ಬಿಸಿಸಿಐ ವಾರ್ನಿಂಗ್: ಐಪಿಎಲ್ ತಂಡಗಳಿಗೆ ಎದುರಾಯ್ತು ಸಂಕಷ್ಟ!

By Web DeskFirst Published Oct 18, 2018, 12:35 PM IST
Highlights

12ನೇ ಆವೃತ್ತಿ ಐಪಿಲ್ ಟೂರ್ನಿಗೆ ಸಿದ್ಧತೆ ಆರಂಭಿಸಿರುವ ತಂಡಗಳಿಗೆ ಇದೀಗ ಬಿಸಿಸಿಐ ಖಡಕ್ ವಾರ್ನಿಂಗ್ ನೀಡಿದೆ. ಬಿಸಿಸಿಐ ಎಚ್ಚರಿಕೆಯಿಂದ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರಿದಂತೆ 8 ತಂಡಗಳಿಗೆ ಇದೀಗ ಸಂಕಷ್ಟ ಎದುರಾಗಿದೆ.

ಮುಂಬೈ(ಅ.18): ಮುಂದಿನ ಐಪಿಎಲ್ ಟೂರ್ನಿಗೆ ಈಗಲೇ ಸಿದ್ಧತೆ ಆರಂಭಿಸಿರುವ ಐಪಿಎಲ್ ತಂಡಗಳಿಗೆ ಬಿಸಿಸಿಐ ಖಡಕ್ ವಾರ್ನಿಂಗ್ ನೀಡಿದೆ. ತಂಡದಿಂದ ಒಪ್ಪಂದಿಂದ ಬಿಡುಗಡೆಗೊಳಿಸಿರುವ ಆಟಗಾರರ ಪಟ್ಟಿಯನ್ನ ಸಲ್ಲಿಸಲು ಬಿಸಿಸಿಐ ಸೂಚಿಸಿತ್ತು. ಇದೀಗ 8 ಫ್ರಾಂಚೈಸಿಗಳಿಗೆ ಅಂತಿಮ ಗಡುವು ನೀಡಿದೆ.

ತಂಡದ ಒಪ್ಪಂದಿಂದ ರಿಲೀಸ್ ಮಾಡಿರುವ ಆಟಗಾರರ ಪಟ್ಟಿಯನ್ನ ನವೆಂಬರ್ 15ರೊಳಗೆ ನೀಡಲು ಬಿಸಿಸಿಐ ಸೂಚಿಸಿದೆ. ಈ ಹಿಂದಿನ ಆವೃತ್ತಿಗಳಲ್ಲಿ ಟೂರ್ನಿ ವೇಳೆ ಆಟಗಾರರನ್ನ ತಂಡಗಳು ರಿಲೀಸ್ ಮಾಡುತ್ತಿತ್ತು. ಇದೀಗ ಆಟಗಾರರ ದೃಷ್ಟಿಯಿಂದ ಬಿಸಿಸಿಐ ಅಂತಿಮ ಗಡವು ನೀಡಿದೆ.

ಕಳೆದ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿದ ಹಲವು ಆಟಾಗರರನ್ನ ಒಪ್ಪಂದಿಂದ ಬಿಡುಗಡೆ ಮಾಡಲು ಫ್ರಾಂಚೈಸಿಗಳು ಮುಂದಾಗಿದೆ. ಡೆಲ್ಲಿ ಡೇರ್‌ಡೆವಿಲ್ಸ್  ತಂಡ ಗೌತಮ್ ಗಂಭೀರ್ ಕೈಬಿಡುವ ಸಾಧ್ಯತೆ ಇದೆ. ಕಳೆದ ಆವೃತ್ತಿಯಲ್ಲಿ ಗಂಭೀರ್ ಟೂರ್ನಿ ನಡುವೆ ನಾಯಕತ್ವದಿಂದ ಕೆಳಗಿಳಿದಿದ್ದರು. 

11 ಕೋಟಿ ರೂಪಾಯಿಗೆ ಸೈನ್‌ರೈಸರ್ಸ್ ಹೈದರಾಬಾದ್ ಪಾಲಾಗಿದ್ದ ಕನ್ನಡಿಗ ಮನೀಶ್ ಪಾಂಡೆ ಬಹುತೇಕ ಎಲ್ಲಾ ಪಂದ್ಯದಲ್ಲಿ ಕಣಕ್ಕಿಳಿದಿದ್ದರು. ಆದರೆ ಪಾಂಡೆ ಗಳಿಸಿದ್ದು ಕೇವಲ 284 ರನ್. ಹೀಗಾಗಿ ಪಾಂಡೆ ಕೂಡ ರಿಲೀಸ್ ಆಗೋ ಸಾಧ್ಯತೆ ಇದೆ. ಇಷ್ಟೇ ಅಲ್ಲ ನಿಷೇಧದ  ಶಿಕ್ಷೆ ಅನುಭವಿಸುತ್ತಿರು ಆಸಿಸ್ ಕ್ರಿಕೆಟಿಗ, ಸನ್‌ರೈಸರ್ಸ್ ಮಾಜಿ ನಾಯಕ ಡೇವಿಡ್ ವಾರ್ನರ್ ಆಯ್ಕೆ ಮಾಡಿಕೊಳ್ಳೋ ಲೆಕ್ಕಾಚಾರದಲ್ಲಿದೆ. ಇಷ್ಟೇ ಅಲ್ಲ ಹಲವು ಕ್ರಿಕೆಟಿಗರನ್ನ ಕೈಬಿಡಲು ಫ್ರಾಂಚೈಸಿ ಮುಂದಾಗಿದೆ.

click me!