10 ವರ್ಷಗಳ ಬಳಿಕ ರಾಂಚಿ ಜಲಪಾತದಲ್ಲಿ ಧೋನಿ ಮಸ್ತಿ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 12, Aug 2018, 3:54 PM IST
After 10 years ms dhoni visited ranchi falls
Highlights

ಇಂಗ್ಲೆಂಡ್ ವಿರುದ್ಧದ ನಿಗಧಿತ ಓವರ್ ಟೂರ್ನಿ ಬಳಿಕ ತವರಿಗೆ ವಾಪಾಸ್ಸಾದ ಎಂ ಎಸ್ ಧೋನಿ ಸದ್ಯ ವಿಶ್ರಾಂತಿಯಲ್ಲಿದ್ದಾರೆ.  ಧೋನಿ ಸಿಕ್ಕ ಸಮಯದಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಇದೀಗ ಧೋನಿ ತಮ್ಮ ಹಳೆ  ನೆನಪನ್ನ ಮರುಕಳಿಸುವಂತೆ ಮಾಡಿದ್ದಾರೆ.

ರಾಂಚಿ(ಆ.12): ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಸದ್ಯ ಇಂಗ್ಲೆಂಡ್ ನೆಲದಲ್ಲಿ ಇಂಗ್ಲೀಷ್ ಬೌಲರ್‌ಗಳನ್ನ ಎದುರಿಸಲು ಪರದಾಡುತ್ತಿದೆ. ಇತ್ತ ಟೀಂ ಇಂಡಿಯಾ ಕ್ರಿಕೆಟಿಗ  ಎಂ ಎಸ್ ಧೋನಿ ಸಮ್ಮ ವಿಶ್ರಾಂತಿ ಸಮಯವನ್ನ ಸಖತ್ ಎಂಜಾಯ್ ಮಾಡುತ್ತಿದ್ದಾರೆ.

ಹುಟ್ಟೂರು ರಾಂಚಿಯಲ್ಲಿರುವ ಜಲಪಾತಗಳಿಗೆ ತೆರಳಿದ ಧೋನಿ, ಧುಮ್ಮಿಕ್ಕುವ ನೀರಿನಲ್ಲಿ ಆಟವಾಡಿದ್ದಾರೆ. ಬಳಿಕ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಅಪ್‌ಲೋಡ್ ಮಾಡಿದ್ದಾರೆ.

 

 

ಬಾಲ್ಯದ ದಿನಗಳಲ್ಲಿ ರಾಂಚಿಯಲ್ಲಿರುವ ಪ್ರಖ್ಯಾತ 3 ಜಲಪಾತಗಳಲ್ಲಿ ಕಾಲ ಕಳೆದಿದ್ದೇನೆ. ಇದೀಗ 10 ವರ್ಷಗಳ ಬಳಿಕ ಮತ್ತೆ ಜಲಾಪತಕ್ಕೆ ಭೇಟಿ ನೀಡಿರೋದು ಹಳೆ ನೆನಪುಗಳನ್ನ ಮರುಕಳಿಸುವಂತಎ ಮಾಡಿದೆ ಎಂದು ಧೋನಿ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

loader