ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಪಂಜಾಬ್‌ನ ಸ್ಫೋಟಕ ಆಟಗಾರರ ಭಯವಿದ್ದು, ತನ್ನ ಭದ್ರಕೋಟೆ ಚೆಪಾಕ್ ಕ್ರೀಡಾಂಗಣದಲ್ಲಿ ಮೇಲುಗೈ ಸಾಧಿಸಲು ಎದುರು ನೋಡುತ್ತಿದೆ. ಪಂಜಾಬ್ 9 ಪಂದ್ಯಗಳಲ್ಲಿ ಕೇವಲ 3ರಲ್ಲಿ ಗೆದ್ದಿದ್ದು, ಈ ಪಂದ್ಯದಲ್ಲಿ ಸೋತರೆ, ಪ್ಲೇ-ಆಫ್ ಹಾದಿ ಮತ್ತಷ್ಟು ಕಠಿಣಗೊಳ್ಳಲಿದೆ.
ಚೆನ್ನೈ(ಮೇ.01): ಅಸ್ಥಿರ ಆಟದ ಮೂಲಕ ಅಚ್ಚರಿ ಮೂಡಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ಬುಧವಾರ, ಅಸ್ಥಿರ ಆಟಕ್ಕೆ ಹೆಸರುವಾಸಿಯಾಗಿರುವ ಮತ್ತೊಂದು ತಂಡ ಪಂಜಾಬ್ ಕಿಂಗ್ಸ್ ವಿರುದ್ಧ ಸೆಣಸಲಿದೆ. ಚೆನ್ನೈ 9 ಪಂದ್ಯಗಳಿಂದ 10 ಅಂಕ ಗಳಿಸಿದ್ದು, ಪ್ಲೇ-ಆಫ್ ದೃಷ್ಟಿಯಿಂದ ಈ ಪಂದ್ಯ ಬಹಳ ಮಹತ್ವದೆನಿಸಿದೆ.
ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಪಂಜಾಬ್‌ನ ಸ್ಫೋಟಕ ಆಟಗಾರರ ಭಯವಿದ್ದು, ತನ್ನ ಭದ್ರಕೋಟೆ ಚೆಪಾಕ್ ಕ್ರೀಡಾಂಗಣದಲ್ಲಿ ಮೇಲುಗೈ ಸಾಧಿಸಲು ಎದುರು ನೋಡುತ್ತಿದೆ. ಪಂಜಾಬ್ 9 ಪಂದ್ಯಗಳಲ್ಲಿ ಕೇವಲ 3ರಲ್ಲಿ ಗೆದ್ದಿದ್ದು, ಈ ಪಂದ್ಯದಲ್ಲಿ ಸೋತರೆ, ಪ್ಲೇ-ಆಫ್ ಹಾದಿ ಮತ್ತಷ್ಟು ಕಠಿಣಗೊಳ್ಳಲಿದೆ.
undefined
ಟಿ20 ವಿಶ್ವಕಪ್ ಟೂರ್ನಿಗೆ ಆಸ್ಟ್ರೇಲಿಯಾ ತಂಡ ಪ್ರಕಟ; ವಿಶ್ವಕಪ್ ಮೇಲೆ ಕಾಲಿಟ್ಟವನಿಗೆ ನಾಯಕ ಪಟ್ಟ..!
ಇಂದಿನ ಪಂದ್ಯಕ್ಕಾದರೂ ಶಿಖರ್ ಧವನ್ ಪಂಜಾಬ್ ಕಿಂಗ್ಸ್ ತಂಡ ಕೂಡಿಕೊಳ್ಳಲಿದ್ದಾರೆಯೇ ಅಥವಾ ಇಲ್ಲವೇ ಎನ್ನುವುದಕ್ಕೆ ಇನ್ನೂ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ. ಸ್ಟಾರ್ ಆಲ್ರೌಂಡರ್ ಸಿಕಂದರ್ ರಾಜಾ ನ್ಯಾಷನಲ್ ಡ್ಯೂಟಿಗೋಸ್ಕರ ಪಂಜಾಬ್ ಕಿಂಗ್ಸ್ ತಂಡ ತೊರೆದು ಜಿಂಬಾಬ್ವೆ ತಂಡ ಕೂಡಿಕೊಂಡಿದ್ದಾರೆ.
ಹರ್ಷಲ್ ಪಟೇಲ್ ಮೇಲೆ ಕಣ್ಣು: ಪಂಜಾಬ್ ಕಿಂಗ್ಸ್ ತಂಡದ ಡೆತ್ ಓವರ್ ಸ್ಪೆಷಲಿಸ್ಟ್ ಹರ್ಷಲ್ ಪಟೇಲ್‌ಗೆ ಚೆನ್ನೈನ ಚೆಪಾಕ್ ಮೈದಾನ ಒಂದು ರೀತಿ ಫೇವರೇಟ್ ಸ್ಟೇಡಿಯಂ ಎನಿಸಿಕೊಂಡಿದೆ. ಹರ್ಷಲ್ ಪಟೇಲ್ ಈ ಮೈದಾನದಲ್ಲಿ ಒಟ್ಟು 4 ಪಂದ್ಯಗಳನ್ನಾಡಿ ಒಮ್ಮೆ 5 ವಿಕೆಟ್ ಸೇರಿದಂತೆ 11 ವಿಕೆಟ್ ಕಬಳಿಸಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಹರ್ಷಲ್ ಪಟೇಲ್ ಮೇಲೆ ಎಲ್ಲರೂ ಕಣ್ಣಿಟ್ಟಿದ್ದಾರೆ.
IPL 2024 ಮುಂಬೈ ಇಂಡಿಯನ್ಸ್ ಪ್ಲೇ-ಆಫ್ ಕನಸು ಭಗ್ನ?
ಸಂಭವನೀಯ ಆಟಗಾರರ ಪಟ್ಟಿ ಹೀಗಿದೆ:
ಪಂಜಾಬ್ ಕಿಂಗ್ಸ್:
ಶಿಖರ್ ಧವನ್/ಪ್ರಭ್‌ಸಿಮ್ರನ್ ಸಿಂಗ್, ಜಾನಿ ಜಾರ್‌ಸ್ಟೋವ್, ರಿಲೇ ರೂಸ್ಸೌ, ಶಶಾಂಕ್ ಸಿಂಗ್, ಸ್ಯಾಮ್ ಕರ್ರನ್, ಜಿತೇಶ್ ಶರ್ಮಾ, ಅಶುತೋಷ್ ಶರ್ಮಾ, ಹರ್ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಕಗಿಸೋ ರಬಾಡ, ಆರ್ಶದೀಪ್ ಸಿಂಗ್.
ಚೆನ್ನೈ ಸೂಪರ್ ಕಿಂಗ್ಸ್:
ಋತುರಾಜ್ ಗಾಯಕ್ವಾಡ್, ಅಜಿಂಕ್ಯ ರಹಾನೆ, ಡೇರಲ್ ಮಿಚೆಲ್, ಶಿವಂ ದುಬೆ, ರವೀಂದ್ರ ಜಡೇಜಾ, ಎಂ ಎಸ್ ಧೋನಿ, ಮೋಯಿನ್ ಅಲಿ, ದೀಪಕ್ ಚಹರ್, ತುಷಾರ್ ದೇಶಪಾಂಡೆ, ಮಥೀಶ್ ಪತಿರಣ, ಮುಸ್ತಾಫಿಜುರ್ ರೆಹಮಾನ್.
ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ