3ನೇ ಟೆಸ್ಟ್‌ನಿಂದ ಸೌತ್ಆಫ್ರಿಕಾ ನಾಯಕ ಫಾ ಡುಪ್ಲೆಸಿಸ್ ಅಮಾನತು!

By Web DeskFirst Published Jan 6, 2019, 9:13 PM IST
Highlights

ಪಾಕಿಸ್ತಾನ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಬೆನ್ನಲ್ಲೇ ಸೌತ್ಆಫ್ರಿಕಾ ತಂಡಕ್ಕೆ ಶಾಕ್ ಎದುರಾಗಿದೆ. ನಾಯಕ ಫಾಫ್ ಡುಪ್ಲೆಸಿಸ್ ಅಂತಿಮ ಟೆಸ್ಟ್ ಪಂದ್ಯದಿಂದ ಅಮಾನತ್ತಾಗಿದ್ದಾರೆ. ಸೌತ್ ಆಫ್ರಿಕಾ ನಾಯಕನನ್ನ ಅಮಾನತು ಮಾಡಿದ್ದೇಕೆ? ಇಲ್ಲಿದೆ ವಿವರ.
 

ಕೇಪ್‌ಟೌನ್(ಜ.06): ಪಾಕಿಸ್ತಾನ ವಿರುದ್ಧದ 3ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಿಂದ ಸೌತ್ಆಫ್ರಿಕಾ ನಾಯಕ ಫಾಫ್ ಡುಪ್ಲೆಸಿಸ್ ಅಮಾನತ್ತಾಗಿದ್ದಾರೆ. 2ನೇ ಟೆಸ್ಟ್ ಪಂದ್ಯದಲ್ಲಿ 9 ವಿಕೆಟ್ ಗೆಲುವು ದಾಖಲಿಸಿದ ಸೌತ್ಆಫ್ರಿಕಾಗೆ ಇದೀಗ ಪಂದ್ಯಕ್ಕೂ ಮೊದಲೇ ಆಘಾತ ಎದುರಾಗಿದೆ. 

South Africa captain Faf du Plessis has been suspended for one Test for a second minor over-rate offence within 12 months.

READ 👇https://t.co/4zfyF2onJT pic.twitter.com/KbTUjgUWg0

— ICC (@ICC)

 

ಇದನ್ನೂ ಓದಿ: 1.10 ಲಕ್ಷ ಸಾಮರ್ಥ್ಯ,700 ಕೋಟಿ ವೆಚ್ಚ- ತಲೆ ಎತ್ತಲಿದೆ ವಿಶ್ವದ ಬೃಹತ್ ಕ್ರೀಡಾಂಗಣ

2ನೇ ಟೆಸ್ಟ್ ಪಂದ್ಯದಲ್ಲಿ ನಿಧಾನಗತಿಯಲ್ಲಿ ಓವರ್ ಮಾಡಿದ ಕಾರಣದಿಂದ ನಾಯಕ ಡುಪ್ಲೆಸಿಸ್‌ಗೆ ದಂಡ  ವಿಧಿಸಲಾಗಿದೆ. ಪಂದ್ಯದ ಸಂಭಾವನೆ ಶೇಕಡಾ 20 ರಷ್ಟು ದಂಡ ವಿಧಿಸಲಾಗಿದೆ. ಜೊತೆಗೆ ಒಂದು ಪಂದ್ಯದಿಂದ ಅಮಾನತು ಮಾಡಲಾಗಿದೆ. ಇನ್ನು ಸೌತ್ಆಫ್ರಿಕಾ ತಂಡದ ಇತರ ಆಟಗಾರರು ತಮ್ಮ ಸಂಭಾವನೆಯ ಶೇಕಡಾ 10 ರಷ್ಟು ದಂಡ ಪಾವತಿಸಬೇಕಿದೆ.

ಇದನ್ನೂ ಓದಿ: 37 ವರ್ಷದ ಮೆಕ್ಕಲಂ ಡೈವ್ ಕ್ಯಾಚ್ ಯತ್ನಕ್ಕೆ ತಲೆಬಾಗಿದ ಫ್ಯಾನ್ಸ್!

ಪಾಕ್ ವಿರುದ್ಧದ ಸರಣಿಯಲ್ಲಿ ಸೌತ್ಆಫ್ರಿಕಾ 2-0 ಅಂತದಿಂದ ಮುನ್ನಡೆ ಸಾಧಿಸಿದೆ.  ಸರಣಿಯಲ್ಲಿ ಕ್ಲೀನ್ ಸ್ವೀಪ್ ಗುರಿ ಹೊಂದಿರುವ ಸೌತ್ಆಫ್ರಿಕಾ ಅಂತಿಮ ಪಂದ್ಯದಲ್ಲಿ ನಾಯಕನ ಅನುಪಸ್ಥಿತಿಯಲ್ಲೂ ಗೆಲುವಿನ ವಿಶ್ವಾಸದಲ್ಲಿದೆ. 
 

click me!