IPL 2024: ಟಾಸ್‌ ಗೆದ್ದ ಪಂಜಾಬ್‌ ಕಿಂಗ್ಸ್‌ ಬೌಲಿಂಗ್‌ ಆಯ್ಕೆ

By Santosh Naik  |  First Published May 1, 2024, 7:05 PM IST


ಸತತ ಎರಡು ಪಂದ್ಯಗಳ ಸೋಲಿನ ಬಳಿಕ ಕಳೆದ ಪಂದ್ಯದಲ್ಲಿ ಜಯದ ದಾರಿಗೆ ಮರಳಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ಇಂದಿನ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ತಂಡವನ್ನು ಎದುರಿಸಲಿದೆ
 


ಚೆನ್ನೈ (ಮೇ.1): ಕಳೆದ ಪಂದ್ಯದಲ್ಲಿ ಟಿ20 ಕ್ರಿಕೆಟ್‌ನ ವಿಶ್ವದಾಖಲೆಯ ಚೇಸಿಂಗ್‌ ಮೂಲಕ ಮಿಂಚಿರುವ ಪಂಜಾಬ್‌ ಕಿಂಗ್ಸ್‌ ತಂಡ ಇಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಸವಾಲನ್ನು ಎದುರಿಸಲಿದೆ. ಪ್ರಮುಖ ಪಂದ್ಯದಲ್ಲಿ ಟಾಸ್‌ ಗೆಲುವು ಕಂಡಿರುವ ಪಂಜಾಬ್‌ ಕಿಂಗ್ಸ್‌ ತಂಡ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ.

ಪಂಜಾಬ್ ಕಿಂಗ್ಸ್ (ಪ್ಲೇಯಿಂಗ್ XI): ಜಾನಿ ಬೈರ್‌ಸ್ಟೋವ್, ಸ್ಯಾಮ್ ಕರ್ರಾನ್(ಸಿ), ರಿಲೀ ರೊಸೊವ್, ಶಶಾಂಕ್ ಸಿಂಗ್, ಜಿತೇಶ್ ಶರ್ಮಾ(ಡಬ್ಲ್ಯೂ), ಅಶುತೋಷ್ ಶರ್ಮಾ, ಹರ್‌ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಕಗಿಸೊ ರಬಾಡ, ರಾಹುಲ್ ಚಾಹರ್, ಅರ್ಶ್‌ದೀಪ್ ಸಿಂಗ್

Latest Videos

undefined

ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ XI): ಅಜಿಂಕ್ಯ ರಹಾನೆ, ರುತುರಾಜ್ ಗಾಯಕ್ವಾಡ್ (ಸಿ), ಡೇರಿಲ್ ಮಿಚೆಲ್, ಮೊಯಿನ್ ಅಲಿ, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ (ಡಬ್ಲ್ಯು), ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ರಿಚರ್ಡ್ ಗ್ಲೀಸನ್, ಮುಸ್ತಾಫಿಜುರ್ ರೆಹಮಾನ್

ಟಿ20 ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯದ ನತದೃಷ್ಟ ಕ್ರಿಕೆಟಿಗರಿವರು..!

ಹಾಲಿ ಐಪಿಎಲ್‌ನಲ್ಲಿ ರುತುರಾಜ್‌ ಗಾಯಕ್ವಾಡ್‌ ಅವರ 9ನೇ ಟಾಸ್‌ ಸೋಲು ಇದಾಗಿದೆ. ಈ ಪಂದ್ಯದೊಂದಿಗೆ ರಿಚರ್ಡ್‌ ಗ್ಲೀಸನ್‌ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದಾರೆ. 2014ರ ಐಪಿಎಲ್‌ ನಂತರ ಟೂರ್ನಿಗೆ ಪಾದಾರ್ಪಣೆ ಮಾಡಿದ 2ನೇ ಅತ್ಯಂತ ಹಿರಿಯ ಕ್ರಿಕೆಟಿಗ ರಿಚರ್ಡ್‌ ಗ್ಲೀಸನ್‌ ಆಗಿದ್ದಾರೆ. 36 ವರ್ಷ 151ನೇ ದಿನದಲ್ಲಿ ರಿಚರ್ಡ್‌ ಗ್ಲೀಸನ್‌  ಐಪಿಎಲ್‌ಗೆ ಡೆಬ್ಯು ಮಾಡಿದರು. 36 ವರ್ಷ 342ನೇ ದಿನದಲ್ಲಿ ಐಪಿಎಲ್‌ ಪಾದಾರ್ಪಣೆ ಮಾಡುವ ಮೂಲಕ ಸಿಕಂದರ್‌ ರಾಜಾ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಕಳಪೆ ಫಾರ್ಮ್‌ನಲ್ಲಿರುವ ಹಾರ್ದಿಕ್ ಪಾಂಡ್ಯಗೆ ವಿಶ್ವಕಪ್‌ ಟೂರ್ನಿಗೆ ಸೆಲೆಕ್ಟ್ ಮಾಡಿದ್ದೇಕೆ?

click me!