ಐಪಿಎಲ್ 2019: ಆರ್‌ಸಿಬಿ ತಂಡದಿಂದ 6 ಸ್ಟಾರ್ ಆಟಗಾರರು ಔಟ್!

By Web DeskFirst Published Nov 15, 2018, 7:31 PM IST
Highlights

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2019ರ ಐಪಿಎಲ್ ಟೂರ್ನಿಗೆ ಸಿದ್ಧತೆ ಆರಂಭಿಸಿದೆ. ಇದಕ್ಕಾಗಿ ತಂಡದ ಪ್ರಮುಖ 6 ಆಟಗಾರರನ್ನ ಕೈಬಿಡಲಾಗಿದೆ. ಇಲ್ಲಿದೆ ತಂಡ ರಿಟೈನ್ ಹಾಗೂ ರಿಲೀಸ್ ಪ್ಲೇಯರ್ ಲಿಸ್ಟ್.
 

ಬೆಂಗಳೂರು(ನ.15): 2019ರ ಐಪಿಎಲ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೀಗ ತಂಡದಲ್ಲಿ ಕೆಲ ಬದಲಾವಣೆ ಮಾಡಿದೆ. ಐಪಿಎಲ್ ನಿಯಮದ ಪ್ರಕಾರ ನವೆಂಬರ್ 15ರೊಳಗೆ ತಂಡದ ರಿಟೈನ್ ಹಾಗೂ ರಿಲೀಸ್ ಪ್ಲೇಯರ್‌ಗಳ ಪಟ್ಟಿಯನ್ನ ಆರ್‌ಸಿಬಿ ಪ್ರಕಟಿಸಿದೆ.

ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೀಗ ಪ್ರಮುಖ 6 ಆಟಗಾರರನ್ನ ತಂಡದಿಂದ ಕೈಬಿಟ್ಟಿದೆ. ನಾಲ್ವರು ವಿದೇಶಿ ಆಟಗಾರರಾದ ಬ್ರೆಂಡನ್ ಮೆಕ್‌ಕಲಮ್, ಕೋರಿ ಆಂಡರ್ಸನ್ ಹಾಗೂ ಕ್ರಿಸ್ ವೋಕ್ಸ್‌ರನ್ನ ಕೈಬಿಡಲಾಗಿದೆ. ಇನ್ನು ಭಾರತದ ಸರ್ಫರಾಜ್ ಖಾನ್ ಹಾಗೂ ಮನ್ದೀಪ್ ಸಿಂಗ್‌ಗೂ ಕೊಕ್ ನೀಡಲಾಗಿದೆ.

ರಿಟೈನ್ ಆಟಗಾರರು:
ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಪಾರ್ಥೀವ್ ಪಟೇಲ್, ವಾಶಿಂಗ್ಟನ್ ಸುಂದರ್, ಪವನ್ ನೇಗಿ, ಮೊಯಿನ್ ಆಲಿ, ಕೊಲಿನ್ ಡೇ ಗ್ರ್ಯಾಂಡ್‌ಹೊಮ್ಮೆ, ಮಾರ್ಕಸ್ ಸ್ಟೊಯಿನಿಸ್, ಯಜುವೇಂದ್ರ ಚೆಹಾಲ್, ಮೊಹಮ್ಮದ್ ಸಿರಾಜ್, ಟಿಮ್ ಸೌಥಿ, ಉಮೇಶ್ ಯಾದವ್, ನವದೀಪ್ ಸೈನಿ, ಕುಲ್ವಂತ್ ಕೆಜ್ರೋಲಿಯಾ, ನತನ್ ಕೌಲ್ಟರ್ ನೈಲ್.

ಕೈಬಿಟ್ಟ ಆಟಗಾರರು:
ಬ್ರೆಂಡನ್‌ ಮೆಕ್‌ಕಲಮ್, ಕೊರಿ ಆಂಡರ್ಸನ್, ಕ್ರಿಸ್ ವೋಕ್ಸ್,ಸರ್ಫರಾಜ್ ಖಾನ್, ಮನ್ದೀಪ್ ಸಿಂಗ್

click me!