Published : Sep 17, 2026, 07:01 AM ISTUpdated : Sep 17, 2026, 11:39 PM IST

Karnataka News Live 17 September 2026: ಸೂಪರ್ ಹಾಟ್ ಅವತಾರದಲ್ಲಿ ನಿವೇದಿತಾ ಗೌಡ - ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದು ಹೀಗೆ!

ಸಾರಾಂಶ

ಮಡಿಕೇರಿ: ತಲಕಾವೇರಿಯಲ್ಲಿ ಈ ಬಾರಿಯ ಪವಿತ್ರ ಕಾವೇರಿ ತೀರ್ಥೋದ್ಭವ ಅ.17ರಂದು ರಾತ್ರಿ 7.50ಕ್ಕೆ ನಡೆಯಲಿದೆ. ಭಾಗಮಂಡಲದಲ್ಲಿ ಶಾಸಕ ಎ.ಎಸ್.ಪೊನ್ನಣ್ಣ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾವೇರಿ ತುಲಾ ಸಂಕ್ರಮಣ-2026ರ ಜಾತ್ರೆಯ ಪ್ರಯುಕ್ತ ಭಗಂಡೇಶ್ವರ ಹಾಗೂ ತಲಕಾವೇರಿ ದೇವಾಲಯಗಳಲ್ಲಿ ನಡೆಯಲಿರುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ವೇಳಾಪಟ್ಟಿ ಪ್ರಕಟಿಸಲಾಯಿತು.

ಕಾರ್ಯಕ್ರಮಗಳ ವಿವರ: ಸೆ.27ರಂದು ಬೆಳಗ್ಗೆ 8.45ಕ್ಕೆ ಭಗಂಡೇಶ್ವರ ದೇವಾಲಯದಲ್ಲಿ ತುಲಾ ಲಗ್ನದಲ್ಲಿ ಪ್ರತ್ಯೇಕ ಅಕ್ಷಿ ಕಾರ್ಯಕ್ರಮ. ಅ.5ರಂದು ಬೆಳಗ್ಗೆ 10.35ಕ್ಕೆ ವೃಷಭ ಲಗ್ನದಲ್ಲಿ ಆಜ್ಞಾ ಮುಹೂರ್ತ. ಅ.15ರಂದು ಮಧ್ಯಾಹ್ನ 12.35ಕ್ಕೆ ಧನು ಲಗ್ನದಲ್ಲಿ ಅಕ್ಷಯ ಪಾತ್ರೆ ಕಾರ್ಯಕ್ರಮ, ಅದೇ ದಿನ ಸಂಜೆ 6.03ಕ್ಕೆ ಮೀನ ಲಗ್ನದಲ್ಲಿ ಕಾಣಿಕೆ ಡಬ್ಬಿಗಳಿಗೆ ಪೂಜೆ. ಅ.17ರಂದು ರಾತ್ರಿ 7.50ಕ್ಕೆ ತಲಕಾವೇರಿಯಲ್ಲಿ ಮೇಷ ಲಗ್ನದಲ್ಲಿ ಪವಿತ್ರ ತೀರ್ಥೋದ್ಭವ ಜರುಗಲಿದೆ.

11:39 PM (IST) Sep 17

ಸೂಪರ್ ಹಾಟ್ ಅವತಾರದಲ್ಲಿ ನಿವೇದಿತಾ ಗೌಡ - ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದು ಹೀಗೆ!

‘ಬಿಗ್ ಬಾಸ್’ ಖ್ಯಾತಿಯ ನಿವೇದಿತಾ ಗೌಡ ಸದ್ಯ ಅಮೆರಿಕ ಪ್ರವಾಸದಲ್ಲಿದ್ದು, ಲಾಸ್ ವೇಗಾಸ್‌ನಲ್ಲಿ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ. ಅವರ ಗ್ಲಾಮರಸ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿವೆ.

Read Full Story

10:45 PM (IST) Sep 17

Cricket - ಕ್ರೀಡೆಯಲ್ಲಿ ಧರ್ಮ ಇರಬಾರದು ಅಂತ ಭಾಷಣ ಶುರು ಮಾಡ್ತಾರೆ! ಸುರೇಶ್ ರೈನಾ ಟ್ವೀಟ್ ವೈರಲ್!

ಕ್ರಿಕೆಟ್ ಮೈದಾನದಲ್ಲಿ ಅಭಿಷೇಕ್ ಶರ್ಮಾ ಮಹಾದೇವನಿಗೆ ನಮಸ್ಕರಿಸಿದ್ದನ್ನು ವಿರೋಧಿಸಿದ ಎಡಪಂಥೀಯರ ದ್ವಂದ್ವ ನೀತಿಯನ್ನು ಸುರೇಶ್ ರೈನಾ ಕಟುವಾಗಿ ಟೀಕಿಸಿದ್ದಾರೆ. ಪಾಕ್ ಆಟಗಾರ ರಿಜ್ವಾನ್ ನಮಾಜ್ ಮಾಡಿದಾಗ ಮೌನವಾಗಿದ್ದವರು, ಈಗ ಭಾರತೀಯ ಆಟಗಾರನ ಶಿವ ಭಕ್ತಿಯನ್ನು ವಿರೋಧಿಸುತ್ತಿರುವುದನ್ನು ರೈನಾ ಪ್ರಶ್ನಿಸಿದ್ದಾರೆ.
Read Full Story

10:07 PM (IST) Sep 17

ನಿದ್ದೆ ಮಾಡುವಾಗ ಯಾಕೆ ಗೊಣಗುತ್ತಾರೆ? ನಿರ್ಲಕ್ಷ್ಯ ಮಾಡುವಂತಿಲ್ಲ, ಆತಂಕದ ವಿಚಾರ ರಿವೀಲ್

ನಿದ್ರೆ ಮಾಡುವಾಗ ಗೊಣಗುವ ಅಭ್ಯಾಸ ಅನೇಕರಲ್ಲಿದೆ. ಅಂತವರು ಅದನ್ನು ನಿರ್ಲಕ್ಷ್ಯ ಮಾಡಬಾರದು. ಸಮಸ್ಯೆಯ ಮೂಲ ಏನು ಎಂದು ತಿಳಿದುಕೊಂಡು ಪರಿಹರಿಸಿಕೊಳ್ಳಬೇಕು. ಇಲ್ಲದಿದ್ದರೆ ಮುಂದೊಂದು ದಿನ ಅನಾಹುತಕ್ಕೆ ಕಾರಣವಾಗಬಹುದು. ಈ ಕುರಿತ ಒಂದು ವರದಿ ಇಲ್ಲಿದೆ.

Read Full Story

09:33 PM (IST) Sep 17

Cricket - ಪಾಪಾ ಕಹತೇ ತೋ ಬಡಾ ನಾಮ್‌ ಕರೇಗಾ; 40 ನಿಮಿಷಗಳಲ್ಲಿ ಟಿ20 ಕ್ರಿಕೆಟ್‌ನ ಸರ್ವ ದಾಖಲೆ ಉಡೀಸ್‌! ದೆಹಲಿಯಲ್ಲಿ ಅಭಿಷೇಕ್ 'ರುದ್ರತಾಂಡವ!

ಅಫ್ಘಾನಿಸ್ತಾನ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಕೇವಲ 30 ಎಸೆತಗಳಲ್ಲಿ ಶತಕ ಸಿಡಿಸಿ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ. ಪವರ್ ಪ್ಲೇನಲ್ಲಿ 76 ರನ್ ಗಳಿಸಿದ ಇವರು, ರೋಹಿತ್ ಶರ್ಮಾ ಅವರ ಅತಿ ವೇಗದ ಶತಕದ ದಾಖಲೆದಿದ್ದಾರೆ. ಟೀಮ್ ಇಂಡಿಯಾ ಪವರ್ ಪ್ಲೇನಲ್ಲಿ 100 ರನ್ ಗಳಿಸಿ ಹೊಸ ಮೈಲಿಗಲ್ಲು ತಲುಪಿದೆ.

Read Full Story

08:02 PM (IST) Sep 17

ಸಾಮಾನ್ಯ ಯುವಕನೇ ಮುಖ್ಯಮಂತ್ರಿಯಾದರೆ? - 'ಕಾಮನ್ ಮ್ಯಾನ್' ಸಿನಿಮಾದಲ್ಲಿ ರೋಚಕ ರಾಜಕೀಯ ಆಟ

ಓಂ ಸಾಯಿ ಪ್ರಕಾಶ್ ನಿರ್ದೇಶನದ ‘ಕಾಮನ್ ಮ್ಯಾನ್’ ಸಿನಿಮಾ ವಿಭಿನ್ನ ರಾಜಕೀಯ ಥ್ರಿಲ್ಲರ್ ಕಥೆಯೊಂದಿಗೆ ಸೆಪ್ಟೆಂಬರ್ 25ರಂದು ಬಿಡುಗಡೆಯಾಗಲಿದೆ. ಸಾಮಾನ್ಯ ಮಧ್ಯಮ ವರ್ಗದ ಯುವಕ ಅಚಾನಕ್ ಮುಖ್ಯಮಂತ್ರಿ ಆಗಿ, ವ್ಯವಸ್ಥೆಯ ವಿರುದ್ಧ ಹೋರಾಡುವ ಕಥೆ ಚಿತ್ರದ ಪ್ರಮುಖ ಆಕರ್ಷಣೆ.

Read Full Story

08:01 PM (IST) Sep 17

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಬೃಹತ್​ ನೇಮಕಾತಿ - 4699 ಹುದ್ದೆಗಳಿಗೆ ಅರ್ಜಿ ಆಹ್ವಾನ- ಡಿಟೇಲ್ಸ್​ ಇಲ್ಲಿದೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ವಿವಿಧ ಸರ್ಕಾರಿ ಇಲಾಖೆಗಳಲ್ಲಿ 4,699 ತಾಂತ್ರಿಕ ಮತ್ತು ತಾಂತ್ರಿಕೇತರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಪಿಯುಸಿ, ಡಿಪ್ಲೊಮಾ ಮತ್ತು ಪದವಿ ಮುಗಿಸಿದ ಅಭ್ಯರ್ಥಿಗಳು ಎಫ್‌ಡಿಎ, ಎಸ್‌ಡಿಎ ಸೇರಿದಂತೆ ಹಲವು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳು ನವೆಂಬರ್ ಮತ್ತು ಡಿಸೆಂಬರ್ 2026 ರಲ್ಲಿ ನಡೆಯಲಿವೆ.
Read Full Story

07:38 PM (IST) Sep 17

ಪೃಥ್ವಿ ಶಾ ವೈಯಕ್ತಿಕ ಬದುಕೂ ಬರ್ಬಾದ್; ಮುರಿದುಬಿದ್ದ ನಿಶ್ಚಿತಾರ್ಥ, ಕಾರಣ ರಿವೀಲ್ ಮಾಡಿದ ಆಕೃತಿ

ಕ್ರಿಕೆಟಿಗ ಪೃಥ್ವಿ ಶಾ ಮತ್ತು ಆಕೃತಿ ಅಗರ್ವಾಲ್ ಅವರ ನಿಶ್ಚಿತಾರ್ಥ ಮುರಿದುಬಿದ್ದಿದೆ. ಇದರ ಬೆನ್ನಲ್ಲೇ ಪೃಥ್ವಿ ಶಾ ತಮ್ಮ ಇನ್‌ಸ್ಟಾಗ್ರಾಮ್‌ನ ಹಳೆಯ ಪೋಸ್ಟ್‌ಗಳನ್ನು ಡಿಲೀಟ್ ಮಾಡಿದ್ದಾರೆ. ಇತ್ತ ಕ್ರಿಕೆಟ್‌ನಲ್ಲೂ ಅವಕಾಶ ವಂಚಿತರಾಗಿರುವ ಅವರು ಸದ್ಯ ಕಠಿಣ ಪರಿಸ್ಥಿತಿ ಎದುರಿಸುತ್ತಿದ್ದಾರೆ.
Read Full Story

07:13 PM (IST) Sep 17

ತುಮಕೂರು-ದಾವಣಗೆರೆ ಹೊಸ ರೈಲ್ವೆ ಮಾರ್ಗ ಕಾಮಗಾರಿ - ನೈಋತ್ಯ ರೈಲ್ವೆಯಿಂದ ಹಲವು ರೈಲುಗಳ ಸಂಚಾರ ರದ್ದು!

ತುಮಕೂರು-ದಾವಣಗೆರೆ ಹೊಸ ಬ್ರಾಡ್‌ಗೇಜ್ ರೈಲು ಮಾರ್ಗ ನಿರ್ಮಾಣದ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆಯು ಸೆಪ್ಟೆಂಬರ್ ಮತ್ತು ಅಕ್ಟೋಬರ್ 2026ರಲ್ಲಿ ಹಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಿದೆ. ತೊಳಹುಣಸೆ ಯಾರ್ಡ್‌ನಲ್ಲಿ ಸಂಪರ್ಕ ಜೋಡಣೆ ಕಾರ್ಯ ನಡೆಯುತ್ತಿರುವುದರಿಂದ ಕೆಲವು ರೈಲುಗಳ ಮಾರ್ಗ ಬದಲಾವಣೆ ಹಾಗೂ ವೇಳಾಪಟ್ಟಿಯಲ್ಲಿ ವ್ಯತ್ಯಯವಾಗಿದೆ.
Read Full Story

06:32 PM (IST) Sep 17

ವೈಟ್‌ ಟಾಪಿಂಗ್‌ಗಾಗಿ ಮೌರ್ಯ ಸರ್ಕಲ್‌-ರೇಸ್‌ಕೋರ್ಸ್‌ ರೋಡ್‌ ಎರಡು ತಿಂಗಳು ಬಂದ್‌

ಬೆಂಗಳೂರಿನ ಮೌರ್ಯ ಸರ್ಕಲ್‌ನಿಂದ ರೇಸ್ ಕೋರ್ಸ್ ರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಆರಂಭವಾಗಿದೆ. ಇದರಿಂದಾಗಿ ಮುಂದಿನ ಎರಡು ತಿಂಗಳ ಕಾಲ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ.

Read Full Story

06:21 PM (IST) Sep 17

ಭದ್ರಾ ಅಚ್ಚುಕಟ್ಟು ರೈತರಿಗೆ ಗುಡ್‌ನ್ಯೂಸ್, 'ಷರತ್ತುಗಳೊಂದಿಗೆ' ಮಧ್ಯ ರಾತ್ರಿಯಿಂದಲೇ ಕಾಲುವೆಗಳಿಗೆ ನೀರು

ಕೊನೆಗೂ ರೈತರ ಪ್ರತಿಭಟನೆಗೆ ರಾಜ್ಯ ಸರ್ಕಾರ ಮಣಿದಿದೆ. ದಾಣಗೆರೆ ಜಿಲ್ಲೆಯ ಆಗ್ರಹಕ್ಕೆ ಮಣಿದಿರುವ ಕರ್ನಾಟಕ ನೀರಾವರಿ ನಿಗಮ ನಿಯಮಿತ, ಭದ್ರಾ ಬಲದಂಡೆ, ಎಡದಂಡೆ, ಗೊಂದಿ ನಾಲೆಯ ವಿತರಣಾ ನಾಲೆ, ಸಿದ್ಧನಾಲೆಗಳ ಮೂಲಕ ನೀರು ಹರಿಸಲು ಸೂಚಿಸಿದೆ. ಈ ಕುರಿತ ಕಂಪ್ಲೀಟ್ ಸ್ಟೋರಿ ಇಲ್ಲಿದೆ.

Read Full Story

06:12 PM (IST) Sep 17

ಮೆಜೆಸ್ಟಿಕ್‌ನಲ್ಲಿ ನೈಜ ಬದುಕು ಕಂಡ ಮೋನಿಷಾ - 'ಸಿಟಿ ಲೈಟ್ಸ್' ಕುರಿತು ವಿನಯ್ ಹಂಚಿಕೊಂಡ ಅನುಭವವೇನು?

ವಿನಯ್ ರಾಜ್‌ಕುಮಾರ್ ಮತ್ತು ಮೋನಿಷಾ ವಿಜಯ್ ಕುಮಾರ್ ಅಭಿನಯದ ‘ಸಿಟಿ ಲೈಟ್ಸ್’ ಸಿನಿಮಾ ಬೆಂಗಳೂರಿನ ಮತ್ತೊಂದು ಮುಖವನ್ನು ತೆರೆದಿಡಲಿದೆ. ಸಿನಿಮಾ ಕುರಿತು ಇಬ್ಬರೂ ಹಂಚಿಕೊಂಡ ಅನುಭವ ಇಲ್ಲಿದೆ.

Read Full Story

05:54 PM (IST) Sep 17

ನಾನು ಈಗ ಸಿಎಂ ಅಲ್ಲ, ನನ್ನ ಮಾತು ನಡೆಯಲ್ಲ.. ಹುಷಾರಾಗಿ ಹೆಜ್ಜೆ ಇಡಿ; ಸಿದ್ದರಾಮಯ್ಯ ಮಾರ್ಮಿಕ ನುಡಿ

ಎಸ್ ಸಿ, ಎಸ್ ಟಿ ಪತ್ರಿಕಾ ಸಂಪಾದಕರ ಸಂಘದ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಭಾಗವಹಿಸಿ ಪತ್ರಿಕಾರಂಗದಲ್ಲಿ ಹಿಂದುಳಿದ ವರ್ಗಗಳ ಪ್ರಾತಿನಿಧ್ಯದ ಕೊರತೆ ಬಗ್ಗೆ ಮಾತನಾಡಿದರು.

Read Full Story

05:53 PM (IST) Sep 17

IMD - ಪ್ರವಾಹ Vs ಬರದ ಮುನ್ಸೂಚನೆ; ರಾಜ್ಯದಲ್ಲಿ ದಿಢೀರ್ ಬದಲಾಗಲಿದೆ ಹವಾಮಾನ ಚಿತ್ರಣ! ತಜ್ಞರು ಹೇಳಿದ್ದೇನು?

ಭಾರತದಲ್ಲಿ ಮಾನ್ಸೂನ್ ಹವಾಮಾನವು ದಿಢೀರ್ ಬದಲಾಗುತ್ತಿದ್ದು, ಒಂದೆಡೆ ಭಾರಿ ಪ್ರವಾಹ ಮತ್ತು ಇನ್ನೊಂದೆಡೆ ತೀವ್ರ ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ರಾಜ್ಯದ ಹವಮಾನದ ಕುರಿತು ಸಮಗ್ರವಾಗಿ ತಂತ್ರಜ್ಞವೇನು? ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

Read Full Story

05:47 PM (IST) Sep 17

ನವೆಂಬರ್‌ ವೇಳೆಗೆ ಎತ್ತಿನಹೊಳೆ ನೀರು ತುಮಕೂರಿಗೆ ತರುತ್ತೇವೆ; ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ

ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಗುಬ್ಬಿ ತಾಲೂಕಿನಲ್ಲಿ ನಡೆಯುತ್ತಿರುವ ಎತ್ತಿನಹೊಳೆ ಯೋಜನೆಯ ಕಾಮಗಾರಿಯನ್ನು ಪರಿಶೀಲಿಸಿದರು. ನವೆಂಬರ್ ಅಂತ್ಯದೊಳಗೆ ತುಮಕೂರಿಗೆ ನೀರು ಹರಿಸುವ ಭರವಸೆ ನೀಡಿದ ಅವರು, ಅರಣ್ಯ ಇಲಾಖೆಯ ಅನುಮತಿ ಶೀಘ್ರದಲ್ಲೇ ದೊರೆಯಲಿದೆ ಎಂದು ಸ್ಪಷ್ಟಪಡಿಸಿದರು.

Read Full Story

05:45 PM (IST) Sep 17

ಹೋರಾಟಗಾರರ ತ್ಯಾಗ ಮುಂದಿನ ಪೀಳಿಗೆಗೆ ತಿಳಿಯಬೇಕು - 'ಕನ್ನಡಪ್ರಭ' ಪುರವಣಿ ಬಿಡುಗಡೆ ಮಾಡಿದ ಜನಾರ್ದನ ರೆಡ್ಡಿ

ಗಂಗಾವತಿಯಲ್ಲಿ 79ನೇ ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ‘ಸುವರ್ಣ ನ್ಯೂಸ್’ ಮತ್ತು ‘ಕನ್ನಡಪ್ರಭ’ ಹೊರತಂದ ‘ಹೋರಾಟಗಾರರ ಇತಿಹಾಸದ ಕಲ್ಯಾಣ ಉತ್ಸವ’ ಪುರವಣಿಯನ್ನು ಶಾಸಕ ಜನಾರ್ದನ ರೆಡ್ಡಿ ಬಿಡುಗಡೆ ಮಾಡಿದರು.

Read Full Story

05:28 PM (IST) Sep 17

ಹೊಸ ದಂಪತಿಯ ಕಥೆಗೆ ಸಖತ್ ಟ್ವಿಸ್ಟ್ - ಡಾಲಿ ಧನಂಜಯ 'ಹೆಗ್ಗಣ ಮುದ್ದು' ಟ್ರೇಲರ್‌ನಲ್ಲಿ ಏನಿದೆ?

‘ಹೆತ್ತವರಿಗೆ ಹೆಗ್ಗಣ ಮುದ್ದು’ ಎಂಬ ಗಾದೆಯಿಂದ ಸ್ಫೂರ್ತಿ ಪಡೆದ ‘ಹೆಗ್ಗಣ ಮುದ್ದು’ ಟ್ರೇಲರ್ ಬಿಡುಗಡೆಯಾಗಿದೆ. ಪೂರ್ಣ ಮೈಸೂರು-ಅದಿತಿ ಸಾಗರ್ ಜೋಡಿಯ ಈ ಕೌಟುಂಬಿಕ ಡ್ರಾಮಾ ಮತ್ತು ಥ್ರಿಲ್ಲರ್ ಸಿನಿಮಾ ಸೆ.25ಕ್ಕೆ ರಿಲೀಸ್.

Read Full Story

05:22 PM (IST) Sep 17

UPI - ಸರ್ಕಾರಕ್ಕೆ ಹೋದದ್ದು ಸಣ್ಣ ಪಾಲು! ಯುಪಿಐ 'MDR'ನ ಅಸಲಿ ಲಾಭ ತಲುಪುತ್ತಿರೋದು ಆ ದೈತ್ಯರಿಗೆ! ಶಾಕಿಂಗ್ ಮಾಹಿತಿ ರಿವೀಲ್!

2026ರಿಂದ ಜಾರಿಗೆ ಬರಲಿರುವ ಯುಪಿಐ ಹೊಸ ನಿಯಮದಂತೆ 2,000 ರೂ. ಮೇಲ್ಪಟ್ಟ ಪಾವತಿಗಳಿಗೆ ಎಂಡಿಆರ್ ಶುಲ್ಕ ವಿಧಿಸಲಾಗುತ್ತದೆ. ಈ ಶುಲ್ಕದ ಬಹುಪಾಲು ಲಾಭ ಸರ್ಕಾರಕ್ಕಲ್ಲ, ಬದಲಾಗಿ ಆ ದೈತ್ಯರ ಜೇಬಿಗೆ ಹೋಗಲಿದೆ ಅದರ ಸಂಪೂರ್ಣ ವಿವರ ಇಲ್ಲಿದೆ.

Read Full Story

05:05 PM (IST) Sep 17

Bengaluru - GST ಕಚೇರಿಯಲ್ಲಿ ಲೋಕಾಯುಕ್ತರ ಮಹತ್ವದ ಬೇಟೆ, ಲಕ್ಷ ಲಕ್ಷ ಲಂಚ ಸ್ವೀಕರಿಸುತ್ತಿದ್ದ ಸೂಪರಿಂಟೆಂಡೆಂಟ್ ಅರೆಸ್ಟ್

ಬೆಂಗಳೂರಿನ ಜಿ.ಎಸ್.ಟಿ ಕಚೇರಿಯಲ್ಲಿ ಸೂಪರಿಂಟೆಂಡೆಂಟ್ ಮೋಹಿತ್ ಪ್ರತಾಪ್ ಸಿಂಗ್ 8 ಲಕ್ಷ ರೂ. ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕಬ್ಬಿಣ ಅಂಗಡಿ ಮಾಲೀಕರಿಂದ ತೆರಿಗೆ ನೆಪದಲ್ಲಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾಗ ಈ ಕಾರ್ಯಾಚರಣೆ ನಡೆದಿದೆ. ಭ್ರಷ್ಟ ಅಧಿಕಾರಿಯನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಲಾಗಿದೆ.
Read Full Story

04:21 PM (IST) Sep 17

ಇಂದಿರೆಯ ಸ್ಥಳದಲ್ಲಿ ಇನ್ನು ನಂದಿನಿಗೂ ಜಾಗ, ಬೆಂಗಳೂರಿನ 79 ಇಂದಿರಾ ಕ್ಯಾಂಟೀನ್‌ನಲ್ಲಿ ನಂದಿನಿ ಬೂತ್‌!

ಬೆಂಗಳೂರಿನ ಇಂದಿರಾ ಕ್ಯಾಂಟೀನ್‌ಗಳ ಆವರಣದಲ್ಲಿ ಶೀಘ್ರದಲ್ಲೇ ನಂದಿನಿ ಹಾಲಿನ ಮಳಿಗೆಗಳು ಆರಂಭವಾಗಲಿವೆ. ಇದಕ್ಕಾಗಿ 79 ಕ್ಯಾಂಟೀನ್ ಆವರಣಗಳಲ್ಲಿ ತಲಾ 100 ಚದರ ಅಡಿ ಜಾಗವನ್ನು ಬಮುಲ್‌ಗೆ 5 ವರ್ಷಗಳ ಅವಧಿಗೆ ಗುತ್ತಿಗೆ ನೀಡಲು ನಿರ್ಧರಿಸಲಾಗಿದೆ.

Read Full Story

04:20 PM (IST) Sep 17

ವಿಜಯ್-ರಶ್ಮಿಕಾ ಫ್ಯಾನ್ಸ್‌ಗೆ ಗುಡ್‌ನ್ಯೂಸ್ - 'ರಣಬಾಲಿ' ಶೂಟಿಂಗ್ ಕಂಪ್ಲೀಟ್, ಈ ದಿನದಂದು ರಿಲೀಸ್!

ಮದುವೆ ಬಳಿಕ ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಜೋಡಿಯ ಮೊದಲ ಸಿನಿಮಾ ‘ರಣಬಾಲಿ’ ಶೂಟಿಂಗ್ ಕಂಪ್ಲೀಟ್ ಆಗಿದೆ. ಅಕ್ಟೋಬರ್ 16ಕ್ಕೆ ಸಿನಿಮಾ ರಿಲೀಸ್ ಆಗಲಿದ್ದು, 29 ದಿನಗಳ ಕೌಂಟ್‌ಡೌನ್ ಶುರುವಾಗಿದೆ.

Read Full Story

04:15 PM (IST) Sep 17

Karnataka Govt - ಪಡಿತರ ಚೀಟಿ ಇ-ಕೆವೈಸಿ ಹಾಗೂ ರೇಷನ್ ಪಡೆಯುವವರಿಗೆ ಕಾದಿದೆ ಅಚ್ಚರಿ!

ರಾಜ್ಯದ ಪಡಿತರ ಚೀಟಿದಾರರಿಗೆ ಅನುಕೂಲವಾಗುವಂತೆ ಈ ಎರಡು ಮಹತ್ವದ ನಿರ್ಧಾರಗಳನ್ನು ಸಚಿವ ರಿಜ್ವಾನ್ ಅರ್ಷದ್ ಪ್ರಕಟಿಸಿದ್ದಾರೆ. ಆ ಎರಡು ಪ್ರಮುಖ ನಿರ್ಧಾರಗಳು ಏನು? ಎನ್ನುವುದನ್ನು ನೋಡೋಣ ಬನ್ನಿ.

Read Full Story

04:01 PM (IST) Sep 17

ವಿಶ್ವದಲ್ಲಿ ಇದೇ ಮೊದಲು! ಸಂಗಾತಿಯ ಹುಡುಕಾಟದಲ್ಲಿ 4,000KM ಪ್ರಯಾಣಿಸಿದ ಕಾಡು ನಾಯಿಗಳು

ಜಾಂಬಿಯಾದಲ್ಲಿ ಆಫ್ರಿಕನ್ ಕಾಡು ನಾಯಿಗಳು ಸಂಗಾತಿಯನ್ನು ಹುಡುಕಿಕೊಂಡು ಬರೋಬ್ಬರಿ 4 ಸಾವಿರ ಕಿಲೋಮೀಟರ್‌ಗಳ ಸುದೀರ್ಘ ಪ್ರಯಾಣವನ್ನು ಪೂರ್ಣಗೊಳಿಸಿವೆ. ಎಂಟು ತಿಂಗಳ ಈ ಪಯಣದಲ್ಲಿ ಅವು ಮನುಷ್ಯರ ಸಂಪರ್ಕಕ್ಕೆ ಸಿಗದೆ, ಬೇಟೆಗಾರರ ಬಲೆಗಳಂತಹ ಸವಾಲುಗಳನ್ನು ಎದುರಿಸಿವೆ.

Read Full Story

03:59 PM (IST) Sep 17

10 ವರ್ಷಗಳಲ್ಲಿ AIಯಿಂದ ಮಾನವ ಕುಲವೇ ಅಂತ್ಯ? - ಆಂಥ್ರೋಪಿಕ್‌ ರಿಸರ್ಚರ್‌ ಬಳಿಕ ಜಗತ್ತಿಗೆ ಶಾಕಿಂಗ್ ಎಚ್ಚರಿಕೆ ನೀಡಿದ ಎಐ ಗಾಡ್‌ಫಾದರ್

ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದಿಂದ ಮುಂದಿನ 10 ವರ್ಷಗಳಲ್ಲಿ ಮಾನವಕುಲವೇ ನಾಶವಾಗುವ ಶೇ. 10ರಷ್ಟು ಸಾಧ್ಯತೆಯಿದೆ ಎಂದು ಎಐ ಪಿತಾಮಹ ಜೆಫ್ರಿ ಹಿಂಟನ್ ಎಚ್ಚರಿಸಿದ್ದಾರೆ.

Read Full Story

03:36 PM (IST) Sep 17

ವಿಜಯಪುರದಲ್ಲಿ ಮತ್ತೆ ಭೂಕಂಪ - ಎದ್ದು-ಬಿದ್ದು ಮನೆಯಿಂದ ಓಡಿಬಂದ ಮಂದಿ! ಕಾದಿದೆಯಾ ಗಂಡಾಂತರ?

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದ ಸುತ್ತಮುತ್ತ ಮತ್ತೆ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 3.6 ತೀವ್ರತೆ ದಾಖಲಾಗಿದ್ದು, ಪದೇ ಪದೇ ಭೂಮಿ ಕಂಪಿಸುತ್ತಿರುವುದರಿಂದ ಜನರು ತೀವ್ರ ಆತಂಕಕ್ಕೊಳಗಾಗಿದ್ದಾರೆ.

Read Full Story

03:30 PM (IST) Sep 17

ಪಾತ್ರಗಳು ಬದಲಾದವು, ತಲೆಮಾರುಗಳು ಬದಲಾದವು - ಆದರೆ ಅನಂತ್ ನಾಗ್ ಯಾಕೆ ಬದಲಾಗಲಿಲ್ಲ?

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಅನಂತ್ ನಾಗ್ ಅವರ ರಂಗಭೂಮಿಯಿಂದ ಚಿತ್ರರಂಗದವರೆಗಿನ ಐದು ದಶಕಗಳ ಪಯಣ, ‘ಸಂಕಲ್ಪ’ದಿಂದ ‘ಮಾಲ್ಗುಡಿ ಡೇಸ್’ವರೆಗಿನ ಅಭಿನಯ ಮತ್ತು ಮರೆಯಲಾಗದ ಪಾತ್ರಗಳ ಕಥೆ ಇಲ್ಲಿದೆ.

Read Full Story

03:13 PM (IST) Sep 17

ಕಣ್ಣಿನಲ್ಲೇ ಮೌನವನ್ನೂ ದಾಟಿಸಬಲ್ಲ ಆಕಾಶ ಪ್ರತಿಭೆ - ಅನಂತ್ ನಾಗ್ ಅವರ ಈ ಕಥೆ ನಿಮಗೆ ಗೊತ್ತೇ?

ಕಣ್ಣಮಿಂಚು ಮತ್ತು ಮಂದಹಾಸದಲ್ಲೇ ಭಾವನೆ ಕಟ್ಟಿಕೊಟ್ಟ ಅನಂತ್ ನಾಗ್ ಅವರ ಅಪರೂಪದ ಸಿನಿಪಯಣ. ‘ಗೌರಿ ಗಣೇಶ’ದಿಂದ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ವರೆಗೆ ಅವರ ಮರೆಯಲಾಗದ ಪಾತ್ರಗಳ ಕಥೆ ಇಲ್ಲಿದೆ.

Read Full Story

02:56 PM (IST) Sep 17

ಪ್ರಾಣ ತೆಗೆಯೋ ಹಾವಿನ ವಿಷವೇ ಸಂಜೀವಿನಿ! ಈ ವಿಷದಿಂದ ತಯಾರಾಗುತ್ತೆ ಜೀವ ಉಳಿಸುವ ಔಷಧಿ..! ಹಾರ್ಟ್ ಅಟ್ಯಾಕ್‌ಗೂ ರಾಮಬಾಣ

ಹಾವು ಕಚ್ಚಿದರೆ ಪ್ರಾಣ ಹೋಗುತ್ತೆ ಅನ್ನೋ ಭಯ ಎಲ್ಲರಿಗೂ ಇರುತ್ತೆ. ಆದ್ರೆ ಅದೇ ಹಾವಿನ ವಿಷ ಈಗ ಎಷ್ಟೋ ಜನರ ಪ್ರಾಣ ಉಳಿಸೋ ಸಂಜೀವಿನಿಯಾಗಿ ಬದಲಾಗಿದೆ. ವೈದ್ಯಕೀಯ ಲೋಕದಲ್ಲಿ ನಡೆಯುತ್ತಿರುವ ಹೊಸ ಸಂಶೋಧನೆಗಳಿಂದ ಹಾವಿನ ವಿಷ ಬಳಸಿ ಹಲವು ಕಾಯಿಲೆಗಳಿಗೆ ಮದ್ದು ತಯಾರಿಸುತ್ತಿದ್ದಾರೆ.

Read Full Story

01:28 PM (IST) Sep 17

Bengaluru - ಪತ್ನಿಗೆ ಆಸಿಡ್‌ ಹಾಕಿ ಮಚ್ಚಿನಿಂದ ಮನಬಂದಂತೆ ಕೊಚ್ಚಿದ ಪತಿ; ಬೆಂಗಳೂರಿನಲ್ಲಿ ಭೀಕರ ಘಟನೆ

ಬೆಂಗಳೂರಿನ ಜೆಪಿ ನಗರದಲ್ಲಿ ಪತಿಯೇ ತನ್ನ ಪತ್ನಿಯ ಮೇಲೆ ಆಸಿಡ್ ಎರಚಿ, ಮಚ್ಚಿನಿಂದ ಭೀಕರವಾಗಿ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಗಂಭೀರವಾಗಿ ಗಾಯಗೊಂಡಿರುವ ನರ್ಸ್ ಮಧುಮಿತಾಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳೀಯರು ಆರೋಪಿ ಪತಿ ವೆಂಕಟೇಶ್‌ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
Read Full Story

12:11 PM (IST) Sep 17

Jupiter Transit - ನಿಮ್ಮ ಬದುಕಿನಲ್ಲಿ ಈಗ ಗುರು ಕೃಪೆ ಶುರುವಾಗಿದೆ, ಈ 5 ರಾಶಿಯವರ ಲೈಫ್‌ಗೆ ಬಿಗ್‌ ಟರ್ನಿಂಗ್‌

Jupiter Transit: ಜ್ಯೋತಿಷ್ಯದ ಪ್ರಕಾರ ಗರು ಕೃಪೆ ಎಲ್ಲರಿಗೂ, ಯಾವಾಗಲೂ ಸಿಗೋದಿಲ್ಲ. ಅದಕ್ಕೆ ಅದರದ್ದೇ ಆದ ಟೈಮ್‌ ಇದೆ. ಇದೀಗ 5 ರಾಶಿಯವರ ಲೈಫ್‌ ಬದಲಾಗುವ ಸಂದರ್ಭ ಬಂದಿದೆ. ಅವಕಾಶಗಳು ಹುಡುಕಿಕೊಂಡು ಬಂದಿವೆ. ಕೆಲಸ, ಬ್ಯುಸಿನೆಸ್‌, ಹಣಕಾಸು, ಶಿಕ್ಷಣ ಕ್ಷೇತ್ರದಲ್ಲಿ ಬಿಗ್‌ ಟರ್ನಿಂಗ್‌ ಸಿಗಲಿದೆ.

Read Full Story

11:53 AM (IST) Sep 17

E-KYC ಮಾಡದಿದ್ರೆ ರೇಷನ್ ಬಂದ್​​! ಸೆ.30 ಕೊನೆ ದಿನ- ಮನೆಯಿಂದ್ಲೇ ಮಾಡೋದು ಹೇಗೆ? ಎಲ್ಲಾ ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

ಪಡಿತರ ಚೀಟಿದಾರರು ಸೆಪ್ಟೆಂಬರ್ 30ರ ಒಳಗೆ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ. ತಪ್ಪಿದಲ್ಲಿ ರೇಷನ್ ಮತ್ತು ಗೃಹಲಕ್ಷ್ಮಿ ಯೋಜನೆಯ ಹಣ ಸ್ಥಗಿತಗೊಳ್ಳುವ ಸಾಧ್ಯತೆಯಿದೆ. ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ಇ-ಕೆವೈಸಿ ಸ್ಟೇಟಸ್ ಚೆಕ್ ಮಾಡಲು ಹಾಗೂ ಅಪ್‌ಡೇಟ್ ಮಾಡಲು ಅವಕಾಶ ಕಲ್ಪಿಸಲಾಗಿದೆ.
Read Full Story

11:41 AM (IST) Sep 17

ಖ್ಯಾತ ಟ್ಯಾಟೂ ಆರ್ಟಿಸ್ಟ್‌ ಘೋಸ್ಟ್ ಅರ್ಜುನ್ ಮೇಲೆ ಪ್ರೇಯಸಿಯಿಂದಲೇ ಭೀಕರ ಹಲ್ಲೆ! ಅಸಲಿಯತ್ತೇನು?

ಖ್ಯಾತ ಟ್ಯಾಟೂ ಆರ್ಟಿಸ್ಟ್ ಘೋಸ್ಟ್ ಅರ್ಜುನ್ ಮೇಲೆ ಸಂಪ್ರೀತಾ ಎಂಬ ಮಹಿಳೆ ರಾಡ್‌ನಿಂದ ಹಲ್ಲೆ ನಡೆಸಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ ಹಣ ಪಡೆದು ವಂಚಿಸಿದ್ದಲ್ಲದೆ, ಬೇರೊಬ್ಬನೊಂದಿಗೆ ಅಶ್ಲೀಲವಾಗಿ ಮಾತನಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಈ ಹಲ್ಲೆ ನಡೆದಿದೆ. ಗಾಯಗೊಂಡಿರುವ ಅರ್ಜುನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಪೊಲೀಸರಿಗೆ ದೂರು ನೀಡಿದ್ದಾರೆ.
Read Full Story

11:27 AM (IST) Sep 17

ರಾಜ್ಯದಲ್ಲಿ ಮತ್ತೆ ಮಳೆ ಚುರುಕು - ಬೆಂಗಳೂರಲ್ಲಿ ಮಳೆ ಎಚ್ಚರಿಕೆ, 13 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್!

ರಾಜ್ಯದಲ್ಲಿ ಒಂದೂವರೆ ತಿಂಗಳ ಬಳಿಕ ಮತ್ತೆ ಮುಂಗಾರು ಚುರುಕಾಗಿದ್ದು, ಮಳೆಯಾಗುವ ಸಾಧ್ಯತೆಯಿದೆ. ಹವಾಮಾನ ಇಲಾಖೆಯು ಬೆಂಗಳೂರು ಸೇರಿದಂತೆ 13 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
Read Full Story

10:50 AM (IST) Sep 17

Airtelನಿಂದ ಅತ್ಯಂತ ಅಗ್ಗದ 77 ದಿನಗಳ ವ್ಯಾಲಿಡಿಟಿ ನೀಡುವ ರೀಚಾರ್ಜ್, ಕಡಿಮೆ ಬೆಲೆಗೆ ಇಷ್ಟೆಲ್ಲಾ ಲಾಭ!

ಏರ್‌ಟೆಲ್ ಈ ರೀಚಾರ್ಜ್ ಪ್ಯಾಕ್ ಮೂಲಕ 77 ದಿನಗಳ ದೀರ್ಘಾವಧಿ ಮಾನ್ಯತೆಯನ್ನು ನೀಡುತ್ತಿದೆ. ಇದರಲ್ಲಿ 6GB ಡೇಟಾ, ಅನಿಯಮಿತ ಕರೆಗಳು, 600 SMS ಮತ್ತು ಸ್ಪ್ಯಾಮ್ ಕರೆಗಳನ್ನು ತಡೆಯುವ ಸೇಫ್ ನೆಟ್‌ವರ್ಕ್ ಸೌಲಭ್ಯವಿದೆ.

Read Full Story

10:48 AM (IST) Sep 17

ಟಿ.ನರಸೀಪುರ ಪೊಲೀಸ್ ವಿವಾದ - ಕೋತಿ ಮೊಸರು ತಿಂದು ಮೇಕೆ ಬಾಯಿಗೆ ವರಿಸಿದಂತಾಯ್ತು ಇನ್‌ಸ್ಪೆಕ್ಟರ್ ಧನಂಜಯ ನಡೆ!

ಟಿ.ನರಸೀಪುರ ಇನ್‌ಸ್ಪೆಕ್ಟರ್ ಧನಂಜಯ ಅವರ ವಿವಾದಾತ್ಮಕ ಹೇಳಿಕೆ ಪ್ರಸಾರ ಮಾಡಿದ ಖಾಸಗಿ ವಾಹಿನಿ ಮಾಲೀಕ ಮಂಜುನಾಥ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ತಮ್ಮ ತಪ್ಪು ಮುಚ್ಚಿಕೊಳ್ಳಲು ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ ಎಂದು ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮಗೆ ನ್ಯಾಯ ಒದಗಿಸುವಂತೆ ಅವರು ವಿಪಕ್ಷ ನಾಯಕರ ಮೊರೆ ಹೋಗಿದ್ದಾರೆ.
Read Full Story

10:30 AM (IST) Sep 17

ಕುಣಿಗಲ್-ಬೆಂಗಳೂರು ಪ್ರಯಾಣಿಕರಿಗೆ ವೋಲ್ವೋ ಬಸ್; ಟಿಕೆಟ್ ದರ ಎಷ್ಟು? ನಿಲುಗಡೆ ಎಲ್ಲೆಲ್ಲಿ?

ಬಿಎಂಟಿಸಿ ಬೆಂಗಳೂರು ಮತ್ತು ಕುಣಿಗಲ್ ಮಾರ್ಗದಲ್ಲಿ 10 ಹೊಸ 'ವಜ್ರ ವಿಸ್ತಾರ' ಎಸಿ ಬಸ್ ಸೇವೆಯನ್ನು ಆರಂಭಿಸಿದೆ. ಮೆಜೆಸ್ಟಿಕ್‌ನಿಂದ ಹೊರಡುವ ಈ ಬಸ್‌ಗಳಿಗೆ 120 ರೂ. ದರ ನಿಗದಿಪಡಿಸಲಾಗಿದ್ದು, ದಿನಕ್ಕೆ 40 ಟ್ರಿಪ್‌ಗಳು ಇರಲಿವೆ.

Read Full Story

10:16 AM (IST) Sep 17

ಮಹಿಳಾಮಣಿಯರ ಕೈಯಲ್ಲಿ ವಿಜಯನಗರದ ಆಡಳಿತ ಚುಕ್ಕಾಣಿ - ಡಿಸಿ, ಎಸ್‌ಪಿ, ಸಿಇಒ, ತಹಸೀಲ್ದಾರ್ ಎಲ್ಲರೂ ಮಹಿಳೆಯರು!

ಹೊಸಪೇಟೆಯಲ್ಲಿ ನಡೆದ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ವಿಜಯನಗರ ಜಿಲ್ಲೆಯ ಪ್ರಮುಖ ಆಯಕಟ್ಟಿನ ಹುದ್ದೆಗಳಲ್ಲಿರುವ ಮಹಿಳಾ ಅಧಿಕಾರಿಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ಜಿಲ್ಲಾಧಿಕಾರಿ, ಎಸ್ಪಿ, ಸಿಇಒ ಸೇರಿದಂತೆ ಐವರು ಮಹಿಳಾ ಅಧಿಕಾರಿಗಳು ಸಚಿವರಿಗೆ ಸಾಥ್ ನೀಡುವ ಮೂಲಕ ಮಹಿಳಾ ಸಬಲೀಕರಣಕ್ಕೆ ಕನ್ನಡಿಯಾದರು. ಜಿಲ್ಲೆಯ ಆಡಳಿತದಲ್ಲಿ ಮಹಿಳೆಯರೇ ಮುಂಚೂಣಿಯಲ್ಲಿರುವುದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
Read Full Story

09:47 AM (IST) Sep 17

ಪೂಜೆಗೆ ಸಜ್ಜಾಗಿದ್ದ ಧಾರವಾಡ ತಹಸೀಲ್ದಾರ್‌ಗೆ ಲೋಕಾ ಶಾಕ್! 5 ಸಾವಿರ ಜನರಿಗೆ ಅನ್ನಸಂತರ್ಪಣೆ ತಯಾರಿ ನಡುವೆ ₹50 ಲಕ್ಷ ಲಂಚ!

ಧಾರವಾಡ ತಹಸೀಲ್ದಾರ್ ಸಚ್ಚಿದಾನಂದ ಕುಚನೂರ ಅವರು 50 ಲಕ್ಷ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಜಮೀನು ಅಭಿವೃದ್ಧಿ ಅನುಮತಿಗಾಗಿ 1 ಕೋಟಿ ರೂ. ಬೇಡಿಕೆ ಇಟ್ಟಿದ್ದ ಅವರು, ಮುಂಗಡ ಹಣ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ. ಮರುದಿನ ಕಚೇರಿಯಲ್ಲಿ ಪೂಜೆ ಮತ್ತು ಅನ್ನಸಂತರ್ಪಣೆಗೆ ಸಿದ್ಧತೆ ನಡೆಸಿದ್ದ ತಹಸೀಲ್ದಾರ್ ಇದೀಗ ವಿಚಾರಣೆ ಎದುರಿಸುತ್ತಿದ್ದಾರೆ.
Read Full Story

09:17 AM (IST) Sep 17

ಲೋಕಸಭೆಗೆ ಸ್ಪರ್ಧಿಸಲ್ಲ, ವಿಧಾನಸಭೆಗೆ ರೆಡಿ; ಜಿ.ಎಂ.ಸಿದ್ದೇಶ್ವರ ಖಡಕ್‌ ಸಂದೇಶ

ಮಾಜಿ ಕೇಂದ್ರ ಸಚಿವ ಜಿ.ಎಂ.ಸಿದ್ದೇಶ್ವರ ಅವರು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಸುಳಿವು ನೀಡಿದ್ದಾರೆ. ಅಲ್ಲದೆ, ರೈತರ ಹಿತದೃಷ್ಟಿಯಿಂದ ಭದ್ರಾ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸುವಂತೆ ಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಒತ್ತಾಯಿಸಿದ್ದಾರೆ. ಇಡಿ ಮತ್ತು ಐಟಿ ದಾಳಿಗಳು ಸ್ವತಂತ್ರ ಸಂಸ್ಥೆಗಳ ಕ್ರಮ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
Read Full Story

08:49 AM (IST) Sep 17

'6 ತಿಂಗಳಲ್ಲಿ ಕೆಲಸ ಮಾಡಿ ಇಲ್ಲದಿದ್ರೆ..' ನೂತನ ಕಾಂಗ್ರೆಸ್ ಜಿಲ್ಲಾಧ್ಯಕ್ಷರಿಗೆ ಹೈಕಮಾಂಡ್ ನೀಡಿದ ಎಚ್ಚರಿಕೆ ಏನು?

ನೂತನ ಕಾಂಗ್ರೆಸ್‌ ಜಿಲ್ಲಾಧ್ಯಕ್ಷರ ಕಾರ್ಯವೈಖರಿಯನ್ನು ಆರು ತಿಂಗಳ ಬಳಿಕ ಮೌಲ್ಯಮಾಪನ ಮಾಡಲಾಗುವುದು ಎಂದು ಕೆ.ಸಿ.ವೇಣುಗೋಪಾಲ್‌ ಎಚ್ಚರಿಸಿದ್ದಾರೆ. ಸರಿಯಾಗಿ ಕೆಲಸ ಮಾಡದವರನ್ನು ಬದಲಿಸಿ ಹೊಸಬರಿಗೆ ಅವಕಾಶ ನೀಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Read Full Story

08:47 AM (IST) Sep 17

ನೆಲಮಂಗಲಕ್ಕೆ ಮೆಟ್ರೋ ಸಂಪರ್ಕ, ಹೊಸ ಫ್ಲೈಓವರ್, ರಸ್ತೆ ಅಗಲೀಕರಣ - ಸಿಎಂ ಡಿಕೆಶಿ ಸ್ಪಂದನೆ

ನೆಲಮಂಗಲದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ನಿವಾರಿಸಲು ಮೆಟ್ರೋ ಸಂಪರ್ಕ, ಫ್ಲೈಓವರ್ ನಿರ್ಮಾಣ ಹಾಗೂ ರಸ್ತೆ ಅಗಲೀಕರಣದ ಕುರಿತು ಶಾಸಕ ಎನ್.ಶ್ರೀನಿವಾಸ್ ಅವರು ಸಿಎಂ ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚಿಸಿದ್ದಾರೆ. ಈ ಅಭಿವೃದ್ಧಿ ಕಾರ್ಯಗಳಿಗೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಅನುದಾನ ಬಿಡುಗಡೆಗೆ ಸಿದ್ಧರಿರುವುದಾಗಿ ಭರವಸೆ ನೀಡಿದ್ದಾರೆ.
Read Full Story

More Trending News