ಭಾರತದಲ್ಲಿ ಮತ್ತೊಂದು ಚೀನಾ ಸ್ಮಾರ್ಟ್‌ಫೋನ್ ಬಿಡುಗಡೆ-ಶುರುವಾಯ್ತು ಪೈಪೋಟಿ

By Web DeskFirst Published Sep 20, 2018, 5:37 PM IST
Highlights

ಚೀನಾ ಸ್ಮಾರ್ಟ್‌ಫೋನ್‌ಗಳಿಗೆ ಭಾರತದಲ್ಲಿ ಭಾರಿ ಬೇಡಿಕೆ ಇದೆ. ಭಾರತದ ಮೊಬೈಲ್‌ ಮಾರುಕಟ್ಟೆಯಲ್ಲಿ ಚೀನಾ ಮೊಬೈಲ್‌ಗಳು ಗರಿಷ್ಠ ಪಾಲು ಹೊಂದಿದೆ. ಇದೀಗ ಚೀನಾದ ಮತ್ತೊಂದು ಮೊಬೈಲ್ ಕಂಪೆನಿ ಭಾರತಕ್ಕೆ ಕಾಲಿಟ್ಟಿದೆ.

ನವದೆಹಲಿ(ಸೆ.20): ಭಾರತದ ಮೊಬೈಲ್ ಮಾರುಕಟ್ಟೆಯನ್ನ ಚೀನಾ ಕಂಪೆನಿಗಳು ಆಕ್ರಮಿಸಿಕೊಂಡಿದೆ. ಕಡಿಮೆ ಬೆಲೆ, ಆಕರ್ಷಕ ವಿನ್ಯಾಸ, ಗರಿಷ್ಠ ಫೀಚರ್ಸ್‌ನೊಂದಿಗೆ ಚೀನಾ ಮೊಬೈಲ್‌ಗಳು ಇದೀಗ ಚೀನಾಗಿಂತ ಭಾರತದಲ್ಲೇ ಹೆಚ್ಚಾಗಿದೆ.

ರೆಡಿ ಮಿ, ಕ್ಸಿಯೋಮಿ, ಒಪ್ಪೋ ಸೇರಿದಂತೆ ಹಲವು ಚೀನಾ ಬ್ರ್ಯಾಂಡ್ ಮೊಬೈಲ್‌ಗಳು ಇದೀಗ ಜನಸಾಮಾನ್ಯರ ಮೊಬೈಲ್ ಆಗಿ ಭಾರತದಲ್ಲಿ ಬಳಕೆಯಾಗುತ್ತಿದೆ. ಇದೀಗ ಮತ್ತೊಂದು ಚೀನಾ ಮೊಬೈಲ್ ಬಿಡುಗಡೆಯಾಗಿದೆ. ಐವೋಮಿ ಐಪ್ರೋ ಅನ್ನೋ ನೂತನ ಮೊಬೈಲ್ ಭಾರತದ ಮಾರುಕಟ್ಟೆ ಪ್ರವೇಶಿಸಿದೆ.

ಫುಲ್ ವೀವ್ಯೂ ಡಿಸ್‌ಪ್ಲೇ ಹೊಂದಿರುವ ನೂತನ ಐವೂಮಿ ಸ್ಮಾರ್ಟ್ ಫೋನ್  ಬೆಲೆ ಕೇವಲ 3,999 ರೂಪಾಯಿ. ಫ್ಲಿಪ್ ಕಾರ್ಟ್ ಮೂಲಕ ಭಾರತದಲ್ಲಿ ಮಾರಾಟಗೊಳ್ಳುತ್ತಿರುವ ಐವೋಮಿ ಕಡಿಮೆ ಬೆಲೆಗೆ ಗರಿಷ್ಠ ಫೀಚರ್ಸ್ ನೀಡುತ್ತಿದೆ. 

4.95 ಇಂಚಿನ ಸ್ಕ್ರೀನ್, 5 ಮೆಗಾ ಪಿಕ್ಸಲ್ ಫ್ರಂಟ್ ಹಾಗೂ ರೇರ್ ಕ್ಯಾಮಾರ ಜೊತೆಗೆ 1 ಜಿಬಿ ರ‍್ಯಾಂ ಹಾಗೂ 8 ಜಿಬಿ ಇಂಟರ್ನಲ್ ಸ್ಟೋರೇಜ್ ಮೆಮೋರಿ ಸೌಲಭ್ಯ ಹೊಂದಿದೆ. 128 ಜಿಬಿ ವರೆಗೂ ಸ್ಟೋರೇಜ್ ವಿಸ್ತರಿಸುವ ಸೌಲಭ್ಯವಿದೆ.

 

Presenting the all-new iPro by ! Experience remarkable features like 18:9 Full View, shatterproof display, dual 4G, 8 GB-128 GB storage, AR Emoji, facial recognition, strong battery & a lot more all at just Rs. 3999!
Exclusively on : https://t.co/qFnhFs8I8P pic.twitter.com/Wuz5N1Vtbp

— iVOOMi India (@ivoomi_india)

 

2000mAH ಬ್ಯಾಟರಿ, 1.3GHz ಕ್ವಾಡ್ ಕೋರ್ ಮೀಡಿಯಾ ಟೆಕ್ MTK 6737 ಪ್ರೊಸೆಸರ್ ಹೊಂದಿದೆ. ಇದೀಗ ಕಡಿಮೆ ಬೆಲೆಗೆ ಗರಿಷ್ಠ ಫೀಚರ್ಸ್ ನೀಡೋ ಮೂಲಕ ಇತರ ಸ್ಮಾರ್ಟ್‌ಫೋನ್‌ಗಳಿಗೆ ಪೈಪೋಟಿ ನೀಡಲು ಐವೋಮಿ ಸಜ್ಜಾಗಿದೆ.

click me!