ಪತ್ನಿಯ ಹೊಟ್ಟೆಯಲ್ಲಿರೋದು ನನ್ನ ಮಗುವಲ್ಲ ಅನ್ನೋ ಭಾವನೆ! ಏನ್ಮಾಡ್ಲಿ?

By Suvarna NewsFirst Published Jan 19, 2023, 5:04 PM IST
Highlights

ಪತ್ನಿ ಗರ್ಭಿಣಿಯಾಗಿರುವ ಸಮಯದಲ್ಲಿ “ಈ ಮಗು ನನ್ನದಲ್ಲ’ ಎನ್ನುವ ಭಾವನೆ ಪತಿಯಲ್ಲಿ ಮೂಡಿದರೆ ಸಂಸಾರ ಅದೆಷ್ಟು ಕಷ್ಟಕರವಾಗಿ ಬದಲಾಗಿಬಿಡುತ್ತದೆ. ಅಂತಹ ಸಂಶಯ ಮನದಲ್ಲಿ ಮೂಡಿದರೆ ಅದನ್ನು ನಿವಾರಣೆ ಮಾಡಿಕೊಳ್ಳಬೇಕು. ಮುಂದಿನ ಪರಿಣಾಮಗಳಿಗೆ ಅಂಜದೆ ನೇರವಾಗಿ ಮಾತನಾಡಿ ಪತ್ನಿಯ ಮನಸ್ಸನ್ನು ಅರಿತುಕೊಳ್ಳಬೇಕು. 

“ಪಾಪು ಬರ್ತಿದೆ’ ಈ ಎರಡು ಶಬ್ದಗಳಲ್ಲಿ ಅದೆಷ್ಟೊಂದು ಭಾವನೆಗಳು ಅಡಗಿರುತ್ತವೆ. ಮಗುವೊಂದರ ಆಗಮನ ಆಗುತ್ತಿದೆ ಎಂದಾದರೆ ಇಡೀ ಮನೆ, ಕುಟುಂಬದ ವಾತಾವರಣವೇ ಬದಲಾಗುತ್ತದೆ. ಅಜ್ಜ-ಅಜ್ಜಿಯಾಗುವವರು ಸೇರಿ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಮಗುವಿನ ಆಗಮನಕ್ಕೆ ಸಜ್ಜಾಗುತ್ತಾರೆ. ಹೀಗೆ, ಒಂದು ಮಗುವಿನ ಬರುವನ್ನು ಇಡೀ ಕುಟುಂಬ ಸ್ವಾಗತಿಸುವ ವಾತಾವರಣ ನಿರ್ಮಾಣವಾಗುತ್ತದೆ. ಒಂದು ಮಾತಿದೆ, ಮಗುವೊಂದು ಜನಿಸುವಾಗ ಜತೆಗೇ ಅಪ್ಪ-ಅಮ್ಮಂದಿರೂ ಜನಿಸುತ್ತಾರೆ ಎಂದು. ಹೌದು, ಮಗು ಹುಟ್ಟಿದಾಗಲೇ ತಾನೇ ಅಮ್ಮನೂ, ಅಪ್ಪನೂ ಜನಿಸುವುದು! ಅಲ್ಲಿಯವರೆಗೆ ಅವರು ಕೇವಲ ದಂಪತಿಯಾಗಿರುತ್ತಾರೆ. ಪತಿ-ಪತ್ನಿಯರಾಗಿರುತ್ತಾರೆ, ಜೀವನ ಸಂಗಾತಿಗಳಾಗಿರುತ್ತಾರೆ. ಮಹಿಳೆಗಂತೂ ಮಗುವಾಗುವ ಸಮಯದಲ್ಲಿ ಸಂತಸದ ಜತೆಗೇ ಹಲವು ರೀತಿಯ ದುಗುಡಗಳು ಸಹ ಆವರಿಸಬಹುದು. ಅವು ದೂರವಾಗಲು ಮನೆಯ ವಾತಾವರಣ ಹಿತ ನೀಡುವಂತೆ, ಸುಭದ್ರವಾಗಿರಬೇಕು. ಹೆಣ್ಣು ಗರ್ಭ ಧರಿಸಿದ ಸಮಯದಲ್ಲಿ ಮನೆಯ ವಾತಾವರಣ ಚೆನ್ನಾಗಿರಬೇಕು ಎಂದು ಹಿರಿಯರು ಹೇಳುವುದು ಇದೇ ಕಾರಣಕ್ಕೆ. ಆದರೆ, ಮಗುವಿನ ಜನನದ ಬಗ್ಗೆಯೇ ತಂದೆಯಲ್ಲಿ ಸಂಶಯವಿದ್ದರೆ ಹೇಗೆ? ಅರ್ಥಾತ್, ಇದು ತನ್ನ ಮಗುವೇ? ಅಲ್ಲವೇ? ತಾನು ಈ ಮಗುವಿಗೆ ಅಪ್ಪನಾಗುತ್ತಿರುವುದು ಹೇಗೆ ಎನ್ನುವ ಸಂಶಯ ಮನದಲ್ಲಿ ಕಾಡುತ್ತಿದ್ದರೆ ಖಂಡಿತವಾಗಿ ಸಮಸ್ಯೆ ಸೃಷ್ಟಿಯಾಗುತ್ತದೆ. 

“ನನ್ನ ಹೆಂಡತಿಗೂ (Wife), ನನಗೂ ಸ್ವಲ್ಪ ಸಮಯದಿಂದ ಚೆನ್ನಾಗಿಲ್ಲ. ಆಕೆ ಈಗ ಗರ್ಭಿಣಿ(Pregnant) ಆಗಿದ್ದಾಳೆ. ಆದರೆ, ಆಕೆಯ ಹೊಟ್ಟೆಯಲ್ಲಿರುವ ಮಗು (Baby) ನನ್ನದಾಗಿರಲು ಸಾಧ್ಯವಿಲ್ಲ. ಬೇರೆ ಯಾರದ್ದೋ ಮಗುವನ್ನು ನಾನು ಹೇಗೆ ನನ್ನದೆಂದು ಒಪ್ಪಿಕೊಳ್ಳಲಿ? ಈಗ ಏನು ಮಾಡಲಿ? ಸಹಾಯ ಮಾಡಿ’... ಎನ್ನುವ ಸಮಸ್ಯೆ ಹೊತ್ತ ಪ್ರಶ್ನೆ ಆಪ್ತಸಮಾಲೋಚಕರಿಗೆ (Counselors) ಎದುರಾಗುವುದು ಇತ್ತೀಚೆಗೆ ಅಪರೂಪವೇನಲ್ಲ. ಇಂಥ ಸನ್ನಿವೇಶಗಳು ಕೆಲವೊಮ್ಮೆ ನಿರ್ಮಾಣವಾಗಿಬಿಡುತ್ತವೆ. ಇದು ಜೀವನ ಮುಳುಗಿ ಹೋಗುವ ಸಮಸ್ಯೆ ಎನ್ನುವಂತೆ, ತಮ್ಮ ಅಸ್ತಿತ್ವವೇ ಕುಸಿದು ಹೋಗುವಂತೆ ಅನೇಕರು ಭಾವಿಸುತ್ತಾರೆ. ಈ ಸಮಯದಲ್ಲಿ ಸಹನೆಯಿಂದ (Patience) ವರ್ತಿಸಿದರೆ ಪರಿಹಾರದ ಮಾರ್ಗ ಕಂಡುಕೊಳ್ಳಲು ಸಾಧ್ಯ.

•    ತಾಳ್ಮೆ (Calmness) ತಂದುಕೊಳ್ಳಿ
ಮೊದಲನೆಯದಾಗಿ, ಇಂತಹ ಸನ್ನಿವೇಶದಲ್ಲಿ ತಾಳ್ಮೆ ಮುಖ್ಯ. ನಿಮ್ಮ ಮನಸ್ಸಿಗೆ ಅನಿಸಿದ್ದೆಲ್ಲವೂ ಸತ್ಯ (Truth) ಎನ್ನುವ ಭಾವನೆ ಬೇಡ. ಕೇವಲ ನಿಮ್ಮಲ್ಲಿರುವ ಅಳುಕೋ, ಸಂಶಯವೋ (Doubt) ಈ ಭಾವನೆ ಮೂಡಲು ಕಾರಣವಾಗಿದ್ದಿರಬಹುದು. 

ಪತಿ-ಪತ್ನಿ ಮಧ್ಯೆ ರೊಮ್ಯಾನ್ಸ್ ಕಾಣೆಯಾಗಿದ್ಯಾ? ಮತ್ತೆ ಯೋಚ್ನೆ ಮಾಡಿ…

•    ನೇರವಾಗಿ ಮಾತನಾಡಿ (Open Conversation)
ನಿಮ್ಮ ಅನುಮಾನದಂತೆ ಹೇಗ್ಹೇಗೋ ವರ್ತಿಸುವುದು ಸರಿಯಲ್ಲ, ಬದಲಿಗೆ ನೇರವಾಗಿ ಮಾತನಾಡಿ. ಸಹನೆಯಿಂದ ಮಾತನಾಡಿ. ಆಕೆ ಹೇಳುವುದನ್ನು ಗಮನವಿಟ್ಟು ಕೇಳಿಸಿಕೊಳ್ಳಿ. ನೀವು ಮಾತನಾಡುವ ರೀತಿಯಿಂದಲೇ ನಿಮ್ಮ ಮನಸ್ಥಿತಿಯನ್ನು (Mentality) ಅವರಿಗೆ ಅರ್ಥವಾಗುತ್ತದೆ. “ನನಗೆ ಹೀಗೆ ಅನಿಸುತ್ತಿದೆ, ನಿಜವೇ?’ ಎಂದು ಕೇಳಿನೋಡಿ. ಅವರು ಅಳುವುದು, ನೋವುಣ್ಣುವುದು ಇವೆಲ್ಲ ಇದ್ದೇ ಇರುತ್ತವೆ, ಆದರೆ, ನೇರವಾಗಿ ಮಾತನಾಡುವುದೇ ಉತ್ತಮ.

•    “ಹೌದು’ ಎಂದರೆ...(If Yes)
ನಿಮ್ಮ ಪತ್ನಿ ನಿಮ್ಮ ಅನುಮಾನವನ್ನು ಸಾರಾಸಗಟಾಗಿ ತಿರಸ್ಕರಿಸಿದರೆ ಅದನ್ನು ಮನಸಾರೆ ಒಪ್ಪಿಕೊಳ್ಳಿ. ನಿಮ್ಮ ನಡತೆಯನ್ನು ವಿಮರ್ಶಿಸಿಕೊಳ್ಳಿ. ಬೇಕಾದರೆ ಮನೋವೈದ್ಯರನ್ನು (Docter) ಭೇಟಿಯಾಗಿ. ಏಕೆಂದರೆ, ಅತಿಯಾದ ಅನುಮಾನವೂ ಒಂದು ಮಾನಸಿಕ ರೋಗ (Mental Disorder). ಆದರೆ, ಆಕೆ ನಿಮ್ಮ ಅನುಮಾನವನ್ನು ಒಪ್ಪಿಕೊಂಡು, ನಿಮ್ಮಿಂದ ದೂರವಾಗಲು ಬಯಸಿದ್ದರೆ ಏನು ಮಾಡುತ್ತೀರಿ?

ದಾಂಪತ್ಯದಲ್ಲಿ ಸಂತೋಷವಿದೆ, ಆದರೆ ಥ್ರಿಲ್ ಇಲ್ಲವೆಂದು ಅನೈತಿಕ ಸಂಬಂಧಕ್ಕೆ ಮುಂದಾಗ್ತಾರಾ?

•    ತಪ್ಪು (Mistake) ಮಾಡಿದ್ದಾಳಾ?
ನಿಮ್ಮ ಪತ್ನಿ ಆಕಸ್ಮಿಕವಾಗಿ ಯಾರೊಂದಿಗಾದರೂ ಸಂಬಂಧ ಬೆಳೆಸಿ ತಪ್ಪು ಮಾಡಿದ್ದರೆ ಆಕೆಯನ್ನು ಕ್ಷಮಿಸಿಬಿಡಿ. ಏಕೆಂದರೆ, ತಪ್ಪು ಮಾಡುವುದು ಮಾನವ ಸಹಜ ಗುಣ. ತಪ್ಪು ಒಪ್ಪಿಕೊಂಡು ಅದನ್ನು ಮರುಕಳಿಸುವುದಿಲ್ಲ ಎನ್ನುವ ಭರವಸೆ ಇತ್ತರೆ ಖಂಡಿತವಾಗಿ ಇನ್ನೊಂದು ಅವಕಾಶ ನೀಡಬೇಕು. ಏಕೆಂದರೆ, ಆಕೆ ನಿಮ್ಮ ಪತ್ನಿ. ಆದರೆ, ಆಕೆಯಿಂದ ಮತ್ತೆ ಮತ್ತೆ ತಪ್ಪುಗಳಾದರೆ ಅಥವಾ ಇನ್ನೊಬ್ಬರೊಂದಿಗೆ ನಿರಂತರವಾಗಿ ದೈಹಿಕ ಸಂಪರ್ಕ (Physical Relation) ಇಟ್ಟುಕೊಂಡಿದ್ದರೆ, ಮಗುವಿಗೆ ತಂದೆಯ ಹೆಸರು ಬೇಕು ಎನ್ನುವ ಕಾರಣಕ್ಕೆ ನಿಮ್ಮೊಂದಿಗಿದ್ದರೆ ನಿಮ್ಮ ನಿರ್ಧಾರ ನಿಮ್ಮದು. ಆದರೆ, ಕೆಟ್ಟದಾಗಿ ವರ್ತನೆ ಮಾಡಬೇಡಿ. 
 

click me!