LIVE NOW
Published : Jul 18, 2026, 07:01 AM ISTUpdated : Jul 18, 2026, 11:55 PM IST

Karnataka News Live: BLO Death - ಆಸ್ಪತ್ರೆಗೆ ತಲುಪುವಷ್ಟರಲ್ಲೇ ನಿಂತಿತು ಉಸಿರು! ಎಸ್‌ಐಆರ್ ಸಭೆ ಬೆನ್ನಲ್ಲೇ ಬಿಎಲ್‌ಒ ರತ್ನಮ್ಮ ಸಾವು; ಅಸಲಿ ಕಾರಣ ಏನು ಗೊತ್ತಾ?

ಸಾರಾಂಶ

ಬೆಂಗಳೂರು: ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರ ಆರೋಗ್ಯ ಪ್ರಸ್ತುತ ಸ್ಥಿರವಾಗಿದೆ. ಕಳೆದ ಮೂರು ದಿನಗಳಿಂದ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿನ್ನೆ ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರಾಗಿದ್ದು, ಉಸಿರಾಟದ ತೊಂದರೆ ಎದುರಿಸಿದ್ದರು. ಈ ಹಿನ್ನೆಲೆಯಲ್ಲಿ ತೀವ್ರ ಆತಂಕಗೊಂಡಿದ್ದ ಕುಟುಂಬ ಸದಸ್ಯರು, "ನಾವು ನಂಬಿದ ದೇವರೇ ಅವರನ್ನು ಕಾಪಾಡಬೇಕು" ಎಂದು ಪ್ರಾರ್ಥಿಸಿದ್ದರು.

ವಿಷಯ ತಿಳಿಯುತ್ತಿದ್ದಂತೆಯೇ ನಿನ್ನೆ ಪತಿ ಎಚ್. ಡಿ. ದೇವೇಗೌಡ, ಪುತ್ರರಾದ ಹೆಚ್. ಡಿ. ಕುಮಾರಸ್ವಾಮಿ ಹಾಗೂ ಎಚ್. ಡಿ. ರೇವಣ್ಣ ಸೇರಿದಂತೆ ಕುಟುಂಬದ ಇತರೆ ಸದಸ್ಯರು ಆಸ್ಪತ್ರೆಗೆ ಆಗಮಿಸಿ ಅವರ ಆರೋಗ್ಯ ವಿಚಾರಿಸಿದ್ದರು. ಇಂದು ವೈದ್ಯರು ಮತ್ತೊಮ್ಮೆ ತಪಾಸಣೆ ನಡೆಸಿ ಅಧಿಕೃತ ಹೆಲ್ತ್ ಬುಲೆಟಿನ್ (ವರದಿ) ಬಿಡುಗಡೆ ಮಾಡುವ ಸಾಧ್ಯತೆಯಿದ್ದು, ಆ ಬಳಿಕವಷ್ಟೇ ಅವರ ಆರೋಗ್ಯದ ನಿಖರ ಮಾಹಿತಿ ಹೊರಬರಲಿದೆ. ಸದ್ಯ ಚೆನ್ನಮ್ಮ ಅವರು ಶೀಘ್ರದಲ್ಲೇ ಗುಣಮುಖರಾಗಿ ಮನೆಗೆ ವಾಪಸ್ ಆಗಲಿದ್ದಾರೆ ಎಂಬ ನಿರೀಕ್ಷೆಯಲ್ಲಿ ಇಡೀ ಕುಟುಂಬಸ್ಥರಿದ್ದಾರೆ.

11:55 PM (IST) Jul 18

BLO Death - ಆಸ್ಪತ್ರೆಗೆ ತಲುಪುವಷ್ಟರಲ್ಲೇ ನಿಂತಿತು ಉಸಿರು! ಎಸ್‌ಐಆರ್ ಸಭೆ ಬೆನ್ನಲ್ಲೇ ಬಿಎಲ್‌ಒ ರತ್ನಮ್ಮ ಸಾವು; ಅಸಲಿ ಕಾರಣ ಏನು ಗೊತ್ತಾ?

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಬಾಗೇವಾಡಿ ಗ್ರಾಮದಲ್ಲಿ, ಅಂಗನವಾಡಿ ಕಾರ್ಯಕರ್ತೆ ರತ್ನಮ್ಮ ಬಳಿಗಾರ ಅವರು ಶಾಸಕರ ಸಭೆಯ ನಂತರ ಹೃದಯಾಘಾತದಿಂದ ನಿಧನರಾದರು. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

Read Full Story

11:18 PM (IST) Jul 18

Oil Crisis - ತೈಲ ಬಿಕ್ಕಟ್ಟಿನ ನಡುವೆ ಭಾರತದ 3 ಬಿಗ್ ಗೇಮ್ ಪ್ಲಾನ್ - ಜಾಗತಿಕ ಮಾರ್ಕೆಟ್ ಕಿಂಗ್ ಆದ ಭಾರತ! 2030ರ ವೇಳೆಗೆ ಜಗತ್ತೇ ದಿಲ್ಲಿಯ ಮುಂದೆ ಕೈಚಾಚಲಿದೆ!

ಜಾಗತಿಕ ನಿರ್ಬಂಧಗಳ ನಡುವೆಯೂ ರಷ್ಯಾದಿಂದ ಅಗ್ಗದ ಕಚ್ಚಾ ತೈಲವನ್ನು ಖರೀದಿಸಿ, ಅದನ್ನು ಸಂಸ್ಕರಿಸಿ ಜಗತ್ತಿಗೆ ಮಾರಾಟ ಮಾಡುವ ಮೂಲಕ ಭಾರತವು ಶತಕೋಟಿ ಡಾಲರ್ ಲಾಭ ಗಳಿಸುತ್ತಿದೆ. 2030ರ ವೇಳೆಗೆ ವಿಶ್ವದ ಅತಿದೊಡ್ಡ ತೈಲ ಕೇಂದ್ರವಾಗುವ ಗುರಿಯೊಂದಿಗೆ, ಭಾರತವು ತನ್ನ ಸಂಸ್ಕರಣಾ ಸಾಮರ್ಥ್ಯವನ್ನು ಹೆಚ್ಚಿಸುತ್ತಿದೆ.
Read Full Story

10:04 PM (IST) Jul 18

ಜ್ಯೋತಿಷಿಗಳು ನುಡಿದಿದ್ದ ಮಾತು ನಿಜವಾಯ್ತು, ಚೆನ್ನಮ್ಮ ಅವರಿಗೆ ಸಿಕ್ಕಿತು ಮುತ್ತೈದೆ ಸಾವು - ವೈಎಸ್‌ವಿ ದತ್ತ

ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ಅವರ ನಿಧನಕ್ಕೆ ಕಂಬನಿ ಮಿಡಿದಿರುವ ವೈಎಸ್‌ವಿ ದತ್ತ, ಅವರ ಸಾವಿನ ಕುರಿತು ಜ್ಯೋತಿಷಿಗಳು ನುಡಿದಿದ್ದ ಭವಿಷ್ಯ ನಿಜವಾದ ಬಗ್ಗೆ ಭಾವುಕರಾಗಿ ಮಾತನಾಡಿದ್ದಾರೆ.

Read Full Story

09:40 PM (IST) Jul 18

ಪತ್ನಿ ಚೆನ್ನಮ್ಮ ಸಾವು, ಆಸ್ಪತ್ರೆ ಎದುರಲ್ಲೇ ಕಣ್ಣೀರಿಟ್ಟು ಮೌನವಾದ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ

ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ಅವರು ಅನಾರೋಗ್ಯದಿಂದ ಬೆಂಗಳೂರಿನಲ್ಲಿ ನಿಧನರಾದರು. 72 ವರ್ಷಗಳ ಕಾಲ ದೇವೇಗೌಡರ ನೆರಳಾಗಿದ್ದ ಪತ್ನಿಯ ಅಗಲಿಕೆಯಿಂದ ದೇವೇಗೌಡರು ಮೂಕವಿಸ್ಮಿತರಾಗಿ ಕಣ್ಣೀರು ಹಾಕಿದರು. ಕುಟುಂಬದ ಸದಸ್ಯರು ಕೂಡ ದುಃಖದಲ್ಲಿ ಮುಳುಗಿದ್ದರು.
Read Full Story

09:15 PM (IST) Jul 18

Fast Tag - ವಾಹನ ಸವಾರರಿಗೆ ಗುಡ್ ನ್ಯೂಸ್; ಫಾಸ್ಟ್‌ಟ್ಯಾಗ್ ಹೆಚ್ಚುವರಿ ಹಣ ಕಡಿತವಾದರೆ 100% ರಿಫಂಡ್ ಪಕ್ಕಾ!

ಮಧ್ಯಪ್ರದೇಶ ಹೈಕೋರ್ಟ್‌ನ ಐತಿಹಾಸಿಕ ತೀರ್ಪಿನ ಪ್ರಕಾರ, ಫಾಸ್ಟ್‌ಟ್ಯಾಗ್‌ನಲ್ಲಿ ತಾಂತ್ರಿಕ ದೋಷದಿಂದ ಹೆಚ್ಚುವರಿ ಹಣ ಕಡಿತವಾದರೆ ವಾಹನ ಸವಾರರಿಗೆ ಶೇ. 100ರಷ್ಟು ಮರುಪಾವತಿ ಮಾಡಬೇಕು. ಅದೇಗೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ

Read Full Story

09:09 PM (IST) Jul 18

'ಶಿವಧ್ಯಾನದಲ್ಲಿ ತಲ್ಲೀನರಾಗಿ ಇರ್ತಿದ್ದ ಅಮ್ಮನನ್ನು ಶಿವನೇ ತನ್ನಲ್ಲಿಗೆ ಕರೆದುಕೊಂಡಿದ್ದಾನೆ..' HD ಕುಮಾರಸ್ವಾಮಿ ಭಾವುಕ ಟ್ವೀಟ್‌

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ಹಾಗೂ 72 ವರ್ಷಗಳ ಕಾಲ ಅವರ ಬಾಳಸಂಗಾತಿಯಾಗಿದ್ದ ಚೆನ್ನಮ್ಮ ಅವರು ನಿಧನರಾಗಿದ್ದಾರೆ. ರಾಜಕೀಯದಿಂದ ದೂರ ಉಳಿದಿದ್ದ ಅವರ ಅಗಲಿಕೆಗೆ, ಪುತ್ರ ಹಾಗೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ತೀವ್ರವಾಗಿ ಭಾವುಕರಾಗಿದ್ದಾರೆ.

Read Full Story

08:42 PM (IST) Jul 18

ಚೆನ್ನಮ್ಮ ದೇವೇಗೌಡ ನಿಧನಕ್ಕೆ ಸಿಎಂ ಡಿಕೆಶಿ, ಪ್ರಧಾನಿ ನರೇಂದ್ರ ಮೋದಿ ಸಂತಾಪ

ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಪತ್ನಿ ಚೆನ್ನಮ್ಮ ಅವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಪದ್ಮನಾಭನಗರದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಪ್ರಧಾನಿ ಮೋದಿ ಮತ್ತು ಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
Read Full Story

07:56 PM (IST) Jul 18

72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ರಕ್ಷಿತ್‌ ಶೆಟ್ಟಿ ನಿರ್ಮಾಣದ ಮಿಥ್ಯ ಚಿತ್ರಕ್ಕೆ ಮೂರು ಅವಾರ್ಡ್‌!

72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ಕನ್ನಡದ 'ಮಿಥ್ಯ' ಚಿತ್ರವು ಅತ್ಯುತ್ತಮ ಕನ್ನಡ ಸಿನಿಮಾ ಸೇರಿದಂತೆ ಮೂರು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಇದರೊಂದಿಗೆ, ಮಮ್ಮುಟ್ಟಿ, ಯಾಮಿ ಗೌತಮ್, ಕಾರ್ತಿಕ್ ಆರ್ಯನ್ ಅತ್ಯುತ್ತಮ ನಟ-ನಟಿ ಎನಿಸಿದ್ದಾರೆ.

Read Full Story

07:51 PM (IST) Jul 18

Vijayalakshmi Darshan - 'ನಗುವ ಮುಖದ ಹಿಂದಿರುವ ನೋವು ದೇವರಿಗಷ್ಟೇ ಗೊತ್ತು'.. ಇದು ಟ್ರೋಲ್‌ಗೆ ಮಾತ್ರ ಉತ್ತರವಲ್ಲ, ಸತ್ಯವೂ ಹೌದು!

ನಟ ದರ್ಶನ್​ಚಾಮುಂಡೇಶ್ವರಿಯ ಪರಮ ಭಕ್ತ. ಅದರಲ್ಲೂ ಆಷಾಢ ಮಾಸದ ಮೊದಲ ಶುಕ್ರವಾರ ಮತ್ತು ಕೊನೆ ಶುಕ್ರವಾರ ದರ್ಶನ್ ಚಾಮುಂಡಿ ಬೆಟ್ಟಕ್ಕೆ ಹೋಗಿ ದೇವಿ ದರ್ಶನ ಮಾಡಿ ಪಾವನ ಆಗೋದನ್ನ ರೂಡಿಸಿಕೊಂಡಿದ್ರು. ಆದ್ರೆ ಜೈಲು ಸೇರಿದ್ಮೇಲೆ ಇದೆಲ್ಲಾ ಹೇಗೆ ಸಾಧ್ಯವಾಗುತ್ತೆ. ಹೀಗಾಗಿ ಈಗ ಪತ್ನಿ ವಿಜಯಲಕ್ಷ್ಮೀ ಗಂಡನ ಸಂಪ್ರದಾಯವನ್ನ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

Read Full Story

07:35 PM (IST) Jul 18

Virat Kohli - ಗಂಭೀರ್-ವಿರಾಟ್ ಕೊಹ್ಲಿ ನಡುವೆ ಮತ್ತೆ ಶುರುವಾಯ್ತಾ ಜಗಳ? ಕೋಚ್ ಸಿತಾಂಶು ಬಿಚ್ಚಿಟ್ಟ ಸತ್ಯ ಇಲ್ಲಿದೆ!

ಟೀಮ್ ಇಂಡಿಯಾದಲ್ಲಿ ವಿರಾಟ್ ಕೊಹ್ಲಿ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ನಡುವೆ ಭಿನ್ನಮತವಿದೆ ಎಂಬ ವದಂತಿಗಳಿಗೆ ಬ್ಯಾಟಿಂಗ್ ಕೋಚ್ ಸೀತಾಂಶು ಕೋಟಕ್ ಸ್ಪೋಟಕ ಸತ್ಯ ಬಿಚ್ಚಿಟ್ಟಿದ್ದಾರೆ. ಅದೇನೆಂದು ನೋಡೋಣ ಬನ್ನಿ!

Read Full Story

07:28 PM (IST) Jul 18

Photos - ಆಸಿಡ್‌ ದಾಳಿಗೂ ಮುನ್ನ ಹೀಗಿದ್ರು ಚೆನ್ನಮ್ಮ ದೇವೇಗೌಡ

ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ಅವರು ನಿಧನರಾಗಿದ್ದಾರೆ. 2001ರಲ್ಲಿ ಅವರ ಮೇಲೆ ನಡೆದ ಭೀಕರ ಆಸಿಡ್ ದಾಳಿಯು ಅವರ ಜೀವನವನ್ನೇ ಬದಲಿಸಿತ್ತು, ಆದರೂ ಅವರು ಬತ್ತದ ಉತ್ಸಾಹದಿಂದ ಬದುಕಿದ್ದರು. ಈ ಲೇಖನವು ಅವರ ಜೀವನದ ಅಪರೂಪದ ಚಿತ್ರಗಳು ಮತ್ತು ಆ ಕರಾಳ ಘಟನೆಯನ್ನು ವಿವರಿಸುತ್ತದೆ.
Read Full Story

07:10 PM (IST) Jul 18

ಹಣೆಗೆ ಕುಂಕುಮ ಇಟ್ಟು ಹೂ ಮುಡಿಸಿದ ದೇವೇಗೌಡರು ಇದರ ಬೆನ್ನಲ್ಲೇ ಚಿರನಿದ್ರೆಗೆ ಜಾರಿದ ಚೆನ್ನಮ್ಮ!

ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಪತ್ನಿ ಚೆನ್ನಮ್ಮ ಅವರು 72 ವರ್ಷಗಳ ದಾಂಪತ್ಯದ ನಂತರ ನಿಧನರಾದರು. ಅಂತಿಮ ಕ್ಷಣಗಳಲ್ಲಿ ಪತ್ನಿಯ ಪಕ್ಕದಲ್ಲೇ ಇದ್ದ ದೇವೇಗೌಡರು, ಹಣೆಗೆ ಕುಂಕುಮವಿಟ್ಟು, ಹೂ ಮುಡಿಸಿ ಭಾವುಕರಾಗಿ ವಿದಾಯ ಹೇಳಿದರು.

Read Full Story

06:46 PM (IST) Jul 18

'ಏಳು ಬೀಳಿನಲ್ಲೂ ಕುಟುಂಬವನ್ನು ಪೊರೆಯುತ್ತಾ ಬಂದ ಆದರ್ಶ ಗೃಹಿಣಿ..' ಚೆನ್ನಮ್ಮ ದೇವೇಗೌಡ ಸಾವಿಗೆ ಸಿದ್ದರಾಮಯ್ಯ ಸಂತಾಪ

ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಪತ್ನಿ ಚೆನ್ನಮ್ಮ ದೇವೇಗೌಡ ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ, ದೇವೇಗೌಡರ ರಾಜಕೀಯ ಏಳುಬೀಳಿನಲ್ಲಿ ಕುಟುಂಬವನ್ನು ಪೊರೆದ ಆದರ್ಶ ಗೃಹಿಣಿ ಎಂದು ಅವರನ್ನು ಸ್ಮರಿಸಿದ್ದಾರೆ.
Read Full Story

06:37 PM (IST) Jul 18

ಮುತ್ತೈದೆ ಸಾವು ಕಂಡ ಮಹಾತಾಯಿ, ಹುಟ್ಟೂರಿನ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ಚೆನ್ನಮ್ಮ ನೆನೆದು ಇಡೀ ಊರೇ ಕಣ್ಣೀರು

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ಅವರ ನಿಧನದಿಂದ ಅವರ ಹುಟ್ಟೂರಾದ ಮುತ್ತಿಗೆ ಹಿರೇಹಳ್ಳಿ ಶೋಕಸಾಗರದಲ್ಲಿ ಮುಳುಗಿದೆ. ತಮ್ಮ ಮನೆದೇವರಾದ ಚನ್ನಾಂಬಿಕಾ ದೇವಿಯ ಹೆಸರನ್ನೇ ಹೊಂದಿದ್ದ ಅವರು, ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುವ ಆ ದೇಗುಲದಲ್ಲಿ ಮೊದಲ ಪೂಜೆ ಸಲ್ಲಿಸುತ್ತಿದ್ದ ವಿಶೇಷ ಬಾಂಧವ್ಯವನ್ನು ಈ ಲೇಖನ ವಿವರಿಸುತ್ತದೆ.
Read Full Story

06:26 PM (IST) Jul 18

Sonam Wangchuk - ಲಡಾಖ್ ಹೋರಾಟಗಾರ ಸೋನಮ್ ವಾಂಗ್ಚುಕ್ ಆಸ್ತಿ ಕೇಳಿದ್ರೆ ಕಂಗಾಲಾಗ್ತೀರಾ! ಇಷ್ಟೊಂದು ಸಂಪಾದನೆ ಹೇಗೆ?

ಸೋನಮ್ ವಾಂಗ್ಚುಕ್ ದೆಹಲಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ಅವರ ಆರೋಗ್ಯ ಹದಗೆಟ್ಟಿದೆ. ಈ ಹಿನ್ನೆಲೆಯಲ್ಲಿ, ಅವರ ಆದಾಯದ ಮೂಲ, ಯೂಟ್ಯೂಬ್ ಚಾನೆಲ್‌ನಿಂದ ಗಳಿಕೆ, ಅಂದಾಜು ನಿವ್ವಳ ಮೌಲ್ಯದ ಬಗ್ಗೆ ಅನೇಕರು ಕುತೂಹಲಗೊಂಡಿದ್ದಾರೆ. ಅವರ ಹೋರಾಟದ ಜತೆ ಆರ್ಥಿಕ ವಿವರಗಳ ಕುರಿತು ಇಲ್ಲಿದೆ ಮಾಹಿತಿ.

Read Full Story

06:23 PM (IST) Jul 18

ಆರಿಹೋದ ದೊಡ್ಡಮನೆ ದೀಪ, ಇಲ್ಲಿ ನಡೆಯಲಿದೆ ಚೆನ್ನಮ್ಮ ದೇವೇಗೌಡ ಅಂತ್ಯಸಂಸ್ಕಾರ!

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ಅವರು ಉಸಿರಾಟದ ತೊಂದರೆಯಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗಿದ್ದು, ಅಂತ್ಯಕ್ರಿಯೆಯು ಹಾಸನ ಜಿಲ್ಲೆಯ ಹರದನಹಳ್ಳಿಯಲ್ಲಿ ನಡೆಯಲಿದೆ.
Read Full Story

06:05 PM (IST) Jul 18

Chennamma - HD ದೇವೇಗೌಡ್ರು ಜೈಲಿಗೆ ಹೋದಾಗಲೂ ಗಟ್ಟಿಯಾಗಿ ನಿಂತು ಮನೆ ನಡೆಸಿದ್ದ ಚೆನ್ನಮ್ಮ; 72 ವರ್ಷದ ದಾಂಪತ್ಯ!

HD Deve Gowda wife Chennamma death: 'ಮಣ್ಣಿನ ಮಗ' ಎಂದೇ ಖ್ಯಾತರಾದವರು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು. ಹಾಸನದ ಒಂದು ಪುಟ್ಟ ಹಳ್ಳಿಯಿಂದ ದೆಹಲಿಯ ಕೆಂಪುಕೋಟೆಯವರೆಗೆ ಬೆಳೆದ ಅವರ ರಾಜಕೀಯ ಪ್ರಯಾಣ ಅಷ್ಟು ಸುಲಭದ್ದಾಗಿರಲಿಲ್ಲ. ಹೂವಿನ ಹಾಸಿಗೆಯಂತಿರದ ಈ ಕಠಿಣ ಹಾದಿಯಲ್ಲಿ ನೆರಳಾಗಿ, ಶಕ್ತಿಯಾಗಿ ನಿಂತವರು ಧರ್ಮಪತ್ನಿ ಶ್ರೀಮತಿ ಚೆನ್ನಮ್ಮ. 

Read Full Story

06:02 PM (IST) Jul 18

ಬಾಲ್ಯದ ಗೆಳತಿ, ಮಾಜಿ ಪ್ರಧಾನಿ ದೇವೇಗೌಡ ಪತ್ನಿ ಚೆನ್ನಮ್ಮ ನೆನೆದು ಭಾವುಕರಾದ ಸಂಬಂಧಿ ದ್ಯಾವಮ್ಮ

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ದಿವಂಗತ ಚೆನ್ನಮ್ಮ ಅವರ ಆಪ್ತ ಸಂಬಂಧಿ ದ್ಯಾವಮ್ಮ, ಅವರ ಬಾಲ್ಯದ ದಿನಗಳು, ಗ್ರಾಮೀಣ ಆಟಗಳು, ಸರಳ ಮದುವೆ ಮತ್ತು ಹಳ್ಳಿಯ ಮೇಲಿನ ಅವರ ಅಕ್ಕರೆಯ ಬಗ್ಗೆ ಅಪರೂಪದ ನೆನಪುಗಳನ್ನು ಹಂಚಿಕೊಂಡಿದ್ದಾರೆ.

Read Full Story

05:50 PM (IST) Jul 18

Inspiring Story - ಪಿಎಚ್‌ಡಿ, ಹಲವು ಪದವಿಗಳಿದ್ದರೂ ಕ್ಯಾಬ್ ಓಡಿಸುತ್ತಿದ್ದಾರೆ ಈ ಉಪನ್ಯಾಸಕ! ಜೀವನವೇ ಬೇಡ ಎನ್ನುವವರು ಇವರನ್ನೊಮ್ಮೆ ನೋಡಿ!

ಇಂಗ್ಲಿಷ್ ಸಾಹಿತ್ಯದಲ್ಲಿ ಪಿಎಚ್‌ಡಿ ಮತ್ತು ಬಹು ಪದವಿಗಳನ್ನು ಪಡೆದ ಡಾ. ಇ. ತಿರುಮಲೈ ರಾಜ, ಕಡಿಮೆ ಸಂಬಳಕ್ಕೆ ಗುತ್ತಿಗೆ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ ಅವರು ಕ್ಯಾಬ್ ಚಾಲಕರಾಗಿ ದುಡಿಯುತ್ತಿದ್ದಾರೆ. ಈ ಸ್ಟೋರಿ ನಮ್ಮ ಶಿಕ್ಷಣ ವ್ಯವಸ್ಥೆಯ ಕಠೋರ ವಾಸ್ತವ ಬಯಲು ಮಾಡಿದೆ.

Read Full Story

05:41 PM (IST) Jul 18

ದೇವೇಗೌಡರ 72 ವರ್ಷಗಳ ಪಯಣದ ಸಂಗಾತಿ ಇನ್ನಿಲ್ಲ, ಆಸಿಡ್ ದಾಳಿಯ ಘೋರ ಕೃತ್ಯಕ್ಕೂ ಕ್ಷಮೆಯ ಉದಾರತೆ ತೋರಿದ್ದ ಮಹಾತಾಯಿ!

25 ವರ್ಷಗಳ ಹಿಂದೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ಮತ್ತು ಸೊಸೆ ಭವಾನಿ ರೇವಣ್ಣ ಮೇಲೆ ನಡೆದ ಆಸಿಡ್ ದಾಳಿಯ ಹಿಂದೆ ರಾಜಕೀಯ ಪಿತೂರಿ ಇತ್ತು ಎಂದು ದೇವೇಗೌಡರು ಬಹಿರಂಗಪಡಿಸಿದ್ದರು. ತಮ್ಮನ ಮಗನೇ ದಾಳಿ ನಡೆಸಿದ್ದರೂ, ತಮ್ಮನ ಅಂತಿಮ ದಿನಗಳಿಗಾಗಿ ಆತನನ್ನು ಕ್ಷಮಿಸಿ ಜೈಲಿನಿಂದ ಬಿಡಿಸಿದ ಮಾನವೀಯ ಘಟನೆಯನ್ನು ಈ ಲೇಖನ ವಿವರಿಸುತ್ತದೆ.
Read Full Story

05:28 PM (IST) Jul 18

HD Chennamma passes away - ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ

ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರ ಪತ್ನಿ ಚೆನ್ನಮ್ಮ ಹೃದಯಾಘಾತದಿಂದ ಸಂಜೆ 4 ಗಂಟೆಗೆ ನಿಧನರಾಗಿದ್ದಾರೆ.

Read Full Story

05:18 PM (IST) Jul 18

'ನಾದಬ್ರಹ್ಮ' ಹಂಸಲೇಖಗೆ ಪದ್ಮ ಅಥವಾ ಜ್ಞಾನಪೀಠ ಗೌರವ ಸಿಗಲೇಬೇಕು - ನೆನಪಿರಲಿ ಪ್ರೇಮ್‌ರಿಂದ ಅಭಿಯಾನ ಆರಂಭ

ಹಂಸಲೇಖ ಅವರಿಗೆ ದೇಶದ ಪ್ರತಿಷ್ಠಿತ ಪದ್ಮ ಪ್ರಶಸ್ತಿ ಅಥವಾ ಜ್ಞಾನಪೀಠ ಪ್ರಶಸ್ತಿ ನೀಡಬೇಕು ಎಂಬ ಒತ್ತಾಯ ಇದೀಗ ಮತ್ತೊಮ್ಮೆ ಜೋರಾಗಿದೆ. ಈ ಬಾರಿ ಈ ಅಭಿಯಾನಕ್ಕೆ ಚಾಲನೆ ನೀಡಿರುವವರು ನಟ ನೆನಪಿರಲಿ ಪ್ರೇಮ್‌.

Read Full Story

04:49 PM (IST) Jul 18

ಡಿವೈಡರ್, ಫುಟ್‌ಪಾತ್, ವಿದ್ಯುತ್ ದೀಪಗಳೊಂದಿಗೆ ಹೊಸ ರಸ್ತೆ - ಗಂಗಾವತಿಗೆ ಸಿಗಲಿದೆ ಹೊಸ ರೂಪ

Gangavathi Road Widening: ಗಂಗಾವತಿ-ಆನೆಗೊಂದಿಯ ವಿರುಪಾಪುರ ತಾಂಡಾ ಮಾರ್ಗದ ತಾಯಿ ಮಕ್ಕಳ ಆಸ್ಪತ್ರೆಯ ರಸ್ತೆ ಅಗಲೀಕರಣ ಶುರುವಾಗಿದ್ದು, ರಸ್ತೆ ಬದಿಯ ಕಟ್ಟಡಗಳ ತೆರವು ಕಾರ್ಯಾಚರಣೆಗೆ ದಿನಗಣನೆ ಪ್ರಾರಂಭವಾಗಿದೆ.

Read Full Story

04:39 PM (IST) Jul 18

RBI - 500 ರೂಪಾಯಿ ನೋಟು ಅಸಲಿಯೋ ಅಥವಾ ನಕಲಿಯೋ? ಇಲ್ಲಿದೆ ಆರ್‌ಬಿಐ ನೀಡಿದ ಪ್ರಮುಖ ಮಾಹಿತಿ!

ಮಾರುಕಟ್ಟೆಯಲ್ಲಿ ನಕಲಿ ನೋಟುಗಳ ಹಾವಳಿ ಹೆಚ್ಚಾಗುತ್ತಿದ್ದು, ನಿಮ್ಮ ಕೈಯಲ್ಲಿರುವ 500 ರೂಪಾಯಿ ನೋಟು ಅಸಲಿಯೋ ಅಥವಾ ನಕಲಿಯೋ ಎಂಬ ಆತಂಕ ನಿಮಗಿದೆಯೇ? ಭಾರತೀಯ ರಿಸರ್ವ್ ಬ್ಯಾಂಕ್ ಅಸಲಿ ನೋಟುಗಳನ್ನು ಗುರುತಿಸಲು ಕೆಲವು ಪ್ರಮುಖ ರಹಸ್ಯ ಫೀಚರ್ಸ್‌ಗಳನ್ನು ನೀಡಿದೆ. ಈ ಕುರಿತು ಸಂಪೂರ್ಣ ವಿವರ.

Read Full Story

04:38 PM (IST) Jul 18

'ಮದರ್ ಪ್ರಾಮಿಸ್' ನೋಡಿ ಶಿವಣ್ಣ ಫಿದಾ - ಡಾಲಿ ಧನಂಜಯಗೆ ಧೈರ್ಯ ತುಂಬಿದ ಸೆಂಚುರಿ ಸ್ಟಾರ್

Mother Promise: ಸ್ಯಾಂಡಲ್‌ವುಡ್‌ನ ನಟ ರಾಕ್ಷಸ ಡಾಲಿ ಧನಂಜಯ ನಿರ್ಮಿಸಿ, ಪ್ರಮುಖ ಪಾತ್ರದಲ್ಲೂ ಅಭಿನಯಿಸಿರುವ 'ಮದರ್ ಪ್ರಾಮಿಸ್' ಸಿನಿಮಾ ಬಿಡುಗಡೆಯಾದ ಬಳಿಕ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

Read Full Story

04:14 PM (IST) Jul 18

ರಾಧೆಯ ಲುಕ್‌ನಲ್ಲಿ ಪ್ರೆಗ್ನೆನ್ಸಿ ಫೋಟೋಶೂಟ್‌ ಮಾಡಿಸಿದ ಹರ್ಷಿಕಾ ಪೂಣಚ್ಚ

Harshika Poonacha Pregnancy: ಇದೊಂದು ಸೊಗಸಾದ ಚಿಂತನೆಯಷ್ಟೇ. ಇಲ್ಲಿ ಪುರಾಣವನ್ನು ತಿರುಚುವ ದುರುದ್ದೇಶ ಇಲ್ಲ. ಸದ್ಯ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಹರ್ಷಿಕಾ ಪೂಣಚ್ಚ ಮಾತುಗಳಿವು.

Read Full Story

04:08 PM (IST) Jul 18

ಗಣಿತದಲ್ಲಿ 51 ಮಾರ್ಕ್ಸ್‌.. ಇಂದು 'ವಿಕ್ರಮ್-I' ಉಡಾವಣೆ ಯಶಸ್ಸಿನ ಹಿಂದೆ IIT ಯುವಕನ ಸ್ಫೂರ್ತಿದಾಯಕ ಕತೆ

ಗಣಿತದಲ್ಲಿ ಕೇವಲ 51 ಅಂಕ ಪಡೆದಿದ್ದ ಪವನ್ ಕುಮಾರ್ ಚಂದನಾ, ಇಸ್ರೋದಲ್ಲಿನ ಕೆಲಸ ತೊರೆದು 'ಸ್ಕೈರೂಟ್ ಏರೋಸ್ಪೇಸ್' ಸ್ಥಾಪಿಸಿದರು. ಸವಾಲುಗಳನ್ನು ಮೆಟ್ಟಿ ನಿಂತು, 'ವಿಕ್ರಮ್-I' ರಾಕೆಟ್ ಯಶಸ್ವಿ ಉಡಾವಣೆಯೊಂದಿಗೆ ಭಾರತದ ಖಾಸಗಿ ಬಾಹ್ಯಾಕಾಶ ಯಾನದಲ್ಲಿ ಹೊಸ ಅಧ್ಯಾಯ ಬರೆದ ಅವರ ಸ್ಪೂರ್ತಿದಾಯಕ ಪಯಣದ ಕಥೆಯಿದು

Read Full Story

02:59 PM (IST) Jul 18

ಅಪ್ಪ, ಅಮ್ಮನನ್ನು ಒಂದು ಮಾಡಲು ಪ್ರಯತ್ನಪಟ್ಟಿದ್ದೆ - ಓಂ ಪ್ರಕಾಶ್‌, ರೇಖಾ ದಾಸ್‌ ಮಗಳು ನಟಿ ಸಾತ್ವಿಕಾ

Actress Saathvika: ಕನ್ನಡದ ಕೆಲ ಸಿನಿಮಾಗಳಲ್ಲಿ ನಟಿಸಿರುವ ಸಾತ್ವಿಕಾ ಅವರು ತಂದೆ ಓಂ ಪ್ರಕಾಶ್‌ ರಾವ್‌ ಹಾಗೂ ತಾಯಿ ರೇಖಾ ದಾಸ್‌ ಅವರನ್ನು ಒಂದು ಮಾಡಬೇಕು ಎಂದು ಯೋಚಿಸಿದ್ದರಂತೆ. ಈ ಬಗ್ಗೆ ಅವರು ಸಂದರ್ಶನದಲ್ಲಿ ಮಾತನಾಡಿದ್ದಾರೆ.

Read Full Story

02:42 PM (IST) Jul 18

ಅಂದು ಅಪ್ಪ, ಇಂದು ಮಗ.. ಆವತ್ತು ವಾಂಗ್ಚುಕ್ ತಂದೆಯ ಉಪವಾಸಕ್ಕೆ ಇಂದಿರಾ ಗಾಂಧಿಯೇ ಹೆದರಿದ್ದರು..!

ಪರಿಸರ ಹೋರಾಟಗಾರ ಸೋನಂ ವಾಂಗ್ಚುಕ್ ಅವರ 21 ದಿನಗಳ ಉಪವಾಸ ಸತ್ಯಾಗ್ರಹವನ್ನು ದೆಹಲಿ ಪೊಲೀಸರು ಬಲವಂತವಾಗಿ ಅಂತ್ಯಗೊಳಿಸಿದ್ದಾರೆ. ಈ ಘಟನೆಯು ನಾಲ್ಕು ದಶಕಗಳ ಹಿಂದೆ ಲಡಾಖ್‌ನ ಹಿತಕ್ಕಾಗಿ ಅವರ ತಂದೆ ಸೋನಂ ವಾಂಗ್ಚಾಲ್ ನಡೆಸಿದ ಐತಿಹಾಸಿಕ ಉಪವಾಸವನ್ನು ನೆನಪಿಸುತ್ತದೆ.

Read Full Story

01:48 PM (IST) Jul 18

ಸೋನಮ್ ವಾಂಗ್ಚುಕ್‌ ಬೆಂಬಲಿಸಿ ಬೆಂವಿವಿ ವಿದ್ಯಾರ್ಥಿಗಳಿಂದ ಉಪವಾಸ ಸತ್ಯಾಗ್ರಹ

Bengaluru University student protest: ಜಂತರ್‌ಮಂತರ್‌ನಲ್ಲಿ ಸೋನಮ್ ವಾಂಗ್‌ಚುಕ್ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಬೆಂಬಲಿಸಿ ಬೆಂಗಳೂರು ವಿವಿ ಸ್ನಾತಕೋತ್ತರ, ಸಂಶೋಧನಾ ವಿದ್ಯಾರ್ಥಿಗಳು ಇಂದು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ

Read Full Story

01:33 PM (IST) Jul 18

ಕರ್ನಾಟಕ ಲೋಕಾಯುಕ್ತ ನೇಮಕಾತಿ 2026 - ಕ್ಲರ್ಕ್, ಟೈಪಿಸ್ಟ್ ಹುದ್ದೆ, ಪಿಯುಸಿ ಪಾಸಾದವರಿಗೆ ಸುವರ್ಣಾವಕಾಶ!

ಕರ್ನಾಟಕ ಲೋಕಾಯುಕ್ತವು 25 ಕ್ಲರ್ಕ್ ಮತ್ತು ಟೈಪಿಸ್ಟ್ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಪಿಯುಸಿ ಪಾಸಾದ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಆಯ್ಕೆಯಾದವರಿಗೆ ಮಾಸಿಕ 67,600 ರೂ. ವರೆಗೆ ವೇತನ ನೀಡಲಾಗುತ್ತದೆ.
Read Full Story

01:31 PM (IST) Jul 18

ಮೈಸೂರು - ಗುತ್ತಿಗೆದಾರನಿಗೆ ಸುಪಾರಿ ಶಾಕ್! ರಾತ್ರಿಯಿಡೀ ನಡೆದಿದ್ದೇನು?

ಮೈಸೂರಿನ ಹೊರವಲಯದಲ್ಲಿ ಗುತ್ತಿಗೆದಾರರೊಬ್ಬರನ್ನು ಅಪಹರಿಸಿದ ದುಷ್ಕರ್ಮಿಗಳು, ಕೊಲೆ ಸುಪಾರಿ ಬೆದರಿಕೆಯೊಡ್ಡಿ ಲಕ್ಷಾಂತರ ರೂಪಾಯಿ ಹಾಗೂ ಚಿನ್ನಾಭರಣ ದೋಚಿದ್ದಾರೆ. ರಾತ್ರಿಯಿಡೀ ಕಾರಿನಲ್ಲಿ ಸುತ್ತಾಡಿಸಿ, ಹಣ ಪಡೆದ ನಂತರ ಅವರನ್ನು ಬಿಟ್ಟು ಪರಾರಿಯಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ತನಿಖೆ ಚುರುಕುಗೊಳಿಸಿದ್ದಾರೆ.
Read Full Story

01:03 PM (IST) Jul 18

ಕೊಡಚಾದ್ರಿಗೆ ಬಂದಿದ್ದ ಬೆಂಗಳೂರಿನ ಯುವ ಚಾರಣಿಗ ಹೃದಯಾಘಾತದಿಂದ ಸಾವು - ಒಂದೇ ತಿಂಗಳಲ್ಲಿ ಎರಡನೇ ದುರಂತ!

ಕೊಡಚಾದ್ರಿ ಬೆಟ್ಟಕ್ಕೆ ಚಾರಣಕ್ಕೆಂದು ಬಂದಿದ್ದ ಬೆಂಗಳೂರಿನ 28 ವರ್ಷದ ಯುವಕ ಶ್ರೀಕಾಂತ್, ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಹೊಸನಗರದ ಸ್ನೇಹಿತರ ಮನೆಯಲ್ಲಿ ತಂಗಿದ್ದಾಗ ಈ ದುರಂತ ಸಂಭವಿಸಿದ್ದು, ತಿಂಗಳ ಅಂತರದಲ್ಲಿ ಕೊಡಚಾದ್ರಿಯಲ್ಲಿ ನಡೆದ ಎರಡನೇ ಸಾವಿನ ಘಟನೆ ಇದಾಗಿದೆ.
Read Full Story

12:46 PM (IST) Jul 18

Koppal - ಪರಿಹಾರ ನೀಡದ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಕೊಪ್ಪಳ ಡಿಪೋ ಬಸ್ ಜಪ್ತಿ

ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡಲು ವಿಳಂಬ ಮಾಡಿದ ಕಾರಣ, ನ್ಯಾಯಾಲಯದ ಆದೇಶದಂತೆ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ಸನ್ನು ಕೂಡ್ಲಿಗಿಯಲ್ಲಿ ಜಪ್ತಿ ಮಾಡಲಾಗಿದೆ.

Read Full Story

12:43 PM (IST) Jul 18

ಬೆಂಗಳೂರಲ್ಲೊಂದು ವಿಚಿತ್ರ ಘಟನೆ - ತನ್ನದಲ್ಲದ ತಪ್ಪಿಗೆ ಆಸ್ಪತ್ರೆ ಸೇರಿದ ಮಹಿಳೆ!

ತನ್ನದಲ್ಲದ ತಪ್ಪಿಗೆ ಬಡಪಾಯಿ ಮಹಿಳೆಯೊಬ್ಬರು ಆಸ್ಪತ್ರೆಗೆ ಸೇರಿದ ವಿಚಿತ್ರ ಘಟನೆ ಬೆಂಗಳೂರಿನ ಟಿನ್ ಫ್ಯಾಕ್ಟರಿ ಬಳಿ ನಡೆದಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪರಾಗಿದ್ದಾರೆ. ಕಾರು ಚಾಲಕನ ನಿರ್ಲಕ್ಷ್ಯತನವೇ ದುರಂತಕ್ಕೆ ಕಾರಣವಾಗಿದೆ.

Read Full Story

12:42 PM (IST) Jul 18

'ಈ ನಾಟಕ ಈಗ ಯಾಕೆ?' ರೋಹಿತ್ ವಿಚಾರಕ್ಕೆ ಬಿಸಿಸಿಐಗೆ ಆರ್‍‌ ಅಶ್ವಿನ್ ತಪರಾಕಿ..!

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ಏಕದಿನ ಭವಿಷ್ಯದ ಚರ್ಚೆಯ ಬಗ್ಗೆ ಆರ್. ಅಶ್ವಿನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಿರಿಯ ಆಟಗಾರರನ್ನು ನಡೆಸಿಕೊಳ್ಳುವ ರೀತಿ ಮತ್ತು ಆಯ್ಕೆ ಸಮಿತಿಯ ಸಂವಹನದ ಕೊರತೆಯನ್ನು ಅವರು ಪ್ರಶ್ನಿಸಿದ್ದು, ದಕ್ಷಿಣ ಆಫ್ರಿಕಾದಂತಹ ಪ್ರವಾಸಗಳಿಗೆ ರೋಹಿತ್ ಮತ್ತು ವಿರಾಟ್ ಅವರ ಅನುಭವ ಅತ್ಯಗತ್ಯ ಎಂದು ಪ್ರತಿಪಾದಿಸಿದ್ದಾರೆ.
Read Full Story

11:44 AM (IST) Jul 18

KBC - ಹಾಟ್ ಸೀಟ್ ಮೇಲೆ ಮತ್ತೆ ಬಿಗ್ ಬಿ.. ಇನ್ಮುಂದೆ ಬರಿ 'ಉತ್ತರ' ಸಾಲದು, 'ಬುದ್ಧಿವಂತಿಕೆ' ಬೇಕು..!

ಕಳೆದ 25 ವರ್ಷಗಳಿಂದ ಕೆಬಿಸಿ ಕೋಟ್ಯಂತರ ಭಾರತೀಯರ ಕನಸಿನ ವೇದಿಕೆಯಾಗಿದೆ. ಜುಲೈ 3, 2000 ರಂದು ಮೊದಲ ಬಾರಿಗೆ ಶುರುವಾದ ಈ ಪಯಣ ಈಗ 17 ಸೀಸನ್‌ಗಳನ್ನು ಯಶಸ್ವಿಯಾಗಿ ಪೂರೈಸಿ 18ನೇ ಸೀಸನ್‌ಗೆ ಕಾಲಿಟ್ಟಿದೆ. ವಿಶೇಷವೆಂದರೆ, ಈ ಪೈಕಿ 16 ಸೀಸನ್‌ಗಳನ್ನು ಅಮಿತಾಭ್ ಬಚ್ಚನ್ ಅವರೇ ಅದ್ಭುತವಾಗಿ ನಡೆಸಿಕೊಟ್ಟಿದ್ದಾರೆ.

Read Full Story

11:12 AM (IST) Jul 18

ಚೆನ್ನಮ್ಮ ಅವರ ಆರೋಗ್ಯ ಸ್ಥಿತಿ ಹೇಗಿದೆ? ಆಸ್ಪತ್ರೆಯಿಂದ ಹೆಲ್ತ್‌ ಬುಲೆಟಿನ್ ಬಿಡುಗಡೆ

Chennamma health updates:  ಮಾಜಿ ಪ್ರಧಾನಿ ದೇವೇಗೌಡ ಅವರ ಪತ್ನಿ ಚೆನ್ನಮ್ಮರ ಆರೋಗ್ಯ ಸ್ಥಿರವಾಗಿದೆ ಎಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ ತಿಳಿಸಿದೆ. ಆರೋಗ್ಯ ಚೇತರಿಕೆಯ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ.  ಆ ವಿವರ ಇಲ್ಲಿದೆ.

Read Full Story

10:47 AM (IST) Jul 18

ಚಿತ್ರದುರ್ಗ - 'ದೇವರ ಕೋಣ'ದ ಪ್ರಾಣ ಉಳಿಸಿದ ಯಶಸ್ವಿ ರುಮಿನೊಟಮಿ ಶಸ್ತ್ರಚಿಕಿತ್ಸೆ, ಹೊಟ್ಟೆಯಿಂದ 6 ಬಕೆಟ್ ಕೊಳೆತ ಆಹಾರ ತೆಗೆದ ವೈದ್ಯರು!

ಚಿತ್ರದುರ್ಗದ ನಾಗಸಮುದ್ರ ಗ್ರಾಮದಲ್ಲಿ ಅತಿಯಾಗಿ ಅನ್ನ-ಪಾಯಸ ಸೇವಿಸಿ ಅಸ್ವಸ್ಥಗೊಂಡಿದ್ದ ದೇವರ ಕೋಣಕ್ಕೆ ಪಶುವೈದ್ಯರು ಯಶಸ್ವಿ 'ರುಮಿನೊಟಮಿ' ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಕೋಣನ ಹೊಟ್ಟೆಯಿಂದ ಸುಮಾರು 6 ಬಕೆಟ್ ಜೀರ್ಣವಾಗದ ಆಹಾರವನ್ನು ಹೊರತೆಗೆದು, ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.
Read Full Story

10:35 AM (IST) Jul 18

ಚಹಾ ಕುಡಿಯಲು 20 ರೂಪಾಯಿ ಕೊಡಲಿಲ್ಲ ಅಂತಾ ತಲೆ ಕಡೆದು ವಿಕೃತಿ.. ರುಂಡ, ಮುಂಡ ಬೇರೆಬೇರೆ!

ತೆಲಂಗಾಣದ ಆಸಿಫಾಬಾದ್ ಜಿಲ್ಲೆಯಲ್ಲಿ, ಚಹಾ ಕುಡಿಯಲು 20 ರೂಪಾಯಿ ನೀಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ವೃದ್ಧರೊಬ್ಬರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಆರೋಪಿ, ಮಸಾದಿ ಸೋಮಯ್ಯ ಎಂಬ 65 ವರ್ಷದ ವೃದ್ಧರ ಮೇಲೆ ಕೊಡಲಿಯಿಂದ ದಾಳಿ ಮಾಡಿ ಶಿರಚ್ಛೇದ ಮಾಡಿದ್ದಾನೆ.

Read Full Story

More Trending News