ಶಿವಮೊಗ್ಗ: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತಿದ್ದೇನೆ ಎಂದು ಸುಳ್ಳು ಹೇಳಿ ಜೈಲಿಗೆ ಸೇರಿದ್ದ ಬುರುಡೆ ಪಾತ್ರಧಾರಿ ಮಾಸ್ಕ್ ಮ್ಯಾನ್ ಚಿನ್ನಯ್ಯಗೆ ಕೊನೆಗೂ ಜೈಲಿನಿಂದ ಬಿಡುಗಡೆ ಭಾಗ್ಯ ಒದಗಿಬಂದಿದೆ. ಜಾಮೀನು ಸಿಕ್ಕರೂ ಶೂರಿಟಿ ಇಲ್ಲ ದೇ ಶಿವಮೊಗ್ಗದ ಜೈಲಿನಲ್ಲಿ ಚಿನ್ನಯ್ಯ ಮಂಕಾ ಗಿದ್ದು, ಮೌನಕ್ಕೆ ಶರಣಾಗಿದ್ದ. ಈಗ 1 ಲಕ್ಷ ಬಾಂಡ್, 2 ಜಾಮೀನುದಾರರಿಂದ ಬೆಳ್ತಂಗಡಿ ಕೋರ್ಟ್‌ಗೆ ಶೂರಿಟಿ ನೀಡಲಾಗಿದೆ. ಚಿನ್ನಯ್ಯ ಬಿಡುಗಡೆಗೆ ನ್ಯಾಯಾಧೀಶರು ಅಸ್ತು ಎಂದಿದ್ದಾರೆ. ಡಿ.18 ರಂದು ಚಿನ್ನಯ್ಯ ಬಿಡುಗಡೆ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಕಳೆದ ನ.24ರಂದು 1 ಲಕ್ಷ ಬಾಂಡ್, ಇಬ್ಬರ ಶೂರಿಟಿಯೊಂದಿಗೆ 12 ಷರತ್ತು ವಿಧಿಸಿ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು .ಚಿನ್ನಯ್ಯನಿಗೆ ಶೂರಿಟಿ ನೀಡಲು ಯಾರೂ ಮುಂದೆ ಬಂದಿರಲಿಲ್ಲ. ಬಾಂಡ್ ಹಾಗೂ ಇಬ್ಬರು ಜಾಮೀನುದಾರರ ಕೊರತೆಯಿಂದ ಬಿಡುಗ ಡೆಯಾಗದೇ ಚಿನ್ನಯ್ಯ ಜೈಲಿನಲ್ಲಿದ್ದ. ಆ.23ರಂದು ಸುದೀರ್ಘ ವಿಚಾರಣೆ ಬಳಿಕ ಬುರುಡೆ ಕೇಸ್‌ನಲ್ಲಿ ಅನಾಮಿಕ ದೂರುದಾರ ಚಿನ್ನಯ್ಯನನ್ನು ಬಂಧಿಸಲಾಗಿತ್ತು. ಸೆ.6ರಂದು ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದ್ದರಿಂದ ಶಿವಮೊಗ್ಗ ಜೈಲಿಗೆ ಚಿನ್ನಯ್ಯನನ್ನು ಕರೆತರಲಾಗಿತ್ತು.
10:30 PM (IST) Dec 18
ಗೃಹಲಕ್ಷ್ಮೀ ಯೋಜನೆ ಕುರಿತು ಲಕ್ಷ್ಮೀ ಹೆಬ್ಬಾಳ್ಕರ್ ತಪ್ಪು ಮಾಹಿತಿ ನೀಡಿದ್ದರೆ ಹಕ್ಕುಚ್ಯುತಿ ಮಂಡಿಸಿ. ಅದಕ್ಕೂ ಮೊದಲು ನರೇಗಾ ಹಣ, ನೀರಾವರಿ, ಜಲಜೀವನ್ ಮಿಷನ್ ಕೇಂದ್ರದಿಂದ ಬಂದಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
10:17 PM (IST) Dec 18
ಡಿಸಿಎಂ ಡಿಕೆ ಶಿವಕುಮಾರ್ ಆಪ್ತ ಕಾರ್ಯದರ್ಶಿ ಕಾರು ಅಪಘಾತ, ಬೈಕ್ ಸವಾರ ಗಂಭೀರ, ಸವದತ್ತಿಯ ರೇಣುಕಾ ಯಲ್ಲಮ್ಮನ ದರ್ಶನ ಪಡೆದು ಮರಳುವಾಗ ಘಟನೆ ನಡೆದಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆ ದಾಖಲಿಸಲಾಗಿದೆ.
10:01 PM (IST) Dec 18
ಜೇಮ್ಸ್ ಕ್ಯಾಮರೂನ್ ನಿರ್ದೇಶನದ 'ಅವತಾರ್: ಫೈರ್ ಅಂಡ್ ಆಶ್' ಸಿನಿಮಾ ಡಿಸೆಂಬರ್ 19ರಂದು ವಿಶ್ವಾದ್ಯಂತ ತೆರೆ ಕಾಣಲಿದೆ. ಈ ಹಿನ್ನೆಲೆಯಲ್ಲಿ ಅವತಾರ್ 3 ಬಗ್ಗೆ ಆರಂಭಿಕ ವಿಮರ್ಶೆಗಳು ಶುರುವಾಗಿವೆ.
09:52 PM (IST) Dec 18
ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಮನೆ ಸಂಪ್ ಕ್ಯಾಪ್ ಕಳ್ಳತನ ಮಾಡಿ 700 ರೂಗೆ ಮಾರಾಟ, ಆರೋಪಿ ಅರೆಸ್ಟ್ ಮಾಡಲಾಗಿದೆ. ಇತ್ತೀಚೆಗೆ ಘಟನೆ ಕುರಿತು ರಿಕ್ಕಿ ಕೇಜ್ ರೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
09:43 PM (IST) Dec 18
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಡ್ರಗ್ಸ್ ಮಾಫಿಯಾ ನಿಯಂತ್ರಣ ತಪ್ಪಿದೆ. ಜೈಲುಗಳು ರೆಸಾರ್ಟ್‌ಗಳಾಗಿವೆ. ರಕ್ಷಣೆ ನೀಡಬೇಕಾದ ಪೊಲೀಸರೇ ಕಳ್ಳರಾಗಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆತಂಕ ವ್ಯಕ್ತಪಡಿಸಿದ್ದಾರೆ.
09:22 PM (IST) Dec 18
ದೇಶದಲ್ಲಿ ಕಾಂಗ್ರೆಸ್ ಹಾಗೂ ಯುಪಿಎ ಆಡಳಿತದಲ್ಲಿ ಜಾರಿಗೆ ತಂದ ಯೋಜನೆಗಳ ಹೆಸರುಗಳನ್ನು ಬದಲಿಸಿದ್ದೊಂದೇ ಬಿಜೆಪಿಯವರ ಬಹುದೊಡ್ಡ ಸಾಧನೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ವ್ಯಂಗ್ಯವಾಡಿದ್ದಾರೆ.
09:16 PM (IST) Dec 18
ನಮಗೆ ಎಲ್ಲಾ ಧರ್ಮ, ಜಾತಿ ಒಂದೇ. ಬೆಳಗಾವಿ ರಾಜ್ಯದ ಎರಡನೇ ರಾಜಧಾನಿ. ಇದಕ್ಕೆ ಉತ್ತಮ ಭವಿಷ್ಯವಿದೆ. ಇದರ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
09:07 PM (IST) Dec 18
ರಾಜ್ಯದ ಸಮಸ್ಯೆಗಳ ಬಗ್ಗೆ ವಿಶೇಷವಾಗಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಮಸ್ಯೆಗಳ ಬಗ್ಗೆ, ಹೂವು ಬೆಳೆಗಾರರ ಸಮಸ್ಯೆ ಬಗ್ಗೆ ಚರ್ಚಿಸಿದ್ದು, ಲೋಕಸಭೆಯಲ್ಲಿ ರೈತರ ಪರವಾದ 2 ಮಹತ್ವದ ಮಸೂದೆ ಮಂಡಿಸಿದ್ದೇನೆ ಎಂದು ಡಾ.ಕೆ.ಸುಧಾಕರ್ ತಿಳಿಸಿದರು.
08:59 PM (IST) Dec 18
ಮಾಲೀಕನ ನಿರ್ಲಕ್ಷ್ಯಕ್ಕೆ ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದ ಇಟ್ಟಿಗೆ, 4 ವರ್ಷದ ಮಗು ಸಾವು, ಕಟ್ಟಡದ ಪಕ್ಕದಲ್ಲೇ ಶೀಟ್ ಮನೆಯೊಳಗಿದ್ದ ಮಕ್ಕಳ ಮೇಲೆ ಬಿದ್ದಿದೆ. ಇನ್ನಿಬ್ಬರು ಮಕ್ಕಳು ತೀವ್ರವಾಗಿ ಗಾಯಗೊಂಡಿದ್ದಾರೆ.
08:19 PM (IST) Dec 18
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಕನ್ನಡಿ ಒಡೆಯುವುದು (broken mirror vastu tips) ಕೆಲವೊಮ್ಮೆ ಶುಭ ಸಂಕೇತ. ಆದರೆ ಒಡೆದ ಗಾಜು ಮನೆಯಲ್ಲಿರುವುದು ಶುಭವಲ್ಲ. ಹಾಗಾದರೆ ಯಾವುದು ಶುಭ, ಯಾವುದು ಅಶುಭ? ಬನ್ನಿ ತಿಳಿಯೋಣ.
08:17 PM (IST) Dec 18
ಅದೊಂದು ಆಯುಧವೆಂದು ಬಳಕೆ ಮಾಡುವ ಕೋವಿಗೂ ಇಲ್ಲಿಗೆ ಹೂ ಮುಡಿಸಿ, ದೀಪ, ಊದುಬತ್ತಿಗಳ ಹೆಚ್ಚಿ ಪೂಜೆ ಸಲ್ಲಿಸಿದ್ರು. ಅಷ್ಟೇ ಏಕೆ ಎಲ್ಲರೂ ಹೆಗಲ ಮೇಲೇರಿಸಿ ಅದೇ ಕೋವಿಗೆ ಮೆರವಣಿಗೆಯನ್ನೂ ಮಾಡಿದರು.
07:57 PM (IST) Dec 18
ಬೆಂಗಳೂರಿನ ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಡಿಸೆಂಬರ್ 21 ರಿಂದ 24 ರವರೆಗೆ ನಾಲ್ಕು ದಿನಗಳ ಪಲ್ಸ್ ಪೋಲಿಯೊ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 5 ವರ್ಷದೊಳಗಿನ 2,76,693 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ.
07:50 PM (IST) Dec 18
ಮಂಗಳೂರಿನಲ್ಲಿ ಹೊಸ ವರ್ಷಾಚರಣೆ ಆಯೋಜಿಸಲು ಪೊಲೀಸ್ ಇಲಾಖೆಯಿಂದ ಕಡ್ಡಾಯವಾಗಿ ಪೂರ್ವಾನುಮತಿ ಪಡೆಯಬೇಕು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ರಾತ್ರಿ 12.30ರೊಳಗೆ ಕಾರ್ಯಕ್ರಮ ಮುಗಿಸಬೇಕು, ಡಿಜೆ ಪಾರ್ಟಿ, ಮಾದಕ ವಸ್ತುಗಳ ಸೇವನೆ, ಅಶ್ಲೀಲ ನೃತ್ಯಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
07:42 PM (IST) Dec 18
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯನ್ನ 10 ತಿಂಗಳ ಕಾಲ ಗಡೀಪಾರು ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ತಿಮರೋಡಿ ಮನೆಯಲ್ಲಿ ಲಭ್ಯವಿಲ್ಲದ ಕಾರಣ ಮನೆ ಬಾಗಿಲಿಗೆ ನೋಟಿಸ್ ಅಂಟಿಸಲಾಗಿದೆ.
07:23 PM (IST) Dec 18
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಒತ್ತಾಸೆಯಂತೆ, ಆಲಮಟ್ಟಿ-ಕುಷ್ಟಗಿ ನೂತನ ರೈಲು ಮಾರ್ಗದ ಡಿಪಿಆರ್ ಇನ್ನೈದು ತಿಂಗಳಲ್ಲಿ ಸಿದ್ಧವಾಗಲಿದೆ. ಈ ಮಾರ್ಗವನ್ನು ಚಿತ್ರದುರ್ಗದವರೆಗೆ ವಿಸ್ತರಿಸುವಂತೆ ಒತ್ತಾಯಿಸಲಾಗಿದ್ದು, ಇದು ವಿಜಯಪುರ-ಬೆಂಗಳೂರು ನಡುವಿನ ಪ್ರಯಾಣದ ದೂರವನ್ನು ಗಣನೀಯವಾಗಿ ಕಡಿಮೆ ಮಾಡಲಿದೆ.
06:54 PM (IST) Dec 18
06:46 PM (IST) Dec 18
ರಾಮನಗರ ಜಿಲ್ಲೆಯ ವಿವಿಧ ಬ್ಯಾಂಕ್‌ಗಳಲ್ಲಿ ಸುಮಾರು 48.69 ಕೋಟಿ ರೂಪಾಯಿ ವಾರಸುದಾರರಿಲ್ಲದೆ ಉಳಿದಿದೆ. ಈ ಹಣವನ್ನು ಅದರ ಹಕ್ಕುದಾರರಿಗೆ ತಲುಪಿಸಲು 'ನಿಮ್ಮ ಹಣ-ನಿಮ್ಮ ಹಕ್ಕು' ಅಭಿಯಾನವನ್ನು ಆರಂಭಿಸಿದ್ದು, ಗ್ರಾಹಕರು ಡಿಸೆಂಬರ್ ಅಂತ್ಯದೊಳಗೆ ಅಗತ್ಯ ದಾಖಲೆಗಳನ್ನು ನೀಡಿ ತಮ್ಮ ಹಣವನ್ನು ಮರಳಿ ಪಡೆಯಬಹುದು.
06:34 PM (IST) Dec 18
ರಣವೀರ್ ಸಿಂಗ್ ಅಭಿನಯದ 'ಧುರಂಧರ್' ಚಿತ್ರ ಭಾರತದಲ್ಲಿ ಮಾತ್ರವಲ್ಲದೆ ಪಾಕಿಸ್ತಾನದಲ್ಲೂ ಮೆಚ್ಚುಗೆ ಗಳಿಸುತ್ತಿದೆ. ಅಲ್ಲಿಯೂ ಶೋಗಳು ಹೌಸ್‌ಫುಲ್ ಆಗುತ್ತಿವೆ. ಈ ನಡುವೆ, ಪಾಕಿಸ್ತಾನಿ ವ್ಯಕ್ತಿಯೊಬ್ಬರು ಈ ಚಿತ್ರದ ವಿಮರ್ಶೆ ಮಾಡಿದ್ದು, ಅದು ವೈರಲ್ ಆಗಿದೆ.
06:33 PM (IST) Dec 18
ಭಾರತೀಯ ಸಿನೆಮಾ ರಂಗದ ಈ ಮಹಾನ್ ಹೀರೋಯಿನ್ (Smita patil), ತಮ್ಮ ಖ್ಯಾತಿಯ ನಡುವೆಯೂ ಸರಳ ಜೀವನ ನಡೆಸುತ್ತಿದ್ದರು. ಶೂಟಿಂಗ್ ಸೆಟ್‌ನಲ್ಲಿ ತಾವೇ ಅಡುಗೆ ಮಾಡಿಕೊಳ್ಳುತ್ತಿದ್ದ ಅವರ ಸರಳತೆ, ಮಹಿಳಾ ಹಕ್ಕುಗಳ ಬಗೆಗಿನ ಅವರ ದೃಢ ನಿಲುವು ಹಾಗೂ ಅವರ ಬಲಿಷ್ಠ ಪಾತ್ರಗಳು ಇಂದಿಗೂ ಸ್ಮರಣೀಯ.
06:31 PM (IST) Dec 18
06:26 PM (IST) Dec 18
ಬೆಂಗಳೂರಿನ ನಾಗರಬಾವಿ ಪಬ್‌ನಲ್ಲಿ ಯುವತಿಯರ ಮೊಬೈಲ್ ಸಂಖ್ಯೆ ಕೇಳಿದ ವಿಚಾರಕ್ಕೆ ಗಲಾಟೆ ನಡೆದಿದೆ. ಹಲ್ಲೆ ಮತ್ತು ಅಸಭ್ಯ ವರ್ತನೆ ಆರೋಪದಡಿ ಜ್ಞಾನಭಾರತಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
06:21 PM (IST) Dec 18
ಗಡಿಪಾರಾಗಿ ಬಂದಿದ್ದ ರೌಡಿಶೀಟರ್ ಎಲ್.ಮಹೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪಾಂಡವಪುರ ಪೊಲೀಸರು ಮುಖ್ಯ ಆರೋಪಿ ಸೇರಿದಂತೆ ಐವರನ್ನು ಬಂಧಿಸಿದ್ದಾರೆ. ಹಳೆಯ ದ್ವೇಷವೇ ಕೊಲೆಗೆ ಕಾರಣವಾಗಿದೆ.
06:07 PM (IST) Dec 18
ನಿತೇಶ್ ತಿವಾರಿ ಅವರ 'ರಾಮಾಯಣ' ಮತ್ತು AI ನಿಂದ ತಯಾರಾದ ಧಾರ್ಮಿಕ ಚಿತ್ರ 'ಹನುಮಾನ್: ದಿ ಇಟರ್ನಲ್' ಟೀಸರ್ ಡಿಸೆಂಬರ್ 19, 2025 ರಂದು ಹಾಲಿವುಡ್ ಚಿತ್ರ 'ಅವತಾರ್: ಫೈರ್ ಅಂಡ್ ಆಶ್' ಜೊತೆಗೆ ಥಿಯೇಟರ್‌ಗಳಲ್ಲಿ ಪ್ರದರ್ಶನಗೊಳ್ಳಲಿದೆ.
05:44 PM (IST) Dec 18
ಓಲಾ ಎಲೆಕ್ಟ್ರಿಕ್ ಷೇರುಗಳು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು, ಹೂಡಿಕೆದಾರರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಪ್ರವರ್ತಕರ ಷೇರು ಮಾರಾಟ, ಮಾರುಕಟ್ಟೆ ಪಾಲಿನಲ್ಲಿ ಕುಸಿತ, ಮತ್ತು ಹೆಚ್ಚುತ್ತಿರುವ ಸಾಲದಂತಹ ಪ್ರಮುಖ ಕಾರಣಗಳಿಂದ ಕಂಪನಿಯ ಮಾರುಕಟ್ಟೆ ಮೌಲ್ಯವು ₹13,950 ಕೋಟಿಗೆ ಇಳಿದಿದೆ.
05:36 PM (IST) Dec 18
ಸಲ್ಮಾನ್ ಖಾನ್ ಬಿಗ್ ಬಾಸ್ 19ರ ನಂತರ ತಮ್ಮ ಮುಂಬರುವ ಚಿತ್ರಗಳಿಂದಾಗಿ ಸುದ್ದಿಯಲ್ಲಿದ್ದಾರೆ. ಅವರ 'ಕಿಕ್ 2' ಚಿತ್ರವನ್ನು ಅವರ ಹುಟ್ಟುಹಬ್ಬದ ದಿನ, ಅಂದರೆ ಡಿ.27ರಂದು ಘೋಷಿಸಬಹುದು ಎಂಬ ಸುದ್ದಿ ಇದೆ. ಜೊತೆಗೆ, ಚಿತ್ರದ ನಾಯಕಿ ಜಾಕ್ವೆಲಿನ್‌ರನ್ನು ಬದಲಾಯಿಸಬಹುದು ಎಂದೂ ಹೇಳಲಾಗುತ್ತಿದೆ.
05:20 PM (IST) Dec 18
ಈ ಸಿನಿಮಾದಲ್ಲಿ ಸ್ಯಾಂಡಲ್‌ವುಡ್‌ನ ನಟ ಶಿವರಾಜ್‌ಕುಮಾರ್ ಕೂಡಾ ಮೊದಲ ಪಾರ್ಟ್ನಂತೆ ಪಾರ್ಟ್-2 ಚಿತ್ರದಲ್ಲೂ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 2026ರ ಜೂನ್ 12ರಂದು ‘ಜೈಲರ್ 2’ ತೆರೆಗೆ ಬರಲಿದೆ.
05:01 PM (IST) Dec 18
ಇನ್‌ಸ್ಟಾಗ್ರಾಮ್‌ನಲ್ಲಿ 'ಭಾರತದಲ್ಲಿ ಪಾಕಿಸ್ತಾನಿ ಸ್ಪೈ' ಎಂಬ ಹೊಸ ರೀಲ್ಸ್ ಟ್ರೆಂಡ್ ವೈರಲ್ ಆಗಿದೆ. ಈ ತಮಾಷೆಯ ವೀಡಿಯೋಗಳ ನಡುವೆಯೇ ಪಾಕ್ ಯುವತಿ ಸ್ಪೈ ಆಗಿ ಬಂದು ಸಿಕ್ಕಿಬಿದ್ಇರುವ ವಿಡಿಯೋ ಭಾರೀ ವೈರಲ್ ಆಗಿದೆ. ಸಂಪೂರ್ಣ ಮಾಹಿತಿ ತಿಳಿಯಲು ಓದಿ.
04:46 PM (IST) Dec 18
ಕಳೆದ ವರ್ಷ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಡಿ.21ನ್ನು ಪ್ರಥಮ ‘ವಿಶ್ವ ಧ್ಯಾನ ದಿನ’ವಾಗಿ ಘೋಷಿಸಿದ ದಿನದಂದೇ, ಜಗತ್ತಿನಾದ್ಯಂತ 8.5 ಮಿಲಿಯನ್ ಜನರು ಒಂದೇ ಸಮಯದಲ್ಲಿ ಧ್ಯಾನದಲ್ಲಿ ಭಾಗವಹಿಸಿದ್ದರು.
04:27 PM (IST) Dec 18
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಅಕ್ರಮ ನಿವೇಶನ ಹಂಚಿಕೆ ಆರೋಪದ ತನಿಖೆ ವಿಳಂಬವಾಗಿದ್ದಕ್ಕೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅಂತಿಮ ವರದಿ ಸಲ್ಲಿಸಲು ಲೋಕಾಯುಕ್ತ ಪೊಲೀಸರು ಮತ್ತಷ್ಟು ಕಾಲಾವಕಾಶ ಕೋರಿದೆ.
04:26 PM (IST) Dec 18
ನನಗಂತೂ ಏನೂ ಮನಸ್ತಾಪವಿಲ್ಲ. ನಾನು ಎಲ್ಲೂ ಯಾರ ಹೆಸರೂ ಮಿಸ್ ಮಾಡಲಿಲ್ಲ. ಅವರೂ ಉದ್ದೇಶಪೂರ್ವಕವಾಗಿ ಮಿಸ್ ಮಾಡಿದ್ದಾರೆ ಅಂತ ಅನಿಸುವುದಿಲ್ಲ. ಇಂಥದ್ದನ್ನೆಲ್ಲ ಅಲ್ಲಲ್ಲೇ ಬಿಟ್ಟು ಮುಂದಕ್ಕೆ ಹೋಗಬೇಕು ಎಂದರು ರಾಜ್ ಬಿ ಶೆಟ್ಟಿ.
04:14 PM (IST) Dec 18
Gen Z ಪೀಳಿಗೆಯವರಂತೂ ಯಾವುದಕ್ಕೂ ಚಿಂತೆ ಮಾಡೋದಿಲ್ಲ, ಕೇರ್ ಮಾಡೋದಿಲ್ಲ, ಜವಾಬ್ದಾರಿ ತಗೊಳಲ್ಲ ಎನ್ನುವ ದೂರು ಇದೆ. ಈಗ ಬೆಂಗಳೂರಿನ ಕನ್ನಡಿಗನೋರ್ವ ಏಕಾಏಕಿ ಕೆಲಸ ಬಿಟ್ಟು, ಸಮಸ್ಯೆ ತಂದುಕೊಂಡಿದ್ದಾರೆ.
03:45 PM (IST) Dec 18
03:38 PM (IST) Dec 18
ಯುವ ರಾಜ್‌ಕುಮಾರ್ ಜೊತೆಗಿನ ವಿಚ್ಛೇದನದ ನಡುವೆ, ಶ್ರೀದೇವಿ ಭೈರಪ್ಪ ಅವರು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಯುವ ಹಾಗೂ ಮತ್ತೊಬ್ಬ ನಟಿಯ ಸಂಬಂಧದ ಬಗ್ಗೆ ಕೇಳಿದಾಗ, ಡಾ. ರಾಜ್‌ಕುಮಾರ್ ಅವರ ಹಾಡು ಹಾಕಿ ಗಮನಸೆಳೆದಿದ್ದಾರೆ.
03:36 PM (IST) Dec 18
ಜೈಲರ್ 2 ಅಡ್ಡಾದಿಂದ ಹೊಸದೊಂದು ನ್ಯೂಸ್ ಬಂದಿದೆ. ಅದೂ ಜೈಲರ್ ಪಾರ್ಟ್ 2ನಲ್ಲಿ ನಟಿ ತಮನ್ನಾ ಹಾಡು ಇರೋದಿಲ್ಲ ಅಂತ. ಹಾಗಿದ್ರೆ ಹಾಡೇ ಇರೋದಿಲ್ವಾ ಅಥವಾ ತಮನ್ನಾ ಇರೋದಿಲ್ವಾ ಅಂತ ಕೇಳಿದ್ರೆ, ಹಾಡು ಇರಲಿದೆ, ಆದ್ರೆ ತಮನ್ನಾ ಭಾಟಿಯಾ (Tamannah Bhatia) ಅದರಲ್ಲಿ ಇರೋದಿಲ್ಲ ಎಂಬ ಉತ್ತರ ಸಿಕ್ಕಿದೆ.
03:08 PM (IST) Dec 18
ಬಿಗ್‌ಬಾಸ್ ಮನೆಯಲ್ಲಿ ತನ್ನ ಕಾಮಿಡಿಯಿಂದ ಜನಪ್ರಿಯರಾಗಿರುವ ಗಿಲ್ಲಿ ನಟ, ಸಹ ಸ್ಪರ್ಧಿ ಕಾವ್ಯಾ ಶೈವ ಜೊತೆಗಿನ ತಮ್ಮ ಜೋಡಿಯ ಬಗ್ಗೆ ತಮಾಷೆಯಾಗಿ ಮಾತನಾಡಿದ್ದಾರೆ. ತನ್ನ 'ಮಾವನ ಮಗಳು' ಎಂದು ಹೇಳಿಕೊಂಡು, ಜಂಟಿಯಾಗಿ ಮನೆಗೆ ಪ್ರವೇಶಿಸಿದ ಕಥೆಯನ್ನು ಹಾಸ್ಯಮಯವಾಗಿ ವಿವರಿಸಿದ್ದಾರೆ.
03:08 PM (IST) Dec 18
TB ಡ್ಯಾಂ ಕ್ರಸ್ಟ್‌ಡ್ ಗೇಟ್ ಅಳವಡಿಕೆ ಹಿನ್ನೆಲೆಯಲ್ಲಿ, ತಜ್ಞರ ತಂಡವು ಎಡದಂಡೆ ಕಾಲುವೆ ಮಾರ್ಗವನ್ನು ಪರಿಶೀಲಿಸಿದೆ. ಮುಂದಿನ ಆರು ತಿಂಗಳು ಕಾಲುವೆಗೆ ನೀರು ಸ್ಥಗಿತಗೊಳ್ಳಲಿದ್ದು, ಈ ಅವಧಿಯಲ್ಲಿ ₹430 ಕೋಟಿ ವೆಚ್ಚದಲ್ಲಿ ಕಾಲುವೆಯ ದುರಸ್ತಿ ಮತ್ತು ಸುಧಾರಣಾ ಕಾರ್ಯಗಳನ್ನು ಕೈಗೊಳ್ಳಲು ಯೋಜಿಸಲಾಗಿದೆ.
03:07 PM (IST) Dec 18
Bigg Boss Kannada Season 12 Episode Update: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ದೊಡ್ಮನೆಯೊಳಗಡೆ ಒಂದು ಸಿನಿಮಾ, ಸೀಕ್ರೇಟ್ ರೂಮ್‌ನಲ್ಲಿ ಇನ್ನೊಂದು ಸಿನಿಮಾ ಪ್ರಸಾರವಾಗುತ್ತಿದೆ. ಧ್ರುವಂತ್ ಹಾಗೂ ರಕ್ಷಿತಾ ಅವರು ಆಟ ಆಡಿಸಿದಂತೆ, ಸ್ಪರ್ಧಿಗಳು ಆಟ ಆಡುತ್ತಿದ್ದಾರೆ.
02:44 PM (IST) Dec 18
ಕೆಪಿಟಿಸಿಎಲ್ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ರಾಜಧಾನಿ ಬೆಂಗಳೂರಿನ ಹಲವು ಪ್ರಮುಖ ಪ್ರದೇಶಗಳಲ್ಲಿ ಶನಿವಾರ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆನಗರ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆ ಇರುವುದಿಲ್ಲ.
02:29 PM (IST) Dec 18
ಸಚಿವ ಭೈರತಿ ಸುರೇಶ್ ಅವರ 'ಕರಾವಳಿಯವರು ಬೆಂಕಿ ಹಚ್ಚುವವರು' ಎಂಬ ಹೇಳಿಕೆಯು ಸುವರ್ಣಸೌಧದ ಅಧಿವೇಶನದಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಯಿತು. ಈ ಹೇಳಿಕೆಗೆ ಬಿಜೆಪಿ ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಕ್ಷಮೆಗೆ ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು.
02:07 PM (IST) Dec 18