2019ರ ಐಪಿಎಲ್ ಆಯೋಜಿಸಲು ತುದಿಗಾಲಲ್ಲಿ ನಿಂತಿದೆ ಸೌತ್ಆಫ್ರಿಕಾ

By Suvarna NewsFirst Published Aug 1, 2018, 1:55 PM IST
Highlights

2019ರ ಲೋಕಸಭಾ ಚುನಾವಣೆಯಿಂದ ಐಪಿಎಲ್ ಟೂರ್ನಿ ಬೇರೆಡೆಗೆ ಸ್ಥಳಾಂತರಿಸಲು ಬಿಸಿಸಿಐ ಚಿಂತನೆ ನಡೆಸುತ್ತಿದೆ. ಇದೀಗ ಸೌತ್ಆಫ್ರಿಕಾ ಕ್ರಿಕೆಟ್ ಮಂಡಳಿ 12ನೇ ಆವೃತ್ತಿ ಐಪಿಎಲ್ ಆಯೋಜಿಸಲು ತುದಿಗಾಲಲ್ಲಿ ನಿಂತಿದೆ. ಹಾಗಾದರೆ ಈ ಬಾರಿಯ ಐಪಿಎಲ್ ಸೌತ್ಆಫ್ರಿಕಾದಲ್ಲಿ ನಡೆಯುತ್ತಾ? ಇಲ್ಲಿದೆ ವಿವರ.

ಕೇಪ್‌ಟೌನ್ (ಆ.01): ಟೀಂ ಇಂಡಿಯಾ ಟೆಸ್ಟ್ ಸರಣಿಗಾಗಿ ಸದ್ಯ ಇಂಗ್ಲೆಂಡ್‌ನಲ್ಲಿದೆ. ಇತ್ತ ಬಿಸಿಸಿಐ ಮುಂಬರುವ ಐಪಿಎಲ್ ಟೂರ್ನಿಯ ತಯಾರಿ ಆರಂಭಿಸಿದೆ. ಆದರೆ 2019ರಲ್ಲಿ ಲೋಕಸಭಾ ಚುನಾವಣೆ ಇರೋದರಿಂದ ಐಪಿಎಲ್ ಆಯೋಜನೆ ಕಗ್ಗಂಟಾಗಿದೆ.

ಲೋಕಸಭಾ ಚುನಾವಣೆಯಿಂದಾಗಿ ಮುಂಬರುವ ಐಪಿಎಲ್ ಟೂರ್ನಿಯನ್ನ ಬೇರೆ ದೇಶಕ್ಕೆ ಸ್ಥಳಾಂತರಿಸಲು ಬಿಸಿಸಿಐ ಚಿಂತನೆ ನಡೆಸಿತ್ತು. 2014ರಲ್ಲಿ ಹಾಗೂ 2009ರ ಲೋಕಸಭಾ ಚುನಾವಣೆ ವೇಳೆ ಬಿಸಿಸಿಐ ಇದೇ ನಿಯಮ ಅನುಸರಿಸಿತ್ತು.

2009ರಲ್ಲಿ ಐಪಿಎಲ್ ಟೂರ್ನಿಯನ್ನ ಸಂಪೂರ್ಣವಾಗಿ ಸೌತ್ಆಫ್ರಿಕಾದಲ್ಲಿ ಆಯೋಜಿಸಲಾಗಿತ್ತು. ಇದೀಗ ಸೌತ್ಆಫ್ರಿಕಾ 2019ರ ಟೂರ್ನಿಯನ್ನ ಆಯೋಜಿಸಲು ತುದಿಗಾಲಲ್ಲಿ ನಿಂತಿದೆ. ಬಿಸಿಸಿಐ ಐಪಿಎಲ್ ಆಯೋಜನೆ ಪ್ರಸ್ತಾವಿಟ್ಟರೆ ಖಂಡಿತವಾಗಿ ಸೌತ್ಆಫ್ರಿಕಾ ಒಪ್ಪಿಕೊಳ್ಳಲಿದೆ ಎಂದು ಸೌತ್ಆಫ್ರಿಕಾ ಕ್ರಿಕೆಟ್ ಮಂಡಳಿ ಮುಖ್ಯ ಕಾರ್ಯದರ್ಶಿ ತಬಾಂಗ್ ಮೊರೊ ಹೇಳಿದ್ದಾರೆ.

2014ರ ಲೋಕಸಭಾ ಚುನಾವಣೆ ವೇಳೆ ಆರಂಭಿಕ ಐಪಿಎಲ್ ಪಂದ್ಯಗಳನ್ನ ದುಬೈನಲ್ಲಿ ಆಯೋಜಿಸಲಾಗಿತ್ತು. ಆದರೆ ಈ ಬಾರಿ ಬಿಸಿಸಿಐ ಇನ್ನು ಅಂತಿಮ ನಿರ್ಧಾರ ಕೈಗೊಂಡಿಲ್ಲ. ಲೋಕಸಭಾ ಚುನಾವಣೆ ದಿನಾಂಕ ಪ್ರಕಟವಾದ ಬಳಿಕ ನಿರ್ಧಾರ ಕೈಗೊಳ್ಳಲು ಬಿಸಿಸಿಐ ನಿರ್ಧರಿಸಿದೆ.

click me!