ಬೆಂಗಳೂರು: ಬಸ್, ಮೆಟ್ರೋ ರೈಲು ಪ್ರಯಾಣ ದರದ ನಂತರ ಇದೀಗ ನಗರದಲ್ಲಿ ಸಂಚರಿಸುವ ಆಟೋ ಪ್ರಯಾಣ ದರ ಆಗಸ್ಟ್ 1ರಿಂದ ಅನ್ವಯವಾಗುವಂತೆ ಹೆಚ್ಚಳ ಮಾಡಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ನಗರ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಮೊದಲ 2 ಕಿಮೀಗೆ (ಕನಿಷ್ಠ ದರ) 30 ರು. ಇದ್ದ ಪ್ರಯಾಣ ದರವನ್ನು 36 ರು.ಗೆ ಹೆಚ್ಚಿಸಲಾಗಿದೆ. ಉಳಿದಂತೆ ನಂತರದ ಪ್ರತಿ ಕಿಮೀ ದರವನ್ನು 15 ರು.ನಿಂದ 18ರು.ಗೆ ಏರಿಸಲಾಗಿದೆ. ಕಾಯುವಿಕೆ ದರವನ್ನು ಮೊದಲ 5 ನಿಮಿಷಕ್ಕೆ ಉಚಿತ ಮತ್ತು 5 ನಿಮಿಷದ ನಂತರದ ಪ್ರತಿ 15 ನಿಮಿಷದ ದರವನ್ನು 5 ರು.ನಿಂದ 10 ರು.ಗೆ ಹೆಚ್ಚಳ ಮಾಡಲಾಗಿದೆ. ಹಾಗೆಯೇ, ಪ್ರಯಾಣಿಕರು 20 ಕೆಜಿ ಲಗೇಜನ್ನು ಯಾವುದೇ ಶುಲ್ಕವಿಲ್ಲದೆ ಆಟೋದಲ್ಲಿ ತೆಗೆದುಕೊಂಡು ಹೋಗಬಹುದಾಗಿದ್ದು, 20 ರಿಂದ 50 ಕೆಜಿ ಲಗೇಜಿಗೆ ಪ್ರತಿ 20 ಕೆಜಿ ಲಗೇಜಿಗೆ 10 ರು.ನಂತೆ ಪಾವತಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಈ ಪರಿಷ್ಕೃತ ದರದ ಮೂಲಪಟ್ಟಿಯನ್ನು ಪ್ರತಿ ಆಟೋಗಳು ಪ್ರದರ್ಶಿಸಬೇಕು.
ಹಾಗೆಯೇ, ಅ. 10ರೊಳಗೆ (90 ದಿನ) ಮೀಟರ್‌ನ್ನು ಪರಿಷ್ಕೃತ ದರಕ್ಕೆ ನಿಗದಿ ಮಾಡಿಕೊಳ್ಳಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.
11:15 PM (IST) Jul 15
ಬೆಂಗಳೂರಿನಲ್ಲಿರುವ ತಮ್ಮ ಕಚೇರಿಯನ್ನು ತಲುಪಲು ಪ್ರಯತ್ನಿಸುವಾಗ ಎದುರಿಸಿದ ಸಂಚಾರ ತೊಂದರೆಗಳ ಬಗ್ಗೆ ಸೋಶಿಯಲ್ ಮೀಡಿಯಾ ಯೂಸರ್ ಒಬ್ಬರು ಇತ್ತೀಚೆಗೆ ಪೋಸ್ಟ್ ಮಾಡಿದ್ದರು. ಇದರ ಬಗ್ಗೆ ಚರ್ಚೆ ಆರಂಭವಾಗಿದೆ.
10:16 PM (IST) Jul 15
09:51 PM (IST) Jul 15
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಪ್ರಸ್ತಾವಿತ ಏರೋಸ್ಪೇಸ್ ಪಾರ್ಕ್‌ಗಾಗಿ ಭೂಸ್ವಾಧೀನ ಪ್ರಕ್ರಿಯೆ ರದ್ದುಗೊಳಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
08:40 PM (IST) Jul 15
08:11 PM (IST) Jul 15
07:37 PM (IST) Jul 15
07:27 PM (IST) Jul 15
07:15 PM (IST) Jul 15
ವಿಯೆಟ್ನಾಂ ಮೂಲದ ವಿನ್‌ಫಾಸ್ಟ್ ಕಾರು ಈಗಾಗಲೇ ಭಾರತಕ್ಕೆ ಎಂಟ್ರಿಕೊಟ್ಟಿದೆ. ಇದೀಗ ವಿನ್‌ಫಾಸ್ಟ್ VF 6 ಹಾಗೂ VF 7 ಕಾರಿನ ಬುಕಿಂಗ್ ಆರಂಭಗೊಂಡಿದೆ. ಕೇವಲ 21,000 ರೂಪಾಯಿಗೆ ವಿನ್‌ಫಾಸ್ಟ್ ಕಾರು ನಿಮ್ಮದಾಗಿಸಿಕೊಳ್ಳಬಹುದು.
06:42 PM (IST) Jul 15
ಮಾದಕತೆಯಿಂದಲೇ ಸದ್ದು ಮಾಡ್ತಿರೋ ನಟಿ ನೇಹಾ ಧೂಪಿಯಾ, ನಗ್ನ ದೇಹ ಹಾಗೂ ಲೈಂ*ಗಿಕ ಕ್ರಿಯೆಯನ್ನು ಶಾರುಖ್ ಖಾನ್ಗೆ ಹೋಲಿಸಿದ್ದಾರೆ. ಅವರು ಹೇಳಿದ್ದೇನು ನೋಡಿ!
06:38 PM (IST) Jul 15
06:36 PM (IST) Jul 15
ಮೊಬೈಲ್ ಬಳಕೆಯಿಂದ ಮಕ್ಕಳ ಕಣ್ಣು ಕುರುಡಾಗುವ ಬಗ್ಗೆ ವಂದನಾ ರೈ ಟೀಚರ್ ಮಾಡಿದ್ದ ವಿಡಿಯೋಗೆ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅವರು ಕ್ಷಮೆ ಯಾಚಿಸಿದ್ದಾರೆ. ವಿಡಿಯೋವನ್ನು ಡಿಲೀಟ್ ಮಾಡಿದ್ದು, ಅವರ ಮುಂದಿನ ಹೇಳಿಕೆ ದಾಖಲಿಸಿದ್ದಾರೆ.
06:35 PM (IST) Jul 15
ಸುರಂಗ ರಸ್ತೆ ಯೋಜನೆಯ ವಿರುದ್ಧ ಸಾರ್ವಜನಿಕ ಟೀಕೆಗಳು ಹೆಚ್ಚುತ್ತಿರುವ ನಡುವೆಯೇ, ಕಾಂಗ್ರೆಸ್ ನೇತೃತ್ವದ ಸರ್ಕಾರವು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನೆಚ್ಚಿನ ಯೋಜನೆಯನ್ನು ಮುಂದುವರಿಸಲು ನಿರ್ಧರಿಸಿದೆ.
06:30 PM (IST) Jul 15
ಇತ್ತೀಚೆಗಷ್ಟೇ ಪಂಚಾಯತ್ ಸೀಸನ್ 4 ಬಿಡುಗಡೆಯಾಗಿದೆ. ಭಾರಿ ಜನಪ್ರಿಯತೆ ಹಾಗೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿರುವ ಪಂಚಾಯತ್ ಸೀರಿಸ್‌ನ ನಟ ಹೃದಯಾಘಾತದಿಂದ ಆಸ್ಪತ್ರೆ ದಾಖಲಾಗಿದ್ದಾರೆ.
06:18 PM (IST) Jul 15
ನಾವು ಪ್ರತಿನಿತ್ಯ ಮಾಡುವ ಸ್ನಾನದ ಕ್ರಮದಿಂದಲೂ ಅನಾರೋಗ್ಯ ಸಮಸ್ಯೆ ತಂದುಕೊಳ್ಳುತ್ತಿದ್ದೇವೆ ಎನ್ನುವುದು ಗೊತ್ತಿದ್ಯಾ? ಶವರ್ನಲ್ಲಿ ಸ್ನಾನ ಮಾಡುವ ಪ್ರತಿಯೊಬ್ಬರೂ ಈ ವೈದ್ಯೆಯ ಮಾತು ಕೇಳಲೇಬೇಕು.
05:45 PM (IST) Jul 15
ನಿಸ್ಸಾನ್ ಮ್ಯಾಗ್ನೈಟ್ ಭಾರತದಲ್ಲಿ 2 ಲಕ್ಷ ಮಾರಾಟದ ಮೈಲಿಗಲ್ಲನ್ನು ದಾಟಿದೆ. ಈ ಸಂಭ್ರಮದಲ್ಲಿರುವ ನಿಸ್ಸಾನ್ ಇಂಡಿಯಾ ಇದೀಗ ಬರೋಬ್ಬರಿ 86,000 ರೂಪಾಯಿ ಡಿಸ್ಕೌಂಟ್ ಆಫರ್ ಘೋಷಿಸಲಾಗಿದೆ.
05:31 PM (IST) Jul 15
05:24 PM (IST) Jul 15
05:23 PM (IST) Jul 15
05:05 PM (IST) Jul 15
04:49 PM (IST) Jul 15
ಬೆಂಗಳೂರಿನ ಎಥರ್ ಸ್ಕೂಟರ್ ಕಂಪನಿ ಸಹ ಸಂಸ್ಥಾಪಕ ಬೆಂಗಳೂರಿನ ಆಟೋ ಹಾಗೂ ಕ್ಯಾಬ್ ಪ್ರಯಾಣ ದರ ಪ್ರಶ್ನಿಸಿದ್ದಾರೆ. ಕಾರಣ 4 ಕಿಲೋಮೀಟರ್ ದೂರದ ಕಚೇರಿಗೆ ತೆರಳಲು ಆಟೋ ಬುಕ್ ಮಾಡಲು 175 ರೂಪಾಯಿ, ಬಿಎಂಟಿಸಿ ಬಸ್‌ನಲ್ಲಿ 12 ರೂಪಾಯಿ .
04:45 PM (IST) Jul 15
ಟಿಕೆಟ್ ಬೆಲೆಗಿಂದ ಒಂದು ರೂಪಾಯಿ ಹೆಚ್ಚಿಗೆ ಪಡೆದ KSRTC ವಿರುದ್ಧ ವಕೀಲರೊಬ್ಬರು ಕೋರ್ಟ್ ಮೆಟ್ಟಿಲೇರಿದ್ದು, ಸಾರಿಗೆ ಸಂಸ್ಥೆಗೆ 30 ಸಾವಿರ ರೂಪಾಯಿ ದಂಡ ವಿಧಿಸಿದೆ ಕೋರ್ಟ್. ಏನಿದು ಕುತೂಹಲದ ಸ್ಟೋರಿ ನೋಡಿ...
04:09 PM (IST) Jul 15
04:02 PM (IST) Jul 15
ಮಹಾನಗರ ಹೊರತುಪಡಿಸಿ ಭಾರತದ ಇತರ ನಗರಗಳಲ್ಲಿ ಯಾವ ನಗರ ಹೆಚ್ಚು ಉದ್ಯೋಗವಕಾಶ, ಆರ್ಥಿಕವಕಾಶ ಒದಗಿಸುವ ಭಾರತದ ಟಾಪ್ 10 ನಗರ ಪಟ್ಟಿ ಬಿಡುಗಡೆಯಾಗಿದೆ. ಲಿಂಕ್ಡ್ ಇನ್ ಸಿಟೀಸ್ ಆನ್ ದಿ ರೈಸ್ ಪಟ್ಟಿಯಲ್ಲಿ ಸ್ಥಾನ ಪಡೆದ ನಗರ ಯಾವುದು, ಕರ್ನಾಟಕದ ನಗರವಿದೆಯಾ?
03:58 PM (IST) Jul 15
ಋಣ ಎಲ್ಲಿ, ಹೇಗೆ ಯಾವ ರೂಪದಲ್ಲಿ ಇರುತ್ತದೆ ಎಂದು ಹೇಳಲಾಗದು ಎನ್ನುವುದಕ್ಕೆ ಈ ಸ್ಟೋರಿ ಉದಾಹರಣೆ. ಮದುವೆ ಸ್ವರ್ಗದಲ್ಲಿಯೇ ನಡೆದಿರುತ್ತದೆ ಎನ್ನುವುದಕ್ಕೂ ಇದನ್ನು ಉದಾಹರಣೆಯಾಗಿ ಬಳಸಬಹುದು. ಗುಜರಾತ್ನ ಯುವಕ, ಫಿಲಿಪ್ಪೀನ್ಸ್ ಯುವತಿ ಲವ್ಸ್ಟೋರಿ ಕೇಳಿ...
03:25 PM (IST) Jul 15
ಕೋಟ್ಯಾಂತರ ಭಾರತೀಯರ ಪ್ರಾರ್ಥನೆ ಫಲಿಸಿದೆ. ಭಾರತದ ರಾಜತಾಂತ್ರಿಕ ಮಾತುಕತೆ ಯಶಸ್ವಿಯಾಗಿದೆ. ಇದೀಗ ಯೆಮೆನ್ ದೇಶ ಕೇರಳದ ನರ್ಸ್ ನಿಮಿಷ ಪ್ರಿಯಾಗೆ ವಿಧಿಸಿದ್ದ ಗಲ್ಲು ಶಿಕ್ಷೆಗೆ ತಾತ್ಕಾಲಿಕ ಬ್ರೇಕ್ ಹಾಕಿದೆ.
02:59 PM (IST) Jul 15
02:21 PM (IST) Jul 15
ನನ್ನ ಇಲಾಖೆ ಬಗ್ಗೆ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಬಹಳ ಖುಷಿ ಪಟ್ರು. ನನಗೆ ಏನು ಟಾರ್ಗೆಟ್ ಕೊಟ್ಟಿದ್ರು ಅದಕ್ಕಿಂತ ಹೆಚ್ಚಾಗಿ ಮಾಡ್ತಿದ್ದೇನೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
02:20 PM (IST) Jul 15
ಮೂಡುಬಿದಿರೆಯ ಖಾಸಗಿ ಕಾಲೇಜೊಂದರ ವಿದ್ಯಾರ್ಥಿನಿಯ ಮೇಲೆ ಮೂವರು ಉಪನ್ಯಾಸಕರು ಅತ್ಯಾಚಾರವೆಸಗಿ, ವಿಡಿಯೋ ಮತ್ತು ಫೋಟೋಗಳಿಂದ ಬೆದರಿಸಿ ಪದೇ ಪದೇ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಸಂತ್ರಸ್ತೆಯ ಪೋಷಕರು ಮಹಿಳಾ ಆಯೋಗಕ್ಕೆ ದೂರು ನೀಡಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.
02:03 PM (IST) Jul 15
ಭಾರತದಲ್ಲಿ ಇದೇ ಮೊದಲ ಬಾರಿಗೆ ಎಲಾನ್ ಮಸ್ಕ್ ಒಡೆತನದ ಟೆಸ್ಲಾ ಎಲೆಕ್ಟ್ರಿಕ್ ಕಾರು ಶೋ ರೂಂ ಉದ್ಘಾಟನೆಯಾಗಿದೆ. ಇದರ ಜೊತೆಗೆ ಬೆಲೆಯೂ ಬಹಿರಂಗವಾಗಿದೆ. 622 ಕಿಲೋಮೀಟರ್ ಮೈಲೇಜ್ ನೀಡಬಲ್ಲ ಕಾರಿನ ಬೆಲೆ ಹಾಗೂ ನಿರ್ವಹಣೆ ವೆಚ್ಚ ಎಷ್ಟು?
02:01 PM (IST) Jul 15
ಯೆಮೆನ್‌ನಲ್ಲಿ ಜು.16ಕ್ಕೆ ಮರಣದಂಡನೆಗೆ ಗುರಿಯಾಗಿದ್ದ ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾ ಅವರ ಗಲ್ಲುಶಿಕ್ಷೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಭಾರತ ಸರ್ಕಾರದ ಮಧ್ಯಪ್ರವೇಶ ಮತ್ತು ರಾಜತಾಂತ್ರಿಕ ಪ್ರಯತ್ನಗಳ ಫಲವಾಗಿ ಈ ಬೆಳವಣಿಗೆ ನಡೆದಿದೆ. ನಿಮಿಷಾ ಪ್ರಿಯಾ ಉಳಿಸುವ ಪ್ರಯತ್ನ ಮುಂದುವರೆದಿದೆ.
01:58 PM (IST) Jul 15
ಮೀನುಗಾರಿಕೆಂದು ನಾಡದೋಣಿಯೊಂದಿಗೆ ಸಮುದ್ರಕ್ಕೆ ತೆರಳಿದ್ದ ಮೀನುಗಾರರು ಅಲೆಗಳ ರಭಸಕ್ಕೆ ನೀರುಪಾಲಾದ ದಾರುಣ ಘಟನೆ ಕುಂದಾಪುರ ತಾಲೂಕಿನ ಗಂಗೊಳ್ಳಿಯಲ್ಲಿ ನಡೆದಿದೆ.
01:39 PM (IST) Jul 15
ತಂದೆಯಿಂದಲೇ ಹತ್ಯೆಯಾದ ಟೆನಿಸ್ ಪಟು ರಾಧಿಕಾ ಯಾದವ್ ಇನ್‌ಸ್ಟಾಗ್ರಾಂ ಬಯೋ ಹಲವು ಅನುಮಾನ ಹೆಚ್ಚಿಸಿದೆ.ಸ್ಪಾನಿಶ್ ಭಾಷೆಯಲ್ಲಿರುವ ಈ ಬಯೋ ಹಾಗೂ ಅದರ ಅರ್ಥ ಹಲವು ಅನುಮಾನ ಮೂಡಿಸಿದೆ.
01:31 PM (IST) Jul 15
ಎದೆ ನೋವು, ಎದೆಯುರಿ ಮಾತ್ರವಲ್ಲದೇ ಗಂಟಲು ಮತ್ತು ದವಡೆ ನೋವುಗಳೂ ಹೃದಯಾಘಾತದ ಮುನ್ಸೂಚನೆಯಾಗಿದೆ. ಆದರೆ ಇದು ಯಾವ ಸಮಯದಲ್ಲಿ ಆಗುವ ನೋವು? ಈ ಬಗ್ಗೆ ಹೃದಯ ತಜ್ಞ ಡಾ. ಸಿ.ಎನ್. ಮಂಜುನಾಥ್ ಹೇಳಿದ್ದಾರೆ ಕೇಳಿ...
01:30 PM (IST) Jul 15
01:27 PM (IST) Jul 15
‘ನನ್ನ ವೃತ್ತಿ ನನ್ನ ಆಯ್ಕೆ’ ಎಂಬ ಕಾರ್ಯಕ್ರಮವು ೫ನೇ ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ ವೃತ್ತಿ ಆಯ್ಕೆ ಬಗ್ಗೆ ಸ್ಪಷ್ಟತೆ ನೀಡುತ್ತಿದೆ. ಈ ಮೂಲಕ ಮಕ್ಕಳು ತನ್ನ ಇಚ್ಛೆಯ ಉದ್ದೇಶಗಳನ್ನು ಇನ್ನಷ್ಟು ಸಬಲವಾಗಿ ರೂಪಿಸಿಕೊಳ್ಳಲು ಸಹಾಯವಾಗುತ್ತಿದೆ.
01:04 PM (IST) Jul 15
ಅಮ್ಮನ ಗರ್ಭದಲ್ಲಿ ಇರುವಾಗಲೇ ಮಗು ಗರ್ಭಧರಿಸಿರುವ ವಿಚಿತ್ರ ಕೇಸ್ ಒಂದು ಮಹಾರಾಷ್ಟ್ರದಲ್ಲಿ ನಡೆದಿದ್ದು, ಇಡೀ ವೈದ್ಯಲೋಕವನ್ನೇ ಇದು ಬೆಚ್ಚಿ ಬೀಳಿಸಿದೆ. ಏನಿದು ಪ್ರಕರಣ?
12:38 PM (IST) Jul 15
ಬೆಂಗಳೂರಿಗೆ ಬಂದವರು ಟ್ರಾಫಿಕ್‌ನಲ್ಲಿ ಸಿಲುಕದೇ ಇರುತ್ತಾರಾ?ಖಂಡಿತ ಸಾಧ್ಯವಿಲ್ಲ. ಇದೀಗ ಖ್ಯಾತ ಉದ್ಯಮಿ ಬೆಂಗಳೂರು ಟ್ರಾಫಿಕ್ ರಸ್ತೆಯ ಒಂದೇ ಕಡೆ ಬರೋಬ್ಬರಿ 2 ಗಂಟೆ ಸಿಲುಕಿದ್ದಾರೆ. ಈ ಪರದಾಟದ ಬೆನ್ನಲ್ಲೇ ಬೆಂಗಳೂರು ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ 1 ಕೋಟಿ ರೂಪಾಯಿ ಪ್ರಾಜೆಕ್ಟ್ ಘೋಷಿಸಿದ್ದಾರೆ.
12:24 PM (IST) Jul 15
12:13 PM (IST) Jul 15
ಎಲ್ಲ ಹುಳಿಗಳಲ್ಲೇ ಶ್ರೇಷ್ಠವಾದದ್ದು ಲಿಂಬೆ ಹುಳಿ. ನಿಂಬೆಗಿಂತ ಹುಳಿಯಿಲ್ಲ, ದುಂಬಿಗಿಂತ ಕರೆಯಿಲ್ಲ, ಶಂಬುಗಿಂತ ದೊಡ್ಡ ದೇವರಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಾಣ್ಣುಡಿ ಹೇಳಿದರು.
12:03 PM (IST) Jul 15
ರಾಜ್ಯದಲ್ಲಿ ಎಸ್.ಸಿ./ಎಸ್.ಟಿ. ಸರ್ಕಾರಿ ನೌಕರರಿಗೆ ಮುಂಬಡ್ತಿಯಲ್ಲಿ ರೋಸ್ಟರ್ ಬಿಂದುಗಳ ಅನುಸರಣೆ ಇಲ್ಲದಿರುವ ಬಗ್ಗೆ ಖರ್ಗೆ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಕೆಲವು ಇಲಾಖೆಗಳಲ್ಲಿ ರೋಸ್ಟರ್ ಅನುಸರಣೆ ಇಲ್ಲದಿರುವುದನ್ನು ಖರ್ಗೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.