LIVE NOW
Published : Nov 01, 2026, 06:52 AM ISTUpdated : Nov 01, 2026, 09:05 AM IST

Karnataka News Live: Bengaluru Rural - ದೊಡ್ಡಬಳ್ಳಾಪುರಿಂದ ನಾಪತ್ತೆಯಾಗಿದ್ದ ದಲಿತ ಮುಖಂಡ ಧರ್ಮಸ್ಥಳದಲ್ಲಿ ಸಾವು

ಸಾರಾಂಶ

ಬೆಳ್ತಂಗಡಿ: 14 ವರ್ಷಗಳ ಹಿಂದೆ ನಡೆದಿದ್ದ ಧರ್ಮಸ್ಥಳ ಗ್ರಾಮದ ಸೌಜನ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ ಮತ್ತೆ ಸ್ಥಳ ಮಹಜರು ನಡೆಸಿದೆ. ಅಂದು ಸೌಜನ್ಯಾ ಮೃತದೇಹ ಸಿಕ್ಕ ಸ್ಥಳದಲ್ಲಿ ಘಟನೆಯ ಸನ್ನಿವೇಶವನ್ನು ಮರುಸೃಷ್ಟಿ ನಡೆಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೇತ್ರಾವತಿ ನದಿ ಬಳಿಯ ಮಣ್ಣಸಂಕದ ಕಾಡಿನಲ್ಲಿ ಶುಕ್ರವಾರ ತನಿಖಾಧಿಕಾರಿ ಲೋಕೇಶ್‌ ಜಗಲ್ಸಾರ್‌ ನೇತೃತ್ವದಲ್ಲಿ ಮಹಜರು ನಡೆಯಿತು. 

ಸೌಜನ್ಯ ದೇಹ ಮೊದಲ ಬಾರಿಗೆ ಕಂಡಿದ್ದ ಆಕೆಯ ಸಂಬಂಧಿ, ದೂರುದಾರ ಪುರಂದರ ಗೌಡ ಮತ್ತು ತುಕರಾಮ ಗೌಡ ಅವರನ್ನು ಕರೆಸಿ, ಘಟನೆ ಕುರಿತು ಮಾಹಿತಿ ಸಂಗ್ರಹಿಸಲಾಯಿತು. ದೇಹ ಸಿಕ್ಕ ಸ್ಥಳದ ಭೌಗೋಳಿಕ ಪರಿಸ್ಥಿತಿ, ಸ್ಥಳದ ಮಣ್ಣು ಸೇರಿದಂತೆ ಅಗತ್ಯ ಮಾದರಿಗಳನ್ನು ವಿಧಿವಿಜ್ಞಾನ ಪರೀಕ್ಷೆಗಾಗಿ ಸಂಗ್ರಹಿಸಲಾಯಿತು.

ಈ ವೇಳೆ ಫಾರೆನ್ಸಿಕ್‌ ತಂಡ, ವೈದ್ಯರು ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

09:05 AM (IST) Nov 01

Bengaluru Rural - ದೊಡ್ಡಬಳ್ಳಾಪುರಿಂದ ನಾಪತ್ತೆಯಾಗಿದ್ದ ದಲಿತ ಮುಖಂಡ ಧರ್ಮಸ್ಥಳದಲ್ಲಿ ಸಾವು

ದೊಡ್ಡಬಳ್ಳಾಪುರದ ದಲಿತ ಮುಖಂಡ ಸಿ.ಗುರುರಾಜಪ್ಪ ಧರ್ಮಸ್ಥಳದಲ್ಲಿ ನಿಗೂಢವಾಗಿ ಮೃತಪಟ್ಟಿದ್ದಾರೆ. ಮತ್ತೊಂದೆಡೆ, ದೊಡ್ಡಬಳ್ಳಾಪುರ ರೈಲು ನಿಲ್ದಾಣದ ಬಳಿ ಹಳಿ ದಾಟುತ್ತಿದ್ದ ಅಜ್ಜಿ ಮತ್ತು ಇಬ್ಬರು ಮೊಮ್ಮಕ್ಕಳು ರೈಲಿಗೆ ಸಿಲುಕಿ ದುರ್ಮರಣ ಹೊಂದಿದ್ದಾರೆ. ಈ ಘಟನೆಗಳ ಬಳಿಕ ರೈಲ್ವೆ ನಿಲ್ದಾಣದ ಬಳಿ ಸ್ಕೈವಾಕ್ ನಿರ್ಮಾಣಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Read Full Story

08:54 AM (IST) Nov 01

ಇನ್ಮುಂದೆ ಮೈಸೂರಿಗೆ ಹೋಗೋದು ಬೇಡ, ಮಂಡ್ಯ ಜನತೆಗೆ ಗುಡ್‌ನ್ಯೂಸ್ ನೀಡಿದ ಸಿಎಂ ಡಿಕೆಶಿ

ಮಂಡ್ಯ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಶಾಸಕ ಪಿ.ರವಿಕುಮಾರ್ ಅವರ ಮನವಿಗೆ ಸಿಎಂ ಡಿಕೆ ಶಿವಕುಮಾರ್ ಸ್ಪಂದಿಸಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಮಂಡ್ಯ ಜನತೆಗೆ ಸಹಕಾರಿಯಾಗಲಿದೆ. ಹಾಗಾದ್ರೆ ಮಂಡ್ಯ ಜನರಿಗೆ ಸಿಎಂ ಡಿಕೆ ಶಿವಕುಮಾರ್ ನೀಡಿದ ಗುಡ್‌ನ್ಯೂಸ್ ಏನು ಎಂಬುದರ ಮಾಹಿತಿಯನ್ನು ಈ ಲೇಖನ ಹೊಂದಿದೆ.

Read Full Story

08:26 AM (IST) Nov 01

ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ 2000+500 ಎಕರೆ ಭೂಮಿ ಗುರುತು - CM ಡಿಕೆ ಶಿವಕುಮಾರ್

ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ 2500 ಎಕರೆ ಭೂಮಿಯನ್ನು ಗುರುತಿಸಲಾಗಿದ್ದು, ಕೇಂದ್ರದಿಂದ ಅರಣ್ಯ ಭೂಮಿಗೆ ಅನುಮತಿ ಪಡೆಯುವ ನಿರೀಕ್ಷೆಯಿದೆ ಎಂದು ಡಿಕೆಶಿ ತಿಳಿಸಿದ್ದಾರೆ. ಅಲ್ಲದೆ, ವಿಮಾನ ಎಂಜಿನ್ ದುರಸ್ತಿ ಘಟಕಕ್ಕೆ ಅಗತ್ಯವಿರುವಷ್ಟು ಜಮೀನು ನೀಡಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Read Full Story

08:23 AM (IST) Nov 01

ಕನ್ನಡ ರಾಜ್ಯೋತ್ಸವ - ಸಂಚಾರ ಮಾರ್ಗ ಬದಲಾವಣೆ, ವಾಹನ ಸವಾರರೇ ಇಂದು ಈ ರಸ್ತೆಗಳಲ್ಲಿ ಸಂಚರಿಸುವ ಮುನ್ನ ಗಮನಿಸಿ!

ನವೆಂಬರ್ 1ರಂದು ಕಂಠೀರವ ಕ್ರೀಡಾಂಗಣದಲ್ಲಿ ನಡೆಯುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬೆಳಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ ಸಂಚಾರ ಮಾರ್ಪಾಡು ಮಾಡಲಾಗಿದೆ. ನೃಪತುಂಗ ರಸ್ತೆ ಸೇರಿದಂತೆ ಹಲವೆಡೆ ವಾಹನ ನಿಲುಗಡೆ ನಿಷೇಧಿಸಲಾಗಿದ್ದು, ಮೆಜೆಸ್ಟಿಕ್ ಕಡೆಗೆ ಹೋಗುವ ವಾಹನಗಳಿಗೆ ಪರ್ಯಾಯ ಮಾರ್ಗ.

Read Full Story

08:02 AM (IST) Nov 01

Kannada Rajyotsava - ನವೆಂಬರ್‌ನಲ್ಲಿ ಪುಸ್ತಕ ಪ್ರೇಮಿಗಳಿಗೆ ಒಂದಲ್ಲ, ಮೂರು ಆಫರ್‌

ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಪ್ನ ಬುಕ್‌ಹೌಸ್‌ನಲ್ಲಿ ಉಚಿತ ಪುಸ್ತಕ ವಿತರಣೆ ಹಾಗೂ ಪುಸ್ತಕ ಜಾತ್ರೆ ನಡೆಯಲಿದೆ. ಇದರ ಜೊತೆಗೆ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಶೇ.50 ರಿಯಾಯಿತಿ ಮತ್ತು ಜಯನಗರದಲ್ಲಿ ವೀರಲೋಕ ಪುಸ್ತಕ ಸಂತೆ ಆಯೋಜಿಸಲಾಗಿದೆ.
Read Full Story

08:01 AM (IST) Nov 01

ಹಾಲಿನ ದರ ₹8 ಏರಿಕೆ ಆದ್ರೂ ಈ ಟೀ ಅಂಗಡಿಯಲ್ಲಿ ಕೇವಲ ₹5ಗೆ ಕಾಫಿ, ಟೀ!

ಟಿ. ನರಸೀಪುರದ ಚಿನ್ನಸ್ವಾಮಿ ಅವರು ಹಾಲಿನ ಬೆಲೆ ಏರಿಕೆಯ ನಡುವೆಯೂ ಕೇವಲ ಐದು ರೂಪಾಯಿಗೆ ಟೀ ಮತ್ತು ಕಾಫಿ ನೀಡುತ್ತಿದ್ದಾರೆ. ಲಾಭಕ್ಕಿಂತ ಗ್ರಾಹಕರ ಸಂತೃಪ್ತಿಗೆ ಆದ್ಯತೆ ನೀಡಿರುವ ಇವರು, ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ಇವರ ಈ ಜನಪರ ಕಾಳಜಿ ಮತ್ತು ಸೇವಾ ಮನೋಭಾವ ಎಲ್ಲರ ಮೆಚ್ಚುಗೆ

Read Full Story

07:07 AM (IST) Nov 01

ಜಗನ್‌ ಹಠಕ್ಕೆ ಮಣಿದ ಶರ್ಮಿಳಾ; ಯಲಹಂಕ ಪ್ಯಾಲೇಸ್‌ನಲ್ಲಿ ಇಲ್ಲYSR ಮೊಮ್ಮಗಳ ಮದುವೆ!

ಆಂಧ್ರದ ಮಾಜಿ ಸಿಎಂ ಜಗನ್‌ ಹಾಗೂ ಅವರ ಸೋದರಿ ಶರ್ಮಿಳಾ ನಡುವೆ ಯಲಹಂಕ ಪ್ಯಾಲೇಸ್‌ನಲ್ಲಿ ವಿವಾಹ ಆಯೋಜನೆ ಕುರಿತು ವಿವಾದ ಏರ್ಪಟ್ಟಿದೆ. ಜಗನ್ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಶರ್ಮಿಳಾ ತಮ್ಮ ಪುತ್ರಿಯ ವಿವಾಹವನ್ನು ಬೇರೆಡೆ ನಡೆಸಲು ನಿರ್ಧರಿಸಿದ್ದಾರೆ. ಯಲಹಂಕದ ಪ್ಯಾಲೇಸ್‌ ಶೇ.100ರಷ್ಟು ತಮಗೇ ಸೇರಿದ್ದು ಎಂದು ಶರ್ಮಿಳಾ ಪ್ರತಿಪಾದಿಸಿದ್ದಾರೆ.
Read Full Story

More Trending News