ಆರ್‌ಎಸ್ಎಸ್ ನೋಂದಣಿ ಮಾಡಿಲ್ಲ ಯಾಕೆ? ಪಥಸಂಚಲನದ ವೇಳೆ ಉತ್ತರ ನೀಡಿದ ರವೀಂದ್ರ, ಇದೇ ವೇಳೆ ಲಾಠಿಯಿಂದ ಪ್ರಿಯಾಂಕ್ ಖರ್ಗೆ ಹೆದರಬೇಕಿಲ್ಲ ಎಂದಿದ್ದಾರೆ. ಇಷ್ಟೇ ಅಲ್ಲ ಡಿಕೆಶಿ ಹೆಸರು ಹೇಳದೆ ನಮಸ್ತೆ ಸದಾ ವತ್ಸಲೇ ಹೇಳಿದವರಿಗೆ ತೊಂದರೆ ಕೊಟ್ಟ ಘಟನೆಯನ್ನೂ ಪ್ರಸ್ತಾಪಿಸಿದ್ದಾರೆ.

ಶಿರಾಳಕೊಪ್ಪ (ನ.01) ಆರ್‌ಎಸ್ಎಸ್ 100ನೇ ವರ್ಷಾಚರಣೆ ಪ್ರಯುಕ್ತ ದೇಶದ ಮೂಲೆ ಮೂಲೆಯಲ್ಲಿ ಆರ್‌ಎಸ್ಎಸ್ ಪಥಸಂಚಲನ ಸೇರಿದಂತೆ ಹಲವು ಕಾರ್ಯಚಟುವಟಿಕೆ ನಡೆಸುತ್ತಿದೆ. ಶಿವಮೊಗ್ಗದ ಶಿರಾಳಕೊಪ್ಪದಲ್ಲಿ ಆರ್‌ಎಸ್ಎಸ್ ಪಥಸಂಚಲನ ನಡೆಸಿದೆ. ಈ ವೇಳೆ ಆರ್‌ಎಸ್ಎಸ್ ಪ್ರಾಂತ ಕಾರ್ಯವಾಹಕ ಬಾ ರವೀಂದ್ರ ಮಾಡಿದ ಭಾಷಣ ಇದೀಗ ವೈರಲ್ ಆಗಿದೆ. ಆರ್‌ಎಸ್ಎಸ್ ನೋಂದಣಿ ಮಾಡದ ಸಂಘಟನೆ ಎಂದು ಕಾಂಗ್ರೆಸ್ ನಾಯಕರು ಪದೇ ಪದೇ ಆರೋಪ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಪಥಸಂಚಲನಕ್ಕೆ ಅವಕಾಶ ನಿರಾಕರಿಸಲಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಆದರೆ ಆರ್‌ಎಸ್ಎಸ್ ಈ ಸಮಾಜದಲ್ಲಿರುವ ಒಂದು ಸಂಘಟನೆಯಲ್ಲ, ಆರ್‌ಎಸ್ಎಸ್ ಸಮಾಜವನ್ನು ಒಗ್ಗೂಡಿಸುತ್ತದೆ ಎಂದು ರವೀಂದ್ರ ಹೇಳಿದ್ದಾರೆ.

ಆರ್‌ಎಸ್ಎಸ್ ಅನೌಪಚಾರಿಕ ವ್ಯವಸ್ಥೆ

ಆರ್‌ಎಸ್ಎಸ್ ಒಂದು ಅನೌಪಚಾರಿಕ ವ್ಯವಸ್ಥೆ. ಆರ್‌ಎಸ್ಎಸ್ ಸದಸ್ಯರ ನೊಂದಣಿ ಮಾಡುವುದಿಲ್ಲ. ನಮ್ಮದು ಅನೌಪಚಾರಿಕ ಆಂದೋಲನ. ಆರ್‌ಎಸ್ಎಸ್ ಒಂದು ರೀತಿಯ ಡಾಕ್ಟರ್ ಟ್ರೀಟ್ಮೆಂಟ್ ಇದ್ದಹಾಗೆ. ಸಂಸ್ಕಾರದ ಮೂಲಕ ಸಮಾಜವನ್ನು ಜಾಗೃತಿಗೊಳಿಸುವುದು ಆರ್‌ಎಸ್ಎಸ್ ಕೆಲಸ ಎಂದು ಬಾ ರವೀಂದ್ರ ಹೇಳಿದ್ದಾರೆ. ಆರೋಪಗಳಿಗೆ ಆರ್‌ಎಸ್ಎಸ್ ಉತ್ತರಕೊಡುವುದಿಲ್ಲ. ಟಿವಿ, ಪತ್ರಿಕೆ ಮೂಲಕ ಉತ್ತರ ಕೊಡುವ ಕೆಲಸ ಆರ್‌ಎಸ್ಎಸ್ ಮಾಡುವುದಿಲ್ಲ. ಆದರೆ ಆರ್‌ಎಸ್ಎಸ್ ಸದಸ್ಯರು ಅವರ ಮನೆ ಮನೆಗೆ ಹೋಗಿ ಉತ್ತರ ಕೊಡುತ್ತೇವೆ. ಆರ್‌ಎಸ್ಎಸ್ ಏನೆಲ್ಲ ಬೈಯಬೇಕು ಬೈಯ್ಯಲಿ ನಂತರ ನಮ್ಮ ಉತ್ತರ ಕೊಟ್ಟು ಅವರ ಮನೆಯಲ್ಲಿ ಚಾ ಕುಡಿದು ಹೋಗುತ್ತೇವೆ ಎಂದು ರವೀಂದ್ರ ಹೇಳಿದ್ದಾರೆ.

1963 ರ ಗಣರಾಜ್ಯೋತ್ಸವದ ಪೇರೆಡ್ ನಲ್ಲಿ ಆರ್‌ಎಸ್ಎಸ್ ಆಹ್ವಾನ ಮಾಡಿದ್ದರು. ಸಂಘದ ಪತ್ರಿಕೆಗಳು ಇವೆ ಮನೆಮನೆ ಸಂಪರ್ಕದ ಮಾಧ್ಯಮ ಇದೆ . ಆರ್ ಎಸ್ ಎಸ್ ಬಗ್ಗೆ ಪ್ರಶ್ನೆ ಇದ್ದರೆ ಅವರ ಮನೆಗೆ ಹೋಗಿ. ಅಯೋಧ್ಯೆದಲ್ಲಿ ದಸರಾದಲ್ಲಿ ಇಂಡೋನೇಷಿಯಾದ ಮುಸ್ಲಿಂ ಕಲಾವಿದರು ಸೀತಾ ಕಲ್ಯಾಣ ನಾಟಕ ಪ್ರದರ್ಶನ ಮಾಡಿದರು. ಮನುಷ್ಯನಿಗೆ ಶಕ್ತಿ ಬೇಕು ಶಕ್ತಿಯ ಸಂಕೇತವಾಗಿ ನವರಾತ್ರಿಯಲ್ಲಿ ಆಯುಧ ಪ್ರದರ್ಶನಗಳಿರುತ್ತವೆ. ಶಕ್ತಿಯ ಶೀಲದ ಜೊತೆ ಇರಬೇಕು ನಡವಳಿಕೆ ಚೆನ್ನಾಗಿರಬೇಕು ಎಂದಿದ್ದಾರೆ.

ಪ್ರಿಯಾಂಕ್ ಖರ್ಗೆ ಆರ್‌ಎಸ್ಎಸ್ ದಂಡಕ್ಕೆ ಹೆದರಬೇಕಿಲ್ಲ

ಸಚಿವ ಪ್ರಿಯಾಂಕ ಖರ್ಗೆ ಆರ್ ಎಸ್ ಎಸ್ ದಂಡದ ಬಗ್ಗೆ ಹೆದರಿಕೊಳ್ಳುವ ಅವಶ್ಯಕತೆ ಇಲ್ಲ. ಆರ್ಮ್ಸ್ ಆ್ಯಕ್ಟ್ ನಲ್ಲಿ ಲಾಟಿ ಬಳಸಬಹುದು ಎಂದು ಹೇಳಿದ್ದಾರೆ. ಶಸ್ತ್ರ ಬಳಸುವುದಕ್ಕೆ ಸೈನ್ಯ ಮತ್ತು ಪೊಲೀಸರಿಗೆ ಅಧಿಕಾರ ಇದೆ. ಹೀಗಾಗಿ ಯಾರು ಹೆದರುವ ಅವಶ್ಯಕತೆ ಇಲ್ಲ. ಗಣವೇಷಧಾರಿಗೆ ದಂಡ ಇದೆ. ಇದು ಕಳೆದ 100 ವರ್ಷದಿಂದ ಇದೇ ಗಣವೇಶದಲ್ಲಿದೆ.

ರಾಜಶಕ್ತಿ ಚೆನ್ನಾಗಿರಬೇಕಾದರೆ ಲೋಪಶಕ್ತಿ ಚೆನ್ನಾಗಿರಬೇಕು. ಇಂದಿರಾಗಾಂಧಿ ಪಾಕಿಸ್ತಾನ ವಿರುದ್ಧ ಜಯಗಳಿಸಲಿಲ್ಲವೇ. ಶಸ್ತ್ರ ಶಕ್ತಿ ಚೆನ್ನಾಗಿ ಇರಬೇಕಾದರೆ ರಾಜಶಕ್ತಿ ಚೆನ್ನಾಗಿರಬೇಕು. ಆರ್ ಎಸ್ ಎಸ್ ಶಸ್ತ್ರ ಶಕ್ತಿ ರಾಜಶಕ್ತಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿಲ್ಲ . ಮುಖ್ಯಮಂತ್ರಿ ಗದ್ದುಗೆ ಮೇಲೆ ಬಿಜೆಪಿಯವರಿದ್ದಾರೋ ಕಾಂಗ್ರೆಸ್ ನವರು ಇದ್ದಾರೋ ಬೇರೆಯವರಿದ್ದರೋ ಇದು ಆರ್ ಎಸ್ ಎಸ್ ಗೆ ಸಂಬಂಧಿಸಿದಲ್ಲ. ಬಿಜೆಪಿ ಅಧಿಕಾರದಲ್ಲಿದ್ದಾಗ ನಮ್ಮ ಸರ್ಕಾರ ಎನ್ನುತ್ತಾರೆ. ಅದು ಸರಿಯಲ್ಲ. ಗೆದ್ದು ಆಡಳಿತ ಮಾಡುವವರು ಎಲ್ಲರೂ ನಮ್ಮವರೇ ಎಂದು ರವೀಂದ್ರ ಹೇಳಿದ್ದಾರೆ.

ಸರ್ಕಾರಿ ಸೇವಕರು ಆರ್ ಎಸ್ ಎಸ್ ನಲ್ಲಿ ಪಾಲ್ಗೊಳ್ಳಬೇಕೋ ಬೇಡವೋ ಎಂದು ಚರ್ಚೆ ನಡೆಯುತ್ತಿದೆ. ಸರ್ಕಾರಿ ನೌಕರರು ರಾಜಕೀಯ ವ್ಯವಸ್ಥೆಯ ಸಂಬಂಧ ಇರಬಾರದು ಎಂಬುದು ಒಪ್ಪಿಕೊಳ್ಳುತ್ತೇನೆ. ಅಧಿಕಾರದಲ್ಲಿ ಯಾರೇ ಇದ್ದರೂ ದೇಶಕ್ಕೆ ಅನುಕೂಲವಾಗಿ ಹಿಂದು ಸಮಾಜಕ್ಕೆ ಅನುಕೂಲವಾಗಿ ನಡೆದುಕೊಳ್ಳಬೇಕು ಎಂದಿದ್ದಾರೆ

ನಮಸ್ತೆ ಸದಾ ವತ್ಸಲೇ ಅಂದವರಿಗೆ ತೊಂದರೆ ಕೊಟ್ಟಿದ್ದು ನೋಡಿಲ್ಲವೆ

ನಮಸ್ತೆ ಸದಾ ವತ್ಸಲೇ ಎಂದು ಹೇಳಿದ್ದಕ್ಕೆ ತೊಂದರೆ ಕೊಟ್ಟಿದ್ದು ನೋಡಿಲ್ಲವೇ ? ಇಂದು ಡಿಕೆಶಿ ಸದನದಲ್ಲಿ ಹೇಳಿದ್ದನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ ರವೀಂದ್ರ, ಆರ್ ಎಸ್ ಎಸ್, ಬಿಜೆಪಿ, ಎಬಿವಿಪಿ ಬೇರೆ ಬೇರೆ ವ್ಯವಸ್ಥೆಗಳು ಯಾವುದು ಒಂದಕ್ಕೊಂದು ಸಂಬಂಧಿಸಿದಲ್ಲ.

ಆರ್ ಎಸ್ ಎಸ್ ನಿಂದ ಭ್ರಷ್ಟಾಚಾರ, ಮತಾಂತರ ನಡೆಸಲು ಆಗುವುದಿಲ್ಲ ಸಮಾಜ ಒಂದಾಗಬೇಕು. ಎಲ್ಲ ಜಾತಿಯ ಜನಾಂಗ ಪಕ್ಷಗಳನ್ನು ಒಗ್ಗೂಡಿಸಲು ಬೇಕಾಗಿರುವುದು ಆರ್‌ಎಸ್‌ಎಸ್ ಎಂದಿದ್ದಾರೆ.

ಭಾರತದಲ್ಲಿರುವವರು ಎಲ್ಲರೂ ಹಿಂದುಗಳೇ. ಜಗತ್ತಿನ ಅತಿ ದೊಡ್ಡ ಮುಸ್ಲಿಂ ದೇಶ ಇಂಡೋನೇಷ್ಯಾದ ರಾಷ್ಟ್ರೀಯ ಕಾವ್ಯ ರಾಮಾಯಣ ಶಿರಾಳಕೊಪ್ಪದ ಮುಸ್ಲಿಮರಿಗೂ ನಾವು ಇದನ್ನೇ ಹೇಳುವುದು ನಿಮ್ಮ ಧರ್ಮ ಹಿಂದೂ ಸಂದರ್ಭದಲ್ಲಿ ಪೂಜಾ ಪದ್ಧತಿ ಯಾವುದೇ ಇದ್ದರೂ ನೀವು ಹಿಂದುಗಳು ಎಂದಿದ್ದಾರೆ.