ಆಸರೆಯಾಗಿದ್ದ ರಹಾನೆ-ಪೂಜಾರಾ ಔಟ್- ಸೋಲಿನತ್ತ ಭಾರತ

By Web DeskFirst Published Aug 12, 2018, 7:44 PM IST
Highlights

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಆಂಗ್ಲರು ಹಿಡಿತ ಸಾಧಿಸಿದ್ದಾರೆ. 4ನೇ ದಿನವೂ ಇಂಗ್ಲೆಂಡ್ ಪ್ರಾಬಲ್ಯ ಮುಂದುವರಿಸಿದ್ದರೆ, ಟೀಂ ಇಂಡಿಯಾ ಹೋರಾಟ ನೀಡಲು ಪರದಾಡುತ್ತಿದೆ. ಇಲ್ಲಿದೆ ನಾಲ್ಕನೇ ದಿನದ ಅಪ್‌ಡೇಟ್ಸ್

ಲಾರ್ಡ್ಸ್(ಆ.12): ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಪರಿಸ್ಥಿತಿ ಶೋಚನೀಯವಾಗಿದೆ. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 396ರನ್‌ಗಳಿಗೆ ಡಿಕ್ಲೇರ್ ಮಾಡಿಕೊಂಡಿತ್ತು. ಹೀಗಾಗಿ 2ನೇ ಇನ್ನಿಂಗ್ಸ್ ಆರಂಭಿಸಿದ ಭಾರತ 4ನೇ ವಿಕೆಟ್ ಕಳೆದುಕೊಂಡಿದೆ.

289 ರನ್ ಹಿನ್ನಡೆಯೊಂದಿದೆ 2ನೇ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖಮಾಡಿತ್ತು. ಮುರಳಿ ವಿಜಯ್ ಶೂನ್ಯ ಸುತ್ತಿದರೆ, ಕೆಎಲ್ ರಾಹುಲ್ 10 ರನ್‌ಗಳಿಸಿ ಔಟಾಗಿದ್ದರು.

ಅಜಿಂಕ್ಯ ರಹಾನೆ ಹಾಗೂ ಚೇತೇಶ್ವರ್ ಪೂಜಾರ ತಂಡಕ್ಕೆ ಆಸರೆಯಾಗಿದ್ದರು. 33 ಎಸೆತ ಎದುರಿಸಿ ಹೋರಾಟ ನೀಡೋ ಸೂಚನೆ ನೀಡಿದ ರಹಾನೆ ಸ್ಕೋರ್ 13 ದಾಟಲಿಲ್ಲ. 35 ರನ್‌ಗಳಿಸುವಷ್ಟರಲ್ಲೇ ಭಾರತ 3ನೇ ವಿಕೆಟ್ ಕಳೆದುಕೊಂಡಿತು. ಟೀಂ ಇಂಡಿಯಾವನ್ನ ಕಾಪಾಡಬೇಕಾದ ಜವಾಬ್ದಾರಿ  ಚೇತೇಶ್ವರ್ ಪೂಜಾರ 17 ರನ್ ಸಿಡಿಸಿ ಪೆವಿಲಿಯನ್ ಸೇರಿಕೊಂಡರು. 

ಇದನ್ನೂ ಓದಿ: ಮಲ್ಲಿಕ್ ಮದ್ವೆಯಾಗಿರೋದು ಇಂಡೋ-ಪಾಕ್ ಒಗ್ಗೂಡಿಸಲು ಅಲ್ಲ- ಸಾನಿಯಾ

ನಾಯಕ ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ ದಿಟ್ಟ ಹೋರಾಟ ನೀಡಬೇಕಿದೆ. ಇಲ್ಲವಾದಲ್ಲಿ ಭಾರತ, ಇನ್ನಿಂಗ್ಸ್ ಹಾಗೂ ಸೋಲು ಅನುಭವಿಸೋದರಲ್ಲಿ ಯಾವುದೇ  ಅನುಮಾನವಿಲ್ಲ.

ಭಾರತದ 2ನೇ ಇನ್ನಿಂಗ್ಸ್ ಆರಂಭಕ್ಕೂ ಮೊದಲು 4ನೇ ದಿನದಾಟದ ಮೊದಲ ಇನ್ನಿಂಗ್ಸ್ ಮುಂದುವರಿಸಿದ ಇಂಗ್ಲೆಂಡ್ 7 ವಿಕೆಟ್ ನಷ್ಟಕ್ಕೆ 396 ರನ್ ಸಿಡಿಸಿ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ 289 ರನ್ ಮುನ್ನಡೆ ಪಡೆಯಿತು.

ಇದನ್ನೂ ಓದಿ: 10 ವರ್ಷಗಳ ಬಳಿಕ ರಾಂಚಿ ಜಲಪಾತದಲ್ಲಿ ಧೋನಿ ಮಸ್ತಿ

click me!