ಕೆಕೆಆರ್ ಮತ್ತೊಮ್ಮೆ ಸ್ಫೋಟಕ ಬ್ಯಾಟಿಂಗ್ ಮೂಲಕ ಐಪಿಎಲ್ 2024ರಲ್ಲಿ ಹೊಸ ದಾಖಲೆ ಬರೆದಿದೆ. ಫಿಲಿಪ್ ಸಾಲ್ಟ್ ಹಾಗೂ ಸುನಿಲ್ ನರೈನ್ ಅಬ್ಬರದಿಂದ ಪಂಜಾಬ್ ವಿರುದ್ಧ 261 ರನ್ ಸಿಡಿಸಿದೆ.
ಕೋಲ್ಕತಾ(ಏ.26) ಐಪಿಎಲ್ 2024ರ ಟೂರ್ನಿಯಲ್ಲಿ ಪ್ರತಿ ದಿನ ಒಂದೊಂದು ದಾಖಲೆ ನಿರ್ಮಾಣವಾಗುತ್ತಿದೆ. 200 ರನ್ ಇದೀಗ ಲೆಕ್ಕಕ್ಕೆ ಸಿಗದಂತಾಗಿದೆ. ಪಂಜಾಬ್ ಕಿಂಗ್ಸ್ ವಿರುದ್ಧ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿಕೆಟ್ ನಷ್ಟಕ್ಕೆ ರನ್ ಸಿಡಿಸಿದೆ. ಫಿಲಿಪ್ ಸಾಲ್ಟ್ ಹಾಗೂ ಸುನಿಲ್ ನರೈನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನಕ್ಕೆ ಪಂಜಾಬ್ ಕಿಂಗ್ಸ್ ಬೆಚ್ಚಿ ಬಿದ್ದಿತ್ತು. 16 ಓವರ್‌ನಲ್ಲೇ ಕೆಕೆಆರ್ 200 ರನ್ ಗಡಿ ದಾಟಿತು. ಅಂತಿಮವಾಗಿ ಕೆಕೆಆರ್ 6 ವಿಕೆಟ್ ನಷ್ಟಕ್ಕೆ 261 ರನ್ ಸಿಡಿಸಿತು.
ಪಂಜಾಬ್ ವಿರುದ್ಧ ಕೆಕೆಆರ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನಕ್ಕೆ ಕೆಲ ದಾಖಲೆ ನಿರ್ಮಾಣವಾಗಿದೆ. ಕೆಕೆಆರ್ ಪರ 200 ಸಿಕ್ಸರ್ ಸಿಡಿಸಿದ ಹೆಗ್ಗಳಿಕೆಗೆ ಇದೀಗ ಆ್ಯಂಡ್ರೆ ರಸೆಲ್ ಪಾತ್ರರಾಗಿದ್ದಾರೆ. ರಸೆಲ್ ಕೆಕೆಆರ್ ಪರ 201 ಸಿಕ್ಸರ್ ಸಿಡಿಸಿದ ಸಾಧನೆ ಮಾಡಿದ್ದಾರೆ. ಎರಡನೇ ಸ್ಥಾನದಲ್ಲಿರುವ ನಿತೀಶ್ ರಾಣಾ 106 ಸಿಕ್ಸರ್ ಸಿಡಿಸಿದ್ದಾರೆ.
ಕೆಕಆರ್ ಪರ ಗರಿಷ್ಠ ಸಿಕ್ಸರ್ ಸಾಧನೆ
ಆ್ಯಂಡ್ರೆ ರಸೆಲ್: 201 ಸಿಕ್ಸರ್
ನಿತೀಶ್ ರಾಣಾ: 106 ಸಿಕ್ಸರ್
ಸುನಿಲ್ ನರೈನ್: 88 ಸಿಕ್ಸರ್
ಯೂಸೂಫ್ ಪಠಾಣ್: 85 ಸಿಕ್ಸರ್
ರಾಬಿನ್ ಉತ್ತಪ್ಪ : 85 ಸಿಕ್ಸರ್
ಕೆಕೆಆರ್ ಪರ ಪಿಲಿಫ್ ಸಾಲ್ಟ್ ಹಾಗೂ ಸುನಿಲ್ ನರೈನ್ ಸ್ಫೋಟಕ ಆರಂಭ ನೀಡಿದರು. ಸುನಿಲ್ ನರೈನ್ ಕೇವಲ 32 ಎಸೆತದಲ್ಲಿ 71 ರನ್ ಸಿಡಿಸಿದರು. ಮೊದಲ ವಿಕೆಟ್‌ಗೆ ಈ ಜೋಡಿ ದಾಖಲೆಯ 138ರನ್ ಸಿಡಿಸಿತು. ಇತ್ತ ಸಾಲ್ಟ್ 37 ಎಸೆತದಲ್ಲಿ 75 ರನ್ ಸಿಡಿಸಿದರು. ವೆಂಕಟೇಶ್ ಅಯ್ಯರ್ ಅಬ್ಬರಿಸಿದರೆ, ರಸೆಲ್ 12 ಎಸೆದಲ್ಲಿ 24 ರನ್ ಸಿಡಿಸಿದರು.'
ಕೆಕೆಆರ್ ಪರ ಗರಿಷ್ಠ ರನ್ ಜೊತೆಯಾಟ
ಗೌತಮ್ ಗಂಭೀರ್- ಕ್ರಿಸ್ ಲಿನ್: 184 ರನ್ ಅಜೇಯ (2017)
ಗೌತಮ್ ಗಂಭೀರ್- ರಾಬಿನ್ ಉತ್ತಪ್ಪ : 158 ರನ್ (2017)
ಗೌತಮ್ ಗಂಭೀರ್-ಜ್ಯಾಕ್ ಕಾಲಿಸ್ : 152 ರನ್ ಅಜೇಯ( 2011)
ಸುನಿಲ್ ನರೈನ್-ಫಿಲ್ ಸಾಲ್ಟ್: 138 ರನ್(2024)
ನಾಯಕ ಶ್ರೇಯಸ್ ಅಯ್ಯರ್ ಹಾಗೂ ವೆಂಕಟೇಶ್ ಅಯ್ಯರ್ ಹೋರಾಟ ಕೆಕೆಆರ್ ತಂಡದ ರನ್ 200ರ ಗಡಿ ದಾಟಿಸಿತು. ಶ್ರೇಯಸ್ 28 ರನ್ ಸಿಡಿಸಿ ಔಟಾದರು. ವೆಂಕೇಶ್ ಅಯ್ಯರ್ 39 ರನ್ ಸಿಡಿಸಿದರು. ಈ ಮೂಲಕ ಕೆಕೆಆರ್ 6 ವಿಕೆಟ್ ನಷ್ಟಕ್ಕೆ 261 ರನ್ ಸಿಡಿಸಿತು.