ಪಂಜಾಬ್ ಹಾಗೂ ಕೋಲ್ಕತಾ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ಈಡೆನ್ ಗಾರ್ಡನ್ಸ್ ಮೈದಾನ ಆತಿಥ್ಯ ವಹಿಸಿದೆ. ಇಂದಿನ ಪಂದ್ಯಕ್ಕೂ ಶಿಖರ್ ಧವನ್ ಅಲಭ್ಯರಾಗಿರುವುದರಿಂದ ಸ್ಯಾಮ್ ಕರ್ರನ್ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಕೋಲ್ಕತಾ(ಏ.26): 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 42ನೇ ಪಂದ್ಯದಲ್ಲಿಂದು ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಸ್ಯಾಮ್ ಕರ್ರನ್ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ.
ಪಂಜಾಬ್ ಹಾಗೂ ಕೋಲ್ಕತಾ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ಈಡೆನ್ ಗಾರ್ಡನ್ಸ್ ಮೈದಾನ ಆತಿಥ್ಯ ವಹಿಸಿದೆ. ಇಂದಿನ ಪಂದ್ಯಕ್ಕೂ ಶಿಖರ್ ಧವನ್ ಅಲಭ್ಯರಾಗಿರುವುದರಿಂದ ಸ್ಯಾಮ್ ಕರ್ರನ್ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ತವರಿನಲ್ಲಿ ಸತತ 4 ಪಂದ್ಯಗಳನ್ನು ಸೋತಿರುವ ಪಂಜಾಬ್ ಕಿಂಗ್ಸ್ ಇದೀಗ ತವರಿನಾಚೆ ತನ್ನ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ. ಪಂಜಾಬ್ ಕಿಂಗ್ಸ್ ತಂಡದಲ್ಲಿ ಒಂದು ಮಹತ್ವದ ಬದಲಾವಣೆಯಾಗಿದ್ದು, ಲಿಯಾಮ್ ಲಿವಿಂಗ್‌ಸ್ಟೋನ್ ಇಂದಿನ ಪಂದ್ಯದಿಂದ ಹೊರಬಿದ್ದಿದ್ದು, ಜಾನಿ ಬೇರ್‌ಸ್ಟೋವ್ ತಂಡ ಕೂಡಿಕೊಂಡಿದ್ದಾರೆ.
🚨 Toss Update 🚨 win the toss and elect to bowl against
Follow the Match ▶️ https://t.co/T9DxmbgIWu | pic.twitter.com/3b5VbVdr2J
ಇನ್ನು ಕೋಲ್ಕತಾ ನೈಟ್ ರೈಡರ್ಸ್ ತಂಡದಲ್ಲೂ ಒಂದು ಬದಲಾವಣೆಯಾಗಿದ್ದು, ದುಬಾರಿ ಆಟಗಾರ ಮಿಚೆಲ್ ಸ್ಟಾರ್ಕ್ ಇಂದಿನ ಪಂದ್ಯಕ್ಕೆ ಅಲಭ್ಯರಾಗಿದ್ದು, ಸ್ಟಾರ್ಕ್ ಬದಲಿಗೆ ಶ್ರೀಲಂಕಾದ ವೇಗಿ ದುಸ್ಮಂತಾ ಚಮೀರ ತಂಡ ಕೂಡಿಕೊಂಡಿದ್ದಾರೆ.
ಪಂಜಾಬ್ ಕಿಂಗ್ಸ್ ತಂಡವು ಆಡಿರುವ 8 ಪಂದ್ಯದಲ್ಲಿ ಕೇವಲ 2ರಲ್ಲಿ ಗೆದ್ದಿದೆ. ಅತ್ತ ಕೆಕೆಆರ್ 7 ಪಂದ್ಯಗಳಲ್ಲಿ 5ರಲ್ಲಿ ಜಯಭೇರಿ ಬಾರಿಸಿದ್ದು, ಇನ್ನೊಂದು ಗೆಲುವು ತಂಡವನ್ನು ಪ್ಲೇ-ಆಫ್‌ಗೆ ಹತ್ತಿರವಾಗಿಸಲಿದೆ. ಕೆಕೆಆರ್ ಈ ಬಾರಿ ಬ್ಯಾಟಿಂಗ್ ವಿಭಾಗದಲ್ಲಿ ಅಬ್ಬರಿಸುತ್ತಿದ್ದು, 7ರಲ್ಲಿ 4 ಪಂದ್ಯದಲ್ಲಿ 200+ ರನ್ ಕಲೆಹಾಕಿದೆ. ಆದರೆ ಬೌಲಿಂಗ್ ವಿಭಾಗ ಮೊನಚು ಕಳೆದುಕೊಂಡಿದೆ.
ಉಭಯ ತಂಡಗಳ ಆಟಗಾರರ ಪಟ್ಟಿ ಹೀಗಿದೆ ನೋಡಿ
ಪಂಜಾಬ್ ಕಿಂಗ್ಸ್:
ಜಾನಿ ಬೇರ್‌ಸ್ಟೋವ್, ಪ್ರಭ್‌ಸಿಮ್ರನ್ ಸಿಂಗ್, ರಿಲೇ ರೂಸ್ಸೌ, ಸ್ಯಾಮ್ ಕರ್ರನ್(ನಾಯಕ), ಜಿತೇಶ್ ಶರ್ಮಾ(ವಿಕೆಟ್ ಕೀಪರ್), , ಶಶಾಂಕ್ ಸಿಂಗ್, ಅಶುತೋಶ್ ಶರ್ಮಾ, ಹಪ್ರೀತ್ ಬ್ರಾರ್, ರಾಹುಲ್ ಚಹರ್, ಕಗಿಸೋ ರಬಾಡ, ಹರ್ಷಲ್ ಪಟೇಲ್.
ಕೋಲ್ಕತಾ ನೈಟ್ ರೈಡರ್ಸ್:
ಫಿಲ್ ಸಾಲ್ಟ್(ವಿಕೆಟ್ ಕೀಪರ್), ಸುನಿಲ್ ನರೈನ್, ಅಂಗ್‌ಕೃಷ್ ರಘುವಂಶಿ, ಶ್ರೇಯಸ್ ಅಯ್ಯರ್(ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ರಮಣ್‌ದೀಪ್ ಸಿಂಗ್, ದುಸ್ಮಂತಾ ಚಮೀರ , ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ಸುಯಾಶ್ ಶರ್ಮಾ
ಪಂದ್ಯ: ಸಂಜೆ. 7:30ಕ್ಕೆ
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ