ರಾಜ್ಯದಲ್ಲಿ ಇನ್ನೂ ಮುಂದಿನ 5 ದಿನ ಮುಂದುವರೆಯಲಿದೆ ಭಾರೀ ಮಳೆ: ಹವಾಮಾನ ಇಲಾಖೆ ಎಚ್ಚರಿಕೆ

By Gowthami K  |  First Published Oct 6, 2024, 6:36 PM IST

ರಾಜ್ಯದಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯ ಅಬ್ಬರ ಮುಂದುವರಿಯಲಿದ್ದು, ಮುಂದಿನ ಐದು ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಅಕ್ಟೋಬರ್ 10 ರ ವರೆಗೆ ಮಳೆಯಾಗಲಿದೆ.


ರಾಜ್ಯದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಮೂರು ದಿನಗಳಿಂದ ನಿರಂತರ ಮಳೆಯಾಗುತ್ತಿದೆ. ಇದರ ಬೆನ್ನಲ್ಲೇ  ಮುಂದಿನ 5 ದಿನ ರಾಜ್ಯದಲ್ಲಿ ವಿಪರೀತ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಅಲರ್ಟ್ ಘೋಷಿಸಿದೆ.

ದಕ್ಷಿಣ ಒಳನಾಡು, ಕರಾವಳಿ ಜಿಲ್ಲೆಯಲ್ಲಿ ಇಂದಿನಿಂದ ಅ.10 ರವರೆಗೆ ಮಳೆ ಆಗಲಿದೆ  ಎಂದು ಹವಾಮಾನ ಇಲಾಖೆ ಹೇಳಿದೆ.
ಉಡುಪಿ, ದಕ್ಷಿಣ ಕನ್ನಡ, ಹಾಸನ, ಚಿಕ್ಕಮಂಗಳೂರು, ಕೊಡಗು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಜಿಲ್ಲೆಗಳಲ್ಲಿ‌ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.

Tap to resize

Latest Videos

undefined

ಬಿಗ್ ಬಾಸ್ ಮನೆಯಲ್ಲಿ ನಟಿ ಪ್ರೆಗ್ನೆಸಿ ಟೆಸ್ಟ್ ಮಾಡಿಸಿದಾಗ! ಇದಕ್ಕೆ ಕಾರಣ ಏನು?

ಇಂದಿನಿಂದ ಅಕ್ಟೋಬರ್ 9ವರೆಗೆ 12 ಜಿಲ್ಲೆಗಳಿಗೆ ಯಲ್ಲೋ ಆರ್ಲಟ್ ಘೋಷಣೆಯಾಗಿದೆ. ಬೆಂಗಳೂರಿಗೆ ಇನ್ನೂ ಮೂರು ದಿ‌ನ ಭಾರೀ ಮಳೆ ಸಾಧ್ಯತೆ ಇದೆ. ಇಂದಿನಿಂದ ಅಕ್ಟೋಬರ್ 9 ವೆರೆಗೆ ಸಿಲಿಕಾನ್ ಸಿಟಿಯಲ್ಲಿ ಭಾರಿ ಮಳೆ ಎಚ್ಚರಿಕೆ ನೀಡಿ   ಅ.9ವೆರೆಗೆ ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ಗಾಳಿ ಮಿಂಚು ಸಹಿತ ಮಳೆಯಾಗಲಿದ್ದು ಮರಗಳು ಬೀಳುವ ಸಾಧ್ಯತೆ ಇದೆ. ಹೀಗಾಗಿ ಸಿಟಿ ಜನರಿಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕಳೆದ ಮೂರು ದಿನಗಳಿಂದ ಬಹುತೇಕ ಮಳೆಯಾಗುತ್ತಿದೆ. ಕರಾವಳಿ ಜಿಲ್ಲೆಗಳಲ್ಲಿ ಸಂಜೆಯಾಗುತ್ತಿದ್ದಂತೆ ವರುಣನ ಆರ್ಭಟ ಆರಂಭವಾಗಿ ನಿರಂತರವಾಗಿ 3 ಗಂಟೆಗಳಕಾಲ ಸುರಿದು ವಿಪರೀತ ಸಮಸ್ಯೆಗಳಿಗೆ ಕಾರಣವಾಗಿದೆ. ಬೆಂಗಳೂರಿನಲ್ಲೂ ಅಷ್ಟೇ ಸಂಜೆ ಮಳೆ ಆವರಿಸಿದರೆ ಮಳೆ ಬಿಡುವ ಹೊತ್ತಿಗೆ ಜನ ಜೀವನ ಕರಾಳವಾಗಿರುತ್ತದೆ.

ಕಿಚ್ಚ ಸುದೀಪ್‌ ಕ್ಲಾಸ್ ಗೆ ಲಾಯರ್ ಜಗದೀಶ್‌ ಗಪ್‌ಚುಪ್‌, ತುಟಿಕ್‌ ಪಿಟಿಕ್ ಅಂದಿಲ್ಲ!

ಮಧ್ಯ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆಯಿಂದಾಗಿ ಅಪಾರ ಹಾನಿಯಾಗಿದೆ. ಕೆಲವು ಕಡೆ ಸಿಡಿಲು ಬಡಿದು ಅನೇಕ ಪ್ರಾಣ ಹಾನಿಯಾಗಿ, ಕುರಿ ಕೋಳಿ ಸೇರಿದಂತೆ ಕೆಲವರು ತಮ್ಮ ಸಾಕುಪ್ರಾಣಿಗಳನ್ನು ಕಳೆದುಕೊಂಡಿದ್ದಾರೆ.

click me!