MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • Belagavi: ನಾಡದ್ರೋಹಿ ಕೃತ್ಯ ಎಸಗುವ MES ಪುಂಡ ಶುಭಂ‌ ಶಳಕೆ ಜೊತೆ ಸಿಪಿಐ ಸೆಲ್ಪಿ

Belagavi: ನಾಡದ್ರೋಹಿ ಕೃತ್ಯ ಎಸಗುವ MES ಪುಂಡ ಶುಭಂ‌ ಶಳಕೆ ಜೊತೆ ಸಿಪಿಐ ಸೆಲ್ಪಿ

ಕನ್ನಡ ರಾಜ್ಯೋತ್ಸವದಂದು ಬೆಳಗಾವಿಯಲ್ಲಿ ಎಂಇಎಸ್ ಕರಾಳ ದಿನ ಆಚರಿಸಿದೆ. ಈ ವೇಳೆ, ನಾಡದ್ರೋಹಿ ಸಂಘಟನೆಯ ಮುಖಂಡ ಶುಭಂ ಶಳಕೆ ಜೊತೆ ಮಾಳಮಾರುತಿ ಠಾಣೆ ಸಿಪಿಐ ಜೆಎಂ ಕಾಲಿಮಿರ್ಚಿ ಸೆಲ್ಫಿ ತೆಗೆದುಕೊಂಡಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. 

2 Min read
Author : Mahmad Rafik
| Updated : Nov 01 2025, 12:10 PM IST
Share this Photo Gallery
  • FB
  • TW
  • Linkdin
  • Whatsapp
16
 ನಾಡದ್ರೋಹಿ ಸಂಘಟನೆ ಎಂಇಎಸ್‌
Image Credit : Asianet News

ನಾಡದ್ರೋಹಿ ಸಂಘಟನೆ ಎಂಇಎಸ್‌

ಬೆಳಗಾವಿ: ಇಡೀ ರಾಜ್ಯ ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿರುವ ವೇಳೆ ನಾಡದ್ರೋಹಿ ಸಂಘಟನೆ ಎಂಇಎಸ್‌ ಬೆಳಗಾವಿಯಲ್ಲಿ ಕರಾಳ ದಿನ ಆಚರಿಸುತ್ತಿದೆ. ಜಿಲ್ಲಾಧಿಕಾರಿಗಳು ನಿರ್ಬಂಧ ವಿಧಿಸಿದ್ದರೂ ಎಂಇಎಸ್ ನಗರದಲ್ಲಿ ಮೆರವಣಿಗೆ ನಡೆಸುತ್ತಿದೆ. ಈ ನಾಡದ್ರೋಹಿ ಸಂಘಟನೆಯ ನಾಯಕನ ಜೊತೆ ಸಿಪಿಐ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದು, ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

26
 ಸಿಪಿಐ ಜೆಎಂ ಕಾಲಿಮಿರ್ಚಿ
Image Credit : Asianet News

ಸಿಪಿಐ ಜೆಎಂ ಕಾಲಿಮಿರ್ಚಿ

ಮಾಳಮಾರುತಿ ಪೊಲೀಸ ಠಾಣೆ ಸಿಪಿಐ ಜೆಎಂ ಕಾಲಿಮಿರ್ಚಿ ಅವರ ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಬೆಳಗಾವಿಯ ಮಾಳಮಾರುತಿ ಪೊಲೀಸ್‌ ಠಾಣೆಯ ಸಿಪಿಐ ಜೆಎಂ ಕಾಲಿಮಿರ್ಚಿ ಸಂಭಾಜಿ ಮೈದಾನದಲ್ಲಿ ಎಂಇಎಸ್ ಪುಂಡ ಶುಭಂ ಶಳಕೆ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಇಷ್ಟು ಮಾತ್ರವಲ್ಲದೇ ಎಂಇಎಸ್‌ ಕಾರ್ಯಕರ್ತರ ಫೋಟೋಗಳನ್ನಿ ಸಿಪಿಐ ಕಾಲಿಮಿರ್ಚಿ ಕ್ಲಿಕ್ಕಿಸಿದ್ದಾರೆ.

Related Articles

Related image1
ಗಡಿಯಲ್ಲಿ ಶಿವಸೇನೆ ಪುಂಡಾಟಿಕೆಗೆ ಪೊಲೀಸರ ಬ್ರೇಕ್; ಬಾಲ ಮುದುರಿಕೊಂಡು ವಾಪಸ್ಸಾದ ಪುಂಡರು
Related image2
Kannada Rajyotsava: ದೇಶ ಯಾವುದಾದರೇನು ಕನ್ನಡ ಕಂಪನು ಮೆರೆವೆನು: ವಿದೇಶದಲ್ಲೂ ಕನ್ನಡತನ ಬೆಳೆಸುತ್ತಿರುವ ಕನ್ನಡಿಗರು
36
ಶುಭಂ‌ ಶಳಕೆ
Image Credit : Asianet News

ಶುಭಂ‌ ಶಳಕೆ

ಕನ್ನಡ ರಾಜ್ಯೋತ್ಸವದ ವಿರುದ್ಧ ಕರಾಳ ದಿನಾಚರಣೆ ಮಾಡ್ತಿದ್ದವರ ಜೊತೆಗೆ ಸರ್ಕಾರಿ ಅಧಿಕಾರಿ ಸೆಲ್ಪಿ ಕ್ಲಿಕ್ಕಿಸಿಕೊಂಡಿದ್ದಾರೆ. ಶುಭಂ‌ ಶಳಕೆ ಭಾಷಾ ಸಾಮರಸ್ಯ, ಶಾಂತಿ ಭಂಗ, ಕಾನೂನು ಸುವ್ಯವಸ್ಥೆ ಸೇರಿ ಹಲವು ಪ್ರಕರಣ ಆರೋಪಿ ಆಗಿದ್ದಾನೆ. ಸಿಪಿಐ ಅವರ ನಡೆ ಗಮನಿಸಿದ್ರೆ ನಾಡದ್ರೋಹಿಗಳ ಜೊತೆ ಪೊಲೀಸರು ಕೈ ಜೋಡಿಸಿದ್ರಾ ಎಂಬ ಅನುಮಾನ ಮೂಡಿದೆ.

46
ರಾಜಾರೋಷವಾಗಿ ಕರಾಳ ದಿನಾಚರಣೆ
Image Credit : Asianet News

ರಾಜಾರೋಷವಾಗಿ ಕರಾಳ ದಿನಾಚರಣೆ

ಇಂದು ಅನುಮತಿ ಇಲ್ಲದಿದ್ದರೂ ಎಂಇಎಸ್ ಕಾರ್ಯಕರ್ತರು ರಾಜಾರೋಷವಾಗಿ ಕರಾಳ ದಿನಾಚರಣೆ ಮಾಡುತ್ತಾರೆ. ಸಂಭಾಜಿ ಮೈದಾನದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿರುವ ನಾಡದ್ರೋಹಿಗಳು ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗಿ, ಬೆಳಗಾವಿ ಮತ್ತು ನಿಪ್ಪಾಣಿ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಕಿರುಚಿದ್ದಾರೆ.

ಇದನ್ನೂ ಓದಿ: ಸಚಿವ ಸತೀಶ್ ಜಾರಕಿಹೊಳಿ‌ ಕರೆದೊಯ್ಯಬೇಕಿದ್ದ ವಾಹನದಲ್ಲಿ ದಿಢೀರ್ ಇಂಧನ ಸೋರಿಕೆ: ಕೊನೆ ಕ್ಷಣದಲ್ಲಿ ಆದದ್ದೇನು?

56
ಶಿವಸೇನೆ ಪುಂಡರಿಗೆ ಗಡಿಯಲ್ಲಿಯೇ ಬ್ರೇಕ್
Image Credit : Asianet News

ಶಿವಸೇನೆ ಪುಂಡರಿಗೆ ಗಡಿಯಲ್ಲಿಯೇ ಬ್ರೇಕ್

ಇನ್ನು ನಿಷೇಧದ ನಡುವೆಯೂ ಬೆಳಗಾವಿ ಪ್ರವೇಶಕ್ಕೆ ಮುಂದಾಗಿದ್ದ ಶಿವಸೇನೆ ಪುಂಡರನ್ನು ಪೊಲೀಸರು ಗಡಿಯಲ್ಲಿಯೇ ತಡೆದಿದ್ದಾರೆ. ಸುಮಾರು 50 ಪುಂಡರ ಗುಂಪಿನೊಂದಿಗೆ ಸಂಜಯ್ ಪವಾರ್ ಹಾಗೂ ವಿಜಯ ದೇವನೆ ಬೆಳಗಾವಿ ಪ್ರವೇಶಕ್ಕೆ ಮುಂದಾಗಿದ್ದರು. ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ನಾಯಕರಿಗೆ ಜಿಲ್ಲಾಡಳಿತ ಬೆಳಗಾವಿ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ಹೇರಿದೆ.

ಇದನ್ನೂ ಓದಿ: ಗಡಿಯಲ್ಲಿ ಶಿವಸೇನೆ ಪುಂಡಾಟಿಕೆಗೆ ಪೊಲೀಸರ ಬ್ರೇಕ್; ಬಾಲ ಮುದುರಿಕೊಂಡು ವಾಪಸ್ಸಾದ ಪುಂಡರು

66
ನಾಡದ್ರೋಹಿಗಳ ವಿರುದ್ಧ ಕಠಿಣ
Image Credit : Asianet News

ನಾಡದ್ರೋಹಿಗಳ ವಿರುದ್ಧ ಕಠಿಣ

ಅನುಮತಿ ಇಲ್ಲದೇ ಮೆರವಣಿಗೆ ನಡೆಸಿದ ನಾಡದ್ರೋಹಿಗಳ ವಿರುದ್ಧ ಕಠಿಣ ಕ್ರಮವಾಗಲಿದೆ. ನಾನು ಲಖಿತವಾಗಿಯೂ ಅನುಮತಿ ನೀಡಿಲ್ಲ, ಮೌಖಿಕವಾಗಿಯೂ ಅನುಮತಿ ನೀಡಿಲ್ಲ. ಅನುಮತಿ ನೀಡಿಲ್ಲ ಅಂದ್ರೂ ಮೆರವಣಿಗೆ ಮಾಡಿದ್ದಾರೆ. ಹೀಗಾಗಿ ಎಲ್ಲ ಸಂಘಟಕರ ವಿರುದ್ಧವೂ ದೂರು ದಾಖಲಿಸಿಕೊಳ್ತಿವಿ, ಕಠಿಣ ಕ್ರಮ ಜರುಗಿಸುತ್ತೇವೆ. ಯಾವುದೇ ಅಹಿತಕರ ಘಟನೆ ಆಗಬಾರದು ಅನ್ನೋ ಕಾರಣಕ್ಕೆ ಭದ್ರತೆ ನೀಡಲಾಗಿದೆ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ನಗರ ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಹೇಳಿದ್ದಾರೆ. ಇದೇ ವೇಳೆ ಎಂಇಎಸ್ ಪುಂಡನ ಜೊತೆಗೆ ಪೊಲೀಸ್ ಅಧಿಕಾರಿಯ ಸೆಲ್ಫಿ ತೆಗೆದುಕೊಂಡಿರುವ ಕುರಿತು ಮಾಹಿತಿ ಪಡೆಯುತ್ತೇನೆ ಎಂದರು.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಬೆಳಗಾವಿ
ಕರ್ನಾಟಕ ಸುದ್ದಿ

Latest Videos
Recommended Stories
Recommended image1
ಮಂಡ್ಯ ಜಿಲ್ಲೆಯ ತಗ್ಗಹಳ್ಳಿ ಗ್ರಾಮ ಪಂಚಾಯ್ತಿ ಖಜಾನೆ ರಹಸ್ಯ: ₹53 ಲಕ್ಷ ವಾಪಸ್ ಬಂದ ಕಥೆ
Recommended image2
ಸಂತೋಷ್ ಲಾಡ್-ಜಕ್ಕಪ್ಪನವರ ಜಟಾಪಟಿ; ಕೊನೆಗೂ ಪತ್ತೆಯಾಯ್ತು ನಿಗೂಢ 120 ಎಕರೆ ಜಮೀನು
Recommended image3
ಸರ್ಕಾರಕ್ಕೆ ನಿಧಿ ನೀಡಿದ್ದ ಲಕ್ಕುಂಡಿ ಪ್ರಜ್ವಲ್‌ಗೆ ಸರ್ಕಾರದಿಂದ ಸಿಕ್ತು ಬಂಪರ್ ಗಿಫ್ಟ್
Related Stories
Recommended image1
ಗಡಿಯಲ್ಲಿ ಶಿವಸೇನೆ ಪುಂಡಾಟಿಕೆಗೆ ಪೊಲೀಸರ ಬ್ರೇಕ್; ಬಾಲ ಮುದುರಿಕೊಂಡು ವಾಪಸ್ಸಾದ ಪುಂಡರು
Recommended image2
Kannada Rajyotsava: ದೇಶ ಯಾವುದಾದರೇನು ಕನ್ನಡ ಕಂಪನು ಮೆರೆವೆನು: ವಿದೇಶದಲ್ಲೂ ಕನ್ನಡತನ ಬೆಳೆಸುತ್ತಿರುವ ಕನ್ನಡಿಗರು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved