ಶೀಘ್ರದಲ್ಲೇ ಬೆಂಗಳೂರು ವಿಮಾನ ನಿಲ್ದಾಣದಿಂದ ಕಂಟೊನ್ಮೆಂಟ್ ರೈಲ್ವೇ ನಿಲ್ದಾಣಕ್ಕೆ ಕೇವಲ 40 ನಿಮಿಷದಲ್ಲಿ ಪ್ರಯಾಣ ಮಾಡಲು ಸಾಧ್ಯ. ಇದು ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಉತ್ತರ ನೀಡುವ ಯೋಜನೆ ಕೆಲವೇ ದಿನದಲ್ಲಿ ಕಾರ್ಯಾರಂಭಗೊಳ್ಳುತ್ತಿದೆ.
ಬೆಂಗಳೂರು(ಅ.06) ಬೆಂಗಳೂರಿನ ಟ್ರಾಫಿಕ್ ಕಿರಿಕಿರಿಯಿಂದ ಜನರು ಹೈರಾಣಾಗುತ್ತಿದ್ದಾರೆ. ಪ್ರಮುಖವಾಗಿ ಇದೀಗ ಹೆಬ್ಬಾಳ ಫ್ಲೈಓವರ್ ತುಂಬಿ ತುಳುಕುತ್ತಿರುವ ಕಾರಣ ಇತ್ತ ನಗರದಲ್ಲಿ ಸಂಚರಿಸುವವರು ಹಾಗೂ ವಿಮಾನ ನಿಲ್ದಾಣಕ್ಕೆ ತೆರಳವರೂ ಪರದಾಡುತ್ತಿದ್ದಾರೆ. ಆದರೆ ಈ ಸಮಸ್ಯೆಗೆ ಕೆಲವೇ ದಿನಗಳಲ್ಲಿ ಪರಿಹಾರ ಸಿಗುತ್ತಿದೆ. ಬೆಂಗಳೂರು ವಿಮಾನ ನಿಲ್ದಾಣದಿಂದ ಕಂಟೊನ್ಮೆಂಟ್ ರೈಲು ನಿಲ್ದಾಣಕ್ಕೆ ಕೇವಲ 40 ನಿಮಿಷದಲ್ಲಿ ಪ್ರಯಾಣ ಮಾಡಲು ಸಾಧ್ಯ ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಆಯೋಜಿಸಿದ್ದ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅಶ್ವಿನಿ ವೈಷ್ಣವ್, ಬೆಂಗಳೂರು ನಾಗರೀಕರಿಗೆ ಭರವಸೆ ನೀಡಿದ್ದಾರೆ. ಏರ್‌ಪೋರ್ಟ್‌ನಿಂದ ಕಂಟೊನ್ಮೆಂಟ್ ರೈಲು ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ಹೊಸ ರೈಲು ಯೋಜನೆ ಕಾರ್ಯ ಪ್ರಗತಿಯಲ್ಲಿದೆ. ರಾಜ್ಯಖಾತೆ ರೈಲ್ವೇ ಸಚಿವ ವಿ ಸೋವಣ್ಣ ಈ ಯೋಜನೆ ಪೂರ್ಣಗೊಳಿಸಲು ತ್ವರಿತಗತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕೇವಲ 35 ರಿಂದ 40 ನಿಮಿಷದಲ್ಲಿ ವಿಮಾನ ನಿಲ್ದಾಣದಿಂದ ಕಂಟೊನ್ಮೆಂಟ್ ಸ್ಟೇಶನ್ ತಲುಪಲು ಸಾಧ್ಯವಿದೆ ಎಂದಿದ್ದಾರೆ.
undefined
ರೈಲ್ವೇಯಲ್ಲಿ ಭರ್ಜರಿ ಉದ್ಯೋಗವಕಾಶ, 14,298 ಖಾಲಿ ಹುದ್ದೆ ನೇಮಕಾತಿಗೆ ಅ.16ರೊಳಗೆ ಅರ್ಜಿ ಸಲ್ಲಿಸಿ!
ಕಳೆದ ವರ್ಷ ವಿಮಾನ ನಿಲ್ದಾಣದಿಂದ ನಗರಕ್ಕೆ ಸಂಪರ್ಕ ಕಲ್ಪಿಸಲು ರೈಲು ಯೋಜನೆ ಕಾಮಗಾರಿ ವೀಕ್ಷಿಸಿದ್ದೆ. ಇದೀಗ ಬಹುತೇಕ ಪೂರ್ಣಗೊಂಡಿದೆ. ವಿಮಾನ ನಿಲ್ದಾಣದಿಂದ ಕಂಟೊನ್ಮೆಂಟ್ ರೈಲು ನಿಲ್ದಾಣಕ್ಕೆ ಕೇವಲ 32 ಕಿ.ಮೀ ಅಂತರವಿದೆ. ಆದರೆ ಬೆಂಗಳೂರು ಟ್ರಾಫಿಕ್ ಸಮಸ್ಯೆಯಿಂದ ಹಲವು ಗಂಟೆಗಳು ತೆಗೆದುಕೊಳ್ಳುತ್ತಿದೆ. ಇಷ್ಟೇ ಅಲ್ಲ ಹಲವರು ವಿಮಾನಗಳು ಮಿಸ್ ಆಗಿದೆ. ಹೀಗಾಗಿ ಈ ಸಮಸ್ಯೆಗೆ ಇದೀಗ ಹೊಸ ರೈಲು ಸಂಪರ್ಕ ಯೋಜನೆಯಿಂದ ಪರಿಹಾರ ಸಿಗಲಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಕಂಟೊನ್ಮೆಂಟ್ ರೈಲು ನಿಲ್ದಾಣದಲ್ಲಿ ಕಾಮಾಗಾರಿ ಭರದಿಂದ ಸಾಗಿದೆ. ಇತ್ತ ಯಶವಂತಪುರ ರೈಲು ನಿಲ್ದಾಣದಲ್ಲೂ ಕಾಮಾಗಾರಿಗಳು ನಡೆಯುತ್ತಿದೆ. ಈ ರೀತಿಯ ಕಾಮಾಗಾರಿಗಳಿಗೆ ಈ ಹಿಂದೆ ದಶಕಗಳ ಕಾಲ ಬೇಕಾಗಿತ್ತು. ಇದೀಗ ವರ್ಷದಲ್ಲಿ ಪೂರ್ಣಗೊಳ್ಳುತ್ತಿದೆ. ಬೆಂಗಳೂರು ಸುತ್ತ ಮುತ್ತಲಿನ ನಗರಗಳನ್ನು ಸಂಪರ್ಕಿಸುವ ಯೋಜನೆಗಳು ಚಾಲ್ತಿಯಲ್ಲಿದೆ. ಈಗಾಗಲೇ ಹೆಚ್ಚುವರಿ ರೈಲಿಗೆ ಚಾಲನೆ ನೀಡಲಾಗಿದೆ. ಪ್ರಮಖವಾಗಿ ಬೆಂಗಳೂರು ತುಮಕೂರು, ಬೆಂಗಳೂರು ಮೈಸೂರು ಸೇರಿದಂತೆ ಅಕ್ಕ ಪಕ್ಕದ ನಗರಕ್ಕೆ ಸುಲಭ ಸಂಪರ್ಕ ಯೋಜೆಗಳು ಜನರ ಜೀವನ ಸುಗಮಗೊಳಿಸಲಿದೆ ಎಂದಿದ್ದಾರೆ. ಹೊಸ ಯೋಜನೆಗಳು ಟ್ರಾಫಿಕ್ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡಲಿದೆ ಎಂದಿದ್ದಾರೆ.
ಹುಬ್ಭಳ್ಳಿಯ ವಂದೇ ಭಾರತ್ ರೈಲು ಸೇವೆಯಲ್ಲಿ ಕೆಲ ಬದಲಾವಣೆ, ಇಲ್ಲಿದೆ ಹೊಸ ವೇಳಾಪಟ್ಟಿ!