ಬೆಂಗಳೂರು (ಆ.22): ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಸಂಬಂಧ ಯೋಜನೆ ಮತ್ತು ಸಾಂಖ್ಯಿಕ ಸಚಿವಬಿ.ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿ ಪ್ರಮುಖ ಪ್ರತಿಪಕ್ಷ ಬಿಜೆಪಿ ಬೃಹತ್ ಪಾದಯಾತ್ರೆ ನಡೆಸಲು ನಿರ್ಧರಿ ಸಿದ್ದು, ಬರುವ ಸೋಮವಾರ ಅಥವಾ ಮಂಗಳವಾರದ ಹೊತ್ತಿಗೆ ಅಧಿಕೃತವಾಗಿ ಘೋಷಣೆ ಮಾಡುವ ನಿರೀಕ್ಷೆಯಿದೆ. ಇನ್ನೊಂದೆಡೆ, ಪ್ರತಿಪಕ್ಷಗಳು ಪ್ರತಿಭಟನೆ ನಡೆಸುತ್ತಿದ್ದರೂ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಹೊಣೆಯನ್ನು ಸಚಿವ ನಾಗೇಂದ್ರಗೆ ನೀಡಲಾಗಿರುವುದು ಮತ್ತೊಂದು ವಿವಾದಕ್ಕೆ ನಾಂದಿ ಹಾಡುವ ಸಾಧ್ಯತೆ ಇದೆ. ಅದರೊಂದಿಗೆ ಇಂದಿನ ರಾಜ್ಯ ಸುದ್ದಿಗಳ ಅಪ್‌ಡೇಟ್ ಇಲ್ಲಿದೆ.

11:44 PM (IST) Aug 22
Toxic Pre Release Event: ಹೈದರಾಬಾದ್‌ನ ಮಲ್ಲಾರೆಡ್ಡಿ ಯೂನಿವರ್ಸಿಟಿಯಲ್ಲಿ ನಡೆದ ‘ಟಾಕ್ಸಿಕ್’ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್ ನೀಡಿದ ಭಾಷಣ ಇದೀಗ ಗಮನ ಸೆಳೆಯುತ್ತಿದೆ.
11:39 PM (IST) Aug 22
ಹಬ್ಬಗಳ ಸೀಸನ್ ಆರಂಭಕ್ಕೂ ಮುನ್ನವೇ ದೇಶದಲ್ಲಿ ಸಕ್ಕರೆ ಬೆಲೆ ಪ್ರತಿ ಕೆಜಿಗೆ ಸುಮಾರು ₹17 ರಷ್ಟು ಏರಿಕೆಯಾಗಿದ್ದು, ಸಕ್ಕರೆ ಉತ್ಪಾದನೆಗೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಸಕ್ಕರೆ ಉತ್ಪಾದನೆಯಲ್ಲಿ ಮಹಾರಾಷ್ಟ್ರ ದೇಶದಲ್ಲೇ ಪ್ರಥಮ ಹಾಗೂ ಉತ್ತರ ಪ್ರದೇಶ ಎರಡನೇ ಸ್ಥಾನದಲ್ಲಿದೆ.
11:16 PM (IST) Aug 22
'ತಾಜ್ ಮಹಲ್' ಸೇರಿದಂತೆ ಹಲವು ಯಶಸ್ವಿ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಆರ್. ಚಂದ್ರು ಹಾಗೂ ‘ಲವ್ ಮಾಕ್ಟೇಲ್’ ಸರಣಿಯ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ಡಾರ್ಲಿಂಗ್ ಕೃಷ್ಣ ಅವರ ಕಾಂಬಿನೇಷನ್ ಈಗಾಗಲೇ ಸಿನಿಪ್ರಿಯರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಚಿತ್ರವನ್ನು ರಾಜಮೋಹನ್ ನಿರ್ದೇಶಿಸಿದ್ದಾರೆ.
10:59 PM (IST) Aug 22
ರೈಲಿನಲ್ಲಿ ಟೂತ್‌ಬ್ರಷ್ ಮತ್ತು ಸಾಬೂನು ಮಾರಾಟ ಮಾಡುವ ರಾಜಸ್ಥಾನ ಮೂಲದ ವ್ಯಾಪಾರಿಯೊಬ್ಬರು ಇಂಗ್ಲಿಷ್ ಸೇರಿದಂತೆ ಬರೋಬ್ಬರಿ 18-19 ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಯಾವುದೇ ಕೋಚಿಂಗ್ ಪಡೆಯದೆ ಕೇವಲ ಪ್ರಯಾಣಿಕರ ಸಂಪರ್ಕ ಮತ್ತು ಕಲಿಯುವ ಹಂಬಲದಿಂದಲೇ ಸ್ವತಃ ಇಷ್ಟೊಂದು ಭಾಷೆಗಳನ್ನು ಕರಗತ ಮಾಡಿಕೊಂಡಿರುವ ಯುವಕನ ಪ್ರತಿಭೆಗೆ ನೆಟಿಜನ್ನರು ಮೆಚ್ಚುಗೆ ಸೂಚಿಸಿದ್ದಾರೆ.
10:49 PM (IST) Aug 22
ಹೀರೋಯಿನ್ ಆಗಿ ಚಿತ್ರರಂಗದಲ್ಲಿ ಮತ್ತಷ್ಟು ಬ್ಯುಸಿಯಾಗಲು ಪ್ರಯತ್ನಿಸುತ್ತಿರುವ ನಟಿ ನಭಾ ನಟೇಶ್, ತಮ್ಮ ವೃತ್ತಿಜೀವನದ ಆರಂಭದ ದಿನಗಳಲ್ಲಿನ ವಿಶೇಷ ಅನುಭವವೊಂದನ್ನು ಹಂಚಿಕೊಂಡಿದ್ದಾರೆ.
10:20 PM (IST) Aug 22
09:44 PM (IST) Aug 22
ವಿಭಿನ್ನ ಹಿನ್ನೆಲೆಯಿಂದ ಚಿತ್ರರಂಗಕ್ಕೆ ಬಂದಿರುವ ನಟಿ ಕಯಾದು ಲೋಹರ್, ಪ್ರತಿಯೊಂದು ಪಾತ್ರಕ್ಕೂ ಸಾಕಷ್ಟು ತಯಾರಿ ನಡೆಸಿಕೊಂಡೇ ಕ್ಯಾಮೆರಾ ಎದುರಿಸುವ ನಟಿಯರಲ್ಲಿ ಒಬ್ಬರು. ಹಾಗಾದರೆ ಅವರ ಬಗ್ಗೆ ನಿಮಗೆ ಗೊತ್ತಿರದ ಕೆಲವು ಆಸಕ್ತಿಕರ ಸಂಗತಿಗಳು ಇಲ್ಲಿವೆ.
09:32 PM (IST) Aug 22
ನೀತಿ ಆಯೋಗದ ಇತ್ತೀಚಿನ ವರದಿಯ ಪ್ರಕಾರ, ದೇಶದ 8.7 ಕೋಟಿ ಯುವಕರು ಶಿಕ್ಷಣ, ಉದ್ಯೋಗ ಅಥವಾ ಯಾವುದೇ ಕೌಶಲ್ಯ ತರಬೇತಿಯಿಂದ ಹೊರಗುಳಿದಿದ್ದಾರೆ. ಹೆಚ್ಚುತ್ತಿರುವ ಶಿಕ್ಷಣದ ವೆಚ್ಚ ಮತ್ತು ಪ್ರಾಯೋಗಿಕ ಕೌಶಲ್ಯಗಳ ಕೊರತೆಯೇ ಇದಕ್ಕೆ ಪ್ರಮುಖ ಕಾರಣವಾಗಿದ್ದು, ಆರ್ಥಿಕ ನೆರವು ಹಾಗೂ 'ಗಳಿಸುತ್ತಲೇ ಕಲಿಯಿರಿ' ಯೋಜನೆಗಳಂತಹ ಪರಿಹಾರಗಳನ್ನು ವರದಿ ಶಿಫಾರಸು ಮಾಡಿದೆ.
09:01 PM (IST) Aug 22
ಉದ್ಯೋಗದ ಬಗ್ಗೆ ಅಸಮಾಧಾನ, ಒತ್ತಡ, ಬೇಸರ ಕಾಡುವುದು ಸಹಜ. ಆದರೆ ಕೆಲಸಕ್ಕೆ ರಾಜೀನಾಮೆ ನೀಡುವ ಮುನ್ನ ಈಗಿನ ಉದ್ಯೋಗ ಮಾರುಕಟ್ಟೆಯ ಪರಿಸ್ಥಿತಿ ಹೇಗಿದೆ ಎಂಬುದನ್ನು ಒಮ್ಮೆ ಅರ್ಥಮಾಡಿಕೊಳ್ಳುವುದು ಅಗತ್ಯ.
08:13 PM (IST) Aug 22
Golden Star Ganesh: ಗೋಲ್ಡನ್ ಸ್ಟಾರ್ ಗಣೇಶ್ ಅಭಿಮಾನಿಗಳಿಗೆ ಮತ್ತೊಂದು ಕುತೂಹಲಕಾರಿ ಸುದ್ದಿ. ಬಹುನಿರೀಕ್ಷಿತ ‘ತಮ್ಮ ಸುಖಾಗಮನ ಬಯಸುವ’ ಸಿನಿಮಾಗೆ ನಾಯಕಿಯಾಗಿ ನಟಿ ಸಂಜನಾ ಆನಂದ್ ಆಯ್ಕೆಯಾಗಿದ್ದಾರೆ.
07:58 PM (IST) Aug 22
ನೀಟ್ ಪತ್ರಿಕೆ ಸೋರಿಕೆ ಪ್ರತಿಭಟನೆಗಳು 'Gen Z' ಪೀಳಿಗೆಯ ರಾಜಕೀಯ ಜಾಗೃತಿಯನ್ನು ಅನಾವರಣಗೊಳಿಸಿವೆ. ಈ ಯುವ ಮತದಾರರನ್ನು ಸೆಳೆಯಲು, ಬಿಜೆಪಿ ಮತ್ತು ಕಾಂಗ್ರೆಸ್ ತಮ್ಮ ಸಾಂಪ್ರದಾಯಿಕ ಪ್ರಚಾರಗಳನ್ನು ಬದಿಗಿಟ್ಟು, ಡಿಜಿಟಲ್ ಮಾಧ್ಯಮ ಮತ್ತು ಕ್ಯಾಂಪಸ್ ಸಂವಾದಗಳಂತಹ ಹೊಸ ಕಾರ್ಯತಂತ್ರಗಳನ್ನು ರೂಪಿಸುತ್ತಿವೆ. ಆದರೆ ಅವರ ಒಲುವು ಯಾವುದರ ಕಡೆ ಎನ್ನುವುದರ ವಿವರ ಇಲ್ಲಿದೆ.
07:50 PM (IST) Aug 22
Laptop Work: ದೀರ್ಘಕಾಲ ಲ್ಯಾಪ್‌ಟಾಪ್‌ನಲ್ಲಿ ಕೆಳಗೆ ನೋಡುತ್ತಾ ಕೆಲಸ ಮಾಡುವುದರಿಂದ ಕುತ್ತಿಗೆ, ಭುಜ ಮತ್ತು ಬೆನ್ನಿನ ಮೇಲ್ಭಾಗದಲ್ಲಿ ಒತ್ತಡ ಉಂಟಾಗಬಹುದು. ಸ್ಕ್ರೀನ್ ಅನ್ನು ಸರಿಯಾದ ಎತ್ತರದಲ್ಲಿ ಇಡುವುದು.
06:16 PM (IST) Aug 22
Kolahalu Village: ರೊಚ್ಚಿಗೆದ್ದ ಜನರ ಮನ ತಣಿಸಲು ಎರಡು ಕೊಳವೆಬಾವಿ ಕೊರೆಯಿಸಿ ನೀರು ಪೂರೈಕೆ ಮಾಡಲಾಗಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೆ ಕುಡಿವ ನೀರಿನ ಅಭಾವದಿಂದ ಗ್ರಾಮ ಬಾಧಿತಗೊಂಡಿದೆ.
05:45 PM (IST) Aug 22
ತಿರುಮಲ ಬಂಗಾರದ ಅಂಗಡಿ ಮಾಲೀಕರಾದ ಸುಮಾ ವೆಂಕಟೇಶ್ ಅವರು ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಆರ್ಡರ್ ಮಾಡಿದ್ದ ಗ್ರಾಹಕರಿಗೆ ಆಭರಣ ಕೊಡಲು ಪರ್ಸ್ ನಲ್ಲಿ ಇಟ್ಟುಕೊಂಡು ಸ್ಕೂಟಿಯಲ್ಲಿ ಹೊರಟಿದ್ದರು.
05:34 PM (IST) Aug 22
ಭಾರತೀಯ ವ್ಯವಸ್ಥಾಪ್ರಬಂಧ ಸಂಸ್ಥೆ ಬೆಂಗಳೂರು (IIMB) ತನ್ನ ಪದವಿಪೂರ್ವ ಶಿಕ್ಷಣ ಕ್ಷೇತ್ರಕ್ಕೆ ಯಶಸ್ವಿಯಾಗಿ ಪಾದಾರ್ಪಣೆ ಮಾಡಿದ್ದು, ಮೊದಲ ಬ್ಯಾಚ್‌ಗೆ ಅಭೂತಪೂರ್ವ ಬೇಡಿಕೆ ವ್ಯಕ್ತವಾಗಿದೆ. ಈ ಯಶಸ್ಸಿನ ಬೆನ್ನಲ್ಲೇ, ಟಾಟಾ ಟ್ರಸ್ಟ್ಸ್ ಜೊತೆ ಮಹತ್ವದ ಒಪ್ಪಂದ ಮಾಡಿಕೊಂಡಿದ್ದು, ಈ ನೂತನ ಶಾಲೆಯನ್ನು 'ಐಐಎಂ ಬೆಂಗಳೂರು - ದೋರಾಬ್ಜಿ ಟಾಟಾ ಸ್ಕೂಲ್ ಆಫ್ ಅಂಡರ್‌ಗ್ರಾಜುಯೇಟ್ ಸ್ಟಡೀಸ್' ಎಂದು ಹೆಸರಿಸಲಾಗಿದೆ.
05:06 PM (IST) Aug 22
ಸಾಮಾನ್ಯವಾಗಿ ಸಿನಿಮಾಗಳು ಶುಕ್ರವಾರ ತೆರೆಕಾಣುತ್ತವೆ. ದೊಡ್ಡ ಸಿನಿಮಾಗಳಾದರೆ ಗುರುವಾರ ಪ್ರೀಮಿಯರ್ ಆಗುತ್ತವೆ. 'ಕೆಜಿಎಫ್-1' ಬಂದಿದ್ದು ಶುಕ್ರವಾರ, 'ಕೆಜಿಎಫ್-2' ಬಂದಿದ್ದು ಗುರುವಾರ. ಆದರೆ 'ಟಾಕ್ಸಿಕ್' ಸಿನಿಮಾ ಆಗಸ್ಟ್ 26, ಬುಧವಾರದಂದು ರಿಲೀಸ್ ಆಗುತ್ತಿದೆ. ಇದರ ಹಿಂದೆ ಇದೆ ಈ ಬಿಗ್ ಸೀಕ್ರೆಟ್!
05:01 PM (IST) Aug 22
ಕಲಬುರಗಿಯಲ್ಲಿ ನಡೆದ ಮಲ್ಲಿಕಾರ್ಜುನ ಖರ್ಗೆ ಅವರ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ನಟ ಪ್ರಕಾಶ್ ರಾಜ್ ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. "ಮಹಾಪ್ರಭು ಮೋದಿ ಇಂದು ತಮ್ಮ ಸ್ವಂತ ಶಕ್ತಿಯ ಮೇಲೆ ನಿಂತಿಲ್ಲ, ಅವರು ಪವನ್ ಕಲ್ಯಾಣ್ ಮತ್ತು ನಿತೀಶ್ ಕುಮಾರ್ ಅವರ ಆಸರೆಯ ಮೇಲೆ ನಿಂತಿದ್ದಾರೆ" ಎಂದು ಲೇವಡಿ ಮಾಡಿದರು.
04:35 PM (IST) Aug 22
ಖಾಕಿ ಎಂದರೆ ಕೇವಲ ಅಧಿಕಾರವಲ್ಲ, ಅದೊಂದು ಜವಾಬ್ದಾರಿ ಎಂಬುದನ್ನು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಮನೆಯಲ್ಲಿ ಸಾವಿನ ಸೂತಕವಿದ್ದರೂ, ವೈಯಕ್ತಿಕ ದುಃಖವನ್ನು ಬದಿಗಿಟ್ಟು ಸಾರ್ವಜನಿಕ ಶಾಂತಿ ಕಾಪಾಡಲು ಅವರು ರಸ್ತೆಗೆ ಇಳಿದಿರುವ ಘಟನೆ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
03:00 PM (IST) Aug 22
ಅವರ ಜೊತೆ ಮಾತಿಗೆ ಮಾತು ಬೆಳೆದು ಚಿಕ್ಕ ಪುಟ್ಟ ವೈಮನಸ್ಯ ಆಗಿದೆ. ಅದಕ್ಕೆ ಅವರು ಈ ರೀತಿ ಆರೋಪ ಮಾಡುತ್ತಿದ್ದಾರೆ. ಸಿನಿಮಾ ನಿಧಾನ ಆಗಿದ್ದಕ್ಕೆ ಈ ರೀತಿ ಜಗಳ ಆಗಿದೆ. ಧಮ್ಕಿ ಹಾಕೋಕೆ ನಾನೇನು ರೌಡಿನಾ..? ಇದು ಜಗಳ ಮಾಡಿ ಮಾತುಕತೆ ಮಾಡುವಂತದ್ದಲ್ಲ…
02:57 PM (IST) Aug 22
02:50 PM (IST) Aug 22
ಕನ್ನಡ ಬಿಗ್‌ಬಾಸ್ ಸೀಸನ್ ಸ್ಪರ್ಧಿ ತಮ್ಮ ಅಜ್ಜನ ತೊಡೆಯ ಮೇಲೆ ಕುಳಿತಿರುವ ಬಾಲ್ಯದ ಫೋಟೋವನ್ನು ಹಂಚಿಕೊಂಡಿದ್ದಾರೆ. ಅಂದಿನ ಮತ್ತು ಇಂದಿನ ಫೋಟೋ ತೆಗೆಯುವ ನಡುವಿನ ವ್ಯತ್ಯಾಸವನ್ನು ಅವರು ವಿವರಿಸಿದ್ದಾರೆ.
02:47 PM (IST) Aug 22
02:16 PM (IST) Aug 22
ಬೆಳ್ಳಿತೆರೆಯ ಮೇಲೆ ನಾಯಕರನ್ನು ಅಜೇಯರಾಗಿ ತೋರಿಸುವ ನಿರ್ದೇಶಕರು, ನಿಜ ಜೀವನದಲ್ಲಿ ಇಂತಹ ಆರೋಪ ಎದುರಿಸುತ್ತಿರುವುದು ಗಾಂಧಿನಗರದಲ್ಲಿ ಈಗ ಬಿಸಿ ಬಿಸಿ ಚರ್ಚೆಯ ವಿಷಯವಾಗಿದೆ. ಈ 'ಫೀನಿಕ್ಸ್' ಸಿನಿಮಾ ಕಥೆ ಎಲ್ಲಿಗೆ ಬಂದು ಮುಟ್ಟುತ್ತೆ? ಈ ಸ್ಟೋರಿ ನೋಡಿ..
01:04 PM (IST) Aug 22
12:41 PM (IST) Aug 22
ಪ್ರತಿಭಟನಾಕಾರರ ಮೇಲೆ ಪೆಲ್ಲೆT ಗನ್ ಬಳಸಿದ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಲು ರಾಹುಲ್ ಗಾಂಧಿ ಧರಣಿ ನಡೆಸಬೇಕಾದ ಸ್ಥಿತಿ ಖಂಡಿಸಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ವಂದೇ ಮಾತರಂ ವಿವಾದವನ್ನು ಗಮನ ಬೇರೆಡೆ ಸೆಳೆಯುವ ತಂತ್ರ ಎಂದು ಬಣ್ಣಿಸಿದರು.
12:31 PM (IST) Aug 22
12:04 PM (IST) Aug 22
ರಾಜ್ಯದಲ್ಲಿ ಶೈಕ್ಷಣಿಕ ವರ್ಷ ಆರಂಭವಾಗಿ ಎರಡು ತಿಂಗಳು ಕಳೆದರೂ, ಮುಂಗಡ ಹಣ ಪಾವತಿಸಿದ ಖಾಸಗಿ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಿಗೆ ಪೂರ್ಣ ಪ್ರಮಾಣದ ಪಠ್ಯಪುಸ್ತಕಗಳು ಪೂರೈಕೆಯಾಗಿಲ್ಲ. ಇದರಿಂದ ವಿದ್ಯಾರ್ಥಿಗಳು ಜೆರಾಕ್ಸ್ ಪ್ರತಿಗಳನ್ನು ಅವಲಂಬಿಸಿದೆ.
12:03 PM (IST) Aug 22
ಗೀತು ಮೋಹನ್‌ದಾಸ್ ನಿರ್ದೇಶನದ ಟಾಕ್ಸಿಕ್ ಸಿನಿಮಾದಲ್ಲಿ ಭಾರೀ ದೊಡ್ಡ ತಾರಾಬಳಗವಿಗೆ. ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್ ಹೀಗೆ ನಟಿಯರ ಬಳಗವಿದೆ, ಜೊತೆಗೆ, ವಿವೇಕ್ ಒಬೆರಾಯ್, ಸುದೇವ್ ನಾಯರ್ ಸೇರಿದಂತೆ ಹಾಲಿವುಡ್ ನಟರುಗಳೂ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ಹೊಸ ದಾಖಲೆ ಏನು ಅಂತ ನೋಡಿ..
11:59 AM (IST) Aug 22
11:49 AM (IST) Aug 22
11:27 AM (IST) Aug 22
ಕರ್ನಾಟಕ ಸರ್ಕಾರವು 500 ಸರ್ಕಾರಿ ಶಾಲೆಗಳನ್ನು 'ಕರ್ನಾಟಕ ಪಬ್ಲಿಕ್ ಶಾಲೆ'ಗಳಾಗಿ ಮೇಲ್ದರ್ಜೆಗೇರಿಸಲು ಏಷ್ಯನ್ ಅಭಿವೃದ್ಧಿ ಬ್ಯಾಂಕ್‌ನೊಂದಿಗೆ 1,750 ಕೋಟಿ ರೂ. ಸಾಲ ಒಪ್ಪಂದಕ್ಕೆ ಸಹಿ ಹಾಕಿದೆ. ಒಟ್ಟು 2,500 ಕೋಟಿ ರೂ. ವೆಚ್ಚದ ಈ ಯೋಜನೆ ಇದಾಗಿದೆ.
11:21 AM (IST) Aug 22
5 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 888 ಮನೆಗಳ ನಿರ್ಮಾಣಕ್ಕೆ ಕೊನೆಗೂ ಚಾಲನೆ ಸಿಕ್ಕಿದೆ. ಜಮೀನು ವಿವಾದಗಳಿಂದ ಸ್ಥಗಿತಗೊಂಡಿದ್ದ ಈ ಯೋಜನೆಯು, ಶಾಸಕ ಇಕ್ಬಾಲ್ ಹುಸೇನ್ ಅವರ ಪ್ರಯತ್ನದಿಂದಾಗಿ ಶಿಡ್ಲುಕಲ್ಲು ಗ್ರಾಮದಲ್ಲಿ ₹54 ಕೋಟಿ ವೆಚ್ಚದಲ್ಲಿ ಕಾರ್ಯಗತಗೊಳ್ಳಲಿದೆ.
11:16 AM (IST) Aug 22
10:41 AM (IST) Aug 22
10:36 AM (IST) Aug 22
10:17 AM (IST) Aug 22
10:07 AM (IST) Aug 22
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸಮಟಗಾರು ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ರತ್ನಕುಮಾರಿ ಅವರು 'ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ-2026'ಕ್ಕೆ ಆಯ್ಕೆಯಾಗಿದ್ದಾರೆ. ಗ್ರಾಮೀಣ ಶಾಲೆಯ ಅಭಿವೃದ್ಧಿ ಮತ್ತು ಮಕ್ಕಳ ಶಿಕ್ಷಣಕ್ಕೆ ನೀಡಿದ ಕೊಡುಗೆಗಾಗಿ ಅವರನ್ನು ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ.
09:56 AM (IST) Aug 22
09:48 AM (IST) Aug 22
ಸಿಂಧೂ ಜಲ ಒಪ್ಪಂದದಡಿ ಪಾಕಿಸ್ತಾನಕ್ಕೆ ವ್ಯರ್ಥವಾಗಿ ಹರಿಯುತ್ತಿದ್ದ ಹಿಮನದಿ ನೀರನ್ನು ಲಡಾಖ್ ಆಡಳಿತ ಯಶಸ್ವಿಯಾಗಿ ಸದ್ಬಳಕೆ ಮಾಡಿಕೊಂಡಿದೆ. ಈ ಯೋಜನೆಯಿಂದಾಗಿ 'ಇಗೂ-ಫೇ' ಕಾಲುವೆಗೆ ಜೀವಕಳೆ ಬಂದಿದ್ದು, ಸಾವಿರಾರು ಎಕರೆ ಬಂಜರು ಭೂಮಿ ಹಸಿರಾಗುವ ನಿರೀಕ್ಷೆಯಲ್ಲಿದೆ.
09:06 AM (IST) Aug 22
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿ ಕೋಟೆಯ ಬಳಿ ನೆಲ ಅಗೆಯುವಾಗ ಒಂದಲ್ಲ ಎರಡಲ್ಲ ಮುನ್ನೂರಕ್ಕೂ ಹೆಚ್ಚು ಪುರಾತನ ಕಾಲದ ನಾಣ್ಯಗಳು ಪತ್ತೆಯಾಗಿವೆ. ಯಾವ ಕಾಲದ್ದು? ನಾಣ್ಯಗಳ ಮೇಲಿನ ಲಿಪಿ ಯಾವ ಭಾಷೆಯಲ್ಲಿದೆ ಹೆಚ್ಚಿನ ವಿವರ ತಿಳಿಯಿರಿ