ಬೆಂಗಳೂರು: ರೇಣುಕಾಸ್ವಾಮಿ ಕೊ*ಲೆ ಪ್ರಕರಣ ಸಂಬಂಧ ನಟ ದರ್ಶನ್, ಆತನ ಗೆಳತಿ ಪವಿತ್ರಾ ಗೌಡ ಸೇರಿ ಎಲ್ಲ ಆರೋಪಿಗಳ ವಿರುದ್ದದ ದೋಷಾರೋಪ ನಿಗದಿ ಪ್ರಕ್ರಿಯೆ ನ.3ಕ್ಕೆ ನಡೆಯಲಿದೆ. ಪ್ರಕರಣ ಸಂಬಂಧ ನಗರದ 57ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಮುಂದೆಶುಕ್ರವಾರ ವಿಚಾರಣೆಗೆ ಬಂದಿತ್ತು. ನ್ಯಾಯಾಲಯವು ನ.3ರಂದು ಪ್ರಕರಣ ಸಂಬಂಧ ದೋಷಾರೋಪ ನಿಗದಿ ಪ್ರಕ್ರಿಯೆ ನಡೆಸಲಾಗುವುದು ಎಂದು ತಿಳಿಸಿ ವಿಚಾರಣೆಯನ್ನು ಮುಂದೂಡಿತು.

11:00 PM (IST) Nov 01
One Child Dead, Three Missing After Drowning in Kaveri River During Picnic ಮೈಸೂರಿನ ಮದರಸದಿಂದ ಪ್ರವಾಸಕ್ಕೆಂದು ಮಂಡ್ಯಕ್ಕೆ ಬಂದಿದ್ದ ನಾಲ್ವರು ಮಕ್ಕಳು ಕಾವೇರಿ ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ.
10:20 PM (IST) Nov 01
Five Stabbed During Kannada Rajyotsava Procession in Belagavi ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವ ಮೆರವಣಿಗೆಯ ಸಂಭ್ರಮದ ವೇಳೆ ದುಷ್ಕರ್ಮಿಗಳು ಐದು ಜನರ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾರೆ. ಸದಾಶಿವ ನಗರದಲ್ಲಿ ನಡೆದ ಈ ಘಟನೆಯಲ್ಲಿ ಗಾಯಗೊಂಡವರನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
09:41 PM (IST) Nov 01
KSRTC Bus Overturns After Hitting Car Near Honnavar ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಗೇರುಸೊಪ್ಪ ಬಳಿ ಕಾರು ಮತ್ತು ಕೆಎಸ್ಆರ್‌ಟಿಸಿ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ.
08:52 PM (IST) Nov 01
Bangalore 25 Year Old MBA Student Supriya Found Dead ಬೆಂಗಳೂರಿನ ಗಾಯತ್ರಿನಗರದಲ್ಲಿ 25 ವರ್ಷದ ಯುವತಿ ಸುಪ್ರಿಯಾ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಎರಡು ದಿನಗಳಿಂದ ಲಾಕ್ ಆಗಿದ್ದ ಆಕೆಯ ಬಾಡಿಗೆ ಮನೆಯ ಕೋಣೆಯಲ್ಲಿ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
08:04 PM (IST) Nov 01
ಕರ್ನಾಟಕದ ಮಾವು ಬೆಳೆಗಾರರಿಗೆ ಕೇಂದ್ರ ಸರ್ಕಾರದ ಗುಡ್ ನ್ಯೂಸ್, ದೇವೇಗೌಡರ ಮನವಿಗೆ ಸಿಕ್ಕಿತು ಫಲ, ಸಂಕಷ್ಟದಲ್ಲಿದ್ದ ಕರ್ನಾಟಕ ಮಾವು ಬೆಳೆಗಾರರ ನೆರವಿಗೆ ಕೇಂದ್ರ ಸರ್ಕಾರ ಧಾವಿಸಿದೆ. 2.5 ಲಕ್ಷ ಮೆಟ್ರಿಕ್ ಟನ್ ಮಾವು ಖರೀದಿಗೆ ಅನುಮೋದನೆ ಸಿಕ್ಕಿದೆ.
07:52 PM (IST) Nov 01
Police Wore Shorts Mosquitoes Bit Them Vatal Nagaraj Recalls Fight for Police Trousers to CM Siddaramaiah ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, 1968ರಲ್ಲಿ ಪೊಲೀಸರಿಗೆ ಚಡ್ಡಿ ಬದಲು ಪ್ಯಾಂಟ್ ಕೊಡಿಸಲು ತಾವು ಮಾಡಿದ ಹೋರಾಟವನ್ನು ನೆನಪಿಸಿಕೊಂಡರು.
07:43 PM (IST) Nov 01
ಸಿಎಸ್‌ಕೆ ಅಲ್ಲ, ಟ್ರೇಡ್ ಮೂಲಕ ಈ ಐಪಿಎಲ್ ತಂಡ ಸೇರಿಕೊಳ್ಳುತ್ತಿದ್ದಾರೆ ಸಂಜು ಸ್ಯಾಮ್ಸನ್, ಈಗಾಗಲೇ ಮಾತುಕತೆಗಳು ನಡೆದಿದ್ದು, ಶೀಘ್ರದಲ್ಲೇ ಸಂಜು ಸ್ಯಾಮ್ಸನ್ ಹೊಸ ಫ್ರಾಂಚೈಸಿ ಸೇರಿಕೊಳ್ಳುತ್ತಿದ್ದಾರೆ.
07:18 PM (IST) Nov 01
Newborn Baby Girl Found Dead on Hoskote Roadside ಬೆಂಗಳೂರು ಗ್ರಾಮಾಂತರದ ಹೊಸಕೋಟೆಯಲ್ಲಿ, ಜನಿಸಿದ ಕೆಲವೇ ಗಂಟೆಗಳಲ್ಲಿ ನವಜಾತ ಹೆಣ್ಣು ಶಿಶುವನ್ನು ರಸ್ತೆ ಬದಿಯ ಪೊದೆಯಲ್ಲಿ ಎಸೆದು ಹೋಗಿರುವ ಅಮಾನುಷ ಘಟನೆ ನಡೆದಿದೆ.
07:12 PM (IST) Nov 01
ಆರ್‌ಎಸ್ಎಸ್ ನೋಂದಣಿ ಮಾಡಿಲ್ಲ ಯಾಕೆ? ಪಥಸಂಚಲನದ ವೇಳೆ ಉತ್ತರ ನೀಡಿದ ರವೀಂದ್ರ, ಇದೇ ವೇಳೆ ಲಾಠಿಯಿಂದ ಪ್ರಿಯಾಂಕ್ ಖರ್ಗೆ ಹೆದರಬೇಕಿಲ್ಲ ಎಂದಿದ್ದಾರೆ. ಇಷ್ಟೇ ಅಲ್ಲ ಡಿಕೆಶಿ ಹೆಸರು ಹೇಳದೆ ನಮಸ್ತೆ ಸದಾ ವತ್ಸಲೇ ಹೇಳಿದವರಿಗೆ ತೊಂದರೆ ಕೊಟ್ಟ ಘಟನೆಯನ್ನೂ ಪ್ರಸ್ತಾಪಿಸಿದ್ದಾರೆ.
06:22 PM (IST) Nov 01
ಕಲರ್ಸ್ ಕನ್ನಡದ ಅಧಿಕೃತ ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ ಖಾತೆಗಳು ಏಕಾಏಕಿ ಕಣ್ಮರೆಯಾಗಿವೆ. ಬಿಗ್ ಬಾಸ್ನಂತಹ ಕಾರ್ಯಕ್ರಮಗಳ ಅಪ್ಡೇಟ್ಗಾಗಿ ಕಾಯುತ್ತಿದ್ದ ವೀಕ್ಷಕರಿಗೆ ಇದರಿಂದ ಆಘಾತವಾಗಿದ್ದು, ತಾಂತ್ರಿಕ ಸಮಸ್ಯೆಯಿಂದ ಹೀಗಾಗಿದೆ ಎಂದು ಹೇಳಲಾಗುತ್ತಿದೆ.
05:09 PM (IST) Nov 01
Bihar Election Outcome CM Wont Change PM Might Change Says Minister Santosh Lad ಬಿಹಾರ ಚುನಾವಣೆ ಬಳಿಕ ಕರ್ನಾಟಕದಲ್ಲಿ ಸಿಎಂ ಬದಲಾವಣೆ ಆಗುವುದು ಕೇವಲ ಊಹಾಪೋಹ, ಬೇಕಿದ್ದರೆ ಪ್ರಧಾನಿಯೇ ಬದಲಾಗಬಹುದು ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
05:08 PM (IST) Nov 01
ಶಾಂತಿಕದಡುವ ಆರ್‌ಎಸ್ಎಸ್ ಬ್ಯಾನ್ ಆಗ್ಬೇಕ್, ಖರ್ಗೆ ಬಳಿಕ ನಿಷೇಧಕ್ಕೆ ಆಗ್ರಹಿಸಿದ ಬಿಕೆ ಹರಿಪ್ರಸಾದ್, RSS ಪರ ಇದ್ದವರಿಗೆ ಕಾಂಗ್ರೆಸ್‌ನಲ್ಲಿ ಜಾಗ ಇಲ್ಲ. ಆರ್‌ಎಸ್ಎಸ್ ಕೋಮುಗಲಭೆಗಳಿಗೆ ಪ್ರತ್ಯಕ್ಷ ಕಾರಣವಾಗಿದೆ ಎಂದು ಬಿಕೆ ಹರಿಪ್ರಸಾದ್ ಹೇಳಿದ್ದಾರೆ.
04:21 PM (IST) Nov 01
04:10 PM (IST) Nov 01
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಮತ್ತು ಬಿಜೆಪಿ ನಾಯಕ ಪ್ರತಾಪ್ ಸಿಂಹ ಅವರ ನಡುವಿನ ವೈಯಕ್ತಿಕ ವಾಗ್ದಾಳಿಯನ್ನು ನಿಲ್ಲಿಸುವಂತೆ ಕರೆ ನೀಡಿದ್ದಾರೆ. ಇಬ್ಬರೂ ಯುವ ಸಮೂಹಕ್ಕೆ ಮಾದರಿಯಾಗಬೇಕು ಎಂದು ಅಕ್ಕನಾಗಿ ಕಿವಿಮಾತು ಹೇಳುವುದಾಗಿ ಹೇಳಿದ್ದಾರೆ.
03:42 PM (IST) Nov 01
ಬಿಗ್‌ಬಾಸ್ 12 ಸೀಸನ್ ಮುಗಿಯಲು ಇನ್ನೂ ಎರಡು ತಿಂಗಳು ಬಾಕಿ ಇರುವಾಗಲೇ, ಗ್ರ್ಯಾಂಡ್ ಫಿನಾಲೆಯ ಎಐ ನಿರ್ಮಿತ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಫೋಟೋದಲ್ಲಿ ಕಿಚ್ಚ ಸುದೀಪ್ ಅವರೊಂದಿಗೆ ಅಂತಿಮ ಸ್ಪರ್ಧಿಗಳಾಗಿ ಕಾಣಿಸಿಕೊಂಡಿದ್ದು, ಇದು ವೀಕ್ಷಕರಲ್ಲಿ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ.
03:30 PM (IST) Nov 01
South Indian Celebrity Home: ದಕ್ಷಿಣ ಭಾರತದ ಚಿತ್ರರಂಗದಲ್ಲಿ ಅತಿ ದುಬಾರಿ ಮನೆ ಹೊಂದಿರುವ ಸ್ಟಾರ್ ಹೀರೋ ಯಾರು ಗೊತ್ತಾ? ದುಬಾರಿ ಮನೆಗಳನ್ನು ಹೊಂದಿರುವ ಹೀರೋಗಳಲ್ಲಿ ತೆಲುಗು ಹೀರೋಗಳು ಎಷ್ಟು ಮಂದಿ ಇದ್ದಾರೆ? 150 ಕೋಟಿ ಮೌಲ್ಯದ ಮನೆಯಲ್ಲಿ ವಾಸಿಸುತ್ತಿರುವ ಹೀರೋ ಯಾರು?
03:09 PM (IST) Nov 01
Junior Rakshitha Shetty: ಬಿಗ್‌ಬಾಸ್ ಖ್ಯಾತಿಯ ರಕ್ಷಿತಾ ಶೆಟ್ಟಿಯವರಂತೆ ಕಾಣುವ ಪ್ರಗತಿ ಎಂಬ ಯುವತಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾರೆ. ರಕ್ಷಿತಾ ಅವರ ಸಂಭಾಷಣೆಗಳಿಗೆ ರೀಲ್ಸ್ ಮಾಡುವ ಇವರನ್ನು ನೆಟ್ಟಿಗರು 'ಜೂನಿಯರ್ ರಕ್ಷಿತಾ ಶೆಟ್ಟಿ' ಎಂದು ಕರೆಯುತ್ತಿದ್ದಾರೆ.
03:00 PM (IST) Nov 01
Bengaluru Cab Problems: ಬೆಂಗಳೂರಿನಲ್ಲಿ ಊಬರ್, ಒಲಾ, ರ್ಯಾಪಿಡೋ ಕ್ಯಾಬ್‌ಗಳ ಕೆಲ ಡ್ರೈವರ್‌ಗಳು ನಕಲಿ ಆಪ್ ತೋರಿಸಿ ವಂಚನೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಓರ್ವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.
02:21 PM (IST) Nov 01
ಸಾಕಷ್ಟು ಕಂಪೆನಿಗಳು ಲೇಆಫ್ ಮಾಡಿವೆ. ಕೊರೊನಾ ವೈರಸ್ ಬಂದು, ಲಾಕ್‌ಡೌನ್ ಆದಬಳಿಕ ಸಾಕಷ್ಟು ಉದ್ಯೋಗಗಳಲ್ಲಿ ಲೇಆಫ್ ಆಗಿವೆ, ಕಳೆದ ಎರಡು ವರ್ಷಗಳಿಂದ ಎಐ ತಂತ್ರಜ್ಞಾನ ಕೂಡ ಮುಂದುವರೆದಿದ್ದು, ಇದರಿಂದಲೂ ಉದ್ಯೋಗಿಗಳನ್ನು ಕಡಿತ ಮಾಡಲಾಗ್ತಿದೆ.
02:00 PM (IST) Nov 01
ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ಕರಾಳ ದಿನಾಚರಣೆ, ಎಂಇಎಸ್ ಮುಖಂಡ ಶುಭಂ ಶೆಳಕೆ ವಶ, ಅನುಮತಿ ಪಡೆಯದೇ ಕರಾಳ ದಿನಾಚರಣೆ ಮೆರವಣಿಗೆ, ನಿರ್ಬಂಧಿತ ಪ್ರದೇಶಕ್ಕೆ ನುಗ್ಗಿದ ಎಂಇಎಸ್ ಪುಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
01:25 PM (IST) Nov 01
ನಟ ದರ್ಶನ್ ಅವರ ಬೆನ್ನುನೋವಿನ ಬಗ್ಗೆ ಇದ್ದ ಅನುಮಾನಗಳಿಗೆ 'ಡೆವಿಲ್' ಚಿತ್ರದ ನಾಯಕಿ ರಚನಾ ರೈ ತೆರೆ ಎಳೆದಿದ್ದಾರೆ. ಶೂಟಿಂಗ್ ವೇಳೆ ತೀವ್ರ ನೋವಿದ್ದರೂ ತಮ್ಮನ್ನು ಎತ್ತಿಕೊಂಡ ದೃಶ್ಯದ ನಂತರ ದರ್ಶನ್ ಅವರು ನೋವಿನಿಂದ ನೆಲದ ಮೇಲೆ ಮಲಗಿ ಬಿಟ್ಟರು ಎಂದು ರಚನಾ ಆ ದಿನದ ಘಟನೆಯನ್ನು ವಿವರಿಸಿದ್ದಾರೆ.
12:53 PM (IST) Nov 01
Colors Kannada Serials Kannada Habba: ಕಲರ್ಸ್ ಕನ್ನಡ ವಾಹಿನಿಯು ತನ್ನ ಧಾರಾವಾಹಿಗಳಲ್ಲಿಯೂ ಕನ್ನಡ ರಾಜ್ಯೋತ್ಸವವನ್ನು ವಿಶಿಷ್ಟವಾಗಿ ಆಚರಿಸಲಿದೆ. ಕಲರ್ಸ್ ಕನ್ನಡದ ಧಾರಾವಾಹಿಗಳಲ್ಲಿ ಒಟ್ಟಿನಲ್ಲಿ ನವೆಂಬರ್ ತಿಂಗಳು ಪೂರ್ತಿ ಕನ್ನಡದ ಸಂಭ್ರಮ ಜೋರಾಗಿ ನಡೆಯಲಿದೆ.
12:42 PM (IST) Nov 01
12:40 PM (IST) Nov 01
ಖಾಸಗಿ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿಸುತ್ತಾ ಸರ್ಕಾರಾ? ಸಚಿವ ರಾಮಲಿಂಗರೆಡ್ಡಿ ಸ್ಪಷ್ಟನೆ, ಮುಜರಾಯಿ ಇಲಾಖೆ ಅಡಿಯಲ್ಲಿ 35 ಸಾವಿರ ದೇವಸ್ಥಾನಗಳಿವೆ ಎಂದಿರುವ ಸಚಿವರು, ಯಾವ ದೇವಾಲಯಗಳನ್ನು ಸರ್ಕಾರ ಕೈವಶ ಮಾಡಲಿದೆ ಅನ್ನೋ ಕುರಿತು ವಿವರಣೆ ನೀಡಿದ್ದಾರೆ.
12:20 PM (IST) Nov 01
2047ರಲ್ಲಿ ದೇಶ ಅಭಿವೃದ್ಧಿಶೀಲ ಹಾಗೂ ವಿಕಸಿತ ಭಾರತವಾಗಿಸುವ ದಿಸೆಯಲ್ಲಿ ಪ್ರಧಾನಿಗೆ ದೇಶದ ಪ್ರತಿಯೊಬ್ಬರೂ ಬೆಂಬಲಿಸಬೇಕಾಗಿದೆ ಎಂದು ಶಾಸಕ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮನವಿ ಮಾಡಿದರು.
11:57 AM (IST) Nov 01
ಕನ್ನಡ ರಾಜ್ಯೋತ್ಸವದಂದು ಬೆಳಗಾವಿಯಲ್ಲಿ ಎಂಇಎಸ್ ಕರಾಳ ದಿನ ಆಚರಿಸಿದೆ. ಈ ವೇಳೆ, ನಾಡದ್ರೋಹಿ ಸಂಘಟನೆಯ ಮುಖಂಡ ಶುಭಂ ಶಳಕೆ ಜೊತೆ ಮಾಳಮಾರುತಿ ಠಾಣೆ ಸಿಪಿಐ ಜೆಎಂ ಕಾಲಿಮಿರ್ಚಿ ಸೆಲ್ಫಿ ತೆಗೆದುಕೊಂಡಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
11:42 AM (IST) Nov 01
ಅಯಾನ್ ಹೋಂ ಸ್ಟೇನಲ್ಲಿ ರೇವ್ ಪಾರ್ಟಿ ಆರೋಪ ಹಿನ್ನೆಲೆಯಲ್ಲಿ ತಡರಾತ್ರಿ ಕಗ್ಗಲೀಪುರ ಪೊಲೀಸರು ದಾಳಿ ಮಾಡಿ ಯುವಕ, ಯುವತಿಯರು ಸೇರಿ 130 ಹೆಚ್ಚು ಜನರನ್ನು ಬಂಧಿಸಿದ್ದಾರೆ. 19-23 ವರ್ಷದವರೆಗಿನ ಯುವಕ ಯುವತಿಯರು ಪಾರ್ಟಿಯಲ್ಲಿ ಭಾಗಿಯಾಗಿದ್ದರು.
11:35 AM (IST) Nov 01
ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ, ಜ್ಞಾನಪೀಠ ಮತ್ತು ಭಾರತ ರತ್ನ ಪ್ರಶಸ್ತಿ ಪುರಸ್ಕೃತರ ಹುಟ್ಟೂರುಗಳ ಸರ್ವತೋಮುಖ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ತಲಾ ಒಂದು ಕೋಟಿ ರೂಪಾಯಿ ವಿಶೇಷ ಅನುದಾನ ಘೋಷಿಸಿದೆ. ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆಯವರು ಈ ಘೋಷಣೆ ಮಾಡಿದ್ದಾರೆ.
11:18 AM (IST) Nov 01
ದೃಶ್ಯಂ ನಿರ್ದೇಶಕ ಜೀತು ಜೋಸೆಫ್ ಅವರಿಂದ ಸಿನಿಮಾ ಬರ್ತಿದೆ ಅಂದ್ರೆ ಥ್ರಿಲ್ಲರ್ ಪ್ರಿಯರಿಗೆ ಹಬ್ಬವೇ ಸರಿ. ಅವರು ನಿರ್ದೇಶಿಸಿದ ಇತ್ತೀಚಿನ ಸಿನಿಮಾ 'ಮಿರಾಜ್' ಸದ್ಯ ಓಟಿಟಿಯಲ್ಲಿ ಪ್ರೇಕ್ಷಕರನ್ನು ಸಖತ್ ಆಗಿ ಸೆಳೆಯುತ್ತಿದೆ. ಆ ಸಿನಿಮಾದ ವಿಶೇಷತೆಗಳೇನು ನೋಡೋಣ.
11:12 AM (IST) Nov 01
OTT Release November 2025: ಕನ್ನಡ ರಾಜ್ಯೋತ್ಸವದ ಖುಷಿಯ ಜೊತೆಗೆ ವೀಕೆಂಡ್ ಸಮಯ. ಯಾವ ಸಿನಿಮಾ ನೋಡಬೇಕು? ಯಾವ ಸಿರೀಸ್ ನೋಡಬೇಕು ಎಂದು ವೀಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಹಾಗಾದರೆ ಟಾಪ್ 7 ಸಿನಿಮಾಗಳು ಯಾವುವು? ಯಾವ ಸಿಇಮಾ ಎಲ್ಲಿ ಸ್ಟ್ರೀಮಿಂಗ್ ಆಗ್ತಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
10:46 AM (IST) Nov 01
MES Black Day rally in Belagavi ಕನ್ನಡ ರಾಜ್ಯೋತ್ಸವದ ದಿನದಂದು ಬೆಳಗಾವಿ ಗಡಿಗೆ ಪ್ರವೇಶಿಸಲು ಯತ್ನಿಸಿದ ಶಿವಸೇನೆಯ ಪುಂಡರನ್ನು ಕರ್ನಾಟಕ ಪೊಲೀಸರು ತಡೆದು ವಾಪಸ್ ಕಳುಹಿಸಿದ್ದಾರೆ. ನಾಡದ್ರೋಹಿ ಎಂಇಎಸ್ ಸಂಘಟನೆಯು ಬೆಳಗಾವಿಯಲ್ಲಿ ಕರಾಳ ದಿನದ ಮೆರವಣಿಗೆಯನ್ನು ನಡೆಸಿದೆ.
10:34 AM (IST) Nov 01
ತಮಿಳು ಚಿತ್ರರಂಗದ ಪ್ರಮುಖ ಮಾಸ್ ನಟ ಅಜಿತ್ ಕುಮಾರ್, ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ, ಕಾರು ಹತ್ತಿದ ಮೇಲೆ ಕೈಯಿಂದ ರಕ್ತ ಬರುತ್ತಿತ್ತು. ಅಭಿಮಾನಿಗಳ ಭೇಟಿಯ ವೇಳೆ ನಡೆದ ಕಹಿ ಘಟನೆಯನ್ನು ಹಂಚಿಕೊಂಡಿದ್ದಾರೆ.
10:28 AM (IST) Nov 01
ಅಪ್ಪನದ್ದು ಪ್ರಾಮಾಣಿಕತೆ ನೇರ ದಾರಿ. ಮಗನದ್ದು ಕ್ರಿಕೆಟ್ಟು, ಬೆಟ್ಟಿಂಗ್‌ನ ಎನ್ನುವ ಅಡ್ಡದಾರಿ. ಈಗ ಗೆಲ್ಲೋದು ಅಪ್ಪನ ದಾರಿಯೋ, ಮಗನದ್ದೋ ಎನ್ನುವ ಪ್ರಶ್ನೆಯನ್ನು ಪ್ರೇಕ್ಷಕರ ಮುಂದಿಟ್ಟು ‘ಬ್ರ್ಯಾಟ್’ ಸಿನಿಮಾ ಹಲವು ತಿರುವುಗಳಲ್ಲಿ ಸಂಚರಿಸುತ್ತದೆ.
10:23 AM (IST) Nov 01
Satish Jarkiholi vehicle fuel leak: ಬೆಳಗಾವಿಯಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರ ಪಥಸಂಚಲನ ಪರಿವೀಕ್ಷಣಾ ವಾಹನದಲ್ಲಿ ದಿಢೀರ್ ಇಂಧನ ಸೋರಿಕೆಯಾಗಿದೆ. ಈ ಅನಿರೀಕ್ಷಿತ ಘಟನೆಯಿಂದಾಗಿ, ಕೊನೆ ಕ್ಷಣದಲ್ಲಿ ಸಚಿವರ ಪರಿವೀಕ್ಷಣೆಯನ್ನು ರದ್ದುಗೊಳಿಸಲಾಯಿತು.
10:10 AM (IST) Nov 01
ಕನ್ನಡ ಎಂದಾಕ್ಷಣ ಕನ್ನಡಿಗರಿಗೆ ಮೈಮನ ನವಿರೇಳುವುದು ಸಹಜ. ಆದರೆ ಉದ್ಯೋಗ, ವಿದ್ಯಾಭ್ಯಾಸ ಇನ್ನಿತರೆ ಕಾರಣಕ್ಕಾಗಿ ದೇಶ ಬಿಟ್ಟು ವಿದೇಶದಲ್ಲಿ ನೆಲೆಸಿದ ಕನ್ನಡಿಗರ ಕಥೆ ಏನು ಎನ್ನುವುದು ಸಹಜವಾಗಿ ಮೂಡುವ ಪ್ರಶ್ನೆ.
09:57 AM (IST) Nov 01
Bigg Boss 19 Show: ಬಿಗ್ ಬಾಸ್ ಮನೆಯಲ್ಲಿ ಜಗಳ, ಸ್ನೇಹ, ಪ್ರೀತಿ ಎಲ್ಲವೂ ಇರುವುದು. ಸಾಕಷ್ಟು ಕಾಂಟ್ರವರ್ಸಿಗಳು ಸೃಷ್ಟಿ ಮಾಡುವ ಈ ಶೋನಲ್ಲಿ ಹೆಣ್ಣು ಮಕ್ಕಳೇ ಸೇರಿಕೊಂಡು, ಇನ್ನೋರ್ವ ಹೆಣ್ಣನ್ನು ನಿಂದಿಸಿದ್ದಾರೆ. ಬಾಡಿಶೇಮಿಂಗ್ ಮಾಡಿದವರನ್ನು ಈಗ ನಿರೂಪಕರು ತರಾಟೆಗೆ ತೆಗೆದುಕೊಂಡಿದ್ದಾರೆ.
09:52 AM (IST) Nov 01
ಪಿಸಿಓಎಸ್‌ನಿಂದ ಬಳಲುತ್ತಿರುವವರಲ್ಲಿ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುವ ಮೂರು ಬೆಳಗಿನ ಅಭ್ಯಾಸಗಳ ಬಗ್ಗೆ ಆರೋಗ್ಯ ತಜ್ಞ ಡ್ರೂ ಬೈರ್ಡ್ ಇತ್ತೀಚೆಗೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
09:46 AM (IST) Nov 01
ಐಸಿಸಿ ಮಹಿಳಾ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತದ ಗೆಲುವಿನ ನಂತರ ಜೆಮಿಮಾ ರೋಡ್ರಿಗ್ಸ್ ಹೆಸರು ಜೋರಾಗಿ ಕೇಳಿಬರುತ್ತಿದೆ. ಅವರ ಆಟಕ್ಕೆ ಫಿದಾ ಆದ ಅಭಿಮಾನಿಗಳು, ಈ ಮಟ್ಟಕ್ಕೆ ಬೆಳೆದದ್ದು ಹೇಗೆ ಎಂದು ತಿಳಿಯಲು ಪ್ರಯತ್ನಿಸುತ್ತಿದ್ದಾರೆ.
09:43 AM (IST) Nov 01
ಪ್ರಸಕ್ತ ಸಾಲಿನ (2025-26) ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡವೂ ಸೇರಿ ಪ್ರಥಮ ಭಾಷಾ ವಿಷಯಗಳಿಗೆ ವಿದ್ಯಾರ್ಥಿಗಳು 125 ಅಂಕಗಳಿಗೆ ಪರೀಕ್ಷೆ ಬರೆಯಬೇಕೇ? ಇಲ್ಲವೇ 100 ಅಂಕಗಳಿಗೆ ಬರೆಯಬೇಕೇ?
09:37 AM (IST) Nov 01
ಶ್ರೀ ತ್ಯಾಗರಾಜ ಕೋ ಆಪರೇಟಿವ್ ಬ್ಯಾಂಕ್‌ನಿಂದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಅಂಗವಾಗಿ ಸರ್ಕಾರಿ ಶಾಲಾ ಹೆಣ್ಣು ಮಕ್ಕಳಿಗೆ ‘ಐಸಿರಿ ಸಮೃದ್ಧಿ’ ಯೋಜನೆ ಪರಿಚಯಿಸಲಾಗುತ್ತಿದೆ. ಸುಕನ್ಯ ಸಮೃದ್ಧಿ ಯೋಜನೆ ಮಾದರಿಯಲ್ಲಿರುವ ಐಸಿರಿ ಸಮೃದ್ಧಿ ಯೋಜನೆಯಡಿ 500 ರು.ಯೊಂದಿಗೆ ಆಯಾ ಶಾಲಾ ಮಕ್ಕಳ ಹೆಸರಿನಲ್ಲಿ ಖಾತೆ