೆಯುತ್ತಿದೆ. ಇದರ ನಡುವೆ ಇಸ್ರೇಲ್ ಆಸ್ಪತ್ರೆ ಮೇಲೆ ಮಿಸೈಲ್ ದಾಳಿಯಾದ ಬೆನ್ನಲ್ಲೇ ಭಾರತೀಯ ಮೂಲದ ವ್ಯಕ್ತಿ ಮೃತಪಟ್ಟ ಘಟನೆ ನಡೆದಿದೆ.
03:23 PM (IST) Jun 19
ಪ್ರವಾಸಿಗರೊಬ್ಬರ ಕೈನಲ್ಲಿದ್ದ 500 ರೂಪಾಯಿಯ ನೋಟುಗಳ ಬಂಡಲನ್ನು ಕಸಿದುಕೊಂಡು ಹೋದ ಕೋತಿಯೊಂದು ಸೀದಾ ಮರವೇರಿದ್ದು, ಬಳಿಕ ಅಲ್ಲಿ ನೋಟಿನ ಬಂಡಲನ್ನು ಬಿಚ್ಚಿ ಒಂದೊಂದೇ ನೋಟುಗಳನ್ನು ಕೆಳಕ್ಕೆಸೆಯುವ ಮೂಲಕ ಹಣದ ಮಳೆ ಸುರಿಸಿದೆ.
03:09 PM (IST) Jun 19