ಪಂಜಾಬ್ ಕಿಂಗ್ಸ್ ತಂಡ ಚೆನ್ನೈ ವಿರುದ್ಧ ಸತತ 6ನೇ ಗೆಲುವಿನ ಕಾತರದಲ್ಲಿದ್ದರೆ, ಚೆನ್ನೈ ತಂಡ ಗೆಲುವಿನ ಹಳಿಗೆ ಮರಳುವುದರ ಜೊತೆಗೆ ಪ್ಲೇ-ಆಫ್‌ರೇಸ್‌ನಲ್ಲಿ ಉಳಿದುಕೊಳ್ಳುವ ನಿರೀಕ್ಷೆಯಲ್ಲಿದೆ.
ಧರ್ಮಶಾಲಾ(ಮೇ.05): 17ನೇ ಆವೃತ್ತಿ ಐಪಿಎಲ್‌ನಲ್ಲಿ ಅಸ್ಥಿರ ಆಟದಿಂದಾಗಿ ಮಾಡು ಇಲ್ಲವೇ ಮಡಿ ಸ್ಥಿತಿಗೆ ತಲುಪಿರುವ 2 ತಂಡಗಳಾದ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಭಾನುವಾರ ಪರಸ್ಪರ ಮುಖಾಮುಖಿಯಾಗಲಿವೆ. ಪಂಜಾಬ್ ಕಿಂಗ್ಸ್ ತಂಡ ಚೆನ್ನೈ ವಿರುದ್ಧ ಸತತ 6ನೇ ಗೆಲುವಿನ ಕಾತರದಲ್ಲಿದ್ದರೆ, ಚೆನ್ನೈ ತಂಡ ಗೆಲುವಿನ ಹಳಿಗೆ ಮರಳುವುದರ ಜೊತೆಗೆ ಪ್ಲೇ-ಆಫ್‌ರೇಸ್‌ನಲ್ಲಿ ಉಳಿದುಕೊಳ್ಳುವ ನಿರೀಕ್ಷೆಯಲ್ಲಿದೆ.
ಋತುರಾಜ್ ಗಾಯಕ್ವಾಡ್ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಆಡಿರುವ 10 ಪಂದ್ಯಗಳಲ್ಲಿ ತಲಾ 5 ಗೆಲುವು, ಸೋಲು ಅನುಭವಿಸಿದೆ. ಅತ್ತ ಪಂಜಾಬ್ 10ರಲ್ಲಿ 4 ಪಂದ್ಯ ಗೆದ್ದಿದ್ದು, 6ರಲ್ಲಿ ಸೋತಿದೆ. ಚೆನ್ನೈ ಇನ್ನುಳಿದ 4 ಪಂದ್ಯ ಗೆದ್ದರೆ ಪ್ಲೇ-ಆಫ್‌ಗೇರಲಿದ್ದು, ಒಂದು ಪಂದ್ಯ ಸೋತರೂ ನಾಕೌಟ್‌ಗೇರಲು ಇತರ ತಂಡಗಳ ಫಲಿತಾಂಶವನ್ನು ಅವಲಂಬಿಸಬೇಕಾಗುತ್ತದೆ.
ಗುಜರಾತ್ ಮತ್ತೊಮ್ಮೆ ಮಣಿಸಿ ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಜಿಗಿದ ಆರ್‌ಸಿಬಿ..!
ಮತ್ತೊಂದೆಡೆ ಪಂಜಾಬ್‌ಗೆ ಅಳಿವು ಉಳಿವಿನ ಪ್ರಶ್ನೆ ಎದುರಾಗಿದೆ. ಚೆನ್ನೈ ವಿರುದ್ಧ ಸೇರಿದಂತೆ ಉಳಿದೆಲ್ಲಾ 4 ಪಂದ್ಯ ಗೆದ್ದರೂ ಪ್ಲೇ-ಆಫ್‌ಗೇರಬೇಕಿದ್ದರೆ ಇತರ ತಂಡಗಳನ್ನು ನೆಟ್ ರನ್‌ರೇಟ್‌ನಲ್ಲಿ ಹಿಂದಿಕ್ಕಬೇಕಿದೆ. ಸತತ 2 ಗೆಲುವು ತಂಡದ ಆತ್ಮವಿಶ್ವಾಸ ಹೆಚ್ಚಿಸಿದ್ದು, ಚೆನ್ನೈ ವಿರುದ್ಧದ ಗೆಲುವಿನ ಓಟ ಮುಂದುವರಿಸುವ ಕಾತರದಲ್ಲಿದೆ.
ಒಟ್ಟು ಮುಖಾಮುಖಿ: 29
ಚೆನ್ನೈ: 15
ಪಂಜಾಬ್: 14
ಸಂಭವನೀಯ ಆಟಗಾರರ ಪಟ್ಟಿ
ಚೆನ್ನೈ ಸೂಪರ್ ಕಿಂಗ್ಸ್: ಅಜಿಂಕ್ಯ ರಹಾನೆ, ಋತುರಾಜ್ ಗಾಯಕ್ವಾಡ್(ನಾಯಕ), ಡ್ಯಾರಿಲ್ ಮಿಚೆಲ್, ಮೊಯೀನ್ ಅಲಿ, ಶಿವಂ ದುಬೆ, ರವೀಂದ್ರ ಜಡೇಜಾ, ಎಂ ಎಸ್ ಧೋನಿ, ಶಾರ್ದೂಲ್ ಠಾಕೂರ್, ಗ್ಲೀಸನ್, ಮಥೀಶ್ ಪತಿರನ, ತುಷಾರ ದೇಶಪಾಂಡೆ.
ಪಂಜಾಬ್ ಕಿಂಗ್ಸ್: ಜಾನಿ ಬೇರ್‌ಸ್ಟೋವ್, ಸ್ಯಾಮ್ ಕರ್ರನ್(ನಾಯಕ), ರೀಲೆ ರೋಸ್ಸೌ, ಶಶಾಂಕ್ ಸಿಂಗ್, ಜಿತೇಶ್ ಶರ್ಮಾ, ಅಶುತೋಶ್ ಸಿಂಗ್, ಹರ್‌ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಕಗಿಸೋ ರಬಾಡ, ರಾಹುಲ್ ಚಹರ್, ಅರ್ಶ್‌ದೀಪ್ ಸಿಂಗ್.
ಪಂದ್ಯ: ಮಧ್ಯಾಹ್ನ 3.30ಕ್ಕೆ
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ