Before Marriage: ಮದುವೆ ಮುನ್ನ ಮಾಡಬೇಕಾದ ಆ ಎಂಟು ಕೆಲಸಗಳು!

By Suvarna NewsFirst Published Jan 14, 2022, 3:46 PM IST
Highlights

ಮದುವೆಗೆ ಮುನ್ನ ಸಂಗಾತಿ ಹಾಗಿರಬೇಕು, ಹೀಗಿರಬೇಕು ಎಂದು ಕನಸು ಕಾಣುವ ಬದಲು ಈ ಕೆಲವು ಕೆಲಸಗಳನ್ನು ಈಡೇರಿಸಿಕೊಳ್ಳಿ. ಆಗ ಸಂಗಾತಿ ಆಯ್ಕೆಯೂ ಸುಲಭವಾಗುತ್ತದೆ.

ಹುಡುಗಿಯಾಗಿರಲಿ, ಹುಡುಗನಾಗಿರಲಿ, ಮದುವೆ(Marriage)ಯಾದ ಬಳಿಕ ಬದುಕು ಸಾಕಷ್ಟು ಬದಲಾಗುತ್ತದೆ. ಈಗಾಗಲೇ ಮದುವೆಯಾಗಿರುವವರಿಗೆ ಇದು ಅನುಭವಕ್ಕೆ ಬಂದಿರುತ್ತದೆ. ಅನೇಕರಿಗೆ ಮದುವೆ ಕೇವಲ ಕಿರಿಕಿರಿ(Irritation), ನೋವನ್ನೇ ಕೊಟ್ಟಿರಲೂಬಹುದು. ಅದು ಸಂಗಾತಿ(Partner)ಯ ಮೇಲೆ ಅವಲಂಬನೆಯಾಗಿರುತ್ತದೆ. ಹೀಗಾಗಿ, ಮದುವೆಯ ಕುರಿತು, ಆಯ್ಕೆ ಮಾಡಿಕೊಳ್ಳುವ ಸಂಗಾತಿಯ ಕುರಿತು ಎಚ್ಚರಿಕೆ ಅಗತ್ಯ.

ನಮಗೆ ಹೊಂದುವ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವುದು ಸುಲಭವಲ್ಲ. ಆದರೆ, ಮದುವೆಗೆ ಮುನ್ನ ಕೆಲವು ಕಾರ್ಯಗಳನ್ನು ತಪ್ಪದೆ ಮಾಡಿಕೊಂಡಿದ್ದರೆ ಮುಂದಿನ ಜೀವನ ಸುಗಮವಾಗುತ್ತದೆ. ಹಾಗಿದ್ದರೆ ಅವು ಏನು?

ಸಂಬಂಧ (Relationship)ದಲ್ಲಿರಿ!

ಅಚ್ಚರಿ ಪಡುವ ಅಗತ್ಯವಿಲ್ಲ. ಮದುವೆಗೆ ಮುನ್ನ, ಓದು ಮುಗಿದ ಬಳಿಕ ಯಾರೊಂದಿಗಾದರೂ ಸಂಬಂಧದಲ್ಲಿರುವುದು ಮುಂದಿನ ದೃಷ್ಟಿಯಿಂದ ಕ್ಷೇಮ. ಏಕೆಂದರೆ, ವ್ಯಕ್ತಿ(Person)ಯನ್ನು ಅಳೆಯುವುದು ಸುಲಭವಾಗುತ್ತದೆ. ಯಾರು ನಮಗೆ ಸೂಕ್ತ, ನಮ್ಮ ವ್ಯಕ್ತಿತ್ವಕ್ಕೆ ಎಂಥವರು ಬೇಕೆಂಬ ಅಂದಾಜು ಸಿಗುವುದೇ ಆಗ. ಸಂಬಂಧ ಎಂದ ಮಾತ್ರಕ್ಕೆ ಅವರೊಂದಿಗೆ ಲಿವಿಂಗ್‌ (Living)ನಲ್ಲಿರಿ ಎಂದಲ್ಲ. ಅವರೊಂದಿಗೆ ಸುತ್ತಾಡಿ, ಸ್ವಲ್ಪ ಸಮಯ ಕಳೆಯುವುದರಿಂದ ಸಂಬಂಧದ ಆಳ-ಅಗಲಗಳನ್ನು ಅರಿಯಬಹುದು.

ಒಬ್ಬರೇ (Alone) ಅಥವಾ ರೂಮ್‌ ಮೇಟ್‌ (Roommate) ಜತೆ ಇರಿ

ಕೆಲವು ದಿನಗಳ ಕಾಲ ಒಬ್ಬರೇ ಇರುವುದನ್ನು ರೂಢಿಸಿಕೊಳ್ಳಿ. ಕೆಲಸದ ಪ್ರಯುಕ್ತ ಬೇರೆ ದೇಶ, ರಾಜ್ಯಗಳಿಗೆ ಹೋಗುವ ಅವಕಾಶ ಸಿಕ್ಕರೆ ಮಿಸ್‌ ಮಾಡಿಕೊಳ್ಳಬೇಡಿ. ಅಲ್ಲಿ ಇನ್ನಿತರರೊಂದಿಗೆ ಸೇರಿ ರೂಮ್‌ ಮಾಡಿ, ಅವರೊಂದಿಗೆ ಸಮಯ ಕಳೆಯಿರಿ. ಮನೆಯ ಕಂಫರ್ಟ್‌ ವಾತಾವರಣದಿಂದ ದೂರವಿದ್ದಾಗ ಸಾಕಷ್ಟು ಪಾಠ ಕಲಿಯಬಹುದು. ಆರ್ಥಿಕವಾಗಿ ಹಾಗೂ ಭಾವನಾತ್ಮಕವಾಗಿ ಗಟ್ಟಿಯಾಗಲು ಸಾಧ್ಯವಾಗುತ್ತದೆ.

ಆರ್ಥಿಕ ಸ್ವಾತಂತ್ರ್ಯ (Financial Independency)

ಮದುವೆಗೆ ಮುನ್ನವೇ ಹಣಕಾಸು ಸದೃಢತೆ ಹೊಂದಬೇಕಾದುದು ಅಗತ್ಯ. ಪ್ರತಿಯೊಬ್ಬರೂ ಆರ್ಥಿಕ ಸ್ವಾತಂತ್ರ್ಯ ಹೊಂದಿರಬೇಕು. ಇದರಿಂದ ಆತ್ಮವಿಶ್ವಾಸ ಮೂಡುತ್ತದೆ. ಮದುವೆಯಾದ ಬಳಿಕ ಏನಾದರೊಂದು ಸಮಸ್ಯೆ ಬಂದರೂ ನಿಮ್ಮ ಬ್ಯಾಂಕ್‌ ಬ್ಯಾಲೆನ್ಸ್‌ ಮೂಲಕ ಅದನ್ನು ಪರಿಹರಿಸಿಕೊಳ್ಳಲು ಸಾಧ್ಯವಾಗುತ್ತದೆ.

ಭಾವೀ ಸಂಗಾತಿಯೊಂದಿಗೆ ಜಗಳ (Quarrel) ಮಾಡಿನೋಡಿ!

ನಿಮ್ಮ ಭಾವೀ ಸಂಗಾತಿಯೊಂದಿಗೆ ಜಗಳ ಮಾಡುವುದರಿಂದ ಆಕೆ ಅಥವಾ ಆತ ಹೇಗೆ ಅಂತಹ ಭಾವನಾತ್ಮಕ ಹಾಗೂ ಸೂಕ್ಷ್ಮ ಸನ್ನಿವೇಶ ನಿಭಾಯಿಸುತ್ತಾಳೆ/ ನೆ ಎನ್ನುವುದು ತಿಳಿಯುತ್ತದೆ. ಇದರಿಂದ ಅವರ ವ್ಯಕ್ತಿತ್ವವನ್ನು ಅಳೆಯಬಹುದು. ಸಂಗಾತಿ ಜತೆ ಮಿಸ್‌ಅಂಡರ್‌ಸ್ಟ್ಯಾಂಡಿಂಗ್‌ (Misunderstanding) ಆದಾಗ ಅದಕ್ಕವರು ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎನ್ನುವುದು ಮುಖ್ಯ. ಸಣ್ಣಪುಟ್ಟದಕ್ಕೂ ದೊಡ್ಡ ಗಲಾಟೆ ಮಾಡುವವರು ಅಥವಾ ಅತಿಯಾಗಿ ಸ್ಪಂದಿಸುವವರಾಗಿದ್ದರೆ ನಿಮ್ಮ ನಿಲುವನ್ನು ತಿಳಿಸಿ ಅವರನ್ನು ಸರಿಪಡಿಸಲು ಯತ್ನಿಸಬಹುದು.

ಪ್ರವಾಸ (Travel) ಮಾಡಿ

ಇಷ್ಟು ದಿನಗಳ ಕಾಲ ಓದು, ಕೆಲಸವೆಂದು ಕಳೆದಿದ್ದರೆ ಮದುವೆಗೆ ಮುನ್ನ ಸ್ವಲ್ಪ ಸಮಯ ಪ್ರವಾಸದಲ್ಲಿ ಕಳೆಯಿರಿ. ನಿಮಗೆಲ್ಲಿ ಹೋಗಬೇಕೆಂದು ಅನಿಸುತ್ತದೆಯೋ ಅಲ್ಲೆಲ್ಲ ಸುತ್ತಾಡಿ. ಮದುವೆ ಬಳಿಕ ಇದು ಸಾಧ್ಯವಾಗಿಯೇ ಬಿಡುತ್ತದೆ ಎನ್ನುವ ಗ್ಯಾರೆಂಟಿ ಇರುವುದಿಲ್ಲ.

ಹವ್ಯಾಸ (Hobby) ರೂಢಿಸಿಕೊಳ್ಳಿ

ಯಾವುದಾದರೊಂದು ಉತ್ತಮ ಹವ್ಯಾಸ ರೂಢಿಸಿಕೊಳ್ಳಿ. ಓದುವುದು, ಬರೆಯುವುದು, ನಿಟ್ಟಿಂಗ್‌, ಗಾರ್ಡನಿಂಗ್‌, ಯೋಗ, ಸಾಮಾಜಿಕ ಕೆಲಸ ಇತ್ಯಾದಿ ಯಾವುದಾದರೂ ಸರಿ. ಉತ್ತಮ ಹವ್ಯಾಸದಿಂದ ಮನಸ್ಸು ಖುಷಿಯಾಗಿರುತ್ತದೆ. ಮದುವೆಯಾದ ಬಳಿಕ, ಯಾವುದೇ ಹವ್ಯಾಸಗಳಿಲ್ಲದೆ ಇದ್ದರೆ ಖಾಲಿ ಖಾಲಿಯೆನಿಸುತ್ತದೆ.

ಸಪೋರ್ಟ್‌ ಸಿಸ್ಟಮ್‌ (Support System) ಮಾಡಿಕೊಳ್ಳಿ

ಮದುವೆಗೂ ಮುನ್ನ ನಿಮ್ಮ ಸ್ನೇಹಿತರು, ಉತ್ತಮ ಸಹೋದ್ಯೋಗಿಗಳ ನೆಟ್‌ ವರ್ಕ್‌ ಮಾಡಿಕೊಳ್ಳಿ. ಮದುವೆಯ ನಂತರವೂ ಅವರ ಮನೆಗೆ ಹೋಗಿ ಬಂದು ಮಾಡುವಂತಹ ವಾತಾವರಣ ನಿರ್ಮಿಸಿಕೊಳ್ಳಿ.  ಅಗತ್ಯವಿದ್ದಾಗ ಪರಸ್ಪರ ಸಹಾಯಕ್ಕೆ ಒದಗುವಂತಹ ಸಪೋರ್ಟ್‌ ಸಿಸ್ಟಮ್‌ ಇರುವುದು ಉತ್ತಮ. ಪತಿ-ಪತ್ನಿ ಇಬ್ಬರೇ ಇರುವುದಕ್ಕಿಂತ ಕುಟುಂಬಗಳು ಸೇರಿ ಪ್ರವಾಸ ಹೋಗುವುದು, ಅಪರೂಪಕ್ಕೆ ವೀಕೆಂಡ್‌ ನಲ್ಲಿ ಸುತ್ತಾಡುವುದು ಖುಷಿ ತರುತ್ತದೆ.    

ಡ್ರೆಸಿಂಗ್‌ ಸೆನ್ಸ್‌ (Dressing Sense) ಬೆಳೆಸಿಕೊಳ್ಳಿ

ಬರೀ ಅವರಿವರು ಚೆಂದ ಎನ್ನುತ್ತ ಸಮಯ ಕಳೆಯುವುದಲ್ಲ. ನಿಮ್ಮನ್ನು ನೀವು ಚೆನ್ನಾಗಿ ನೋಡಿಕೊಳ್ಳಿ. ದೈಹಿಕ ಫಿಟ್‌ ನೆಸ್‌ ಗೆ, ಮನಸ್ಸಿನ ಖುಷಿಗೆ ಏನು ಬೇಕೋ ಅದನ್ನು ಮಾಡಿ. ಡ್ರೆಸಿಂಗ್‌ ಸೆನ್ಸ್‌ ಬೆಳೆಸಿಕೊಳ್ಳಿ.

click me!