
ಬೆಂಗಳೂರು (ಜು.23) : ‘ಶಕ್ತಿ’ ಯೋಜನೆ ಒತ್ತಡದಿಂದ ಈಗಾಗಲೇ ಬಳಲಿರುವ ಬಿಎಂಟಿಸಿ ಚಾಲಕ ಮತ್ತು ನಿರ್ವಾಹಕರಿಗೆ ಇದೀಗ ಬಸ್‌ನಲ್ಲಿನ ಸೊಳ್ಳೆ ಹೊಡೆಯುವ ಕೆಲಸ ನೀಡಲಾಗಿದೆ.
ಬಿಎಂಟಿಸಿ ಬಸ್(BMTC Bus)ಗಳಲ್ಲಿ ಅದರಲ್ಲೂ ಹವಾನಿಯಂತ್ರಿತ ಬಸ್‌ಗಳಲ್ಲಿ ಸೊಳ್ಳೆ ಕಾಟ ಹೆಚ್ಚಾಗಿದ್ದು, ಪ್ರಯಾಣಿಕರು ಬೆಳಗಿನ ಸಮಯದಲ್ಲಿ ಪ್ರಯಾಣಿಸುವಾಗಲೂ ಸೊಳ್ಳೆ ಕಾಟಕ್ಕೆ ತುತ್ತಾಗುವಂತಾಗಿದೆ. ಈ ಕುರಿತು ಕಳೆದ ಕೆಲ ದಿನಗಳ ಹಿಂದೆ ಸೋಷಿಯಲ್ ಕಾಪ್ (Social Cop twitter)ಎಂಬ ಟ್ವಿಟ್ಟರ್ ಖಾತೆಯಲ್ಲಿ, ಬಿಎಂಟಿಸಿ ಬಸ್‌ಗಳಲ್ಲಿ ಸೊಳ್ಳೆಗಳು ಹಾರಾಡುತ್ತಿರುವ ಚಿತ್ರವನ್ನು ಹಂಚಿಕೊಳ್ಳಲಾಗಿತ್ತು. ಅಲ್ಲದೆ, ಕಾಂಗ್ರೆಸ್ ಸರ್ಕಾರ(Congress government) ಬಿಎಂಟಿಸಿ ಎಸಿ ಬಸ್‌ಗಳಲ್ಲಿ ಸೊಳ್ಳೆಗಳಿಗೆ ಉಚಿತ ಪ್ರಯಾಣ ಎಂದು ಘೊಷಿಸಿದೆಯಾ ಎಂದು ಪ್ರಶ್ನಿಸಲಾಗಿತ್ತು.
Mosquito Bite: ಸೊಳ್ಳೆ ಕಡಿದು ಊತವಾಗಿದ್ರೆ ಇಲ್ಲಿದೆ ಮನೆ ಮದ್ದು
ಈ ಟ್ವೀಟ್ ಭಾರಿ ವೈರಲ್ ಆಗಿದ್ದು, ಶಕ್ತಿ ಯೋಜನೆ ಜಾರಿ ನಂತರ ಬಿಎಂಟಿಸಿ ಬಸ್‌ಗಳಲ್ಲಿ ಜನರು ಪ್ರಯಾಣಿಸಲೇ ಸೂಕ್ತ ಜಾಗ ಸಿಗುತ್ತಿಲ್ಲ. ಹೀಗಿರುವಾಗ ಸೊಳ್ಳೆಗಳಿಗೆ ಉಚಿತ ಪ್ರಯಾಣ ಮಾಡಿಸುತ್ತಿರುವುದು ಸರಿಯಲ್ಲ ಎಂದು ವ್ಯಂಗ್ಯವಾಡಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಬಿಎಂಟಿಸಿ, ತನ್ನ ಚಾಲಕ ಮತ್ತು ನಿರ್ವಾಹಕರಿಗೆ ಬಸ್‌ಗಳನ್ನು ಮಾರ್ಗಕ್ಕೆ ತೆಗೆದುಕೊಂಡು ಹೋಗುವುದಕ್ಕೂ ಮುನ್ನ ಘಟಕಗಳಲ್ಲಿಯೇ ಸೊಳ್ಳೆಗಳನ್ನು ಬಸ್‌ನಿಂದ ಹೊರಗೆ ಹಾಕಿ ತೆಗೆದುಕೊಂಡು ಹೋಗಬೇಕು ಎಂದು ಸೂಚಿಸಿದೆ.
ಕಂಡೆಕ್ಟರ್‌ಗಳ ಕೆಲಸಕ್ಕೆ ಕುತ್ತು ತಂತಾ 'ಶಕ್ತಿ' ಯೋಜನೆ..?: ಮಹಿಳೆಯರ ತಪ್ಪಿಗೆ ಇವರಿಗ್ಯಾಕೆ ಶಿಕ್ಷೆ
ಡಿಪೋ 24 (ಎಚ್‌ಎಸ್‌ಆರ್ ಲೇಔಟ್) ಘಟಕ ವ್ಯವಸ್ಥಾಪಕರು ಈ ಕುರಿತಂತೆ ಅಧಿಕೃತ ಆದೇಶ ಹೊರಡಿಸಿದ್ದು, ಚಾಲಕ ಮತ್ತು ನಿರ್ವಾಹಕರು ಘಟಕಗಳಿಗೆ ಬಸ್‌ಗಳನ್ನು ತಂದು ನಿಲ್ಲಿಸಿದ ನಂತರ ಬಸ್ ಒಳಗೆ ಸೊಳ್ಳೆಗಳು ಸೇರಿಕೊಳ್ಳುತ್ತಿವೆ. ಮರುದಿನ ಬಸ್‌ಗಳನ್ನು ಕಾರ್ಯಾಚರಣೆಗೆ ತೆಗೆದುಕೊಂಡು ಹೋದಾಗ ಸೊಳ್ಳೆಗಳು ಪ್ರಯಾಣಿಕರಿಗೆ ಕಚ್ಚುತ್ತಿದ್ದು, ಈ ಬಗ್ಗೆ ದೂರುಗಳು ಬರುತ್ತಿವೆ. ಹೀಗಾಗಿ ಚಾಲನಾ ಸಿಬ್ಬಂದಿ ಪ್ರತಿದಿನ ಬಸ್ಸನ್ನು ಕಾರ್ಯಾಚರಣೆಗೆ ತೆಗೆದುಕೊಂಡು ಹೋಗುವುದಕ್ಕೂ ಮುನ್ನ ವಾಹನ ಪರಿಶೀಲಿಸಿ, ಎಂಜಿನ್ ಸ್ಟಾರ್ಚ್ ಮಾಡಿ, ಬಸ್‌ನ ಎರಡೂ ಬಾಗಿಲುಗಳನ್ನು ತೆಗೆದು ಬ್ಲೋವರ್ ಆನ್ ಮಾಡಬೇಕು. ಈ ಸಂದರ್ಭದಲ್ಲಿ ಸೊಳ್ಳೆಗಳಿರುವುದು ಕಂಡು ಬಂದರೆ ಬಟ್ಟೆಗಳ ಮೂಲಕ ಅದನ್ನು ಓಡಿಸಬೇಕು. ನಂತರ ಸೊಳ್ಳೆಗಳು ಇಲ್ಲದಿರುವುದನ್ನು ಖಾತ್ರಿಪಡಿಸಿಕೊಂಡು ಬಸ್ಸನ್ನು ಕಾರ್ಯಾಚರಣೆಗೆ ತೆಗೆದುಕೊಂಡು ಹೋಗಬೇಕು ಎಂದು ಸೂಚಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ