ಟೆಸ್ಟ್ ಗೆಲುವು 1983ರ ವಿಶ್ವಕಪ್ ಗೆಲುವಿಗಿಂತ ಶ್ರೇಷ್ಠ-ಮತ್ತೆ ಶುರುವಾಯ್ತು ಚರ್ಚೆ!

By Web DeskFirst Published Jan 8, 2019, 2:07 PM IST
Highlights

1983ರ ವಿಶ್ವಕಪ್,  2018-19 ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ. ಇದರಲ್ಲಿ ಯಾವುದು ಶ್ರೇಷ್ಠ. ಇದೀಗ ಈ ಚರ್ಚೆ ಶುರುವಾಗಿದೆ. ಹಲವರು 1983 ಶ್ರೇಷ್ಠ ಎಂದಿದ್ದಾರೆ. ಆದರೆ 1983ರ ವಿಶ್ವಕಪ್ ಗೆಲುವಿನ ತಂಡದ ಸದಸ್ಯ ಕೊಹ್ಲಿ ಸೈನ್ಯದ ಟೆಸ್ಟ್ ಸರಣಿ ಗೆಲುವು ಶ್ರೇಷ್ಠ ಎಂದಿದ್ದಾರೆ.

ಸಿಡ್ನಿ(ಜ.08): ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್  ಸರಣಿ ಗೆದ್ದಿರುವ ಟೀಂ ಇಂಡಿಯಾ ಐತಿಹಾಸಿಕ ಸಾಧನೆ ಮಾಡಿದೆ. ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದು ಇತಿಹಾಸ ರಚಿಸಿದೆ. ಇದೀಗ ಈ ಗೆಲುವು 1983ರ ವಿಶ್ವಕಪ್ ಗೆಲುವಿಗಿಂತ ಶ್ರೇಷ್ಠ ಅನ್ನೋ ಮಾತುಗಳು ಕೇಳಿ ಬಂದಿದೆ.

ಇದನ್ನೂ ಓದಿ: 2019ರ ವಿಶ್ವಕಪ್‌ಗೆ ಯುವರಾಜ್ ಸಿಂಗ್ ಕಮ್‌ಬ್ಯಾಕ್ ಗುರಿ!

ಈ ಮಾತು ಹೇಳಿದ್ದು ಟೀಂ ಇಂಡಿಯಾ ಕೋಚ್, 1983ರ ವಿಶ್ವಕಪ್ ತಂಡದ ಸದಸ್ಯ ರವಿ ಶಾಸ್ತ್ರಿ. ಆಸ್ಟ್ರೇಲಿಯಾದಲ್ಲಿ ಇದುವರೆಗೂ ಟೀಂ ಇಂಡಿಯಾ ಟೆಸ್ಟ್ ಸರಣಿ ಗೆದ್ದಿಲ್ಲ. ಈ ಸಾಧನೆಯನ್ನ ವಿರಾಟ್ ಕೊಹ್ಲಿ ಸೈನ್ಯ ಮಾಡಿದೆ. ಹೀಗಾಗಿಯೇ ಇದು 1983ರ ವಿಶ್ವಕಪ್ ಗೆಲುವಿಗಿಂತ ಶ್ರೇಷ್ಠ ಎಂದು ಶಾಸ್ತ್ರಿ ಹೇಳಿದ್ದಾರೆ.

ಇದನ್ನೂ ಓದಿ: ಇಂಡೋ-ಆಸಿಸ್ ಏಕದಿನ: ಟೀಂ ಇಂಡಿಯಾ ಸೇರಿಕೊಂಡ ಧೋನಿ-ರೋಹಿತ್!

1983ರಲ್ಲಿ ಕಪಿಎಲ್ ದೇವ್ ನೇತೃತ್ವದ ಟೀಂ ಇಂಡಿಯಾ ಚೊಚ್ಚಲ ಬಾರಿಗೆ ವಿಶ್ವಕಪ್ ಗೆದ್ದು ಸಂಭ್ರಮಿಸಿತು. ಇದಾದ 28 ವರ್ಷಗಳ ಬಳಿತ ಎಂ.ಎಸ್.ಧೋನಿ ನೇತೃತ್ವದ ಟೀಂ ಇಂಡಿಯಾ ವಿಶ್ವಕಪ್ ಗೆದ್ದು ಇತಿಹಾಸ ರಚಿಸಿತ್ತು. ಇದೀಗ ಟೆಸ್ಟ್ ಸರಣಿ ಗೆಲುವು ಮೊದಲ ವಿಶ್ವಕಪ್ ಟೂರ್ನಿಯನ್ನೇ ಮೀರಿಸುವಂತಿತ್ತು ಅನ್ನೋ ಹೇಳಿಗೆ ಚರ್ಚೆಗೆ ಕಾರಣವಾಗಿದೆ.
 

click me!