LIVE NOW
Published : Oct 10, 2026, 06:56 AM ISTUpdated : Oct 10, 2026, 10:03 AM IST

Karnataka News Live: ಪ್ರಜ್ವಲ್ ರೇವಣ್ಣ ಬೆಳಗಾವಿ ಜೈಲಿಗೆ ಶಿಫ್ಟ್ ಇಲ್ಲ! ಆ ಒಂದು ಕಾರಣಕ್ಕೆ ಸದ್ಯಕ್ಕೆ ಬಚಾವ್, ಕೋರ್ಟ್ ಮೊರೆ ಹೋದ ಲಾಯರ್

ಸಾರಾಂಶ

ಬೆಂಗಳೂರು: ಫೇಸ್‌ಬುಕ್ ಪೋಸ್ಟ್‌ನಲ್ಲಿ ‘ಜಿಹಾದಿ’ ಮತ್ತು ‘ಕಾಫಿರ್’ ಎಂಬ ಪದಗಳನ್ನು ಬಳಸಿರುವುದರಿಂದ ಮಾತ್ರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ ಅಥವಾ ಸಮುದಾಯಗಳ ನಡುವೆ ದ್ವೇಷ ಪ್ರಚೋದಿಸಿದ ಅಪರಾಧ ಸಾಬೀತಾಗುವುದಿಲ್ಲ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

‘ಹಿಂದೂ ಸಾಮ್ರಾಟ್ ಧರ್ಮಸೇನೆ’ ಹೆಸರಿನ ಫೇಸ್‌ಬುಕ್ ಪುಟದಲ್ಲಿ ಪ್ರಕಟಿಸಿದ್ದ ಸಂದೇಶದ ಸಂಬಂಧ ತಮ್ಮ ವಿರುದ್ಧ ಮಧುಗಿರಿಯ ಬಡವನಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ರದ್ದು ಕೋರಿ ಅತುಲ್ ಕುಮಾರ್ ಸಬರ್ವಾಲ್ ಅಲಿಯಾಸ್ ಮಧುಗಿರಿ ಮೋದಿ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಅರ್ಜಿದಾರರ ವಿರುದ್ಧದ ಎಫ್‌ಐಆರ್ ಮತ್ತು ನ್ಯಾಯಾಲಯದ ವಿಚಾರಣೆ ರದ್ದುಪಡಿಸಿರುವ ನ್ಯಾಯಪೀಠ, ‘ಜಿಹಾದಿ’ ಅಥವಾ ‘ಕಾಫಿರ್’ ಪದಗಳ ಬಳಕೆ ಯಾವುದೇ ಸಂದರ್ಭದಲ್ಲಿಯೂ ಅಪರಾಧವಾಗುವುದಿಲ್ಲ ಎಂಬ ಸಾರ್ವತ್ರಿಕ ನಿಯಮವನ್ನು ಹೈಕೋರ್ಟ್ ರೂಪಿಸಿಲ್ಲ. ಈ ನಿರ್ದಿಷ್ಟ ಪ್ರಕರಣದಲ್ಲಿದ್ದ ಪೋಸ್ಟ್‌ನ ಪೂರ್ಣ ವಿಷಯ, ಅದರ ಸಂದರ್ಭ ಮತ್ತು ಕಾನೂನಿನ ಅಗತ್ಯ ಅಂಶ ಪರಿಶೀಲಿಸಿ ಎಫ್‌ಐಆರ್ ರದ್ದುಪಡಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.

10:03 AM (IST) Oct 10

ಪ್ರಜ್ವಲ್ ರೇವಣ್ಣ ಬೆಳಗಾವಿ ಜೈಲಿಗೆ ಶಿಫ್ಟ್ ಇಲ್ಲ! ಆ ಒಂದು ಕಾರಣಕ್ಕೆ ಸದ್ಯಕ್ಕೆ ಬಚಾವ್, ಕೋರ್ಟ್ ಮೊರೆ ಹೋದ ಲಾಯರ್

ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಪರಪ್ಪನ ಅಗ್ರಹಾರದಿಂದ ಬೆಳಗಾವಿ ಜೈಲಿಗೆ ವರ್ಗಾಯಿಸುವ ಆದೇಶವನ್ನು ಕಾರಾಗೃಹ ಇಲಾಖೆ ತಾತ್ಕಾಲಿಕವಾಗಿ ತಡೆಹಿಡಿದಿದೆ. ಉತ್ತರ ವಲಯದ ಡಿಐಜಿ ಸೋಮಶೇಖರ್ ಬಂಧನದಿಂದಾಗಿ ಭದ್ರತೆಯ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಮತ್ತೊಂದೆಡೆ, ಈ ವರ್ಗಾವಣೆ ಆದೇಶವನ್ನು ಪ್ರಶ್ನಿಸಿ ಪ್ರಜ್ವಲ್ ಪರ ವಕೀಲರು ಕೋರ್ಟ್ ಮೆಟ್ಟಿಲೇರಲು ಸಿದ್ಧತೆ ನಡೆಸಿದ್ದಾರೆ.
Read Full Story

09:58 AM (IST) Oct 10

14 ವರ್ಷದಿಂದ ಬಿಡಿಎಯಲ್ಲಿ ಡೆಪ್ಯುಟೇಷನ್‌ನಲ್ಲಿ ಕೆಲಸ ಮಾಡ್ತಿದ್ದ ಇಂಜಿನಿಯರ್‌ಅನ್ನು ಅಕ್ರಮ ಸೈಟ್‌ ಸ್ಕ್ಯಾಮ್‌ ಬೆನ್ನಲ್ಲೇ ವಾಪಾಸ್‌ ಕರೆಸಿಕೊಂಡ ಸರ್ಕಾರ

ನಾಡಪ್ರಭು ಕೆಂಪೇಗೌಡ ಲೇಔಟ್‌ನಲ್ಲಿ ಸಾರಿಗೆ ತಾಣದ ಜಾಗವನ್ನು ಅಕ್ರಮವಾಗಿ ವಸತಿ ನಿವೇಶನಗಳಾಗಿ ಪರಿವರ್ತಿಸಿದ ಆರೋಪದ ಮೇಲೆ ಬಿಡಿಎ ಕಾರ್ಯನಿರ್ವಾಹಕ ಇಂಜಿನಿಯರ್ ಅವರನ್ನು ನಗರಾಭಿವೃದ್ಧಿ ಇಲಾಖೆ ಕಾರ್ಯಮುಕ್ತಗೊಳಿಸಿದೆ.

Read Full Story

09:55 AM (IST) Oct 10

ಹುಬ್ಬಳ್ಳಿಯಲ್ಲಿ ಪ್ರತ್ಯಕ್ಷವಾಗಲಿರೋ 'ಮುಂಗಾರು ಮಳೆ' ಪ್ರೀತಮ್.. 'ಬೃಂದಾವಿಹಾರಿ' ದರ್ಶನಕ್ಕೆ ಸಜ್ಜಾಗುತ್ತಿರೋ 'ಗಂಡು ಮೆಟ್ಟಿದ ನಾಡು'..!

‘ಬೃಂದಾವಿಹಾರಿ’ ಸಿನಿಮಾದ ಪ್ರೀ-ರಿಲೀಸ್ ಇವೆಂಟ್ ಕೇವಲ ಚಿತ್ರದ ಪ್ರಚಾರ ಕಾರ್ಯಕ್ರಮವಾಗಿ ಉಳಿಯದೆ, ಅಭಿಮಾನಿಗಳಿಗೆ ಹಾಡು, ನೃತ್ಯ ಮತ್ತು ಹಾಸ್ಯದ ಮನರಂಜನೆಯನ್ನು ಒದಗಿಸುವ ವೇದಿಕೆಯಾಗುವ ನಿರೀಕ್ಷೆಯಿದೆ. ಕುಟುಂಬ ಸಮೇತ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಚಿತ್ರತಂಡ ಸಿನಿಪ್ರಿಯರಲ್ಲಿ ಮನವಿ ಮಾಡಿದೆ. ಅಕ್ಟೋಬರ್ 16ರಂದು ತೆರೆಗೆ ಬರಲಿದೆ ಗಣೇಶ್ ಅಭಿನಯದ ‘ಬೃಂದಾವಿಹಾರಿ’..

Read Full Story

09:31 AM (IST) Oct 10

ಅರ್ಧ ಶತಮಾನದ ರಸ್ತೆ ಬಂದ್‌! ಮಾಸ್ಟರ್ ಪ್ಲಾನ್‌ನಲ್ಲಿದ್ದ 40 ಅಡಿ ಪಬ್ಲಿಕ್ ರೋಡ್ ಗಾಯಬ್

ಬೆಳಗಾವಿಯ ಹನುಮಾನ ನಗರದಲ್ಲಿ 50 ವರ್ಷಗಳಿಂದ ಸಾರ್ವಜನಿಕರು ಬಳಸುತ್ತಿದ್ದ ರಸ್ತೆಯನ್ನು ಖಾಸಗಿ ಸಂಸ್ಥೆಯೊಂದು ದಿಢೀರ್ ಬಂದ್ ಮಾಡಿದೆ. ಉಕ್ಕಿನ ತಡೆಗೋಡೆ ನಿರ್ಮಿಸಿರುವ ಕ್ರಮವನ್ನು ವಿರೋಧಿಸಿ ನಿವಾಸಿಗಳು ಮಹಾನಗರ ಪಾಲಿಕೆಗೆ ದೂರು ನೀಡಿದ್ದಾರೆ. ದಾಖಲೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.
Read Full Story

09:10 AM (IST) Oct 10

ಕೈಗಾರಿಕಾ ಹಬ್ ತುಮಕೂರು ಚಿತ್ರಣ ಶೀಘ್ರವೇ ಬದಲು, ರೈಲು ಮಾರ್ಗ ನಾಲ್ಕು ಪಥಗಳಾಗಿ ಅಭಿವೃದ್ಧಿ! ಮತ್ತಷ್ಟು ಕಾರಣವಿದು

ಕೇಂದ್ರ ಸಚಿವ ವಿ. ಸೋಮಣ್ಣ ಅವರು ತುಮಕೂರು-ಬೆಂಗಳೂರು ರೈಲು ಮಾರ್ಗವನ್ನು ನಾಲ್ಕು ಪಥಕ್ಕೆ ಅಭಿವೃದ್ಧಿಪಡಿಸುವ ಭರವಸೆ ನೀಡಿದ್ದಾರೆ. ಆಗ್ನೇಯ ಪದವೀಧರ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಕೆ.ಎಂ. ಸುರೇಶ್ ಪರ ಸಿದ್ದಗಂಗಾ ಮಠದಿಂದ ಅವರು ಭರ್ಜರಿ ಚುನಾವಣಾ ಪ್ರಚಾರ ಕೈಗೊಂಡರು. ಮುಂದಿನ 3-4 ವರ್ಷಗಳಲ್ಲಿ ತುಮಕೂರು ಪ್ರಮುಖ ಕೈಗಾರಿಕಾ ಹಬ್ ಆಗಿ ಬದಲಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
Read Full Story

08:57 AM (IST) Oct 10

ತಟ್ಟೆ ಹಳ್ಳದ ನೀರು ಮನೆಗಳಿಗೆ ನುಗ್ಗದಂತೆ ತಡೆಗೋಡೆ ನಿರ್ಮಾಣ; ಶಾಶ್ವತ ಪರಿಹಾರದ ಭರವಸೆ

ಭಾರೀ ಮಳೆಯಿಂದ ಹನೂರಿನ ತಟ್ಟೆ ಹಳ್ಳ ತುಂಬಿ ಹರಿದು ಮನೆಗಳಿಗೆ ನೀರು ನುಗ್ಗಿದ ಪ್ರದೇಶಗಳಿಗೆ ಶಾಸಕ ಎಂ.ಆರ್.ಮಂಜುನಾಥ್ ಭೇಟಿ ನೀಡಿದರು. ಈ ವೇಳೆ ಅವೈಜ್ಞಾನಿಕ ಕಾಮಗಾರಿಯಿಂದಾದ ಹಾನಿಯನ್ನು ಪರಿಶೀಲಿಸಿದ ಅವರು, ಶಾಶ್ವತ ಪರಿಹಾರಕ್ಕಾಗಿ ವೈಜ್ಞಾನಿಕ ತಡೆಗೋಡೆ ನಿರ್ಮಿಸುವ ಭರವಸೆ ನೀಡಿದರು.

Read Full Story

08:49 AM (IST) Oct 10

Breaking - ಮಂಡ್ಯ ಅಪರ ಎಸ್‌ಪಿ ತಿಮ್ಮಯ್ಯ ಸಿ.ಇ. ನಿಧನ; ಚಿಕಿತ್ಸೆ ಸ್ಪಂದಿಸದೇ ವಿಧಿವಶ

ಮಂಡ್ಯ ಜಿಲ್ಲೆಯ ಅಪರ ಪೊಲೀಸ್ ಅಧೀಕ್ಷಕ (ಎಎಸ್‌ಪಿ) ತಿಮ್ಮಯ್ಯ ಅವರು ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಇಂದು ಕೊನೆಯುಸಿರೆಳೆದಿದ್ದಾರೆ.

Read Full Story

08:37 AM (IST) Oct 10

ರಾಗಿಗುಡ್ಡ-ಕನಕಪುರ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ವಿರೋಧ; ಜನರ ಬೇಡಿಕೆಗಳೇನು?

ಬೆಂಗಳೂರಿನ ರಾಗಿಗುಡ್ಡ - ಕನಕಪುರ ಎಲಿವೇಟೆಡ್‌ ಕಾರಿಡಾರ್‌ ನಿರ್ಮಾಣವನ್ನು ವಿರೋಧಿಸಿ ಅಕ್ಟೋಬರ್ 11ರಂದು ಶಾಂತಿಯುತ ಮಾನವ ಸರಪಳಿ ಪ್ರತಿಭಟನೆ ನಡೆಯಲಿದೆ. ಮೆಟ್ರೋಗೆ ಸಮಾಂತರವಾಗಿ ಕಾರಿಡಾರ್ ಬೇಡ ಹಾಗೂ ಕಾವೇರಿ ಪೈಪ್‌ಲೈನ್ ಮೇಲೆ ನಿರ್ಮಾಣ ಬೇಡ ಎಂಬುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಯಾಗಿದೆ.
Read Full Story

08:27 AM (IST) Oct 10

ಪಾಂಡೇಶ್ವರ ರೈಲ್ವೆ ಕ್ರಾಸಿಂಗ್, ಮಂಗಳೂರು ವಿಮಾನ ನಿಲ್ದಾಣದ ಸಮೀಪ ಹೊಸ ರೈಲು ನಿಲ್ದಾಣ?

ಮಂಗಳೂರು ರೈಲ್ವೆ ಪ್ರದೇಶವು ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಜಿಎಂ ಪಿ. ಅನಂತ್ ಅವರು ಪ್ರಮುಖ ನಿಲ್ದಾಣಗಳು ಮತ್ತು ಸೌಲಭ್ಯಗಳನ್ನು ಪರಿಶೀಲಿಸಿದರು. ಈ ವೇಳೆ ರೈಲು ಕಾರ್ಯಾಚರಣೆ, ಸುರಕ್ಷತೆ ಹಾಗೂ ಹೊಸ ನಿಲ್ದಾಣಗಳ ಸ್ಥಾಪನೆ ಕುರಿತು ಸಂಸದರೊಂದಿಗೆ ಮಹತ್ವದ ಚರ್ಚೆ ನಡೆಸಲಾಯಿತು.
Read Full Story

08:14 AM (IST) Oct 10

ಚಿತ್ರದುರ್ಗ - ಯುವಕನ ಕಿಡ್ನಾಪ್‌ ಮಾಡಿ ಗುಪ್ತಾಂಗ ಕತ್ತರಿಸಿದ ಮಂಗಳಮುಖಿಯರು!

ಚಿತ್ರದುರ್ಗದಲ್ಲಿ ಹೂವಿನ ವ್ಯಾಪಾರ ಮಾಡುತ್ತಿದ್ದ ಯುವಕನನ್ನು ಮಂಗಳಮುಖಿಯರು ಕಿಡ್ನಾಪ್ ಮಾಡಿ ಬಲವಂತವಾಗಿ ಗುಪ್ತಾಂಗ ಆಪರೇಷನ್ ಮಾಡಿಸಿದ್ದಾರೆ. ದಾವಣಗೆರೆಯಲ್ಲಿ ಈ ಕೃತ್ಯವೆಸಗಿ, ಚಿತ್ರಹಿಂಸೆ ನೀಡಿದ್ದಲ್ಲದೆ, ಆಪರೇಷನ್ ಖರ್ಚು 3 ಲಕ್ಷ ರೂ. ನೀಡುವಂತೆ ಯುವಕನ ಮನೆಬಳಿ ಬಂದು ಗಲಾಟೆ ಮಾಡಿದ್ದಾರೆ.

Read Full Story

07:54 AM (IST) Oct 10

KSRTC Travel Card - ಇನ್ಮುಂದೆ ರಾಜ್ಯದ ಸರ್ಕಾರಿ ಬಸ್‌ಗಳಿಗೂ ಮೆಟ್ರೋ ರೀತಿ ಸ್ಮಾರ್ಟ್‌ಕಾರ್ಡ್‌! ಹೇಗೆ ರೀಚಾರ್ಜ್ ಮಾಡುವುದು?

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು 'ನಮ್ಮ ಮೆಟ್ರೋ' ಮಾದರಿಯಲ್ಲಿ ನಾಲ್ಕೂ ನಿಗಮಗಳ ಬಸ್‌ ಪ್ರಯಾಣಿಕರಿಗೆ ಸ್ಮಾರ್ಟ್‌ಕಾರ್ಡ್‌ ವಿತರಿಸಲು ಮುಂದಾಗಿದೆ. ಶಕ್ತಿ ಯೋಜನೆಯ ಫಲಾನುಭವಿಗಳ ಜೊತೆಗೆ ಇತರ ಪ್ರಯಾಣಿಕರಿಗೂ ಈ ಕಾರ್ಡ್ ನೀಡಲಿದ್ದು, ರೀಚಾರ್ಜ್ ಮಾಡುವ ಮೂಲಕ ಟಿಕೆಟ್ ಹಣ ಪಾವತಿಸಬಹುದು.

Read Full Story

07:46 AM (IST) Oct 10

ದಸರಾ ಪ್ರಯಾಣಿಕರಿಗೆ KSRTC ಬೃಹತ್ ಯೋಜನೆ; 3 ಸಾವಿರ ವಿಶೇಷ ಬಸ್‌ ಸೇವೆ, ಪ್ಯಾಕೇಜ್‌

ದಸರಾ ಹಬ್ಬದ ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್ಸಾರ್ಟಿಸಿ ಅಕ್ಟೋಬರ್ 16ರಿಂದ 20ರವರೆಗೆ 3 ಸಾವಿರ ಹೆಚ್ಚುವರಿ ಬಸ್‌ಗಳನ್ನು ಓಡಿಸಲಿದೆ. ಇದರ ಜೊತೆಗೆ ಮೈಸೂರು ಮತ್ತು ಮಂಗಳೂರು ದಸರಾ ವೀಕ್ಷಣೆಗಾಗಿ ವಿಶೇಷ ಪ್ರವಾಸಿ ಪ್ಯಾಕೇಜ್‌ಗಳನ್ನು ಸಹ ಒದಗಿಸುತ್ತಿದೆ.
Read Full Story

07:35 AM (IST) Oct 10

Bengaluru - ಮನೆ ಮುಂದೆ ವಾಹನ ನಿಲ್ಲಿಸುವ ಮುನ್ನ ಈ ಹೊಸ ನಿಯಮ ತಿಳಿಯಿರಿ! ಸಂಚಾರ ದಟ್ಟಣೆ ನಿಯಂತ್ರಣ

Bengaluru: ಜಯನಗರದಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಶೀಘ್ರದಲ್ಲೇ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ಬರಲಿದೆ. ವಾಣಿಜ್ಯ ರಸ್ತೆಗಳಲ್ಲಿ ಮಾತ್ರ ಬೆಳಗ್ಗೆ 9ರಿಂದ ರಾತ್ರಿ 10ರವರೆಗೆ ಪಾರ್ಕಿಂಗ್ ಶುಲ್ಕ ಅನ್ವಯವಾಗಲಿದೆ.

Read Full Story

07:27 AM (IST) Oct 10

ಜಾಲಹಳ್ಳಿ ಕ್ರಾಸ್ ಕೆಳಸೇತುವೆ ಕಾಮಗಾರಿ; 26 ಆಸ್ತಿಗಳ ಭೂ ಸ್ವಾಧೀನ ಪ್ರಕ್ರಿಯೆ ಆರಂಭಕ್ಕೆ ಸೂಚನೆ

ಜಾಲಹಳ್ಳಿ ಕ್ರಾಸ್‌ನಲ್ಲಿ ಕೆಳಸೇತುವೆ ಕಾಮಗಾರಿಗಾಗಿ ಉಳಿದ ಆಸ್ತಿಗಳ ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಲು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸೂಚಿಸಿದ್ದಾರೆ. ಸರ್ವೀಸ್ ರಸ್ತೆ ನಿರ್ಮಿಸಿ ವಾಹನ ಸಂಚಾರಕ್ಕೆ ಅನುವು ಮಾಡಿದ ಬಳಿಕ ಕಾಮಗಾರಿ ಆರಂಭಿಸಲು ನಿರ್ದೇಶನ ನೀಡಲಾಗಿದೆ. ಕಂಠೀರವ ಸ್ಟುಡಿಯೋ ಬಳಿಯ ರಸ್ತೆ ಗುಂಡಿ ಮುಚ್ಚಲು ಕೂಡ ಆದೇಶಿಸಲಾಗಿದೆ.
Read Full Story

07:19 AM (IST) Oct 10

CJP Delhi Protest - Gen-Z ಪ್ರತಿಭಟನೆಯಿಂದ ಸರ್ಕಾರ ಉರುಳಿದ 5 ದೇಶಗಳಿವು!

ದೆಹಲಿಯಲ್ಲಿ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆ ಮತ್ತು ಪ್ರಪಂಚದಾದ್ಯಂತ ನಡೆಯುತ್ತಿರುವ ಜೆನ್‌-ಜಿ ವಿದ್ಯಾರ್ಥಿ ಹೋರಾಟಗಳ ಪ್ರಭಾವವನ್ನು ಈ ಲೇಖನ ವಿವರಿಸುತ್ತದೆ. ಸಾಮಾಜಿಕ ಜಾಲತಾಣಗಳ ಮೂಲಕ ಸಂಘಟಿತರಾಗುವ ಯುವಜನತೆ, ಬಾಂಗ್ಲಾದೇಶ ಸೇರಿದಂತೆ ಹಲವು ದೇಶಗಳಲ್ಲಿ ಸರ್ಕಾರಗಳನ್ನೇ ಉರುಳಿಸಿದ ಬಗೆ ಇಲ್ಲಿದೆ.

Read Full Story

07:17 AM (IST) Oct 10

‘ನನಗೆ ಸ್ಟಿಂಗೂ ಪಂಗೂ ಗೊತ್ತಿಲ್ಲ, ಆ ವಿಷಯದಲ್ಲಿ ನಾನು ಎಲ್‌ಬೋರ್ಡ್‌’ ರಾಜಕೀಯಕ್ಕೆ ಬಂದು 50 ವರ್ಷ

ಸಚಿವ ವಿ. ಸೋಮಣ್ಣ ಅವರು ಸ್ಟಿಂಗ್ ಆಪರೇಷನ್ ಬಗ್ಗೆ ತಮಗೆ ಯಾವುದೇ ಅನುಭವವಿಲ್ಲ ಎಂದು ಹೇಳಿದ್ದಾರೆ. ಡಿ.ಕೆ. ಶಿವಕುಮಾರ್ ಅವರಿಗಿಂತ ಮುಂಚೆಯೇ ತಾವು ರಾಜಕೀಯಕ್ಕೆ ಬಂದಿದ್ದು, ಸ್ಟಿಂಗ್ ಜನಕ ಯಾರು ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಸಿಎಂ ಸಿದ್ದರಾಮಯ್ಯನವರಿಗೆ ಸ್ವಪಕ್ಷದವರಿಂದಲೇ ಹೆಚ್ಚು ವಿರೋಧವಿದೆ ಎಂದು ಟೀಕಿಸಿದ್ದಾರೆ.
Read Full Story

07:10 AM (IST) Oct 10

ಬೆಂಗಳೂರು ಟ್ರಾಫಿಕಲ್ಲಿ ಕಳೆವ ಸಮಯ 1 ತಿಂಗಳ ದುಡಿಮೆಗೆ ಸಮ; ಸಾವಿನ ಅಪಾಯ ಶೇ.7.5ರಷ್ಟು ಹೆಚ್ಚಳ

ಬೆಂಗಳೂರಿನ ಟ್ರಾಫಿಕ್ ದಟ್ಟಣೆಯಿಂದಾಗಿ ಉದ್ಯೋಗಿಗಳ ಒಂದು ತಿಂಗಳ ದುಡಿಮೆಯ ಸಮಯ ವ್ಯರ್ಥವಾಗುತ್ತಿದ್ದು, ಇದು ವಾರ್ಷಿಕ ವೇತನದ ಶೇ.8ರಷ್ಟು ಕಡಿತಕ್ಕೆ ಸಮವಾಗಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಅಲ್ಲದೆ, ಟ್ರಾಫಿಕ್‌ನಿಂದಾಗಿ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತಿದ್ದು, ತುರ್ತು ಸಂದರ್ಭಗಳಲ್ಲಿ ಜೀವಹಾನಿ ಅಪಾಯ ಹೆಚ್ಚುತ್ತಿದೆ.

Read Full Story

More Trending News