ಚಂದ್ರಯಾನ 3: ಇಂದಿನ ಪ್ರಕ್ರಿಯೆ ಏನು? ಮುಂದೆ ಯಾರ ಕೆಲಸ ಏನೇನು?

By Kannadaprabha News  |  First Published Aug 18, 2023, 9:18 AM IST

ಕಳೆದ 34 ದಿನಗಳಿಂದ ವಿಕ್ರಂ ಲ್ಯಾಂಡರ್‌ ಮತ್ತು ಪ್ರಗ್ಯಾನ್‌ ನೌಕೆಯನ್ನು ಭೂಮಿ ಮತ್ತು ಚಂದ್ರನ ಕಕ್ಷೆಯಲ್ಲಿ ಹೊತ್ತೊಯ್ಯುತ್ತಿದ್ದ ಪ್ರೊಪಲ್ಷನ್‌ ಮಾಡ್ಯೂಲ್‌ ಗುರುವಾರ ಪ್ರತ್ಯೇಕಗೊಂಡಿದೆ. ಇದರೊಂದಿಗೆ ಚಂದ್ರಯಾನ-3 ಯೋಜನೆಯಲ್ಲಿ ಮತ್ತೊಂದು ಪ್ರಕ್ರಿಯೆ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.


ಬೆಂಗಳೂರು: ಕಳೆದ 34 ದಿನಗಳಿಂದ ವಿಕ್ರಂ ಲ್ಯಾಂಡರ್‌ ಮತ್ತು ಪ್ರಗ್ಯಾನ್‌ ನೌಕೆಯನ್ನು ಭೂಮಿ ಮತ್ತು ಚಂದ್ರನ ಕಕ್ಷೆಯಲ್ಲಿ ಹೊತ್ತೊಯ್ಯುತ್ತಿದ್ದ ಪ್ರೊಪಲ್ಷನ್‌ ಮಾಡ್ಯೂಲ್‌ ಗುರುವಾರ ಪ್ರತ್ಯೇಕಗೊಂಡಿದೆ. ಇದರೊಂದಿಗೆ ಚಂದ್ರಯಾನ-3 ಯೋಜನೆಯಲ್ಲಿ ಮತ್ತೊಂದು ಪ್ರಕ್ರಿಯೆ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.

ಗುರುವಾರದ ಪ್ರಕ್ರಿಯೆ ಬಳಿಕ ಪ್ರೊಪ್ಷಲನ್‌ ಮಾಡ್ಯೂಲ್‌ ಚಂದ್ರನ ಕಕ್ಷೆ ಸುತ್ತುತ್ತಲೇ ಅಲ್ಲಿಂದಲೇ ಕೆಲ ಸಂಶೋಧನೆಗಳನ್ನು ನಡೆಸಿ ಭೂಮಿಗೆ ಮಾಹಿತಿ ರವಾನಿಸಲಿದೆ. ಮತ್ತೊಂದೆಡೆ ಲ್ಯಾಂಡರ್‌ ಅನ್ನು ಇಸ್ರೋ ವಿಜ್ಞಾನಿಗಳು ಶುಕ್ರವಾರ ಡೀಬೂಸ್ಟ್‌ (ವೇಗವನ್ನು ಕಡಿಮೆ ಮಾಡುವುದು) ಮಾಡುವ ಅದನ್ನು ಚಂದ್ರನ ಇನ್ನಷ್ಟುಹತ್ತಿರದ ಕಕ್ಷೆಗೆ ತರುವ ಪ್ರಕ್ರಿಯೆ ನಡೆಸಲಿದ್ದಾರೆ. ಅಂತಿಮವಾಗಿ ಆ.23ರಂದು ಸಂಜೆ ಚಂದ್ರನ ಮೇಲೆ ಲ್ಯಾಂಡರ್‌ ಅನ್ನು ಸಾಫ್‌್ಟಲ್ಯಾಂಡಿಂಗ್‌ ಮಾಡಿಸುವ ಪ್ರಯೋಗ ನಡೆಸಲಿದ್ದಾರೆ.

Latest Videos

undefined

ಭಾರತದ ಸೂರ್ಯ ಶಿಖಾರಿ.. 'ಆದಿತ್ಯ' ಮೊದಲ ಚಿತ್ರಗಳನ್ನು ಬಿಡುಗಡೆ ಮಾಡಿದ ಇಸ್ರೋ!

ಈ ಕುರಿತು ಗುರುವಾರ ಟ್ವೀಟರ್‌ನಲ್ಲಿ ಮಾಹಿತಿ ನೀಡಿರುವ ಇಸ್ರೋ, ‘ಥ್ಯಾಂಕ್ಸ್‌ ಫಾರ್‌ ದ ರೈಡ್‌, ಮೇಟ್‌! ಸೆಡ್‌ ದ ಲ್ಯಾಂಡರ್‌ (ಪ್ರಯಾಣಕ್ಕಾಗಿ ಧನ್ಯವಾದ, ಸಂಗಾತಿ! ಎಂದಿದೆ ಲ್ಯಾಂಡರ್‌). ಲ್ಯಾಂಡರ್‌ ಮಾಡ್ಯೂಲ್‌, ಪ್ರೊಪಲ್ಷನ್‌ ಮಾಡ್ಯೂಲ್‌ನಿಂದ ಪ್ರತ್ಯೇಕಗೊಂಡಿದೆ. ಶುಕ್ರವಾರ ಸಂಜೆ 4 ಗಂಟೆಗೆ ಲ್ಯಾಂಡರ್‌ ಮಾಡ್ಯೂಲ್‌ ಇನ್ನಷ್ಟುಕೆಳ ಹಂತದ ಕಕ್ಷೆಗೆ ತೆರಳಲಿದೆ’ ಎಂದು ಹೇಳಿದೆ.

ಮುಂದೆ ಯಾರ ಕೆಲಸ ಏನೇನು?

ಪ್ರೊಪಲ್ಷನ್‌ ಮಾಡ್ಯೂಲ್‌ ಮುಂದಿನ ಕೆಲ ವರ್ಷಗಳ ಕಾಲ ಚಂದ್ರನ ಕಕ್ಷೆಯಲ್ಲೇ ಸುತ್ತಲಿದೆ. ಹೀಗೆ ಸುತ್ತುವ ವೇಳೆ ಅದು, ಭೂಮಿಯ ವಾತಾವರಣ ಮತ್ತು ಭೂಮಿಯ ಮೇಲಿನ ಮೋಡಗಳಲ್ಲಿ ಪ್ರತಿಫಲನಗೊಳ್ಳುವ ಬೆಳಕಿನ ಕಿರಣಗಳನ್ನು ಅಧ್ಯಯನ ಮಾಡುವ ಮೂಲಕ ಮಾನವ ವಾಸಕ್ಕೆ ಯೋಗ್ಯವಿರಬಹುದಾದ ಸಣ್ಣ ಗ್ರಹಗಳ ಪತ್ತೆ ಕೆಲಸವನ್ನು ಮಾಡಲಿದೆ.

ಚಂದ್ರಯಾನದ ಬೆನ್ನಲ್ಲೇ ಸೂರ್ಯನ ಅಧ್ಯಯನಕ್ಕೆ ಇಸ್ರೋ ಸಜ್ಜು: ಶ್ರೀಹರಿಕೋಟಕ್ಕೆ ಬಂದ ಆದಿತ್ಯ-ಎಲ್‌1 ಉಪಗ್ರಹ

ಲ್ಯಾಂಡರ್‌ ಮತ್ತು ಪ್ರಗ್ಯಾನ್‌

ವಿಕ್ರಂ ಲ್ಯಾಂಡರ್‌ನ ಒಳಗೆ ಪ್ರಗ್ಯಾನ್‌ ರೋವರ್‌ ಇದೆ. ಲ್ಯಾಂಡರ್‌ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದ ಬಳಿಕ ಅದರೊಳಗಿಂದ ರೋವರ್‌ ಹೊರಗೆ ಬಂದು ಚಂದ್ರನ ಮೇಲೆ ಪ್ರಯೋಗಗಳನ್ನು ಕೈಗೊಳ್ಳಲಿದೆ. ದಕ್ಷಿಣದ ಧ್ರುವದಲ್ಲಿ ನೀರು, ಚಂದ್ರನ ಮಣ್ಣಿನ ರಾಸಾಯನಿಕಗಳ ಕುರಿತು ಅದು ಸಂಶೋಧನೆ ನಡೆಸಲಿದೆ. ಪ್ರಗ್ಯಾನ್‌ನ ಜೀವಿತಾವಧಿ ಒಂದು ಚಂದ್ರನ ದಿನ. ಅಂದರೆ 14 ದಿನಗಳು ಮಾತ್ರ.

ಇಂದಿನ ಪ್ರಕ್ರಿಯೆ ಏನು?

ಇಂದು ಸಂಜೆ 4 ಗಂಟೆಗೆ ಲ್ಯಾಂಡರ್‌ನ ಚಂದ್ರನ 100 ಕಿ.ಮೀ ವ್ಯಾಪ್ತಿಯ ಕಕ್ಷೆಯಲ್ಲಿ ಕೂರಿಸಲಾಗುವುದು. ಬಳಿಕ ಆ.23ರಂದು ಲ್ಯಾಂಡರ್‌ನ ಅತ್ಯಂತ ನಿಧಾನವಾಗಿ ಚಂದ್ರನ ಮೇಲೆ ಇಳಿಸುವ ಪ್ರಕ್ರಿಯೆ ಆರಂಭಿಸಲಾಗುವುದು.

click me!