ಜೆಮಿಮಾ ರೋಡ್ರಿಗ್ಸ್ ಬ್ಯಾಕ್‌ಗ್ರೌಂಡ್; ಈಕೆ ನಮ್ಮ ಮಂಗಳೂರಿನ ಹುಡುಗಿ!
ಐಸಿಸಿ ಮಹಿಳಾ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತದ ಗೆಲುವಿನ ನಂತರ ಜೆಮಿಮಾ ರೋಡ್ರಿಗ್ಸ್ ಹೆಸರು ಜೋರಾಗಿ ಕೇಳಿಬರುತ್ತಿದೆ. ಅವರ ಆಟಕ್ಕೆ ಫಿದಾ ಆದ ಅಭಿಮಾನಿಗಳು, ಈ ಮಟ್ಟಕ್ಕೆ ಬೆಳೆದದ್ದು ಹೇಗೆ ಎಂದು ತಿಳಿಯಲು ಪ್ರಯತ್ನಿಸುತ್ತಿದ್ದಾರೆ.

ಶತಕ ಸಿಡಿಸಿ ಮಿಂಚಿದ ಜೆಮಿಮಾ
ICC ವಿಶ್ವಕಪ್ 2025: ತವರಿನಲ್ಲಿ ನಡೆಯುತ್ತಿರುವ ICC ಮಹಿಳಾ ವಿಶ್ವಕಪ್ 2025ರ ಮೆಗಾ ಟೂರ್ನಿಯಲ್ಲಿ ಟೀಂ ಇಂಡಿಯಾ ಫೈನಲ್‌ಗೆ ತಲುಪಿದೆ. ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿ ಅದ್ಭುತ ಗೆಲುವು ಸಾಧಿಸಿದೆ.
ಜಮಿಮಾ ಹಿನ್ನೆಲೆ ಏನು?
ಜೆಮಿಮಾ ರೋಡ್ರಿಗ್ಸ್ ಮಂಗಳೂರಿನ ಕ್ರಿಶ್ಚಿಯನ್ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಇವಾನ್ ರೋಡ್ರಿಗ್ಸ್ ಅವರ ಮೊದಲ ಗುರು ಮತ್ತು ಕೋಚ್ ಆಗಿದ್ದರು, ಅವರೇ ಮಗಳನ್ನು ಕ್ರೀಡೆಯತ್ತ ಗಮನ ಹರಿಸಲು ಪ್ರೋತ್ಸಾಹಿಸಿದರು.
ಕ್ರೀಡೆಯಲ್ಲಿ ಮುಂದುವರೆಯಲು ಮುಂಬೈಗೆ ಶಿಫ್ಟ್
ಮಕ್ಕಳಿಗೆ ಉತ್ತಮ ಕ್ರೀಡಾ ಸೌಲಭ್ಯ ಒದಗಿಸಲು, ಜೆಮಿಮಾ ಕುಟುಂಬವು ಮುಂಬೈನ ಬಾಂದ್ರಾಗೆ ಸ್ಥಳಾಂತರಗೊಂಡಿತು. ಅವರ ತಂದೆ ಶಾಲೆಯಲ್ಲಿ ಕೋಚ್ ಆಗಿದ್ದರು.
ತಂದೆಯೇ ಮೊದಲ ಗುರು
ಸರಿಯಾದ ಮೈದಾನಗಳು ಲಭ್ಯವಿಲ್ಲದಿದ್ದಾಗ, ತಂದೆ ಇವಾನ್ ಫುಟ್‌ಪಾತ್‌ನಲ್ಲೇ ಜೆಮಿಮಾಗೆ ತರಬೇತಿ ನೀಡುತ್ತಿದ್ದರು. ಮನೆಯ ಗೋಡೆಗಳ ಮೇಲೆ ಪ್ಲಾಸ್ಟಿಕ್ ಬಾಲ್‌ನಿಂದ ಬ್ಯಾಟಿಂಗ್ ಪ್ರಾಕ್ಟೀಸ್ ಮಾಡಿಸುತ್ತಿದ್ದರು.
ಮಗಳಿಗಾಗಿ ತಂದೆಯ ಕಠಿಣ ಶ್ರಮ
ಜೆಮಿಮಾ ಬ್ಯಾಟಿಂಗ್ ಮಾಡುವಾಗ ತಂದೆ ಇವಾನ್ ಪ್ರತಿದಿನ 300 ಬಾಲ್‌ಗಳನ್ನು ಎಸೆಯುತ್ತಿದ್ದರು. ಇದರಿಂದ ಅವರ ಕೈ ನೋವು ಬರುತ್ತಿತ್ತು, ಆದರೆ ಅವರು ಅದನ್ನು ಮಗಳಿಗೆ ಎಂದಿಗೂ ಹೇಳಲಿಲ್ಲ.