ಗಡಿಯಲ್ಲಿ ಶಿವಸೇನೆ ಪುಂಡಾಟಿಕೆಗೆ ಪೊಲೀಸರ ಬ್ರೇಕ್; ಬಾಲ ಮುದುರಿಕೊಂಡು ವಾಪಸ್ಸಾದ ಪುಂಡರು
MES Black Day rally in Belagavi ಕನ್ನಡ ರಾಜ್ಯೋತ್ಸವದ ದಿನದಂದು ಬೆಳಗಾವಿ ಗಡಿಗೆ ಪ್ರವೇಶಿಸಲು ಯತ್ನಿಸಿದ ಶಿವಸೇನೆಯ ಪುಂಡರನ್ನು ಕರ್ನಾಟಕ ಪೊಲೀಸರು ತಡೆದು ವಾಪಸ್ ಕಳುಹಿಸಿದ್ದಾರೆ. ನಾಡದ್ರೋಹಿ ಎಂಇಎಸ್ ಸಂಘಟನೆಯು ಬೆಳಗಾವಿಯಲ್ಲಿ ಕರಾಳ ದಿನದ ಮೆರವಣಿಗೆಯನ್ನು ನಡೆಸಿದೆ.

ಗಡಿಯಲ್ಲಿ ಪುಂಡಾಡಿಕೆ
ಕರ್ನಾಟಕ ರಾಜ್ಯೋತ್ಸವ ಸಂಭ್ರಮದಲ್ಲಿರುವಾಗ ಗಡಿಯಲ್ಲಿ ಪುಂಡಾಡಿಕೆ ಮಾಡಲು ಶಿವಸೇನೆಯ ಪುಂಡರು ಆಗಮಿಸಿದ್ದರು. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕೋಂಗನೊಳ್ಳಿ ಗಡಿಯಲ್ಲಿ ರಾಜ್ಯಕ್ಕೆ ಪ್ರವೇಶಿಸಲು ಉದ್ದವ ಠಾಕ್ರೆ ಬಣದ ಕೊಲ್ಲಾಪುರ ಜಿಲ್ಲಾಅಧ್ಯಕ್ಷ ಸಂಜಯ್ ಪವಾರ್ ಹಾಗೂ ವಿಜಯ ದೇವನೆ ಆಗಮಿಸಿದ್ದರು.
ಶಿವಸೇನೆ ಪುಂಡರು
ಶಿವಸೇನೆ ಪುಂಡರನ್ನು ರಾಜ್ಯದ ಪೊಲೀಸರು ಗಡಿಯಲ್ಲಿಯೇ ತಡೆದಿದ್ದಾರೆ. ಸುಮಾರು 50 ಪುಂಡರ ಗುಂಪಿನೊಂದಿಗೆ ಸಂಜಯ್ ಪವಾರ್ ಹಾಗೂ ವಿಜಯ ದೇವನೆ ಬಂದಿದ್ದರು. ಗಡಿಯಲ್ಲಿ ಪುಂಡಾಟಿಕೆಗೆ ಕರ್ನಾಟಕ ಪೊಲೀಸರು ಬ್ರೇಕ್ ಹಾಕಿದ ಹಿನ್ನೆಲೆ ಬಂದ ದಾರಿಗೆ ಸುಂಕ ಇಲ್ಲದಂತೆ ವಾಪಸ್ ಆಗಿದ್ದಾರೆ. ಮಹಾರಾಷ್ಟ್ರ ಪೊಲೀಸರು ಶಿವಸೇನೆ ಪುಂಡರನ್ನು ಕರೆದುಕೊಂಡು ಹೋಗಿದ್ದಾರೆ.
ನಾಡದ್ರೋಹಿ ಎಂಇಎಸ್
ಗಡಿ ಜಿಲ್ಲೆ ಬೆಳಗಾವಿಯಲ್ಲಿ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುತ್ತಿದೆ. ನಾಡದ್ರೋಹಿ ಎಂಇಎಸ್ ಬೆಳಗಾವಿಯಲ್ಲಿ ಕರಾಳ ದಿನದ ಮೆರವಣಿಗೆಗೆ ಮುಂದಾಗಿದೆ. ಆದ್ರೆ ಕರಾಳ ದಿನಾಚರಣೆಗೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅನುಮತಿ ನೀಡಿಲ್ಲ. ನಿರ್ಬಂಧದ ನಡುವೆಯೂ ಬೆಳಗಾವಿಗೆ ಬರೋದಾಗಿ ವಿಜಯ್ ದೇವನೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದರು.
ಇದನ್ನೂ ಓದಿ: Kannada Rajyotsava: ದೇಶ ಯಾವುದಾದರೇನು ಕನ್ನಡ ಕಂಪನು ಮೆರೆವೆನು: ವಿದೇಶದಲ್ಲೂ ಕನ್ನಡತನ ಬೆಳೆಸುತ್ತಿರುವ ಕನ್ನಡಿಗರು
ಕರಾಳ ದಿನದ ಮೆರವಣಿಗೆ
ಜಿಲ್ಲಾಡಳಿತದ ಅನುಮತಿ ನಿರಾಕರಣೆ ಮಧ್ಯೆಯೇ ಕರಾಳ ದಿನದ ಮೆರವಣಿಗೆ ಬೆಳಗಾವಿ ಸಂಭಾಜೀ ವೃತ್ತದಿಂದ ಆರಂಭವಾಗಿದೆ. ನಾಡದ್ರೋಹಿಗಳು ಕಪ್ಪು ಬಟ್ಟೆ ಧರಿಸಿ, ಕಪ್ಪು ಬಾವುಟ ಹಿಡಿದು ಮೆರವಣಿಗೆಯಲ್ಲಿ ಭಾಗಿಯಾಗಿದ್ದು, ಬೆಳಗಾವಿ, ನಿಪ್ಪಾಣಿ ಸೇರಿ ಗಡಿಭಾಗಗಳು ಮಹಾರಾಷ್ಟ್ರಕ್ಕೆ ಸೇರಬೇಕೆಂದು ಘೋಷಣೆ ಕೂಗುತ್ತಿದ್ದಾರೆ. ನಾಡದ್ರೋಹಿಗಳು ನಡೆಸ್ತಿರುವ ಅನಧಿಕೃತ ರ್ಯಾಲಿಗೆ ಬೆಳಗಾವಿ ಪೊಲೀಸರ ಭದ್ರತೆ ನೀಡಿದ್ದಾರೆ.
ಇದನ್ನೂ ಓದಿ: ಸಚಿವ ಸತೀಶ್ ಜಾರಕಿಹೊಳಿ ಕರೆದೊಯ್ಯಬೇಕಿದ್ದ ವಾಹನದಲ್ಲಿ ದಿಢೀರ್ ಇಂಧನ ಸೋರಿಕೆ: ಕೊನೆ ಕ್ಷಣದಲ್ಲಿ ಆದದ್ದೇನು?