ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಅಭಿಮಾನಿಗಳಿಗೆ ಖುಷಿ ಸುದ್ದಿ ಸಿಕ್ಕಂತಾಗಿದೆ. ರಶ್ಮಿಕಾ ಮಂದಣ್ಣ ಪರೋಕ್ಷವಾಗಿ ತಮ್ಮ ಸಂಬಂಧವನ್ನು ಒಪ್ಪಿಕೊಂಡಿದ್ದಾರೆ
ಸದ್ಯ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (National Crush Rashmika Mandanna), ಸೌತ್ ಸ್ಟಾರ್ ವಿಜಯ್ ದೇವರಕೊಂಡ (South Star Vijay Devarakonda) ಜೋಡಿಯದ್ದೇ ಚರ್ಚೆ. ಈಗ ಇವರಿಬ್ಬರು ಡೇಟ್ ಮಾಡ್ತಿರೋದು ಕನ್ಫರ್ಮ್ ಆಗಿದೆ. ಪರೋಕ್ಷವಾಗಿ ರಶ್ಮಿಕಾ ಮಂದಣ್ಣ ಇದನ್ನು ಒಪ್ಪಿಕೊಂಡಾಗಿದೆ. ಪುಷ್ಪಾ 2 (Pushpa 2) ಪ್ರಮೋಷನ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಶ್ಮಿಕಾ ಮಂದಣ್ಣ, ಇದು ಎಲ್ಲರಿಗೂ ಗೊತ್ತು ಎಂದಿದ್ದಾರೆ. ಅಂದ್ರೆ, ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಡೇಟ್ ಮಾಡ್ತಿದ್ದಾರೆ ಎಂಬ ವದಂತಿ ಇರುವಾಗ, ರಶ್ಮಿಕಾ ಎಲ್ಲರಿಗೂ ಗೊತ್ತು ಎಂಬ ಉತ್ತರ ನೀಡಿದ್ರಿಂದ ಇಬ್ಬರ ಮದುವೆ ಕನ್ಫರ್ಮ್ ಎನ್ನುತ್ತಿದ್ದಾರೆ ಫ್ಯಾನ್ಸ್.
ರಶ್ಮಿಕಾ ಮಂದಣ್ಣ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪುಷ್ಪಾ 2 ಪ್ರಚಾರ ಕಾರ್ಯಕ್ರಮದಲ್ಲಿ ವೇದಿಕೆ ಮೇಲಿದ್ದ ರಶ್ಮಿಕಾಗೆ ನಿರೂಪಕರು ಒಂದಾದ್ಮೇಲೆ ಒಂದರಂತೆ ಪ್ರಶ್ನೆ ಕೇಳಿದ್ದಾರೆ. ಕೊನೆಯಲ್ಲಿ ನೀವು, ಸಿನಿಮಾ ರಂಗದಲ್ಲಿರುವ ಹುಡುಗನನ್ನು ಮದುವೆ ಆಗ್ತೀರಾ ಇಲ್ಲ ಬೇರೆ ಕ್ಷೇತ್ರದ ಹುಡುಗನನ್ನಾ ಅಂತ ಕೇಳಿದಾಗ, ರಶ್ಮಿಕಾ, ಅದು ಎಲ್ಲರಿಗೂ ಗೊತ್ತು ಎಂದು ನಗ್ತಾ ಉತ್ತರ ನೀಡಿದ್ದಾರೆ. ನೀವು ಯಾವ ಉತ್ತರವನ್ನು ನಿರೀಕ್ಷೆ ಮಾಡ್ತಿದ್ದೀರಿ ಎಂಬುದು ನನಗೆ ಗೊತ್ತು ಎಂದು ರಶ್ಮಿಕಾ ಹೇಳಿದ್ದಾರೆ. ಇನ್ನಷ್ಟು ವಿಷ್ಯವನ್ನು ಹೊರ ಹಾಕುವ ಪ್ರಯತ್ನ ಮಾಡ್ತಿದ್ದ ನಿರೂಪಕರ ಬಾಯಿ ಮುಚ್ಚಿಸಿದ ರಶ್ಮಿಕಾ, ಅದ್ರ ಬಗ್ಗೆ ಇಲ್ಲಿ ಚರ್ಚೆ ಬೇಡ. ನಾವಿಬ್ಬರೂ ಪರ್ಸನಲ್ ಆಗಿ ಮಾತನಾಡೋಣ ಎಂದು ರಶ್ಮಿಕಾ ಹೇಳಿದ್ದಾರೆ.
ಸೆಲೆಬ್ರಿಟಿಗಳಿಗೂ ಈ ಕನ್ಫ್ಯೂಸ್ ಆಗುತ್ತಾ? ಬೆಲ್ ಅಂತ ತಮನ್ನಾ ಏನ್ ಒತ್ತಿದ್ರು ನೋಡಿ
ರಶ್ಮಿಕಾಗೆ ಮೊದಲು ನಿಮ್ಮ ಡ್ರೀಮ್ ಬಾಯ್ ಯಾರು ಎಂದು ನಿರೂಪಕರು ಕೇಳ್ತಾರೆ. ಜೊತೆಗೆ ಅವರೇ ಆಯ್ಕೆಗಳನ್ನು ನೀಡ್ತಾರೆ. ಚಾಕೋಲೇಟ್ ಬಾಯ್ ಓಕೆನಾ, ರಗಡ್ ಬಾಯ್ ನಾ ಎನ್ನುವ ಪ್ರಶ್ನೆಗೆ ಎರಡೂ ಮಿಕ್ಸ್ ಎನ್ನುವ ರಶ್ಮಿಕಾ, ಮಸಾಲೆ ಇರ್ಬೇಕು ಎನ್ನುತ್ತಾರೆ. ಇನ್ನು ಶ್ರೀಮಂತ, ಮಧ್ಯಮ ಹಾಗೂ ಗುಡ್ ಲುಕ್ಕಿಂಗ್ ವಿಷ್ಯ ಬಂದಾಗ, ಪ್ರೀತಿ ಹುಟ್ಟಿಕೊಂಡಾಗ ಅದನ್ನೆಲ್ಲ ನೋಡೋಕೆ ಆಗಲ್ಲ ಎನ್ನುತ್ತಾರೆ. ಗೋವಾ ಮನೆ ಬಗ್ಗೆ ಉತ್ತರ ನೀಡಿದ ರಶ್ಮಿಕಾ, ಗೋವಾದಲ್ಲಿ ನನಗೆ ಮನೆ ಇಲ್ಲ. ಅದೆಲ್ಲ ವದಂತಿ. ಖರ್ಚು ಹೆಚ್ಚಾಗಿದೆ ಹಾಗಾಗಿ ನಾನು ಬಾಡಿಗೆ ಮನೆಯಲ್ಲಿದ್ದೇನೆ. ಒಂದೂ ಸ್ವಂತ ಮನೆ ನನಗೆ ಇಲ್ಲ ಎನ್ನುತ್ತಾರೆ.
ಪ್ರಪೋಸ್ ವಿಷ್ಯ ಬಂದಾಗ, ಹುಡುಗ ನನಗೆ ಇಷ್ಟವಾದ್ರೆ ನಾನು ಅವರು ಪ್ರಪೋಸ್ ಮಾಡೋವರೆಗೂ ಕಾಯೋದಿಲ್ಲ. ನಾನೇ ಹೋಗಿ ಹೇಳ್ತೇನೆ ಎಂದಿದ್ದಾರೆ. ಇದಾದ್ಮೇಲೆ ಕೊನೆ ಪ್ರಶ್ನೆಗೆ ರಶ್ಮಿಕಾ ಉತ್ತರ ನೀಡ್ತಿದ್ದಂತೆ ಅಲ್ಲಿದ್ದ ಅಲ್ಲು ಅರ್ಜುನ್ (Allu Arjun) ಬಿದ್ದು ಬಿದ್ದು ನಕ್ಕಿದ್ದಾರೆ. ರಶ್ಮಿಕಾ ಒಂದೊಂದು ಪ್ರಶ್ನೆಗೂ ಮಜವಾಗಿ ಉತ್ತರ ನೀಡ್ತಿದ್ದರೆ ವೇದಿಕೆ ಕೆಳಗಿದ್ದ ಅಲ್ಲು ಅರ್ಜುನ್ ಹಾಗೂ ಶ್ರೀಲಿಲಾ, ಚಪ್ಪಾಳೆ ತಟ್ಟಿ ನಗ್ತಿದ್ದಿದ್ದನ್ನು ನೀವು ಕಾಣ್ಬಹುದು.
34ಕ್ಕೆ ಎರಡಾದ್ರೂ ಆಗ್ಬಾರದಾ? ಬಿಗ್ ಬಾಸ್ ಶೈನ್ ಶೆಟ್ಟಿ ಪ್ರೀತಿಯಲ್ಲಿದ್ದಾರಾ!
ಕಳೆದ ಎರಡು ವರ್ಷಗಳಿಂದ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಡೇಟಿಂಗ್ ಚರ್ಚೆ ನಡೆಯುತ್ತಲೇ ಇದೆ. ಆದ್ರೆ ಮೂರ್ನಾಲ್ಕು ದಿನಗಳ ಹಿಂದೆ ನಾನು ರಿಲೇಶನ್ಶಿಪ್ನಲ್ಲಿದ್ದೇನೆ ಎಂದು ವಿಜಯ್ ದೇವರಕೊಂಡ ಹೇಳಿದ್ರು. ಸಹನಟಿ ಎಂದಿದ್ದ ವಿಜಯ್ ದೇವರಕೊಂಡ, ಮದುವೆ ಬಗ್ಗೆಯೂ ಮಾತನಾಡಿದ್ದರು. ಅದಾದ್ಮೇಲೆ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಡೇಟ್ ಗೆ ಹೋದ ಫೋಟೋ ವೈರಲ್ ಆಗಿತ್ತು. ಮುಂಬೈ ರೆಸ್ಟೋರೆಂಟ್ ಒಂದರಲ್ಲಿ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಊಟ ಮಾಡ್ತಿದ್ದ ಫೋಟೋ ಇದಾಗಿದೆ. ಇದನ್ನು ರಶ್ಮಿಕಾ ಮಂದಣ್ಣ ಪೋಸ್ಟ್ ಮಾಡಿದ್ದಾರೆ. ಈ ಹಿಂದೆಯೂ, ವಿಜಯ್ ಜೊತೆಗಿರುವ ಅನೇಕ ಫೋಟೋಗಳನ್ನು ರಶ್ಮಿಕಾ ಹಂಚಿಕೊಂಡಿದ್ದಾರೆ.