ಕಳಪೆ ಫಾರ್ಮ್‌ನಲ್ಲಿರುವ ಹಾರ್ದಿಕ್ ಪಾಂಡ್ಯಗೆ ವಿಶ್ವಕಪ್‌ ಟೂರ್ನಿಗೆ ಸೆಲೆಕ್ಟ್ ಮಾಡಿದ್ದೇಕೆ?

By Kannadaprabha News  |  First Published May 1, 2024, 1:49 PM IST

IPL ಮುಗಿದ ಒಂದೇ ವಾರದಲ್ಲೇ T20 ವರ್ಲ್ಡ್‌ಕಪ್ ವಾರ್ ಆರಂಭವಾಗಲಿದೆ. ಈ ಬಾರಿ T20 ವಿಶ್ವಕಪ್ ಗೆಲ್ಲಲೇಬೇಕು ಅಂತ BCCI ಪಣ ತೊಟ್ಟಿದೆ. ಅದಕ್ಕಾಗಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ತಂಡವನ್ನ ಆಯ್ಕೆ ಮಾಡಿದೆ. ಆದ್ರೆ, ಕಳಪೆ ಫಾರ್ಮ್ ಸುಳಿಗೆ ಸಿಲುಕಿರೋ, ಓವರ್ ಆ್ಯಕ್ಷನ್ ಸ್ಟಾರ್ ಹಾರ್ದಿಕ್ ಪಾಂಡ್ಯರನ್ನ ಆಯ್ಕೆ ಮಾಡಿದ್ದೇಕೆ..? ಅನ್ನೋ ಪ್ರಶ್ನೆ ಮೂಡಿದೆ. 


ಬೆಂಗಳೂರು(ಮೇ.01) ಮುಂಬರುವ ಐಸಿಸಿ ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾವನ್ನ ಸೆಲೆಕ್ಟರ್ಸ್ ಅದ್ಯಾವ ಲೆಕ್ಕಾಚಾರದ ಮೇಲೆ ಆಯ್ಕೆ ಮಾಡಿದ್ದಾರೋ ಗೊತ್ತಾಗ್ತಿಲ್ಲ. ಒಂದೆಡೆ ಅದ್ಭುತ ಫಾರ್ಮ್ನಲ್ಲಿರೋ ರಾಹುಲ್‌ಗೆ ತಂಡದಲ್ಲಿ ಸ್ಥಾನ ಇಲ್ಲ. ಅದ್ರೆ, ಮತ್ತೊಂದೆಡೆ  ಅಟ್ಟರ್ ಫ್ಲಾಪ್ ಶೋ ನೀಡ್ತಿರೋ ಹಾರ್ದಿಕ್ ಪಾಂಡ್ಯನ ಆಯ್ಕೆ ಮಾಡೋದು ಅಲ್ಲದೇ, ಉಪನಾಯಕನ ಪಟ್ಟ ಬೇರೆ ಕಟ್ಟಿದ್ದಾರೆ.  

ಕಳಪೆ ಫಾರ್ಮ್ನಲ್ಲಿರೋ ಆಟಗಾರ ತಂಡಕ್ಕೆ ಬೇಕಿತ್ತಾ..? 

Latest Videos

undefined

IPL ಮುಗಿದ ಒಂದೇ ವಾರದಲ್ಲೇ T20 ವರ್ಲ್ಡ್‌ಕಪ್ ವಾರ್ ಆರಂಭವಾಗಲಿದೆ. ಈ ಬಾರಿ T20 ವಿಶ್ವಕಪ್ ಗೆಲ್ಲಲೇಬೇಕು ಅಂತ BCCI ಪಣ ತೊಟ್ಟಿದೆ. ಅದಕ್ಕಾಗಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ತಂಡವನ್ನ ಆಯ್ಕೆ ಮಾಡಿದೆ. ಆದ್ರೆ, ಕಳಪೆ ಫಾರ್ಮ್ ಸುಳಿಗೆ ಸಿಲುಕಿರೋ, ಓವರ್ ಆ್ಯಕ್ಷನ್ ಸ್ಟಾರ್ ಹಾರ್ದಿಕ್ ಪಾಂಡ್ಯರನ್ನ ಆಯ್ಕೆ ಮಾಡಿದ್ದೇಕೆ..? ಅನ್ನೋ ಪ್ರಶ್ನೆ ಮೂಡಿದೆ. 

IPL 2024 ಇಂದು ಚೆನ್ನೈನಲ್ಲಿ ಸಿಎಸ್‌ಕೆಗೆ ಪಂಜಾಬ್ ಕಿಂಗ್ಸ್ ಸವಾಲು

ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ಫ್ಲಾಫ್ ಶೋ..! 

ಯೆಸ್, ಪ್ರಸಕ್ತ IPLನಲ್ಲಿ ಟೀಂ ಇಂಡಿಯಾದ ಹಲವು ಆಟಗಾರರು ಅಬ್ಬರಿಸ್ತಿದ್ದಾರೆ. ಸೀನಿಯರ್ಗಳಾದ ರೋಹಿತ್ ಶರ್ಮಾ ಶತಕ ಸಿಡಿಸಿ ತಮ್ಮ ಸಾಮರ್ಥ್ಯ ಪ್ರೂವ್ ಮಾಡಿದ್ದಾರೆ. ಕೊಹ್ಲಿ ಟೂರ್ನಿಯಲ್ಲಿ ಅತಿಹೆಚ್ಚು ರನ್‌ಗಳಿಸಿ, ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದಾರೆ. ಬುಮ್ರಾ ಅದ್ಭುತ ಸ್ಪೆಲ್‌ಗಳ ಮೂಲಕ ವಿಕೆಟ್ ಬೇಟೆಯಾಡ್ತಿದ್ದಾರೆ. ರಾಹುಲ್ ನಾಯಕತ್ವದಲ್ಲಿ ಲಖನೌ ಸೂಪರ್ ಜೈಂಟ್ಸ್ ಗೆದ್ದು ಬೀಗ್ತಿದೆ. ಆದ್ರೆ, ಪಾಂಡ್ಯ ಈವರೆಗೂ ಕಡಿದು ಕಟ್ಟೆ ಹಾಕಿದ್ದು ಏನೂ ಇಲ್ಲ. 

ಏಕದಿನ ವಿಶ್ವಕಪ್ ವೇಳೆ ಇಂಜುರಿಯಾಗಿ ಕ್ರಿಕೆಟ್‌ನಿಂದ ದೂರ ಹೊರಗುಳಿದಿದ್ದ ಹಾರ್ದಿಕ್ ಪಾಂಡ್ಯ, IPL ಮೂಲಕ ರೀ ಎಂಟ್ರಿ ನೀಡಿದ್ರು. ಆದ್ರೆ, ಕಮ್‌ಬ್ಯಾಕ್‌ನಲ್ಲಿ ಅಟ್ಟರ್ ಫ್ಲಾಪ್ ಶೋ ನೀಡ್ತಿದ್ದಾರೆ. ಬ್ಯಾಟಿಂಗ್ನಲ್ಲಿ ಖದರ್ ಕಳೆದುಕೊಂಡಿದ್ದಾರೆ. ಡೆತ್ ಓವರ್‌ಗಳಲ್ಲಿ ಫಿನಿಶರ್ ರೋಲ್ ನಿಭಾ ಯಿಸ್ತಿದ್ದವರು, ಬೌಂಡರಿ ಬಾರಿಸಲು ಪರದಾಡ್ತಿದ್ದಾರೆ. ಅತ್ತ ಬೌಲಿಂಗ್ನಲ್ಲಿ  ಪಂದ್ಯದಿಂದ ಪಂದ್ಯಕ್ಕೆ ದುಬಾರಿ ಯಾಗ್ತಿದ್ದಾರೆ. 9 ಪಂದ್ಯಗಳಿಂದ ಕೇವಲ 197 ರನ್‌ ಗಳಿಸಿದ್ದಾರೆ. ಬೌಲಿಂಗ್ನಲ್ಲಿ 11.94ರ ಎಕಾನಮಿ ಜಸ್ಟ್ 4 ವಿಕೆಟ್ ಬೇಟೆಯಾಡಿದ್ದಾರೆ. 

ಟಿ20 ವಿಶ್ವಕಪ್ ಟೂರ್ನಿಗೆ ಆಸ್ಟ್ರೇಲಿಯಾ ತಂಡ ಪ್ರಕಟ; ವಿಶ್ವಕಪ್ ಮೇಲೆ ಕಾಲಿಟ್ಟವನಿಗೆ ನಾಯಕ ಪಟ್ಟ..!

ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಸೋಲಿನ ಸುಳಿಯಲ್ಲಿ..!

ಯೆಸ್, ನಾಯಕನಾಗಿ ಹಾರ್ದಿಕ್ ಗುಜರಾತ್ ಟೈಟನ್ಸ್‌ಗೆ ಕಪ್ ಗೆದ್ದು ಕೊಟ್ಟಿದ್ರು. ಅಲ್ಲದೇ, ಕಳೆದ ಬಾರಿ ತಂಡವನ್ನ ಫೈನಲ್‌ಗೆ ತಲುಪಿಸಿದ್ರು. ಆದ್ರೆ, ಮುಂಬೈಗೆ ಬಂದ್ಮೇಲೆ ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ಸಿ ಇಂಪ್ಯಾಕ್ಟ್‌ಫುಲ್ ಆಗಿಲ್ಲ. ಗೇಮ್‌ಪ್ಲಾನ್, ಸ್ಟಾಟರ್ಜಿ ಯಾವುದೂ ವರ್ಕೌಟ್ ಆಗ್ತಿಲ್ಲ. ಇದ್ರಿಂದ ಹಾರ್ದಿಕ್ ನಾಯಕತ್ವದ ವಿರುದ್ಧ ಫ್ಯಾನ್ಸ್ ಮತ್ತು ಮಾಜಿ ಕ್ರಿಕೆಟರ್ಸ್ ಕಿಡಿಕಾರ್ತಿದ್ದಾರೆ. 

ಒಟ್ಟಿನಲ್ಲಿ ಸೆಲೆಕ್ಟರ್ಸ್ ಅದ್ಯಾವ ಕಾರಣಕ್ಕೆ, ಹಾರ್ದಿಕ್ ಪಾಂಡ್ಯಗೆ ತಂಡದಲ್ಲಿ ಸ್ಥಾನ ನೀಡಿದ್ದಾರೋ ಗೊತ್ತಿಲ್ಲ. ಒಂದು ವೇಳೆ ವಿಶ್ವಕಪ್ನಲ್ಲೂ ಈ ಓವರ್ ಆ್ಯಟಿಟ್ಯುಡ್ ಸ್ಟಾರ್ ಫೇಲ್ ಆದ್ರೆ, ರೋಹಿತ್ ಶರ್ಮಾ ಪಡೆಗೆ ಸಂಕಷ್ಟ ತಪ್ಪಿದ್ದಲ್ಲ. 

ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್ 

click me!